Tag: chicken shop

  • ಚಿಕನ್ ಮಾರಾಟ ಮಾಡ್ತಿದ್ದ ಮಹಿಳೆ ಸಾವು- ಗ್ರಾಹಕರಲ್ಲಿ ಕೊರೊನಾ ಆತಂಕ

    ಚಿಕನ್ ಮಾರಾಟ ಮಾಡ್ತಿದ್ದ ಮಹಿಳೆ ಸಾವು- ಗ್ರಾಹಕರಲ್ಲಿ ಕೊರೊನಾ ಆತಂಕ

    ಬೆಳಗಾವಿ/ಚಿಕ್ಕೋಡಿ: ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಆತಂಕ ಸೃಷ್ಟಿಸುತ್ತಿದೆ. ಆದರೆ ಈಗ ಚಿಕನ್ ತಿಂದವರಿಗೆ ಕೊರೊನಾ ಭೀತಿ ಶುರುವಾಗಿರುವ ಘಟನೆ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

    ಚಿಕನ್ ಮಾರಾಟ ಮಾಡುತ್ತಿದ್ದ ಕುಟುಂಬದ 58 ವರ್ಷದ ಮಹಿಳೆ ಸಾವನ್ನಪ್ಪಿದ್ದು ಕೊರೊನಾ ಆತಂಕಕ್ಕೆ ಕಾರಣವಾಗಿದೆ. ಹುಕ್ಕೇರಿ ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿ ಅಂಗಡಿ ಹೊಂದಿದ್ದ ಕುಟುಂಬದವರು ಚಿಕನ್ ವ್ಯಾಪಾರವನ್ನ ಭರ್ಜರಿಯಾಗಿ ಮಾಡುತ್ತಿದ್ದರು.

    ಮನೆ ಜೊತೆಗೆ ಅಂಗಡಿ ಇಟ್ಟು ಚಿಕನ್ ಮಾರಾಟ ಮಾಡುತ್ತಿದ್ದ ಕುಟುಂಬದ ಮಹಿಳೆ ಗುರುವಾರ ತೀವ್ರ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದರು. ಸಾವಿನ ನಂತರ ಮಹಿಳೆಯ ಸ್ವಾಬ್ ಪರೀಕ್ಷಿಸಿದಾಗ ಮಹಿಳೆಗೆ ಕೊರೊನಾ ಇರುವುದು ಖಚಿತವಾಗಿದೆ. ಕುಟುಂಬದವರು ಮಹಿಳೆಯ ಅಂತ್ಯ ಸಂಸ್ಕಾರವನ್ನ ಬೆಳಗಾವಿಯಲ್ಲಿಯೇ ಮಾಕುಟುಂಬದವರುದ್ದಾರೆ.

    ಮಹಿಳೆ ಸಾವು ಹಿನ್ನೆಲೆಯಲ್ಲಿ ಮಹಿಳೆಯ ಕುಟುಂಬದ ಅಂಗಡಿಯಲ್ಲಿ ಚಿಕನ್ ತಿಂದ ಗ್ರಾಹಕದಲ್ಲಿ ಆತಂಕ ಮನೆ ಮಾಡಿದೆ. ಅಲ್ಲದೆ ಮಹಿಳೆಯನ್ನ ಪರೀಕ್ಷಿಸಿದ ಸಂಕೇಶ್ವರ ಪಟ್ಟಣದ ಖಾಸಗಿ ವೈದ್ಯ ಹಾಗೂ ಮಹಿಳೆಯ ಕುಟುಂಬಸ್ಥರನ್ನ ಕ್ವಾರಂಟೈನ್ ಮಾಡಲಾಗಿದೆ. ಮಹಿಳೆ ವಾಸವಿದ್ದ ಹುಕ್ಕೇರಿ ಪಟ್ಟಣದ ಏರಿಯಾವನ್ನ ಪೊಲೀಸರು ಹಾಗೂ ಪುರಸಭೆ ಅಧಿಕಾರಿಗಳು ಸೀಲ್‍ಡೌನ್ ಮಾಡಿದ್ದಾರೆ.

  • ಹಣ ಹಂಚಿಕೊಳ್ಳುವ ವಿಚಾರದಲ್ಲಿ ಆರಂಭವಾದ ಜಗಳ, ಕೊಲೆಯಲ್ಲಿ ಅಂತ್ಯ

    ಹಣ ಹಂಚಿಕೊಳ್ಳುವ ವಿಚಾರದಲ್ಲಿ ಆರಂಭವಾದ ಜಗಳ, ಕೊಲೆಯಲ್ಲಿ ಅಂತ್ಯ

    ಬೆಂಗಳೂರು: ರಂಜಾನ್ ದಿನವೇ ಚಿಕನ್ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬ ಬರ್ಬರವಾಗಿ ಕೊಲೆಯಾದ ಘಟನೆ ನಗರದಲ್ಲಿ ನಡೆದಿದೆ.

    ಪಾದರಾಯನಪುರದ ಸಿಬ್ಗತ್ (35) ಕೊಲೆಯಾದ ದುರ್ದೈವಿ. ಪಾದರಾಯನಪುರದ ನ್ಯಾಷನಲ್ ಚಿಕನ್ ಅಂಗಡಿಯಲ್ಲಿ ಘಟನೆ ನಡೆದಿದ್ದು, ಬುಡೇನ್, ಸಾಧಿಕ್, ಬೇಬಿ ಹಾಗೂ ಮುಬಾರಕ್ ಮೇಲೆ ಕೊಲೆ ಆರೋಪ ಕೇಳಿ ಬಂದಿದೆ.

    ರಂಜಾನ್ ಹಬ್ಬದ ನಿಮಿತ್ತ ಮಾಸದ ವ್ಯಾಪಾರ ಜೋರಾಗಿ ನಡೆದಿತ್ತು. ಹೀಗಾಗಿ ಸಿಬ್ಗತ್, ಬುಡೇನ್, ಸಾಧಿಕ್, ಬೇಬಿ ಹಾಗೂ ಮುಬಾರಕ್ ನ್ಯಾಷನಲ್ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡಿದ್ದಾರೆ. ಮದ್ಯದ ಮತ್ತಿನಲ್ಲಿದ್ದ ನಾಲ್ವರು ಹಣ ಹಂಚಿಕೊಳ್ಳುತ್ತಿದ್ದಾಗ ಮಾತಿಗೆ ಮಾತು ಬೆಳೆದು, ಜಗಳ ತಾರಕಕ್ಕೇರಿದೆ. ಈ ವೇಳೆ ಆಕಸ್ಮಿಕವಾಗಿ ಸಿಬ್ಗತ್ ಹೊಟ್ಟೆಗೆ ಚಾಕು ತಗುಲಿ, ಗಂಭೀರವಾಗಿ ಗಾಯಗೊಂಡಿದ್ದಾನೆ.

    ಚಾಕು ಹರಿತವಾಗಿದ್ದರಿಂದ ಸಿಬ್ಗತ್ ಹೊಟ್ಟೆಯಿಂದ ಕರಳು ಹೊರಗೆ ಬಂದಿವೆ. ಇದನ್ನು ನೋಡಿ ಗಾಬರಿಗೊಂಡ ಉಳಿದ ನಾಲ್ವರು ತಕ್ಷಣವೇ ಸಿಬ್ಗತ್‍ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅತಿಯಾದ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಿಬ್ಗತ್ ಸಾವನ್ನಪ್ಪಿದ್ದಾನೆ.

    ಜೆಜೆ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಕಣ್ಣಿಗೆ ಖಾರದ ಪುಡಿ ಎರಚಿ, ಕೈಕಾಲು ಕಟ್ಟಿ 50 ಸಾವಿರ ರೂ. ದರೋಡೆ ಮಾಡಿದ್ರು!

    ಕಣ್ಣಿಗೆ ಖಾರದ ಪುಡಿ ಎರಚಿ, ಕೈಕಾಲು ಕಟ್ಟಿ 50 ಸಾವಿರ ರೂ. ದರೋಡೆ ಮಾಡಿದ್ರು!

    ಉಡುಪಿ: ಗ್ರಾಹಕರ ಸೋಗಿನಲ್ಲಿ ಬಂದ ದರೋಡೆಕೋರರು ಕೋಳಿ ಅಂಗಡಿ ಮಾಲೀಕನಿಗೆ ಖಾರದಪುಡಿ ಎರಚಿ ದರೋಡೆ ಮಾಡಿದ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ.

    ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66, ಸಾಲಿಗ್ರಾಮದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ. ಗ್ರೇಶನ್ ಲೋಬೊ ಮಾಲೀಕತ್ವದ `ಲೋಬೊ ಚಿಕನ್ ಸೆಂಟರ್’ಗೆ ಬಂದ ದರೋಡೆಕೋರರು ಗ್ರೇಶನ್ ಲೋಬೊ ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿ ಬಳಿಕ ಅವರ ಕೈಗಳನ್ನು ಹಗ್ಗದಿಂದ ಕಟ್ಟಿಹಾಕಿ ಸುಮಾರು 50 ಸಾವಿರ ರೂ. ನಗದನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.

    ಗ್ರೇಶನ್ ಸಹೋದರ ಕೋಳಿಯ ತ್ಯಾಜ್ಯವನ್ನು ಹೊರಗಡೆ ಹಾಕಲು ಹೋಗಿದ್ದು, ವಾಪಾಸು ಬಂದು ನೋಡುವಾಗ ಅಣ್ಣ ಗ್ರೇಶನ್ ಲೋಬೊ ನೆಲದಲ್ಲಿ ಬಿದ್ದಿದ್ದರು. ಕೂಡಲೇ ಸಹಾಯಕ್ಕಾಗಿ ಸ್ಥಳೀಯರನ್ನು ಕೂಗಿದರು. ಬಳಿಕ ಆಂಬುಲೆನ್ಸ್ ಮೂಲಕ ಗ್ರೇಶನ್ ಅವರನ್ನು ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಗ್ರೇಶನ್ ಅವರಿಗೆ ಪ್ರಜ್ಞೆ ಬಂದ ಬಳಿಕವಷ್ಟೇ ಎಷ್ಟು ಮಂದಿ ದರೋಡೆಕೋರರು ಇದ್ದರು ಎನ್ನುವ ಸ್ಪಷ್ಟ ಮಾಹಿತಿ ಲಭಿಸಬೇಕಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಎರಡು ಮಂದಿ ಕತ್ತಲಿನಲ್ಲಿ ಓಡಿ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.

    ಸ್ಥಳಕ್ಕೆ ಬ್ರಹ್ಮಾವರ ಸರ್ಕಲ್ ಹಾಗೂ ಕೋಟ ಪಿಎಸ್‍ಐ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.