Tag: Chickpeas

  • ಟ್ರೈ ಮಾಡಿ ಕಾಬೂಲ್ ಕಡಲೆಯ ಟೇಸ್ಟಿ ಉಪ್ಪಿನಕಾಯಿ ರೆಸಿಪಿ

    ಟ್ರೈ ಮಾಡಿ ಕಾಬೂಲ್ ಕಡಲೆಯ ಟೇಸ್ಟಿ ಉಪ್ಪಿನಕಾಯಿ ರೆಸಿಪಿ

    ಟಕ್ಕೆ ಯಾವಾಗಲೂ ಉಪ್ಪಿನಕಾಯಿ ಇಲ್ಲ ಎಂದರೆ ಏನೋ ಮಿಸ್ ಅಂತ ಹೆಚ್ಚಿನವರಿಗೆ ಎನಿಸುತ್ತದೆ. ಮಾವಿನಕಾಯಿ ಉಪ್ಪಿನಕಾಯಿ, ನಿಂಬೆ ಹಣ್ಣಿನ ಉಪ್ಪಿನಕಾಯಿ ಎಲ್ಲರಿಗೂ ಗೊತ್ತು. ಆದರೆ ಕಾಬೂಲ್ ಕಡಲೆಯ ಉಪ್ಪಿನಕಾಯಿಯನ್ನು ನೀವು ಎಂದಾದ್ರೂ ಸವಿದಿದ್ದೀರಾ? ಇಲ್ಲ ಎಂದರೆ ಈ ಒಂದು ರೆಸಿಪಿಯನ್ನು ನೀವು ಖಂಡಿತವಾಗ್ಲೂ ಟ್ರೈ ಮಾಡ್ಬೇಕು. ಇಲ್ಲಿಯವರೆಗೆ ಕಾಬೂಲ್ ಕಡಲೆಯನ್ನು ಉಸ್ಲಿ, ಗ್ರೇವಿ ಅಥವಾ ಸಾರಿನಲ್ಲಿ ಮಾತ್ರ ಸವಿದಿದ್ದರೆ ಈ ರೀತಿಯೂ ಒಮ್ಮೆ ಉಪ್ಪಿನಕಾಯಿಯ ರುಚಿಯಲ್ಲಿ ಆಸ್ವಾದಿಸಿ ನೋಡಿ.

    ಬೇಕಾಗುವ ಪದಾರ್ಥಗಳು:
    ಕಾಬೂಲ್ ಕಡಲೆ – 150 ಗ್ರಾಂ
    ಮಾವಿನಕಾಯಿ – 600 ಗ್ರಾಂ
    ವಿನೆಗರ್ – 2 ಕಪ್
    ಅರಿಶಿನ ಪುಡಿ – 1 ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – 2 ಟೀಸ್ಪೂನ್
    ಜೀರಿಗೆ ಪುಡಿ – 5 ಟೀಸ್ಪೂನ್
    ಮೆಂತ್ಯ ಬೀಜದ ಪುಡಿ – 1 ಟೀಸ್ಪೂನ್
    ಸಾಸಿವೆ ಪುಡಿ – 1 ಟೀಸ್ಪೂನ್
    ಉಪ್ಪು – 1 ಟೀಸ್ಪೂನ್
    ಎಣ್ಣೆ – 2 ಕಪ್ ಇದನ್ನೂ ಓದಿ: ಈ ರೀತಿ ಮಾಡಿ ಕ್ರಿಸ್ಪಿ ಮೆಂತ್ಯ ವಡಾ

    ಮಾಡುವ ವಿಧಾನ:
    * ಮೊದಲಿಗೆ ಕಾಬೂಲ್ ಕಡಲೆಯನ್ನು ಒಂದು ದೊಡ್ಡ ಬಟ್ಟಲಿನಲ್ಲಿ ಹಾಕಿ ಸಾಕಷ್ಟು ನೀರು ಸೇರಿಸಿ ಕನಿಷ್ಠ 10 ಗಂಟೆಗಳ ಕಾಲ ನೆನೆಸಿಡಿ.
    * ಬಳಿಕ ನೀರನ್ನು ಹರಿಸಿ, ಒಂದು ಶುಭ್ರ ಬಟ್ಟೆ ತೆಗೆದುಕೊಂಡು ಕಡಲೆ ಒಣಗುವಂತೆ ಒರೆಸಿಕೊಳ್ಳಿ.
    * ಒಂದು ದೊಡ್ಡ ಬಟ್ಟಲಿನಲ್ಲಿ ವಿನೆಗರ್ ಹಾಕಿ ಅದರಲ್ಲಿ ಕಡಲೆಗಳನ್ನು ಕನಿಷ್ಠ 10 ಗಂಟೆಗಳ ಕಾಲ ನೆನೆಸಿಡಿ.
    * ಈ ನಡುವೆ ಒಂದು ಬಾಣಲೆ ತೆಗೆದುಕೊಂಡು ಅದರಲ್ಲಿ ಎಣ್ಣೆ ಬಿಸಿ ಮಾಡಿ. ಎಣ್ಣೆಯಿಂದ ಹೊಗೆ ಹೊರಬರಲು ಪ್ರಾರಂಭಿಸಿದಾಗ ಉರಿಯನ್ನು ಆಫ್ ಮಾಡಿ ಆರಲು ಪಕ್ಕಕ್ಕಿಡಿ.
    * ಈಗ ನೆನೆಸಿಟ್ಟಿದ್ದ ಕಡಲೆಯಿಂದ ವಿನೆಗರ್ ಅನ್ನು ಹರಿಸಿ.
    * ಮಾವಿನಕಾಯಿಯ ಸಿಪ್ಪೆ ತೆಗೆದು, ಅದನ್ನು ತುರಿದುಕೊಳ್ಳಿ ಹಾಗೂ ಅದನ್ನು ಕಡಲೆಗೆ ಸೇರಿಸಿ.
    * ಈಗ ಅದಕ್ಕೆ ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ, ಮೆಂತ್ಯ ಬೀಜದ ಪುಡಿ, ಸಾಸಿವೆ ಪುಡಿ ಹಾಗೂ ಉಪ್ಪು ಸೇರಿಸಿ ಮಿಶ್ರಣ ಮಾಡಿ.
    * ಈಗ ಬಿಸಿ ಮಾಡಿ ತಣ್ಣಗಾಗಿಸಿದ ಎಣ್ಣೆಯಲ್ಲಿ ಸುಮಾರು 5 ಟೀಸ್ಪೂನ್‌ನಷ್ಟು ಎಣ್ಣೆಯನ್ನು ಉಪ್ಪಿನಕಾಯಿ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿ.
    * ಈಗ ಮಿಶ್ರಣವನ್ನು ಒಂದು ಗಾಜಿನ ಪಾತ್ರೆಯಲ್ಲಿ ಹಾಕಿ, ಉಳಿದ ಎಣ್ಣೆಯನ್ನು ಅದಕ್ಕೆ ಸೇರಿಸಿ, ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿ.
    * ಈಗ ಗಾಜಿನ ಡಬ್ಬಿಯನ್ನು ಸುಮಾರು 15 ದಿನಗಳ ವರೆಗೆ ಬಿಸಿಲಿನಲ್ಲಿಡಿ.
    * 15 ದಿನಗಳ ಬಳಿ ಕಾಬೂಲ್ ಕಡಲೆಯ ಉಪ್ಪಿನಕಾಯಿ ಸವಿಯಲು ಸಿದ್ಧವಾಗುತ್ತದೆ. ಇದನ್ನು ನೀವು 1-2 ವರ್ಷಗಳ ವರೆಗೂ ಸಂಗ್ರಹಿಸಿ ಇಡಬಹುದು. ಇದನ್ನೂ ಓದಿ: ಸಿಂಪಲ್ಲಾಗಿ ಮಾಡಿ ಮಶ್ರೂಮ್ 65..

  • ಹೋಳಿಗೆ ರುಚಿಯಷ್ಟೇ ಟೇಸ್ಟಿಯಾಗಿರುವ ‘ಸುಕ್ಕಿನುಂಡೆ’ ಮಾಡಿ ಸವಿಯಿರಿ

    ಹೋಳಿಗೆ ರುಚಿಯಷ್ಟೇ ಟೇಸ್ಟಿಯಾಗಿರುವ ‘ಸುಕ್ಕಿನುಂಡೆ’ ಮಾಡಿ ಸವಿಯಿರಿ

    ಡಲೆ ಬೇಳೆಯಲ್ಲಿ ಮಾಡುವ ಸಿಹಿ ತಿನಿಸು ಎಂದರೆ ನಮಗೆ ಥಟ್ ಎಂದು ನೆನಪಾಗುವುದು ಒಬ್ಬಟ್ಟು. ಆದರೆ ಇಂದು ನಾವು ಹೇಳಿಕೊಡುವ ರೆಸಿಪಿ ಸುಕ್ಕಿನುಂಡೆ. ಸುಕ್ಕಿನುಂಡೆ ಸಾಂಪ್ರದಾಯಿಕ ತಿನಿಸಾಗಿದ್ದು, ಯಾವುದೇ ಬೇಳೆಯನ್ನು ಬಳಸಿ ಈ ರೆಸಿಪಿಯನ್ನು ಮಾಡಬಹುದು. ಇಂದು ನಾವು ಕಡಲೆ ಬೇಳೆ ಬಳಸಿ ಸುಕ್ಕಿನುಂಡೆ ಹೇಗೆ ತಯಾರಿಸುವುದು ಎಂದು ಹೇಳಿಕೊಡುತ್ತೇವೆ. ಇದು ಆರೋಗ್ಯಕರವಾದ ಅಡುಗೆ ಕೂಡ ಆಗಿದೆ. ಒಳಗಡೆ ಹೋಳಿಗೆಯ ರುಚಿ ಇದ್ದು, ತಿನ್ನಲು ಸಖತ್ ಆಗಿ ಇರುತ್ತೆ. ಮತ್ತೆ ಇನ್ಯಾಕೆ ತಡ. ಈ ಶುಭ ಶನಿವಾರ ಕಡಲೆಬೇಳೆಯ ಸುಕ್ಕಿನುಂಡೆ ಮಾಡೋಣ.

    ಬೇಕಾಗುವ ಸಾಮಾಗ್ರಿಗಳು:
    * 3 ಗಂಟೆ ನೆನೆಸಿದ ಕಡಲೆ ಬೇಳೆ – 1 ಕಪ್
    * ಬೆಲ್ಲ – 1/3 ಕಪ್
    * ಉಪ್ಪು – ಅರ್ಧ ಟೀಸ್ಪೂನ್

    * ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
    * 4 ಗಂಟೆ ನೆನೆಸಿದ ಅಕ್ಕಿ – 1 ಕಪ್
    * ಅರಿಶಿನ ಪುಡಿ – ಅರ್ಧ ಟೀಸ್ಪೂನ್
    * ಕರಿಯಲು ಎಣ್ಣೆ

    ಮಾಡುವ ವಿಧಾನ:
    * ಕುಕ್ಕರಿನಲ್ಲಿ 1 ಕಪ್ ಆಗುವಷ್ಟು ಕಡಲೆ ಬೇಳೆ ಹಾಗು ಒಂದೂಕಾಲು ಕಪ್ ನೀರು ಹಾಕಿ ಮುಚ್ಚಳ ಮುಚ್ಚಿ ದೊಡ್ಡ ಉರಿಯಲ್ಲಿ 4 ಕೂಗು ಕೂಗಿಸಿ. ನಂತರ ಇದರಲ್ಲಿರುವ ನೀರನ್ನು ಬಸಿದುಕೊಳ್ಳಿ.
    * ಕಡಲೆ ಬೇಳೆಯನ್ನು ಕುಕ್ಕರಿಗೆ ಹಾಕಿ, ಅದಕ್ಕೆ 1/3 ಕಪ್ ಬೆಲ್ಲ, ಕಾಲು ಚಮಚ ಉಪ್ಪು ಹಾಕಿ, ಬೆಲ್ಲ ಕರಗಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ.
    * ಇದಕ್ಕೆ ಅರ್ಧ ಚಮಚ ಏಲಕ್ಕಿ ಪುಡಿ ಹಾಕಿ ಗಟ್ಟಿಯಾಗುವವರೆಗೆ ಬೇಯಿಸಿ.
    * ಮಿಕ್ಸಿ ಜಾರಿಗೆ 1 ಕಪ್ ಆಗುವಷ್ಟು ಅಕ್ಕಿ, ಅರ್ಧ ಚಮಚ ಉಪ್ಪು, ಕಾಲು ಚಮಚ ಅರಿಶಿನ ಪುಡಿ, ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ನುಣ್ಣಗೆ ರುಬ್ಬಿ. ಇದನ್ನು ಪಾತ್ರೆಗೆ ಹಾಕಿಕೊಳ್ಳಿ.
    * ಕಡಲೆಬೇಳೆ ಮತ್ತು ಬೆಲ್ಲದ ಮಿಶ್ರಣವನ್ನು ಉಂಡೆಗಳಾಗಿ ಮಾಡಿ. ಇವುಗಳನ್ನು ರುಬ್ಬಿದ ಹಿಟ್ಟಿನಲ್ಲಿ ಅದ್ದಿ.
    * ಎಣ್ಣೆಯನ್ನು ಬಿಸಿ ಮಾಡಿ ಒಂದೊಂದಾಗಿ ಹಾಕಿ. ಗರಿ-ಗರಿಯಾಗುವವರೆಗೆ ಮಧ್ಯಮ ಉರಿಯಲ್ಲಿ ಕರಿದು ತೆಗೆಯಿರಿ.

    – ರುಚಿಯಾದ ಕಡಲೆಬೇಳೆ ಸುಕ್ಕಿನುಂಡೆ ಸವಿಯಲು ಸಿದ್ಧ.

    Live Tv
    [brid partner=56869869 player=32851 video=960834 autoplay=true]