Tag: Chickaballapur

  • ಸರ್ಕಾರಿ ಜಮೀನಿನಲ್ಲಿ ನಿಧಿ ಶೋಧನೆಯಲ್ಲಿ ತೊಡಗಿದ್ದ ನಿಧಿಗಳ್ಳರ ಅರೆಸ್ಟ್

    ಸರ್ಕಾರಿ ಜಮೀನಿನಲ್ಲಿ ನಿಧಿ ಶೋಧನೆಯಲ್ಲಿ ತೊಡಗಿದ್ದ ನಿಧಿಗಳ್ಳರ ಅರೆಸ್ಟ್

    ಚಿಕ್ಕಬಳ್ಳಾಪುರ: ನಿಧಿಗಳ್ಳರು ಸರ್ಕಾರಿ ಜಮೀನೊಂದರಲ್ಲಿ ನಿಧಿ ಶೋಧನೆಯಲ್ಲಿ ತೊಡಗಿದ್ದು, ಬಟ್ಲಹಳ್ಳಿ ಪೊಲೀಸರು 8 ಮಂದಿ ನಿಧಿ ಶೋಧಕರನ್ನ ಬಂಧಿಸಿದ ಘಟನೆ ಜಿಲ್ಲೆ ಚಿಂತಾಮಣಿ ತಾಲೂಕು ಯರಕೋಟೆ ಬಳಿ ನಡೆದಿದೆ.

    ಆಂಧ್ರಪ್ರದೇಶದ ಆಯುರ್ವೇದ ವೈದ್ಯ ಶ್ರೀನಿವಾಸ್, ರಮಣಾರೆಡ್ಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಬೂದಿಗೆರೆಯ ಅನಿಲ್ ಕುಮಾರ್, ಕೃಷ್ಣ, ಚಿಂತಾಮಣಿಯ ಕೆಂಚಾರ್ಲಹಳ್ಳಿ ಗ್ರಾಮದ ಚಾಂದ್ ಪಾಷ, ಜಬೀವುಲ್ಲಾ, ನಂದಿಗಾನಹಳ್ಳಿಯ ಜನಾರ್ಧನ್, ಕೃಷ್ಣಾರೆಡ್ಡಿ ಬಂಧಿತ ನಿಧಿ ಶೋಧಕರು. ಪೊಲೀಸರಿಂದ ಈಗಾಗಲೇ ಬಂಧಿತರು ಕೃತ್ಯಕ್ಕೆ ಬಳಸಿದ ಅತ್ಯಾಧುನಿಕ ರಾಡರ್ ಯಂತ್ರ, 5 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.  ಇದನ್ನೂ ಓದಿ: ತಂಗಿ ಆರೋಗ್ಯ ಸರಿಯಿಲ್ಲವೆಂದು ಕ್ಯಾಬ್ ದರೋಡೆ ಮಾಡಿದ ಸಹೋದರರು..!

    ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅದ್ಧೂರಿಯಾಗಿ ಬೀದಿ ನಾಯಿಯ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ ಸ್ನೇಹಿತರು

    ಅದ್ಧೂರಿಯಾಗಿ ಬೀದಿ ನಾಯಿಯ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ ಸ್ನೇಹಿತರು

    ಚಿಕ್ಕಬಳ್ಳಾಪುರ: ಬೀದಿ ನಾಯಿಯೊಂದರ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರದ ನಾಲ್ಕನೇ ವಾರ್ಡ್ ನಲ್ಲಿ ನಡೆದಿದೆ.

