Tag: chethan

  • ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ಮೀರಿ ಹಲವು ಸಮಸ್ಯೆಗಳಿವೆ: ಶೃತಿ ಹರಿಹರನ್

    ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ಮೀರಿ ಹಲವು ಸಮಸ್ಯೆಗಳಿವೆ: ಶೃತಿ ಹರಿಹರನ್

    ಲಯಾಳಂ (Mollywood) ಹೇಮಾ ಕಮಿಟಿಯಂತೆ ಸ್ಯಾಂಡಲ್‌ವುಡ್‌ನಲ್ಲೂ (Sandalwood) ಮಹಿಳೆಯರ ಸುರಕ್ಷತೆಗೆ ಕಮಿಟಿಯಾಗಬೇಕು ಎಂದು ‘ಫೈರ್ ಸಂಸ್ಥೆ’ ಇಂದು (ಸೆ.5) ಸಿಎಂಗೆ ಮನವಿ ಸಲ್ಲಿಸಿದ ಬಳಿಕ ನಟಿ ಶೃತಿ ಹರಿಹರನ್ (Sruthi Hariharan) ‘ಪಬ್ಲಿಕ್ ಟಿವಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ಮೀರಿ ಹಲವು ಸಮಸ್ಯೆಗಳಿವೆ ಎಂದು ಮಾತನಾಡಿದ್ದಾರೆ.

    ಕೇರಳದ ಹೇಮಾ ಕಮಿಟಿ ಹಾಗೇ ನಮ್ಮ ಕನ್ನಡ ಚಿತ್ರರಂಗಕ್ಕೂ ಒಂದು ಕಮಿಟಿ ಬೇಕು. ಮಹಿಳೆಯರು ಸುರಕ್ಷಿತವಾಗಿ ಕೆಲಸ ಮಾಡುವಂತೆ ಆಗಬೇಕು ಎಂದು ಸಿಎಂಗೆ ಮನವಿ ಮಾಡಿರೋದಾಗಿ ಶೃತಿ ಹರಿಹರನ್ ತಿಳಿಸಿದ್ದಾರೆ. ಇದರ ಬಗ್ಗೆ ಇನ್ನಷ್ಟು ಚರ್ಚೆಯಾಗಬೇಕು ಮತ್ತೊಮ್ಮೆ ಸದ್ಯದಲ್ಲೇ ಸಭೆ ಮಾಡೋಣ ಎಂದು ಸಿಎಂ ತಿಳಿಸಿದರು ಎಂದು ನಟಿ ಮಾಹಿತಿ ನೀಡಿದ್ದಾರೆ.

    ‘ಫೈರ್ ಸಂಸ್ಥೆ’ ಈ ಹಿಂದೆಯೇ ಶುರುವಾಗಿತ್ತು. ಇಲ್ಲಿ ನ್ಯಾಯದ ಪ್ರಶ್ನೆ ಬರೋದಿಲ್ಲ ಎಂದು ತಾವು ಈ ಹಿಂದೆ ಆರೋಪ ಮಾಡಿದ್ದ ಮೀಟೂ ವಿಚಾರಕ್ಕೆ ಶೃತಿ ಪ್ರತಿಕ್ರಿಯೆ ನೀಡಿದರು. ಬಳಿಕ ಫೈರ್ ನಿಯೋಗದ ಮೂಲಕ ಗಂಡಾಗಲಿ ಅಥವಾ ಮಹಿಳೆಯರಾಗಲಿ ಯಾರೇ ಆಗಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಇದು ಒಂದೇ ಅಲ್ಲ, ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ಮೀರಿ ಹಲವು ಸಮಸ್ಯೆಗಳಿವೆ. ಇದರ ಕಡಿವಾಣಕ್ಕೆ ಸರ್ಕಾರದ ಬೆಂಬಲ ಕೂಡ ಇರುತ್ತದೆ ಎಂದಿದ್ದಾರೆ ಶೃತಿ ಹರಿಹರನ್.

    ಮಲಯಾಳಂನಲ್ಲಿ ಹೇಮಾ ಕಮಿಟಿ ರಚನೆ ಆದಂತೆ ಕನ್ನಡ ಚಿತ್ರರಂಗದಲ್ಲೂ ಆಗುತ್ತೆ ಎನ್ನುವ ಭರವಸೆಯಿದೆ. ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ಕೆಲ ಸೌಲಭ್ಯಗಳನ್ನು ಕೊಡಬೇಕಾಗುತ್ತದೆ. ಕೆಲಸದ ಸ್ಥಳದಲ್ಲಿ ವಾಶ್‌ರೂಮ್, ವಾಹನದ ವ್ಯವಸ್ಥೆ ಬೇಕಾಗುತ್ತದೆ ಇದು ಕೇವಲ ನಾಯಕಿಯರಿಗೆ ಅಷ್ಟೇ ಅಲ್ಲ. ಜ್ಯೂನಿಯರ್ ಆರ್ಟಿಸ್ಟ್, ಡ್ಯಾನ್ಸರ್‌ಗೆ ಹೀಗೆ ಕೆಲಸ ಮಾಡುವವರಿಗೆ ಸಮಾನತೆ ಇರಬೇಕು ಎಂದು ನಟಿ ಮಾತನಾಡಿದ್ದಾರೆ.

    ಸ್ಯಾಂಡಲ್‌ವುಡ್ ನಟರಾದ ಸುದೀಪ್, ರಮ್ಯಾ, ಶ್ರದ್ಧಾ ಶ್ರೀನಾಥ್, ಆಶಿಕಾ ರಂಗನಾಥ್ ಸೇರಿದಂತೆ 140ಕ್ಕೂ ಹೆಚ್ಚು ಕಲಾವಿದರು, ತಂತ್ರಜ್ಞರು ಮತ್ತು ಸಾಹಿತಿಗಳು ಇದಕ್ಕೆ ಬೆಂಬಲ ಸೂಚಿಸಿರುವ ಬಗ್ಗೆ ನಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೀನಿಯರ್ ಕಲಾವಿದರರಾದ ಅವರು ಹೊಸ ಕಮಿಟಿ ಮಾಡಲು ಬೆಂಬಲ ಸೂಚಿಸಿರುವುದಕ್ಕೆ ನಮಗೂ ಒಂದು ಶಕ್ತಿ ಸಿಕ್ಕಂತೆ ಆಗಿದೆ ಎಂದು ಶೃತಿ ಮಾತನಾಡಿದ್ದಾರೆ.

