Tag: chiefminister

  • ಸಿಎಂ, ಡಿಸಿಎಂ ಆಯ್ಕೆಯಲ್ಲಿ ಧರ್ಮಗುರುಗಳು ಮೂಗು ತೂರಿಸೋದು ಸರಿಯಲ್ಲ: ಜಯ ಮೃತ್ಯುಂಜಯ ಸ್ವಾಮೀಜಿ

    ಸಿಎಂ, ಡಿಸಿಎಂ ಆಯ್ಕೆಯಲ್ಲಿ ಧರ್ಮಗುರುಗಳು ಮೂಗು ತೂರಿಸೋದು ಸರಿಯಲ್ಲ: ಜಯ ಮೃತ್ಯುಂಜಯ ಸ್ವಾಮೀಜಿ

    ಹುಬ್ಬಳ್ಳಿ: ಸಿಎಂ, ಡಿಸಿಎಂ (CM, DCM) ಆಯ್ಕೆ ಮಾಡಿವ ಅಧಿಕಾರ ಇರೋದು ಶಾಸಕರಿಗೆ. ನಮ್ಮಂತಹ ಧರ್ಮಗುರುಗಳು ಈ ವಿಚಾರದಲ್ಲಿ ಮೂಗು ತೂರಿಸೋದು ಸರಿಯಲ್ಲ ಅಂತ ಪಂಚಮಸಾಲಿ ಕೂಡಲಸಂಗಮ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ (Jayamruthyunjaya Swamiji) ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿಂದು (Hubballi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕಾರಣಿಗಳು ಸಲಹೆ ಕೇಳಿದಾಗ ಧರ್ಮಗುರುಗಳು ಸಲಹೆ ಕೊಡಬೇಕು. ಆದ್ರೆ ಇಂತಹವರನ್ನೇ ಸಿಎಂ, ಡಿಸಿಎಂ ಮಾಡಿ ಅಂತ ಹೇಳೋದು‌ ಸರಿ ಅಲ್ಲ. ಯಾರನ್ನಾದರೂ ಸಿಎಂ ಮಾಡಿ, ಡಿಸಿಎಂ ‌ಮಾಡಲಿ. ನಮಗೆ 2A ಮೀಸಲಾತಿ (2A Reservation) ಕೊಡಲಿ‌ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾಜ್ಯದ ಬಾಕಿ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರಕ್ಕೆ ಡಿಕೆ ಸುರೇಶ್ ಮನವಿ

    ನಮ್ಮ ಹೋರಾಟ ದುರುಪಯೋಗ ಆಗಿದೆ:
    ವಿನಯ ಕುಲಕರ್ಣಿ, ಹೆಬ್ಬಾಳಕರ್ ಅವರು ಸಿಎಂಗೆ ಬಹಳ ಸಲ ಹೇಳಿದ್ದಾರೆ. ಆದರೂ ಸಿದ್ದರಾಮಯ್ಯ ಸಭೆ ಕರೆದಿಲ್ಲ. ಕಲಬುರಗಿಯಲ್ಲಿ ಸಮಾವೇಶ ಮಾಡಿದ್ದೆವು, ಅದೂ ಉಪಯೋಗಕ್ಕೆ ಬರಲಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಯತ್ನಾಳ್‌ ಧ್ವನಿ ಎತ್ತಿದ್ದರು, ನಂತರ ಯಡಿಯೂರಪ್ಪ ಅವರು ಸಭೆ ‌ಕರೆದಿದ್ದರು. ಬೊಮ್ಮಾಯಿ ಸಹ ಸಿಎಂ ಆಗಿದ್ದಾಗ ಸಭೆ ಕರೆದಿದ್ದರು. ಆದ್ರೆ ಸಿದ್ದರಾಮಯ್ಯ ಅವರು ಇನ್ನೂ ಮೀಟಿಂಗ್ ಕರೆದಿಲ್ಲ. ನಮ್ಮ ಸಮುದಾಯದ ಶಾಸಕರ ಭಾವನೆಗಳನ್ನು ಸರ್ಕಾರ ಅರ್ಥ ಮಾಡಕೊಬೇಕು. ಸಮಾಜವನ್ನು 100 ವರ್ಷದಿಂದ ಕೆಲವರು ದುರುಪಯೋಗ ಮಾಡಿಕೊಂಡಿದ್ದಾರೆ. ನಮ್ಮ‌ ಹೋರಾಟವನ್ನು ಕೆಲವರು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಮುಂದೆ ತಡೆದಿದ್ದಕ್ಕೆ ಕಾಲೇಜ್ ಸೆಕ್ಯೂರಿಟಿ ಹತ್ಯೆ – ಪೊಲೀಸರ ಮುಂದೆ ಬಾಯ್ಬಿಟ್ಟ ವಿದ್ಯಾರ್ಥಿ

  • ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಸಿಎಂ, ಏಕನಾಥ್ ಶಿಂಧೆ ಡಿಸಿಎಂ ಆಗ್ತಾರೆ: ಮೂಲಗಳು

    ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಸಿಎಂ, ಏಕನಾಥ್ ಶಿಂಧೆ ಡಿಸಿಎಂ ಆಗ್ತಾರೆ: ಮೂಲಗಳು

    ಮುಂಬೈ: ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರದ ಮುಂದಿನ ಸಿಎಂ ಆಗಲಿದ್ದಾರೆ. ಮೈತ್ರಿಕೂಟ ಸರ್ಕಾರ ಉರುಳಲು ಕಾರಣರಾದ ಏಕನಾಥ್ ಶಿಂಧೆ ಉಪ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ವಿಶ್ವಾಸಮತಯಾಚನೆಗೆ ಸಂಬಂಧಿಸಿದಂತೆ ರಾಜ್ಯಪಾಲರ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದ ಕೆಲವೇ ಗಂಟೆಗಳಲ್ಲಿ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರ ಬೆನ್ನಲ್ಲೇ ಫಡ್ನವಿಸ್ ಮಹಾರಾಷ್ಟ್ರದ ಮುಂದಿನ ಸಿಎಂ ಎನ್ನುವ ಮಾತು ಕೇಳಿಬರುತ್ತಿದೆ.

    ಠಾಕ್ರೆ ರಾಜೀನಾಮೆ ಬೆನ್ನಲ್ಲೇ ರಾಜ್ಯಪಾಲರ ಭೇಟಿಗೆ ದೇವೇಂದ್ರ ಫಡ್ನವಿಸ್ ಸಮಯ ಕೇಳಿದ್ದಾರೆ. ಇಂದು ಸಂಜೆ 4:30 ಕ್ಕೆ ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ್ದಾರೆ. ಫಡ್ನವಿಸ್ ಅವರು ಏಕನಾಥ್ ಶಿಂಧೆ ಜೊತೆಗೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ. ಇದನ್ನೂ ಓದಿ:‌ ಜಿಎಸ್‌ಟಿ ಪರಿಹಾರದ ಅವಧಿ ವಿಸ್ತರಣೆ: ಆಗಸ್ಟ್ ತಿಂಗಳಲ್ಲಿ ಅಂತಿಮ ನಿರ್ಣಯ – ಬೊಮ್ಮಾಯಿ

    ರೆಬೆಲ್ ಶಾಸಕರ ಸಹಿ ಪತ್ರದೊಂದಿಗೆ ಭೇಟಿಯಾಗಲಿದ್ದಾರೆ. ಈ ವೇಳೆ ಉಭಯ ನಾಯಕರು ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಇದನ್ನೂ ಓದಿ: ಸಿದ್ದರಾಮೋತ್ಸವವಲ್ಲ, ಬಿದ್ದಿರುವ ಸಿದ್ದರಾಮಯ್ಯರನ್ನು ಮೇಲಕ್ಕೆತ್ತುವ ಉತ್ಸವ : ಬಿಜೆಪಿ ವ್ಯಂಗ್ಯ

    Live Tv

  • ಇಲ್ಲಿ ಮಸೀದಿ, ಮಂದಿರಗಳೆಲ್ಲವೂ ನಮ್ಮ ದೇಹದಂತೆ ಒಟ್ಟಿಗೆ ಇರುತ್ತವೆ: ಮಮತಾ

    ಇಲ್ಲಿ ಮಸೀದಿ, ಮಂದಿರಗಳೆಲ್ಲವೂ ನಮ್ಮ ದೇಹದಂತೆ ಒಟ್ಟಿಗೆ ಇರುತ್ತವೆ: ಮಮತಾ

    ಕೋಲ್ಕತ್ತಾ: ನಮ್ಮ ಸರ್ಕಾರ ಜಾತಿ ಅಥವಾ ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುವುದಿಲ್ಲ. ಇಲ್ಲಿ ಮಸೀದಿ, ಮಂದಿರ, ಗುರುದ್ವಾರಗಳೆಲ್ಲವೂ ನಮ್ಮ ದೇಹಗಳಂತೆ ಒಟ್ಟಿಗೆ ಇರುತ್ತವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

    WEST BENGAL

    ಕೋಲ್ಕತ್ತಾದ ಬೆಂಗಾಲ್ ಜಾಗತಿಕ ವ್ಯಾವಹಾರಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಯಾವುದೇ ಭಾಗದಿಂದ ಬಂದವರಾಗಿದ್ದರೂ, ಬಂಗಾಳದಲ್ಲಿ ನಮ್ಮ ಕುಟುಂಬದ ಭಾಗವಾಗಿದ್ದಾರೆ. ಇಲ್ಲಿ ಎಲ್ಲರೂ ಆರಾಮದಾಯಕವಾಗಿರಬೇಕು. ಇಲ್ಲಿ ನೀವು ಗುಜರಾತ್ ಅಥವಾ ಮಹಾರಾಷ್ರದವರು ಎಂಬುದನ್ನು ಮರೆತುಬಿಡಿ, ನೀವೂ ನಮ್ಮ ಕುಟುಂಬದ ಸದಸ್ಯರಿದ್ದಂತೆ. ಇಲ್ಲಿನ ಮಸೀದಿ, ಮಂದಿರ, ಗುರುದ್ವಾರಗಳೆಲ್ಲವೂ ನಮ್ಮ ದೇಹಗಳಂತೆ ಒಟ್ಟಿಗೇ ಇರುತ್ತವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಎಲ್ಲಿಯೇ ಕೋಮು ಗಲಭೆ ನಡೆದರೂ ಅದಕ್ಕೆ ಕಾಂಗ್ರೆಸ್ ನೇರ ಹೊಣೆ: ಅಶೋಕ್

    ಇದೇ ವೇಳೆ ಏಜೆನ್ಸಿಗಳಿಂದ ಕೈಗಾರಿಕೋದ್ಯಮಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಖರ್ ಅವರಿಗೆ ಒತ್ತಾಯಿಸಿದರು.

  • ಈ ಬಾರಿ ಟಿಪ್ಪು ಜಯಂತಿಯನ್ನು ಅದ್ಧೂರಿಯಿಂದ ಆಚರಿಸ್ತೀವಿ- ಜಮೀರ್ ಅಹಮದ್

    ಈ ಬಾರಿ ಟಿಪ್ಪು ಜಯಂತಿಯನ್ನು ಅದ್ಧೂರಿಯಿಂದ ಆಚರಿಸ್ತೀವಿ- ಜಮೀರ್ ಅಹಮದ್

    – ರೋಷನ್ ಬೇಗ್ ಉತ್ತರಿಸಲಿ
    – ಬಿಜೆಪಿಯಿಂದ ದ್ವಿಮುಖ ನೀತಿ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸರ್ಕಾರ ಇಂದು ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ಸಿಎಂ ಅವರ ಈ ನಿರ್ಧಾರಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಜಮೀರ್ ಅಹಮದ್, ಕಳೆದ ಬಾರಿಗಿಂತ ಈ ಬಾರಿ ಟಿಪ್ಪು ಜಯಂತಿಯನ್ನು ಬಹಳ ಅದ್ಧೂರಿಯಿಂದ ಆಚರಣೆ ಮಾಡುತ್ತೇವೆ. ಜಯಂತಿಯನ್ನು ಆವತ್ತಿನಿಂದಲೇ ಆಚರಿಸಿಕೊಂಡು ಬರುತ್ತಿದ್ದೇವೆ. ಹೀಗಾಗಿ ಈ ಬಾರಿಯೂ ಜಯಂತಿಯನ್ನು ಬಹಳ ಸಂಭ್ರಮದಿಂದ ಆಚರಿಸುತ್ತೇವೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

    ನನಗೆ ಮಾಧ್ಯಮಗಳ ಮುಖಾಂತರ ವಿಚಾರ ತಿಳಿಯಿತು. ಟಿಪ್ಪು ಜಯಂತಿ ಆಚರಣೆ ಮಾಡಬೇಕು ಎಂದು 2016ರಲ್ಲಿ ಸಿದ್ದರಾಮಯ್ಯ ಅವರು ತೀರ್ಮಾನ ಮಾಡಿದ್ದರು. ಬರೀ ಕರ್ನಾಟಕ ಅಲ್ಲ ಇಡೀ ಹಿಂದೂಸ್ತಾನದಲ್ಲಿ ಟಿಪ್ಪು ಅಭಿಮಾನಿಗಳು ಇದ್ದಾರೆ. ಯಾರು ಜಾತ್ಯಾತೀತ ಎಂದು ಇದ್ದಾರೋ ಅವರೆಲ್ಲರೂ ಟಿಪ್ಪು ಜಯಂತಿ ಆಚರಿಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಇನ್ನು ಮುಂದೆಯೂ ನಾವು ಟಿಪ್ಪು ಜಯಂತಿ ಆಚರಿಸುತ್ತೇವೆ ಎಂದು ಚಾಲೆಂಜ್ ಮಾಡಿದ್ದಾರೆ.

    ಜಯಂತಿಯನ್ನು ಇಷ್ಟೊಂದು ತರಾತುರಿಯಲ್ಲಿ ರದ್ದು ಮಾಡುತ್ತಾರೆ ಎಂದು ಗೊತ್ತಿರಲಿಲ್ಲ. ಟಿಪ್ಪು ಜಯಂತಿ ಆಚರಣೆಯನ್ನು ಒಂದು ಸರ್ಕಾರ ನಿರ್ಧಾರ, ತೀರ್ಮಾನ ಮಾಡಿ ಅದಕ್ಕಂತಲೇ ಒಂದು ಕ್ಯಾಬಿನೆಟ್ ಸಭೆ ಕರೆದು ಅಲ್ಲಿ ತೀರ್ಮಾನ ಮಾಡಬೇಕಾಗುತ್ತದೆ. ಮುಖ್ಯಮಂತ್ರಿ ಒಬ್ಬರೇ ಹೇಗೆ ತೀರ್ಮಾನ ತೆಗೆದುಕೊಂಡರು ಎಂದು ಗೊತ್ತಿಲ್ಲ ಎಂದರು.

    ರೋಷನ್ ಬೇಗ್ ವಿರುದ್ಧ ಕಿಡಿ:
    ಆಚರಣೆ ಮಾಡಿರುವ ಕುರಿತು ರೋಷನ್ ಬೇಗ್ ಅವರನ್ನು ಪ್ರಶ್ನಿಸಬೇಕು. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಹೊರಟ್ಟಿದ್ದಾರಲ್ವಾ ಅವರು ಉತ್ತರ ಕೊಡಬೇಕು. ಎಲ್ಲಾ ಒಂದೇ ಕಡೆ ಇರಬೇಡಿ. ಬಿಜೆಪಿಗೆ ಬನ್ನಿ ಎಂದು ಅವರು ಒಂದು ಕಡೆ ಭಾಷಣದಲ್ಲಿ ಹೇಳಿದ್ದಾರೆ. ಇದಕ್ಕೆ ಏನಂತಾರೆ ಅಂತ ರೋಷನ್ ಬೇಗ್ ಅವರನ್ನು ಕೇಳಬೇಕು ಎಂದು ಬೇಗ್ ವಿರುದ್ಧ ಕೆಂಡಾಮಂಡಲರಾದರು.

    ಕಾಂಗ್ರೆಸ್ ಟ್ವೀಟ್:
    ದ್ವೇಷ ರಾಜಕಾರಣ ಮಾಡುವುದಿಲ್ಲವೆಂದು ಹೇಳಿ 24 ಗಂಟೆಯೊಳಗೆ ದ್ವೇಷ ರಾಜಕಾರಣ ಮಾಡಿದ ವಚನ ಭ್ರಷ್ಟ ಬಿಎಸ್‍ವೈ ಕೇವಲ ಕೋಮುವಾದ ದೃಷ್ಟಿಕೋನದಿಂದಲೇ ಇತಿಹಾಸವನ್ನು ನೋಡುವ ಬಿಜೆಪಿ, ಆರ್ ಎಸ್‍ಎಸ್ ಇತಿಹಾಸವನ್ನು, ಟಿಪ್ಪುವಿನ ಕೊಡುಗೆಯನ್ನು ಓದಿ ತಿಳಿದುಕೊಳ್ಳಬೇಕಿದೆ.

    ಟಿಪ್ಪು ಜಯಂತಿ ರದ್ದತಿಯಿಂದ ಬಿಜೆಪಿಯ ದ್ವಿಮುಖ ನೀತಿ ಬಹಿರಂಗವಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಬಿಎಸ್‍ವೈ ಹಾಗೂ ಕರ್ನಾಟಕ ಬಿಜೆಪಿಗೆ ಟ್ಯಾಗ್ ಮಾಡಿದೆ. ಈ ಟ್ವೀಟ್ ನಲ್ಲಿ ಈ ಹಿಂದೆ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಪಿಸಿ ಮೋಹನ್, ಯೋಗೇಶ್ವರ್ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಫೋಟೋವನ್ನು ಅಪ್ಲೋಡ್ ಮಾಡಿದೆ.