Tag: Chief Minister’s Relief Fund

  • ಧಾರ್ಮಿಕ ಕಾರ್ಯಕ್ರಮದ ವೇಳೆ ಧರೆಗುರುಳಿದ ಮರ 7 ಸಾವು, ಐವರಿಗೆ ಗಾಯ

    ಧಾರ್ಮಿಕ ಕಾರ್ಯಕ್ರಮದ ವೇಳೆ ಧರೆಗುರುಳಿದ ಮರ 7 ಸಾವು, ಐವರಿಗೆ ಗಾಯ

    ಮುಂಬೈ: ದೇವಾಲಯದ ಧಾರ್ಮಿಕ ಕಾರ್ಯಕ್ರಮದ ವೇಳೆ ಶೆಡ್ ಒಂದರ ಮೇಲೆ ಬೃಹತ್ ಮರವೊಂದು ಬಿದ್ದು ಏಳು ಜನರು ಸಾವನ್ನಪ್ಪಿ, ಐವರು ಗಾಯಗೊಂಡ ಘಟನೆ ಭಾನುವಾರ ಅಕೋಲಾದಲ್ಲಿ (Akola) ನಡೆದಿದೆ.

    ದೇವಸ್ಥಾನ ಒಂದರ ಮುಂಭಾಗದಲ್ಲಿ ರಾತ್ರಿ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಭಾರೀ ಮಳೆ ಹಾಗೂ ಗಾಳಿಯಿಂದಾಗಿ ಹಳೆಯ ಬೇವಿನ ಮರ ತಗಡಿನ ಶೆಡ್ ಮೇಲೆ ಬಿದ್ದಿದೆ. ಅದರ ಅಡಿಯಲ್ಲಿ ಹಲವಾರು ಭಕ್ತರು ಆಶ್ರಯ ಪಡೆಯುತ್ತಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ತಕ್ಷಣ ರಕ್ಷಣಾ ಕಾರ್ಯಕ್ಕೆ ತುರ್ತು ಸೇವೆಗಳನ್ನು ಒದಗಿಸಿದ್ದಾರೆ. ಮರವನ್ನು ಜೆಸಿಬಿ ಮೂಲಕ ಎತ್ತಿಸಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ಅಮುಲ್‍ಗೆ ವಿರೋಧ – ನಂದಿನಿ ಉತ್ಪನ್ನ ಖರೀದಿಸಿ ಹಂಚಿದ ಡಿಕೆಶಿ

    ಶೆಡ್‍ನ ಅವಶೇಷಗಳ ಅಡಿ 35 ರಿಂದ 40 ಜನರು ಸಿಲುಕಿದ್ದರು. ಅದರಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಐದು ಜನ ಗಾಯಗೊಂಡಿದ್ದು ಅಕೋಲಾ ಮೆಡಿಕಲ್ ಕಾಲೇಜಿಗೆ (Akola Medical College) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಸಾವಿಗೆ ಸಂತಾಪ ಸೂಚಿಸಿದ್ದು, ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಮೃತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಿದೆ ಎಂದಿದ್ದಾರೆ.

    ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ಸಹಕರಿಸಿದ್ದಾರೆ. ಕೆಲ ಗಾಯಾಳುಗಳನ್ನು ಜಿಲ್ಲಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣ ಪುಟ್ಟ ಗಾಯಾಳುಗಳಿಗೆ ಬಾಳಾಪುರದಲ್ಲಿ (Balapur) ಚಿಕಿತ್ಸೆ ನೀಡಲಾಗುತ್ತಿದೆ. ನಾವು ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ ಎಂದು ಅವರು ಹೇಳಿದ್ದಾರೆ.

    ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ (Chief Minister’s Relief Fund) ಆರ್ಥಿಕ ನೆರವು ನೀಡುವುದಾಗಿ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಘೋಷಿಸಿದ್ದಾರೆ. ಇದನ್ನೂ ಓದಿ: ರಾಹುಲ್‌ ವಿರುದ್ಧ ಮಾನಹಾನಿ ಕೇಸ್‌ ದಾಖಲಿಸುತ್ತೇನೆ: ಅಸ್ಸಾಂ ಸಿಎಂ

  • ಉಕ್ರೇನ್‍ನಿಂದ ಸುರಕ್ಷಿತವಾಗಿ ಮಗಳು ಭಾರತಕ್ಕೆ – ಪ್ರಯಾಣದ ಖರ್ಚನ್ನು ಪಿಎಂ ಕೇರ್ಸ್ ಫಂಡ್‍ಗೆ ನೀಡಿದ ತಂದೆ

    ಉಕ್ರೇನ್‍ನಿಂದ ಸುರಕ್ಷಿತವಾಗಿ ಮಗಳು ಭಾರತಕ್ಕೆ – ಪ್ರಯಾಣದ ಖರ್ಚನ್ನು ಪಿಎಂ ಕೇರ್ಸ್ ಫಂಡ್‍ಗೆ ನೀಡಿದ ತಂದೆ

    ಶಿಮ್ಲಾ: ರಷ್ಯಾ, ಉಕ್ರೇನ್ ನಡುವಿನ ಯುದ್ಧದಲ್ಲಿ ಸಿಲುಕಿದ್ದ ಮಗಳನ್ನು ಅಪಾಯದಿಂದ ಪಾರು ಮಾಡಿ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದ ಕಾರಣಕ್ಕೆ ತಂದೆಯೊಬ್ಬರು ಪಿಎಂ ಕೇರ್ಸ್ ಫಂಡ್‍ಗೆ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.

    ಯುದ್ಧದ ನಡುವೆ ಬಂಕರ್‌ನಲ್ಲಿ ಉಳಿದುಕೊಂಡಿದ್ದ 32 ಜನ ಹಿಮಾಚಲಪ್ರದೇಶದ ವಿದ್ಯಾರ್ಥಿಗಳ ತಂಡ ಭಾನುವಾರ ಸುರಕ್ಷಿತವಾಗಿ ದೆಹಲಿ ಬಂದು ತಲುಪಿತ್ತು. ಈ ತಂಡದಲ್ಲಿ ಅಂಕಿತಾ ಠಾಕೂರ್ ಕೂಡ ಒಬ್ಬರಾಗಿದ್ದರು. ಅಂಕಿತಾ ಠಾಕೂರ್ ಹಿಮಾಚಲಪ್ರದೇಶದ ಹಮೀರ್‍ಪುರ ಜಿಲ್ಲೆಯ ಚುನ್ಹಾಲ್ ಗ್ರಾಮದವರು. ಉನ್ನತ ವ್ಯಾಸಂಗಕ್ಕಾಗಿ ಉಕ್ರೇನ್‍ಗೆ ತೆರಳಿದ್ದರು. ಈ ಮಧ್ಯೆ ಉಕ್ರೇನ್‍ನಲ್ಲಿ ಯುದ್ಧ ಆರಂಭವಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನೂ ಓದಿ: ಭಾರತದ ಮೇಲೆ ಯುದ್ಧದ ಎಫೆಕ್ಟ್: ಖಾದ್ಯತೈಲ, ಗೋಧಿ, ಸಿಮೆಂಟ್, ಕಬ್ಬಿಣ ದುಬಾರಿ

    ಅಂಕಿತಾ ಠಾಕೂರ್ ತಂದೆ ಜಿಪಿ ಸಿಂಗ್ ಆರ್ಯುವೇದ ವೈದ್ಯರು. ತಾಯಿ ಅನಿತಾ ದೇವಿ ಗೃಹಿಣಿ. ಮಗಳು ಅಂಕಿತಾ ಠಾಕೂರ್‌ರನ್ನು ಉನ್ನತ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್‍ಗೆ ಕಳುಹಿಸಿದ್ದರು. ಈ ನಡುವೆ ಏಕಾಏಕಿ ರಷ್ಯಾ, ಉಕ್ರೇನ್ ಮೇಲೆ ಯುದ್ಧ ಘೋಷಿಸಿತ್ತು. ಈ ವೇಳೆ ಮಗಳ ಸ್ಥಿತಿಯನ್ನು ಕಂಡು ಮರುಗಿದ್ದ ಪೋಷಕರು ಮಗಳನ್ನು ಹೇಗಾದರೂ ಮಾಡಿ ಕರೆ ತನ್ನಿ ಎಂದು ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಖಾರ್ಕಿವ್‌ನಲ್ಲಿ ಸಿಲುಕಿದ್ದ ಎಲ್ಲಾ ಭಾರತೀಯರ ರಕ್ಷಣೆ – ಎಂಇಎ

    ಕಡೆಗೂ ಯುದ್ಧದ ನಡುವೆ ಕೆಂದ್ರ ಸರ್ಕಾರದ ಯಶಸ್ವಿ ಕಾರ್ಯಚರಣೆ ಆಪರೇಷನ್ ಗಂಗಾದಡಿ ಅಂಕಿತಾ ಠಾಕೂರ್‌ರನ್ನು ಯಶಸ್ವಿಯಾಗಿ ತಾಯ್ನಾಡಿಗೆ ಮರಳಿದರು. ಇದರಿಂದ ಆಕೆಯ ಪೋಷಕರು ತುಂಬಾ ಸಂತೋಷಗೊಂಡಿದ್ದಾರೆ. ಮಗಳ ಮುಖ ಮತ್ತೆ ನೋಡಳು ಸಿಗುತ್ತೋ ಇಲ್ಲವೋ ಎಂಬ ಆತಂಕದಲ್ಲಿದ್ದ ಜಿಪಿ ಸಿಂಗ್ ಮತ್ತು ಅನಿತಾ ದೇವಿಗೆ ಮಗಳು ಮತ್ತೆ ಮನೆಗೆ ಬಂದಾಗ ಸಂತಸವಾಗಿದೆ. ಈ ಸಂತಸದ ನಡುವೆ ಅಂಕಿತಾ ಠಾಕೂರ್‍ರನ್ನು ಸುರಕ್ಷಿತವಾಗಿ ಕರೆತಂದ ಕಾರಣಕ್ಕಾಗಿ ಅದರ ಖರ್ಚು ಎಂಬಂತೆ, ಜಿಪಿ ಸಿಂಗ್ ಕೇಂದ್ರ ಸರ್ಕಾರದ ಪಿಎಂ ಕೇರ್ಸ್ ಫಂಡ್‍ಗೆ 21 ಸಾವಿರ ರೂ. ಮತ್ತು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಪರಿಹಾರ ನಿಧಿಗೆ 11 ಸಾವಿರ ರೂ. ದೇಣಿಗೆಯಾಗಿ ನೀಡಿದ್ದಾರೆ.

    ಉಕ್ರೇನ್‍ನಿಂದ ದೆಹಲಿವರೆಗೆ ಕೇಂದ್ರ ಸರ್ಕಾರ ಅಂಕಿತಾ ಠಾಕೂರ್‌ರನ್ನು ಕರೆತಂದರೆ, ದೆಹಲಿಯಿಂದ ಹಿಮಾಚಲಪ್ರದೇಶಕ್ಕೆ ರಾಜ್ಯ ಸರ್ಕಾರ ಕರೆ ತಂದಿತ್ತು. ಈ ಖರ್ಚನ್ನು ಇದೀಗ ಜಿಪಿ ಸಿಂಗ್ ನೀಡಿ ಔದಾರ್ಯ ಮೆರೆದಿದ್ದಾರೆ. ಇದನ್ನೂ ಓದಿ: ಜೀವದ ಮೇಲೆ ಅಸೆ ಬಿಟ್ಟು, ಒಂದು ವಾರ ನಡೆದುಕೊಂಡು ಬಂದು ಉಕ್ರೇನ್ ದಾಟಿದೆ: ಸೀನ್ಯ

    ಹಿಮಾಚಲ ಪ್ರದೇಶದ 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಶಿಕ್ಷಣ ಪಡೆಯುತ್ತಿದ್ದರು ಎಂಬ ಮಾಹಿತಿ ಸರ್ಕಾರ ನೀಡಿದೆ. ಅಲ್ಲದೆ ಬಜೆಟ್ ಅಧಿವೇಶನದಲ್ಲಿ ಸಿಎಂ ಜೈ ರಾಮ್ ಠಾಕೂರ್ ಉಕ್ರೇನ್‍ನಲ್ಲಿ ಸಿಲುಕಿರುವ ಹಿಮಾಚಲ ಪ್ರದೇಶದ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಚರಣೆ ಬಗ್ಗೆ ವಿದೇಶಾಂಗ ಸಚಿವಾಲಯದ ಜೊತೆ ಮಾತನಾಡಿದ್ದರು. ಈಗಾಗಲೇ ಕೆಲ ವಿದ್ಯಾರ್ಥಿಗಳು ಸುರಕ್ಷಿತವಾಗಿ ರಾಜ್ಯಕ್ಕೆ ಆಗಮಿಸಿದ್ದು, ಇನ್ನಷ್ಟು ವಿದ್ಯಾರ್ಥಿಗಳು ಬರಬೇಕಾಗಿದೆ.

    ಉಕ್ರೇನ್‍ಗೆ ವಿದ್ಯಾರ್ಥಿಗಳು ಸ್ವತಂ ಖರ್ಚಿನಲ್ಲಿ ಹೋಗಿದ್ದಾರೆ. ಹೀಗಾಗಿ ಅವರನ್ನು ಭಾರತ ಸರ್ಕಾರ ಮಾನವೀಯತೆ ದೃಷ್ಟಿಯಿಂದ ಉಚಿತವಾಗಿ ಕರೆ ತಂದರೂ ವಿಮಾನ ಪ್ರಯಾಣದ ವೆಚ್ಚವನ್ನು ಅವರು ನೀಡಬೇಕು. ಜನರ ತೆರಿಗೆ ದುಡ್ಡಿನಿಂದ ಅವರು ವಿದೇಶದಿಂದ ಬರುವುದು ಸರಿಯಲ್ಲ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡಯುತ್ತಿದೆ. ಈ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮಗಳ ವಿಮಾನ ಪ್ರಯಾಣದ ಖರ್ಚನ್ನು ಪಿಎಂ ಕೇರ್ಸ್ ಫಂಡ್‌ಗೆ ಜಿಪಿ ಸಿಂಗ್ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

  • ಆಂಧ್ರ ಪ್ರದೇಶ ಪ್ರವಾಹ – 1 ಕೋಟಿ ರೂ. ದೇಣಿಗೆ ಕೊಟ್ಟ ಪ್ರಭಾಸ್

    ಆಂಧ್ರ ಪ್ರದೇಶ ಪ್ರವಾಹ – 1 ಕೋಟಿ ರೂ. ದೇಣಿಗೆ ಕೊಟ್ಟ ಪ್ರಭಾಸ್

    ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಸುರಿದ ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರ ನೆರವಿಗೆ ಟಾಲಿವುಡ್ ನಟ ಪ್ರಭಾಸ್ ಸಹಾಯ ಹಸ್ತಚಾಚಿದ್ದಾರೆ.

    ಕಳೆದ ಎರಡು ವಾರ ಸುರಿದ ಭಾರೀ ಮಳೆಯಿಂದಾಗಿ ರಾಜ್ಯದ ಹಲವು ಭಾಗಗಳು ತೀವ್ರ ಹಾನಿಗೊಳಗಾಗಿವೆ. ಅದರಲ್ಲಿಯೂ ಎರಡನೇ ಬಾರಿ ಸುರಿದ ಭಾರೀ ಮಳೆಗೆ ರಾಜ್ಯದ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಸದ್ಯ ಜನರಿಗೆ ಸಹಾಯ ಮಾಡಲು ಪ್ರಭಾಸ್ ಅವರು ಮುಖ್ಯಮಂತ್ರಿ ಪರಿಹಾರ ನಿಧಿಗೆ(ಸಿಎಂಆರ್‍ಎಫ್) 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಇದನ್ನೂ ಓದಿ: ಆಂಧ್ರಪ್ರದೇಶ ಪ್ರವಾಹ ಸಂತ್ರಸ್ತರಿಗೆ ಮಿಡಿದ ಟಾಲಿವುಡ್ ಸ್ಟಾರ್ಸ್

    ಇತ್ತೀಚೆಗಷ್ಟೇ ಜನರ ಕಷ್ಟಕ್ಕೆ ಮಿಡಿದ ಟಾಲಿವುಡ್ ಮೆಗಾ ಸ್ಟಾರ್ ನಟ ಚಿರಂಜೀವಿ, ಜೂನಿಯರ್ ಎನ್‍ಟಿಆರ್ ಮತ್ತು ಸೂಪರ್ ಸ್ಟಾರ್ ಮಹೇಶ್ ಬಾಬು, ರಾಮ್ ಚರಣ್‍ತೇಜ ಅವರು ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದವರಿಗೆ ಸಹಾಯ ಮಾಡಲು ಆಂಧ್ರಪ್ರದೇಶ ಸಿಎಂ ಪರಿಹಾರ ನಿಧಿಗೆ ತಲಾ 25 ಲಕ್ಷ ರೂ. ದೇಣಿಗೆ ನೀಡಿದ್ದರು. ಇದೀಗ ಪ್ರಭಾಸ್ ನೆರವಿಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಆಂಧ್ರಪ್ರದೇಶ ಪ್ರವಾಹ – ತಲಾ 25 ಲಕ್ಷ ದೇಣಿಗೆ ನೀಡಿದ ಚಿರಂಜೀವಿ, ರಾಮ್‍ಚರಣ್

    ಪ್ರಸ್ತುತ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಬಿಗ್ ಬಜೆಟ್ ಪ್ಯಾನ್ ಇಂಡಿಯನ್ ಸಿನಿಮಾ ರಾಧೆ ಶ್ಯಾಮ್‍ದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್ ಅವರು ಆ್ಯಕ್ಷನ್ ಕಟ್ ಹೇಳಿದ್ದು, ಪ್ರಭಾಸ್‍ಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಇನ್ನೂ ಈ ಸಿನಿಮಾ ರಾಧೆ ಶ್ಯಾಮ್ 2022ರ ಜನವರಿ 14ರಂದು ತೆರೆ ಕಾಣಲಿದೆ.