    ನಗರದ ನಾಲ್ಕನೇ ವಾರ್ಡಿನ ಎಡಿ ಕಾಲೋನಿಯ ಸ್ನೇಹಿತರ ಬಳಗದಿಂದ ಬೀದಿ ನಾಯಿಗೆ ಸನ್ಮಾನ ಮಾಡಲಾಗಿದೆ. ಕೆಲವು ವರ್ಷಗಳ ಹಿಂದೆ ಸಾಕು ನಾಯಿಯನ್ನು ತಂದು ದೇವಸ್ಥಾನದ ಆವರಣದಲ್ಲಿ ಬಿಟ್ಟು ಅದಕ್ಕೆ ಶೇರ್ ಖಾನ್ ಎಂದು ಹೆಸರು ಸಹ ಇಡಲಾಗಿತ್ತು. ಈಗ ಅದೇ ಶೇರ್ ಖಾನ್ ಹುಟ್ಟು ಹಬ್ಬದ ಪ್ರಯುಕ್ತ ಪ್ರಮುಖ ಬೀದಿಗಳಲ್ಲಿ ಫ್ಲೆಕ್ಸ್ ಕಟ್ಟಿ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ. ಈ ವೇಳೆ ಪಟಾಕಿ ಹೊಡೆದು ಯುವಕರು ಸಂಭ್ರಮಿಸಿದ್ದಾರೆ. ಇದನ್ನೂ ಓದಿ:  ಮೋದಿ ಸರ್ಕಾರದಿಂದ ಲವ್ ಲೆಟರ್ ಬಂದಿದೆ – ಆಪ್ ನಾಯಕ

    ಥೇಟ್ ರಾಜಕೀಯ ಮುಖಂಡರಿಗೆ ಅದ್ಧೂರಿ ಸನ್ಮಾನ ಮಾಡುವ ರೀತಿಯಲ್ಲಿ, ಸ್ಥಳೀಯ ಯುವಕರ ಶೇರ್ ಖಾನ್‍ಗೆ ಮಾಡಿದ್ದಾರೆ. ಕೇಕ್ ಮೇಲೆ ನಾಯಿಯ ಭಾವಚಿತ್ರ ಹಾಕಿಸಿ ಕಟ್ ಮಾಡಿಸಿದ್ದಾರೆ. ತಮ್ಮ ಅಚ್ಚುಮೆಚ್ಚಿನ ನಾಯಿಗೆ ಶಾಲು ತೋಡಿಸಿ ಹೂವಿನ ಹಾರ ಹಾಕಿ ಸಂಭ್ರಮಿಸುವ ಮೂಲಕ ವಿನೂತನವಾಗಿ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಇದನ್ನೂ ಓದಿ:  ಮೀನು ಹಿಡಿಯಲು ಹೋದ ಯುವಕ ನೀರುಪಾಲು

    ಹುಟ್ಟುಹಬ್ಬಕ್ಕೆ ಏರಿಯಾದ ಗೆಳೆಯರೆಲ್ಲ ಒಂದೆಡೆ ಸೇರಿ ನಾಯಿಯನ್ನು ಕರೆ ತಂದು ಮನುಷ್ಯನ ರೀತಿಯಲ್ಲಿ ಗೌರವ ನೀಡಿದ್ದು ವಿಶೇಷವಾಗಿದೆ. ಇದನ್ನೂ ಓದಿ:  ಪೆಟ್ರೋಲ್ ಸುರಿದು ಪತಿಯನ್ನು ಹತ್ಯೆಗೈದು ಚರಂಡಿಗೆ ಶವ ಎಸೆದ್ಳು

    ಈ ಕುರಿತು ಪ್ರತಿಕ್ರಿಯಿಸಿದ ಯುವಕರು, ನಮ್ಮ ಏರಿಯಾದಲ್ಲಿ ಪೊಲೀಸರ ತರ ಕೆಲಸವನ್ನು ಈ ಶೇರ್ ಖಾನ್ ಮಾಡುತ್ತೆ. ತಮ್ಮ ಏರಿಯಾಗೆ ಬೀಟ್ ಪೊಲೀಸರ ಅವಶ್ಯಕತೆಯಿಲ್ಲ. ವಾರ್ಡಿನಲ್ಲಿ ಕಳ್ಳ ಖದೀಮರನ್ನು ಬೆನ್ನತ್ತಿ ಹಿಡಿಯುತ್ತೆ. ಬೇರೆ ಬೀದಿ ನಾಯಿಗಳು ಬಂದರೆ ವಾಪಸ್ ಓಡಿಸುತ್ತೆ. ಅದಕ್ಕೆ ನಾವು ನಾಯಿಗೂ ಗೌರವ ಕೊಟ್ಟು ಮಾನವೀಯತೆ ಮೆರೆದಿದ್ದೇವೆ ಎಂದು ಹೇಳಿದ್ದಾರೆ.

