Tag: Chhath Puja

  • ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ ಸೂರ್ಯ ದೇವರ ಆರಾಧನೆಗೆ ವ್ಯವಸ್ಥೆ

    ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ ಸೂರ್ಯ ದೇವರ ಆರಾಧನೆಗೆ ವ್ಯವಸ್ಥೆ

    ಬೆಂಗಳೂರು: ಹಲಸೂರು ಕೆರೆಯಲ್ಲಿ (Halasuru Lake) ಸೂರ್ಯ ದೇವರ ಆರಾಧನೆಗೆ (Chhath Puja) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯವಸ್ಥೆ ಮಾಡಿದೆ. ನವೆಂಬರ್ 19 ರಿಂದ ನವೆಂಬರ್ 20 ರವರೆಗೆ ಹಲಸೂರು ಕೆರೆಯಲ್ಲಿ ‘ಛಠ್ ಪೂಜೆ’ (ಸೂರ್ಯದೇವರ ಆರಾಧನೆ) ನಡೆಯಲಿದೆ.

    ಹಲಸೂರು ಕೆರೆಯ ಗಣಪತಿ ವಿಸರ್ಜನೆ ಮಾಡುವ ಕಲ್ಯಾಣಿಯಲ್ಲಿ ಛಠ್ ಪೂಜೆಗೆ ಬಿಬಿಎಂಪಿ ವ್ಯವಸ್ಥೆಗೊಳಿಸಿದೆ. ಸದರಿ ಛಠ್ ಪೂಜೆಯಲ್ಲಿ ಭಾಗವಹಿಸುವ ಸಾರ್ವಜನಿಕರು ಹಲಸೂರು ಕೆರೆಯ ಉತ್ತರ ದಿಕ್ಕಿನಲ್ಲಿರುವ ಅಣ್ಣಸ್ವಾಮಿ ಮೊದಲಿಯಾರ್ ರಸ್ತೆಯ (ಕಾರಾ ಕೆಫೆ ರೆಸ್ಟೋರೆಂಟ್ ಮುಂಭಾಗದ) ಮುಖ್ಯ ದ್ವಾರದ ಮೂಲಕವೇ ಬಂದು, ಹಲಸೂರು ಕೆರೆಯ ಕಲ್ಯಾಣಿಯಲ್ಲಿ ಮಾತ್ರವೇ ಛಠ್ ಪೂಜೆಯನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

    ಸದರಿ ಪೂಜೆಯಲ್ಲಿ ಭಾಗವಹಿಸುವ ಸಾರ್ವಜನಿಕರು ಯಾವುದೇ ರೀತಿಯ ಪ್ಲಾಸ್ಟಿಕ್ ಪೇಪರ್ ಮುಂತಾದ ವಿಷಯುಕ್ತ ವಸ್ತುಗಳನ್ನು ಕೆರೆಯ ಬಳಿ ತರಬಾರದೆಂದು ಸೂಚಿಸಲಾಗಿದೆ. ಇದನ್ನೂ ಓದಿ: ಹಳಿಯಲ್ಲಿ ಕಬ್ಬಿಣದ ರಾಡ್, ದೊಡ್ಡ ಮರದ ದಿಮ್ಮಿ – ಮೈಸೂರಿನಲ್ಲಿ ತಪ್ಪಿತು ಭಾರೀ ರೈಲು ದುರಂತ

    ಹಲಸೂರು ಕೆರೆಯ ಬೇರೆ ದಿಕ್ಕಿನ ದ್ವಾರಗಳು ಮುಚ್ಚಿರುತ್ತದೆ. ಪೂರ್ವ ವಲಯದ ಬೇರೆ ಯಾವುದೇ ಸ್ಥಳದಲ್ಲಿ ಛಠ್ ಪೂಜೆಗೆ ವ್ಯವಸ್ಥೆ ಕಲ್ಪಿಸಿರುವುದಿಲ್ಲ ಎಂದು ಪೂರ್ವ ವಲಯ ಆಯುಕ್ತರಾದ ಶ್ರೀಮತಿ ಆರ್ ಸ್ನೇಹಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಹಲೋ ಅಪ್ಪ, ನಾನು ಕೊಟ್ಟಿರೋದು ನಾಲ್ಕೋ ಐದೋ ಅಷ್ಟು ಮಾತ್ರ ಮಾಡಿ – ಯತೀಂದ್ರ ಮಾತಿನ ಮರ್ಮ ಏನು?

  • 4 ದಿನದ ಛತ್ ಪೂಜೆಯಲ್ಲಿ 53 ಜನ ಸಾವು- ಆರ್ಥಿಕ ನೆರವು ಘೋಷಿಸಿದ ನಿತೀಶ್ ಕುಮಾರ್

    4 ದಿನದ ಛತ್ ಪೂಜೆಯಲ್ಲಿ 53 ಜನ ಸಾವು- ಆರ್ಥಿಕ ನೆರವು ಘೋಷಿಸಿದ ನಿತೀಶ್ ಕುಮಾರ್

    ಪಾಟ್ನಾ: ಛತ್ ಪೂಜೆ (Chhath Puja) ಹಬ್ಬದ ಸಂಭ್ರಮದ ನಡುವೆ ಬಿಹಾರದಲ್ಲಿ (Bihar) ದುಃಖದ ಛಾಯೆ ಆವರಿಸಿದೆ. 4 ದಿನಗಳ ಛತ್ ಪೂಜೆ ವೇಳೆ ರಾಜ್ಯದ ವಿವಿಧೆಡೆ 53 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬಿಹಾರದ ಹಲವು ನದಿಗಳಲ್ಲಿ ಮುಳುಗಿ ಯಾತ್ರಾರ್ಥಿಗಳು ದುರಂತ ಸಾವನ್ನಪ್ಪಿರುವುದನ್ನು ವಿಪತ್ತು ನಿರ್ವಹಣಾ ಪಡೆ ಖಚಿತಪಡಿಸಿದೆ. ನಿತೀಶ್ ಕುಮಾರ್ (Nitish Kumar) ಸರ್ಕಾರ ಮೃತರ ಕುಟುಂಬಗಳಿಗೆ ಆರ್ಥಿಕ ನೆರವು ಘೋಷಿಸಿದೆ.

    ದೀಪಾವಳಿಯ ಕೊನೆಯಲ್ಲಿ ಇಡೀ ಬಿಹಾರ ಛತ್ ಪೂಜೆಯನ್ನು ಆಚರಿಸಿದೆ. ಸಾಮಾನ್ಯವಾಗಿ ಜನರು ಛತ್ ಪೂಜೆಯನ್ನು 4 ದಿನಗಳ ಕಾಲ ಆಚರಿಸುತ್ತಾರೆ. ಈ ಪೈಕಿ ರಾಜ್ಯಾದ್ಯಂತ ಹಲವೆಡೆ ದುರಂತಗಳು ಸಂಭವಿಸಿದೆ. ಛತ್ ಪೂಜೆ ವೇಳೆ ನೀರಿನಲ್ಲಿ ಮುಳುಗಿ ಒಟ್ಟು 53 ಮಂದಿ ಸಾವನ್ನಪ್ಪಿದ್ದಾರೆ.

    ಅಕ್ಟೋಬರ್ 30 ರಂದು ಪೂರ್ಣಿಯಾ ಜಿಲ್ಲೆಯೊಂದರಲ್ಲೇ 5 ಜನರು ಮುಳುಗಿದ್ದಾರೆ. ಮತ್ತೊಂದೆಡೆ ಮುಜಾಫರ್‌ಪುರ, ಸಮಸ್ತಿಪುರ ಹಾಗೂ ಸಹರ್ಸಾದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಗಯಾ, ಬೇಗುಸರೈ, ಕತಿಹಾರ್, ಬಕ್ಸರ್, ಕೈಮೂರ್, ಸಿತಾರ್ಹಿ, ಬಂಕಾದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಹಬ್ಬದ ಕೊನೆಯ ದಿನ ಅಕ್ಟೋಬರ್ 31 ರಂದು ಇಡೀ ರಾಜ್ಯದಲ್ಲಿ 18 ಜನರು ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣಾ ಪಡೆ ತಿಳಿಸಿದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್- ಪ್ರಕರಣ ರದ್ದು ಕೋರಿ ಡಿಕೆಶಿ ಅರ್ಜಿ

    ಹಬ್ಬದ ವೇಳೆ ರಾಜ್ಯದಲ್ಲಿ 53 ಮಂದಿ ಸಾವನ್ನಪ್ಪಿರುವ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಮೃತರನ್ನು ಶೀಘ್ರವಾಗಿ ಗುರುತಿಸಿ ಕುಟುಂಬಗಳಿಗೆ ಪರಿಹಾರ ನೀಡುವಂತೆ ನಿತೀಶ್ ಕುಮಾರ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಇಂದಿರಾ ಗಾಂಧಿ ಪುಣ್ಯಸ್ಮರಣೆ – ಅನ್ನಸಂತರ್ಪಣೆ ವೇಳೆ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಬಿಜೆಪಿ ಬೆಂಬಲಿಗರಿಂದ ಹಲ್ಲೆ

    Live Tv
    [brid partner=56869869 player=32851 video=960834 autoplay=true]

  • ಯಮುನಾ ಜಲ ಶುದ್ಧವಾಗಿದೆ ಎಂದು ನಿರೂಪಿಸಲು ಅದೇ ನೀರಿನಲ್ಲಿ ಸ್ನಾನ ಮಾಡಿದ ಜಲಮಂಡಳಿ ನಿರ್ದೇಶಕ

    ಯಮುನಾ ಜಲ ಶುದ್ಧವಾಗಿದೆ ಎಂದು ನಿರೂಪಿಸಲು ಅದೇ ನೀರಿನಲ್ಲಿ ಸ್ನಾನ ಮಾಡಿದ ಜಲಮಂಡಳಿ ನಿರ್ದೇಶಕ

    ನವದೆಹಲಿ: ಯಮುನಾ ಜಲ (Yamuna River) ಕಲುಷಿತವಾಗಿದೆ ಎಂದು ಆರೋಪಗಳು ಕೇಳಿ ಬಂದ ಹಿನ್ನೆಲೆ ನೀರು ಶುದ್ಧವಾಗಿದೆ ಎಂದು ನಿರೂಪಿಸಲು ದೆಹಲಿಯ ಜಲ ಮಂಡಳಿ ನಿರ್ದೇಶಕರು (Delhi Jal Board Director)  ಅದೇ ನೀರಿನಲ್ಲಿ ಸ್ನಾನ ಮಾಡಿರುವ ಪ್ರಸಂಗ ನಡೆದಿದೆ.

    ದೆಹಲಿಯಲ್ಲಿ ಛತ್ ಪೂಜೆ (Chhath Puja) ಸಮೀಪಿಸುತ್ತಿದ್ದಂತೆ ಯಮುನಾ ನದಿ ನೀರಿಗೆ ರಾಸಾಯನಿಕ ಸಿಂಪಡಿಸಿ ಶುಚಿಗೊಳಿಸಲಾಗಿದೆ. ಇದರಿಂದ ನದಿ ನೀರು ವಿಷಪೂರಿತವಾಗಿದ್ದು, ಕಲುಷಿತಗೊಂಡಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಜಲ ಮಂಡಳಿ ನಿರ್ದೇಶಕ ಸಂಜಯ್ ಶರ್ಮಾ (Sanjay Sharma) ಯಮುನಾ ನೀರಿನಲ್ಲಿ ಸ್ಥಳದಲ್ಲೇ ಸ್ನಾನ ಮಾಡಿ ನೀರು ಕಲುಷಿತಗೊಂಡಿಲ್ಲ ಎಂಬುದನ್ನು ನಿರೂಪಿಸಲು ವೀಡಿಯೋ ಮಾಡಿ ಜಲ ಮಂಡಳಿಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಯಮುನಾ ನದಿ ಸ್ವಚ್ಛಗೊಳಿಸುತ್ತಿದ್ದ ಅಧಿಕಾರಿ ಮೇಲೆ ಬಿಜೆಪಿ ಸಂಸದರ ದರ್ಪ

    ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಂಜಯ್ ಶರ್ಮಾ, ನೀರಿಗೆ ರಾಸಾಯನಿಕ ಸಿಂಪಡಿಸುವ ಮುನ್ನ ಈ ಬಗ್ಗೆ ಎಲ್ಲಾ ಮುಂಜಾಗೃತಾ ಕ್ರಮವನ್ನು ತೆಗೆದುಕೊಂಡಿದ್ದೇವೆ. ಹಾಗಾಗಿ ನೀರು ಕಲುಷಿತಗೊಂಡಿಲ್ಲ. ಈ ನೀರಿನಿಂದ ಯಾವುದೇ ಸಮಸ್ಯೆಯಾಗಿಲ್ಲ. ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ನಿರೂಪಿಸಲು ಸ್ವತಃ ನಾನೇ ನೀರಿನಲ್ಲಿ ಸ್ನಾನ ಮಾಡಿದ್ದೇನೆ. ಸುಳ್ಳು ಆರೋಪಗಳು ಕೇಳಿ ಬಂದ ಕಾರಣ ಈ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಮನ್ ಕಿ ಬಾತ್‍ನಲ್ಲಿ ಬೆಂಗಳೂರಿನ ಸುರೇಶ್ ಕುಮಾರ್​ರನ್ನು ಪ್ರಶಂಸಿಸಿದ ಮೋದಿ

    ಛತ್ ಪೂಜೆಗೂ ಮುನ್ನ ಯಮುನಾ ನದಿಗೆ ರಾಸಾಯನಿಕ ಸಿಂಪಡಿಸುತ್ತಿದ್ದ ದೆಹಲಿ ಜಲ ಮಂಡಳಿ (DJB) ಅಧಿಕಾರಿಗಳೊಂದಿಗೆ ನಿನ್ನೆ ಬಿಜೆಪಿ ಸಂಸದ ಪರ್ವೇಶ್ ವರ್ಮಾ (Parvesh Verma) ವಾಗ್ದಾಳಿ ನಡೆಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪೂಜೆಗಾಗಿ ಅಡುಗೆ ಮಾಡುತ್ತಿದ್ದಾಗ ಗ್ಯಾಸ್ ಸಿಲಿಂಡರ್ ಸ್ಫೋಟ – ಹಲವರ ಸ್ಥಿತಿ ಗಂಭೀರ

    ಪೂಜೆಗಾಗಿ ಅಡುಗೆ ಮಾಡುತ್ತಿದ್ದಾಗ ಗ್ಯಾಸ್ ಸಿಲಿಂಡರ್ ಸ್ಫೋಟ – ಹಲವರ ಸ್ಥಿತಿ ಗಂಭೀರ

    ಪಾಟ್ನಾ: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಬೆಂಕಿ (Fire) ಅನಾಹುತವಾಗಿ 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಬಿಹಾರದ (Bihar) ಔರಂಗಬಾದ್‍ನಲ್ಲಿ ನಡೆದಿದೆ.

    ಶಹಗಂಜ್ ಪ್ರದೇಶದಲ್ಲಿ ಅನಿಲ್ ಗೋಸ್ವಾಮಿ ಅವರ ಕುಟುಂಬಸ್ಥರು ಛಠ್ ಪೂಜೆಗಾಗಿ (Chhath Puja) ಪ್ರಸಾದವನ್ನು ತಯಾರಿಸುತ್ತಿದ್ದಾಗ ಗ್ಯಾಸ್ ಸಿಲಿಂಡರ್‍ಗೆ ಬೆಂಕಿ ಹತ್ತಿಕೊಂಡಿದೆ. ಇದರಿಂದ ಅನಿಲ ಸೋರಿಕೆ ಆಗಿದ್ದು, ಭಾರೀ ಬೆಂಕಿ ಹೊತ್ತಿಕೊಂಡಿದೆ. ಅದನ್ನು ನಂದಿಸಲು ಸ್ಥಳೀಯರು ಎಲ್ಲ ಪ್ರಯತ್ನಗಳನ್ನು ಮಾಡಿದ್ದರು. ಆದರೆ ಪ್ರಯತ್ನ ವ್ಯರ್ಥವಾಗಿದೆ.

    crime

    ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದರು. ಆದರೆ, ಬೆಂಕಿಯ ತೀವ್ರತೆ ಹೆಚ್ಚಾಗಿ ಸಿಲಿಂಡರ್ ಸ್ಫೋಟಗೊಂಡಿದ್ದು, 30ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ವೇಳೆ ಬೆಂಕಿ ನಂದಿಸಲು ಬಂದಿದ್ದ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ. ಇದನ್ನೂ ಓದಿ: ಹಲವು ಪ್ರತಿಪಕ್ಷ ನಾಯಕರ ಭದ್ರತೆ ಹಿಂಪಡೆದ ಮಹಾರಾಷ್ಟ್ರ ಸರ್ಕಾರ

    ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಔರಂಗಾಬಾದ್ ಸದರ್ ಆಸ್ಪತ್ರೆಗೆ ರವಾನಿಸಲಾಗಿದೆ. ಹಾಗೂ ಹಲವರು ಖಾಸಗಿ ನರ್ಸಿಂಗ್ ಹೋಮ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಕಾರಣವನ್ನು ಆಡಳಿತವು ಇನ್ನೂ ಖಚಿತಪಡಿಸಿಲ್ಲ ಎಂದು ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಹೇಳಿದರು. ಇದನ್ನೂ ಓದಿ: ಜನಪ್ರತಿನಿಧಿಯಾಗುವವರೆಗೂ ಗುದ್ದಲಿ ಹಿಡಿಯಲ್ಲ- ನಿಖಿಲ್ ಕುಮಾರಸ್ವಾಮಿ ಶಪಥ

    Live Tv
    [brid partner=56869869 player=32851 video=960834 autoplay=true]

  • ಆಟೋ, ಟ್ರಕ್ ನಡುವೆ ಭೀಕರ ಅಪಘಾತ – 9 ಮಂದಿ ಸಾವು

    ಆಟೋ, ಟ್ರಕ್ ನಡುವೆ ಭೀಕರ ಅಪಘಾತ – 9 ಮಂದಿ ಸಾವು

    ದಿಸ್ಪುರ್: ಆಟೋ ರಿಕ್ಷಾ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಮೂವರು ಅಪ್ರಾಪ್ತರು ಸೇರಿದಂತೆ ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿರುವ ಘಟನೆ ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಗುರುವಾರ ಬೆಳಿಗ್ಗೆ 7.30ರ ಸುಮಾರಿಗೆ ಜರುಗಿದ್ದು, ಮೃತರು ಛಠ್ ಪೂಜಾ ವಿಧಿವಿಧಾನಗಳನ್ನು ಮುಗಿಸಿ ಹಿಂದಿರುಗುತ್ತಿದ್ದರು. ಈ ವೇಳೆ ಕರೀಂಗಂಜ್‍ನ ಅಸ್ಸಾಂ-ತ್ರಿಪುರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 8 ರಲ್ಲಿ ಆಟೋ-ರಿಕ್ಷಾ ಮತ್ತು ಸಿಮೆಂಟ್ ಸಾಗಿಸುವ ಲಾರಿ ಮುಖಾಮುಖಿ ಡಿಕ್ಕಿಹೊಡೆದಿದೆ. ಇದನ್ನೂ ಓದಿ: ಯಮುನಾ ನದಿಯಲ್ಲಿ ವಿಷಕಾರಿ ನೊರೆ – ಜನರಲ್ಲಿ ಆತಂಕ

    ಮೃತರನ್ನು ದುಜಾ ಬಾಯಿ ಪಣಿಕಾ, ಸಾಲು ಬಾಯಿ ಪಣಿಕಾ, ಗರುವ್ ದಾಸ್ ಪಣಿಕಾ, ಶಂಭು ದಾಸ್ ಪಣಿಕಾ, ಲಾಲೋನ್ ಗುಸ್ವಾಮಿ, ಪೂಜಾ ಗೋರ್ಹ್, ದೇಬ್ ಗೋರ್ಹ್, ಸಾನು ರೀ, ಮಾಂಗ್ಲೇ ಕರ್ಮಾಕರ್ ಮತ್ತು ತೂಪು ಕರ್ಮಾಕರ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಕಾನ್ಪುರದಲ್ಲಿ ಝಿಕಾ ವೈರಸ್ ಪತ್ತೆ – ಮತ್ತೆ 3 ಪ್ರಕರಣ, ಸೋಂಕಿತರ ಸಂಖ್ಯೆ 91ಕ್ಕೆ ಏರಿಕೆ

    ಈ ಕುರಿತಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಟ್ವಿಟರ್‌ನಲ್ಲಿ, ಇಂದು ಬೆಳಿಗ್ಗೆ ಪಾಥರ್‍ಖಂಡಿಯ ಬೈತಖಾಲ್‍ನಲ್ಲಿ ಸಂಭವಿಸಿದ ಅಪಘಾತದಲ್ಲಿ 9 ಜನರ ದುರಂತ ಸಾವಿಗೆ ನಾನು ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಗಾಯಗೊಂಡ ಓರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋಗೆ ಡಿಕ್ಕಿ ಹೊಡೆದು ನಂತರ ಸ್ಥಳದಿಂದ ಪರಾರಿಯಾಗಿದ್ದ ಟ್ರಕ್‍ನ ಚಾಲಕನನ್ನು ಪತ್ತೆಹಚ್ಚಲು ಇದೀಗ ಅಸ್ಸಾಂ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.