Tag: chicken cutlet

  • ನೀವೂ ಮಾಡಿ ಚಿಕನ್ ಕಟ್ಲೆಟ್

    ನೀವೂ ಮಾಡಿ ಚಿಕನ್ ಕಟ್ಲೆಟ್

    ಹೋಟೆಲ್ ಆಹಾರಗಳನ್ನು ತಂದು ನಾಲಿಗೆ ಕೆಟ್ಟಿರಬಹುದು ಹೀಗಾಗಿ ನೀವು ಮನೆಯಲ್ಲಿಯೇ ರುಚಿಯಾಗಿ ಏನಾದರೂ ಮಾಡಬೇಕು ಎಂದು ಅಂದುಕೊಳ್ಳುತ್ತಿದ್ದೀರಾ? ಹಾಗಾದ್ರೆ ನೀವು ಇಂದು ಮನೆಯಲ್ಲಿ ಸರಳವಾಗಿ ರುಚಿಯಾ ಚಿಕನ್ ಕಟ್ಲೆಟ್ ಒಮ್ಮೆ ಮಾಡಿ ನೋಡಿ..

    ಬೇಕಾಗುವ ಸಾಮಗ್ರಿಗಳು:

    * ಕೋಳಿ ಮಾಂಸ_ 1 ಕೆಜಿ
    * ಬೇಯಿಸಿದ ಆಲೂಗಡ್ಡೆ- 2
    * ಈರುಳ್ಳಿ-2
    * ಬೆಳ್ಳುಳ್ಳಿ ಪೇಸ್ಟ್- 2 ಟೀ ಸ್ಪೂನ್
    * ಶುಂಠಿ ಪೇಸ್ಟ್- 1 ಟೀ ಸ್ಪೂನ್
    * ಕರಿಮೆಣಸಿನ ಪುಡಿ- 1 ಟೀ ಸ್ಪೂನ್
    * ಕೊತ್ತಂಬರಿ ಪುಡಿ
    * ಕೆಂಪು ಮೆಣಸು- 5 ರಿಂದ 6
    * ಚಾಟ್ ಮಸಾಲ- ಅರ್ಧ ಟೀ ಸ್ಪೂನ್
    * ಗರಂ ಮಸಾಲ ಪುಡಿ- 1 ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಇಂಗು
    * ಬ್ರೆಡ್ ಪೀಸ್‍ಗಳು- 4
    * ಮೊಟ್ಟೆ-2
    * ಕರಿಬೇವು
    * ಅಡುಗೆಎಣ್ಣೆ- 2 ಕಪ್
    * ಅರಿಶಿಣ-ಅರ್ಧ  ಟೀ ಸ್ಪೂನ್
    * ಚಿಕನ್ ಮಸಾಲ- 1 ಟೀ ಸ್ಪೂನ್
    * ದನಿಯಾ- ಅರ್ಧ ಟೀ ಸ್ಪೂನ್


    ಮಾಡುವ ವಿಧಾನ:
    * ಕುಕ್ಕರ್ ಪಾತ್ರೆಯಲ್ಲಿ ಮೊದಲೇ ಬೇಯಿಸಿಕೊಂಡ ಚಿಕನ್, ಅರಿಶಿಣ ಪುಡಿ, ಮೆಣಸಿನ ಪುಡಿ 3-4 ಸೀಟಿ ಕೂಗಿಸಿ ಬೇಯಿಸಿಕೊಳ್ಳಬೇಕು.

    * ಬೇಯಿಸಿಕೊಂಡ ಚಿಕನ್, ಬೇಯಿಸಿದ ಆಲೂಗಡ್ಡೆಯ ಚೆನ್ನಾಗಿ ಮಿಶ್ರಣ ಮಾಡಬೇಕು.

    * ಬಾಣಲೆಯಲ್ಲಿ ಸ್ವಲ್ಪ ಎಣ್ಣೆ, ಸಾಸಿವೆ, ಬೆಳ್ಳುಳ್ಳಿ, ಶುಂಠಿ, ಕರಿಬೇವಿನ ಎಲೆ, ಹಸಿ ಮೆಣಸಿನ ಕಾಯಿ, ಬಳಿಕ ಚಿಕನ್ ಮಸಾಲ, ಮೆಣಸಿನ ಪುಡಿ, ದನಿಯಾ, ಉಪ್ಪು ಸೇರಿದಂತೆ ಎಲ್ಲಾ ಸಾಮಾಗ್ರಿಗಳನ್ನು ಹಾಕಿ, 2-3 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಬೇಕು.

    * ಬಾಣಲೆಗೆ ಕಿವುಚಿಕೊಂಡ ಆಲೂಗಡ್ಡೆ, ಚಿಕನ್ ಮತ್ತು ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಮಾಡಬೇಕು.

    * ಕಟ್ಲೆಟ್ ಮಸಾಲ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಕೊಳ್ಳಿ.

    * ಒಂದು ಬೌಲ್ ಅಲ್ಲಿ ಮೊಟ್ಟೆಯನ್ನು ಒಡೆದು ಹಾಕಿ, ಅದನ್ನು ಚೆನ್ನಾಗಿ ಬೀಟ್ ಮಾಡಿಕೊಳ್ಳಿ. ಒಂದು ಬೌಲ್ ಅಲ್ಲಿ ಬ್ರೆಡ್‍ಗಳನ್ನು ಪುಡಿಯನ್ನಾಗಿ ಮಾಡಿಕೊಳ್ಳಿ. ಕಟ್ಲೆಟ್ ಮಸಾಲದ ಉಂಡೆಯನ್ನು ಮೊಟ್ಟೆಯ ರಸದಲ್ಲಿ ಅದ್ದಿ. ನಂತರ ಬ್ರೆಡ್ ಪುಡಿಯ ಮೇಲೆ ಹೊರಳಾಡಿಸಿ. ಬಳಿಕ ಅದನ್ನು ಕಟ್ಲೆಟ್ ಆಕಾರದಲ್ಲಿ ತಟ್ಟಿಕೊಳ್ಳಬೇಕು.

    * ಬಾಣಲೆಯಲ್ಲಿ ಎಣ್ಣೆ ಬಿಸಿಯಾದ ಬಳಿಕ ಸಿದ್ಧಪಡಿಸಿಕೊಂಡ ಕಟ್ಲೆಟ್ ಅನ್ನು ಹಾಕಿ, ಕರಿಯಿರಿ.- ಕಟ್ಲೆಟ್ ಎರಡು ಭಾಗದಲ್ಲೂ ಚೆನ್ನಾಗಿ ಬೆಂದು, ಕಂದು ಬಣ್ಣಕ್ಕೆ ಬಂದ ಮೇಲೆ ಎಣ್ಣೆಯಿಂದ ತೆಗೆಯಿರಿ. ಬಿಸಿ ಇರುವಾಗಲೇ ಕಟ್ಲೆಟ್ ಅನ್ನು ಸಾಸ್ ನೊಂದಿಗೆ ಸವಿಯಿರಿ.