  • 1 ಕೆಜಿ ದ್ರಾಕ್ಷಿ 145 ರೂ.ಗೆ ಮಾರಾಟ – ರೈತರಿಗೆ ಸಂತಸ

    1 ಕೆಜಿ ದ್ರಾಕ್ಷಿ 145 ರೂ.ಗೆ ಮಾರಾಟ – ರೈತರಿಗೆ ಸಂತಸ

    – ದಿಲ್ ಖುಷ್ ಕೆಜಿಗೆ 90 ರೂ. ಮಾರಾಟ

    ಚಿಕ್ಕಬಳ್ಳಾಪುರ: ಕೊರೊನಾ ಲಾಕ್‍ಡೌನ್‍ಗೆ ಸಿಲುಕಿ ದ್ರಾಕ್ಷಿಗೆ ಸೂಕ್ತ ಬೆಲೆಯಿಲ್ಲದೆ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಬೆಳೆದ ದ್ರಾಕ್ಷಿ ಹಣ್ಣನ್ನು ತಿಪ್ಪೆಗುಂಡಿಗೆ ಸುರಿದು ಮಣ್ಣು ಪಾಲು ಮಾಡಿದ್ದರು. ಆದ್ರೆ ಈಗ ಲಾಕ್‍ಡೌನ್ ಸಡಿಲಿಕೆ ನಂತರ ಜನ ಜೀವನ ಯಥಾಸ್ಥಿತಿಗೆ ಮರಳುತ್ತಿದ್ದಂತೆ, 1 ಕೆಜಿ ದ್ರಾಕ್ಷಿ ಹಣ್ಣಿನ ಬೆಲೆ ಹೆಚ್ಚಾಗಿದೆ. ಇದರಿಂದ ದ್ರಾಕ್ಷಿ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

    ಚಿಕ್ಕಬಳ್ಳಾಪುರ ಬರದನಾಡಾದ್ರೂ ಇಲ್ಲಿನ ರೈತರು ವಿನೂತನ ತಂತ್ರಜ್ಞಾನ ಹಾಗೂ ಬುದ್ದಿವಂತಿಕೆಯನ್ನು ಬಳಸಿಕೊಂಡು, ತರೇವಾರಿ ಹಣ್ಣು, ತರಕಾರಿ ಹೂ ಬೆಳೆಯುವುದರಲ್ಲಿ ದೇಶದಲ್ಲೇ ಹೆಸರುವಾಸಿ. ಇನ್ನೂ ದ್ರಾಕ್ಷಿ ಬೆಳೆದು ದೇಶ ವಿದೇಶಕ್ಕೆ ರಪ್ತು ಮಾಡುವುದರಲ್ಲಿ ಚಿಕ್ಕಬಳ್ಳಾಪುರ ರೈತರದ್ದು ಎತ್ತಿದ ಕೈ. ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲೆ ಬರೋಬ್ಬರಿ ಎರಡು ಸಾವಿರದ ಐನೂರು ಹೆಕ್ಟರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. ಕಳೆದೊಂದು ವರ್ಷದಿಂದ ಕೊರೊನಾ ಲಾಕ್‍ಡೌನ್ ಗೆ ಸಿಲುಕಿಗೆ ಬೆಳೆದ ದ್ರಾಕ್ಷಿಗೆ ಸೂಕ್ತ ಬೆಲೆ ಸಿಗದೆ ದ್ರಾಕ್ಷಿಯನ್ನು ತಿಪ್ಪೆಗುಂಡಿಗೆ ಸುರಿಯುಂತಾಗಿತ್ತು.

    ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾಮದ ರೈತ ಕೆ.ಆರ್.ರೆಡ್ಡಿ ಎಂಬುವವರು 5 ಎಕರೆ ಪ್ರದೇಶದದಲ್ಲಿ ರೆಡ್ ಗ್ಲೋಬ್ ತಳಿ ದ್ರಾಕ್ಷಿಯನ್ನು ಬೆಳೆದಿದ್ದು, ಈ ಬಾರಿ ಉತ್ತಮ ಇಳುವರಿ ಬಂದಿದೆ. ವರ್ತಕರು ತೋಟಕ್ಕೆ ಬಂದು 1 ಕೆ.ಜಿ ದ್ರಾಕ್ಷಿಗೆ 145 ರೂಪಾಯಿ ನೀಡಿ ಖರೀದಿಸುತ್ತಿದ್ದಾರೆ. 5 ಎಕರೆಯಲ್ಲಿ ಸರಿಸುಮಾರು 50 ಟನ್ ದ್ರಾಕ್ಷಿ ಬೆಳೆದಿದ್ದು, ರೈತನಿಗೆ ಲಕ್ಷಾಂತರ ರೂಪಾಯಿ ಹರಿದುಬಂದಿದೆ. ಇದರಿಂದ ರೈತ ಕೆ ಆರ್ ರೆಡ್ಡಿಯವರು ಸಂತಸಗೊಂಡಿದ್ದಾರೆ.

    ಕಳೆದ ಎರಡು ವರ್ಷಗಳಿದ ಉತ್ತಮ ಬೆಲೆ ಇಲ್ಲದೆ ನಷ್ಟ ಅನುಭವಿಸುವಂತಾಗಿತ್ತು. ಈ ಬಾರಿ ಕಂಡು ಕೇಳರಿಯದ ಬೆಲೆ ಸಿಕ್ಕಿದ್ದು ಸಾಕಷ್ಟು ಸಂತಸ ತಂದಿದೆ ಅಂತ ರೈತ ಕೆ ಆರ್ ರೆಡ್ಡಿ ಪಬ್ಲಿಕ್ ಟಿವಿ ಜೊತೆ ಸಂತಸ ಹಂಚಿಕೊಂಡಿದ್ದಾರೆ. ಇನ್ನೂ ರೆಡ್ ಗ್ಲೋಬ್ ದ್ರಾಕ್ಷಿ 145 ರೂಪಾಯಿ ಆದ್ರೆ ದಿಲ್ ಖುಷ್ ಬೆಲೆಯೂ ಸಹ ಹೆಚ್ಚಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಆಂಜನೇಯರೆಡ್ಡಿಯವರು ಸಹ ಎರಡು ಎಕರೆ ಪ್ರದೇಶದಲ್ಲಿ ದಿಲ್ ಕುಶ್ ದ್ರಾಕ್ಷಿ ಬೆಳೆದಿದ್ದು ಎರಡು ಎಕರೆಗೆ ಬರೋಬ್ಬರಿ ಸರಿಸುಮಾರು 40 ಟನ್ ದ್ರಾಕ್ಷಿ ಆಗೊ ನಿರೀಕ್ಷೆಯಿದೆ. ಈಗಾಗಲೇ ಮುಕ್ಕಾಲು ಭಾಗ ತೋಟವನ್ನು ವರ್ತಕರು ಕಟಾವು ಮಾಡಿದ್ದು ಕೆ.ಜಿ ಗೆ 90 ರೂಪಾಯಿ ಬೆಲೆಗೆ ಮಾರಾಟ ಮಾಡಿದ್ದಾರೆ.

