Tag: Chhatrapati Shivaji Maharaj

  • ಶಿವಾಜಿ ಮಹಾರಾಜ್ ಬಯೋಪಿಕ್‌ನಲ್ಲಿ ನಟಿಸಲು ಒಪ್ಪಿಕೊಂಡ ರಿಷಬ್ ಶೆಟ್ಟಿ: ಪರ- ವಿರೋಧ ಚರ್ಚೆ

    ಶಿವಾಜಿ ಮಹಾರಾಜ್ ಬಯೋಪಿಕ್‌ನಲ್ಲಿ ನಟಿಸಲು ಒಪ್ಪಿಕೊಂಡ ರಿಷಬ್ ಶೆಟ್ಟಿ: ಪರ- ವಿರೋಧ ಚರ್ಚೆ

    ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ಛತ್ರಪತಿ ಶಿವಾಜಿ ಮಹಾರಾಜ್ ಬಯೋಪಿಕ್‌ನಲ್ಲಿ (Chhatrapati Shivaji Maharaj) ನಟಿಸೋದಾಗಿ ಅನೌನ್ಸ್ ಮಾಡಿದ ಬೆನ್ನಲ್ಲೇ ತೀವ್ರ ಪರ ಮತ್ತು ವಿರೋಧದ ಚರ್ಚೆ ನಡೆಯುತ್ತಿದೆ. ಕರ್ನಾಟಕದ ಪಾಲಿಗೆ ಶಿವಾಜಿ ದಾಳಿಕೋರ, ಕರ್ನಾಟಕಕ್ಕೆ ಶಿವಾಜಿ ಕೊಡುಗೆ ಏನು ಅಂತ ಪ್ರಶ್ನಿಸಿ ಫ್ಯಾನ್ಸ್ ರಿಷಬ್ ಶೆಟ್ಟಿಗೆ ಟ್ಯಾಗ್ ಮಾಡಿದ್ದಾರೆ.‌ ಇದನ್ನೂ ಓದಿ:ದರ್ಶನ್‌ ಸೂಚನೆ ಮೇರೆಗೆ ಕಿಡ್ನಾಪ್‌ – ಕೊಲೆಯಲ್ಲಿ ಪವಿತ್ರಾ ಪಾತ್ರವಿಲ್ಲ: ವಕೀಲರ ವಾದ

    ಭಾರತದ ಮಹಾನ್ ಯೋಧ, ರಾಜ ಶಿವಾಜಿಯ ಜೀವನಚರಿತ್ರೆಯನ್ನು ತೆರೆಗೆ ತರುತ್ತಿರುವುದು ನಮ್ಮ ಗೌರವ ಹಾಗೂ ಹೆಮ್ಮೆ. ಇದು ಬರೀ ಸಿನಿಮಾ ಅಲ್ಲ, ದುಷ್ಟರ ವಿರುದ್ಧ ಹೋರಾಡಿ ಮೊಘಲ್ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ವೀರ ಯೋಧನ ಕಥೆ. ತೆರೆಮೇಲೆ ಅದ್ಭುತ ಆ್ಯಕ್ಷನ್ ಡ್ರಾಮಾ ನೋಡಲು ಸಿದ್ಧರಾಗಿ ಎಂದು ರಿಷಬ್ ಸಿನಿಮಾ ಪೋಸ್ಟರ್ ಹಂಚಿಕೊಂಡ ಬೆನ್ನಲ್ಲೇ ಕೆಲ ಕನ್ನಡಿಗರಿಂದ ಅಸಮಾಧಾನ ವ್ಯಕ್ತವಾಗಿದೆ.

    ರಿಷಬ್ ಶೆಟ್ಟಿ ಅವರೇ, ನಮ್ಮ ಕುಂದಾಪುರದ ಬಸ್ರೂರು ಒಂದು ಕಾಲದಲ್ಲಿ ಪ್ರಮುಖ ಒಳನಾಡ ಬಂದರಾಗಿತ್ತು ಎಂಬುದು ನಮ್ಮೆಲ್ಲರಿಗೂ ತಿಳಿದಿದೆ. ನಮ್ಮ ಬಸ್ರೂರರನ್ನು , ಕುಮಟಾ ವನ್ನು ಶಿವಾಜಿ ಮತ್ತು ಆತನ ಸೇನೆ ಲೂಟಿ ಮಾಡಿತ್ತು, ಅಪಾರವಾದ ಹತ್ಯೆ ಕೂಡ ಮಾಡಿತ್ತು ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆ. ಅದೂ ಕೂಡ ಮಹಾ ಶಿವರಾತ್ರಿಯ ದಿನ. ನಮ್ಮೂರಿನ ಭೂತ, ಕೋಲವನ್ನು ಜಗತ್ಪçಸಿದ್ಧ ಮಾಡಿದವರು ನೀವು. ನಮ್ಮ ಹಿರಿಯರನ್ನು ದಂಡಿಸಿ, ಲೂಟಿ ಮಾಡಿದವರನ್ನು ನೀವು ವಿಜೃಂಭಿಸುವುದು ಸರಿಯೇ? ಹೇಳಲು ಹತ್ತಾರು ಕತೆಗಳಿವೆ. ಕನ್ನಡ ನಾಡಿನ ರಾಜರದ್ದೇ ಕತೆಗಳು ನೂರಾರು ಇವೆ. ಒಮ್ಮೆ ಯೋಚಿಸಿ ಎಂದು ಅಭಿಮಾನಿಯೊಬ್ಬ ಎಕ್ಸ್‌ನಲ್ಲಿ ರಿಷಬ್‌ಗೆ ಪ್ರಶ್ನಿಸಿದ್ದಾರೆ.

    ಶಿವಾಜಿ ಮಹಾರಾಜ್ ಕುರಿತ ಈ ಸಿನಿಮಾವನ್ನು ಕೈಬಿಡಿ ಎಂದು ರಿಷಬ್‌ಗೆ ಅನೇಕರು ಮನವಿ ಮಾಡಿದ್ದಾರೆ. ನಮ್ಮ ಮಣ್ಣಿನ ಕಥೆಯನ್ನು ಹೇಳಿ ಎಂದು ರಿಷಬ್ ವಿರುದ್ಧ ಪರ ಮತ್ತು ವಿರೋಧ ಚರ್ಚೆ ನಡೆಯುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜ್ ಬಯೋಪಿಕ್ ಮಾಡಿರುವ ಬಗ್ಗೆ ಕನ್ನಡಿಗರು ರಿಷಬ್ ಮೇಲೆ ಸಿಟ್ಟಾಗಿದ್ದಾರೆ. ಇದಕ್ಕೆಲ್ಲಾ ರಿಷಬ್ ಉತ್ತರ ನೀಡುತ್ತಾರಾ? ಸ್ಪಷ್ಟನೆ ಕೊಡುತ್ತಾರಾ? ಎಂದು ಕಾದು ನೋಡಬೇಕಿದೆ.

    ಅಂದಹಾಗೆ, ಬಾಲಿವುಡ್ ಡೈರೆಕ್ಟರ್ ಸಂದೀಪ್ ಸಿಂಗ್ ಅವರ ಹಿಸ್ಟೋರಿಕಲ್ ಡ್ರಾಮಾ ಸಿನಿಮಾದಲ್ಲಿ ರಿಷಬ್ ನಟಿಸಲಿದ್ದಾರೆ. ಸದ್ಯ ಶಿವಾಜಿ ಮಹಾರಾಜ್ ಲುಕ್‌ನಲ್ಲಿ ಖಡ್ಗ ಹಿಡಿದು ರಿಷಬ್ ಕಾಣಿಸಿಕೊಂಡಿರುವ ಲುಕ್ ರಿವೀಲ್ ಆಗಿತ್ತು.

     

    View this post on Instagram

     

    A post shared by SANDEEP SINGH (@officialsandipssingh)

    ಛತ್ರಪತಿ ಶಿವಾಜಿ ಮಹಾರಾಜ್ ಕುರಿತಾದ ಈ ಬಯೋಪಿಕ್ ಸಿನಿಮಾವು 2027ರ ಜನವರಿ 21ರಂದು ಬಿಡುಗಡೆಯಾಗುವುದಾಗಿ ಕೂಡ ಚಿತ್ರತಂಡ ಅನೌನ್ಸ್ ಮಾಡಿದೆ.

  • Shivaji Statue Collapse| ಗುತ್ತಿಗೆದಾರ, ರಚನಾ ಸಲಹೆಗಾರ ಅರೆಸ್ಟ್

    Shivaji Statue Collapse| ಗುತ್ತಿಗೆದಾರ, ರಚನಾ ಸಲಹೆಗಾರ ಅರೆಸ್ಟ್

    ಮುಂಬೈ: ಮಹಾರಾಷ್ಟ್ರದಲ್ಲಿ ಕುಸಿದು ಬಿದ್ದ ಛತ್ರಪತಿ ಶಿವಾಜಿ(Chhatrapati Shivaji Maharaj) ಕಂಚಿನ ಪ್ರತಿಮೆ ನಿರ್ಮಿಸಿದ ಗುತ್ತಿಗೆದಾರ ಮತ್ತು ರಚನೆಗೆ ಸಲಹೆ ನೀಡಿದ ಸಲಹೆಗಾರನನ್ನು ಬಂಧಿಸಲಾಗಿದೆ.

    ಡಿಸೆಂಬರ್ 4,2023 ರಂದು ನೌಕಾ ದಿನದಂದು (Navy Day) ಸಿಂಧುದುರ್ಗದಲ್ಲಿ 35 ಅಡಿ ಎತ್ತರದ ಶಿವಾಜಿ ಪ್ರತಿಮೆ ಅನಾವರಣ ಮಾಡಲಾಗಿತ್ತು. ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಉದ್ಘಾಟಿಸಿದರು. ಮರಾಠ ನೌಕಾಪಡೆ, ಛತ್ರಪತಿ ಶಿವಾಜಿ ಮಹಾರಾಜರ ಕಡಲ ರಕ್ಷಣೆ ಮತ್ತು ಭದ್ರತೆ, ಅದರ ಐತಿಹಾಸಿಕ ಪರಂಪರೆಯನ್ನು ಗೌರವಿಸುವ ಉದ್ದೇಶದಿಂದ ಕಂಚಿನ ಪ್ರತಿಮೆ ನಿರ್ಮಿಸಲಾಗಿತ್ತು. ಇದನ್ನೂ ಓದಿ: ಆಂಧ್ರ ಕಾಲೇಜಿನ ವಿದ್ಯಾರ್ಥಿನಿಯರ ವಾಶ್ ರೂಮ್‍ನಲ್ಲಿ ಕ್ಯಾಮೆರಾ ಇಟ್ಟು ವಿಡಿಯೋ ಮಾರಾಟ – ಆರೋಪಿ ಅರೆಸ್ಟ್

    ಪ್ರತಿಮೆ ಸೋಮವಾರ ಮಧ್ಯಾಹ್ನ ಕುಸಿದು ಬಿದ್ದಿದೆ. ಈ ಘಟನೆಯ ಬಳಿಕ ವಿಪಕ್ಷಗಳು ಆಡಳಿತರೂಢ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿವೆ. ಮಾತ್ರವಲ್ಲದೇ ಶಿವಾಜಿ ವಂಶಸ್ಥರು ಈ ಘಟನೆಯ ಬಳಿಕ ಸರ್ಕಾರದ ಆಕ್ರೋಶ ಹೊರಹಾಕಿದ್ದಾರೆ.

    ಈ ಹಾನಿಯ ತನಿಖೆಗಾಗಿ ಭಾರತೀಯ ನೌಕಾಪಡೆಯ ನೇತೃತ್ವದಲ್ಲಿ  ಮಹಾರಾಷ್ಟ್ರ ಸರ್ಕಾರದ ಪ್ರತಿನಿಧಿಗಳು ಮತ್ತು ತಾಂತ್ರಿಕ ತಜ್ಞರೊಂದಿಗೆ ಸಮಿತಿಯನ್ನು ರಚಿಸಲಾಗುತ್ತಿದೆ. ಇದನ್ನೂ ಓದಿ: ಮಾಜಿ ಮುಡಾ ಆಯುಕ್ತನಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್!

  • ಮೋದಿ ಉದ್ಘಾಟಿಸಿದ್ದ ಶಿವಾಜಿ ಮಹರಾಜ್‌ ಪ್ರತಿಮೆ 1 ವರ್ಷ ಪೂರ್ಣಗೊಳ್ಳುವ ಮುನ್ನವೇ ಕುಸಿತ!

    ಮೋದಿ ಉದ್ಘಾಟಿಸಿದ್ದ ಶಿವಾಜಿ ಮಹರಾಜ್‌ ಪ್ರತಿಮೆ 1 ವರ್ಷ ಪೂರ್ಣಗೊಳ್ಳುವ ಮುನ್ನವೇ ಕುಸಿತ!

    ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ರಾಜ್‌ಕೋಟ್ ಕೋಟೆಯಲ್ಲಿ ಕಳೆದ ವರ್ಷ ಪ್ರಧಾನಿ ಮೋದಿ (PM Modi) ಅವರು ಅನಾವರಣಗೊಳಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ (Shivaji Maharaj Statue) ಸೋಮವಾರ (ಆ.26) ಕುಸಿದು ಬಿದ್ದಿದೆ. 2023ರ ಡಿಸೆಂಬರ್‌ 4ರಂದು ಭಾರತೀಯ ನೌಕಾಪಡೆಯ ದಿನಾಚರಣೆ ವೇಳೆ ಪ್ರಧಾನಿ ಮೋದಿ ಈ ಭವ್ಯ ಪ್ರತಿಮೆಯನ್ನು ಮೋದಿ ಅನಾವರಣಗೊಳಿಸಿದ್ದರು.

    ಮಾಲ್ವಾನ್‌ನ ರಾಜ್‌ಕೋಟ್ ಕೋಟೆಯಲ್ಲಿ ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮರಾಠ ರಾಜನ 35 ಅಡಿ ಉದ್ದದ ಪ್ರತಿಮೆ ಕುಸಿದಿದುಬಿದ್ದಿದೆ. ಪೊಲೀಸ್ ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.

    ಈ ಬೆನ್ನಲ್ಲೇ ತಜ್ಞರು ಪ್ರತಿಮೆ ಕುಸಿತಕ್ಕೆ ನಿಖರ ಕಾರಣ ತಿಳಿಸಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ, ಬಿರುಗಾಳಿ ಬೀಸುತ್ತಿದೆ. ಇದರಿಂದಾಗಿ ಪ್ರತಿಮೆ ಧ್ವಂಸವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವೇಶ್ಯೆ ಗೃಹಕ್ಕೆ ಹೋಗಿದ್ದ, ಗರ್ಲ್‌ಫ್ರೆಂಡ್‌ಗೆ ಬೆತ್ತಲೆ ಫೋಟೋ ಕಳಿಸುವಂತೆ ಕೇಳಿದ್ದ – ರೇಪ್‌ ಆರೋಪಿಯ ಕರಾಳ ಮುಖ ಬಯಲು

    ಕಳೆದ ವರ್ಷ ಪ್ರಧಾನಿ ಮೋದಿ ಪ್ರತಿಮೆ ಅನಾವರಣಗೊಳಿಸಿದ ಬಳಿಕ ಸ್ಥಳೀಯ ಆಡಳಿತಕ್ಕೆ ನಿರ್ವಹಣೆಯ ಹೊಣೆ ವಹಿಸಲಾಗಿತ್ತು. ಸದ್ಯ ಪ್ರತಿಮೆ ಕುಸಿತಕ್ಕೆ ಮಳೆ ಗಾಳಿಯೇ ಕಾರಣವಾ? ಅಥವಾ ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯ ಕಾರಣವಾಯ್ತಾ ಅನ್ನೋ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮೌಲ್ಯಮಾಪನ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ದರ್ಶನ್ ಜೊತೆ ಜೈಲಲ್ಲಿ ಪೋಸ್ ಕೊಟ್ಟ ರೌಡಿಶೀಟರ್ ನಾಗ ಧರಿಸಿದ್ದ ಟಿ-ಶರ್ಟ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ!

    ವಿಪಕ್ಷಗಳಿಂದ ತರಾಟೆ:
    ಪ್ರತಿಮೆ ಧ್ವಂಸಗೊಂಡ ಬೆನ್ನಲ್ಲೇ‌ ಮಹಾರಾಷ್ಟ್ರ ರಾಜ್ಯ ಸರ್ಕಾರವನ್ನು ವಿಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ. ಘಟನೆಯ ನಂತರ, ಎನ್‌ಸಿಪಿ (ಎಸ್‌ಪಿ) ಯ ಜಯಂತ್ ಪಾಟೀಲ್, ಶಿವಸೇನಾ (UBT) ಯ ಆದಿತ್ಯ ಠಾಕ್ರೆ ಮತ್ತು ಇತರರು ಸೇರಿದಂತೆ ವಿರೋಧ ಪಕ್ಷಗಳ ನಾಯಕರು ರಾಜ್ಯ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ, ಇದು ಕಳಪೆ ಗುಣಮಟ್ಟದ ಕೆಲಸ ಎಂದು ಆರೋಪಿಸಿದ್ದಾರೆ.

    ನಮ್ಮ ಮಹಾರಾಷ್ಟ್ರದ ಆರಾಧ್ಯ ದೈವವಾದ ಛತ್ರಪತಿ ಶಿವಾಜಿ ಮಹಾರಾಜರಿಗೆ ಆದ ಅವಮಾನವನ್ನು ನಾವು ಎಂದಿಗೂ ಸಹಿಸುವುದಿಲ್ಲ. ಚುನಾವಣೆ ಗೆಲ್ಲಲು ಮೋದಿ ಅವರಿಗೆ ಶಿವಾಜಿ ಮಹಾರಾಜರ ಮುಖ ಬೇಕಿತ್ತು. ಅದಕ್ಕಾಗಿ ತರಾತುರಿಯಲ್ಲಿ ಪ್ರತಿಮೆ ಅನಾವರಣಗೊಳಿಸಿದ್ದರು. ಅವರ ದುರಹಂಕಾರದಿಂದಲೇ ಇಂದು ಪ್ರತಿಮೆ ಧ್ವಂಸವಾಗಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: J&K Election | ಇಂಡಿಯಾ ಒಕ್ಕೂಟದ ಸೀಟು ಹಂಚಿಕೆ ಒಪ್ಪಂದ ಸುಖಾಂತ್ಯ – ಎನ್‌ಸಿ 51, ಕಾಂಗ್ರೆಸ್‌ 32 ಸ್ಥಾನಗಳಲ್ಲಿ ಸ್ಪರ್ಧೆ

  • 350 ವರ್ಷಗಳ ಬಳಿಕ ಭಾರತಕ್ಕೆ ಮರಳಲಿದೆ ಶಿವಾಜಿ ಮಹಾರಾಜರ `ವ್ಯಾಘ್ರ ನಖ’

    350 ವರ್ಷಗಳ ಬಳಿಕ ಭಾರತಕ್ಕೆ ಮರಳಲಿದೆ ಶಿವಾಜಿ ಮಹಾರಾಜರ `ವ್ಯಾಘ್ರ ನಖ’

    ಲಂಡನ್: 1659 ರಲ್ಲಿ ಬಿಜಾಪುರ (ಇಂದಿನ ವಿಜಯಪುರ) ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್‌ನನ್ನು ಸೋಲಿಸಲು ಛತ್ರಪತಿ ಶಿವಾಜಿ ಮಹಾರಾಜರು (Chhatrapati Shivaji Maharaj) ಬಳಸಿದ್ದ ಐತಿಹಾಸಿಕ `ವ್ಯಾಘ್ರ ನಖ’ (Wagh Nakh) ಮುಂದಿನ ನವೆಂಬರ್ ತಿಂಗಳಲ್ಲಿ ಲಂಡನ್‌ನಿಂದ ಭಾರತಕ್ಕೆ (ಮಹಾರಾಷ್ಟ್ರಕ್ಕೆ) ಮರಳಲಿದೆ.

    ಪ್ರಸಕ್ತ ವರ್ಷದಲ್ಲೇ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350ನೇ ವಾರ್ಷಿಕೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಶಿವಾಜಿ ಸ್ಮರಣಾರ್ಥ ಮೂರು ವರ್ಷಗಳ ಪ್ರದರ್ಶನಕ್ಕಾಗಿ ಲಂಡನ್ನಿನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ವಸ್ತುಸಂಗ್ರಹಾಲಯದಿಂದ (Victoria And Albert Museum) ವ್ಯಾಘ್ರ ನಖವನ್ನು ಮರಳಿ ತರಲಾಗುತ್ತಿದೆ. ಮಹಾರಾಷ್ಟ್ರಕ್ಕೆ ವ್ಯಾಘ್ರ ನಖವನ್ನು ತಂದ ಬಳಿಕ ಅದನ್ನು ದಕ್ಷಿಣ ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯದಲ್ಲಿ (Shivaji Maharaj Museum) ಇರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.

    ಮಹಾರಾಷ್ಟ್ರದ ಸಂಸ್ಕೃತಿ ಸಚಿವ ಸುಧೀರ್ ಮುಂಗಂತಿವಾರ್ ಅವರು ಮಂಗಳವಾರ ಲಂಡನ್‌ಗೆ ಭೇಟಿ ನೀಡಲಿದ್ದು, ಆಯುಧವನ್ನು ಹಿಂದಿರುಗಿಸುವ ಕುರಿತು ಮ್ಯೂಸಿಯಂನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ವ್ಯಾಘ್ರ ನಖವನ್ನು ನವೆಂಬರ್‌ನಲ್ಲಿ ತರುತ್ತಿದ್ದೇವೆ. ಅದಕ್ಕಾಗಿ MOUಗೆ ಸಹಿ ಹಾಕುತ್ತಿದ್ದೇವೆ. ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್ ಕರುಳು ಬಗೆದ ದಿನದಂದೇ ಅದನ್ನು ತರುವುದು ನಮ್ಮ ಪ್ರಯತ್ನ ಎಂದೂ ಸಚಿವರು ಹೇಳಿದ್ದಾರೆ.

    ಅಫ್ಜಲ್ ಖಾನ್‌ನನ್ನು ಕೊಂದ ರೋಚಕ ಇತಿಹಾಸ ಗೊತ್ತಾ?
    ಹೌದು. 1659ರಲ್ಲಿ ಪ್ರತಾಪಗಡದಲ್ಲಿ ನಡೆದ ಕದನದಲ್ಲಿ ಮರಾಠರ ಗೆಲುವು ಮರಾಠ ಸಾಮ್ರಾಜ್ಯ ಸ್ಥಾಪಿಸುವ ಶಿವಾಜಿಯ ಸಾಧನೆಗೆ ಮಹತ್ವದ ತಿರುವು ಪಡೆದುಕೊಂಡಿತ್ತು. ಅಂದು ಸೈನಿಕರ ಸಂಖ್ಯೆ ಮೀರಿದ್ದ ಹೊರತಾಗಿಯೂ ಮರಾಠರು ಅಫ್ಜಲ್ ಖಾನ್ ನೇತೃತ್ವದ ಆದಿಲ್ಶಾಹಿ ಪಡೆಗಳು ಮಣ್ಣುಮುಕ್ಕುವಂತೆ ಮಾಡಿದ್ದರು. ಉತ್ತಮ ತಂತ್ರಗಾರಿಕೆ, ಸಮರ್ಥ ನಾಯಕತ್ವ, ಚಾಣಾಕ್ಷತನದಿಂದ ಆ ಯುದ್ಧದಲ್ಲಿ ಮರಾಠರು ಗೆಲುವಿನ ಕೇಕೆ ಹಾಕಿದರು. ಇಂದಿನ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪ್ರತಾಪಗಢ ಕೋಟೆಯ ತಪ್ಪಲಿನಲ್ಲಿ ಛತ್ರಪತಿ ಶಿವಾಜಿ ಅಫ್ಜಲ್ ಖಾನ್‌ನನ್ನು ಕೊಂದಿದ್ದರು.

    ಅಂದು ಸಭೆ ನಡೆಯುತ್ತಿದ್ದ ವೇಳೆ ಅಫ್ಜಲ್ ಖಾನ್ ಶಿವಾಜಿ ಮಹಾರಾಜರ ಬೆನ್ನಿಗೆ ಚೂರಿ ಹಾಕಿದ್ದನು. ಆಗ ಶಿವಾಜಿ ಮಹಾರಾಜರು, ಅಫ್ಜಲ್ ಖಾನ್ ಕೊಲ್ಲಲು ವಾಘ್ರನಖವನ್ನು ಬಳಸಿದರು. ಆದ್ರೆ ಇಂದಿಗೂ ಮಹಾರಾಷ್ಟ್ರದಲ್ಲಿ ಈ ವ್ಯಾಘ್ರ ನಖದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲಕ್ಷ್ಮಿ ಹೆಬ್ಬಾಳ್ಕರ್‌ಗೆ ರಮೇಶ್ ಜಾರಕಿಹೊಳಿ ಶಾಕ್

    ಲಕ್ಷ್ಮಿ ಹೆಬ್ಬಾಳ್ಕರ್‌ಗೆ ರಮೇಶ್ ಜಾರಕಿಹೊಳಿ ಶಾಕ್

    ಬೆಳಗಾವಿ: ತಾಲೂಕಿನ ಗ್ರಾಮೀಣ ಮತಕ್ಷೇತ್ರದಲ್ಲಿರುವ ರಾಜಹಂಸಗಡ ಕೋಟೆಯಲ್ಲಿ (Rajhansgad Fort) ನಿರ್ಮಾಣವಾಗಿದ್ದ ಶಿವಾಜಿ ಪ್ರತಿಮೆ (Chhatrapati Shivaji Maharaj) ಲೋಕಾರ್ಪಣೆಗೆ ದಿನಾಂಕ ನಿಗದಿ ಮಾಡಲಾಗಿದೆ. ಮಾರ್ಚ್ 2ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಲೋಕಾರ್ಪಣೆ ಮಾಡಿಸಲು ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಮುಂದಾಗಿದ್ದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ಗೆ (Lakshmi Hebbalkar) ಶಾಕ್ ನೀಡಿದ್ದಾರೆ.

    ಮಾರ್ಚ್ 5ರಂದು ಶಿವಾಜಿ ಪ್ರತಿಮೆ ಲೋಕಾರ್ಪಣೆಗೆ ಲಕ್ಷ್ಮಿ ಹೆಬ್ಬಾಳ್ಕರ್ ನಿರ್ಧರಿಸಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ವಿಪಕ್ಷ ನಾಯಕ ಸಿದ್ದರಾಮಯ್ಯಗೆ (Siddaramaiah) ಆಹ್ವಾನಿಸಲು ಲಕ್ಷ್ಮಿ ಹೆಬ್ಬಾಳ್ಕರ್ ನಿರ್ಧಾರ ಮಾಡಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದರು. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ

    ಮಾಧ್ಯಮ ಪ್ರಕಟಣೆ ನೋಡಿ ಸಿಡಿದೆದ್ದಿದ್ದ ರಮೇಶ್ ಜಾರಕಿಹೊಳಿ, ಇತರ ಬಿಜೆಪಿ ನಾಯಕರು ಶಿಷ್ಟಾಚಾರ ಪ್ರಕಾರ ಸರ್ಕಾರದ ವತಿಯಿಂದ ಪ್ರತಿಮೆ ಲೋಕಾರ್ಪಣೆಗೆ ಪಟ್ಟು ಹಿಡಿದಿದ್ದರು. ಈಗ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ರಾಜಹಂಸಗಡದ ಕೋಟೆಯಲ್ಲಿ ಶಿವಾಜಿ ಪ್ರತಿಮೆ ಲೋಕಾರ್ಪಣೆಗೆ ನಿರ್ಧಾರ ಮಾಡಲಾಗಿದೆ.

    ಸಿಎಂ ಕೈಯಿಂದಲೇ ಶಿವಾಜಿ ಪ್ರತಿಮೆ ಲೋಕಾರ್ಪಣೆ ಹಠಕ್ಕೆ ಬಿದ್ದಿದ್ದ ಗೋಕಾಕ್ ಸಾಹುಕಾರ್ ಮಾರ್ಚ್ 2ರಂದು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆಗೆ ಸಿದ್ಧತೆ ಮಾಡಿದ್ದಾರೆ. ಕನ್ನಡ ಸಂಸ್ಕøತಿ ಇಲಾಖೆ ಸಚಿವ ಸುನೀಲ್ ಕುಮಾರ್, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೇರಿ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.

    ಪ್ರತಿಮೆ ಉದ್ಘಾಟನೆ ಸಂಬಂಧ ಶುಕ್ರವಾರ ಬೆಳಗಾವಿ ಗ್ರಾಮೀಣ ಬಿಜೆಪಿ ಕಚೇರಿಯಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಲಿದ್ದು, ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ಸೇರಿ ಹಲವರು ಭಾಗಿಯಾಗಲಿದ್ದಾರೆ.

    ಪ್ರತಿಮೆ ಲೋಕಾರ್ಪಣೆ ದಿನದಂದು ಒಂದೇ ವೇದಿಕೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿ ಕಾಣಿಸಿಕೊಳ್ಳುತ್ತಾರಾ ಎಂಬ ಚರ್ಚೆಗಳು ಕೇಳಿಬರುತ್ತಿವೆ. ಇದೇ ಛತ್ರಪತಿ ಶಿವಾಜಿ ಪ್ರತಿಮೆ ಲೋಕಾರ್ಪಣೆ ವಿಚಾರವಾಗಿ ರಮೇಶ ಜಾರಕಿಹೊಳಿ ಮತ್ತು ಹೆಬ್ಬಾಳ್ಕರ್ ನಡುವೆ ಕ್ರೆಡಿಟ್ ವಾರ್ ಏರ್ಪಟ್ಟಿತ್ತು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 50 ಲಕ್ಷ ರೂ. ಅನುದಾನದಲ್ಲಿ ಲೋಕಾರ್ಪಣೆಗೆ ಸಿದ್ಧಗೊಂಡಿರುವ ಶಿವಾಜಿ ಪ್ರತಿಮೆಯನ್ನು ಮಾರ್ಚ್ 4, 5ರಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವತಿಯಿಂದಲೂ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗ ಐತಿಹಾಸಿಕ ರಾಜಹಂಸಗಡ ಕೋಟೆ ಎರಡೆರಡು ಕಾರ್ಯಕ್ರಮಗಳಿಗೆ ಸಾಕ್ಷಿಯಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಮೈಸೂರಿನ ಆದಿಲ್ ಮನೆ ಮುಂದೆ ನಟಿ ರಾಖಿ ಸಾವಂತ್ ಹೈ ಡ್ರಾಮಾ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕರ್ನಾಟಕದ ಕಾರಿನ ಮೇಲೆ ಶಿವಸೇನೆ ಪುಂಡರಿಂದ ಕಲ್ಲು ತೂರಾಟ

    ಕರ್ನಾಟಕದ ಕಾರಿನ ಮೇಲೆ ಶಿವಸೇನೆ ಪುಂಡರಿಂದ ಕಲ್ಲು ತೂರಾಟ

    ಬೆಳಗಾವಿ: ಕರ್ನಾಟಕದ ಖಾಸಗಿ ವಾಹನ ಮತ್ತು ಅಂಗಡಿಗಳ ಮೇಲೆ ಶಿವಸೇನೆ ಪುಂಡರ ದಾಳಿ ನಡೆಸಿದ ಘಟನೆ ಮಹಾರಾಷ್ಟ್ರ ಸಾಂಗ್ಲಿ ಜಿಲ್ಲೆಯ ಮೀರಜ ಪಟ್ಟಣದಲ್ಲಿ ನಡೆದಿದೆ.

    ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಅಪಮಾನ ಮಾಡಿರುವ ಆರೋಪವಾಗಿ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಶಿವಸೇನೆ ಪುಂಡರು ಈ ಕೃತ್ಯವನ್ನು ನಡೆಸುತ್ತಿದ್ದಾರೆ.

    ಮಹಾರಾಷ್ಟçಕ್ಕೆ ಬರುವ ಕರ್ನಾಟಕದ ನಂಬರ್ ಪ್ಲೇಟ್ ಇರುವ ವಾಹನಗಳನ್ನು ತಡೆದು ಅವುಗಳ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದಿದ್ದಾರೆ. ಪೊಲೀಸರ ಎದುರೇ ಕನ್ನಡಿಗರ ವಾಹನವನ್ನು ತಡೆದು ಶಿವಸೇನೆ ಪುಂಡರು ದೌರ್ಜನ್ಯ ನಡೆಸಿದ್ದಾರೆ. ಇದನ್ನೂಓದಿ:  ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

    ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಘಟನೆಯಲ್ಲಿ 5 ಜನರಿಗೆ ಗಾಯಗಳಾಗಿವೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ದುಷ್ಟಶಕ್ತಿಗಳಿಗೆ ಕನ್ನಡಿಗರು ಹೆದರೋಲ್ಲ, ಕನ್ನಡಿಗರ ಶಕ್ತಿ ಪ್ರದರ್ಶಿಸುವ ಕಾಲ ಬಂದಿದೆ: ಹೆಚ್‍ಡಿಕೆ

     

  • ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಹಾನಿ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಆರಗ ಜ್ಞಾನೇಂದ್ರ

    ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಹಾನಿ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಆರಗ ಜ್ಞಾನೇಂದ್ರ

    ಶಿವಮೊಗ್ಗ: ವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಹಾನಿ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದೆರಡು ದಿನದಿಂದ ಬೆಳಗಾವಿಯಲ್ಲಿ ಪುಂಡತನ ಹೆಚ್ಚಾಗುತ್ತಿದ್ದು, ನಿನ್ನೆ ರಾತ್ರಿಯೂ ಗುಂಪು ಸೇರಿ ಸರ್ಕಾರಿ ವಾಹನಗಳಿಗೆ ಬೆಂಕಿ ಇಡುವ ಮೂಲಕ ಶಾಂತಿಯನ್ನು ಕದಡುವ ಕೆಲಸ ಮಾಡಿದ್ದಾರೆ. ಇಂತಹ ಕೆಲಸವನ್ನು ಮಾಡಿದವರು ಯಾರೇ ಆದರೂ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಇನ್ನೊಮ್ಮೆ ಇಂತಹ ಪ್ರಕರಣ ಆಗದಿರುವ ಹಾಗೇ ನೋಡಿಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂಓದಿ:  ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

    ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜ್ ಅವರು ನಮ್ಮೆಲ್ಲರ ಹೆಮ್ಮೆಯ ಪ್ರತೀಕವಾಗಿದ್ದಾರೆ. ಇವರಿಬ್ಬರೂ ಪ್ರತಿಯೊಬ್ಬ ನಾಗರಿಕರೂ ಹೆಮ್ಮೆ ಹಾಗೂ ಗರ್ವದಿಂದ ನೆನಸಿಕೊಳ್ಳುವಂತಹ ಭಾರತೀಯ ಪುತ್ರರು. ಇವರ ಹೆಸರಿನಲ್ಲಿ, ಕೆಲವು ಕಿಡಿಗೇಡಿಗಳು ದುಷ್ಕೃತ್ಯ ನಡೆಸಿ, ಭಾಷೆ ಹಾಗೂ ಸಹೋದರತ್ವ ಬಾಂಧವ್ಯವನ್ನು ಕೆಡಿಸುವಂತಹ ಕೃತ್ಯ ಎಸಗಿರುವುದು ಅಕ್ಷಮ್ಯ ಅಪರಾಧವಾಗಿದೆ. ಜೊತೆಗೆ ಸಂಗೊಳ್ಳಿ ರಾಯಣ್ಣ ರವರ ಪ್ರತಿಮೆಗೆ ಹಾನಿ ಮಾಡಿರುವ ಘಟನೆಯನ್ನು ಖಂಡಿಸುತ್ತೇನೆ ಎಂದರು. ಇದನ್ನೂ ಓದಿ: ದುಷ್ಟಶಕ್ತಿಗಳಿಗೆ ಕನ್ನಡಿಗರು ಹೆದರೋಲ್ಲ, ಕನ್ನಡಿಗರ ಶಕ್ತಿ ಪ್ರದರ್ಶಿಸುವ ಕಾಲ ಬಂದಿದೆ: ಹೆಚ್‍ಡಿಕೆ

    ಘಟನೆಯ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಬೆಂಗಳೂರು ಹಾಗೂ ಬೆಳಗಾವಿ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ರಾಜ್ಯದ ಜನತೆ ಶಾಂತಿ ಹಾಗೂ ಸಾಮರಸ್ಯ ಕಾಪಾಡಲು ಸಹಕರಿಸೇಕೆಂದು, ವಿನಂತಿಸುತ್ತೇನೆ ಎಂದು ಮನವಿ ಮಾಡಿದರು. ಇದನ್ನೂ ಓದಿ: MES ಪುಂಡಾಟಿಕೆಯನ್ನು ಖಂಡಿಸಿದ ಸಿಎಂ – 27 ಮಂದಿ ಅರೆಸ್ಟ್

    ರಾಯಣ್ಣ ಮೂರ್ತಿ ಭಂಗ ಪ್ರಕರಣದ ಕುರಿತು ಮಾತನಾಡಿದ ಅವರು, ರಾಯಣ್ಣ ಮೂರ್ತಿ ಭಂಗ ಮಾಡಿದವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಪ್ರಕರಣ ಸಂಬಂಧ ಕೆಲವರ ವಶ ಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

  • ಬೆಂಗಳೂರಿನ ಶಿವಾಜಿ ಪ್ರತಿಮೆಗೆ ಮಸಿ – ಸುತ್ತಮುತ್ತ ಪೊಲೀಸ್ ಭದ್ರತೆ

    ಬೆಂಗಳೂರಿನ ಶಿವಾಜಿ ಪ್ರತಿಮೆಗೆ ಮಸಿ – ಸುತ್ತಮುತ್ತ ಪೊಲೀಸ್ ಭದ್ರತೆ

    ಬೆಂಗಳೂರು: ಸ್ಯಾಂಕಿ ಕೆರೆ ಸಿಗ್ನಲ್ ಬಳಿ ಇರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಕಿಡಿಗೇಡಿಗಳು ಮಸಿ ಬಳಿದಿರುವ ಘಟನೆ ನಡೆದಿದೆ.

    ಈ ಘಟನೆಯಿಂದ ಎಚ್ಚೆತ್ತುಕೊಂಡ ಬೆಂಗಳೂರು ಪೊಲೀಸರು ಸ್ಯಾಂಕಿ ಕರೆ ಸಿಗ್ನಲ್ ಬಳಿ ಇರೋ ಶಿವಾಜಿ ಪ್ರತಿಮೆಗೆ ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ. ಭದ್ರತೆಗಾಗಿ ಕೆಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

    ಮುಜರಾಯಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಟ್ವೀಟ್ ಮಾಡಿ, ಬೆಂಗಳೂರಿನಲ್ಲಿ ಹಿಂದೂ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಕಿಡಿಗೇಡಿಗಳು ಮಸಿ ಬಳಿದಿರುವ ಘಟನೆ ನಡೆದಿದೆ. ಯಾತ್ನಾಡಿನ ರಕ್ಷಣೆಗಾಗಿ ಹಾಗೂ ಹಿಂದೂಸ್ಥಾನವನ್ನು ಒಗ್ಗೂಡಿಸಲು ಶ್ರಮಿಸಿದ ಹೆಮ್ಮೆಯ ನಾಯಕ ಶಿವಾಜಿ ಮಹಾರಾಜರು. ಆದರೆ ಇಂತಹ ಅಪ್ರತಿಮ ವೀರರ ಪ್ರತಿಮೆಗೆ ಮಸಿ ಬಳಿದಿರುವುದು ಆಪಾದನೀಯವಾಗಿದೆ. ಪ್ರಕರಣ ಕುರಿತಾಗಿ ಸೂಕ್ತ ರೀತಿಯಲ್ಲಿ ತನಿಖೆ ನಡೆದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ.

  • ಅವಮಾನಿಸುವ ಉದ್ದೇಶವಿರಲಿಲ್ಲ, ನೋವಾಗಿದ್ದರೆ ಕ್ಷಮೆ ಇರಲಿ: ಅಮಿತಾಬ್ ಬಚ್ಚನ್

    ಅವಮಾನಿಸುವ ಉದ್ದೇಶವಿರಲಿಲ್ಲ, ನೋವಾಗಿದ್ದರೆ ಕ್ಷಮೆ ಇರಲಿ: ಅಮಿತಾಬ್ ಬಚ್ಚನ್

    ಮುಂಬೈ: ಯಾರನ್ನು ಅವಮಾನಿಸುವ ಉದ್ದೇಶ ನಮಗಿರಲಿಲ್ಲ. ನಿಮ್ಮ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಕ್ಷಮೆ ಕೇಳುವ ಮೂಲಕ ಎಲ್ಲ ವಿವಾದಗಳಿಗೆ ಅಮಿತಾಬ್ ಬಚ್ಚನ್ ಇತಿಶ್ರೀ ಹಾಕಿದ್ದಾರೆ.

    ಅಮಿತಾಬ್ ಬಚ್ಚನ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್‍ಪತಿ ಕಾರ್ಯಕ್ರಮದ ನಿರೂಪಕರಾಗಿದ್ದಾರೆ. ಇಲ್ಲಿ ಸ್ಪರ್ಧಿಗಳಿಗೆ ಪ್ರಶ್ನೆ ಕೇಳಲಾಗುತ್ತದೆ. ಹಾಗೆಯೇ ಬುಧವಾರ ಪ್ರಸಾರವಾದ ಸಂಚಿಕೆಯಲ್ಲಿ ಕೇಳಲಾದ ಪ್ರಶ್ನೆಯೊಂದು ವಿವಾದಕ್ಕೆ ಕಾರಣವಾಗಿತ್ತು.

    ಪ್ರಶ್ನೆ: ಈ ಕೆಳಗಿನವರಲ್ಲಿ ಯಾರು ಮೊಗಲ್ ಸಾಮ್ರಾಟ್ ಔರಂಗಜೇಬ್ ಸಮಕಾಲೀನ ರಾಜ?
    ಎ. ಮಹಾರಾಣಾ ಪ್ರತಾಪ್ ಬಿ. ರಾಣಾ ಸಾಂಗಾ ಸಿ. ಮಹಾರಾಜ ರಣ್‍ಜಿತ್ ಸಿಂಹ ಡಿ. ಶಿವಾಜಿ

    ಈ ಪ್ರಶ್ನೆಯ ಉತ್ತರ ನಾಲ್ಕನೇ ಆಯ್ಕೆಯಾಗಿತ್ತು. ಆದರೆ ಪ್ರಶ್ನೆಯಲ್ಲಿ ಎಲ್ಲ ರಾಜರ ಹೆಸರನ್ನು ಪೂರ್ಣವಾಗಿ ಬಳಸಿ, ಛತ್ರಪತಿ ಶಿವಾಜಿ ಮಹಾರಾಜ ಅವರ ಹೆಸರನ್ನು ಏಕವಚನದಲ್ಲಿ ಬಳಸಲಾಗಿದೆ ಎಂದು ನೆಟ್ಟಿಗರು ಕಿಡಿಕಾರಿದ್ದರು. ಶಿವಾಜಿ ಮಹಾರಾಜ ಮರಾಠರಿಗೆ ಮಾದರಿ ನಾಯಕ. ಎಲ್ಲರಿಗೂ ಅವರ ಬಿರುದಾಂಕಿತಗಳಿಂದ ಸಂಭೋದಿಸಿ ಶಿವಾಜಿ ಅವರಿಗೆ ಅವಮಾನಿಸಲಾಗಿದೆ. ಹಾಗಾಗಿ ವಾಹಿನಿ ಮತ್ತು ಅಮಿತಾಬ್ ಬಚ್ಚನ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ನೆಟ್ಟಿಗರು ಟ್ವೀಟ್ ಮಾಡಲಾರಂಭಿಸಿದ್ದರು.

    ಎಚ್ಚೆತ್ತಕೊಂಡ ಖಾಸಗಿ ವಾಹಿನಿ ತನ್ನ ವಕ್ತಾರರ ಮೂಲಕ ಕ್ಷಮೆಯನ್ನು ಕೇಳಿದೆ. ಕಾರ್ಯಕ್ರಮದ ಆಯೋಜಕರಾದ ಸಿದ್ಧಾರ್ಥ ಬಸು ಸಹ ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್ ಅವರ ಗೌರವ ಸ್ಮರಣಾರ್ಥವಾಗಿ ಈ ಪ್ರಶ್ನೆಯನ್ನು ಕೇಳಲಾಗಿತ್ತೇ ವಿನಃ ಅಗೌರವ ತೋರಿಸುವ ಉದ್ದೇಶದಿಂದ ಅಲ್ಲ. ಈ ಸೀಸನ್ ನಲ್ಲಿ ಹಲವು ರಾಜರ ಬಗ್ಗೆ ಪ್ರಶ್ನೆ ಕೇಳಲಾಗಿದ್ದು, ಎಲ್ಲರ ಹೆಸರನ್ನು ಗೌರವಪೂರ್ವಕವಾಗಿಯೇ ಬಳಸಲಾಗಿದೆ. ಅಜಾಗರೂಕತೆ ಮತ್ತು ಸಿಬ್ಬಂದಿಯ ಲೋಪದಿಂದಾಗಿ ಈ ತಪ್ಪಾಗಿದ್ದು ಎಲ್ಲರಲ್ಲಿ ಕ್ಷಮೆ ಕೇಳುತ್ತೇವೆ ಎಂದು ಸಿದ್ಧಾರ್ಥ್ ಬಸು ಸ್ಪಷ್ಟಪಡಿಸಿದ್ದಾರೆ.

    ಸಿದ್ಧಾರ್ಥ್ ಬಸು ಮಗದೊಂದು ಟ್ವೀಟ್ ನಲ್ಲಿ ಪ್ರಶ್ನೆಯನ್ನು ಸರಿ ಮಾಡಲಾಗಿದೆ ಎಂದು ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಅಮಿತಾಬ್ ಬಚ್ಚನ್, ಕ್ಷಮೆ ಕೇಳಿದ್ದಾರೆ.