Tag: Chickpea

  • ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ: ಶಿವಾನಂದ ಪಾಟೀಲ್

    ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ: ಶಿವಾನಂದ ಪಾಟೀಲ್

    ಬೆಂಗಳೂರು: ಬೆಂಬಲ ಬೆಲೆಯಲ್ಲಿ ಕಡಲೆಕಾಳು (Chickpea) ಖರೀದಿ ಮಾಡಲು ಒಂದು ವಾರದೊಳಗೆ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್‌. ಪಾಟೀಲ್ (Shivananda Patil) ತಿಳಿಸಿದ್ದಾರೆ.

    ರಾಜ್ಯ ಸರ್ಕಾರದ ಮನವಿ ಮೇರೆಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿಗೆ ಅನುಮತಿ ನೀಡಿದ್ದು, ಕ್ವಿಂಟಲ್‌ಗೆ 5,650 ರೂ. ಗಳಂತೆ ಖರೀದಿ ಮಾಡಲಾಗುವುದು. ನೋಂದಣಿಗೆ 80 ದಿನ ಹಾಗೂ ಖರೀದಿಗೆ 90 ದಿನ ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.

    ಕೇಂದ್ರ ಸರ್ಕಾರ ನಾಫೆಡ್‌ ಮತ್ತು ಎನ್‌ಸಿಸಿಎಫ್‌ ಸಂಸ್ಥೆಗಳನ್ನು ಹಾಗೂ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ಮತ್ತು ಕಲಬುರಗಿಯ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯನ್ನು ಖರೀದಿ ಸಂಸ್ಥೆಗಳನ್ನಾಗಿ ನೇಮಕ ಮಾಡಲಾಗಿದೆ. ಈ ಮಂಡಳಿಗೆ ಕಡಲೆಕಾಳು ಖರೀದಿ ಮಾಡಬೇಕಾದ ಜಿಲ್ಲೆಗಳನ್ನು ಹಂಚಿಕೆ ಮಾಡಲಾಗಿದೆ. ರೈತರು ತಮ್ಮ ಸಮೀಪದ ಟಿ.ಎ.ಪಿ.ಸಿ.ಎಂ.ಎಸ್‌, ಎಫ್‌.ಪಿ.ಒ ಹಾಗೂ ಪಿ.ಎ.ಸಿ.ಎಸ್‌. ಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದ್ದಾರೆ.

    ಧಾರವಾಡ, ಗದಗ, ಬೆಳಗಾವಿ, ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್‌, ರಾಯಚೂರು, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಬಾಗಲಕೋಟೆ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ತೇವಾಂಶ ಹೆಚ್ಚಳದಿಂದ ಸಾವಿರಾರು ಹೆಕ್ಟೇರ್ ಕಡಲೆ ಬೆಳೆ ಹಾನಿ

    ತೇವಾಂಶ ಹೆಚ್ಚಳದಿಂದ ಸಾವಿರಾರು ಹೆಕ್ಟೇರ್ ಕಡಲೆ ಬೆಳೆ ಹಾನಿ

    ರಾಯಚೂರು: ಮಳೆ ನಿಂತರೂ ಮಳೆ ಹನಿಯ ಎಫೆಕ್ಟ್ ಜಿಲ್ಲೆಯ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ನವೆಂಬರ್ ಕೊನೆ ವಾರದಲ್ಲಿ ಸುರಿದ ಮಳೆಯಿಂದ ಕಡಲೆ ಬೆಳೆ ಹಾಳಾಗಿದೆ. ತೇವಾಂಶ ಹೆಚ್ಚಾಗಿ ಜಮೀನಿನಲ್ಲೇ ಕಡಲೆ ಬೆಳೆ ಕೊಳೆತಿದೆ.

    ಜಿಲ್ಲೆಯ ಸಿಂಧನೂರು ತಾಲೂಕಿನ ಕಲಮಂಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅತೀ ಹೆಚ್ಚು ಹಾನಿಯಾಗಿದೆ. ಇದನ್ನೂ ಓದಿ: ಮಣ್ಣಿನ ಸವಕಳಿಯನ್ನು ತಡೆಗಟ್ಟಿ, ಉತ್ಪಾದಕತೆ ಹೆಚ್ಚಿಸಿ: ಬಿ.ಸಿ ಪಾಟೀಲ್

    ಇನ್ನೇನು ಕಾಯಿ ಬಿಡುವ ಹಂತಕ್ಕೆ ಬಂದಿದ್ದ ಕಡಲೆ ಬೆಳೆ ಸಂಪೂರ್ಣ ಹಾನಿಯಾಗಿದೆ. ಸಿಂಧನೂರು ಹಾಗೂ ಮಸ್ಕಿ ತಾಲೂಕಿನ ಸುಮಾರು 10 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆದಿದ್ದ ಕಡಲೆ ಹಾಳಾಗಿದ್ದು, ಕಡಲೆ ಬೆಳೆ ಕಳೆದುಕೊಂಡು ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಜಮೀನಿನಲ್ಲೇ ಬೆಳೆ ಹಾಳಾಗಿರುವುದರಿಂದ ಕೂಡಲೇ ಬೆಳೆ ಹಾನಿ ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಒಂದೇ ದಿನ ಕೋಟಿ ಲಸಿಕೆ ನೀಡಿಕೆ-5ನೇ ಸಲ ದಾಖಲೆ

  • ಜಮೀನಿನಲ್ಲಿದ್ದ ಕಡಲೆ ಬೆಂಕಿಗಾಹುತಿ – 80 ಕ್ವಿಂಟಲ್ ನಷ್ಟ

    ಜಮೀನಿನಲ್ಲಿದ್ದ ಕಡಲೆ ಬೆಂಕಿಗಾಹುತಿ – 80 ಕ್ವಿಂಟಲ್ ನಷ್ಟ

    ವಿಜಯಪುರ: ಜಮೀನಿನಲ್ಲಿದ್ದ 80 ಕ್ವಿಂಟಲ್ ನಷ್ಟು ಕಡಲೆ ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾಗಿರುವ ಘಟನೆ ವಿಜಯಪುರ ಜಿಲ್ಲೆಯ ಕಾರಜೋಳ ಗ್ರಾಮದಲ್ಲಿ ನಡೆದಿದೆ.

    ಬಸವನ ಬಾಗೇವಾಡಿ ತಾಲೂಕಿನ ಮುಳವಾಡ ಗ್ರಾಮದ ರೈತ ಸಂಗಪ್ಪ ತೋಟದ ಅವರಿಗೆ ಸೇರಿದ ಕಡಲೆ ಇದಾಗಿದ್ದು, ಸುಮಾರು 12 ಎಕರೆಯಲ್ಲಿನ ಅಂದಾಜು 5 ಲಕ್ಷ ಮೌಲ್ಯದ ಕಡಲೆ ಬೆಳೆ ಅಗ್ನಿಗಾಹುತಿಯಾಗಿದೆ. ಇದರಿಂದ ರೈತ ಸಂಗಪ್ಪ ಅವರು ಕಂಗಾಲಾಗಿದ್ದಾರೆ.

    ಸಾಲ ಮಾಡಿ ಕಡಲೆ ಬೆಳೆ ಬೆಳೆದಿದ್ದ ರೈತ ಸಂಗಪ್ಪ ರಾಶಿ ಮಾಡಲೆಂದು ಕಡಲೆ ಕೂಡಿಟ್ಟಿದ್ದರು. ಇದನ್ನ ಸಹಿಸದ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಕಡಲೆ ಬೆಳೆಗೆ ಬೆಂಕಿ ಹಚ್ಚಿದ್ದಾರೆಂದು ರೈತ ಸಂಗಪ್ಪ ಆರೋಪಿಸುತ್ತಿದ್ದಾರೆ.

    ನಾಲ್ಕೈದು ವರ್ಷಗಳಿಂದ ತನ್ನ ಬೆಳೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದಲ್ಲದೇ, ಜಮೀನಿನಲ್ಲಿದ್ದ ಕೃಷಿ ಉಪಕರಣಗಳನ್ನು ಸಹ ಕಳ್ಳತನ ಮಾಡಿದ್ದಾರೆ. ಆದ್ದರಿಂದ ಈ ಖದೀಮರನ್ನ ಆದಷ್ಟು ಬೇಗ ಪೊಲೀಸರು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

  • ರೈತ ಮಹಿಳೆ ಬೆಳೆದಿದ್ದ ಕಡಲೆ ಬೆಂಕಿಗಾಹುತಿ

    ರೈತ ಮಹಿಳೆ ಬೆಳೆದಿದ್ದ ಕಡಲೆ ಬೆಂಕಿಗಾಹುತಿ

    ವಿಜಯಪುರ: ರೈತ ಮಹಿಳೆ ಕಡಲೆಯನ್ನು ಬೆಳೆದು ರಾಶಿ ಮಾಡಲು ಇಟ್ಟಿದ್ದರು. ಈ ಕಡಲೆ ರಾಶಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ನಡೆದಿದೆ.

    ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಸುಮಾರು 30 ಕ್ವಿಂಟಾಲ್ ಕಡಲೆ ಸುಟ್ಟು ಭಸ್ಮವಾಗಿದೆ. ಈ ಮೂಲಕ ಸಾಯವ್ವ ಹುನ್ನೂರ ಅವರು ಬೆಳೆದಿರುವ ಕಡಲೆ ಸಂಪೂರ್ಣವಾಗಿ ದುಷ್ಕರ್ಮಿಗಳಿಟ್ಟಿರುವ ಬೆಂಕಿಗೆ ಆಹುತಿಯಾಗಿದೆ.

    ರೈತ ಮಹಿಳೆ ಸಾಯವ್ವ ಅವರು 6 ಎಕರೆ ಜಮೀನಿನಲ್ಲಿ ಕಡಲೆ ಬೆಳೆದಿದ್ದರು. ಕಡಲೆ ಫಸಲನ್ನು ಕಟಾವು ಮಾಡಿ ಜಮೀನಿನಲ್ಲಿ ಇಟ್ಟಿದ್ದರು. ಆದರೆ ದುಷ್ಕರ್ಮಿಗಳು ಕಟಾವು ಮಾಡಿಟ್ಟಿದ್ದ ಕಡಲೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಒಟ್ಟು ಸುಮಾರು ರೂ. 1.50 ಲಕ್ಷ ಹಾನಿಯಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ಪರಿಸ್ಥಿತಿಯಿಂದ ರೈತ ಮಹಿಳೆ ಸಾಯವ್ವ ಕಂಗಾಲಾಗಿದ್ದಾರೆ. ಬಬಲೇಶ್ವರ ಪೆÇಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ : ಕಡಲೆ ರಾಶಿಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿ – ಕಂಗಾಲದ ರೈತ

  • ಧಾರವಾಡದಲ್ಲಿ ಏ. 30ರವರೆಗೆ ಕಡಲೆ ಖರೀದಿಗೆ ನೋಂದಣಿ – ಮೇ 12ರವರೆಗೆ ಖರೀದಿ ಪ್ರಕ್ರಿಯೆ

    ಧಾರವಾಡದಲ್ಲಿ ಏ. 30ರವರೆಗೆ ಕಡಲೆ ಖರೀದಿಗೆ ನೋಂದಣಿ – ಮೇ 12ರವರೆಗೆ ಖರೀದಿ ಪ್ರಕ್ರಿಯೆ

    ಧಾರವಾಡ: ಹಿಂಗಾರು ಹಂಗಾಮಿನಲ್ಲಿ ಬೆಳೆದ ಕಡಲೆಯನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆಯ ಯೋಜನೆ ಅಡಿ ಜಿಲ್ಲೆಯ 13 ಖರೀದಿ ಕೇಂದ್ರಗಳಲ್ಲಿ ಏಪ್ರಿಲ್ 30ರವರೆಗೆ ರೈತರಿಂದ ನೋಂದಾಯಿಸಿ ಕೊಂಡು, ಮೇ 12ರವರೆಗೆ ಖರೀದಿ ಪ್ರಕ್ರಿಯೆ ನಡೆಸಲಾವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ.

    ಧಾರವಾಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕಡಲೆ ಖರೀದಿ ಕುರಿತು ರೈತ ಮುಖಂಡರು ಹಾಗೂ ಕೃಷಿ ಉತ್ಪನ್ನ ಮಾರಾಟ ಇಲಾಖೆ ಅಧಿಕಾರಿಗಳ ಸಭೆಯನ್ನು ನಡೆಸಲಾಯಿತು. ಈ ವೇಳೆ ಮಾತನಾಡಿದ ಡಿಸಿ ದೀಪಾ ಚೋಳನ್ ಅವರು, ಹಿಂಗಾರು ಹಂಗಾಮಿನ ಕಡಲೆ ಕಾಳು ಉತ್ಪನ್ನವನ್ನು ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆಯ ಯೋಜನೆ ಅಡಿ ಖರೀದಿಸಿಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯನ್ನು ಏಜೇನ್ಸಿಯಾಗಿ ಗುರುತಿಸಲಾಗಿದೆ. ಎಫ್.ಎ.ಕ್ಯೂ ಗುಣಮಟ್ಟದ ಕಡಲೆ ಕಾಳು ಉತ್ಪನ್ನಕ್ಕೆ ಪ್ರತಿ ಕ್ವಿಂಟಲಿಗೆ 4,875 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಹುಬ್ಬಳ್ಳಿ, ಧಾರವಾಡ ಎಪಿಎಂಸಿಯ ಮುಖ್ಯ ಮಾರುಕಟ್ಟೆ ಪ್ರಾಣಾಂಗಗಳು ಸೇರಿದಂತೆ ಜಿಲ್ಲೆಯ ಹುಬ್ಬಳ್ಳಿ, ಉಪ್ಪಿನಬೆಟಗೇರಿ, ನೂಲ್ವಿ, ಹೆಬಸೂರು, ಕುಂದಗೋಳ, ಯಲಿವಾಳ, ಯರಗುಪ್ಪಿ, ಅಣ್ಣಿಗೇರಿ, ನವಲಗುಂದ, ಮೊರಬ ಹಾಗೂ ತಿರ್ಲಾಪುರ ಗ್ರಾಮಗಳಲ್ಲಿ ಆರಂಭಿಸಿರುವ 13 ಸ್ಥಳಗಳಲ್ಲಿ ಖರೀದಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ರೈತರ ನೋಂದಣಿಗೆ ಏಪ್ರಿಲ್ 30ರವರೆಗೆ ಅವಕಾಶವಿದೆ. ಮೇ 12ರವರೆಗೆ ಖರೀದಿ ಪ್ರಕ್ರಿಯೆ ನಡೆಸಲಾಗುವುದು. ರಾಜ್ಯ ಮತ್ತು ಕೇಂದ್ರ ಉಗ್ರಾಣ ನಿಗಮಗಳಿಗೆ ಈ ಪ್ರಕ್ರಿಯೆಗೆ ಸಹಕಾರ ನೀಡಲು ತಿಳಿಸಲಾಗುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

    ಗೋವಿನಜೋಳ ಖರೀದಿಗೆ ಮಾಜಿ ಶಾಸಕ ಕೊನರಡ್ಡಿ ಆಗ್ರಹ:
    ಕಡಲೆ ಖರೀದಿ ಕೇಂದ್ರ ಬಂದ್ ಮಾಡಬಾರದಿತ್ತು, ರೈತರು ಗೋವಿನಜೋಳ ಮನೆಯಲ್ಲಿಟ್ಟುಕೊಂಡು ಕುಳಿತಿದ್ದಾರೆ. ಮೊನ್ನೆ ಕೃಷಿ ಸಚಿವರು ಗೋವಿನಜೋಳ ಖರೀದಿ ಕೇಂದ್ರ ಆರಂಭಿಸ್ತೇವೆ ಅಂದಿದ್ದರು. ಆದರೆ ಇನ್ನೂ ಆರಂಭವಾಗಿಲ್ಲ ಎಂದು ಮಾಜಿ ಶಾಸಕ ಎನ್.ಎಚ್ ಕೋನರೆಡ್ಡಿ ಹೇಳಿದರು.

    ಧಾರವಾಡದಲ್ಲಿ ಮಾತನಾಡಿದ ಅವರು, ಸರ್ಕಾರ ಎರಡ್ಮೂರು ತಿಂಗಳ ರೇಷನ್ ಮುಂಚಿತ ಕೊಡ್ತೇವಿ ಎಂದಿದೆ. ಆದರೆ ಅಧಿಕಾರಿಗಳು ಬೆರಳಚ್ಚು ಕೇಳುತ್ತಲೇ ಇದ್ದಾರೆ. ಸರ್ಕಾರದ ನಿಯಮ ಸರಿಯಾಗಿ ಜಾರಿಯಾಗಬೇಕು ಎಂದು ಮನವಿ ಮಾಡಿದರು. ಹಾಗೆಯೇ ರೈತರ ಉತ್ಪನ್ನ ತರಲು ತೊಂದರೆ ಕೊಡಬಾರದು. ಕೃಷಿ ಚಟುವಟಿಕೆಗಳಿಗೆ ತೊಂದರೆ ಮಾಡಬಾರದು ಎಂದು ಡಿಸಿಗೆ ಕೇಳಿದ್ದೇವೆ, ಜೊತೆಗೆ ಸಿಎಂ ಪರಿಹಾರ ನಿಧಿಗೆ 50 ಸಾವಿರ ನೀಡಿದ್ದೇವೆ ಎಂದರು.