    ಸದ್ಯ ಈಗ ದ್ರಾಕ್ಷಿ ಬೆಳೆಯಲು ಸಿಜನ್ ಅಲ್ಲ, ಅನ್ ಸೀಜನ್. ಸ್ವಾಭಾವಿಕವಾಗಿ ಈಗ ದ್ರಾಕ್ಷಿ ಬೆಳೆಯಲ್ಲ, ಆದ್ರೆ ಚಿಕ್ಕಬಳ್ಳಾಪುರದ ಕೆಲವು ಬುದ್ದಿವಂತ ರೈತರು, ತೋಟಗಾರಿಕೆ ಇಲಾಖೆ ಮಾರ್ಗದರ್ಶನದಲ್ಲಿ ಅಕಾಲಿಕವಾಗಿ ದ್ರಾಕ್ಷಿ ಫಸಲು ಬರುವ ಹಾಗೆ ತಂತ್ರಜ್ಞಾನ ಬಳಸಿಕೊಂಡು ದ್ರಾಕ್ಷಿ ಬೆಳೆದಿದ್ದಾರೆ. ಇದರಿಂದ ದ್ರಾಕ್ಷಿಗೆ ಬೆಲೆ ಬಂದಿದೆ ರೈತರಂತೂ ಸಖತ್ ಖುಷಿಯಾಗಿದ್ದಾರೆ. ಇನ್ನೂ ಈ ದ್ರಾಕ್ಷಿ ಈಶಾನ್ಯ ರಾಜ್ಯಗಳು ಸೇರಿ ನೆರೆಯ ದೇಶಗಳಾದ ನೇಪಾಳ, ಬಾಂಗ್ಲಾದೇಶ ಸೇರಿ ಇತರೆ ದೇಶಗಳಿಗೆ ರಫ್ತಾಗಲಿದೆ.

  • ಕಾಲು ತೊಳೆಯಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ಅಜ್ಜಿ, ಮೊಮ್ಮಗಳು ಸಾವು

    ಕಾಲು ತೊಳೆಯಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ಅಜ್ಜಿ, ಮೊಮ್ಮಗಳು ಸಾವು

    ಚಿಕ್ಕಬಳ್ಳಾಪುರ: ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಅಜ್ಜಿ ಹಾಗೂ ಮೊಮ್ಮಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಪಿಂಜಾರಹಳ್ಳಿಯಲ್ಲಿ ನಡೆದಿದೆ.

    ಗ್ರಾಮದ 45 ವರ್ಷದ ಮಂಜುಳಾ ಹಾಗೂ ಮೊಮ್ಮಗಳು 6 ವರ್ಷದ ಲಕ್ಷ್ಮೀ ಮೃತ ದುರ್ದೈವಿಗಳು. ಗ್ರಾಮದ ಹೊರವಲಯದ ನರಸಾರೆಡ್ಡಿ ಅವರ ತೋಟದಲ್ಲಿನ ಕೃಷಿ ಹೊಂಡದಲ್ಲಿ ಕಾಲು ತೊಳೆಯಲು ಹೋಗಿದ್ದು, ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಅಜ್ಜಿ, ಮೊಮ್ಮಗಳು ಮೃತಪಟ್ಟಿದ್ದಾರೆ.

    ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

  • ಕೊರೊನಾ ಎಫೆಕ್ಟ್- ಕುಡಿತ ಬಿಟ್ಟು ಹೊಸ ಬದುಕು ಕಟ್ಟಿಕೊಂಡ ವೃದ್ಧ

    ಕೊರೊನಾ ಎಫೆಕ್ಟ್- ಕುಡಿತ ಬಿಟ್ಟು ಹೊಸ ಬದುಕು ಕಟ್ಟಿಕೊಂಡ ವೃದ್ಧ

    -ಕುರಿ ಸಾಕಾಣಿಕೆಗೆ ಮುಂದಾದ ವ್ಯಕ್ತಿ

    ಚಿಕ್ಕಬಳ್ಳಾಪುರ: ಕೊರೊನಾ ಎಫೆಕ್ಟ್ ನಡುವೆ ಮದ್ಯ ಸಿಗದೆ ಪರದಾಡಿದವರೇ ಹೆಚ್ಚು. ಆದರೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಮದ್ಯವ್ಯಸನಿ ವೃದ್ಧನೋರ್ವ ಕುಡಿತ ಬಿಟ್ಟು ಕುರಿ ತಂದು ಸಾಕಾಣಿಕೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.

    ಗ್ರಾಮದ ಚಿಕ್ಕಮುನಿಯಪ್ಪ ಎಂಬವರು ಮದ್ಯವ್ಯಸನಿಂದ ದೂರು ಬಂದು ಹೊಸ ಬದುಕು ಕಟ್ಟಿಕೊಂಡಿದ್ದಾರೆ. ಲಾಕ್‍ಡೌನ್ ನಡುವೆ ಎಣ್ಣೆ ಸಿಗದೇ ಪರಿತಪ್ಪಿಸಿದ್ದ ಚಿಕ್ಕಮುನಿಯಪ್ಪ ಕೊನಗೆ ಮದ್ಯಕ್ಕೆ ವಿದಾಯ ಹೇಳಿ ಈಗ ಎರಡು ಕುರಿ ತಂದು ಸಾಕಾಣಿಕೆ ಮಾಡಲು ಮುಂದಾಗಿದ್ದಾರೆ. ಸುಮಾರು 6,000 ರೂ.ನಿಂದ ಒಂದು ಕುರಿ ಹಾಗೂ ಕುರಿ ಮರಿ ಖರೀದಿಸಿ ಈಗ ಅವುಗಳ ಸಾಕಾಣಿಕೆಯಲ್ಲಿ ತೊಡಗಿಕೊಂಡಿದ್ದಾರೆ.

    ಹಲವು ವರ್ಷಗಳಿಂದಲೂ ಮದ್ಯ ವ್ಯಸನಿಯಾಗಿದ್ದ ಚಿಕ್ಕಮನಿಯಪ್ಪ ಕೂಲಿ ನಾಲಿ ಮಾಡಿ ಬಂದ ಹಣವನ್ನೆಲ್ಲಾ ಮದ್ಯ ಖರೀದಿಗೆ ಬಳಸುತ್ತಿದ್ದರು. ಆದರೆ ಈಗ ಕೊರೊನಾ ಎಫೆಕ್ಟ್ ನಿಂದ ಮದ್ಯವೂ ಸಿಗದೆ ಪರಿತಪಿಸಿದ್ದ ಚಿಕ್ಕಮುನಿಯಪ್ಪರಿಗೆ ಮೊದ ಮೊದಲು ಕೈ ಕಾಲು ನಡುಗುವುದು, ಅದರುವುದು ಆಗಿದೆ. ಆದರೆ ಗಟ್ಟಿ ಮನಸ್ಸು ಮಾಡಿದ ಚಿಕ್ಕಮುನಿಯಪ್ಪ ದಿನದಿಂದ ದಿನಕ್ಕೆ ಮದ್ಯದ ಮೇಲಿನ ವ್ಯಾಮೋಹ ಕಡಿಮೆ ಮಾಡಿಕೊಂಡಿದ್ದಾರೆ. ಕೊನೆಗೆ ಎರಡು ಕುರಿ ಮರಿ ತಂದು ಸಾಕುವ ನಿರ್ಧಾರ ಮಾಡಿ ಕುರಿ ಹಾಗೂ ಮರಿಯೊಂದನ್ನ ಖರೀದಿ ಮಾಡಿ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಇನ್ನೂ ಮೂರು ದಿನಗಳಿಂದ ಮದ್ಯ ಮಾರಾಟ ನಡೆಯುತ್ತಿದ್ದರೂ, ಎಣ್ಣೆ ಸಿಗುತ್ತೆ ಅಂತ ಗೊತ್ತಿದ್ರೂ ಮದ್ಯದತ್ತ ಮುಖ ಮಾಡದ ಚಿಕ್ಕಮುನಿಯಪ್ಪ, ಕುರಿಗಳ ಸಾಕಾಣಿಕೆ ಜೊತೆಗೆ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಈ ವೃದ್ಧನ ಮಾದರಿ ನಿರ್ಧಾರಕ್ಕೆ ಗ್ರಾಮಸ್ಥರು ಸೇರಿದಂತೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೆಚ್ಚಿನ ಕುರಿಗಳನ್ನ ತಂದು ಸಾಕಾಣಿಕೆ ಮಾಡಬೇಕು ಎಂದು ವೃದ್ದ ಚಿಕ್ಕಮುನಿಯಪ್ಪ ಹೇಳುತ್ತಾರೆ.