  • ರಾಜ್ಯದ ಮಗಳು ಮೃತಪಟ್ಟಿದ್ದಾರೆ.. ಯಾಕೆ ನೀವು ಧ್ವನಿ ಎತ್ತುತ್ತಿಲ್ಲ: ಪ್ರಕಾಶ್ ರಾಜ್, ಚೇತನ್ ವಿರುದ್ಧ ಪ್ರಥಮ್ ಕಿಡಿ

    ರಾಜ್ಯದ ಮಗಳು ಮೃತಪಟ್ಟಿದ್ದಾರೆ.. ಯಾಕೆ ನೀವು ಧ್ವನಿ ಎತ್ತುತ್ತಿಲ್ಲ: ಪ್ರಕಾಶ್ ರಾಜ್, ಚೇತನ್ ವಿರುದ್ಧ ಪ್ರಥಮ್ ಕಿಡಿ

    – ನೇಹಾ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ‘ಬಿಗ್ ಬಾಸ್’ ಸ್ಪರ್ಧಿ ಸಾಂತ್ವನ

    ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ (Neha Hiremath) ಹತ್ಯೆ ಪ್ರಕರಣ ಸಂಬಂಧ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಇದೀಗ ಹುಬ್ಬಳ್ಳಿಯ ನೇಹಾ ಮನೆಗೆ ‘ಬಿಗ್ ಬಾಸ್’ ಸೀಸನ್‌ 4ರ (Bigg Boss Kannada 4) ವಿನ್ನರ್ ಪ್ರಥಮ್ (Pratham) ಭೇಟಿ ನೀಡಿ ಸಂತೈಸಿದ್ದಾರೆ. ಈ ವೇಳೆ, ನಟ ಪ್ರಕಾಶ್ ರಾಜ್, ನಟ ಚೇತನ್ ವಿರುದ್ಧ ಪ್ರಥಮ್ ಗರಂ ಆಗಿದ್ದಾರೆ.

    ನೇಹಾ ಅವರ ಪೋಷಕರನ್ನು ಇಂದು (ಏ.21) ಭೇಟಿಯಾಗಿ ‘ಬಿಗ್ ಬಾಸ್’ ಖ್ಯಾತಿಯ ಪ್ರಥಮ್ ಸಾಂತ್ವನ ಹೇಳಿದ್ದಾರೆ. ನೇಹಾ ಹತ್ಯೆ ಮಾಡಿರುವನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಪ್ರಥಮ್ ಮಾತನಾಡಿದ್ದಾರೆ. ನೇಹಾ ಮತ್ತು ಫಯಾಜ್ ಫೋಟೋ ಹಾಕಿ ಜಸ್ಟಿಸ್ ಫಾರ್ ಲವ್ ಅಡಿಬರಹ ನೀಡಿದ್ದ ವೈರಲ್ ವಿಡಿಯೋ ಬಗ್ಗೆ ಮಾತನಾಡಿ ನ್ಯಾಯ ಸಿಗಬೇಕಾಗಿರೋದು ನೇಹಾ ಕುಟುಂಬಕ್ಕೆ ಎಂದು ಮಾತನಾಡಿದ್ದಾರೆ. ಜಸ್ಟಿಸ್ ಫಾರ್ ಲವ್ ಅಂದರೆ ಏನು ಅವರಿಗೆ ಭಾರತ ರತ್ನ ಕೊಡಬೇಕಾ ಎಂದು ಪ್ರಥಮ್ ಗುಡುಗಿದ್ದಾರೆ. ಇದನ್ನೂ ಓದಿ:ಸತತ ಸೋಲುಗಳ ನಂತರ ಮತ್ತೆ ಅದೃಷ್ಟ ಪರೀಕ್ಷೆಗಿಳಿದ ಕೃತಿ ಶೆಟ್ಟಿ

    ಈ ವೇಳೆ, ಎಲ್ಲದಕ್ಕೂ ನರೇಂದ್ರ ಮೋದಿ ಅವರನ್ನೇ ಪ್ರಶ್ನೆ ಮಾಡುತ್ತೀರಾ? ಈಗ ಇಲ್ಲಿ ರಾಜ್ಯದ ಮಗಳು ನೇಹಾ ಮೃತಪಟ್ಟಿದ್ದಾರೆ. ಯಾಕೆ ನೀವು ಧ್ವನಿ ಎತ್ತುತ್ತಿಲ್ಲ ಎಂದು ಪ್ರಕಾಶ್ ರಾಜ್ (Prakash Raj) ಮತ್ತು ಚೇತನ್‌ಗೆ ಪ್ರಥಮ್ ಪ್ರಶ್ನೆ ಮಾಡಿದ್ದಾರೆ.

    ಬರೀ ಹೆಸರಿನಲ್ಲಿ ಅಹಿಂಸಾ ಅಂತ ಇಟ್ಟುಕೊಂಡರೆ ಆಗಲ್ಲ. ಇಂತಹ ಘಟನೆ ಆದಾಗ ಖಂಡಿಸಿಬೇಕು ಎಂದು ಚೇತನ್‌ಗೆ ಪ್ರಥಮ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೊದಲು ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಾತನಾಡೋದು ಬಿಡಿ ಎಂದು ಕಿವಿಹಿಂಡಿದ್ದಾರೆ.

  • ನಾನು ಸನಾತನ ಧರ್ಮದ ವಿರೋಧಿಯಲ್ಲ: ನಟ ಚೇತನ್

    ನಾನು ಸನಾತನ ಧರ್ಮದ ವಿರೋಧಿಯಲ್ಲ: ನಟ ಚೇತನ್

    ನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ (Udayanidhi Stalin) ನೀಡಿರುವ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಈ ಬಗ್ಗೆ ನಟ ಚೇತನ್ ಮಾತನಾಡಿದ್ದಾರೆ. ಧರ್ಮದ ಬಗ್ಗೆ ಉದಯನಿಧಿ ಯಾವ ವ್ಯಾಪ್ತಿಯಲ್ಲಿ ಮಾತನಾಡಿದ್ದಾರೆ ಅನ್ನೋದನ್ನು ನೋಡಬೇಕು ಎಂದು ನಟ ಚೇತನ್ (Chethan) ಮಾತನಾಡಿದ್ದಾರೆ.

    ತುಮಕೂರಿನಲ್ಲಿ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆಗೆ ಚೇತನ್ ಪ್ರತಿಕ್ರಿಯಿಸಿ, ಮಾತನಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಸನಾತನ ಧರ್ಮದ ಬಗ್ಗೆ ಉದಯನಿಧಿ ಯಾವ ವ್ಯಾಪ್ತಿಯಲ್ಲಿ ಹೇಳಿದ್ದಾರೆ ಅನ್ನೋದನ್ನು ನೋಡಬೇಕು. ನಾನು ಸನಾತನ ಧರ್ಮದ ವಿರೋಧಿಯಲ್ಲ. ಸನಾತನ ಧರ್ಮದಲ್ಲಿನ ಅಸಮಾನತೆಯ ವಿರೋಧಿ ಆಗಿದ್ದೇನೆ ಎಂದು ಚೇತನ್ ಮಾತನಾಡಿದರು.

    ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಈ ಮೂರೂ ಧರ್ಮದಲ್ಲೂ ಅಸಮಾನತೆ ಇದೆ. ಕೇಂದ್ರ ಸರ್ಕಾರ ತರಲು ಹೊರಟಿರುವ ಏಕರೂಪ ನಾಗರಿಕ ಸಂಹಿತೆ ವಿಚಾರವಾಗಿ ಸಹಮತವಿದೆ. ಅದು ಸಮಾಜದ ಸಿವಿಲ್ ಕೋಡ್ ಆಗಿರಬೇಕು. ಕಮ್ಯೂನಿಸ್ಟ್‌ಗಳು ಅದನ್ನು ವಿರೋಧಿಸಬಹುದು. ಆದರೆ ಈ ವಿಚಾರದಲ್ಲಿ ನಮ್ಮ ಬೆಂಬಲ ಇದೆ ಎಂದರು ಚೇತನ್. ಇದನ್ನೂ ಓದಿ:Bigg Boss Kannada 10 ಆರಂಭ- ಈ 3 ಸೀರಿಯಲ್‌ಗೆ ಗೇಟ್ ಪಾಸ್

    ಬಳಿಕ ಕಾಂಗ್ರೆಸ್‌ನವರು ಐದು ಗ್ಯಾರಂಟಿ ತಂದು ತೇಪೆ ಹೆಚ್ಚುವ ಕೆಲಸ ಮಾಡುತ್ತಿದ್ದಾರೆ. ಅದನ್ನು ದೇವರಾಜ ಅರಸು ಆಡಳಿತಕ್ಕೆ ಹೋಲಿಸಬೇಡಿ ಎಂದಿದ್ದಾರೆ. ಎಸ್ಸಿ ಎಸ್ಟಿಗಳ ಅನುದಾನ ಗ್ಯಾರಂಟಿಗೆ ಬಳಸಿಕೊಂಡು ಪಕ್ಷದವರು ಮೋಸ ಮಾಡಿದ್ದಾರೆ. ಸಿದ್ದರಾಮಯ್ಯ ರೈತರ ಭೂಮಿಯನ್ನು ಗಣಿಗಾರಿಕೆಗೆ ಕೊಟ್ಟಿದ್ದಾರೆ ಎಂದು ಚೇತನ್ ಕಿಡಿಕಾರಿದ್ದರು. ಅಂದು ಗಣಿಗಾರಿಕೆ ವಿರುದ್ಧವೇ ಸಿದ್ದರಾಮಯ್ಯ ಪಾದಯಾತ್ರೆ ಮಾಡಿದ್ದರು ಎಂದು ಟಾಂಗ್ ಕೊಟ್ಟರು.

    ಲೇಖಕರ ಸಮಾವೇಶವೊಂದರಲ್ಲಿ ಇತ್ತೀಚಿಗೆ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವು ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕೇ ಹೊರತು, ವಿರೋಧಿಸಬಾರದು. ಈ ಪರಿಕಲ್ಪನೆಯು ಅಂತರ್ಗತವಾಗಿ ಹಿಂದುಳಿದಿದೆ. ಇದು ಜಾತಿ ಮತ್ತು ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುತ್ತದೆ. ಮೂಲಭೂತವಾಗಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತದೆ ಎಂದು ಹೇಳಿದ್ದರು. ಈ ಹೇಳಿಕೆ ನಂತರ ವಿವಾದ ಭುಗಿಲೆದ್ದಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಲಿತಕೇರಿಯಲ್ಲಿ ಮಾತ್ರ ಈ ರೀತಿ ನಡೆದಿದೆ: ಕಲುಷಿತ ನೀರು ಸೇವಿಸಿ ಐವರ ಸಾವಿನ ಬಗ್ಗೆ ಚೇತನ್‌ ಪ್ರತಿಕ್ರಿಯೆ

    ದಲಿತಕೇರಿಯಲ್ಲಿ ಮಾತ್ರ ಈ ರೀತಿ ನಡೆದಿದೆ: ಕಲುಷಿತ ನೀರು ಸೇವಿಸಿ ಐವರ ಸಾವಿನ ಬಗ್ಗೆ ಚೇತನ್‌ ಪ್ರತಿಕ್ರಿಯೆ

    ಕವಾಡಿಗರಹಟ್ಟಿಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ನಟ ಚೇತನ್‌ ಸಾಂತ್ವನ

    ಚಿತ್ರದುರ್ಗ (Chitradurga) ನಗರದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು(Polluted Water Case) ಸೇವಿಸಿ ಐವರು ಸಾವನ್ನಪ್ಪಿದ್ದರು. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಲು ಸ್ಯಾಂಡಲ್‌ವುಡ್ ನಟ ಚೇತನ್ (Actor Chethan) ಭೇಟಿ ನೀಡಿದ್ದಾರೆ. ಈ ವೇಳೆ ನಟನ ಜೊತೆ ಡಿಎಸ್‌ಎಸ್ ಮುಖಂಡರು ಸಾಥ್ ನೀಡಿದ್ದಾರೆ.

    ಜುಲೈ 30ರಿಂದ ಇಲ್ಲಿಯವರೆಗೆ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ನೂರಾರು ಜನರು ಅಸ್ವಸ್ಥರಾಗಿದ್ದರು. ಬಳಿಕ ಐವರು ಮೃತಪಟ್ಟಿದ್ದರು. ಕವಾಡಿಗರಹಟ್ಟಿಯಲ್ಲಿ ಸೂತಕದ ಛಾಯೆ ಮನೆ ಮಾಡಿದ್ದು, ಮೈನಾ ಹೀರೋ ಚೇತನ್, ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಬಂದಿದ್ದಾರೆ. ಬಳಿಕ ಈ ಪ್ರಕರಣದ ಬಗ್ಗೆ ನಟ ಪ್ರತಿಕ್ರಿಯೆ ನೀಡಿದ್ದಾರೆ.

    ದಲಿತಕೇರಿಯಲ್ಲಿ ಮಾತ್ರ ಈ ರೀತಿ ಪ್ರಕರಣ ನಡೆದಿದೆ. ಇಡೀ ಸರ್ಕಾರಿ ವ್ಯವಸ್ಥೆಯ ವೈಫಲ್ಯ ಈ ಪ್ರಕರಣದಿಂದ ಎದ್ದು ಕಾಣುತ್ತಿದೆ. ದ್ವೇಷದಿಂದ ವಿಷ ಬೆರೆಸಿದ ಆರೋಪದ ಬಗ್ಗೆಯೂ ತನಿಖೆ ನಡೆಯಲಿ. ಸರ್ಕಾರದಿಂದ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ. ಕವಾಡಿಗರಹಟ್ಟಿ ಪ್ರಕರಣದ ಬಗ್ಗೆ ಉನ್ನತಮಟ್ಟದ ತನಿಖೆ ಆಗಲೇಬೇಕು ಎಂದು ನಟ ಮಾತನಾಡಿದ್ದಾರೆ. ಎಸ್‌ಸಿಪಿ, ಟಿಎಸ್‌ಪಿ ಹಣ ಸರ್ಕಾರದಿಂದ ದುರ್ಬಳಕೆಯಾಗಿದೆ. ದಲಿತರ ಅಭಿವೃದ್ಧಿಗೆ ಎಂದು ಮೀಸಲಿದ್ದ ಹಣವನ್ನ 5 ಗ್ಯಾರಂಟಿಗೆ ಸರ್ಕಾರ ಬಳಕೆ ಮಾಡಿದೆ ಎಂದು ಚೇತನ್ ಆರೋಪ ಮಾಡಿದ್ದಾರೆ. ಇದನ್ನೂ ಓದಿ:ಬಿಪಾಶಾ ಬಸು ಮಗಳ ಹಾರ್ಟ್‌ನಲ್ಲಿ ಹೋಲ್- ಕಣ್ಣೀರಿಟ್ಟ ನಟಿ

    ಐವರು ಮೃತಪಟ್ಟ ಕುಟುಂಬಸ್ಥರ ಮನೆಗೆ ಆರೋಗ್ಯ ಸಚಿವ ದಿನೇಶ್ ಗಂಡೂರಾವ್ (Dinesh Gundu Rao) ಅವರು ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಬಳಿಕ ಆ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಚೆಕ್ ನೀಡಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟ ಚೇತನ್‌ ಭಾರತದ ವೀಸಾ ರದ್ದು

    ನಟ ಚೇತನ್‌ ಭಾರತದ ವೀಸಾ ರದ್ದು

    ಬೆಂಗಳೂರು: ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುತ್ತಿದ್ದ ಚೇತನ್‌ (Chethan) ಅವರ ವೀಸಾವನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ.

    ಚೇತನ್‌ ಅಹಿಂಸಾ ಅವರ ಸಾಗರೋತ್ತರ ವೀಸಾವನ್ನು (OCI) ಕೇಂದ್ರ ಗೃಹ ಇಲಾಖೆ ರದ್ದುಗೊಳಿಸಿದೆ. ಮಾರ್ಚ್ 28 ರಂದು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಿಂದ (FRRO) ಪತ್ರವನ್ನು ಚೇತನ್ ಅವರು ಏಪ್ರಿಲ್ 14 ರಂದು ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಇತ್ತೀಚಿನ ರಾಜಕೀಯ ಬೆಳವಣಿಗೆ ನೋಡಿ ಬೇಸರವಾಗಿದೆ: ರಾಜಕೀಯ ನಿವೃತ್ತಿ ಘೋಷಿಸಿದ ವಿ.ಆರ್ ಸುದರ್ಶನ್


    ಸ್ವೀಕರಿಸಿದ 15 ದಿನಗಳಲ್ಲಿ ಒಸಿಐ ಕಾರ್ಡ್‌ ಅನ್ನು ಹಿಂದಿರುಗಿಸುವಂತೆ ಸೂಚಿಸಲಾಗಿದೆ. ಹಿಂದುತ್ವವನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಕ್ಕಾಗಿ ಬೆಂಗಳೂರು ಪೊಲೀಸರು ಮಾರ್ಚ್ 21 ರಂದು ಅವರನ್ನು ಬಂಧಿಸಿದ್ದರು.


    ನಟ ಚೇತನ್‌ ಅವರ ಪೋಷಕರು ಮೂಲತ: ಭಾರತೀಯರಾಗಿದ್ದರೂ ಚೇತನ್‌ ಅಮೆರಿಕದಲ್ಲಿ ಜನಿಸಿದ ಅವರು ಅಮೆರಿಕದ ಪೌರತ್ವ ಹೊಂದಿದ್ದಾರೆ. ಸಾಗರೋತ್ತರ ವೀಸಾದ ಅಡಿ ಭಾರತದಲ್ಲಿ ವಾಸವಾಗಿದ್ದರು.

  • ಬೆಂಕಿಗೆ ತುಪ್ಪ ಸುರಿಯೋ ಕೆಲಸ ನಾನು ಮಾಡಲ್ಲ: ಚೇತನ್‌ಗೆ ಉಪೇಂದ್ರ ಟಾಂಗ್

    ಬೆಂಕಿಗೆ ತುಪ್ಪ ಸುರಿಯೋ ಕೆಲಸ ನಾನು ಮಾಡಲ್ಲ: ಚೇತನ್‌ಗೆ ಉಪೇಂದ್ರ ಟಾಂಗ್

    ಲ್ಲಾಪೆಟ್ಟಿಗೆಯಲ್ಲಿ `ಕಾಂತಾರ'(Kantara Film) ಸೂಪರ್ ಸಕ್ಸಸ್ ಕಂಡಿದೆ. ಈ ಬೆನ್ನಲ್ಲೇ ವಿವಾದ ಕೂಡ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಭೂತಕೋಲವು ಹಿಂದೂ ಸಂಸ್ಕೃತಿಯೇ ಅಲ್ಲ ಎಂದು  ಚೇತನ್ ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ನಟ ಚೇತನ್(Chethan) ಹೇಳಿಕೆಗೆ ರಿಯಲ್ ಸ್ಟಾರ್ ಉಪೇಂದ್ರ(Upendra) ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

    ಸಾಲು ಸಾಲು ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಿರುವ ನಟ ಉಪೇಂದ್ರ ಇದೀಗ `ಕಾಂತಾರ’ ಚಿತ್ರದ ಬಗ್ಗೆ ಹಾಗೂ ನಟ ಚೇತನ್ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. `ಕಾಂತಾರ'(Kantara) ಸಿನಿಮಾ ನೋಡಿಲ್ಲ. ಚಿತ್ರ ನೋಡಿ ರಿಯಾಕ್ಟ್ ಮಾಡ್ತೀನಿ. ಎಲ್ಲರೂ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ಹೇಳಿದ್ದಾರೆ.

    ನಿನ್ನೆ ಘಟನೆಯ ಬಗ್ಗೆ ನಾನು ಏನೂ ಹೇಳಲ್ಲ. ಈ ತರದ ಬೆಳವಣಿಗೆ ಅಸಹ್ಯ ಅನಿಸುತ್ತಿದೆ. ಬೆಂಕಿಗೆ ತುಪ್ಪ ಸುರಿಯೋ ಕೆಲಸ ನಾನು ಮಾಡಲ್ಲ. ಭೂತಾರಾಧನೆ ಅದು ಅವರವರ ವೈಯಕ್ತಿಕ ನಂಬಿಕೆ. ನಾನು ಅದೇ ಊರಿನಿಂದ ಬಂದವನು, ನನಗೆ ವಿಶೇಷವಾದ ನಂಬಿಕೆ ಇದೆ ಜೊತೆಗೆ ನನ್ನ ತಂದೆ ಇವತ್ತಿಗೂ ನಾಗರಾದನೆಯನ್ನೂ ಮಾಡಿಕೊಂಡು ಬರುತ್ತಿದ್ದಾರೆ ಎಂದು ಚೇತನ್ ಹೇಳಿಕೆಗೆ ಉಪೇಂದ್ರ ಪ್ರತಿಕ್ರಿಯೆ ಮಾಡಿದ್ದಾರೆ. ಇದನ್ನೂ ಓದಿ: ರಿಷಬ್ ಹೇಳಿದ ಹಿಂದೂ ಪದ ಒಪ್ಪಲ್ಲ, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ: ಸಮರ್ಥಿಸಿದ ಚೇತನ್

    ಬೆಂಕಿಗೆ ತುಪ್ಪ ಸುರಿಯೋ ಕೆಲಸ ನಾನು ಮಾಡಲ್ಲ ಎಂಬ ಹೇಳಿಕೆಯ ಮೂಲಕ ನಟ ಉಪೇಂದ್ರ ಚೇತನ್‌ಗೆ ಟಾಂಗ್‌ ಕೊಟ್ಟಿದ್ದಾರೆ. ಇನ್ನೂ `ಕಾಂತಾರ’ ಸಿನಿಮಾ ಎಲ್ಲೆಡೆ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸೌತ್‌ನಲ್ಲೂ ಸಿನಿಮಾ ಕೋಟಿ ಕೋಟಿ ಲೂಟಿ ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಅಪ್ಪು ಹುಟ್ಟುಹಬ್ಬಕ್ಕೆ ಜೇಮ್ಸ್ ಸಿನಿಮಾ ರಿಲೀಸ್?

    ಅಪ್ಪು ಹುಟ್ಟುಹಬ್ಬಕ್ಕೆ ಜೇಮ್ಸ್ ಸಿನಿಮಾ ರಿಲೀಸ್?

    ಬೆಂಗಳೂರು: ಕೊನೆಯದಾಗಿ ಪುನೀತ್ ಅಭಿನಯಿಸಿದ್ದ ಬಹು ನಿರೀಕ್ಷಿತ ಜೇಮ್ಸ್ ಸಿನಿಮಾವನ್ನು ಅಪ್ಪು ಹುಟ್ಟುಹಬ್ಬದ ದಿನವಾದ ಮಾರ್ಚ್ 17 ರಂದೇ ಬಿಡುಗಡೆಗೊಳಿಸಲು ಪ್ಲಾನ್ ಮಾಡಲಾಗುತ್ತಿದೆ.

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಇಹಲೋಕ ತ್ಯಜಿಸುವ ಮುನ್ನ ಕೊನೆಯದಾಗಿ ನಟಿಸಿರುವ ಸಿನಿಮಾ ಜೇಮ್ಸ್. ಈ ಚಿತ್ರಕ್ಕೆ ನಿರ್ದೇಶಕ ಚೇತನ್ ಆ್ಯಕ್ಷನ್ ಕಟ್ ಹೇಳಿದ್ದು, ಸಿನಿಮಾ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಈಗಾಗಲೇ ಚಿತ್ರದ ಬಹುತೇಕ ಕೆಲಸ ಪೂರ್ಣಗೊಂಡಿದ್ದು, ಮಾತಿನ ಹಂತದ ಚಿತ್ರೀಕರಣವನ್ನು ಕೂಡ ಪುನೀತ್ ಕಂಪ್ಲೀಟ್ ಮಾಡಿದ್ದಾರೆ. ಜೊತೆಗೆ ಹಾಡಿನ ಚಿತ್ರೀಕರಣಕ್ಕೆ ಪೈಲೆಟ್ ಶೂಟ್ ಕೂಡ ಮಾಡಿದ್ದ ಅಪ್ಪು, ತಮ್ಮ ಹುಟ್ಟುಹಬ್ಬದ ದಿನದಂದೇ ಸಿನಿಮಾ ಬಿಡುಗಡೆ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಪ್ಪಿನಲ್ಲಿ ಚಿತ್ರ ಬಿಡಿಸಿ ಅಪ್ಪುಗೆ ವಿಶೇಷ ವಿದಾಯ ಹೇಳಿದ ತೆಲುಗು ಅಭಿಮಾನಿ

    ಸದ್ಯ ಜೇಮ್ಸ್ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಕೂಡ ಶುರು ಮಾಡಿತ್ತು. ಈಗಾಗಲೇ ಜೇಮ್ಸ್ ಸಿನಿಮಾದ ಚಿತ್ರೀಕರಣ ಶೇಕಡಾ 90 ರಷ್ಟು ಕಂಪ್ಲೀಟ್ ಆಗಿದ್ದು, ಕೇವಲ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಆ ಹಾಡನ್ನು ಗ್ರಾಫಿಕ್ಸ್ ಮೂಲಕ ಮಾಡಲು ನಿರ್ಧರಿಸಲಾಗಿದೆ. ಸಿನಿಮಾ ಡಬ್ಬಿಂಗ್ ಕೆಲಸ ಅರ್ಧ ಮಾಡಿದ್ದಾರೆ ಅವರ ವಾಯ್ಸ್ ಕೂಡ ರೆಕಾರ್ಡ್ ಮಾಡಿ ಕೊಟ್ಟಿದ್ದಾರೆ. ಜೇಮ್ಸ್ ಸಿನಿಮಾಗೆ ಪುನೀತ್ ಅವರು ನ್ಯಾಯ ಒದಗಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್

  • ಅನ್ಯಾಯವನ್ನ ಪ್ರಶ್ನಿಸಿದರೆ ದೇಶದ್ರೋಹದ ಪಟ್ಟ ಕಟ್ಟುತ್ತಾರೆ: ನಟ ಚೇತನ್

    ಅನ್ಯಾಯವನ್ನ ಪ್ರಶ್ನಿಸಿದರೆ ದೇಶದ್ರೋಹದ ಪಟ್ಟ ಕಟ್ಟುತ್ತಾರೆ: ನಟ ಚೇತನ್

    -ಇತಿಹಾಸ ಹೊಂದಿರುವ ಹೆಮ್ಮೆಯ ಕನ್ನಡಿಗ ಟಿಪ್ಪು

    ಕೋಲಾರ: ಸಮಾಜದಲ್ಲಿ ಅನ್ಯಾಯವನ್ನ ಪ್ರಶ್ನಿಸಿದರೆ ದೇಶದ್ರೋಹದ ಪಟ್ಟ ಕಟ್ಟುತ್ತಾರೆ ಎಂದು ಜಿಲ್ಲೆಯಲ್ಲಿ ನಡೆದ ಅಂಬೇಡ್ಕರ್ ಸೇವಾ ಸಮಿತಿ ಕಾರ್ಯಕ್ರಮದಲ್ಲಿ ನಟ ಚೇತನ್ ಬೇಸರ ವ್ಯಕ್ತಪಡಿಸಿದ್ದಾರೆ.

    ಅಂಬೇಡ್ಕರ್ ಸೇವಾ ಸಮಿತಿ 2ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಒಳತಿಗಾಗಿ ಯಾರು ಅನ್ಯಾಯವನ್ನು ಪ್ರಶ್ನಿಸುತ್ತಾರೋ ಅವರಿಗೆ ದೇಶ ದ್ರೋಹದ ಪಟ್ಟ ಕಟ್ಟುತ್ತಾರೆ. ಅನ್ಯಾಯದ ವಿರುದ್ಧ ಹೋರಾಟ ಮಾಡಿದವರನ್ನ ಕೊಲ್ಲುವುದು, ಬಂಧಿಸುವ ಸ್ಥಿತಿ ಇದೆ. ಸಾಹಿತಿ ಎಂ.ಎಂ ಕಲಬುರ್ಗಿ ಎಂತಹ ವ್ಯಕ್ತಿಗಳು ಅನ್ಯಾಯದ ವಿರುದ್ಧ ಹೋದಾಗ ಧಾರ್ಮಿಕ ವಾದಿಗಳು ಹತ್ಯೆಗೈದಿದ್ದಾರೆ. ಆದರೆ ಅನ್ಯಾಯದ ವಿರುದ್ಧ ಹೋರಾಡಲು ಅಂಬೇಡ್ಕರ್ ಸಂವಿಧಾನ ರಚಿಸಿದರು. ಹೀಗಾಗಿ ಬುದ್ಧ ಹಾಗೂ ಅಂಬೇಡ್ಕರ್ ಅವರ ಸಿದ್ಧಾಂತಗಳು ನಮ್ಮ ದೇಶದ ಹೆಮ್ಮೆ ಎಂದು ಹೇಳಿದರು.

    ಸಂವಿಧಾನ ವಿರೋಧಿಗಳು ಧರ್ಮಗಳನ್ನ ಒಡೆಯುತ್ತಿದ್ದಾರೆ. 300 ವರ್ಷಗಳ ಇತಿಹಾಸ ಹೊಂದಿರುವ ಹೆಮ್ಮೆಯ ಕನ್ನಡಿಗ ಟಿಪ್ಪು ಸುಲ್ತಾನ. ಅಂತಹ ಟಿಪ್ಪು ದೇಶ ರಕ್ಷಣೆ ಮಾಡಿ, ಮಠ ಮಾನ್ಯಗಳನ್ನ ರಕ್ಷಣೆ ಮಾಡಿದ್ದಾರೆ. ಆದ್ರೆ ಇಂದು ಅವರನ್ನು ದೇಶದ್ರೋಹಿಯಂತೆ ಬಿಂಬಿಸುತ್ತಿದ್ದಾರೆ. ಟಿಪ್ಪುವಿಗೆ ದೇಶದ್ರೋಹದ ಪಟ್ಟ ಕಟ್ಟುವವರು ನಿಜಕ್ಕೂ ಇತಿಹಾಸವನ್ನೂ ಅರಿತಿಲ್ಲ ಎಂದು ಕಿಡಿಕಾರಿದರು.

    ಹಾಗೆಯೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾಹಿತಿ ಭಗವಾನ್ ಅವರು ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಸಮಾನತೆ ಇದೆ, ಆದ್ರೆ ಮನುಸ್ಮೃತಿಯಲ್ಲಿ ಸಮಾನತೆ ಇಲ್ಲ. ಮನುಸ್ಮೃತಿ ಇರುವುದು ಬ್ರಾಹ್ಮಣರು ಶೂದ್ರರ ಮೇಲೆ ದಾಸ್ಯ ಹೇರಲು ಮಾತ್ರ ಇದೆ. ಆದರೆ ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಬದಿಗೆ ಸರಿಸಿ ಸಂವಿಧಾನವನ್ನು ತಂದರು ಎಂದು ಸಾಹಿತಿ ಭಗವಾನ್ ತಿಳಿಸಿದರು.

    ಸಂವಿಧಾನವನ್ನ ಯಾರೂ ಓದಿ ಅರ್ಥ ಮಾಡಿಕೊಂಡಿಲ್ಲ, ಸಂವಿಧಾನದಲ್ಲಿ ಸಮಾನತೆ ಇದೆ ದಾಸ್ಯ ಇಲ್ಲ. ಬ್ರಾಹ್ಮಣರು ಬಿಟ್ಟು ಉಳಿದವರೆಲ್ಲಾ ಗುಲಾಮರು ಎಂಬುದು ಮನುಸ್ಮೃತಿ. ಆದ್ದರಿಂದ ಸಂವಿಧಾನವನ್ನ ತೆಗೆಯಲು ಹೊರಟಿದ್ದಾರೆ ಎಂದರು. ಬಳಿಕ ಬ್ರಿಟಿಷರು ಬಂದ ಮೇಲೆ ನಮಗೆಲ್ಲಾ ಶಿಕ್ಷಣ ಸಿಕ್ಕಿತು. ಅಲ್ಲಿಯವರೆಗೂ ಎಲ್ಲರೂ ಹೆಬ್ಬಟ್ಟುಗಳೆ ಆಗಿದ್ದರು. ಕೆಲಸಕ್ಕೆ ಬಾರದ ತುಳಿಯುವ, ಕಡಿಯುವ ಇಲ್ಲಸಲ್ಲದ ದೇವರುಗಳನ್ನ ತಂದು ನಮ್ಮ ಮೇಲೆ ಹೇರಿದ್ದಾರೆ. ಇದರಿಂದ ನಾವು ಹೊರಗೆ ಬರಬೇಕು, ಸಂವಿಧಾನವನ್ನು ಅಧ್ಯಯನ ಮಾಡಿ ಅರಿವು ಪಡೆಯಬೇಕು ಎಂದು ಕಿವಿ ಮಾತನ್ನು ಹೇಳಿದರು.

  • ಪ್ರೀತಂಗೌಡ ನಿವಾಸದ ಮುಂದೆ ಕಲ್ಲುತೂರಾಟ ಕೇಸ್ – ರಾತ್ರಿ ಜೆಡಿಎಸ್ ಕಾರ್ಯಕರ್ತ ಅರೆಸ್ಟ್

    ಪ್ರೀತಂಗೌಡ ನಿವಾಸದ ಮುಂದೆ ಕಲ್ಲುತೂರಾಟ ಕೇಸ್ – ರಾತ್ರಿ ಜೆಡಿಎಸ್ ಕಾರ್ಯಕರ್ತ ಅರೆಸ್ಟ್

    ಹಾಸನ: ಬಿಜೆಪಿ ಶಾಸಕ ಪ್ರೀತಂಗೌಡ ನಿವಾಸಕ್ಕೆ ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಕಾರ್ಯಕರ್ತ ಚೇತನ್ ನನ್ನು ಬಂಧಿಸಲಾಗಿದೆ.

    ಪ್ರತಿಭಟನೆ ವೇಳೆ ಚೇತನ್ ಗೌಡ ಕಲ್ಲು ತೂರಿದ್ದು ವಿಡಿಯೋದಿಂದ ಬಹಿರಂಗವಾಗಿತ್ತು. ಚೇತನ್ ಜೆಡಿಎಸ್ ಕಾರ್ಯಕರ್ತನಾಗಿದ್ದು, ಲೋಕೋಪಯೋಗಿ ಸಚಿವ ರೇವಣ್ಣ, ಪ್ರಜ್ವಲ್ ಸೇರಿದಂತೆ ಹಲವು ನಾಯಕರೊಂದಿಗೆ ಫೋಟೋ ತೆಗೆಸಿಕೊಂಡಿಸಿದ್ದನು. ಸದ್ಯಕ್ಕೆ ಬಡಾವಣೆ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 307 ಅಡಿ ಪ್ರಕರಣ ದಾಖಲಿಸಿ ಚೇತನ್ ನನ್ನು ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಹಾಸನ ಬಿಜೆಪಿ ಕಾರ್ಯಕರ್ತನ ಮೇಲೆ ಕಲ್ಲೆಸೆತ ಪ್ರಕರಣ – 8 ಮಂದಿ ವಿರುದ್ಧ ಎಫ್‍ಐಆರ್ ದಾಖಲು

    ಫೆಬ್ರವರಿ 13ರಂದು ಬಿಜೆಪಿ ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿ ನಡೆಯುತ್ತಿದ್ದ ಸಯಮದಲ್ಲಿ ಚೇತನ್ ಎರಡು ಕಲ್ಲೆತ್ತಿಕೊಂಡು ಬಂದು ಜನರ ನಡುವೆ ನಿಂತು ಶಾಸಕರ ಮನೆಯತ್ತ ಕಲ್ಲೆಸೆದಿದ್ದಾನೆ. ಬಳಿಕ ಕಲ್ಲೆಸೆದು ಸದ್ದಿಲ್ಲದೆ ಹಿಂದೆ ಓಡಿ ಹೋಗಿದ್ದನು. ಈ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಂಟು ಜನರ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಈಗ ಶುಕ್ರವಾರ ರಾತ್ರಿ ಚೇತನ್ ನನ್ನು ಬಡಾವಣೆ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಇಂದು ರಾಜ್ಯಾದ್ಯಂತ ಬಿಜೆಪಿ ಹೋರಾಟ- ಜೆಡಿಎಸ್ ವಿರುದ್ಧ ರಾಜ್ಯಪಾಲರಿಗೆ ಕಂಪ್ಲೆಂಟ್

    ಶಾಸಕ ಪ್ರೀತಂ ಗೌಡ ಮಾಜಿ ಪ್ರಧಾನಿ ದೇವೇಗೌಡ ವಿಕೆಟ್ ಹೋಗುತ್ತೆ ಎಂದು ಮಾತನಾಡಿದ ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಅವರ ಮನೆಯ ಎದುರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಶಾಸಕ ಪ್ರೀತಂ ಗೌಡ ಅವರ ಮನೆಯ ಮೇಲೆ ಕಲ್ಲೆಸೆಯಲಾಗಿತ್ತು. ಪರಿಣಾಮ ಬಿಜೆಪಿ ಕಾರ್ಯಕರ್ತ ರಾಹುಲ್ ಕಿಣಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಆದಿವಾಸಿಗಳ ಜೊತೆ ನಟ ಚೇತನ್ ಹೊಸ ವರ್ಷಾಚರಣೆ

    ಆದಿವಾಸಿಗಳ ಜೊತೆ ನಟ ಚೇತನ್ ಹೊಸ ವರ್ಷಾಚರಣೆ

    ಮಡಿಕೇರಿ: ಇಯರ್ ಎಂಡ್, ನ್ಯೂ ಇಯರ್ ಪಾರ್ಟಿಯನ್ನು ಗೆಳೆಯರ ಜೊತೆ, ಸಂಬಂಧಿಕರ ಜೊತೆ, ಕುಟುಂಬದ ಜೊತೆ ಅದ್ಧೂರಿಯಾಗಿ ಆಚರಿಸುತ್ತಾರೆ. ಆದರೆ ‘ಆ ದಿನಗಳು’ ಖ್ಯಾತಿಯ ನಟ ಚೇತನ್ ಆದಿವಾಸಿ ಜನರು, ಮಕ್ಕಳ ಜೊತೆ ಸೇರಿ ಹೊಸ ವರ್ಷವನ್ನು ಆಚರಿಸಿದ್ದಾರೆ.

    ಎರಡು ವರ್ಷದ ಹಿಂದೆ ಕೊಡಗಿನಲ್ಲಿ ನಡೆದ ದಿಡ್ಡಳ್ಳಿ ಆದಿವಾಸಿಗಳ ಹೋರಾಟ ರಾಷ್ಟ್ರಮಟ್ಟದ ಗಮನ ಸೆಳೆದಿತ್ತು. ಅರಣ್ಯ ಇಲಾಖೆಯವರು ಕಾಡಿನಲ್ಲಿ ನೈಸರ್ಗಿಕ ಜೀವನ ನಡೆಸುತ್ತಿದ್ದ ಮಂದಿಯನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದರು. ಆ ವೇಳೆ ಆದಿವಾಸಿಗಳು ಮಾಡಿದ್ದ ಹೋರಾಟ ಕೊನೆಗೂ ಸರ್ಕಾರವನ್ನು ಮಂಡಿಯೂರುವಂತೆ ಮಾಡಿತ್ತು. ನಿರಂತರ ಹೋರಾಟದ ಫಲವಾಗಿ 528 ಮನೆಗಳು ನಿರ್ಮಾಣ ಹಂತದಲ್ಲಿದ್ದು, ಕೊನೆಗಾಲದಲ್ಲಾದರೂ ನಮ್ಮದೇ ಆದ ಸೂರು ಸಿಗುವಂತಾಗಬೇಕು ಎನ್ನುವ ಆದಿವಾಸಿಗಳ ಕನಸು ನನಸಾಗುತ್ತಿದೆ.

    ಸೋಮವಾರ ಸಂಜೆಯೇ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಬಳಿಯ ಬಸವನಹಳ್ಳಿಗೆ ಬಂದಿದ್ದ ನಟ ಚೇತನ್ ಇಯರ್ ಎಂಡ್ ಪಾರ್ಟಿಯನ್ನು ಆದಿವಾಸಿ ಜನರ ಜೊತೆ ಹಾಡಿ ಕುಣಿಯುವ ಮೂಲಕ ಸಂಭ್ರಮಿಸಿದರು. ಮಂಗಳವಾರ ಬೆಳಗ್ಗೆ ಬಸವನಹಳ್ಳಿಯ ಪಕ್ಕದ ಬ್ಯಾಡಗೊಟ್ಟದಲ್ಲಿರುವ ಆದಿವಾಸಿಗಳ ಜನರ ಜೊತೆ ಕಾಲ ಕಳೆದರು. ಮಕ್ಕಳಿಗೆ ಪುಸ್ತಕ ಪೆನ್ ನೀಡುವ ಮೂಲಕ ಚೆನ್ನಾಗಿ ಓದಬೇಕು ಅಂತಾ ಬುದ್ಧಿ ಮಾತು ಹೇಳಿದರು. ಎಲ್ಲರಿಗೂ ಬಟ್ಟೆಗಳನ್ನು ನೀಡುವ ಮೂಲಕ ಹೊಸ ವರ್ಷದ ಸಂಭ್ರಮವನ್ನು ಆದಿವಾಸಿಗಳ ಮೊಗದಲ್ಲಿ ಕಾಣಿಸಿಕೊಳ್ಳುವಂತೆ ಚೇತನ್ ಮಾಡಿದರು.

    ಆದಿವಾಸಿಗಳು ಯಾರೂ ಕೂಡ ನಟ ಚೇತನ್ ನಮ್ಮೊಂದಿಗೆ ಬಂದು ಹೊಸ ವರುಷವನ್ನು ಆಚರಿಸುತ್ತಾರೆ ಅಂತಾ ಭಾವಿಸಿರಲಿಲ್ಲ. ಹೊಸ ವರುಷಕ್ಕೆ ದಿಢೀರ್ ಸ್ಯಾಂಡಲ್ ವುಡ್ ನಟ ಬಂದಿದ್ದು ಹಾಡಿ ಜನರಿಗೆ ಅಚ್ಚರಿ ತರಿಸಿತ್ತು. ಚೇತನ್ ರೀಲ್ ಹೀರೋ ಅಲ್ಲ, ರಿಯಲ್ ಹೀರೋ. ನಮ್ಮ ಹೋರಾಟದ ಪ್ರಾರಂಭದ ದಿನಗಳಿಂದಲೂ ನಮ್ಮ ಜೊತೆ ನಿಂತುಕೊಂಡಿರುವುದು ನಮ್ಮಲ್ಲಿ ಹೆಚ್ಚಿನ ಆತ್ಮಸ್ಥೈರ್ಯ ಮೂಡಿಸಿದೆ ಅಂತಾ ಹಾಡಿನ ಜನ ನಟ ಚೇತನ್ ಅವರನ್ನು ಹೊಗಳಿದರು.

    ಹೊಸ ಮನೆಗಳು ನಿರ್ಮಾಣವಾಗ್ತಿರುವ ಬಡಾವಣೆಗೆ ಬಂದ ಚೇತನ್, ಜನರ ಜೊತೆ ಬೆರೆತು ಸಂತಸಪಟ್ಟರು. ಅಷ್ಟೇ ಅಲ್ಲದೇ ತಾತ್ಕಾಲಿಕವಾಗಿ ಹಾಕಿರುವ ಶೆಡ್ ಒಳಗೂ ಹೋಗಿ ಒಂದು ತಿಂಗಳ ಹಸುಗೂಸನ್ನು ನೋಡಿ, ತಾಯಿ ಮಗುವಿನ ಯೋಗಕ್ಷೇಮ ವಿಚಾರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv