Tag: Chicken Kurma

  • ನೀವು ಮನೆಯಲ್ಲೇ ಮಾಡಿ ಚಿಕನ್ ಕುರ್ಮ

    ನೀವು ಮನೆಯಲ್ಲೇ ಮಾಡಿ ಚಿಕನ್ ಕುರ್ಮ

    ಚಿಕನ್ ಎಂದರೆ ಮಾಂಸ ಪ್ರಿಯರಿಗೆ ಬಾಯಲ್ಲಿ ನೀರುಬರುತ್ತದೆ. ವೀಕೆಂಡ್‍ನಲ್ಲಿ ಮಾಂಸದ ಊಟ ಮಾಡದೇ ಇರಲು ಸಾಧ್ಯವಿಲ್ಲ. ಹೀಗಾಗಿ  ನೀವು ಹೋಟೆಲ್ ರುಚಿಕೊಡುವ ಚಿಕನ್ ಕುರ್ಮವನ್ನು ಮನೆಯಲ್ಲಿಯೇ ಮಾಡುವ ವಿಧಾನ ಇಲ್ಲಿದೆ..

    ಬೇಕಾಗುವ ಸಾಮಗ್ರಿಗಳು:
    * ಚಿಕನ್- ಒಂದು ಕೆ.ಜಿ
    * ಈರುಳ್ಳಿ- 4 ರಿಂದ 5
    * ಎಣ್ಣೆ- 1ಕಪ್
    * ಗೋಡಂಬಿ 5
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್
    * ಏಲಕ್ಕಿ -4 ರಿಂದ 5
    * ಕೊತ್ತಂಬರಿ ಪುಡಿ – 2 ಟೀ ಸ್ಪೂನ್
    * ಕಾಳು ಮೆಣಸು – 4 ಕಾಳು
    * ಒಂದು ಇಂಚಿನ ಚಕ್ಕೆ
    * ಟೋಮ್ಯಾಟೋ- 2
    * ಜೀರಿಗೆ ಪುಡಿ- 1 ಟೀ ಸ್ಪೂನ್
    * ಒಣ ಮೆಣಸು- 3 ರಿಂದ4
    * ರುಚಿಗೆ ತಕ್ಕಷ್ಟುಉಪ್ಪು
    * ಖಾರದ ಪುಡಿ- 1 ಟೀ ಸ್ಪೂನ್
    * ಲವಂಗದ ಎಲೆ-2
    * ಮೊಸರು- 1 ಕಪ್
    * ಕೊತ್ತಂಬರಿ ಸೊಪ್ಪು ಇದನ್ನೂ ಓದಿ: ಮನೆಯಲ್ಲಿ ಮಾಡಿ ಹಲಸಿನ ಹಣ್ಣಿನ ಇಡ್ಲಿ

    ಮಾಡುವ ವಿಧಾನ:
    * ಮೊದಲು ಚಿಕನ್‍ಗೆ ನೀರು ಹಾಕಿ ಚೆನ್ನಾಗಿ ತೊಳೆದು ಸ್ವಲ್ಪ ಉಪ್ಪು ಮತ್ತು ಅರಿಶಿಣದೊಂದಿಗೆ ಕಲಸಿಟ್ಟಿರಬೇಕು.

    * ನಂತರ ಈರುಳ್ಳಿ, ಟೊಮ್ಯಾಟೋವನ್ನು ಕತ್ತರಿಸಿಕೊಳ್ಳಿ. ಆ ಬಳಿಕ 20 ಗೋಡಂಬಿ ಮೊಸರಿನೊಂದಿಗೆ ಸೇರಿಸಿ ಪಕ್ಕಕ್ಕೆ ಇಟ್ಟುಕೊಳ್ಳಿ.

    * ಗ್ಯಾಸ್ ಮೇಲೆ ಒಂದು ಪಾತ್ರೆಯನ್ನಿಟ್ಟು ಅದಕ್ಕೆ ಒಂದು ಕಪ್ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಕತ್ತರಿಸಿಕೊಂಡ ಈರಳ್ಳಿಯನ್ನು ಹಾಕಿ ಕಂದು ಬಣ್ಣ ಆಗುವವರೆಗೂ ಫ್ರೈ ಮಾಡಿ.

    * ಈರುಳ್ಳಿ ಕಂದು ಬಣ್ಣ ಬಂದ ನಂತರ ಅದನ್ನು ಎಣ್ಣೆಯಿಂದ ಹೊರಗೆ ತೆಗೆಯಿರಿ. ಅದೆ ಎಣ್ಣೆಗೆ ಲವಂಗ ಎಲೆ, ಏಲಕ್ಕಿ, ಚಕ್ಕೆ, ಒಣ ಮೆಣಸು, ಕಾಳು ಮೆಣಸು ಜೀರಿಗೆ ಸೇರಿಸಿ ಫ್ರೈ ಮಾಡಿ. ಸ್ವಲ್ಪ ಈರುಳ್ಳಿ, ಒಣ ಮೆಣಸು, ಟೋಮ್ಯಾಟೋ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ. ಹಾಕಿ. ಇದಕ್ಕೆ ಕೊತ್ತಂಬರಿ ಪುಡಿ ಸೇರಿದಂತೆ ತಿಳಿಸಿದ ಎಲ್ಲ ಮಸಾಲೆಗಳನ್ನು ಹಾಕಬೇಕು.

    * ಮಾಂಸ ಬೇಯುವಾಗ ಅದಕ್ಕೆ ಮೊಸರು, ಗೋಡಂಬಿಯನ್ನು ನಿಧಾನವಾಗಿ ಸೇರಿಸಿ 3 ರಿಂದ 4 ನಿಮಿಷ ಹಾಗೆ ಬಿಡಿ. ಆಮೇಲೆ ಫ್ರೈ ಮಾಡಿಕೊಂಡ ಈರುಳ್ಳಿಯನ್ನು ಹಾಕಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಚಿಕನ್ ಕುರ್ಮಾ ಅವಿಯಲು ಸಿದ್ಧವಾಗುತ್ತದೆ.