Tag: chikkaballapur

  • ವಂಚಕರ ಪರವಾಗಿ ಪಿಎಸ್‌ಐಗೆ ಕರೆ – ಆಪ್ತನ ಕೇಸ್ ಕಾಂಪ್ರಮೈಸ್‌ಗೆ ಸಚಿವ ಜಮೀರ್ ಒತ್ತಡ ಹೇರಿದ್ರಾ?

    ವಂಚಕರ ಪರವಾಗಿ ಪಿಎಸ್‌ಐಗೆ ಕರೆ – ಆಪ್ತನ ಕೇಸ್ ಕಾಂಪ್ರಮೈಸ್‌ಗೆ ಸಚಿವ ಜಮೀರ್ ಒತ್ತಡ ಹೇರಿದ್ರಾ?

    ಚಿಕ್ಕಬಳ್ಳಾಪುರ: ವಂಚಕರ ಪರವಾಗಿ ಪಿಎಸ್‌ಐಗೆ ಕರೆ ಮಾಡಿ ಸಚಿವ ಜಮೀರ್ ಅಹಮದ್ (Zameer Ahmed) ಪ್ರಭಾವ ಬೀರಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಚಿಕ್ಕಬಳ್ಳಾಪುರದ ದಿಗೂರು ನಿವಾಸಿ, ಪಾಪ್‌ಕಾರ್ನ್ ವ್ಯಾಪಾರಿ ಡಿಎನ್ ರಾಮಕೃಷ್ಣ ಅನ್ನೋವ್ರು ತೆಲಂಗಾಣದ ಹೈದರಾಬಾದ್ ಮೂಲಕದ ಹೆಕೆಜಿಎನ್ ಮುಸ್ಕಾನ್ ಪಾಪ್‌ಕಾರ್ನ್ ಟ್ರೇಡರ್ಸ್ ಮಾಲೀಕರಾದ ಸೈಯದ್ ಅಬ್ದುಲ್ ರಜಾಕ್, ಸೈಯದ್ ಅಬ್ದುಲ್ ಅಕ್ಬರ್‌ಪಾಷ, ನಾಸಿರ್ ಅಹಮದ್ ಎನ್ನುವ ಮೂವರು ಸಹೋದರರಿಗೆ 1.89 ಕೋಟಿ ರೂ. ಮೌಲ್ಯದ ಪಾಪ್‌ಕಾರ್ನ್ ಜೋಳವನ್ನು ಸರಬರಾಜು ಮಾಡಿದ್ದಾರೆ.ಇದನ್ನೂ ಓದಿ: ಮದುವೆಯಾಗೋದಾಗಿ ನಂಬಿಸಿ ಸೆಕ್ಸ್ – ಮತಾಂತರಕ್ಕೆ ಒಪ್ಪದ್ದಕ್ಕೆ ಹಿಂದೂ ಯುವತಿಗೆ ವಂಚಿಸಿದ್ದವ ಅರೆಸ್ಟ್

    ಹೈದರಾಬಾದ್‌ನ ವ್ಯಾಪಾರಿಗಳು, ಖರೀದಿ ಮಾಡಿರುವ ಜೋಳದ ಹಣವನ್ನು ರಾಮಕೃಷ್ಣ ಅವರಿಗೆ ಕೊಟ್ಟಿಲ್ಲ. ಈ ಸಂಬಂಧ ಪೆರೇಸಂದ್ರ ಪೊಲೀಸ್ ಠಾಣೆಗೆ ರಾಮಕೃಷ್ಣ ದೂರು ನೀಡಿದ್ದರು. ಆರೋಪಿ ಸಹೋದರರಲ್ಲಿ ಸೈಯದ್ ಅಬ್ದುಲ್ ಅಕ್ಬರ್‌ಪಾಷರನ್ನು ಬಂಧಿಸಿ ಪಿಎಸ್‌ಐ ರೆಡ್ಡಿ ವಿಚಾರಣೆ ಮಾಡಿದ್ದಾರೆ. ಅಕ್ಟೋಬರ್ 13ರಂದು ಪಿಎಸ್‌ಐಗೆ ಕರೆ ಮಾಡಿರುವ ಸಚಿವ ಜಮೀರ್, ಆರೋಪಿಗೆ ಸಹಾಯ ಮಾಡುವಂತೆ ಹಾಗೂ ಹಣ ನೀಡಲು ಸಮಯಾವಕಾಶ ಕೊಡುವಂತೆ ಪ್ರಭಾವ ಬೀರಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

  • ಚಿಕ್ಕಬಳ್ಳಾಪುರ | ಜಿಲ್ಲಾಡಳಿತ ಭವನದಲ್ಲೇ ನಾಯಿಗಳ ಹಾವಳಿ; ಡಿಸಿ ಕಚೇರಿ ಸಿಬ್ಬಂದಿ ಸುಸ್ತು!

    ಚಿಕ್ಕಬಳ್ಳಾಪುರ | ಜಿಲ್ಲಾಡಳಿತ ಭವನದಲ್ಲೇ ನಾಯಿಗಳ ಹಾವಳಿ; ಡಿಸಿ ಕಚೇರಿ ಸಿಬ್ಬಂದಿ ಸುಸ್ತು!

    ಚಿಕ್ಕಬಳ್ಳಾಪುರ: ಇಲ್ಲಿನ ಜಿಲ್ಲಾಡಳಿತ ಭವನದಲ್ಲೇ ನಾಯಿಗಳ ಹಾವಳಿ ಹೆಚ್ಚಾಗಿದೆ. ಪ್ರತಿದಿನ ಕೆಲಸ ಕಾರ್ಯಗಳಿಗೆ ಆ ಜಿಲ್ಲೆಯ ಜನ ಅಲ್ಲಿಗೆ ಭೇಟಿ ನೀಡ್ತಾರೆ. ಮತ್ತೊಂದೆಡೆ ಅಲ್ಲಿಯ ಅಧಿಕಾರಿ ಸಿಬ್ಬಂದಿ, ಅಲ್ಲೆ ಕರ್ತವ್ಯ ಮಾಡ್ತಾರೆ. ಇಂಥದರಲ್ಲಿ ಆ ಭವನಕ್ಕೂ ನಾಯಿಗಳಿಗೂ ಅದೇನ್ ನಂಟೊ ಗೊತ್ತಿಲ್ಲ, ಹಿಂಡು ಹಿಂಡು ನಾಯಿಗಳು ಆ ಜಿಲ್ಲಾಡಳಿತ ಭವನವನ್ನೇ ತಮ್ಮ ಆಶ್ರಯ ತಾಣಗಳನ್ನಾಗಿ ಮಾಡಿಕೊಂಡಿವೆ.

    ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಒಂದಲ್ಲ ಎರಡಲ್ಲ 18ಕ್ಕೂ ಹೆಚ್ಚು ನಾಯಿಗಳು ಇವೆ. ಒಂದೊಂದು ನಾಯಿಗಳು ಒಂದೊಂದು ಕಚೇರಿಯನ್ನು ಹಂಚಿಕೊಂಡಂತೆ ಕಂಡು ಬಂದಿದೆ. ಆ ಕಚೇರಿ ಹತ್ತಿರ ಹೊದ್ರೆ, ಅಲ್ಲೊಂದು ಬೌ ಎನ್ನುತ್ತೆ, ಈ ಕಡೆ ಕಚೇರಿಗೆ ಬಂದ್ರೆ ಇಲ್ಲೊಂದು ಬೌ ಬೌ ಎನ್ನುತ್ತೆ, ಇಲ್ಲಿರುವ ನಾಯಿಗಳು ಕೆಲವು ಸಿಬ್ಬಂದಿಗಳಿಗೆ ಅಭ್ಯಾಸವಾಗಿದ್ರೆ. ಕಚೇರಿಗೆ ಬರೊ ಸಾರ್ವಜನಿಕರನ್ನ ಕಂಡ್ರೆ ಬೌ ಬೌ ಮಾಡ್ತಿವೆ.

    ಸ್ವತಃ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ನಾಯಿಗಳಿಂದ ಎಚ್ಚರಿಕೆಯಿಂದ ಇರುವಂತೆ ಡಿಸಿ ಪಿ.ಎನ್ ರವೀಂದ್ರ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ದಿನದಿಂದ ದಿನಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ನಾಯಿಗಳ ಸಂತತಿ ಹೆಚ್ಚಾಗುತ್ತಿದ್ದು, ಸಾರ್ವಜನಿಕರಿಗೆ ಅಪಾಯ ಆಗುವ ಮುನ್ನ ಎಚ್ಚರ ವಹಿಸಬೇಕಿದೆ.

  • ಚಿಕ್ಕಬಳ್ಳಾಪುರ: ಫೇಸ್‌ಬುಕ್‌ನಲ್ಲಿ ಡೆತ್‌ ನೋಟ್‌ ಬರೆದು, ಬೆಂಕಿ ಹಚ್ಚಿಕೊಂಡು ನವವಿವಾಹಿತೆ ಆತ್ಮಹತ್ಯೆ!

    ಚಿಕ್ಕಬಳ್ಳಾಪುರ: ಫೇಸ್‌ಬುಕ್‌ನಲ್ಲಿ ಡೆತ್‌ ನೋಟ್‌ ಬರೆದು, ಬೆಂಕಿ ಹಚ್ಚಿಕೊಂಡು ನವವಿವಾಹಿತೆ ಆತ್ಮಹತ್ಯೆ!

    – ಬೇರೆ ಯುವತಿಯೊಂದಿಗೆ ಪತಿ ಸರಸ

    ಚಿಕ್ಕಬಳ್ಳಾಪುರ: ಅವರಿಬ್ಬರಿಗೂ ಮದುವೆಯಾಗಿ (Marriage) ಇನ್ನೂ ಆರು ತಿಂಗಳಷ್ಟೇ ಆಗಿತ್ತು. ಆದ್ರೆ ಗಂಡ ತನ್ನ ಜೊತೆ ಮಾತನಾಡೋದು ಬಿಟ್ಟು ಯಾವಾಗಲೂ ಆದ್ಯಾರೋ ಯುವತಿಯ ಜೊತೆಯಲ್ಲಿ ಚಾಟಿಂಗ್-ಟಾಕಿಂಗ್ ಆಂತ ಕಾಲ ಕಳೆಯುತ್ತಿದ್ದನಂತೆ. ಇದೇ ವಿಚಾರದಲ್ಲಿ ಉಂಟಾದ ಮನಸ್ಥಾಪದಿಂದ ನವವಿವಾಹಿತೆ ಫೇಸ್‌ಬುಕ್‌ನಲ್ಲಿ ಡೆತ್‌ನೋಟ್‌ (Facebook Death Note) ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗುಡಿಬಂಡೆ ತಾಲೂಕಿನ ಕೊಂಡವಾಲಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಜಯಶ್ರೀ ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ. ತವರು ಮನೆಯಲ್ಲಿ ಮನೆಯ ಹೊರಭಾಗದ ಶೌಚಾಲಯದಲ್ಲಿ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಜಯಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಅಂದಹಾಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕೊಂಡವಾಲಹಳ್ಳಿ ನಿವಾಸಿ ಜಯಶ್ರೀಯನ್ನ ಕಳೆದ 6 ತಿಂಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೊಂಡಪ್ಪಗಾರಹಳ್ಳಿಯ ನಿವಾಸಿ ಚಂದ್ರಶೇಖರ್ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಆದ್ರೆ ಇಬ್ಬರು ಸುಂದರ ಸಂಸಾರ ಸಾಗಿಸುವ ಬದಲು ಗಂಡ ಮತ್ತೊಬ್ಬಳು ಯುವತಿ ಜೊತೆಯಲ್ಲಿ ಯಾವಾಗ್ಲೂ ಚಾಟಿಂಗ್ ಮಾಡ್ತಾ, ಮಾತಾಡಿಕೊಂಡು ಕಾಲ ಕಳೀತಿದ್ದನಂತೆ.

    ಇದೇ ವಿಚಾರವಾಗಿ ಗಂಡ ಹೆಂಡತಿ ಮಧ್ಯೆ ಮನಸ್ತಾಪಗಳಾಗಿ ಮನನೊಂದ ಜಯಶ್ರೀ ತನ್ನ ನೋವನ್ನ ತನ್ನ ಫೇಸ್ ಬುಕ್ ಖಾತೆಯಲ್ಲಿ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನೂ ಜಯಶ್ರೀ ತಂದೆ ಶ್ರೀಧರ್ ನೀಡಿದ ದೂರಿನ ಮೇರೆಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಜಯಶ್ರೀ ಗಂಡ ಚಂದ್ರಶೇಖರ್ ಹಾಗೂ ಯುವತಿ ಬಿಂದು ವಿರುದ್ಧ ದೂರು ದಾಖಲಾಗಿದೆ.

    ಆತ್ಮಹತ್ಯೆಗೆ ಮುನ್ನ ಜಯಶ್ರೀ ತನ್ನ ಫೇಸ್ ಬುಕ್ ಖಾತೆಯಲ್ಲಿ ನನ್ನ ಸಾವಿಗೆ ಆ ಹುಡುಗಿ ಮತ್ತು ನನ್ನ ಗಂಡ ಕಾರಣ ಅಂತ ಬರೆದಿದ್ದಾಳೆ. ಹೀಗಾಗಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದ್ದು ಗಂಡ ಹಾಗೂ ಯುವತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

  • ಸಾಲು ಸಾಲು ದುರಂತದ ಬೆನ್ನಲ್ಲೇ ಚಿಕ್ಕಬಳ್ಳಾಪುರ ಪೊಲೀಸರು ಅಲರ್ಟ್‌ – ಗಣೇಶ ವಿಸರ್ಜನೆಗೆ ಬಿಗಿ ಬಂದೋಬಸ್ತ್

    ಸಾಲು ಸಾಲು ದುರಂತದ ಬೆನ್ನಲ್ಲೇ ಚಿಕ್ಕಬಳ್ಳಾಪುರ ಪೊಲೀಸರು ಅಲರ್ಟ್‌ – ಗಣೇಶ ವಿಸರ್ಜನೆಗೆ ಬಿಗಿ ಬಂದೋಬಸ್ತ್

    – ಗೌರಿಬಿದನೂರು ಬೈಪಾಸ್ ಗಣೇಶ ವಿಸರ್ಜನೆ; 500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
    – ಮಸೀದಿ-ಮಂದಿರ-ಚರ್ಚ್‌ಗಳ ಬಳಿ ವಿಶೇಷ ಭದ್ರತೆ

    ಚಿಕ್ಕಬಳ್ಳಾಪುರ: ರಾಜ್ಯದೆಲ್ಲೆಡೆ ಗಣೇಶ ವಿಸರ್ಜನಾ ಮೆರವಣಿಗೆಗಳು (Ganesha Visarjan Procession) ಜೋರಾಗಿ ಸಾಗುತ್ತಿದ್ದರೆ, ಕೆಲ ಕಡೆಗಳಲ್ಲಿ ನಡೆದ ಅಹಿತಕರ ಘಟನೆಗಳಿಂದ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಪಟಾಕಿ ಸ್ಫೋಟದಿಂದ ಇಬ್ಬರು ಬಾಲಕರ ಸಾವು, ಮದ್ದೂರಿನಲ್ಲಿ ಕಲ್ಲುತೂರಾಟ ಗಲಾಟೆ, ಹಾಸನದಲ್ಲಿ ಮೆರವಣಿಗೆಯ ವೇಳೆ ಆದ ಅಪಘಾತದ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲೆ ಪೊಲೀಸರೂ (Chikkaballapura Police) ಫುಲ್‌ ಅಲರ್ಟ್‌ ಆಗಿದ್ದಾರೆ.

    ಗೌರಿಬಿದನೂರು ಬೈಪಾಸ್ ಗಣೇಶನ ವಿಶೇಷ
    ಪ್ರತಿಷ್ಠಿತ ಬೈಪಾಸ್ ಗಣೇಶೋತ್ಸವ 22ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಬಾರಿ 22 ಅಡಿ ಎತ್ತರದ ಪ್ರಣವ ಮಹಾರುದ್ರ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. ಪೆಂಡಾಲ್‍ನಲ್ಲಿ ದೇಶದ ಪ್ರಸಿದ್ಧ ದೇವಾಲಯಗಳ ಮಾದರಿಗಳನ್ನು ಅಲಂಕರಿಸಿರುವುದು ಭಕ್ತರ ಗಮನ ಸೆಳೆದಿದೆ. ಭಾನುವಾರ ನಡೆಯಲಿರುವ ಗಂಗಾವಿಲೀನ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದನ್ನೂ ಓದಿ: ಹಾಸನ ದುರಂತ – ಮೊಸಳೆಹೊಸಳ್ಳಿ ಗ್ರಾಮದಲ್ಲಿ ಸ್ವಯಂಪ್ರೇರಿತ ಬಂದ್

    ಪೊಲೀಸರ ತಯಾರಿ ಹೇಗಿದೆ?
    ಸಂಭಾವ್ಯ ಅಹಿತಕರ ಘಟನೆಗಳನ್ನ ತಪ್ಪಿಸಲು ಜಿಲ್ಲೆಯ ಎಸ್ಪಿ ಕುಶಲ್ ಚೌಕ್ಸಿ ನೇತೃತ್ವದಲ್ಲಿ ಹಲವು ಶಾಂತಿ ಸಭೆಗಳನ್ನು ನಡೆಸಲಾಗಿದೆ. ಮುನ್ನೆಚ್ಚರಿಕೆಯಾಗಿ ಗೌರಿಬಿದನೂರು ಪಟ್ಟಣದಲ್ಲಿ ಭಾರೀ ಪೊಲೀಸರ ಪಥಸಂಚಲನ ನಡೆಸಲಾಗುತ್ತಿದೆ. ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಮೆರವಣಿಗೆ ಸರಿಸುಮಾರು ಸಂಜೆ 8ರ ವರೆಗೆ ಸಾಗಲಿದ್ದು, 500ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗುತ್ತಿದೆ. ಮಸೀದಿ, ಮಂದಿರ, ಚರ್ಚ್ ಮುಂತಾದ ಧಾರ್ಮಿಕ ಕೇಂದ್ರಗಳ ಬಳಿ ವಿಶೇಷ ಭದ್ರತೆ ಏರ್ಪಡಿಸಲಾಗಿದೆ. ಸಿಸಿ ಟಿವಿಗಳನ್ನ ಆಳವಡಿಸಲಾಗುತ್ತಿದೆ. ಡ್ರೋನ್ ಕ್ಯಾಮೆರಾ ಬಳಸಿ ವಿಡಿಯೋ ಚಿತ್ರೀಕರಣ ಸಹ ಮಾಡಿಸಲು ತೀರ್ಮಾನ ಮಾಡಲಾಗಿದೆ. ಇದನ್ನೂ ಓದಿ: ಹಾಸನ | ವಿಮಾನ ದುರಂತದಲ್ಲಾದ್ರೆ 1 ಕೋಟಿ ಕೊಡ್ತೀರಿ, ಬಡವರ ಜೀವಕ್ಕೆ ಬೆಲೆ ಇಲ್ವಾ? – ಸಚಿವರಿಗೆ ಜನರ ತರಾಟೆ

    ಪೊಲೀಸರಿಂದ ಸಾರ್ವಜನಿಕರಿಗೆ ಸಂದೇಶ
    ಗಣೇಶ ವಿಸರ್ಜನಾ ಮೆರವಣಿಗೆ ಶಾಂತಿಯುತವಾಗಿ ನಡೆಯಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರಿಂದ ಭಾರೀ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಹ ಸಹಕಾರ ನಿಡಬೇಕು ಎಂದು ಎಸ್‍ಪಿ ಕುಶಲ್ ಚೌಕ್ಸಿ ಮನವಿ ಮಾಡಿಕೊಂಡಿದ್ದಾರೆ. ಗೌರಿಬಿದನೂರಿನ ಬೈಪಾಸ್ ಗಣೇಶ ವಿಸರ್ಜನೆಗೆ ಕಟ್ಟಿನಿಟ್ಟಿನ ಭದ್ರತೆ ಒದಗಿಸಲು ಮುಂದಾಗಿರುವ ಪೊಲೀಸರು ಭಕ್ತರು ಶಾಂತಿಯುತವಾಗಿ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹಾಸನ ಗಣೇಶ ಮೆರವಣಿಗೆ ವೇಳೆ ಘನಘೋರ ದುರಂತ – ಪ್ರಧಾನಿ ಮೋದಿ ಸಂತಾಪ

  • ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತ – ವ್ಯಕ್ತಿ ಸಾವು

    ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತ – ವ್ಯಕ್ತಿ ಸಾವು

    ಚಿಕ್ಕಬಳ್ಳಾಪುರ: ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕುಸಿದು ಬಿದ್ದು ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೋಧಗೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ 40 ವರ್ಷದ ಲಕ್ಷ್ಮಿಪತಿ ಮೃತ ವ್ಯಕ್ತಿ. ಅಂದಹಾಗೆ ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ನಾಗವಲ್ಲಿ ಹಾಡಿಗೆ ನೃತ್ಯ ಮಾಡುತ್ತಿದ್ದ ಲಕ್ಷ್ಮಿಪತಿ ಏಕಾಏಕಿ ಕುಸಿದುಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸೋಮವಾರ ಮೈಸೂರಿಗೆ ರಾಷ್ಟ್ರಪತಿ ಮುರ್ಮು – ಅರಮನೆಗೆ ಭೇಟಿ, ಚಾಮುಂಡಿ ಬೆಟ್ಟದಲ್ಲೂ ವಿಶೇಷ ಪೂಜೆ

    ಕೃಷಿ ಕೆಲಸ ಮಾಡಿಕೊಂಡಿದ್ದ ಲಕ್ಷ್ಮಿಪತಿ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ನಾಳೆ ಎನ್‌ಐಎ ತನಿಖೆಗೆ ಆಗ್ರಹಿಸಿ ಬಿಜೆಪಿಯಿಂದ ಧರ್ಮಸ್ಥಳ ಚಲೋ, ಜಾಗೃತಿ ಸಮಾವೇಶ

  • ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪಟಾಕಿ ಸ್ಫೋಟ – ಓರ್ವ ಬಾಲಕ ದುರ್ಮರಣ

    ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪಟಾಕಿ ಸ್ಫೋಟ – ಓರ್ವ ಬಾಲಕ ದುರ್ಮರಣ

    – ಕರ್ತವ್ಯನಿರತ ಪೊಲೀಸ್ ಕಾನ್ಸ್‌ಟೇಬಲ್‌ ಕೈಗೆ ಗಂಭೀರ ಗಾಯ

    ದೊಡ್ಡಬಳ್ಳಾಪುರ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಸಂಭವಿಸಿದ ಪಟಾಕಿ ಸ್ಫೋಟದಲ್ಲಿ (Firecracker Explosion) ಓರ್ವ ಬಾಲಕ ಸಾವನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿರುವ ಮುತ್ತೂರಿನಲ್ಲಿ ನಡೆದಿದೆ.

    ಇಂದು ಸಂಜೆ ಗಣೇಶ ವಿಸರ್ಜನೆ ವೇಳೆ ಪಟಾಕಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ 15 ವರ್ಷದ ತನುಷ್ ರಾವ್ ಮೃತಪಟ್ಟಿದ್ದಾನೆ. ಇನ್ನೂ ಘಟನೆಯಲ್ಲಿ ವಿದ್ಯಾರ್ಥಿಗಳಾದ (Students) ಗಣೇಶ್, ಯೋಗೇಶ್, ಪವರ್ ಲಿಫ್ಟರ್ ಚಾಲಕ ಮುನಿರಾಜು, ನಾಗರಾಜು, ಚೇತನ್ ಶಾವಿ ಎಂಬುವರಿಗೆ ಸುಟ್ಟ ಗಾಯಗಳಾಗಿವೆ. ಇದೇ ವೇಳೆ ಬಂದೋಬಸ್ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್‌ಟೇಬಲ್‌ ಜಾಕಿರ್ ಹುಸೇನ್ ಎಂಬುವರ ಕೈಗೆ ಪಟಾಕಿ ಸಿಡಿದು ಗಂಭೀರ ಗಾಯವಾಗಿದೆ.

    ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಂದಹಾಗೆ ಇಂದು ಸಂಜೆ 5.30ರ ವೇಳೆ ಫ್ರೆಂಡ್ಸ್ ವಿನಾಯಕ ಗ್ರೂಪ್‌ವತಿಯಿಂದ ಗಣೇಶ ವಿಸರ್ಜನೆಗೆಂದು ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಬರುವ ವೇಳೆ, ಮೆರವಣಿಗೆ ಮಾಡಲು ಕರೆಸಲಾಗಿದ್ದ ಪವರ್ ಲಿಪ್ಟರ್ ವಾಹನ ಬಿಸಿಯಾಗಿ, ಅದರ ಮೇಲೆ ಇಡಲಾಗಿದ್ದ ಪಟಾಕಿಗಳ ಏಕಾಏಕಿ ಸ್ಪೋಟಗೊಂಡಿವೆ.

    ಸ್ಥಳಕ್ಕೆ ಎಸ್ಪಿ ಸಿಕೆ ಬಾಬಾ, ಎಎಸ್ಪಿ ನಾಗರಾಜ್, ಡಿವೈಎಸ್ಪಿ ರವಿ ಸೇರಿದಂತೆ ಪೊಲೀಸ್ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಆಸ್ಪತ್ರೆಗೆ ದಾಖಲಾದವರೊಂದಿಗೆ ಮಾತುಕತೆ ನಡೆಸಿದ್ದಾರೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಚಿಕ್ಕಬಳ್ಳಾಪುರ | ಬಾರ್‌ ಬಳಿ ಯುವಕನಿಂದ ಹಲ್ಲೆ – ಒಂದೇ ಏಟಿಗೆ ಕುಸಿದು ಬಿದ್ದ ವ್ಯಕ್ತಿ

    ಚಿಕ್ಕಬಳ್ಳಾಪುರ | ಬಾರ್‌ ಬಳಿ ಯುವಕನಿಂದ ಹಲ್ಲೆ – ಒಂದೇ ಏಟಿಗೆ ಕುಸಿದು ಬಿದ್ದ ವ್ಯಕ್ತಿ

    ಚಿಕ್ಕಬಳ್ಳಾಪುರ: ಹಳೆಯ ದ್ವೇಷದಿಂದ ಬಾರ್ ಬಳಿ ವ್ಯಕ್ತಿಯೊಬ್ಬನ ಮೇಲೆ ಯುವಕ ದೊಣ್ಣೆಯಿಂದ ಬಲವಾಗಿ ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ ಗ್ರಾಮದ ಬಳಿಯ ಎನ್‌ಕೆ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ನಡೆದಿದೆ.

    ಅಂದಹಾಗೆ ಅನೆಮಡುಗು ಗ್ರಾಮದ ವಿಜಿ ಎಂಬಾತ ಧನಮಿಟ್ಟೇನಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬಾತನ ಮೇಲೆ ದೊಣ್ಣೆಯಿಂದ ಬಲವಾಗಿ ಹಲ್ಲೆ ಮಾಡಿದ್ದಾನೆ. ಘಟನೆಯ ದೃಶ್ಯ ಬಾರ್‌ನ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು ದೃಶ್ಯ ಭಯಾನಕವಾಗಿದೆ. ಇದನ್ನೂ ಓದಿ: ಚಾಮುಂಡೇಶ್ವರಿ ನಮ್ಮ ನಾಡಿನ ಅಧಿದೇವತೆ, ಆಕೆಯ ದರ್ಶನ ಎಲ್ಲರ ಹಕ್ಕು: ಡಿಕೆಶಿ ಸ್ಪಷ್ಟನೆ

    ಅಸಲಿಗೆ ಈ ಹಿಂದೆ ಶ್ರೀನಿವಾಸ್ ಬೇರೋಬ್ಬರ ಜೊತೆ ಜಗಳವಾಡುತ್ತಿದ್ದ ಸಮಯದಲ್ಲಿ ಶ್ರೀನಿವಾಸ್ ಜಗಳ ಬಿಡಿಸಿ ಬುದ್ಧಿವಾದ ಹೇಳಿ ಬೈದಿದ್ದನಂತೆ. ಅದೇ ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ದ್ವೇಷ ಕಾರುತ್ತಿದ್ದ ವಿಜಿ ಬಾರ್‌ನಲ್ಲಿ ಶ್ರೀನಿವಾಸ್ ಕಂಡ ಕೂಡಲೇ ಆತನ ಜೊತೆ ಜಗಳಕ್ಕಿಳಿದಿದ್ದಾನೆ. ನಂತರ ಹೊರಗಡೆ ಬಂದ ಕೂಡಲೇ ಏಕಾಏಕಿ ಬಾರ್‌ನ ಹೊರಗಡೆಯಿದ್ದ ದೊಣ್ಣೆ ತಂದು ಒಂದೇ ಏಟು ಎಂಬಂತೆ ಶ್ರೀನಿವಾಸ್ ಕುತ್ತಿಗೆಗೆ ಹಾಕಿದ್ದಾನೆ. ಇದ್ರಿಂದ ಕ್ಷಣ ಮಾತ್ರದಲ್ಲಿ ಶ್ರೀನಿವಾಸ್ ಪ್ರಜ್ಞಾಹೀನನಾಗಿ ಕುಸಿದು ಬಿದ್ದಿದ್ದಾನೆ. ಇದನ್ನೂ ಓದಿ: ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಮತ್ತೆ ಭೂಕುಸಿತ – ಸಾವಿನ ಸಂಖ್ಯೆ 30ಕ್ಕೆ ಏರಿಕೆ

    ಈ ಸಂಬಂಧ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರೂ ಕೇವಲ ಎನ್‌ಸಿಆರ್‌ ಮಾಡಿ ಕೈತೊಳೆದುಕೊಂಡಿದ್ದಾರಂತೆ, ಪ್ರಭಾವಿ ಸಚಿವರೊಬ್ಬರ ಸಂಬಂಧಿ ಎಂಬ ಕಾರಣಕ್ಕೆ ಕೊಲೆ ಯತ್ನ ಪ್ರಕರಣ ದಾಖಲಿಸದೇ ಆರೋಪಿಯನ್ನ ಬಿಟ್ಟು ಕಳುಹಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ. ಸದ್ಯ ಗಾಯಾಳು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ (Sidlaghatta Hospital) ಚಿಕಿತ್ಸೆ ಪಡೆಯುತ್ತಿದ್ದು, ಗಾಯಾಳು ಬಳಿ ಶಿಡ್ಲಘಟ್ಟ ಸಿಪಿಐ ಶ್ರೀನಿವಾಸ್ ಭೇಟಿ ಮಾಡಿ ಹೆಚ್ಚಿನ ಮಾಹಿತಿ ಪಡದೆದುಕೊಂಡು ಮರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಗಣೇಶ ವಿಸರ್ಜನೆಗೆ ಬಿಬಿಎಂಪಿಯಿಂದ 41 ಕೆರೆ, 489 ತಾತ್ಕಾಲಿಕ ಸಂಚಾರಿ ಕಲ್ಯಾಣಿ ವ್ಯವಸ್ಥೆ

  • ನಂದಿಬೆಟ್ಟದ ರಸ್ತೆಯಲ್ಲಿ ಅಪಘಾತ – Friendship Day ದಿನವೇ ಪ್ರಾಣ ಬಿಟ್ಟ ಸ್ನೇಹಿತರು

    ನಂದಿಬೆಟ್ಟದ ರಸ್ತೆಯಲ್ಲಿ ಅಪಘಾತ – Friendship Day ದಿನವೇ ಪ್ರಾಣ ಬಿಟ್ಟ ಸ್ನೇಹಿತರು

    ಚಿಕ್ಕಬಳ್ಳಾಪುರ: ಸ್ನೇಹಿತರ ದಿನದ ಹಿನ್ನೆಲೆ ಬೈಕಿನಲ್ಲಿ ನಂದಿಬೆಟ್ಟಕ್ಕೆ ತೆರಳಿದ್ದ ಇಬ್ಬರು ಫ್ರೆಂಡ್ಸ್‌ ಅಪಘಾತಕ್ಕೆ ಬಲಿಯಾಗಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲ್ಲೂಕಿನ ನಂದಿಬೆಟ್ಟದ ರಸ್ತೆಯ 15ನೇ ತಿರುವಿನ ಬಳಿ ಸಂಭವಿಸಿದೆ.

