Tag: Chicken Chops

  • ಒಮ್ಮೆ ಸವಿದರೆ ಮತ್ತೆ ಬೇಕೆನಿಸುತ್ತದೆ ಚಿಕನ್ ಚಾಪ್ಸ್

    ಒಮ್ಮೆ ಸವಿದರೆ ಮತ್ತೆ ಬೇಕೆನಿಸುತ್ತದೆ ಚಿಕನ್ ಚಾಪ್ಸ್

    ಚಿಕನ್ (Chicken) ಎಂದರೆ ಯಾವ ನಾನ್‌ವೆಜ್ ಪ್ರಿಯರ ಬಾಯಲ್ಲಿ ನೀರೂರಲ್ಲ? ಅದರಲ್ಲೂ ಒಬ್ಬೊಬ್ಬರು ಬೇರೆ ಬೇರೆ ರೀತಿಯಲ್ಲಿ ಮೂಡುವ ಚಿಕನ್ ರೆಸಿಪಿಯನ್ನು ಇಷ್ಟಪಡುತ್ತಾರೆ. ಅದರಲ್ಲಿ ಚಿಕನ್ ಚಾಪ್ಸ್ (Chicken Chops) ಕೂಡಾ ಒಂದು. ಇದರ ಅಭಿಮಾನಿಗಳು ಸಾಕಷ್ಟಿದ್ದಾರೆ. ನಾವಿಂದು ರುಚಿಕರವಾದ ಚಿಕನ್ ಚಾಪ್ಸ್ ಮಾಡುವ ವಿಧಾನವನ್ನು ಹೇಳಿಕೊಡುತ್ತೇವೆ. ನೀವೂ ಇದನ್ನು ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಮಸಾಲೆ ರುಬ್ಬಲು:
    ಬೆಳ್ಳುಳ್ಳಿ – 15-20
    ಶುಂಠಿ – 2 ಇಂಚು
    ಹಸಿರು ಮೆಣಸಿನಕಾಯಿ – 8-10
    ಹೆಚ್ಚಿದ ಈರುಳ್ಳಿ – ಅರ್ಧ ಕಪ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – ಅರ್ಧ ಕಪ್
    ಹೆಚ್ಚಿದ ಪುದೀನ – ಮುಕ್ಕಾಲು ಕಪ್
    ದಾಲ್ಚಿನ್ನಿ – 2 ಇಂಚು
    ಲವಂಗ – 8
    ಕಾಳುಮೆಣಸು – 1 ಟೀಸ್ಪೂನ್
    ಕೊತ್ತಂಬರಿ ಪುಡಿ – 2 ಟೀಸ್ಪೂನ್
    ತುರಿದ ತೆಂಗಿನಕಾಯಿ – 2-3 ಟೀಸ್ಪೂನ್
    ಬೇಯಿಸಲು:
    ಚಿಕನ್ ಚಾಪ್ಸ್ ತುಂಡುಗಳು – 3/4 ಕೆಜಿ
    ಹೆಚ್ಚಿದ ಈರುಳ್ಳಿ – 1 ಕಪ್
    ಹೆಚ್ಚಿದ ಟೊಮೆಟೊ – ಅರ್ಧ ಕಪ್
    ನಿಂಬೆ ಹಣ್ಣು – ಅರ್ಧ
    ಎಣ್ಣೆ – 3 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಕೇರಳ ಶೈಲಿಯ ರುಚಿಕರ ಸಿಗಡಿ ರೋಸ್ಟ್ ಮಾಡಿ ನೋಡಿ

    ಮಾಡುವ ವಿಧಾನ:
    * ಮೊದಲಿಗೆ ಮಿಕ್ಸರ್ ಗ್ರೈಂಡರ್‌ಗೆ ಬೆಳ್ಳುಳ್ಳಿ, ಶುಂಠಿ, ಹಸಿರು ಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಪುದೀನ, ದಾಲ್ಚಿನ್ನಿ, ಲವಂಗ, ಕಾಳುಮೆಣಸು, ಕೊತ್ತಂಬರಿ ಪುಡಿ, ತುರಿದ ತೆಂಗಿನಕಾಯಿ ಹಾಕಿ, ಸ್ವಲ್ಪ ನೀರು ಬೆರೆಸಿ ನಯವಾದ ಪೇಸ್ಟ್ನಂತೆ ರುಬ್ಬಿಕೊಳ್ಳಿ.
    * ಈಗ ಒಂದು ಕಡಾಯಿಗೆ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಈರುಳ್ಳಿ ಹಾಕಿ ಹುರಿಯಿರಿ.
    * ಈರುಳ್ಳಿ ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಫ್ರೈ ಮಾಡಿ.
    * ಈಗ ಚಿಕನ್ ತುಂಡುಗಳನ್ನು ಹಾಕಿ, ಉಪ್ಪು ಸೇರಿಸಿ ಫ್ರೈ ಮಾಡಿ.
    * ಮೊದಲೇ ರುಬ್ಬಿ ಇಟ್ಟುಕೊಂಡಿದ್ದ ಪೇಸ್ಟ್ ಅನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
    * ಚಿಕನ್ ಚೆನ್ನಾಗಿ ಬೆಂದ ಬಳಿಕ ನಿಂಬೆ ರಸವನ್ನು ಹಾಕಿ, ತಕ್ಷಣ ಸ್ಟೌ ಆಫ್ ಮಾಡಿ ಮಿಕ್ಸ್ ಮಾಡಿ.
    * ಇದೀಗ ರುಚಿಕರವಾದ ಚಿಕನ್ ಚಾಪ್ಸ್ ತಯಾರಾಗಿದ್ದು, ಇದನ್ನು ರೋಟಿ, ಚಪಾತಿ ಅಥವಾ ಅನ್ನದೊಂದಿಗೆ ಸವಿಯಿರಿ. ಇದನ್ನೂ ಓದಿ: ಸರಳವಾಗಿ ಮಾಡಿ ಮಟನ್ ಮಸಾಲಾ

    Live Tv
    [brid partner=56869869 player=32851 video=960834 autoplay=true]

  • ಹಳ್ಳಿ ಶೈಲಿಯ ರುಚಿಯಾದ ಚಿಕನ್ ಚಾಪ್ಸ್ ಮಾಡುವ ವಿಧಾನ

    ಹಳ್ಳಿ ಶೈಲಿಯ ರುಚಿಯಾದ ಚಿಕನ್ ಚಾಪ್ಸ್ ಮಾಡುವ ವಿಧಾನ

    ಭಾನುವಾರ ರಜೆ ಇದ್ದ ಕಾರಣ ಯಾರಾದರೂ ಮನೆಗೆ ಅತಿಥಿಗಳು ಬರುತ್ತಾರೆ. ಸಂಡೇ ಸ್ಪೆಷಲ್ ಅಂದರೆ ನಾನ್ ವೆಜ್ ಆಗಿರುತ್ತದೆ. ಪ್ರತಿ ಸಂಡೇ ಬಿರಿಯಾನಿ, ಕಬಾಬ್, ಚಿಕನ್ ಫ್ರೈ ಮಾಡುತ್ತಿರುತ್ತೀರಾ. ಆದರೆ ಅತಿಥಿಗಳು ಬಂದರೆ ಏನಾದರೂ ಸ್ಪೆಷನ್ ಮಾಡಬೇಕು. ಹೀಗಾಗೀ ಹಳ್ಳಿ ಶೈಲಿಯ ಚಿಕನ್ ಚಾಪ್ಸ್ ಮಾಡುವ ವಿಧಾನ ನಿಮಗಾಗಿ….

