Tag: Chicken Roast

  • ಭಾನುವಾರದ ಬಾಡೂಟಕ್ಕೆ ಮಾಡಿ ಚಿಕನ್ ರೋಸ್ಟ್

    ಭಾನುವಾರದ ಬಾಡೂಟಕ್ಕೆ ಮಾಡಿ ಚಿಕನ್ ರೋಸ್ಟ್

    ಇಂದು ಮಾಂಸ ಪ್ರಿಯರಿಗೆ ರುಚಿಯಾದ ಖಾರವಾದ ಮಾಂಸಹಾರದ ಊಟ ಮಾಡಬೇಕು ಎಂದು ನಾಲಿಗೆ ಬಯಸುತ್ತದೆ. ಹೀಗಾಗಿ ನೀವು ಇಂದು ಮನೆಯಲ್ಲಿ ಚಿಕನ್ ರೋಸ್ಟ್ ಮಾಡಲು ಒಮ್ಮೆ ಟ್ರೈ ಮಾಡಿ. ಇದನ್ನೂ ಓದಿ:  ಮನೆಯಲ್ಲಿ ಮಾಡಿ ಘಮಘಮಿಸುವ ಪಾಲಕ್ ಚಿಕನ್ ಕರಿ

    ಬೇಕಾಗುವ ಸಾಮಗ್ರಿಗಳು:
    * ಚಿಕನ್ – 1ಕೆಜಿ
    * ಮೆಣಸಿನ ಪುಡಿ – 1 ಟೀ ಸ್ಪೂನ್
    * ಗರಂ ಮಸಾಲ – 1 ಟೀ ಸ್ಪೂನ್
    * ಅರಿಶಿಣ – 2 ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
    * ಕೊತ್ತಂಬರಿ ಸೊಪ್ಪು
    * ಪುದೀನ ಸೊಪ್ಪು
    * ಅಡುಗೆ ಎಣ್ಣೆ- 1 ಕಪ್


    ಮಾಡುವ ವಿಧಾನ:

    * ಶುಭ್ರವಾಗಿ ತೊಳೆದ ಚಿಕನ್ ಅನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಮೆಣಸಿನಪುಡಿ, ಗರಂ ಮಸಾಲ, ಅರಿಶಿನ ಪುಡಿ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಕೊತ್ತಂಬರಿ ಮತ್ತು ಪುದೀನ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಒಂದು ಗಂಟೆ ನೆನೆಸಿಡಿ.

    * ಒಂದು ಗಂಟೆಯ ನಂತರ ಪ್ಯಾನ್‍ಗೆಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದಾಗ ನೆನೆಸಿದ ಚಿಕನ್ ಅನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಪ್ರೈ ಮಾಡಬೇಕು.

    * ಚಿಕನ್ ಎಣ್ಣೆಯಲ್ಲೆ ಸಂಪೂರ್ಣವಾಗಿ ಬೇಯಬೇಕು, ನೀರನ್ನು ಹಾಕುವಂತಿಲ್ಲ.
    * ಚಿಕನ್ ಚೆನ್ನಾಗಿ ಬೆಂದ ನಂತರ ಗ್ಯಾಸ್ ಆಫ್ ಮಾಡಿ 5 ನಿಮಿಷ ಬಿಡಿ.

    * ಈಗ ರುಚಿಯಾದ ಚಿಕನ್ ರೋಸ್ಟ್ ಸವಿಯಲು ಸಿದ್ಧವಾಗುತ್ತದೆ.