Tag: chief

  • ಭಾರತ ಸರ್ಕಾರದ ಪ್ರಮುಖ ಬೇಡಿಕೆ ಈಡೇರಿಸಿದ ವಾಟ್ಸಪ್

    ಭಾರತ ಸರ್ಕಾರದ ಪ್ರಮುಖ ಬೇಡಿಕೆ ಈಡೇರಿಸಿದ ವಾಟ್ಸಪ್

    ನವದೆಹಲಿ: ಜನಪ್ರಿಯ ಮೆಸೇಜಿಂಗ್ ಆ್ಯಪ್ ಆದ ವಾಟ್ಸಪ್ ಭಾರತದ ಮುಖ್ಯಸ್ಥರನ್ನಾಗಿ ಅಭಿಜಿತ್ ಬೋಸ್ ರವರನ್ನು ಆಯ್ಕೆ ಮಾಡಿದೆ.

    ಅಭಿಜಿತ್ ಬೋಸ್ ಮುಂದಿನ ವರ್ಷದಲ್ಲಿ ಅಧಿಕಾರವನ್ನು ಸ್ವೀಕರಿಸಲಿದ್ದು, ಕ್ಯಾಲಿಫೋರ್ನಿಯಾದ ಹೊರಗಿನ ವಾಟ್ಸಪ್ ತಂಡವನ್ನು ಪೂರ್ಣ ಪ್ರಮಾಣದಲ್ಲಿ ನಿರ್ವಹಿಸುವ ಭಾರತದ ಪ್ರಥಮ ವ್ಯಕ್ತಿಯಾಗಿದ್ದಾರೆ. ಈ ಮೂಲಕ ಭಾರತ ಸರ್ಕಾರ ವಾಟ್ಸಪ್ ಸಂಸ್ಥೆಯ ಮುಂದಿಟ್ಟ ಬೇಡಿಕೆಗಳಲ್ಲಿ ಮಹತ್ವಪೂರ್ಣವಾದ ಬೇಡಿಕೆಯೊಂದು ಈಡೇರಿದಂತಾಗಿದೆ.

    ಬೋಸ್ ಹಾಗೂ ಅವರ ತಂಡ ಭಾರತದ ದೊಡ್ಡ ಹಾಗೂ ಸಣ್ಣ ಮಾದರಿಯ ವ್ಯವಹಾರಗಳೆರಡರ ಕುರಿತು ಗ್ರಾಹಕರೊಂದಿಗೆ ಮಾತುಕತೆಯನ್ನು ನಡೆಸುತ್ತದೆಂದು ಕಂಪನಿ ತಿಳಿಸಿದೆ.

    ವಾಟ್ಸಪ್ ಭಾರತದ ಆಡಳಿತ ನೀತಿಗೆ ಬದ್ಧವಾಗಿದೆ. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆಯಲ್ಲಿ ಜನರನ್ನು ಸಂಪರ್ಕಿಸಲು ಮತ್ತು ಬೆಂಬಲಿಸಲು ಸಹಾಯ ಮಾಡುವ ಮೂಲಕ ನಮ್ಮ ಬದ್ಧತೆಯನ್ನು ಉಳಿಸಿಕೊಳ್ಳುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ಯಶಸ್ವಿ ವಾಣಿಜ್ಯೋದ್ಯಮಿಯಾಗಿ, ಭಾರತದಾದ್ಯಂತ ಉದ್ಯಮಗಳಿಗೆ ಸೇವೆ ಸಲ್ಲಿಸಲು ಬೋಸ್ ಅರ್ಥಪೂರ್ಣವಾದ ಪಾಲುದಾರಿಕೆಗಳನ್ನು ನಿರ್ಮಿಸುತ್ತಾರೆಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕರಿ ಮ್ಯಾಟ್ ಐಡಿಮಾ ಹೇಳಿದ್ದಾರೆ.

    2011ರಲ್ಲಿ ಸ್ಥಾಪನೆಯಾದ ಎಲೆಕ್ಟ್ರಾನಿಕ್ ಪಾವತಿ ಎಜಿಟ್ಯಾಬ್ ಸಂಸ್ಥೆಯಲ್ಲಿ ಸಹ ಸಂಸ್ಥಾಪಕ ಹಾಗೂ ಸಿಇಓ ಆಗಿ ಅಭಿಜಿತ್ ಬೋಸ್ ಅವರನ್ನು ನೇಮಕ ಮಾಡಿದೆ.

    ಸುಳ್ಳು ಸುದ್ದಿ ಮತ್ತು ಗುಂಪು ಹತ್ಯೆ ವಿಚಾರಗಳು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಫೇಸ್ ಬುಕ್ ಮಾಲೀಕತ್ವದ ವಾಟ್ಸಪ್ ಗೆ ಎರಡು ಲೀಗಲ್ ನೋಟಿಸ್ ಕಳುಹಿಸಿತ್ತು. ಸುಳ್ಳು ಸುದ್ದಿಗಳನ್ನು ಮತ್ತು ಗುಂಪು ಹತ್ಯೆಗೆ ಸಂಬಂಧಿಸಿದ ಸುದ್ದಿ, ವಿಡಿಯೋಗಳನ್ನು ತಡೆಗಟ್ಟಬೇಕು ಎಂದು ಸೂಚಿಸಿತ್ತು. ಅಷ್ಟೇ ಅಲ್ಲದೇ ಸಮಸ್ಯೆಗಳನ್ನು ಬಗೆ ಹರಿಸಲು ಸ್ಥಳೀಯ ವ್ಯಕ್ತಿಗಳನ್ನು ನೇಮಿಸಬೇಕು. ಈ ಸೂಚನೆಯನ್ನು ನಿರ್ಲಕ್ಷಿಸಿದರೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಭಾರತ ಸರ್ಕಾರ ವಾಟ್ಸಪ್ ಎಚ್ಚರಿಕೆ ನೀಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ದಸರಾ ವೇಳೆ ಮಾರುಕಟ್ಟೆಗೆ ಭೇಟಿ ನೀಡಿ ಸರಳತೆ ಮೆರೆದ ಸುಧಾಮೂರ್ತಿ

    ದಸರಾ ವೇಳೆ ಮಾರುಕಟ್ಟೆಗೆ ಭೇಟಿ ನೀಡಿ ಸರಳತೆ ಮೆರೆದ ಸುಧಾಮೂರ್ತಿ

    ಮೈಸೂರು: ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿಯವರು ನಗರದ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುವ ಮೂಲಕ ಸರಳತೆಯನ್ನು ಮೆರೆದಿದ್ದಾರೆ.

    ಹೌದು, ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿಯವರು ಇಂದು ನಗರದ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿದ್ದರು. ಮಾರುಕಟ್ಟೆಯಲ್ಲಿ ಸರಳವಾಗಿ ನಡೆದುಕೊಂಡು ಬಂದ ಅವರನ್ನು ನೋಡಿದ ಜನ ಅಚ್ಚರಿಗೊಂಡರು.

    ಸುಧಾಮೂರ್ತಿಯವರು ನಡೆದುಕೊಂಡು ಹೋಗುತ್ತಿದ್ದಾಗ ಸಾರ್ವಜನಿಕರು ಕೈ ಮುಗಿದು ಗೌರವ ಸೂಚಿಸಿದರು. ಸಾಮಾನ್ಯರಂತೆ ಮಾರುಕಟ್ಟೆಯಲ್ಲಿ ಓಡಾಡಿ, ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದ ಅವರ ಸರಳತೆಗೆ ಜನ ಮಾರುಹೋದರು. 2018ರ ಮೈಸೂರು ದಸರಾಗೆ ಚಾಲನೆ ನೀಡಿದ್ದ ಅವರನ್ನು ಜನ ವಂದಿಸುತ್ತಾ ಹರ್ಷ ವ್ಯಕ್ತಪಡಿಸಿದರು.

