Tag: Chicken Keema Biryani

  • ಚಿಕನ್ ಕೀಮಾ ಬಿರಿಯಾನಿ – ವಾವ್ ಎನ್ನದೇ ಇರೋಕಾಗಲ್ಲ

    ಚಿಕನ್ ಕೀಮಾ ಬಿರಿಯಾನಿ – ವಾವ್ ಎನ್ನದೇ ಇರೋಕಾಗಲ್ಲ

    ಬಿರಿಯಾನಿ ಎಲ್ಲೆಡೆ ಫೇಮಸ್. ಆದ್ರೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಲ್ಲಿ ಬಿರಿಯಾನಿ ಮಾಡಲಾಗುತ್ತದೆ. ಅಲ್ಲಲ್ಲಿನ ರುಚಿಗೆ ಅನುಸಾರವಾಗಿ ಮಸಾಲೆಗಳನ್ನು ಹೊಂದಿಸಲಾಗುತ್ತದೆ. ನಾವಿಂದು ಕೊಚ್ಚಿದ ಚಿಕನ್ ಬಳಸಿ ಬಿರಿಯಾನಿ ಹೇಗೆ ಮಾಡ್ಬೋದು ಎಂಬುದನ್ನು ಹೇಳಿಕೊಡುತ್ತೇವೆ. ಸರಳ ಮತ್ತು ತುಂಬಾ ಟೇಸ್ಟಿಯಾದ ಈ ಬಿರಿಯಾನಿಯನ್ನು ಸವಿದವರು ವಾವ್ ಎನ್ನದೇ ಇರೋಕೆ ಆಗಲ್ಲ. ಚಿಕನ್ ಕೀಮಾ ಬಿರಿಯಾನಿ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಬಿರಿಯಾನಿ ಮಸಾಲೆ ತಯಾರಿಸಲು:
    ಕಲ್ಪಸಿ (ಕಲ್ಲಿನ ಹೂವು) – 1 ಟೀಸ್ಪೂನ್
    ಸ್ಟಾರ್ ಅನೀಸ್ – ಅರ್ಧ
    ದಾಲ್ಚಿನ್ನಿ – ಅರ್ಧ ಇಂಚು
    ಏಲಕ್ಕಿ – 3
    ಲವಂಗ – 3
    ಹಸಿರು ಮೆಣಸಿನಕಾಯಿ – 10
    ಬೆಳ್ಳುಳ್ಳಿ – 15
    ಶುಂಠಿ – ಅರ್ಧ ಇಂಚು
    ನೀರು – ಅರ್ಧ ಕಪ್ (ರುಬ್ಬಲು)

    ಇತರ ಪದಾರ್ಥಗಳು:
    ಅಕ್ಕಿ – 2 ಕಪ್
    ಕಡಲೆಕಾಯಿ ಎಣ್ಣೆ – ಕಾಲು ಕಪ್
    ದಾಲ್ಚಿನ್ನಿ ಎಲೆ – 2
    ಹೆಚ್ಚಿದ ಈರುಳ್ಳಿ – 1 ಕಪ್
    ಉಪ್ಪು – 2 ಟೀಸ್ಪೂನ್
    ಹೆಚ್ಚಿದ ಟೊಮೆಟೋ – 2
    ಮೊಸರು – ಕಾಲು ಕಪ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – ಕಾಲು ಕಪ್
    ಹೆಚ್ಚಿದ ಪುದೀನ ಸೊಪ್ಪು – ಕಾಲು
    ಚಿಕನ್ ಕೀಮಾ – 500 ಗ್ರಾಂ
    ನೀರು – 4 ಕಪ್
    ನಿಂಬೆ ರಸ – ಅರ್ಧ ಇದನ್ನೂ ಓದಿ: ಈರುಳ್ಳಿ, ಟೊಮೆಟೋ ಯಾವ್ದೂ ಬೇಡ – ಹೀಗೆ ಮಾಡಿ ರುಚಿಕರ ಚಿಕನ್ ಫ್ರೈ

    ಮಾಡುವ ವಿಧಾನ:
    * ಮೊದಲಿಗೆ ಬಿರಿಯಾನಿ ಮಸಾಲೆ ಕೆಳಗೆ ನಮೂದಿಸಿದ ಎಲ್ಲಾ ಪದಾರ್ಥಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ನುಣ್ಣಗೆ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ರುಬ್ಬುವಾಗ ನೀರು ಸೇರಿಸಿ ತುಂಬಾ ನುಣ್ಣಗೆ ರುಬ್ಬಿಕೊಳ್ಳಿ.
    * ಅಕ್ಕಿಯನ್ನು ನೀರಿನಲ್ಲಿ ತೊಳೆದು ನೆನೆಸಿಡಿ.
    * ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮತ್ತು ದಾಲ್ಚಿನ್ನಿ ಎಲೆ ಸೇರಿಸಿ. ಈರುಳ್ಳಿಯನ್ನು ಸೇರಿಸಿ ಮೃದುವಾಗುವವರೆಗೆ ಹಾಗೂ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ.
    * ಮಸಾಲೆ ಪೇಸ್ಟ್ ಮತ್ತು ಉಪ್ಪು ಸೇರಿಸಿ, ಮಸಾಲೆ ಒಣಗುವವರೆಗೆ ಮತ್ತು ಎಣ್ಣೆ ಬೇರ್ಪಡುವವರೆಗೆ ಫ್ರೈ ಮಾಡಿ.
    * ಟೊಮೆಟೋ ಸೇರಿಸಿ, ಬೆಂದು ರಸ ಬಿಡುವವರೆಗೆ ಹುರಿಯಿರಿ.
    * ಬಳಿಕ ಮೊಸರು ಸೇರಿಸಿ 1-2 ನಿಮಿಷಗಳ ಕಾಲ ಫ್ರೈ ಮಾಡಿ.
    * ಈಗ ಪುದೀನ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಒಂದು ನಿಮಿಷ ಹುರಿಯಿರಿ.
    * ಬಳಿಕ ಕೊಚ್ಚಿದ ಚಿಕನ್ ಸೇರಿಸಿ 1-2 ನಿಮಿಷ ಬೇಯಿಸಿ.
    * ಈಗ ನೀರು ಸೇರಿಸಿ ಮಿಶ್ರಣವನ್ನು ಕುದಿಯಲು ಬಿಡಿ. ಕುದಿ ಬಂದ ನಂತರ ನೆನೆಸಿದ ಅಕ್ಕಿಯನ್ನು ಸೇರಿಸಿ ಚೆನ್ನಾಗಿ ಬೆರೆಸಿ.
    * ಬಳಿಕ ನಿಂಬೆ ರಸ ಸೇರಿಸಿ, ಪ್ಯಾನ್ ಅನ್ನು ಮುಚ್ಚಿ ಮತ್ತು 3-4 ನಿಮಿಷ ಕಾಲ ಹೆಚ್ಚಿನ ಉರಿಯಲ್ಲಿ ಬೇಯಿಸಿ.
    * ನಂತರ ಮುಚ್ಚಳವನ್ನು ತೆಗೆದು ಎಲ್ಲವನ್ನೂ ಒಮ್ಮೆ ಚೆನ್ನಾಗಿ ಮಿಶ್ರಣ ಮಾಡಿ.
    * ಪ್ಯಾನ್ ಅನ್ನು ಮುಚ್ಚಿ ಮಧ್ಯಮ ಉರಿಯಲ್ಲಿ 10 ನಿಮಿಷಗಳ ಕಾಲ ಬೇಯಿಸಿ.
    * ಮತ್ತೆ ಮಿಶ್ರಣ ಮಾಡಿ, ಮುಚ್ಚಿ ಮತ್ತು 1-2 ನಿಮಿಷ ಬೇಯಿಸಿ ಬಳಿಕ ಉರಿಯನ್ನು ಆಫ್ ಮಾಡಿ.
    * ಈಗ ಬಿರಿಯಾನಿ ಮುಚ್ಚಳ ತೆಗೆಯದೇ 20 ನಿಮಿಷ ಹಾಗೇ ಬಿಡಿ. ಈ ವೇಳೆ ಬಿರಿಯಾನಿ ಹಬೆಯಲ್ಲಿ ಬೇಯುತ್ತದೆ.
    * ಇದೀಗ ಚಿಕನ್ ಕೀಮಾ ಬಿರಿಯಾನಿ ತಯಾರಾಗಿದ್ದು, ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ರಾಜಸ್ಥಾನಿ ಲಾಲ್ ಮಾಸ್ ಮಾಡೋದು ಹೇಗೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]