Tag: Chettinad

  • ಚಿಕನ್ ಚೆಟ್ಟಿನಾಡ್ ಮಸಾಲಾ ಸಖತ್ ಟೇಸ್ಟಿ – ಯಾವತ್ತಾದ್ರೂ ಟ್ರೈ ಮಾಡಿದ್ದೀರಾ?

    ಚಿಕನ್ ಚೆಟ್ಟಿನಾಡ್ ಮಸಾಲಾ ಸಖತ್ ಟೇಸ್ಟಿ – ಯಾವತ್ತಾದ್ರೂ ಟ್ರೈ ಮಾಡಿದ್ದೀರಾ?

    ಚಿಕನ್ ಚೆಟ್ಟಿನಾಡ್ ಮಸಾಲಾ ಸಾಂಪ್ರದಾಯಿಕ ಶೈಲಿಯ ಮಸಾಲೆಯುಕ್ತ ಚಿಕನ್ ಕರಿಯಾಗಿದೆ. ಈ ಚಿಕನ್ ಚೆಟ್ಟಿನಾಡ್ ಪಾಕವಿಧಾನ ತಮಿಳುನಾಡಿನ ವ್ಯಾಪಾರಿ ಸಮುದಾಯವಾದ ಚೆಟ್ಟಿಯಾರ್‌ಗಳಿಂದ ಬಂದಿದೆ ಎನ್ನಲಾಗುತ್ತದೆ. ವಿಶಿಷ್ಟ, ರುಚಿಕರ, ಸುವಾಸನೆಭರಿತ, ತುಂಬಾನೇ ಜನಪ್ರಿಯ ಆಗಿರುವ ಚೆಟ್ಟಿನಾಡ್ ಚಿಕನ್ ಮಸಾಲಾವನ್ನು ಮನೆಯಲ್ಲಿಯೇ ಹೇಗೆ ಸುಲಭವಾಗಿ ಮಾಡಬಹುದು ಎಂಬುದನ್ನು ನಾವಿಂದು ಹೇಳಿಕೊಡುತ್ತೇವೆ.

    ಬೇಕಾಗುವ ಪದಾರ್ಥಗಳು:
    ಮೂಳೆ ಸಹಿತ ತುಂಡರಿಸಿದ ಚಿಕನ್ – 500 ಗ್ರಾಂ
    ದಾಲ್ಚಿನಿ – ಒಂದು ಇಂಚು ಗಾತ್ರ
    ಏಲಕ್ಕಿ – 2
    ಕರಿಬೇವಿನ ಎಲೆಗಳು – 3-4
    ಸಣ್ಣದಾಗಿ ಹೆಚ್ಚಿದ ಈರುಳ್ಳಿ – 1 ಕಪ್
    ಟೊಮೆಟೊ ಪೇಸ್ಟ್ – ಅರ್ಧ ಕಪ್ (2 ಸಣ್ಣ ಗಾತ್ರದ ಟೊಮೆಟೊ ರುಬ್ಬಿಕೊಳ್ಳಿ)
    ಅರಿಶಿನ ಪುಡಿ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – 4 ಟೀಸ್ಪೂನ್

    ಮಸಾಲೆ ತಯಾರಿಸಲು:
    ಸೋಂಪು – 1 ಟೀಸ್ಪೂನ್
    ಕರಿಮೆಣಸು – 2 ಟೀಸ್ಪೂನ್
    ಜೀರಿಗೆ – 1 ಟೀಸ್ಪೂನ್
    ಒಣ ಕೆಂಪು ಮೆಣಸು – 4
    ಕೊತ್ತಂಬರಿ ಬೀಜ – 1 ಟೀಸ್ಪೂನ್
    ಬೆಳ್ಳುಳ್ಳಿ – 4
    ಸಣ್ಣಗೆ ಹೆಚ್ಚಿದ ಶುಂಠಿ – 1 ಟೀಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ ಚೆಟ್ಟಿನಾಡ್ ಚಿಕನ್ ತಯಾರಿಸಲು ತುಂಡರಿಸಿದ ಚಿಕನ್ ಅನ್ನು ತೊಳೆದು ಟವೆಲ್‌ನಲ್ಲಿ ಶುಚಿಗೊಳಿಸಿ, ಒಣಗಿಸಿ ಒಂದು ಬಟ್ಟಲಿನಲ್ಲಿ ಹಾಕಿ ಮುಚ್ಚಿ ಪಕ್ಕಕ್ಕಿಡಿ.
    * ಚೆಟ್ಟಿನಾಡ್ ಮಸಾಲೆ ತಯಾರಿಸಲು ಒಂದು ಪ್ಯಾನ್‌ನಲ್ಲಿ ಸೋಂಪು, ಕರಿಮೆಣಸು, ಜೀರಿಗೆ, ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜವನ್ನು ಹಾಕಿ ಪರಿಮಳ ಬರುವವರೆಗೆ ಕೆಂಪಗೆ ಹುರಿಯಿರಿ.
    * ಬಳಿಕ ಅದನ್ನು ಮಿಕ್ಸರ್ ಜಾರ್‌ಗೆ ಹಾಕಿ, ಅದಕ್ಕೆ ಶುಂಠಿ, ಬೆಳ್ಳುಳ್ಳಿ, ಸ್ವಲ್ಪ ನೀರು ಹಾಕಿ ನಯವಾದ ಪೇಸ್ಟ್ ಆಗುವಂತೆ ರುಬ್ಬಿಕೊಳ್ಳಿ.
    * ಈಗ ಮಧ್ಯಮ ಉರಿಯಲ್ಲಿ ದೊಡ್ಡ ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ದಾಲ್ಚಿನಿ, ಏಲಕ್ಕಿ ಕಾಳುಗಳು, ಕರಿಬೇವಿನ ಎಲೆಗಳನ್ನು ಹಾಕಿ ಹುರಿಯಿರಿ.
    * ಕತ್ತರಿಸಿದ ಈರುಳ್ಳಿಯನ್ನು ಅದಕ್ಕೆ ಸೇರಿಸಿ. ಈರುಳ್ಳಿ ತಿಳಿ ಕಂದು ಬಣ್ಣ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.

    * ನಂತರ ಟೊಮೆಟೊ ಪೇಸ್ಟ್, ಉಪ್ಪು, ಅರಿಶಿನ ಸೇರಿಸಿ ಮತ್ತು ಮಸಾಲೆಯನ್ನು 10 ನಿಮಿಷಗಳ ಕಾಲ ಫ್ರೈ ಮಾಡಿ. ಮಸಾಲೆ ಎಣ್ಣೆಯಿಂದ ಬೇರ್ಪಡುತ್ತಿದೆ ಎಂದರೆ ಅದು ಸಿದ್ಧವಾಗುತ್ತಿದೆ ಎಂದರ್ಥ.
    * ಈಗ ರುಬ್ಬಿದ ಮಸಾಲೆಯನ್ನು ಅದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
    * ಈ ಹಂತದಲ್ಲಿ ಚಿಕನ್ ಹಾಕಿ, ಅದಕ್ಕೆ ಉಪ್ಪನ್ನು ಸೇರಿಸಿ, ಮಸಾಲೆ ಚಿಕನ್‌ಗೆ ಚೆನ್ನಾಗಿ ಕೋಟ್ ಆಗುವಂತೆ ಮಿಕ್ಸ್ ಮಾಡಿ.
    * ಚಿಕನ್ ತನ್ನ ರಸವನ್ನು ಬಿಡಲು ಪ್ರಾರಂಭಿಸುತ್ತದೆ. ಅದು ಸಂಪೂರ್ಣ ಬೇಯುವವರೆಗೆ ಕಡಿಮೆ ಉರಿಯಲ್ಲಿ ಮುಚ್ಚಿ ಬೇಯಿಸಿ.
    * ನೀವು ಚಿಕನ್ ಗ್ರೇವಿ ಮಾಡಲು ಬಯಸಿದರೆ ಅದಕ್ಕೆ 1 ಕಪ್ ನೀರು ಅಥವಾ ತೆಂಗಿನ ಹಾಲು ಸೇರಿಸಬಹುದು.
    * ಇದೀಗ ಚೆಟ್ಟಿನಾಡ್ ಮಸಾಲಾ ತಯಾರಾಗಿದ್ದು, ಅದನ್ನು ಅನ್ನ ಅಥವಾ ಪರೋಟಾದೊಂದಿಗೆ ಬಡಿಸಿ.

    Live Tv
    [brid partner=56869869 player=32851 video=960834 autoplay=true]