    ಸುಧಾಮೂರ್ತಿ ಮೊದಲಿನಿಂದಲೂ ಸರಳತೆ ಬೆಳೆಸಿಕೊಂಡು ಬಂದಿದ್ದಾರೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಬಳಿಕ ಛಾಯಾಗ್ರಾಹರೊಬ್ಬರು ಸುಧಾಮೂರ್ತಿ ಅವರಿಗೆ ಪುಸ್ತಕವನ್ನು ಕೊಟ್ಟಿದ್ದರು. ಈ ವೇಳೆ ಸುಧಾಮೂರ್ತಿ “ಈ ಪುಸ್ತಕ ನನಗೆ ಉಚಿತವಾಗಿ ನೀಡುತ್ತಿದ್ದೀರಾ” ಎಂದು ಪ್ರಶ್ನಿಸಿದರು. ಇದಕ್ಕೆ ಛಾಯಾಗ್ರಾಹಕರು ಹೌದು ಎಂದು ಉತ್ತರಿಸಿದಾಗ ಸುಧಾಮೂರ್ತಿ,”ನೀವು ಇಷ್ಟು ಕಷ್ಟಪಟ್ಟು ಸಿದ್ಧಪಡಿಸಿದ ಪುಸ್ತಕವನ್ನು ಉಚಿತವಾಗಿ ಪಡೆಯುವುದು ನನಗೆ ಶೋಭೆ ತರುವುದಿಲ್ಲ. ಉಚಿತವಾಗಿ ಪಡೆದರೆ ಪುಸ್ತಕಕ್ಕೆ ನಾನು ಮಾಡಿದ ಅವಮಾನವಾಗುತ್ತದೆ” ಎಂದು ಹೇಳಿದರು. ಅಷ್ಟೇ ಅಲ್ಲದೇ ಪುಸ್ತಕದ ಬೆಲೆಯಾದ 4,500 ರೂ. ಅನ್ನು ಛಾಯಾಗ್ರಾಹಕರ ಬ್ಯಾಂಕ್ ಖಾತೆಗೆ ಹಾಕಿ ಎಂದು ತನ್ನ ಸಿಬ್ಬಂದಿಗೆ ಸೂಚಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಹುದ್ದೆಯಿಂದ ರಮ್ಯಾ ಕಿಕ್ ಔಟ್?

    ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಹುದ್ದೆಯಿಂದ ರಮ್ಯಾ ಕಿಕ್ ಔಟ್?

    ನವದೆಹಲಿ: ಮಾಜಿ ಸಂಸದೆ ಹಾಗೂ ಚಿತ್ರನಟಿ ರಮ್ಯಾರನ್ನು ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಹುದ್ದೆಯಿಂದ ಕಿಕ್ ಔಟ್ ಮಾಡಲಾಗಿದೆ.

    ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ನಿಂದ ಪಕ್ಷಕ್ಕೆ ಮುಜುಗರವಾದ ಹಿನ್ನೆಲೆಯಲ್ಲಿ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಹುದ್ದೆಯಿಂದ ಕಿಕ್‍ಔಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೇ ರಾಹುಲ್ ಗಾಂಧಿಯವರ ಟ್ವೀಟ್ ಹಾಗೂ ಸಾರ್ವಜನಿಕ ಭಾಷಣಗಳ ಉಸ್ತುವಾರಿಗಳಿಂದಲೂ ಅವರಿಗೆ ಕೋಕ್ ನೀಡಲಾಗಿದೆ ಎಂದು ವರದಿಯಾಗಿದೆ.