    ಬೇಕಾಗುವ ಸಾಮಾಗ್ರಿಗಳು:
    1. ಈರುಳ್ಳಿ – 1 ದಪ್ಪದ್ದು
    2. ಪುದಿನ ಸೊಪ್ಪು – ಸ್ವಲ್ಪ
    3. ಕೊತ್ತಂಬರಿ ಸೊಪ್ಪು – ಸ್ವಲ್ಪ
    4. ತೆಂಗಿನ ತುರಿ – 2 ಚಮಚ
    5. ಬೆಳ್ಳುಳ್ಳಿ – ಒಂದು ಗೆಡ್ಡೆ
    6. ಹಸಿರು ಮೆಣಸಿನಕಾಯಿ – 3
    7. ಶುಂಠಿ – ಸ್ವಲ್ಪ
    8. ಚಕ್ಕೆ-ಲವಂಗ – 2-3
    9. ಚಿಕನ್ – 1/2 ಕೆ.ಜಿ
    10. ಎಣ್ಣೆ -3-4 ಚಮಚ
    11. ಉಪ್ಪು ರುಚಿಗೆ ತಕ್ಕಷ್ಟು
    12. ದನಿಯಾ ಪುಡಿ – 1 ಚಮಚ
    13. ಮೆಣಸಿನ ಪುಡಿ – 1 ಚಮಚ

    ಮಸಲಾ ರುಬ್ಬಿಕೊಳ್ಳಿ
    * ತೆಂಗಿನ ತುರಿ, ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ್, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಪುದಿನ ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ.(ತುಂಬಾ ನುಣ್ಣಗೆ ಬೇಡ ಸ್ವಲ್ಪ ತುರಿಯಾಗಿ ರುಬ್ಬಿಕೊಳ್ಳಿ).

    ಮಾಡುವ ವಿಧಾನ
    * ಮೊದಲಿಗೆ ಚಿಕನ್ ಚೆನ್ನಾಗಿ ತೊಳೆದು ಚಿಟಿಕೆ ಅರಿಶಿಣ ಮತ್ತು ಚಿಟಿಕೆ ಉಪ್ಪನ್ನು ಹಾಕಿ ನೆನೆಸಿಡಿ.
    * ಈಗ ಒಂದು ಬಾಣಲಿಗೆ ಎಣ್ಣೆ ಹಾಕಿ, ಬಿಸಿಯಾದ ಬಳಿಕ 2 ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಫ್ರೈ ಮಾಡಿ.(ಸ್ಟವ್ ಮೀಡಿಯಮ್ ನಲ್ಲಿ ಇರಲಿ)
    * ಸ್ವಲ್ಪ ಈರುಳ್ಳಿ ಫ್ರೈ ಆದ ಮೇಲೆ ತೊಳೆದಿಟ್ಟಿದ್ದ ಚಿಕನ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚಿಕನ್ ಚೆನ್ನಾಗಿ ಫ್ರೈ ಮಾಡಿ.
    * ಚಿಕನ್ ಹಾಕಿದ ನಂತರ ನೀರಿನಾಂಶ ಬಿಟ್ಟುಕೊಳ್ಳುತ್ತದೆ. ಆದ್ದರಿಂದ ನೀರು ಸಂಪೂರ್ಣವಾಗಿ ಪಂಗೋವರೆಗೂ (ನೀರಿನ ಅಂಶ ಕಡಿಮೆ ಆಗುವವರೆಗೆ) ಚಿಕನ್ ಫ್ರೈ ಮಾಡಿಕೊಳ್ಳಿ.


    * ಈ ನೀರು ಪಂಗಿದ ನಂತರ 1 ಚಮಚ ದನಿಯಾ ಪುಡಿ ಮತ್ತು 1 ಚಮಚ ಮೆಣಸಿನ ಪುಡಿ ಹಾಕಿ ಫ್ರೈ ಮಾಡಿ.
    *  ರುಬ್ಬಿದ ಮಸಾಲೆ ಹಾಕಿ, ಸ್ವಲ್ಪ ನೀರು ಹಾಕಿ ಲಿಡ್ ಮುಚ್ಚಿ 10 ನಿಮಿಷ ಬೇಯಲು ಬಿಡಿ(ಆಗಾಗ ಲಿಡ್ ತೆಗೆದು ತಿರುಗಿಸುತ್ತೀರಿ)
    * ಈಗ ಸ್ಟವ್ ಆಫ್ ಮಾಡಿದರೆ ಚಿಕನ್ ಚಾಪ್ಸ್ ತಿನ್ನಲು ಸಿದ್ಧ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv