ರಾಯ್ಪುರ: ಚುನಾವಣಾ ದಿನದಂದೇ (ಮಂಗಳವಾರ) ಛತ್ತೀಸ್‌ಗಢದಲ್ಲಿ ಮಾವೋವಾದಿಗಳು ಸುಧಾರಿತ ಸ್ಫೋಟಕಗಳನ್ನು ಸ್ಫೋಟಿಸಿದ್ದು, ಚುನಾವಣಾ ಕರ್ತವ್ಯದಲ್ಲಿದ್ದ ಕಮಾಂಡೋಗೆ ಗಾಯಗಳಾಗಿವೆ.
ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ 20 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಅವುಗಳಲ್ಲಿ ಹಲವು ಕ್ಷೇತ್ರಗಳು ಮಾವೋವಾದಿ ಪೀಡಿತ ಬಸ್ತಾರ್‌ನಲ್ಲಿವೆ. ಮೊದಲ ಹಂತದ ಚುನಾವಣೆಗಾಗಿ 25,000 ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.
ಸುಕ್ಮಾದ ತೊಂಡಮಾರ್ಕಾ ಪ್ರದೇಶದಲ್ಲಿ ಮಾವೋವಾದಿಗಳು ನಡೆಸಿದ ಐಇಡಿ ಸ್ಫೋಟದಲ್ಲಿ ಸಿಆರ್‌ಪಿಎಫ್ ಕೋಬ್ರಾ ಬೆಟಾಲಿಯನ್‌ನ ಒಬ್ಬ ಯೋಧ ಗಾಯಗೊಂಡಿದ್ದಾರೆ. ಯೋಧನನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
20 ಸ್ಥಾನಗಳಲ್ಲಿ 12 ಪರಿಶಿಷ್ಟ ಪಂಗಡ ಮತ್ತು ಒಂದು ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ರೈತರು, ಮಹಿಳೆಯರು, ಆದಿವಾಸಿಗಳು ಮತ್ತು ದಲಿತರಿಗಾಗಿ ಹಾಲಿ ಸಿಎಂ ಭೂಪೇಶ್ ಬಘೇಲ್ ಸರ್ಕಾರದ ಕಲ್ಯಾಣ ಯೋಜನೆಗಳ ಸರಣಿ ಮತ್ತು ಅಧಿಕಾರವನ್ನು ಉಳಿಸಿಕೊಂಡರೆ ಕೃಷಿ ಸಾಲ ಮನ್ನಾ ಮಾಡುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ.
ಮೊದಲ ಹಂತದ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಭೂಪೇಶ್ ಬಘೇಲ್ ವಿರುದ್ಧ ಮಹಾದೇವ್ ಬೆಟ್ಟಿಂಗ್ ಆ್ಯಪ್ ಹಗರಣದ ಕುರಿತು ವಾಗ್ದಾಳಿ ನಡೆಸಿದರು. ಆದರೆ ಇತರ ಬಿಜೆಪಿ ನಾಯಕರು ಧಾರ್ಮಿಕ ಮತಾಂತರ, ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಭ್ರಷ್ಟಾಚಾರದ ವಿಚಾರ ಪ್ರಸ್ತಾಪಿಸಿ ಸಿಎಂ ವಿರುದ್ಧ ಹರಿಹಾಯ್ದಿದ್ದರು.
ರಾಯ್ಪುರ: ವಿಧಾನಸಭಾ ಚುನಾವಣೆಗಾಗಿ ಛತ್ತೀಸ್‌ಗಢದಲ್ಲಿ (Chhattisgarh Polls) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ‘ಮೋದಿ ಕಿ ಗ್ಯಾರಂಟಿ 2023’ (Modi Ki Guarantee) ಎಂಬ ಶೀರ್ಷಿಕೆಯ ಪ್ರಣಾಳಿಕೆಯಲ್ಲಿ ಛತ್ತೀಸ್‌ಗಢದ ಜನರಿಗೆ ಬಿಜೆಪಿಯ ಪ್ರಮುಖ ಭರವಸೆಗಳನ್ನು ಘೋಷಿಸಿದ್ದಾರೆ.
ಎಲ್ಲಾ ವಿವಾಹಿತ ಮಹಿಳೆಯರಿಗೆ ವರ್ಷಕ್ಕೆ 12,000 ರೂ.ಗಳನ್ನು ನೀಡಲು ನಿರ್ಧರಿಸಿದ್ದೇವೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 18 ಲಕ್ಷ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ರಾಜ್ಯದ ಪ್ರತಿ ಮನೆಗೂ ನಲ್ಲಿ ನೀರು ಒದಗಿಸುತ್ತೇವೆ. ನಾವು ಭೂರಹಿತ ರೈತರಿಗೆ ವಾರ್ಷಿಕ 10,000 ರೂ. ಅನುದಾನ ನೀಡುತ್ತೇವೆ. ರಾಜ್ಯಾದ್ಯಂತ 500 ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಂದಿನ 23 ದಿನ ತಮಿಳುನಾಡಿಗೆ ನಿತ್ಯ 2,600 ಕ್ಯೂಸೆಕ್ ನೀರು ಬಿಡಲು ಕರ್ನಾಟಕಕ್ಕೆ ಆದೇಶ
ನಮ್ಮ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವಂತೆ, ಛತ್ತೀಸ್‌ಗಢದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕೃಷಿ ಉನ್ನತಿ ಯೋಜನೆಯನ್ನು ಪ್ರಾರಂಭಿಸುತ್ತದೆ. ಇದರ ಭಾಗವಾಗಿ ನಾವು 21 ಕ್ವಿಂಟಾಲ್/ಎಕರೆ ಭತ್ತವನ್ನು 3,100 ರೂ. ದರದಲ್ಲಿ ಖರೀದಿಸುತ್ತೇವೆ. ನಮ್ಮ ಖರೀದಿಯಿಂದ ಸಂಗ್ರಹಿಸಿದ ಮೊತ್ತವನ್ನು ರೈತರಿಗೆ ವರ್ಗಾಯಿಸಲಾಗುವುದು. ಎರಡು ವರ್ಷಗಳಲ್ಲಿ ಒಂದು ಲಕ್ಷ ಖಾಲಿ ಹುದ್ದೆಗಳನ್ನು (ಸರ್ಕಾರಿ ಕಚೇರಿಗಳಲ್ಲಿ) ಭರ್ತಿ ಮಾಡಲಾಗುವುದು. ಡಬಲ್ ಇಂಜಿನ್ ಸರ್ಕಾರವು ಆಯ್ಕೆಯಾದರೆ ಮುಂದಿನ ಐದು ವರ್ಷಗಳಲ್ಲಿ ಛತ್ತೀಸ್‌ಗಢವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡಲಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಭೂಪೇಶ್ ಬಘೇಲ್ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವರು, ಎಡಪಂಥೀಯ ಉಗ್ರವಾದದಿಂದ (ಎಲ್‌ಡಬ್ಲ್ಯೂಇ) ಉದ್ಭವಿಸುವ ಭದ್ರತಾ ಸವಾಲುಗಳನ್ನು ಕೇಂದ್ರವು ಪರಿಹರಿಸಿದೆ. ಕಾಂಗ್ರೆಸ್ ಸರ್ಕಾರವು ರೈತರ ಸಾಲವನ್ನು ಮನ್ನಾ ಮಾಡುವ ಬದಲು ಸಾರ್ವಜನಿಕ ಹಣವನ್ನು ದೋಚಿದೆ ಎಂದಿದ್ದಾರೆ. ಇದನ್ನೂ ಓದಿ: ಗಾಜಾದಲ್ಲಿ ಮುಗ್ಧ ಕಂದಮ್ಮಗಳು ಜೀವ ಕಳೆದುಕೊಳ್ಳುತ್ತಿವೆ: ಇರ್ಫಾನ್ ಪಠಾಣ್ ಬೇಸರ
ಅವರು (ಕಾಂಗ್ರೆಸ್) ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ರೈತರ ಸಾಲವನ್ನು ಮನ್ನಾ ಮಾಡುವ ಬದಲು ಜನರ ಹಣವನ್ನು ಲೂಟಿ ಮಾಡಿದ್ದಾರೆ. ಜನರು ಹಲವಾರು ಮಾನದಂಡಗಳ ಮೇಲೆ ಕಾಂಗ್ರೆಸ್‌ಗೆ ಮತ ಹಾಕಿದರು. ನಕ್ಸಲ್ ಚಟುವಟಿಕೆ ನಿಯಂತ್ರಣ, ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆಯಾಗಬಹುದು ಎಂದು ಜನ ನಿರೀಕ್ಷಿಸಿದ್ದರು. ಆದರೆ ರಾಜ್ಯ ಸರ್ಕಾರದ ಬದಲಿಗೆ ನಾವು (ಕೇಂದ್ರಗಳು) ರಾಜ್ಯದ ಭದ್ರತಾ ಸಮಸ್ಯೆಗಳನ್ನು ಪರಿಹರಿಸಿದ್ದೇವೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
90 ಸದಸ್ಯ ಬಲದ ಛತ್ತೀಸ್‌ಗಢ ವಿಧಾನಸಭೆಗೆ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ.