Tag: Chicken Oats Soup

  • ಚುಮುಚುಮು ಚಳಿಗೆ ಬಿಸಿಬಿಸಿಯಾಗಿ ಮಾಡಿ ಸವಿಯಿರಿ ಚಿಕನ್ ಓಟ್ಸ್ ಸೂಪ್

    ಚುಮುಚುಮು ಚಳಿಗೆ ಬಿಸಿಬಿಸಿಯಾಗಿ ಮಾಡಿ ಸವಿಯಿರಿ ಚಿಕನ್ ಓಟ್ಸ್ ಸೂಪ್

    ಣ್ಣಗಿನ ವಾತಾವರಣಕ್ಕೆ ಬೆಚ್ಚಗಿರಲು ಏನಾದರೂ ಹೊಸದಾಗಿ ಬಿಸಿಬಿಸಿಯಾಗಿ ಮಾಡಿ ಸವಿಯಬೇಕು ಎಂದೆನಿಸಿದರೆ ಒಮ್ಮೆ ಚಿಕನ್ ಓಟ್ಸ್ ಸೂಪ್ (Chicken Oats Soup) ಮಾಡಿ ಸವಿಯಿರಿ. ದೇಹದ ತೂಕ ಕಳೆದುಕೊಳ್ಳಬೇಕೆಂದಿದ್ದರೆ ಕೂಡಾ ಈ ರೆಸಿಪಿ ನಿಮಗೆ ತುಂಬಾ ಸಹಾಯ ಮಾಡಬಹುದು. ನೀವು ಕೂಡಾ ಚಿಕನ್ ಓಟ್ಸ್ ಸೂಪ್ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಓಟ್ಸ್ – 1 ಕಪ್
    ಎಣ್ಣೆ – 1 ಟೀಸ್ಪೂನ್
    ಹೆಚ್ಚಿದ ಈರುಳ್ಳಿ – 1
    ಹೆಚ್ಚಿದ ಕ್ಯಾರೆಟ್ – 3
    ಹೆಚ್ಚಿದ ಬೆಳ್ಳುಳ್ಳಿ – 2
    ಚಿಕನ್ ಬ್ರೆಸ್ಟ್ – 2
    ಕರಿಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಚಿಕನ್ ಸ್ಟಾಕ್ – 7 ಕಪ್
    ಕೊತ್ತಂಬರಿ ಸೊಪ್ಪು – ಕಾಲು ಕಪ್
    ಕರಿಬೇವಿ ಎಲೆ – 2
    ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಹಬೆಯಲ್ಲಿ ಬೇಯಿಸಿ ಕಬಾಬ್ ಮಾಡಿ ನೋಡಿ – ಸಖತ್ ಟೇಸ್ಟಿ ಆಗಿರುತ್ತೆ

    ಮಾಡುವ ವಿಧಾನ:
    * ಮೊದಲಿಗೆ ಒಂದು ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಈರುಳ್ಳಿ, ಕ್ಯಾರೆಟ್ ಹಾಕಿ 3-4 ನಿಮಿಷ ಫ್ರೈ ಮಾಡಿ.
    * ಈರುಳ್ಳಿ ತಿಳಿ ಗೋಲ್ಡನ್ ಬ್ರೌನ್ ಬಣ್ಣಬಂದ ಬಳಿಕ ಬೆಳ್ಳುಳ್ಳಿ ಸೇರಿಸಿ 1 ನಿಮಿಷ ಹುರಿಯಿರಿ.
    * ಈಗ ಚಿಕನ್ ಬ್ರೆಸ್ಟ್ ಹಾಗೂ ಕರಿಮೆಣಸಿನ ಪುಡಿ ಹಾಕಿ 5 ನಿಮಿಷ ಬೇಯಿಸಿ.
    * ಈಗ ಚಿಕನ್ ಸ್ಟಾಕ್, ಕರಿಬೇವಿನ ಎಲೆ, ಉಪ್ಪು ಹಾಗೂ ಓಟ್ಸ್ ಸೇರಿಸಿ, ಕಡಿಮೆ ಉರಿಯಲ್ಲಿ ಸುಮಾರು 20-25 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ.
    * ಬಳಿಕ ಕರಿಬೇವಿನ ಎಲೆಗಳನ್ನು ತೆಗೆದುಹಾಕಿ, ಚಿಕನ್ ಬ್ರೆಸ್ಟ್ ಅನ್ನು ಸೂಪ್‌ನಿಂದ ನಿಧಾನಕ್ಕೆ ತೆಗೆದು, ಫೋರ್ಕ್ ಸಹಾಯದಿಂದ ಚೂರುಗಳನ್ನಾಗಿ ಮಾಡಿ.
    * ಚಿಕನ್ ಚೂರುಮಾಡಿದ ಬಳಿಕ ವಾಪಾಸ್ ಸೂಪ್‌ಗೆ ಸೇರಿಸಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ.
    * ಇದೀಗ ಚಿಕನ್ ಓಟ್ಸ್ ಸೂಪ್ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಫಟಾಫಟ್ ಅಂತ ಮಾಡಬಹುದಾದ ಚಿಕನ್ ನೂಡಲ್ ಸೂಪ್ ರೆಸಿಪಿ

    Live Tv
    [brid partner=56869869 player=32851 video=960834 autoplay=true]