    ಈ ಸುದ್ದಿಗೆ ಪೂರಕ ಎಂಬಂತೆ ರಮ್ಯಾ ಅವರು ಈ ಹಿಂದೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ, ನಟಿ, ಸಂಸದೆ ಎಂದು ಬರೆದುಕೊಂಡಿದ್ದರು. ಆದರೆ ಈಗ ಈ ಎಲ್ಲ ಮಾಹಿತಿಗಳನ್ನು ಡಿಲೀಟ್ ಮಾಡಿದ್ದಾರೆ.

    ರಫೇಲ್ ಒಪ್ಪಂದ ಕುರಿತು ರಮ್ಯಾ ಸೆಪ್ಟೆಂಬರ್ 24 ರಂದು ಮೋದಿ ಅವರ ಮೇಣದ ಪ್ರತಿಮೆಯ ಫೋಟೋ ಟ್ವೀಟ್ ಮಾಡಿದ್ದರು. ಈ ಫೋಟೋದಲ್ಲಿ ಮೋದಿ ಸ್ವತಃ ತಮ್ಮ ಪ್ರತಿಮೆ ಮೇಲೆ ಕಳ್ಳ ಎಂದು ಬರೆಯುವಂತೆ ಚಿತ್ರಿಸಲಾಗಿದೆ. ಈ ಫೋಟೋಗೆ ಕಳ್ಳ ಪ್ರಧಾನಿ ಸುಮ್ಮನಿದ್ದಾರೆ (#ChorPMChupHai) ಎಂಬ ಹ್ಯಾಷ್ ಟ್ಯಾಗನ್ನು ರಮ್ಯಾ ಬಳಸಿ ಟ್ವೀಟ್ ಮಾಡಿದ್ದರು. ರಮ್ಯಾ ಮಾಡಿದ ಟ್ವಿಟ್ ನಲ್ಲಿ ನರೇಂದ್ರ ಮೋದಿ ವಿರುದ್ಧ ದ್ವೇಷ ಕಾರುವ ಅಂಶವಿದೆ ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಿಜ್ವಾನ್ ಅಹ್ಮದ್ ದೂರು ನೀಡಿದ್ದರು. ದೂರು ನೀಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಎಫ್‍ಐಆರ್ ದಾಖಲಾಗಿತ್ತು.

    ಕರ್ನಾಟಕಕ್ಕೆ ಬಂದಿರಲಿಲ್ಲ
    ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹೆಸರಿದ್ದರೂ ಕೂಡ ರಮ್ಯಾರವನ್ನು ದೂರ ಇಡಲಾಗಿತ್ತು. ಒಂದು ವೇಳೆ ಅವರನ್ನು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರೇ ಪಕ್ಷಕ್ಕೆ ನಷ್ಟ ಹೆಚ್ಚಾಗುವ ಸಾಧ್ಯತೆಯಿದೆ ಎಂದು ರಾಜ್ಯ ನಾಯಕರು ಪ್ರಚಾರದಿಂದ ದೂರ ಇಟ್ಟಿದ್ದರು ಎನ್ನಲಾಗಿದೆ.

    ರಮ್ಯಾರವರು ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡುವ ಭರದಲ್ಲಿ ಪಕ್ಷಕ್ಕೆ ಭಾರೀ ಮುಜುಗರಕ್ಕೀಡು ಮಾಡುವಂತೆ ಮಾಡಿದ್ದರು. ಅಲ್ಲದೇ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ತರಬೇತಿ ನೀಡುವ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆಯುವಂತೆ ಸಲಹೆ ನೀಡಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ರಾಯಚೂರಿಗೆ ಆಗಮಿಸಿದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್

    ರಾಯಚೂರಿಗೆ ಆಗಮಿಸಿದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್

    ರಾಯಚೂರು: ನಗರದಲ್ಲಿ ಹಮ್ಮಿಕೊಂಡಿದ್ದ ಆರ್‌ಎಸ್‌ಎಸ್‌ ಬೈಠಕ್ ಹಾಗೂ ಕಾರ್ಯಕಾರಣಿ ಸಭೆಗೆ ಮುಖ್ಯಸ್ಥ ಮೋಹನ್ ಭಾಗವತ್‍ರವರು ದೆಹಲಿಯಿಂದ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ನಗರಕ್ಕೆ ಆಗಮಿಸಿದ್ದಾರೆ.

