Tag: Chikamagaluru

  • ನಮ್ಮ ಡೈರಿಯಲ್ಲಿ ಫೀಡ್ಸ್ ತಗಳಲ್ಲ, ನಿಮ್ಮ ಹಾಲು ಬೇಡ

    ನಮ್ಮ ಡೈರಿಯಲ್ಲಿ ಫೀಡ್ಸ್ ತಗಳಲ್ಲ, ನಿಮ್ಮ ಹಾಲು ಬೇಡ

    – ಒಬ್ಬರ ಕಥೆಯಲ್ಲಿ, ಹಲವು ರೈತರಿಗೆ ಅನ್ಯಾಯ
    – ಗ್ರಾಮದ ಬೇರೆ ರೈತರಿಂದ ಹಾಲು ಖರೀದಿ

    ಚಿಕ್ಕಮಗಳೂರು:“ನೀವು ನಮ್ಮ ಡೈರಿಯಲ್ಲಿ ಫೀಡ್ಸ್ ತೆಗೆದುಕೊಳ್ಳಲ್ಲ. ಹಾಗಾಗಿ, ಸದ್ಯಕ್ಕೆ ನಿಮ್ಮ ಹಾಲು ಬೇಡ” ಎಂದು ರೈತರಿಂದ ಡೈರಿ ಸಿಬ್ಬಂದಿ ಹಾಲು ಹಾಕಿಸಿಕೊಳ್ಳದ ಹಿನ್ನೆಲೆಯಲ್ಲಿ ರೈತ ಪ್ರತಿದಿನ ಎಂಟತ್ತು ಲೀಟರ್ ಹಾಲನ್ನ ಗಿಡಕ್ಕೆ ಸುರಿಯುತ್ತಿದ್ದಾನೆ.

    ಚಿಕ್ಕಮಗಳೂರು ತಾಲೂಕಿನ ಗವನಹಳ್ಳಿ ರೈತ ತಿರುಮಲೇಶ್ ಕಳೆದ ಆರು ವರ್ಷಗಳಿಂದ ಹೈನುಗಾರಿಕೆಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. 2016ರಿಂದಲೂ ತೇಗೂರು ಗ್ರಾಮದಲ್ಲಿರುವ ಡೈರಿಗೆ ಹಾಲು ಹಾಕುತ್ತಿದ್ದಾರೆ. ಆದರೆ, ಕಳೆದೊಂದು ತಿಂಗಳಿಂದ ಡೈರಿಯವರು ತಿರುಮಲೇಶ್ ಅವರ ಹಾಲನ್ನ ಹಾಕಿಸಿಕೊಳ್ಳುತ್ತಿಲ್ಲ. ಕಾರಣ ಕೇಳಿದರೆ, ನೀವು ನಮ್ಮ ಡೈರಿಯಲ್ಲಿ ಹಸುವಿಗೆ ಫೀಡ್ಸ್ ತೆಗೆದುಕೊಳ್ಳುವುದಿಲ್ಲ. ಹಾಗಾಗಿ, ಸದ್ಯಕ್ಕೆ ಹಾಲು ಬೇಡ. ಬೇಕಾದಾಗ ಫೋನ್  ಮಾಡುತ್ತೇವೆ ತಂದು ಹಾಕಿ ಎಂದು ಹೇಳಿದ್ದಾರೆ. ಇದರಿಂದ ರೈತ ತಿರುಮಲೇಶ್ ಕಂಗಾಲಾಗಿದ್ದಾರೆ.

    ಮೊದಲೇ ಕಳೆದೊಂದು ವರ್ಷದಿಂದ ರೈತ ಸಮುದಾಯ ಕೊರೋನಾದ ಅಬ್ಬರದಲ್ಲಿ ಸಂಕಷ್ಟಕ್ಕೀಡಾಗಿದೆ. ಹೀಗಿರುವಾಗ ಡೈರಿ ಸಿಬ್ಬಂದಿ ತಮ್ಮ ಡೈರಿಯಲ್ಲಿ ಫೀಡ್ಸ್ ತೆಗೆದುಕೊಳ್ಳಲಿಲ್ಲ ಎಂದು ಹಾಲನ್ನ ಹಾಕಿಸಿಕೊಳ್ಳದಿರುವುದರಿಂದ ರೈತ ತಿರುಮಲೇಶ್ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ. ಒಂದೆಡೆ ಕೂಲಿ ಇಲ್ಲ. ಮತ್ತೊಂದೆಡೆ ಡೈರಿಯಲ್ಲಿ ಹಾಲು ಖರೀದಿಸಲ್ಲ. ಇತ್ತ ಹೊಲದಲ್ಲಿ ಜೋಳವೂ ಇಲ್ಲ. ಅತ್ತ ಬಣವೆಯಲ್ಲಿ ಹುಲ್ಲೂ ಇಲ್ಲ. ಕೈಯಲ್ಲಿ ದುಡ್ಡೂ ಇಲ್ಲದಂತಾಗಿದ್ದು ರೈತ ಬದುಕಿನ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅನ್ನದಾತನ ಜೊತೆ ರೈತನ ಬೆನ್ನೆಲುಬು ಎಂದು ಕರೆಸಿಕೊಳ್ಳೋ ರಾಸುಗಳು ಕೂಡ ಉಪವಾಸದ ಸ್ಥಿತಿ ನಿರ್ಮಾಣವಾಗಿದೆ.

    ತೇಗೂರು ಗ್ರಾಮದ ಡೈರಿಯಲ್ಲಿ ಫೀಡ್ಸ್ ತಂದರೆ ಹಸು ತಿನ್ನಲ್ಲ. ಅದಕ್ಕೆ ತಿರುಮಲೇಶ್ ಬೇರೆಡೆಯಿಂದ ಫೀಡ್ಸ್ ತಂದು ರಾಸುಗಳಿಗೆ ಕೊಡುತ್ತಾರೆ. ಆದರೆ, ತೇಗೂರಿನ ಡೈರಿಯವರು ಲಾಕ್‍ಡೌನ್ ಇದೆ. ಹೋಟೆಲ್‍ಗಳೂ ಕೂಡ ಬಂದ್ ಆಗಿದೆ. ಹಾಲನ್ನ ಯಾರೂ ಖರೀದಿಸಲ್ಲ. ಬೇಕಾದಾಗ ಫೋನ್ ಮಾಡುತ್ತೇವೆ ಆಗ ತೆಗೆದುಕೊಂಡು ಬನ್ನಿ ಎಂದಿದ್ದಾರೆ.

    ಈ ಡೈರಿ ಇರೋದೆ ತೇಗೂರು, ಗವನಹಳ್ಳಿ ಹಾಗೂ ನಲ್ಲೂರು ಗ್ರಾಮದ ರೈತರಿಗಾಗಿ. ಆದರೆ, ಎಂಟತ್ತು ಕಿ.ಮೀ. ದೂರದ ಹಾಗೂ ಈ ಡೈರಿಗೆ ಸಂಬಂಧವೇ ಇಲ್ಲದ ಊರುಗಳ ಹಾಲನ್ನೂ ಖರೀದಿ ಮಾಡುವ ಡೈರಿ ಸಿಬ್ಬಂದಿ ಈ ರೈತನ ಹಾಲನ್ನ ಮಾತ್ರ ತೆಗೆದುಕೊಳ್ಳುತ್ತಿಲ್ಲ. ಅವರೆಲ್ಲಾ ನಮ್ಮ ಡೈರಿಯಲ್ಲೇ ಫೀಡ್ಸ್ ತೆಗೆದುಕೊಳ್ಳುತ್ತಾರೆ. ಹಾಗಾಗಿ, ಅವರ ಹಾಲನ್ನ ತೆಗೆದುಕೊಳ್ಳುತ್ತೇವೆ. ಸದ್ಯಕ್ಕೆ ನಿಮ್ಮ ಹಾಲು ಬೇಡ ಎಂದಿದ್ದಾರೆ. ಬೇರೆ ದಾರಿ ಇಲ್ಲದ ಈ ಹೈನುಗಾರ ಬೆಳಗ್ಗೆ-ಸಂಜೆ ಸುಮಾರು ಎಂಟತ್ತು ಲೀಟರ್ ಹಾಲನ್ನ ಗಿಡಕ್ಕೆ ಸುರಿಯುತ್ತಿದ್ದಾರೆ. ಇದು ಇವರೊಬ್ಬರ ಸಮಸ್ಯೆಯಲ್ಲ.  ಈ ರೀತಿ ಹಲವು ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ.

    ತೇಗೂರಿನ ಡೈರಿಯಲ್ಲಿ ಯಾರು ಫೀಡ್ಸ್ ತೆಗೆದುಕೊಳ್ಳುತ್ತಾರೆ ಅವರ ಹಾಲನ್ನು ತೆಗೆದುಕೊಳ್ಳುತ್ತಾರೆ. ಯಾರೂ ಖರೀದಿಸಲ್ಲ ಅವರ ಹಾಲು ಇವರಿಗೆ ಭಾರವಾಗುತ್ತೆ. ಡೈರಿಯವರ ಈ ನಡೆಯಿಂದ ತೇಗೂರು, ಗವನಹಳ್ಳಿ, ನಲ್ಲೂರಿನ ಹಲವು ರೈತರು ಕಂಗಾಲಾಗಿದ್ದಾರೆ. ಈಗ ಕೂಲಿ ಇಲ್ಲ. ಹಾಲು ತೆಗೆದುಕೊಳ್ಳುತ್ತಿಲ್ಲ. ಮಳೆ ಇಲ್ಲದೆ ಹೊಲಗದ್ದೆಗಳಲ್ಲಿ ಜೋಳವೂ ಇಲ್ಲ. ಬಣವೆ ಹುಲ್ಲೂ ಖಾಲಿಯಾಗಿದೆ. ಖಾಸಗಿಯಾಗಿ ಹುಲ್ಲು ಖರೀದಿಸಲು ಒಂದು ಹೊರೆಗೆ 150-200 ರೂಪಾಯಿ ಹಣ ಕೊಡಬೇಕು. ಹುಸುಗಳನ್ನ ತಂದ ಲೋನ್ ಕಟ್ಟಬೇಕು. ದಾರಿ ಕಾಣದೆ ಹೈನುಗಾರರು ತಲೆಮೇಲೆ ಕೈಹೊದ್ದು ಕೂರುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಕೂಡಲೇ ಡೈರಿಯವರು ಎಲ್ಲಾ ರೈತರ ಹಾಲನ್ನ ಖರೀದಿಸಿ ರಾಸುಗಳ ಜೊತೆ ನಮ್ಮ ಹೊಟ್ಟೆಯನ್ನೂ ತುಂಬಿಸಬೇಕೆಂದು ಮನವಿ ಮಾಡಿದ್ದಾರೆ. ಡೈರಿ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ. ಹಾಲು ಹಾಕಿಸಿಕೊಳ್ಳುವ ಡೈರಿ ಸಿಬ್ಬಂದಿ ಕೂಡ ವ್ಯವಹಾರ ಬಿಟ್ಟು ರೈತರ ಕಷ್ಟವನ್ನು ಅರಿಯಬೇಕಿದೆ.

  • ನಾಯಿ ಬಾಯಿಗೆ ತುತ್ತಾದ ಜಿಂಕೆ – ಒಂದು ಸಾವು ಮತ್ತೊಂದಕ್ಕೆ ಚಿಕಿತ್ಸೆ

    ನಾಯಿ ಬಾಯಿಗೆ ತುತ್ತಾದ ಜಿಂಕೆ – ಒಂದು ಸಾವು ಮತ್ತೊಂದಕ್ಕೆ ಚಿಕಿತ್ಸೆ

    ಚಿಕ್ಕಮಗಳೂರು: ದಾರಿತಪ್ಪಿ ಕಾಡಿನಿಂದ ನಾಡಿಗೆ ಬಂದ ಜಿಂಕೆಯೊಂದು ನಾಯಿಗಳ ದಾಳಿಗೆ ತುತ್ತಾಗಿ ಹೃದಯಾಘಾತದಿಂದ ಸಾವನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಉಗ್ಗೆಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಸೋಮವಾರ ಸಂಜೆ ನಾಡಿಗೆ ಬಂದಿದ್ದ ಜಿಂಕೆ ಮೇಲೆ ಸುಮಾರು ಐದಾರು ನಾಯಿಗಳು ದಾಳಿ ಮಾಡಿದ್ದವು. ಈ ವೇಳೆ ಜಿಂಕೆ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಜಿಂಕೆ ಸುಮಾರು ಒಂದು ಕ್ವಿಂಟಲ್‍ನಷ್ಟು ತೂಕವಿದ್ದು ದೈತ್ಯವಾಗಿತ್ತು. ಜಿಂಕೆಯ ಕೋಡುಗಳು ದೊಡ್ಡದ್ದಾಗಿದ್ದರಿಂದ ಬೇಲಿಗಳ ಮಧ್ಯೆ ಓಡಲು ಸಾಧ್ಯವಾಗದೆ ನಾಯಿಗಳ ಬಾಯಿಗೆ ಸುಲಭ ತುತ್ತಾಗಿದೆ.

    ಜಿಂಕೆ ಅತಿ ಸೂಕ್ಷ್ಮ ಪ್ರಾಣಿ. ಜಿಂಕೆ ಮೇಲೆ ನಾಯಿ ಸೇರಿದಂತೆ ಯಾವುದೇ ಪ್ರಾಣಿಗಳು ದಾಳಿ ಮಾಡದಿದ್ದರೂ ಜನಸಾಮಾನ್ಯರು ಅವುಗಳ ಪಕ್ಕ ನಿಂತರೂ ಅವು ಹೃದಯಾಘಾತದಿಂದ ಸಾಯುತ್ತವೆ. ಹೀಗಾಗಿ ಐದಾರು ನಾಯಿಗಳ ದಾಳಿ ಮಾಡಿದ ಕೂಡಲೇ ಅಷ್ಟೇನು ಗಾಯಗಳಾಗದಿದ್ದರೂ ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ಪಶು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ಮಲೆನಾಡು ಭಾಗದಲ್ಲಿ ಈ ರೀತಿ ನಾಯಿಗಳ ಬಾಯಿಗೆ ಜಿಂಕೆ ತುತ್ತಾಗ್ತಿರೋದು ವಾರದಲ್ಲಿ ಇದು ಮೂರನೇ ಪ್ರಕರಣ. ಮಲೆನಾಡಲ್ಲಿ ಜಿಂಕೆಗಳ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಜಿಂಕೆಗಳು ದಾರಿ ತಪ್ಪಿಬಂದು ಈ ರೀತಿ ನಾಯಿ ಬಾಯಿಗೆ ತುತ್ತಾಗಿವೆ.

    ಜಿಲ್ಲೆಯ ತರೀಕೆರೆ ತಾಲೂಕಿಲ್ಲೂ ದಾರಿ ತಪ್ಪಿ ನಾಡಿಗೆ ಬಂದಿದ್ದ ಜಿಂಕೆ ನಾಯಿಗಳ ಬಾಯಿಗೆ ತುತ್ತಾಗಿತ್ತು. ಆದರೆ, ಕೂಡಲೇ ಇದನ್ನು ಗಮನಿಸಿದ ಸ್ಥಳಿಯರು ನಾಯಿಗಳಿಂದ ಜಿಂಕೆಯನ್ನ ರಕ್ಷಿಸಿ ಪಶು ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿ ಮತ್ತೆ ಕಾಡಿಗೆ ಬಿಟ್ಟಿದ್ದಾರೆ.

  • ನಾಲ್ವರಿಂದ ನಲವತ್ತಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ಆತಂಕ

    ನಾಲ್ವರಿಂದ ನಲವತ್ತಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ಆತಂಕ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಾಲ್ಕು ಪೊಲೀಸರಿಗೆ ಕೊರೊನಾ ಸೋಂಕು ತಗುಲಿರೋದು ಧೃಡವಾಗಿದೆ. ಪರಿಣಾಮ ನಲವತ್ತಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ಆತಂಕ ಹೆಚ್ಚಾಗಿದೆ.

    ಈಗಾಗಲೇ ಕಾಫಿನಾಡಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಆರು ತಿಂಗಳಿಂದ ಜೈಲಿನಲ್ಲಿದ್ದ ಕೈದಿಗೂ ಕೊರೊನಾ ತಗುಲಿದ್ದು, ಆತನಿಗೆ ಸೋಂಕು ಹೇಗೆ ಬಂತು ಎಂದು ಹುಡುಕಾಡುವಷ್ಟರಲ್ಲಿಯೇ ಜಿಲ್ಲೆಯ ನಾಲ್ವರು ಪೊಲೀಸರಿಗೆ ಕೋವಿಡ್-19 ತಗುಲಿದೆ. ಇದೀಗ ಜಿಲ್ಲಾಡಳಿತತ ಜೊತೆಗೆ ಇತರೆ ಪೊಲೀಸರಿಗೆ ಕೊರೊನಾ ಢವ ಢವ ಶುರುವಾಗಿದೆ.

    ಸೋಂಕಿತ ನಾಲ್ವರು ಪೊಲೀಸರು ಜೂ.17 ರಂದು ತರೀಕೆರೆ ಸರ್ಕಾರಿ ಆಸ್ಪತ್ತೆಯಲ್ಲಿ ಕೊರೊನಾ ಸಾಮುದಾಯಿಕ ಪರೀಕ್ಷೆಗೆ ಒಳಗಾಗಿ ಗಂಟಲ ದ್ರವ ನೀಡಿದ್ದರು. ಬಳಿಕ ಜೂ.17 ಹಾಗೂ 18 ರಂದು ಕೆಲಸಕ್ಕೆ ಹಾಜರಾಗಿ, ಮನೆಗೆ ಹೋಗಿದ್ದರು. ಸ್ನೇಹಿತರ ಜೊತೆ ಸೇರಿದ್ದರು. ಅಷ್ಟೆ ಅಲ್ಲದೆ ಜೂ.19 ರಂದು ತರೀಕೆರೆ ಡಿ.ವೈ.ಎಸ್.ಪಿ. ವ್ಯಾಪ್ತಿಯ ಸುಮಾರು 10ಕ್ಕೂ ಹೆಚ್ವು ಪೊಲೀಸ್ ಠಾಣೆಯ 40ಕ್ಕೂ ಹೆಚ್ವು ಪೊಲೀಸ್ ಸಿಬ್ಬಂದಿ, ಅಧಿಕಾರಿಗಳ ಜೊತೆ ಕ್ರೈಂ ಮೀಟಿಂಗ್ ಮಾಡಿದ್ದರು.

    ಸಭೆಯಲ್ಲಿ ಪಾಸಿಟಿವ್ ಬಂದಿರೋ ಪೊಲೀಸರು ಸಹ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಸಭೆಯಲ್ಲಿ ಭಾಗಿಯಾಗದ ಬಳಿಕ ಎಲ್ಲ ಪೊಲೀಸರು ತಮ್ಮ ತಮ್ಮ ಠಾಣೆಗಳಿಗೆ ತೆರಳಿ ಕೆಲಸಕ್ಕೆ ಹಾಜರಾಗಿದ್ದಾರೆ. ಈಗ ಈ ನಾಲ್ಕು ಪೊಲೀಸರ ಪಾಸಿಟಿವ್ ಕೇಸ್ ಸುಮಾರು ಹತ್ತು ಠಾಣೆಯ ನಲವತ್ತಕ್ಕೂ ಹೆಚ್ವು ಪೊಲೀಸರಿಗೆ ಭಯ ಹುಟ್ಟಿಸಿದೆ.

  • ಕೆರೆಗೆ ವಿಷ ಪ್ರಾಶನದ ಶಂಕೆ- ಸಾವಿರಾರು ಮೀನುಗಳ ಮಾರಣ ಹೋಮ

    ಕೆರೆಗೆ ವಿಷ ಪ್ರಾಶನದ ಶಂಕೆ- ಸಾವಿರಾರು ಮೀನುಗಳ ಮಾರಣ ಹೋಮ

    ಚಿಕ್ಕಮಗಳೂರು: ಸಂಜೆ ಬಲೆ ಹಾಕಲು ಹೋದಾಗ ಚೆನ್ನಾಗಿದ್ದ ಮೀನುಗಳು ಬೆಳಗ್ಗೆ ಬಲೆ ತೆಗೆಯಲು ಹೋದಾಗ ಸತ್ತು ಕೆರೆ ದಡಕ್ಕೆ ತೇಲಿಕೊಂಡು ಬಂದಿರುವ ಘಟನೆ ನಗರದ ಆದಿಶಕ್ತಿ ನಗರದಲ್ಲಿ ನಡೆದಿದೆ.

    ಚಿಕ್ಕಮಗಳೂರು ನಗರದ ಆದಿಶಕ್ತಿ ನಗರದ ನಿವಾಸಿ ಶಾಯಿನ್ ಎಂಬವರು ಸ್ಥಳೀಯ ಕೆರೆಯನ್ನ ಟೆಂಡರ್ ಕೂಗಿಕೊಂಡು ಮೀನುಗಳನ್ನ ಸಾಕಿದ್ದರು. ಐದು ವರ್ಷಗಳ ಅವಧಿಗೆ ಶಾಯಿನ್ ಅವರೇ ಕೆರೆಯ ಟೆಂಡರ್ ತೆಗೆದುಕೊಂಡಿದ್ದರು. ಸಾವಿರಾರು ಮೌಲ್ಯದ ಲಕ್ಷಾಂತರ ಮೀನುಗಳನ್ನ ಕೆರೆಯಲ್ಲಿ ಬಿಟ್ಟಿದ್ದರು. ಮೀನಿಗಾಗಿ ನಿನ್ನೆ ಸಂಜೆ ಬಲೆ ಹಾಕುವಾಗ ಮೀನುಗಳು ಚೆನ್ನಾಗಿದ್ದವು. ಏನೂ ಆಗಿರಲಿಲ್ಲ. ಆದರೆ ಇಂದು ಬೆಳಗ್ಗೆ ಮೀನಿಗಾಗಿ ಹಾಕಿದ್ದ ಬಲೆಯನ್ನ ತೆಗೆಯಲು ಹೋದಾಗ ಸಾವಿರಾರು ಮೀನುಗಳು ಸತ್ತು ಕೆರೆಯ ದಡಕ್ಕೆ ತೇಲಿಕೊಂಡು ಬಂದಿದ್ದವು. ಇದನ್ನ ಕಂಡ ಶಾಯಿನ್ ತೀವ್ರ ಆತಂಕಕ್ಕೀಡಾಗಿದ್ದಾರೆ.

    ಯಾರೋ ದುಷ್ಕರ್ಮಿಗಳು ಕೆರೆಗೆ ವಿಷ ಹಾಕಿದ್ದಾರೆಂದು ಶಂಕಿಸಲಾಗಿದೆ. ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆದಮೇಲೆ ಶಾಯಿನ್ ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೀಡಾಗಿದ್ದರು. ವ್ಯವಹಾರವೂ ಇಲ್ಲದೆ ಕಂಗಾಲಾಗಿದ್ದರು. ಮೀನುಗಳು ದಪ್ಪ ಆಗಿವೆ ಲಾಕ್‍ಡೌನ್ ಕ್ರಮೇಣ ಸಂಪೂರ್ಣ ಸಡಿಲಿಕೆಯಾಗ್ತಿದೆ. ವ್ಯಾಪಾರಕ್ಕೆ ಯಾವುದೇ ತೊಂದರೆ ಇಲ್ಲವೆಂದು ಮೀನುಗಳ ಹಿಡಿಯಲು ಕೆರೆಯಲ್ಲಿ ಬಲೆ ಹಾಕಿ ಬೆಳಗ್ಗೆ ಎದ್ದು ಹೋಗುವಷ್ಟರಲ್ಲಿ ಮೀನುಗಳು ಸತ್ತಿದ್ದು ಸಾಲ ಮಾಡಿ ಮೀನು ಮರಿಗಳನ್ನ ಸಾಕಿದ್ದ ಶಾಯಿನ್ ಜರ್ಜರಿತರಾಗಿದ್ದಾರೆ.

    ಸಾಂದರ್ಭಿಕ ಚಿತ್ರ

     

    ಕೆರೆಯ ಟೆಂಡರ್ ಸಿಗದ ಕಾರಣ ಶಾಯಿನ್ ಅವರ ಮೇಲಿನ ಸಿಟ್ಟಿಗೆ ಕೆರೆಗೆ ವಿಷ ಹಾಕಿರಬಹುದೆಂದು ಅನುಮಾನಿಸಲಾಗಿದೆ. ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಗ್ರಾಮಾಂತರ ಪೊಲೀಸರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ

  • ಲಾಕ್‍ಡೌನ್ ನಡುವೆಯೂ ರಸ್ತೆ ಬದಿಯಲ್ಲಿ ಮದ್ಯ ಮಾರಾಟ

    ಲಾಕ್‍ಡೌನ್ ನಡುವೆಯೂ ರಸ್ತೆ ಬದಿಯಲ್ಲಿ ಮದ್ಯ ಮಾರಾಟ

    – ವ್ಯಕ್ತಿ ಅರೆಸ್ಟ್, ಎಣ್ಣೆನೂ ಸೀಜ್

    ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಈ ಮಧ್ಯೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ರಸ್ತೆ ಬದಿ ಎಣ್ಣೆ ಮಾರಾಟ ಜೋರಾಗಿ ನಡೆಯುತ್ತಿದೆ.

    ಹೌದು. ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್‍ನ ಚಂದನ ವೈನ್ಸ್‍ನಲ್ಲಿ ಕೆಲಸ ಮಾಡ್ತಿದ್ದ ಕ್ಯಾಶಿಯರ್ ವೆಂಕಟೇಶ್ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟಿದ್ದಾನೆ. ಅಲ್ಲದೆ ಅದನ್ನ ರಸ್ತೆ ಬದಿ ನಿಂತು ಡಬಲ್‍ಗಿಂತ ಹೆಚ್ಚಿನ ರೇಟಿಗೆ ಮಾರುತ್ತಿದ್ದನು. ವಿಷಯ ತಿಳಿದ ಕೂಡಲೇ ಹಲವರು ಡೈಲಿ ನೈಂಟಿ ಹಾಕೋಣ ಸಾಕು ಅಂತ ಖರೀದಿ ಕೂಡ ಮಾಡಿದ್ದಾರೆ.

    ಈ ಬಗ್ಗೆ ಖಚಿತ ಮಾಹಿತಿ ತಿಳಿದ ಕರ್ಫ್ಯೂ ಮಾದರಿಯ ಲಾಕ್‍ಡೌನ್ ಉಲ್ಲಂಘಿಸಿ ಅಕ್ರಮ ಮದ್ಯ ಮಾರುತ್ತಿದ್ದ ವ್ಯಕ್ತಿ ಮೇಲೆ ಬಣಕಲ್ ಪಿಎಸ್‍ಐ ಶ್ರೀನಾಥ್ ರೆಡ್ಡಿ ನೇತೃತ್ವದಲ್ಲಿ ದಾಳಿ ಮಾಡಿ ಬಾರ್ ಕ್ಯಾಶಿಯರ್ ವೆಂಕಟೇಶ್‍ನನ್ನ ಬಂಧಿಸಿದ್ದಾರೆ.

    ಈ ಸಂದರ್ಭದಲ್ಲಿ ಅವರ ಬಳಿಯಿದ್ದ ಮೂರು ಚೀಲದಷ್ಟು ಮದ್ಯವನ್ನು ಕೂಡ ಜಪ್ತಿ ಮಾಡಲಾಗಿದ್ದು, ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಣ್ಣೆ ಸಿಕ್ಕವರು ಓ ಮೈ ಗಾಡ್, 15ರ ತನಕ ಹೇಗೋ ನೈಂಟಿ ಹಾಕೊಂಡ್ ತಳ್ಳಬಹುದು ಅಂತಿದ್ರೆ, ಸಿಗದವರು ಈ ಪೊಲೀಸ್ರಿಗೆ 10 ನಿಮಿಷ ಲೇಟಾಗಿ ಬರೋದಕ್ಕೆ ಏನಾಗಿತ್ತು ಅಂತ ಗೊಣಗುತ್ತಿದ್ದಾರೆ.

  • ನರ್ಸ್‌ಗಳಿಂದ ಹೆರಿಗೆ – ತೀವ್ರ ರಕ್ತಸ್ರಾವದಿಂದ ಗರ್ಭಿಣಿ ಸಾವು

    ನರ್ಸ್‌ಗಳಿಂದ ಹೆರಿಗೆ – ತೀವ್ರ ರಕ್ತಸ್ರಾವದಿಂದ ಗರ್ಭಿಣಿ ಸಾವು

    ಚಿಕ್ಕಮಗಳೂರು: ಹೆರಿಗೆ ನಂತರ ತೀವ್ರ ರಕ್ತಸ್ರಾವದಿಂದ ಗರ್ಭಿಣಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಜಿಲ್ಲೆಯ ಕೊಪ್ಪ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಮತ್ತು ನರ್ಸ್‍ಗಳ ನಿರ್ಲಕ್ಷ್ಯದಿಂದ ಚೊಚ್ಚಲ ಹೆರಿಗೆಯಾಗಿದ್ದ ತಾಯಿ ತೀವ್ರ ರಕ್ತಸ್ರಾವಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಇದೀಗ ಅಮ್ಮನಿಲ್ಲದೆ ಹಸುಗೂಸು ತಬ್ಬಲಿಯಾಗಿದೆ.

    ಸೋಮವಾರ ರಾತ್ರಿ ಕೊಪ್ಪ ತಾಲೂಕಿನ ನಾರ್ವೆ ಸಮೀಪದ ಹುಲುಗಾರು ಗ್ರಾಮದ ನಿವಾಸಿ 24 ವರ್ಷದ ಉಷಾ ಎಂಬವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಕುಟುಂಬಸ್ಥರು ಉಷಾರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ರಾತ್ರಿ ಪಾಳಯದಲ್ಲಿ ಕರ್ತವ್ಯ ನಿರ್ವವಹಿಸುತ್ತಿದ್ದ ಡಾ. ಬಾಲಕೃಷ್ಣ ಅವರ ಬೇಜವಾಬ್ದಾರಿಯಿಂದಲೇ ಗರ್ಭಿಣಿ ಮೃತಪಟ್ಟಿರುವುದು ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

    ವೈದ್ಯರಲ್ಲಿ ಎಷ್ಟೇ ವಿನಂತಿಸಿಕೊಂಡರು ಎಚ್ಚರ ವಹಿಸದೇ ನರ್ಸ್‍ಗಳ ಕೈಯಲ್ಲಿ ಹೆರಿಗೆ ಮಾಡಿಸಿದ್ದಾರೆ. ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವದಿಂದ ಉಷಾ ಸಾವನ್ನಪ್ಪಿದ್ದಾರೆ. ಮಹಿಳೆಗೆ ರಕ್ತ ಸ್ರಾವ ಹೆಚ್ಚಾಗಿದ್ದರಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ. ಮಹಿಳೆಯನ್ನ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ಉಷಾರ ಸಂಬಂಧಿಕರು ವೈದ್ಯರ ವಿರುದ್ಧ ದೂರು ನೀಡಿ, ಬಾಲಕೃಷ್ಣ ಅವರ ಅಮಾನತ್ತಿಗೆ ಒತ್ತಾಯಿಸಿದ್ದಾರೆ.

  • ಪ್ರಸ್ತುತ ರಾಜಕೀಯಕ್ಕೆ ಫುಲ್ ಸ್ಟಾಪ್ ಹಾಕಿದ್ದೇನೆ: ದೇವೇಗೌಡ

    ಪ್ರಸ್ತುತ ರಾಜಕೀಯಕ್ಕೆ ಫುಲ್ ಸ್ಟಾಪ್ ಹಾಕಿದ್ದೇನೆ: ದೇವೇಗೌಡ

    ಚಿಕ್ಕಮಗಳೂರು: ವಿರೋಧ ಪಕ್ಷ ಬಿಜೆಪಿ, ಕಾಂಗ್ರೆಸ್ ಸ್ನೇಹಿತರು ಬೇರೆ ಬೇರೆ ರೀತಿ ಮಾತನಾಡುತ್ತಾರೆ. ನಾನು ಅದಕ್ಕೆಲ್ಲ ಉತ್ತರ ನೀಡಲ್ಲ. ಸದ್ಯ ಪ್ರಸ್ತುತ ರಾಜಕೀಯಕ್ಕೆ ಫುಲ್ ಸ್ಟಾಪ್ ಹಾಕಿದ್ದೇನೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ವಿರೋಧ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷ ಬೇರೆ ಬೇರೆ ರೀತಿ ಮಾತನಾಡುತ್ತಾರೆ. ಬಹುಶಃ ಇದೆಲ್ಲಾ ಅಂತ್ಯವಾಗುವ ಸಾಧ್ಯತೆಗಳಿವೆ. ಇನ್ನೊಂದು ತಿಂಗಳಲ್ಲಿ ಗೊಂದಲಗಳೆಲ್ಲಾ ಬಗೆಹರಿಯುತ್ತದೆ. ಲೋಕಸಭಾ ಚುನಾವಣೆಯಲ್ಲಿ ಸೀಟ್ ಹೊಂದಾಣಿಕೆ ಮಾಡಿಕೊಳ್ಳುವ ಉದ್ದೇಶಕ್ಕಾದರೂ ಅಂತ್ಯವಾಗುತ್ತದೆ. ಮೈತ್ರಿ ಸರ್ಕಾರದಲ್ಲಿ ಯಾವುದೇ ಒಡಕು ಬರದ ಹಾಗೆ ನೋಡಿಕೊಳ್ಳುತ್ತೇವೆ ಎಂದರು.

    ನಾಳೆಯೇ ಮೈತ್ರಿ ಮುರಿದು ಬಿಳುತ್ತೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಆ ರೀತಿ ಅವಕಾಶ ಇಲ್ಲ. ಬಿಜೆಪಿ ರೆಸಾರ್ಟ್ ರಾಜಕೀಯದ ಕುರಿತು ಪ್ರತಿಕ್ರಿಯಿಸಿ ನಾನು ಈ ಬಗ್ಗೆ ಹೆಚ್ಚು ಚರ್ಚೆ ಮಾಡುವುದಿಲ್ಲ. ಬಿಬಿಎಂಪಿ ಮೈತ್ರಿ ವಿಚಾರದಲ್ಲಿ ನಾನು ಭಾಗಿಯಾಗಿಲ್ಲ ಎಂದು ಕೈ ಮುಗಿದು ಬೇಸರ ವ್ಯಕ್ತಪಡಿಸಿದರು.

    ಇದೇ ವೇಳೆ ಸಮ್ಮಿಶ್ರ ಸರ್ಕಾರದ ಬಗ್ಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಸಹ ಸರ್ಕಾರಕ್ಕೆ ಅಪಾಯ ಆಗುವುದಿಲ್ಲ ಎಂದಿದ್ದಾರೆ. ಸಿಎಂ ಕುಮಾರಸ್ವಾಮಿ ಸಹ ಅದೇ ರೀತಿ ಹೇಳಿದ್ದಾರೆ. ಹಂತ ಹಂತವಾಗಿ ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿಯುತ್ತದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಕ್ಕು ತಪ್ಪಿಸಲು ಹೋಗಿ ಪೊಲೀಸ್ ಬೊಲೆರೊ ಪಲ್ಟಿ!

    ಬೆಕ್ಕು ತಪ್ಪಿಸಲು ಹೋಗಿ ಪೊಲೀಸ್ ಬೊಲೆರೊ ಪಲ್ಟಿ!

    ಚಿಕ್ಕಮಗಳೂರು: ಕಾಡುಬೆಕ್ಕು ತಪ್ಪಿಸಲು ಹೋಗಿ ಪೊಲೀಸ್ ಬೊಲೆರೊ ವಾಹನ ಪಲ್ಟಿಯಾದ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ-ಹೊರನಾಡು ರಸ್ತೆಯಲ್ಲಿ ನಡೆದಿದೆ.

    ಜಿಲ್ಲೆಯ ಕಳಸ ಎಎಸ್‍ಐ ಹಾಗೂ ಮೂವರು ಪೇದೆಗಳು ಗುರುವಾರ ರಾತ್ರಿ ಆರೋಪಿಯೊಬ್ಬನನ್ನು ಬಂಧಿಸಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ.

    ಆಗಿದ್ದು ಏನು?
    ಕಳಸದಿಂದ ತೆರಳುವ ವೇಳೆ ಮಳೆ ಮಾರ್ಗ ಮಧ್ಯೆ ಪ್ರಯಾಣ ನಡೆಸುವ ವೇಳೆ ಕಾಡುಬೆಕ್ಕು ಅಡ್ಡ ಬಂದಿದ್ದು, ಪ್ರಾಣಿಯ ಜೀವ ರಕ್ಷಿಸಲು ಯತ್ನಿಸಿದ ವೇಳೆ ಡ್ರೈವರ್ ಬೊಲೆರೊ ವಾಹನವನ್ನು ಒಂದು ಬದಿಗೆ ಸರಿಸಿದ್ದಾರೆ. ಆದರೆ ಈ ವೇಳೆ ಮಳೆಯಿಂದ ನೀರು ತುಂಬಿಕೊಂಡು ನೆಲ ಹಸಿಯಾಗಿದ್ದ ಕಾರಣ ವಾಹನ ಪಲ್ಟಿಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ವೇಳೆ ವಾಹನದಲ್ಲಿದ್ದ ಯಾವುದೇ ಪೊಲೀಸರಿಗಗೆ ಅಪಾಯ ಸಂಭವಿಸಿಲ್ಲ. ಪೊಲೀಸ್ ವಾಹನ ಪಲ್ಟಿಯಾದ ಪರಿಣಾಮ ಡ್ಯಾಮೇಜ್ ಆಗಿದೆ.