    ಚಿಕ್ಕಬಳ್ಳಾಪುರ ತಾಲ್ಲೂಕಿನ ಕಣಿತಹಳ್ಳಿ ಗ್ರಾಮದ ಅರವಿಂದ್ (21) ಹಾಗೂ ಶ್ರೀಕಾಂತ್ (21) ಮೃತರು. ಇಬ್ಬರು ಸ್ನೇಹಿತರಾಗಿದ್ದು Friendship Day ಅಂಗವಾಗಿ ಪ್ಲ್ಯಾನ್‌ ಮಾಡಿಕೊಂಡು ಒಂದೇ ಬೈಕಿನಲ್ಲಿ‌ ಬೆಟ್ಟಕ್ಕೆ ಹೋಗಿ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಕಲಬುರಗಿ ಕೇಂದ್ರಿಯ ವಿವಿ ಆವರಣದಲ್ಲಿ ಗೋರಿ – ರಾತ್ರೋರಾತ್ರಿ ಕಾಂಪೌಂಡ್‌ ನಿರ್ಮಾಣ

    ರಸ್ತೆ ಬದಿಯ ದೊಡ್ಡ ಬಂಡೆಗಲ್ಲಿಗೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗಳಿಗೆ ಗಂಭೀರ ಗಾಯಗಾಳಾಗಿ ಇಬ್ಬರೂ ಮೃತಪಟ್ಟಿದ್ದಾರೆ. ಮೃತದೇಹಗಳನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಕೊಪ್ಪಳ| ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಯುವಕನ ಭೀಕರ ಕೊಲೆ

  • ಚಿಕ್ಕಬಳ್ಳಾಪುರ | ತುಂಬಿದ ಬಸ್‌ಗಳಲ್ಲಿ ಕೈಚಳಕ ತೋರಿಸ್ತಿದ್ದ ಕಳ್ಳಿಯರ ಗ್ಯಾಂಗ್‌‌ ಲಾಕ್‌

    ಚಿಕ್ಕಬಳ್ಳಾಪುರ | ತುಂಬಿದ ಬಸ್‌ಗಳಲ್ಲಿ ಕೈಚಳಕ ತೋರಿಸ್ತಿದ್ದ ಕಳ್ಳಿಯರ ಗ್ಯಾಂಗ್‌‌ ಲಾಕ್‌

    ಚಿಕ್ಕಬಳ್ಳಾಪುರ: ಶಕ್ತಿ ಯೋಜನೆ (Shakti Scheme) ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿದ್ದೇ ತಡ.. ಕೆಲ ಮಹಿಳೆಯರು ಪ್ರವಾಸ, ತವರು ಮನೆ, ನೆಂಟರ ಮನೆಗಳಿಗೆ ಅಂತ ಮೈತುಂಬಾ ಚಿನ್ನಾಭರಣ ಹಾಕಿಕೊಂಡು ಬಸ್ ಹತ್ತುತ್ತಾರೆ. ಆದ್ರೆ ಅಂಥವರನ್ನೆ ಟಾರ್ಗೆಟ್ ಮಾಡಿದ್ದ ಅದೊಂದು ಕಳ್ಳಿಯರ ಗ್ಯಾಂಗ್, ತುಂಬಿದ್ದ ಬಸ್ ಹತ್ತಿ ಮಹಿಳೆಯರ ಚಿನ್ನಾಭರಣಗಳಿಗೆ (Gold Jewelry) ಕನ್ನ ಹಾಕ್ತಿದ್ರು. ಈಗ ಆ ಗ್ಯಾಂಗ್ ಪೊಲೀಸರ ಅತಿಥಿಯಾಗಿದೆ.

    ಈ ಗ್ಯಾಂಗ್‌ನ ಕಳ್ಳಿಯರು (Women Theft Gang) ಬಸ್ ಹತ್ತಿದ್ರೆ ಸಾಕು ಪ್ರಯಾಣಿಕರ ಜೇಬಲ್ಲಿ ಇರೋ ದುಡ್ಡು ಕ್ಷಣ ಮಾತ್ರದಲ್ಲಿ ಮಾಯವಾಗ್ತಿತ್ತು. ಇನ್ನೂ ಮೈಮೇಲೆ ಇರೋ ಒಡವೆಗಳು ಮಂಗಮಾಯ ಆಗ್ತಿತ್ತು. ಆಕೆಯ ಹೆಸರು ತುಳಸಿ (22), ಮತ್ತಿಬ್ಬರ ಹೆಸರು ಪ್ರೇಮಾ (21), ಸೋನಿಯಾ (25). ಮೂವರೂ ಕಲಬುರಗಿ ಮೂಲದವರು. ಶಕ್ತಿ ಯೋಜನೆಯಡಿ ಮಹಿಳೆಯರು ಮುಗಿಬಿದ್ದು ಬಸ್‌ಗಳಲ್ಲಿ ಪ್ರಯಾಣ ಮಾಡ್ತಿದ್ದಂತೆ ಇವರ ಆದಾಯ ಏರಿಕೆಯಾಗಿದೆಯಂತೆ. ತುಂಬಿದ ಬಸ್‌ಗಳಲ್ಲಿ ಮಹಿಳೆಯರು ಬಸ್ ಹತ್ತುವಾಗ ಇಳಿಯುವಾಗ ಈ ಮೂವರು ಸುಂದರಿಯರು. ಮಹಿಳೆಯರ ಬ್ಯಾಗ್‌ನಲ್ಲಿದ್ದ ಹಣ, ಕತ್ತಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡ್ತಿದ್ರು. ಇದನ್ನೂ ಓದಿ: ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್ ಸಿದ್ದಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಇನ್ನೂ ಚಿಕ್ಕಬಳ್ಳಾಪುರ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣವೇ ಈ ಮೂವರು ಕಳ್ಳಿಯರ ಅಡ್ಡೆಯಾಗಿತ್ತು. ಇತ್ತೀಚಿಗೆ ಎರಡು ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು, ಸಿಸಿಟಿವಿಯಲ್ಲಿ ದಾಖಲಾದ ವಿಡಿಯೊ ಜಾಡು ಹಿಡಿದು ತನಿಖೆ ಕೈಗೊಂಡಿದ್ರು. ಕೊನೆಗೆ ಚಿಕ್ಕಬಳ್ಳಾಪುರದಿಂದ ಕಲಬುರಗಿವರೆಗೂ ಪ್ರಯಾಣ ಮಾಡಿ ಮೂವರು ಕಳ್ಳಿಯರನ್ನ ಬಂಧಿಸಿದ್ದಾರೆ. ಬಂಧಿತರಿಂದ 7 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

    ಒಟ್ಟಿನಲ್ಲಿ ಮಹಿಳೆಯರು ತುಂಬಿದ ಬಸ್‌ಗಳನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಕಳ್ಳಿಯರು ಕಳ್ಳತನ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ರು. ಆದ್ರೆ ಪೊಲೀಸರು ಈಗ ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಎಣ್ಣೆಯಲ್ಲಿ ಫ್ಯಾಟ್ ಚೆಕಿಂಗ್‌ಗೆ ಮುಂದಾದ ಹೋಟೆಲ್‌ ಮಾಲೀಕರು – ಡಿವೈಸ್ ಬೆಲೆ ಕೇಳಿ ಸುಸ್ತು!

  • 5 ವರ್ಷ ನಾನೇ ಸಿಎಂ, ನಮ್ಮ ಸರ್ಕಾರ ಬಂಡೆ ತರ ಇರುತ್ತೆ: ಸಿದ್ದರಾಮಯ್ಯ

    5 ವರ್ಷ ನಾನೇ ಸಿಎಂ, ನಮ್ಮ ಸರ್ಕಾರ ಬಂಡೆ ತರ ಇರುತ್ತೆ: ಸಿದ್ದರಾಮಯ್ಯ

    ಚಿಕ್ಕಬಳ್ಳಾಪುರ: 5 ವರ್ಷವೂ ನಾನೇ ಸಿಎಂ, ನಮ್ಮ ಸರ್ಕಾರ ಬಂಡೆ ತರ ಇರುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.

    ಚಿಕ್ಕಬಳ್ಳಾಪುರದಲ್ಲಿಂದು (Chikkaballapura) ಕ್ಯಾಬಿನೆಟ್‌ ಸಭೆಗೂ ಮುನ್ನ ನಂದಿ ಗ್ರಾಮದ ಶ್ರೀ ಭೋಗನಂದೀಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, 5 ವರ್ಷ ನಾನೇ ಸಿಎಂ ಆಗಿರ್ತೀನಿ. ನಿಮಗ್ಯಾಕೆ ಅನುಮಾನ ಬಂದಿದೆ? ಅಂತ ಪ್ರಶ್ನಿಸಿದ್ರು. ಇದನ್ನೂ ಓದಿ: ಸಿಎಂ ಕಾರ್ಯಕ್ರಮದಲ್ಲಿ ಅಪಮಾನ – ಸ್ವಯಂ ನಿವೃತ್ತಿಗೆ ಮುಂದಾದ ಎಎಸ್‌ಪಿ ಬರಮಣ್ಣಿ

    ಬಿಜೆಪಿಯವರು (BJP_ ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು, ಸತ್ಯ ಹೇಳೋದು ಅವರಿಗೆ ಗೊತ್ತೇ ಇಲ್ಲ. ನಾವೆಲ್ಲರೂ ಒಟ್ಟಾಗಿದ್ದೇವೆ. 5 ವರ್ಷ ನಾವೇ ಅಧಿಕಾರದಲ್ಲಿ ಇರ್ತೇವೆ. ನಮ್ಮ ಸರ್ಕಾರ (Congress Government) ಬಂಡೆ ತರ ಇರುತ್ತೆ ಎಂದರು.

    ಬಿಜೆಪಿಯವರು ಹಗಲು ಕನಸು ಕಾಣ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ. ಡಿಕೆ ಶಿವಕುಮಾರ್ ಹೇಳೋ ಹಾಗೆ ಏನೂ ಸಾಕ್ಷಿ ಗುಡ್ಡೆ ಬಿಟ್ಡು ಹೋಗಿದ್ದಾರೆ. ಕುಮಾರಸ್ವಾಮಿ ಜೊತೆ ಸಮ್ಮಿಶ್ರ ಸರ್ಕಾರದಲ್ಲಿ ಏನು ಮಾಡಿದ್ರು? ಸುಳ್ಳು ಹೇಳಿಕೊಂಡು ಜನರನ್ನ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಿದ್ದಾರೆ ಬಿಟ್ರೆ, ಬೇರೆನೂ ಮಾಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ರು. ಇದನ್ನೂ ಓದಿ: ಓಲಾ, ಊಬರ್ ಬಳಕೆದಾರರಿಗೆ ಶಾಕ್ – ಪೀಕ್ ಅವರ್‌ನಲ್ಲಿ ದುಪ್ಪಟ್ಟು ದರ ವಿಧಿಸಲು ಕೇಂದ್ರ ಒಪ್ಪಿಗೆ 

    2ನೇ ವರ್ಷದ ಸಾಧನಾ ಸಮಾವೇಶದಲ್ಲಿ 3 ಲಕ್ಷ ಜನ ಇದ್ರು. ಮಳೆ ಇದ್ದರೂ ಸಹ ಜನ ಬಂದಿದ್ದರು. ಯಾರಾದ್ರೂ ಸುಮ್ಮನೆ ಬರ್ತಾರಾ? ಅಂತ ಪ್ರಶ್ನೆ ಮಾಡಿದ ಸಿಎಂ, ವಿಪಕ್ಷ ನಾಯಕ ಆರ್‌. ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಕ್ಷದಲ್ಲಿ ಯಾರೇ ಶಿಸ್ತು ಉಲ್ಲಂಘಿಸಿದ್ರು ನೋಟಿಸ್ ಕೊಡ್ತೀನಿ – ಡಿಕೆಶಿ