    ಮೋಹನ್ ಭಾಗವತ್‍ರವರಿಗೆ ಝಡ್ ಫ್ಲಸ್ ಹಾಗೂ ಸಿಐಎಸ್‍ಎಫ್ ನಿಂದ ವಿಶೇಷ ಭದ್ರತೆ ನೀಡಲಾಗಿದ್ದು, ಮೂರು ದಿನಗಳ ರಾಯಚೂರು ಹಾಗೂ ಎರಡು ದಿನಗಳ ಮಂತ್ರಾಲಯದಲ್ಲಿ ನಡೆಯುವ ಆರ್‌ಎಸ್‌ಎಸ್‌ ಬೈಠಕ್ ಹಾಗೂ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೋಹನ್ ಭಾಗವತ್‍ರವರು ನಗರದ ಹಿಂದೂ ವರ್ಧಮಾನ ಶಾಲೆ ಪಕ್ಕದ ಲಾಲ್ ಜೀ ಪಟೇಲ್ ಎಂಬವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದನ್ನೂ ಓದಿ: ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿಗೆ ಆಹ್ವಾನ?

    ಇಂದಿನಿಂದ ನಡೆಯಲಿರುವ ಮೂರು ದಿನಗಳ ಕಾರ್ಯಕಾರಣಿ ಸಭೆಯನ್ನು ಲಾಲ್ ಜೀಯವರ ಮನೆಯಲ್ಲೇ ನಡೆಸಲು ಸಂಘ ತೀರ್ಮಾನಿದೆ. ಅಲ್ಲದೇ ಸೆಪ್ಟೆಂಬರ್ 1 ರಿಂದ ಮಂತ್ರಾಲಯದಲ್ಲಿ ನಡೆಯುವ ಎರಡು ದಿನಗಳ ಸಭೆಯನ್ನು ತಿರುಮಲ ವಸತಿ ಗೃಹದಲ್ಲಿ ನಡೆಸಲು ತೀರ್ಮಾನಿಸಿದ್ದಾರೆ. ಮಂತ್ರಾಲಯದಲ್ಲಿ ನಡೆಯುವ ಬೈಠಕ್‍ಗೆ ಬಿಜೆಪಿ ರಾಷ್ಯಾಧ್ಯಕ್ಷ ಅಮಿತ್ ಶಾ ಕೂಡ ಆಗಮಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶ್ರೀರಾಮನ ಬಗ್ಗೆ ಕೆ.ಎಸ್ ಭಗವಾನ್ ಹೇಳಿಕೆಗೆ ಮುತಾಲಿಕ್ ಹೀಗಂದ್ರು

    ಶ್ರೀರಾಮನ ಬಗ್ಗೆ ಕೆ.ಎಸ್ ಭಗವಾನ್ ಹೇಳಿಕೆಗೆ ಮುತಾಲಿಕ್ ಹೀಗಂದ್ರು

    ಬೆಳಗಾವಿ: ಮೈಸೂರಿನಲ್ಲಿ ಸಾಹಿತಿ ಭಗವಾನ್ ರಾಮನ ಕುರಿತು ನೀಡಿರುವ ಹೇಳಿಕೆ ರಾಮಾಯಣವನ್ನು ಬರೆದಿರುವ ವಾಲ್ಮೀಕಿ ಅವರಿಗೆ ಮಾಡಿರುವ ಅಪಮಾನ. ಭಗವಾನ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅಗ್ರಹಿಸಿದ್ದಾರೆ.

    ಭಗವಾನ್ ಹೇಳಿಕೆ ಕುರಿತು ಇಂದು ಪ್ರತಿಕ್ರಿಯಿಸಿದ ಮುತಾಲಿಕ್, ರಾಮನ ಬಗ್ಗೆ ಕೀಳಾಗಿ ಮಾತನಾಡಿರುವ ಭಗವಾನ್ ರಾಮಾಯಣವನ್ನು ಬರೆದಿರುವ ವಾಲ್ಮೀಕಿಗೆ ಅಪಮಾನವನ್ನು ಮಾಡಿದ್ದಾರೆ. ವಾಲ್ಮೀಕಿ ಜನಾಂಗದವರು ಅವರ ವಿರುದ್ಧ ಪ್ರಕರಣವನ್ನು ದಾಖಲಿಸಬೇಕು. ದಲಿತ ಜನಾಂಗಕ್ಕೆ ಅಪಮಾನ ಮಾಡಿದ್ದು ಸರಿಯಲ್ಲ. ಭಗವಾನ್ ಭಗವಾನ ಅಲ್ಲ ಅವನೊಬ್ಬ ಸೈತಾನ್ ಎಂದು ವಾಗ್ದಾಳಿ ನಡೆಸಿದರು.

    ಇದೇ ಸಂದರ್ಭದಲ್ಲಿ ಮಹಿಷ ದಸರಾ ಆಚರಣೆ ಮಾಡುವವರು ರಕ್ಷಸ ಕುಲದವರು, ರಾವಣನ ವಂಶಸ್ಥರು. ಮಹಿಷ ದಸರಾವನ್ನು ಆಚರಣೆ ಮಾಡುವುದಕ್ಕೆ ಶ್ರೀರಾಮಸೇನೆಯ ವಿರೋಧವಿದೆ ಎಂದು ಹೇಳಿದರು. ರೋಹಿಂಗ್ಯಾ ಮುಸ್ಮಿಮರಿಗೆ ಭಾರತದಲ್ಲಿ ಆಶ್ರಯವನ್ನು ನೀಡುವುದಕ್ಕೆ ಭಾರತದ ಮುಸ್ಮಿಮರು ಒತ್ತಾಯ ಮಾಡುವುದು ಮೂರ್ಖತನ ಅಂದ್ರು.

    ಎರಡು ದಿನಗಳ ಹಿಂದೆ ಮೈಸೂರಿನ ದಸರಾ ಪ್ರಯುಕ್ತ ನಡೆದ ವಿಶಿಷ್ಟ ಕವಿ ಗೋಷ್ಠಿಯಲ್ಲಿ ಪ್ರೋ. ಕೆಎಸ್ ಭಗವಾನ್ ಮಾತನಾಡಿ, ರಾಮನ ನಿಜ ಬಣ್ಣ ವಾಲ್ಮೀಕಿ ಬರೆದಿರುವ ರಾಮಾಯಾಣದಲ್ಲಿ ತಿಳಿದು ಬಂದಿದೆ. ವಾಲ್ಮೀಕಿ ಎಲ್ಲಿಯೂ ರಾಮನನ್ನು ದೇವರು ಎಂದು ಕರೆದಿಲ್ಲ. ಬ್ರಾಹ್ಮಣರ ಮಾತು ಕೇಳಿ ರಾಮ ಶಂಭೂಕನ ತಲೆಯನ್ನು ಕತ್ತರಿಸಿದ. ತುಂಬು ಗರ್ಭಿಣಿಯನ್ನು ಕಾಡಿಗೆ ಕಳುಹಿಸಿದ. ಇಂತಹ ವ್ಯಕ್ತಿಗೆ ರಾಮಮಂದಿರ ನಿರ್ಮಿಸುವ ಮೊದಲು ಯೋಚಿಸಿ ಎಂದು ಹೇಳಿ ವಿವಾದದ ಕಿಡಿ ಹಬ್ಬಿಸಿದ್ದರು.