Tag: Chicken Keema Pakoda

  • ರುಚಿರುಚಿಯಾಗಿ ತಯಾರಿಸಿ ಚಿಕನ್ ಕೀಮಾ ಪಕೋಡಾ

    ರುಚಿರುಚಿಯಾಗಿ ತಯಾರಿಸಿ ಚಿಕನ್ ಕೀಮಾ ಪಕೋಡಾ

    ಚಿಕನ್ ಎಂದರೆ ನಾನ್‌ವೆಜ್ ಪ್ರಿಯರಿಗೆ ಪಂಚಪ್ರಾಣ. ಆದರೆ ಅದನ್ನು ವಿಧವಿಧವಾಗಿ ತಯಾರಿಸುವುದು ಎಲ್ಲರಿಗೂ ಸವಾಲು. ನಾವಿಂದು ಚಿಕನ್ ಕೀಮಾ ಪಕೋಡಾ ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ರುಚಿರುಚಿಯಾಗಿ ಇದನ್ನು ಒಮ್ಮೆ ನೀವು ಕೂಡಾ ಮನೆಯಲ್ಲಿ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಮೂಳೆಗಳಿಲ್ಲದ ಚಿಕನ್ ಕೀಮಾ – 250 ಗ್ರಾಂ
    ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಶುಂಠಿ ಪೇಸ್ಟ್ – 1 ಟೀಸ್ಪೂನ್
    ಕರಿಮೆಣಸಿನ ಪುಡಿ – ಕಾಲು ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – ಕಾಲು ಟೀಸ್ಪೂನ್
    ಉಪ್ಪು – ಕಾಲು ಟೀಸ್ಪೂನ್
    ಗರಂ ಮಸಾಲೆ – ಅರ್ಧ ಟೀಸ್ಪೂನ್
    ಕೊತ್ತಂಬರಿ ಪುಡಿ – 1 ಟೀಸ್ಪೂನ್
    ನಿಂಬೆ ರಸ – 2 ಟೀಸ್ಪೂನ್
    ಕಡಲೆ ಹಿಟ್ಟು – 2 ಟೀಸ್ಪೂನ್
    ಮೈದಾ ಹಿಟ್ಟು – 2 ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಉಪ್ಪು – ಕಾಲು ಟೀಸ್ಪೂನ್
    ಎಣ್ಣೆ – ಡೀಪ್ ಫ್ರೈಗೆ ಬೇಕಾಗುವಷ್ಟು ಇದನ್ನೂ ಓದಿ: ಸಖತ್ ಟೇಸ್ಟಿಯಾದ ಚಿಕನ್ ಗೀ ರೋಸ್ಟ್ ಮಾಡಿ ನೋಡಿದ್ದೀರಾ?

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ಚಿಕನ್ ಅನ್ನು ತೆಗೆದುಕೊಂಡು, ಅದಕ್ಕೆ ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಕರಿಮೆಣಸಿನ ಪುಡಿ, ಕೆಂಪು ಮೆಣಸಿನ ಪುಡಿ, ಉಪ್ಪು, ಗರಂ ಮಸಾಲೆ, ಕೊತ್ತಂಬರಿ ಪುಡಿ, ನಿಂಬೆ ರಸ ಹಾಕಿ ಮಿಶ್ರಣ ಮಾಡಿ.
    * ಈಗ ಚಿಕನ್ ಮಿಶ್ರಣಕ್ಕೆ 1 ಗಂಟೆ ವಿಶ್ರಾಂತಿ ನೀಡಿ.
    * ಈ ನಡುವೆ ಇನ್ನೊಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಮೈದಾ ಹಿಟ್ಟು, ಕೆಂಪು ಮೆಣಸಿನ ಪುಡಿ ಹಾಗೂ ಉಪ್ಪು ಹಾಕಿ, ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಪಕ್ಕಕ್ಕಿಡಿ.

    * 1 ಗಂಟೆಯ ಬಳಿಕ ಚಿಕನ್ ಮಿಶ್ರಣವನ್ನು ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಡೀಪ್ ಫ್ರೈಗೆ ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ.
    * ಚಿಕನ್ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು, ಹಿಟ್ಟಿನ ಮಿಶ್ರಣದಲ್ಲಿ ಅದ್ದಿ, ಎಣ್ಣೆಯಲ್ಲಿ ಬಿಟ್ಟು ಕರಿಯಿರಿ.
    * ಚಿಕನ್ ಚೆನ್ನಾಗಿ ಬೆಂದು, ಪಕೋಡಾ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಎಣ್ಣೆಯಿಂದ ತೆಗೆದು ಟಿಶ್ಯು ಪೇಪರ್ ಮೇಲೆ ಹರಡಿ.
    * ಇದೀಗ ಚಿಕನ್ ಕೀಮಾ ಪಕೋಡಾ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಚಹಾದೊಂದಿಗೆ ಮಾಡಿ ಸವಿಯಿರಿ ರುಚಿರುಚಿಯಾದ ಗೆಣಸಿನ ಕಟ್ಲೆಟ್

    Live Tv

    [brid partner=56869869 player=32851 video=960834 autoplay=true]