Tag: chethana raj

  • ಚೇತನಾ ರಾಜ್ ಸಾವಿನ ಬೆನ್ನಲ್ಲೇ ಬಾಡಿ ಶೇಮಿಂಗ್ ಬಗ್ಗೆ ವಿನಯಾ ಪ್ರಸಾದ್ ಪುತ್ರಿ ಖಡಕ್ ಮಾತು

    ಚೇತನಾ ರಾಜ್ ಸಾವಿನ ಬೆನ್ನಲ್ಲೇ ಬಾಡಿ ಶೇಮಿಂಗ್ ಬಗ್ಗೆ ವಿನಯಾ ಪ್ರಸಾದ್ ಪುತ್ರಿ ಖಡಕ್ ಮಾತು

    ಸ್ಯಾಂಡಲ್‌ವುಡ್ ನಟಿ ವಿನಯಾ ಪ್ರಸಾದ್ ಪುತ್ರಿ ಪ್ರಥಮ ಪ್ರಸಾದ್, ಚೇತನಾ ರಾಜ್ ಸಾವಿನ ಬೆನ್ನಲ್ಲೇ ಬಾಡಿ ಶೇಮಿಂಗ್ ಬಗ್ಗೆ ಸಿಡಿದೆದ್ದಿದ್ದಾರೆ. ಹಲವು ನಟಿಯರು ಈ ಕುರಿತು ಮಾತನಾಡಿದ್ದರು, ಈಗ ವಿನಯಾ ಪ್ರಸಾದ್ ಪುತ್ರಿ ಬಾಡಿ ಶೇಮಿಂಗ್ ಬಗ್ಗೆ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ

    ಈಗ ತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಅಂತಾ ಕಣ್ತುಂಬ ಕನಸುಗಳನ್ನಿಟ್ಟು ಬಂದಿರೋ ನಟಿ, ಕೆಲ ದಿನಗಳ ಹಿಂದೆ ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಚೇತನಾ ರಾಜ್ ಬಗ್ಗೆ ವಿನಯಾ ಪ್ರಸಾದ್ ಪುತ್ರಿ ಪ್ರಥಮ ಪ್ರಸಾದ್ ಮಾತನಾಡಿದ್ದಾರೆ. ಜೊತೆಗೆ ತಮಗಾದ ಬಾಡಿ ಶೇಮಿಂಗ್ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ: ಮುನಿಸು ಮರೆತು ಮತ್ತೆ ಒಂದಾದ್ರು ಕಿಯಾರಾ- ಸಿದ್ಧಾರ್ಥ್ ಮಲ್ಹೋತ್ರಾ

    ಚೇತನಾ ರಾಜ್ ತೀರಿಕೊಂಡಿದ್ದ ಹಿಂದಿನ ದಿನವಷ್ಟೇ ಭೇಟಿಯಾಗಿದ್ದೆ, ಬೆಳಿಗ್ಗೆ ಏಳುವಷ್ಟರಲ್ಲಿ ಆಕೆ ಇಲ್ಲ ಅನೋದಾದ್ರೆ ಹೇಗೆ ಎಂದು ಪ್ರಥಮ ಪ್ರಸಾದ್ ಪ್ರಶ್ನಿಸಿದ್ದಾರೆ. ಈ ರೀತಿ ಯಾರಿಗೂ ಆಗಬಾರದು. ಇದು ನನ್ನ ದೇಹ ನನ್ನಗಿಷ್ಟವಾದ ರೀತಿಯಲ್ಲಿ ನಾವು ಬದುಕಬೇಕು ಬೇರೆಯವರ ಮಾತಿಗೆ ತಲೆಕೆಡಿಸಿಕೊಳ್ಳಬಾರದು ಎಂದು ಪ್ರಥಮ ಪ್ರಸಾದ್ ಮಾತನಾಡಿದ್ದಾರೆ.

    ಇನ್ನು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಪ್ರಥಮ ಪ್ರಸಾದ್‌ಗೆ ಸಣ್ಣಗಾಗುವ ಕುರಿತು ಪ್ರತಿನಿತ್ಯ ನೂರಾರು ಮೆಸೇಜ್‌ಗಳು ಬರುತ್ತಂತೆ. ತಾಯಿ ವಿನಯಾ ಪ್ರಸಾದ್‌ಗೆ ಹೋಲಿಕೆ ಮಾಡಿ, ನಿಮ್ಮ ತಾಯಿ ಅಷ್ಟು ಸಣ್ಣಗೆ ಇದ್ದೀರೆ ನೀವು ಯಾಕೆ ಅಷ್ಟು ದಪ್ಪಗೆ ಇದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದು ನನ್ನ ದೇಹ, ನನ್ನ ದೇಹದ ಜೊತೆ ಕೊನೆ ಉಸಿರು ಇರುವರೆಗೂ ಇರುತ್ತೇನೆ. ನಾನು ಯಾರ ಮಾತಿಗೂ ತಲೆಕೆಡಿಸಿಕೊಳ್ಳವುದಿಲ್ಲ ಎಂದು ನಿರ್ಧಾರ ಮಾಡಿದ್ದೇನೆ ಎಂದು `ಮಹಾದೇವಿ’ ಸೀರಿಯಲ್ ಖ್ಯಾತಿಯ ಪ್ರಥಮಾ ಪ್ರಸಾದ್ ಮಾತನಾಡಿದ್ದಾರೆ.

  • ಬಾಡಿ ಶೇಮಿಂಗ್ ವಿರುದ್ಧ ನಟಿ ಮಯೂರಿ ಮಾತು

    ಬಾಡಿ ಶೇಮಿಂಗ್ ವಿರುದ್ಧ ನಟಿ ಮಯೂರಿ ಮಾತು

    ಫ್ಯಾಟ್ ಸರ್ಜರಿಗೆ ಒಳಗಾಗಿ ಕಿರುತೆರೆ ನಟಿ ಚೇತನಾ ರಾಜ್ ಸಾವಿನ ನಂತರ ಬಾಡಿ ಶೇಮಿಂಗ್ ಕುರಿತು ಸ್ಯಾಂಡಲ್‌ವುಡ್ ನಟಿಯರು ದನಿಯೆತ್ತಿದ್ದಾರೆ. ರಮ್ಯಾ, ಪ್ರಿಯಾಂಕಾ ಉಪೇಂದ್ರ, ನಂತರ ಇದೀಗ `ಕೃಷ್ಣಲೀಲಾ’ ನಟಿ ಮಯೂರಿ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ.

    ಕಿರುತೆರೆಯ `ಅಶ್ವಿನಿ ನಕ್ಷತ್ರ’ ಸೀರಿಯಲ್‌ನಿಂದ ಶುರುವಾದ ಬಣ್ಣದ ಬದುಕು, `ಕೃಷ್ಣಲೀಲಾ’, ಪೊಗರು ಚಿತ್ರದವರೆಗೂ ನಟಿ ಮಯೂರಿ ತಮ್ಮ ನಟನೆಯ ಮೂಲಕ ಮೋಡಿ ಮಾಡುತ್ತಲೇ ಬಂದಿದ್ದಾರೆ. ಈಗ ಯುವ ಚೇತನಾ ಸಾವಿಗೆ ನಟಿ ಮಯೂರಿ ಕೂಡ ಧ್ವನಿಗೂಡಿಸಿದ್ದಾರೆ. ಬಾಡಿ ಶೇಮಿಂಗ್ ವಿರುದ್ಧ ಮಯೂರಿ ಮಾತನಾಡಿದ್ದಾರೆ.

    ಚಿತ್ರರಂಗದಲ್ಲಿ ಎಲ್ಲಾ ನಟಿಯರಿಗೂ ಸಾಕಷ್ಟು ರೀತಿಯಲ್ಲಿ ಸವಾಲುಗಳ ಎದುರಾಗಿರುತ್ತದೆ. ಆದರೆ, ನಮ್ಮನ್ನು ನಾವು ಪ್ರೀತಿಸುವುದು ಮುಖ್ಯ. ನಾವು ಹೇಗಿದ್ದೀವಿ ಅಂತಾ ನಾವು ಒಪ್ಪಿಕೊಂಡರೆ ಸಾಕು. ನಾಯಕಿಯರು ಮಾತ್ರ ಅಲ್ಲ, ಎಲ್ಲರೂ ಸೌಂದರ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ನಾವು ಸಣ್ಣಗೆ ಅಥವಾ ದಪ್ಪಗೆ ಇದ್ದೇವೆ ಎಂಬ ರೀತಿಯ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಜತೆಗೆ ಎಲ್ಲವನ್ನು ಎದುರಿಸಿ ನಿಲ್ಲಬೇಕು ಎಂದು ಕೃಷ್ಣಲೀಲಾ ಖ್ಯಾತಿಯ ನಟಿ ಮಯೂರಿ ಮಾತನಾಡಿದ್ದಾರೆ. ಇದನ್ನೂ ಓದಿ: 625ಕ್ಕೆ 619 ಅಂಕಗಳನ್ನು ಗಳಿಸಿದ `ಗಟ್ಟಿಮೇಳ’ ಖ್ಯಾತಿಯ ಮಹತಿ ಭಟ್

    ನಟಿ ಮಯೂರಿ ಕೂಡ ಮದುವೆ, ಮಗು ಅಂತಾ ಬ್ಯುಸಿಯಿದ್ದರು. ಈಗ ಮತ್ತೆ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಆಗೋಕೆ ಮಯೂರಿ ರೆಡಿಯಾಗ್ತಿದ್ದಾರೆ. ಸದ್ಯದಲ್ಲೇ ಒಂದೊಳ್ಳೆ ಕಥೆಯ ಮೂಲಕ ಬೆಳ್ಳಿಪರದೆಯಲ್ಲಿ ಮಿಂಚಲಿದ್ದಾರೆ.

  • ಚೇತನಾ ರಾಜ್ ಸಾವು: ಬಾಡಿ ಶೇಮಿಂಗ್‌ ವಿರುದ್ಧ ದನಿಯೆತ್ತಿದ ಅಶ್ವಿತಿ ಶೆಟ್ಟಿ

    ಚೇತನಾ ರಾಜ್ ಸಾವು: ಬಾಡಿ ಶೇಮಿಂಗ್‌ ವಿರುದ್ಧ ದನಿಯೆತ್ತಿದ ಅಶ್ವಿತಿ ಶೆಟ್ಟಿ

    ಕಿರುತೆರೆಯ ಗೀತಾ, ದೊರೆಸಾನಿ ಸೀರಿಯಲ್ ಮೂಲಕ ಪರಿಚಿತರಾಗಿದ್ದ ನಟಿ ಚೇತನಾ ರಾಜ್ ಫ್ಲಾಟ್ ಸರ್ಜರಿಗೆ ಒಳಗಾಗಿ ಸಾವನ್ನಪ್ಪಿದ್ದಾರೆ. ಈಗ ಯುವ ನಟಿ ಚೇತನಾ ರಾಜ್ ಸಾವಿಗೆ ನಟಿ ಅಶ್ವಿತಿ ಶೆಟ್ಟಿ ಕಂಬನಿ ಮಿಡಿದಿದ್ದಾರೆ.

    ಬಣ್ಣದ ಲೋಕದಲ್ಲಿ ತಾನು ಬೆಳಗಬೇಕು ಅಂತಾ ಸಾಕಷ್ಟು ಕನಸುಗಳನ್ನು ಹೊತ್ತು ಬಂದಿದ್ದ ಚೇತನಾ ರಾಜ್ ಪ್ಲಾಟ್ ಸರ್ಜರಿಗೆ ಒಳಗಾಗಿ ಸಾವನ್ನಪ್ಪಿದ್ದಾರೆ. ಇದೀಗ ಯುವ ನಟಿಯ ಸಾವಿಗೆ ಅಶ್ವಿತಿ ಶೆಟ್ಟಿ ಕಂಬನಿ ಮಿಡಿದಿದ್ದಾರೆ. ಈ ಕುರಿತು ಅಶ್ವಿತಿ ಧ್ವನಿಯೆತ್ತಿದ್ದಾರೆ. ಚೇತನಾ ರಾಜ್ ಎಂಬ 21 ವರ್ಷದ ಹುಡುಗಿಯ ಸಾವಿನ ಸುದ್ದಿಯಿಂದ ನನ್ನ ಹೃದಯ ಛಿದ್ರಗೊಂಡಿದೆ. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ. ಈ ಸಮಾಜ ಅದ್ಯಾವಾಗ ಬಾಡಿ ಶೇಮಿಂಗ್ ಮಾಡುವುದನ್ನು ನಿಲ್ಲಿಸುತ್ತದೆಯೋ ಗೊತ್ತಿಲ್ಲ ಎಂದಿದ್ದಾರೆ.

    ತೆಳ್ಳಗಿರುವುದರ ಬಗ್ಗೆಯಾಗಲಿ ಅಥವಾ ದಪ್ಪಗಿರುವವರ ಬಗ್ಗೆಯಾಗಲಿ ನಾವೆಂದೂ ಕಾಮೆಂಟ್ ಮಾಡಬಾರದು. ನಾನು ಕೂಡ ಬಾಡಿ ಶೇಮಿಂಗ್‌ಗೆ ಒಳಗಾಗಿದ್ದೇನೆ. ಆದರೆ ನಾನು ಕೆಟ್ಟ ಕಾಮೆಂಟ್‌ಗಳನ್ನು ಕೇರ್ ಮಾಡುವುದಿಲ್ಲ. ನಾನು ನನ್ನ ದೇಹವನ್ನು ಪ್ರೀತಿಸುತ್ತೇನೆ. ಬದುಕಿರುವುದೇ ದೊಡ್ಡ ಆರ್ಶೀವಾದ ಎಂದು ನಂಬಿದ್ದೇನೆ. ಎಲ್ಲರೂ ತಮ್ಮ ಜೀವವನ್ನು ಪ್ರೀತಿಸಿ ನೀವು ನೀವಾಗಿರಿ ಎಂದು ಸ್ಯಾಂಡಲ್‌ವುಡ್ ನಟಿ ಅಶ್ವಿತಿ ಶೆಟ್ಟಿ ಹೇಳಿದ್ದಾರೆ. ಇದನ್ನೂ ಓದಿ: ನಾಳೆ ಬೆಂಗಳೂರಿಗೆ ಸನ್ನಿ ಲಿಯೋನ್ : ಮಂಡ್ಯಗೆ ಹೋಗಿ ರಕ್ತದಾನ ಮಾಡ್ತಾರಾ ಶೇಷಮ್ಮ?

    `ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ’ ಸಿನಿಮಾ ಸೇರಿದಂತೆ ಹಲವಾರು ಚಿತ್ರ ಮತ್ತು ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದಾರೆ.

  • ಸಿನಿಮಾ ಮೇಕರ್ಸ್ ನಟಿಯರ ಬಾಡಿ ಬಗ್ಗೆ ಕಾಮೆಂಟ್ ಮಾಡುವುದನ್ನ ಬಿಡಿ: ಪ್ರಿಯಾಂಕಾ ಉಪೇಂದ್ರ

    ಸಿನಿಮಾ ಮೇಕರ್ಸ್ ನಟಿಯರ ಬಾಡಿ ಬಗ್ಗೆ ಕಾಮೆಂಟ್ ಮಾಡುವುದನ್ನ ಬಿಡಿ: ಪ್ರಿಯಾಂಕಾ ಉಪೇಂದ್ರ

    ಫ್ಯಾಟ್ ಸರ್ಜರಿಗೆ ಒಳಗಾಗಿ ಕಿರುತೆರೆ ನಟಿ ಚೇತನಾ ರಾಜ್ ಸಾವಿಗೆ ನಟಿ ಪ್ರಿಯಾಂಕಾ ಉಪೇಂದ್ರ ಸಂತಾಪ ಸೂಚಿಸಿದ್ದಾರೆ. ಸೋಷಿಯಲ್ ಮೀಡಿಯಾ ಕಮೆಂಟ್‌ಗಳಿಂದ ಹೀಗೆ ಆಗುತ್ತಿದೆ ಅಂತಾ ಪ್ರಿಯಾಂಕಾ ಚೇತನ್ ರಾಜ್ ಸಾವಿಗೆ ಧ್ವನಿಗೂಡಿಸಿದ್ದಾರೆ.

    ನಟಿಯಾಗಿ ಗುರುತಿಸಿಕೊಳ್ಳಬೇಕು ಅಂತಾ ಸಾಕಷ್ಟು ಕನಸುಗಳೊಂದಿಗೆ ಬಣ್ಣದ ಲೋಕದಲ್ಲಿ ಪರಿಚಿತರಾದ ನಟಿ ಚೇತನ್ ರಾಜ್ ಇತ್ತೀಚೆಗೆ ಫ್ಯಾಟ್ ಸರ್ಜರಿಗೆ ಒಳಗಾಗಿ ಸಾವನ್ನಪ್ಪಿದ್ದಾರೆ. ಚೇತನಾ ಸಾವಿಗೆ ನಟಿ ರಮ್ಯಾ ಧ್ವನಿ ಎತ್ತಿದ್ದರು. ಈಗ ಪ್ರಿಯಾಂಕಾ ಉಪೇಂದ್ರ ನಟಿಯ ಸಾವಿಗೆ ಸಂತಾಪ ಸೂಚಿಸಿದ್ದಾರೆ.

    ಹೊಸ ಕಲಾವಿದರು ಸೈಜ್ ಜೀರೋ ಬಗ್ಗೆ ಬಹಳ ತಲೆಕೆಡಿಸಿಕೊಳ್ಳಬಾರದು. ಸಿನಿಮಾ ಮತ್ತು ಸೀರಿಯಲ್ ಮೇಕರ್ಸ್ ಬಾಡಿ ಬಗ್ಗೆ ಕಾಮೆಂಟ್ ಮಾಡಬಾರದು. ಆದರೆ ಸಿನಿಮಾರಂಗದಲ್ಲಿ ಬಹಳಷ್ಟು ಜನರಿಗೆ ಈ ರೀತಿಯ ತೊಂದರೆ ಆಗುತ್ತಿದೆ. ಸೋಷಿಯಲ್ ಮೀಡಿಯಾ ಕಾಮೆಂಟ್‌ಗೆ ಬಹಳಷ್ಟು ಜನ ತಲೆಕಡಿಸಿಕೊಳ್ತಾರೆ ಅದನ್ನು ಮೊದಲು ಬಿಡಬೇಕು ಎಂದು ಪ್ರಿಯಾಂಕ ಹೇಳಿದ್ದಾರೆ. ಇದನ್ನೂ ಓದಿ: ಬಾಲಿವುಡ್ ಕೆಟ್ಟ ಮನಸ್ಥಿತಿ ಬಯಲು ಮಾಡಿದ ಖ್ಯಾತ ನಟ ಸಿದ್ದಾರ್ಥ

    ಇನ್ನು ಚಿಕಿತ್ಸೆ ಪಡೆಯುವ ಮೊದಲು ತಂದೆ ತಾಯಿಗೆ ಮಾಹಿತಿ ನೀಡಬೇಕು. ಚೇತನಾ ಸಾವು ನನಗೂ ಶಾಕ್ ಕೊಟ್ಟಿದೆ. ಕೆಲ ದಿನಗಳ ಹಿಂದೆ ಮಲೆಯಾಳಂ ನಟಿ ಮತ್ತು ಬೆಂಗಾಳಿ ಚಿತ್ರರಂಗದ ನಟಿಯೊಬ್ಬರು ಸಾವನ್ನಪ್ಪಿದ್ದಾರೆ. ಬಹಳಷ್ಟು ಜನ ಅತಿಯಾದ ಫಿಟ್‌ನೆಸ್‌ನಿಂದ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ನಟಿಯ ಸಾವಿಗೆ ಪ್ರಿಯಾಂಕ ಸಂತಾಪ ಸೂಚಿಸಿದ್ದಾರೆ. ಈ ವೇಳೆ ಸಿನಿಮಾ ರಂಗದಲ್ಲಿ ನಟಿಯರು ಎದುರಿಸುವ ಸವಾಲಗಳ ರಮ್ಯಾ ಮಾತನಾಡಿದ್ರು, ಈ ರಮ್ಯಾ ಮಾತಿಗೆ ಪ್ರಿಯಾಂಕ ಧ್ವನಿಗೂಡಿಸಿದ್ದಾರೆ. ರಮ್ಯಾ ಅವರು ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದು ಸತ್ಯ ಚಿತ್ರರಂಗ ನಟಿಯರು ಕುರಿತು ಯೋಚಿಸುವ ರೀತಿ ಬದಲಾಗಬೇಕು ಎಂದು ಪ್ರಿಯಾಂಕಾ ಪ್ರತಿಕ್ರಿಯಿಸಿದ್ದಾರೆ.