Tag: Chief Minister Arvind Kejriwal

  • ಕೇಜ್ರಿವಾಲ್ ವಿರುದ್ಧ ಬಿಜೆಪಿಯಿಂದ ಮಾನನಷ್ಟ ಮೊಕದ್ದಮೆ ದಾಖಲು

    ಕೇಜ್ರಿವಾಲ್ ವಿರುದ್ಧ ಬಿಜೆಪಿಯಿಂದ ಮಾನನಷ್ಟ ಮೊಕದ್ದಮೆ ದಾಖಲು

    ನವದೆಹಲಿ: ದೆಹಲಿಯಲ್ಲಿ 30 ಲಕ್ಷ ಮತದಾರರ ಹೆಸರನ್ನು ಕೈಬಿಡಲಾಗಿದೆ ಅಂತ ಆರೋಪಿಸಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಮಾನನಷ್ಟ ಮೊಕದ್ದಮೆ ದಾಖಲಿಸಿದೆ.

    ಅರವಿಂದ್ ಕೇಜ್ರಿವಾಲ್ ಅವರ ಜೊತೆಗೆ ಆಮ್ ಆದ್ಮಿ ಪಾರ್ಟಿ (ಎಎಪಿ) ರಾಜ್ಯ ಸಭಾ ಸದಸ್ಯ ಸುಶೀಲ್ ಕುಮಾರ್ ಗುಪ್ತಾ, ಶಾಸಕ ಮನೋಜ್ ಕುಮಾರ್, ವಕ್ತಾರ ಅತಿಶ್ ಮಲೆನಾ ಅವರ ವಿರುದ್ಧವೂ ದೆಹಲಿ ನ್ಯಾಯಾಲಯದಲ್ಲಿ ಬಿಜೆಪಿಯ ರಾಜೀವ್ ಬಾಬ್ಬರ್ ಅವರು ದೂರು ನೀಡಿದ್ದಾರೆ.

    ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಡುವ ಕೆಲಸವನ್ನು ಯಾವುದೇ ಪಕ್ಷ ಮಾಡುವುದಿಲ್ಲ. ಇದು ಚುನಾವಣಾ ಆಯೋಗದಿಂದ ನಡೆಯುವ ಪ್ರಕ್ರಿಯೆ. ಈ ವಿಚಾರ ತಿಳಿದಿದ್ದರೂ ಬಿಜೆಪಿ ವಿರುದ್ಧ ದೂರುವುದು ಸರಿಯಲ್ಲ ಎಂದು ರಾಜೀವ್ ಬಾಬ್ಬರ್ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕೋರ್ಟ್ ಫೆಬ್ರವರಿ 5ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ.

    ಕೇಜ್ರವಾಲ್ ಟ್ವೀಟ್ ನಲ್ಲಿ ಏನಿತ್ತು?
    ಮತದಾರರ ಪಟ್ಟಿಯಿಂದ 40 ಸಾವಿರ ಜನರ ಹೆಸರನ್ನು ಕೈಬಿಟ್ಟಿಲ್ಲ. 4 ಲಕ್ಷ ಬನಿಯಾ ಜನಾಂಗ, 8 ಲಕ್ಷ ಮುಸ್ಲಿಂ, 15 ಲಕ್ಷ ಪೂರ್ವಾಂಚಲ್ ಸೇರಿದಂತೆ 30 ಲಕ್ಷ ಜನ ಹೆಸರನ್ನು ತೆಗೆದುಹಾಕಲಾಗಿದೆ ಎಂದು ದೆಹಲಿ ಸಿಎಂ ಅರಂವಿದ್ ಕೇಜ್ರಿವಾಲ್ ಡಿಸೆಂಬರ್ 6 ರಂದು ಟ್ವೀಟ್ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುತ್ರಿಯನ್ನು ಕಿಡ್ನಾಪ್ ಮಾಡ್ತೀವಿ – ಕೇಜ್ರಿವಾಲ್‍ಗೆ ಬೆದರಿಕೆ

    ಪುತ್ರಿಯನ್ನು ಕಿಡ್ನಾಪ್ ಮಾಡ್ತೀವಿ – ಕೇಜ್ರಿವಾಲ್‍ಗೆ ಬೆದರಿಕೆ

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುತ್ರಿಯನ್ನು ಅಪಹರಣ ಮಾಡುವುದಾಗಿ ದುಷ್ಕರ್ಮಿಗಳು ಇಮೇಲ್ ಮಾಡಿದ್ದಾರೆ.

    ಅಪಹರಣ ಬೆದರಿಕೆ ಬಂದ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್ ಅವರ 23 ವರ್ಷದ ಪುತ್ರಿ ಹರ್ಷಿತಾಗೆ ಭದ್ರತೆ ಒದಗಿಸಲಾಗಿದೆ. ದುಷ್ಕರ್ಮಿಗಳು ದೆಹಲಿ ಮುಖ್ಯಮಂತ್ರಿ ಕಾರ್ಯಾಲಯಕ್ಕೆ ಬುಧವಾರ (ಜನವರಿ 9)ರಂದು ಇಮೇಲ್ ಕಳುಹಿಸಿ, ನಿಮ್ಮ ಪುತ್ರಿಯನ್ನು ನಾವು ಅಪಹರಿಸುತ್ತೇವೆ. ನಿಮಗೆ ರಕ್ಷಿಸಿಕೊಳ್ಳಲು ಸಾಧ್ಯವೇ ಎಂದು ಸವಾಲು ಹಾಕಿದ್ದಾರೆ.

    ಇಮೇಲ್ ಕಳುಹಿಸಿದ್ದು ಯಾರು? ಎಲ್ಲಿಂದ ಕಳುಹಿಸಿದ್ದಾರೆ? ಅವರ ಬೇಡಿಕೆ ಏನು ಎನ್ನುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ ಎಂದು ದೆಹಲಿ ಸೈಬರ್ ಕ್ರೈಮ್ ಪೊಲೀಸರು ತಿಳಿಸಿದ್ದಾರೆ.

    ಸಿಎಂ ಅರವಿಂದ್ ಕೇಜ್ರಿವಾಲ್, ಸುನಿತಾ ದಂಪತಿಗೆ ಪುತ್ರಿ ಹರ್ಷಿತಾ ಹಾಗೂ ಪುತ್ರ ಪುಲ್ಕಿಟ್ ಇದ್ದಾರೆ. ಹರ್ಷಿತಾ 2014ರಲ್ಲಿ ಐಐಟಿಯ ಅರ್ಹತಾ ಪರೀಕ್ಷೆಯಲ್ಲಿ ಉರ್ತೀಣಗೊಂಡಿದ್ದು ಎಂಜಿನಿಯರಿಂಗ್ ವ್ಯಾಸಂಗ ಓದುತ್ತಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv