Tag: chetana raj

  • ನಟಿ ಚೇತನಾ ರಾಜ್ ಸಾವು ಪ್ರಕರಣ – ಆಸ್ಪತ್ರೆಗೆ ಬೀಗ, ವೈದ್ಯರಿಗೆ ನೋಟಿಸ್

    ನಟಿ ಚೇತನಾ ರಾಜ್ ಸಾವು ಪ್ರಕರಣ – ಆಸ್ಪತ್ರೆಗೆ ಬೀಗ, ವೈದ್ಯರಿಗೆ ನೋಟಿಸ್

    ಬೆಂಗಳೂರು: ಕಿರುತೆರೆ ನಟಿ ಚೇತನಾ ರಾಜ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಯಾಟ್ ಸರ್ಜರಿ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಗೆ ಬೀಗ ಜಡಿಯಲಾಗಿದ್ದು, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ.

    ಸಾವಿನ ಘಟನೆ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಆರೋಗ್ಯ ಇಲಾಖೆಯು ಡಾ.ಶೆಟ್ಟಿಗೆ ನೋಟಿಸ್ ಕೊಟ್ಟು ಆಸ್ಪತ್ರೆಯನ್ನ ಬಂದ್ ಮಾಡಿಸಲಾಗಿದೆ. ದೂರಿನ ಅನ್ವಯ ಸಾವಿನ ರಾಹಸ್ಯ ಭೇದಿಸಲು ಮುಂದಾಗಿದ್ದ ಸುಬ್ರಹ್ಮಣ್ಯ ನಗರ ಪೊಲೀಸರು, ಆಸ್ಪತ್ರೆಯ ಸಾಹೇಬ್ ಗೌಡ ಶೆಟ್ಟಿ ಸೇರಿದಂತೆ ನಾಲ್ವರ ವಿರುದ್ಧ ನೋಟಿಸ್ ಜಾರಿಗೊಳಿಸಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಚೇತನಾ ರಾಜ್ ಸಾವು: ಬಾಡಿ ಶೇಮಿಂಗ್‌ ವಿರುದ್ಧ ದನಿಯೆತ್ತಿದ ಅಶ್ವಿತಿ ಶೆಟ್ಟಿ

    ಏನಿದು ಪ್ರಕರಣ?: ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರಿನ ಅಂಶ ಶೇಖರಣೆಯಾಗಿ ಕಿರುತೆರೆ ಯುವ ನಟಿ ಚೇತನಾ ರಾಜ್ ಈಚೆಗಷ್ಟೇ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು. ಬೆಂಗಳೂರು ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿ ವಾಸವಿರುವ ನಟಿಯ ಪೋಷಕರು, ವೈದ್ಯರ ನಿರ್ಲಕ್ಷ್ಯದಿಂದಾಗಿಯೇ ನಮ್ಮ ಪುತ್ರಿ ಸಾವಿಗೀಡಾಗಿದ್ದಾಳೆ ಎಂದು ಗಂಭೀರ ಆರೋಪ ಮಾಡಿದ್ದರು. ಇದನ್ನೂ ಓದಿ: ನಾಳೆ ಬೆಂಗಳೂರಿಗೆ ಸನ್ನಿ ಲಿಯೋನ್ : ಮಂಡ್ಯಗೆ ಹೋಗಿ ರಕ್ತದಾನ ಮಾಡ್ತಾರಾ ಶೇಷಮ್ಮ?

    ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರಿನ ಅಂಶ ಶೇಖರಣೆಯಾಗಿ ಸಾವು ಸಂಭವಿಸಿದೆ ಎಂದು ಹೇಳಲಾಗಿತ್ತು. ದೂರು ದಾಖಲಿಸಿಕೊಂಡಿದ್ದ ಸುಬ್ರಹ್ಮಣ್ಯ ನಗರ ಠಾಣೆಯ ಪೊಲೀಸರು ಇಂದು ವಿಚಾರಣೆಗೆ ಹಾಜರಾಗುವಂತೆ ವೈದ್ಯರಿಗೆ ನೋಟಿಸ್ ನೀಡಿದ್ದಾರೆ.

  • ಇಂಡಸ್ಟ್ರಿಯಲ್ಲಿ ನಟಿಯರು ಎದುರಿಸುವ ಸವಾಲು ಬಿಚ್ಚಿಟ್ಟ ರಮ್ಯಾ

    ಇಂಡಸ್ಟ್ರಿಯಲ್ಲಿ ನಟಿಯರು ಎದುರಿಸುವ ಸವಾಲು ಬಿಚ್ಚಿಟ್ಟ ರಮ್ಯಾ

    ಇಂಡಸ್ಟ್ರಿಯಲ್ಲಿ ನಟಿಯರಿಗೆ ಅವಾಸ್ತವಿಕ ಸೌಂದರ್ಯದ ವಿಚಾರವಾಗಿ ತೀವ್ರ ಒತ್ತಡ ಹಾಕಲಾಗುತ್ತಿದೆ ಎಂದು ಮೋಹಕ ತಾರೆ ರಮ್ಯಾ ನಟಿಯರು ಎದುರಿಸುವ ಸವಾಲನ್ನು ಬಿಚ್ಚಿಡುವ ಮೂಲಕ ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ.

    ಯುವನಟಿ ಚೇತನಾ ರಾಜ್ ನಿಧನಕ್ಕೆ ಸಂತಾಪ ಸೂಚಿಸಿದ ರಮ್ಯಾ, ಪ್ಲಾಸ್ಟಿಕ್ ಸರ್ಜರಿಯಿಂದ ಯುವ ನಟಿ ನಿಧನರಾಗಿರುವ ಸುದ್ದಿ ತಿಳಿಯಿತು. ನನ್ನ ಕಾಲಿನ ಟ್ಯೂಮರ್ ತೆಗೆಸಿದ ಬಳಿಕ ನಾನು ದಪ್ಪಗಾದೆ. ನಾನು ಈಗ ವೇಟ್ ಲಾಸ್ ಜರ್ನಿಯಲ್ಲಿದ್ದೆ. ಆದರೆ ನನಗೆ ಜೀವ ಕಳೆದುಕೊಂಡ ಈ ನಟಿ ಬಗ್ಗೆ ಸಹಾನುಭೂತಿಯಿದೆ ಎಂದರು. ಇದನ್ನೂ ಓದಿ: ನಟಿ ಚೇತನಾ ರಾಜ್ ಸಾವು : ತೆಳ್ಳಗಾಗಿಸುವ ಚಿಕಿತ್ಸೆ ಪ್ರಾಣಕ್ಕೆ ಅಪಾಯ

    ಇಂಡಸ್ಟ್ರಿಯಲ್ಲಿ ಮಾನದಂಡ ನಿಗದಿಪಡಿಸಿರುವುದು ಪುರುಷರು. ಮಹಿಳೆಯರು ನೀವು ನೀವಾಗಿರಲು ಬೇರೆ ದಾರಿಯನ್ನು ಅರಿತಿರಬೇಕು. ಜಗತ್ತು ನೀವು ಹೇಗಿರಬೇಕು ಎಂದು ನಿರ್ಧರಿಸಲು ಬಿಡಬೇಡಿ ಎಂದು ತಿಳಿ ಹೇಳಿದರು. ಇದನ್ನೂ ಓದಿ: ಫ್ಯಾಟ್ ಸರ್ಜರಿಗೆ 1 ಲಕ್ಷ 60 ಸಾವಿರ ಕೊಟ್ಟಿದ್ದರಂತೆ ಚೇತನಾ ರಾಜ್ : ಕುಟುಂಬ ಆರೋಪ

    ಪುರುಷನಾದನು ಸಂಪೂರ್ಣವಾಗಿ ತಲೆಕೂದಲು ಕಳೆದುಕೊಂಡು ಟೋಪಿ ಹಾಕಿಕೊಳ್ಳಬಹುದು. ಮುಖದಲ್ಲಿನ ಒಂದೊಂದು ಗಲ್ಲವೂ 5 ಕೆಜಿ ಇರಬಹುದು. 65 ವರ್ಷವಾದರೂ ಆತ ಹೀರೋ ಆಗುತ್ತಾನೆ. ಆದರೆ ಇದೇ ಮಹಿಳೆಗೆ ಅನ್ವಯವಾಗಿ ಆಕೆ ತೂಕ ಹೆಚ್ಚಿಸಿಕೊಂಡರೆ ಆಂಟಿ, ಬುಡ್ಡಿ, ಅಜ್ಜಿ ಎಂದು ಕರೆಯಲಾಗುತ್ತದೆ ಎಂದು ರಮ್ಯಾ ಸಾಮಾಜಿಕ ಮಾಧ್ಯಮದಲ್ಲಿ ವಾಗ್ದಾಳಿ ನಡೆಸಿದ್ದಾರೆ.

    ಈ ಇಂಡಸ್ಟ್ರಿ ನಟಿಯರ ಪಾತ್ರದ ವಿಚಾರವಾಗಿ ಇನ್ನೂ ಸುಧಾರಣೆ ಆಗಬೇಕು. ಇಂಡಸ್ಟ್ರಿ ಬದಲಾಗಬೇಕು. ಈ ವಿಷಯದ ಕುರಿತು ಮಹಿಳೆ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ರಮ್ಯಾ ಆಗ್ರಹಿಸಿದರು.

  • ಫ್ಯಾಟ್ ಸರ್ಜರಿಗೆ 1 ಲಕ್ಷ 60 ಸಾವಿರ ಕೊಟ್ಟಿದ್ದರಂತೆ ಚೇತನಾ ರಾಜ್ : ಕುಟುಂಬ ಆರೋಪ

    ಫ್ಯಾಟ್ ಸರ್ಜರಿಗೆ 1 ಲಕ್ಷ 60 ಸಾವಿರ ಕೊಟ್ಟಿದ್ದರಂತೆ ಚೇತನಾ ರಾಜ್ : ಕುಟುಂಬ ಆರೋಪ

    ಫ್ಯಾಟ್ ಸರ್ಜರಿಗೆ ಒಳಗಾಗಿ ಪ್ರಾಣ ಬಿಟ್ಟ ಕಿರುತೆರೆ ನಟಿ ಚೇತನಾ ರಾಜ್, ಆ ಚಿಕಿತ್ಸೆಗಾಗಿ ಒಂದು ಲಕ್ಷ, ಅರವತ್ತು ಸಾವಿರ ರೂಪಾಯಿಗಳನ್ನು ಖರ್ಚು ಮಾಡಿರುವುದಾಗಿ ಅವರ ದೊಡ್ಡಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಚಿಕಿತ್ಸೆಗೆ ಒಳಗಾಗುವ ಮುನ್ನ ಆ ಖಾಸಗಿ ಆಸ್ಪತ್ರೆಯು 90 ಸಾವಿರ ರೂಪಾಯಿಗಳನ್ನು ಕಟ್ಟಿಸಿಕೊಂಡಿತ್ತಂತೆ. ಆನಂತರ ಮತ್ತಷ್ಟು ಹಣವನ್ನು ಅವರ ಕುಟುಂಬ ಪಾವತಿಸಿದೆ. ಇದನ್ನೂ ಓದಿ:  ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

    ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಚೇತನಾ ದೊಡ್ಡಪ್ಪ, ‘ಚೇತನಾ ರಾಜ್ ಈ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳನ್ನು ಕೂಡಿಸಿಟ್ಟಿದ್ದರು. ಚಿಕಿತ್ಸೆಗೂ ಮುನ್ನ 90 ಸಾವಿರ ರೂಪಾಯಿಗಳನ್ನು ಪಾವತಿಸಿದ್ದಾರೆ. ಆನಂತರ ಅವರ ಕುಟುಂಬ ಮತ್ತಷ್ಟು ಹಣವನ್ನು ಪಾವತಿಸಿದೆ. ಅವಳನ್ನು ಬೇರೆ ಆಸ್ಪತ್ರೆಗೆ ಸೇರಿಸುವ ಮುನ್ನವೂ ತಾವು ಫ್ಯಾಟ್ ಸರ್ಜರಿಗೆ ಒಳಗಾಗಿದ್ದ ಆಸ್ಪತ್ರೆಗೆ ಹಣ ನೀಡಿರುವುದಾಗಿ ತಿಳಿಸಿದ್ದಾರೆ.

    ಈ ಕುರಿತು ಚೇತನಾ ರಾಜ್ ಅವರ ತಾಯಿಯೂ ಕೂಡ ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದು, ‘ಮಗಳಿಂದ ಲಕ್ಷಾಂತರ ರೂಪಾಯಿ ಕಿತ್ತುಕೊಂಡು, ಬದುಕಿಸಲಿಲ್ಲ. ದುಡ್ಡಿನ ಜೊತೆ ಮಗಳನ್ನೂ ಅವರು ಕಸಿದುಕೊಂಡರು ಎಂದು ಆರೋಪ ಮಾಡಿದ್ದಾರೆ. ಅಲ್ಲದೇ, ಮಗಳ ಸಾವಿಗೆ ಆಸ್ಪತ್ರೆಯೇ ಕಾರಣವೆಂದು ದೂರು ಕೂಡ ದಾಖಲಿಸಿದ್ದಾರೆ. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್‌ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ

    ಈ ಕುರಿತು ಆಸ್ಪತ್ರೆಯು ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಚೇತನಾ ರಾಜ್ ಅವರ ಮರಣೋತ್ತರ ಪರೀಕ್ಷೆ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು, ಆನಂತರ ಚೇತನಾ ರಾಜ್ ಸಾವಿನ ಹಲವು ವಿಚಾರಗಳು ತಿಳಿಯಲಿವೆ. ಈಗಾಗಲೇ ದೂರು ಸ್ವೀಕರಿಸಿರುವ ಪೊಲೀಸ್ ಅಧಿಕಾರಿಗಳು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.

  • ನಟಿ ಚೇತನಾ ರಾಜ್ ಸಾವು : ತೆಳ್ಳಗಾಗಿಸುವ ಚಿಕಿತ್ಸೆ ಪ್ರಾಣಕ್ಕೆ ಅಪಾಯ

    ನಟಿ ಚೇತನಾ ರಾಜ್ ಸಾವು : ತೆಳ್ಳಗಾಗಿಸುವ ಚಿಕಿತ್ಸೆ ಪ್ರಾಣಕ್ಕೆ ಅಪಾಯ

    ತ್ತೀಚಿನ ದಿನಗಳಲ್ಲಿ ಬಹುತೇಕರು ಸೌಂದರ್ಯದ ಹಿಂದೆ ಬಿದ್ದು ನಾನಾ ರೀತಿಯ ಅಪಾಯಗಳನ್ನು ತಂದುಕೊಳ್ಳುತ್ತಿದ್ದಾರೆ. ಅದರಲ್ಲೂ ತೆಳ್ಳಗಾಗುವ ನಿಟ್ಟಿನಲ್ಲಿ ಸಾಕಷ್ಟು ಕಲಾವಿದೆಯರು ನಾನಾ ರೀತಿಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ವೈಜ್ಞಾನಿಕವಾಗಿ ಅವುಗಳು ಸರಿಯಾದ ಕ್ರಮವಲ್ಲ ಎಂದು ಗೊತ್ತಿದ್ದರೂ, ತಾವು ನೋಡುಗರ ಮುಂದೆ  ಸುಂದರವಾಗಿ ಕಾಣಬೇಕು ಎನ್ನುವ ದೃಷ್ಟಿಯಿಂದ ಶಾರ್ಟ್ ಕಟ್ ವಿಧಾನವನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ ಜೀವಕ್ಕೆ ಅಪಾಯ ಆಗುವಂತ ಚಿಕಿತ್ಸೆಗೂ ಅನೇಕರು ಮುಂದಾಗುತ್ತಾರೆ. ಇಂತಹ ಮಾರ್ಗ ಅನುಸರಿಸಿದ ಕಿರುತೆರೆ ನಟಿ ಚೇತನಾ ರಾಜ್ ಪ್ರಾಣ ಬಿಟ್ಟಿದ್ದಾರೆ.

    ಯೋಗ, ವ್ಯಾಯಾಮ, ಆಹಾರ ಕ್ರಮಗಳ ಮೂಲಕ ತೂಕ ಇಳಿಸಿಕೊಳ್ಳಲು ತುಂಬಾ ಸಮಯ ಬೇಕಾಗುವುದರಿಂದ ಚಿಕಿತ್ಸೆ ಮೂಲಕ ತೂಕ ಇಳಿಸಿಕೊಳ್ಳಲು ಮುಂದಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಲಿಪೊಸಕ್ಷನ್ ಸೇರಿದಂತೆ ಅನೇಕ ಚಿಕಿತ್ಸೆ ವಿಧಾನಗಳ ಮೂಲಕ ವೇಟ್ ಲಾಸ್ ಮಾಡಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ ಎನ್ನುತ್ತಿದೆ ವೈದ್ಯ ಅಂಕಿ ಅಂಶ. ಇದನ್ನೂ ಓದಿ:  ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

    ವ್ಯಾಯಾಮ ಮತ್ತು ಆಹಾರ ಕ್ರಮದಿಂದ ದೇಹದ ಬೊಜ್ಜನ್ನು ಕರಗಿಸಬಹುದಾಗಿದ್ದರೂ, ಅದು ಸುಲಭವಾಗಿ ಕರಗುವುದಿಲ್ಲ ಎಂಬ ಕಾರಣಕ್ಕಾಗಿ ಲಿಪೋಸಕ್ಷನ್ ರೀತಿಯ ಚಿಕಿತ್ಸೆಗಳು ಇಂದು ಜನಪ್ರಿಯವಾಗಿವೆ. ಇಂತಹ ಚಿಕಿತ್ಸೆ ಪಡೆಯುವ ಮುನ್ನ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತಗೆದುಕೊಳ್ಳಲೇಬೇಕು ಎನ್ನುತ್ತಾರೆ ವೈದ್ಯರು.

    ಲಿಪೊಸಕ್ಷನ್ ಚಿಕಿತ್ಸೆ ಪಡೆಯುತ್ತಿದ್ದಂತೆಯೇ ನಾವು ಅಂದುಕೊಂಡಷ್ಟು ತೂಕ ಇಳಿಯುತ್ತದೆ ಎನ್ನುವುದು ತಪ್ಪು. ವ್ಯಕ್ತಿಯಿಂದ ವ್ಯಕ್ತಿಗೆ ಕೊಬ್ಬು ಕಡಿಮೆ ಆಗುತ್ತದೆ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಯಾವ ವ್ಯಕ್ತಿಗೆ ಎಷ್ಟು ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವುದನ್ನು ವೈದ್ಯರು ನಿರ್ಧರಿಸುತ್ತಾರೆ. ತೂಕ ಇಳಿಸಿಕೊಳ್ಳುವಾಗಿ ಇಂತಿಷ್ಟೇ ತೂಕ ಕಡಿಮೆ ಮಾಡಬೇಕು ಎಂದು ವೈದ್ಯರನ್ನು ಪೋರ್ಸ್ ಮಾಡಬೇಡಿ. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್‌ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ

    ಈ ರೀತಿಯ ಚಿಕಿತ್ಸೆಯಿಂದ ಮ್ಯಾಕ್ಸಿಮಮ್, ಐದಾರು ಕೇಜಿ ತೂಕ ಕಡಿಮೆ ಮಾಡಿಸಿಕೊಳ್ಳಬಹುದು. ಇದಕ್ಕಿಂತ ಜಾಸ್ತಿ ತೂಕ ಕಡಿಮೆ ಮಾಡಿಸಿಕೊಳ್ಳಲು ಮುಂದಾದರೆ, ಅಪಾಯ ಕಟ್ಟಿಟ್ಟ ಬುತ್ತಿ. ಈ ಸಮಯದಲ್ಲಿ ಸಾವೂ ಸಂಭವಿಸಬಹುದು ಎನ್ನುತ್ತಾರೆ ವೈದ್ಯರು. ಚಿಕಿತ್ಸೆ ಸಮಯದಲ್ಲಿ ಅಥವಾ ಚಿಕಿತ್ಸೆಯ ನಂತರವೂ ಆರೋಗ್ಯದಲ್ಲಿ ಏರುಪೇರಾಗಬಹುದು. ಹಾಗಾಗಿ ಯಶಸ್ಸಿ ಚಿಕಿತ್ಸೆ ನಂತರ ನಿರಂತರವಾಗಿ ವ್ಯಾಯಾಮ ಮತ್ತು ಆಹಾರದ ಕ್ರಮವನ್ನು ಪಾಲಿಸಲೇಬೇಕು. ಮತ್ತು ನುರಿತ ವೈದ್ಯರಿಂದಲೇ ಇಂತಹ ಚಿಕಿತ್ಸೆಯನ್ನು ಪಡೆಯಬೇಕು.

    ಇಂತಹ ಚಿಕಿತ್ಸೆಗೆ ಒಳಗಾಗುವ ಮುನ್ನ ಮಾನಸಿಕವಾಗಿ ವ್ಯಕ್ತಿಯು ಸದೃಢವಾಗಿರಬೇಕು ಮತ್ತು ಚಿಕಿತ್ಸೆಯ ಮುನ್ನ ವೈದ್ಯರು ಹೇಳಿದ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸಿರಬೇಕು. ಚಿಕಿತ್ಸೆಗೆ ಭಾಗಿಯಾಗುವಾಗ ಒಬ್ಬರೇ ಹೋಗಬೇಡಿ, ನಿಮ್ಮ ಕುಟುಂಬದವರಿಗೂ ಮಾಹಿತಿ ತಿಳಿಸಿ. ಮತ್ತು ಮತ್ತೊಬ್ಬ ವೈದ್ಯರ ಸಲಹೆಯನ್ನೂ ಪಡೆಯಬೇಕು.

  • ಸೊಂಟ ದಪ್ಪಗಿದೆ ಎಂದು ಚೇತನಾ ತಲೆ ಕೆಡಿಸಿದ್ದರು : ನಟಿ ಸಾವಿನ ರಹಸ್ಯ ಬಿಚ್ಚಿಟ್ಟ ಕುಟುಂಬ

    ಸೊಂಟ ದಪ್ಪಗಿದೆ ಎಂದು ಚೇತನಾ ತಲೆ ಕೆಡಿಸಿದ್ದರು : ನಟಿ ಸಾವಿನ ರಹಸ್ಯ ಬಿಚ್ಚಿಟ್ಟ ಕುಟುಂಬ

    ನಿನ್ನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಫ್ಯಾಟ್ ಸರ್ಜರಿಗೆಂದು ಹೋಗಿದ್ದ ಕನ್ನಡ ಕಿರುತೆರೆ ನಟಿ ಚೇತನಾ ರಾಜ್ ಸಾವನ್ನಪ್ಪಿರುವುದು ಕಿರುತೆರೆ ಲೋಕಕ್ಕೆ ಆಘಾತ ಮೂಡಿಸಿದೆ. ಅದರಲ್ಲೂ ಆ ಹುಡುಗಿ ಅಷ್ಟೊಂದು ದಪ್ಪ ಇರಲಿಲ್ಲ, ಯಾರು ಆಕೆಯನ್ನು ಆರೀತಿಯಲ್ಲಿ ತಲೆ ಕೆಡಿಸಿದರೋ ಗೊತ್ತಿಲ್ಲ. ಫ್ಯಾಟ್ ಸರ್ಜರಿಗೆಂದು ಹೋದವಳು, ಜೀವಂತವಾಗಿ ವಾಪಸ್ಸು ಬರಲಿಲ್ಲ ಎಂದು ಚೇತನಾ ಸ್ನೇಹಿತೆಯರು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಚೇತನಾ ತಂದೆ ‘ಮಗಳು ಕಾಸ್ಮೆಟಿಕ್ ಸರ್ಜರಿಗೆ ಒಳಗಾಗುತ್ತಿದ್ದಾಳೆ ಎಂದು ನಮಗೆ ಗೊತ್ತೇ ಇರಲಿಲ್ಲ. ಆಸ್ಪತ್ರೆಯವರು ಕೂಡ ನಮಗೆ ಮಾಹಿತಿ ನೀಡಿಲ್ಲ. ನನ್ನ ಮಗಳು ದಪ್ಪ ಇದ್ದಾಳೆ ಅಂತ ಯಾರೋ ಹೇಳಿದ್ದಾರೆ. ಹಾಗಾಗಿಯೇ ಅವಳು ಸರ್ಜರಿ ಮಾಡಿಸಿಕೊಳ್ಳಲು ಮುಂದಾಗಿದ್ದಾಳೆ. ನನಗೆ ಗೊತ್ತಾಗಿರೋ ಪ್ರಕಾರ, ಆಸ್ಪತ್ರೆಯಲ್ಲಿ ಕೇವಲ ಕೊಬ್ಬು ತಗೆಯುತ್ತೇವೆ ಎಂದು ಹೇಳಿದ್ದರಂತೆ. ಆಮೇಲೆ ಏನಾಯಿತೋ ಗೊತ್ತಿಲ್ಲ. ಅವಳಿಗೆ ಉಸಿರಾಟದ ತೊಂದರೆ ಆಗಿ, ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ’ ಎಂದಿದ್ದಾರೆ.

    ಇಂಥದ್ದೊಂದು ಚಿಕಿತ್ಸೆಯಲ್ಲಿ ಪಾಲ್ಗೊಳ್ಳುತ್ತಿರುವ ವಿಷಯವನ್ನು ಸ್ವತಃ ಚೇತನಾ ರಾಜ್ ಕೂಡ ಪಾಲಕರಿಗೆ ಹೇಳಿರಲಿಲ್ಲವಂತೆ. ತಮ್ಮ ಸ್ನೇಹಿತೆಯರ ಜೊತೆಯಾಗಿ ಅವಳು ಆಸ್ಪತ್ರೆ ಸೇರಿದ್ದಾಳೆ. ಈ ವಿಷಯ ಪಾಲಕರಿಗೆ ಗೊತ್ತಾಗುವ ಮುಂಚೆಯೇ ಚೇತನಾ ರಾಜ್ ಅವರನ್ನು ಸ್ನೇಹಿತೆಯರು ಆಪರೇಷನ್ ಥಿಯೇಟರ್‌ಗೆ ಕರೆದುಕೊಂಡು ಹೋಗಿದ್ದಾರೆ ಎಂದು ಪಾಲಕರು ಅಳಲು ತೋಡಿಕೊಂಡರು. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್‌ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ

    ಇತ್ತೀಚಿನ ದಿನಗಳಲ್ಲಿ ಫ್ಯಾಟ್ ರಿಯಾಕ್ಷನ್ ಸರ್ಜರಿ ಎಂದು ಕರೆಯಲಾಗುವ ಕಾಸ್ಮೆಟಿಕ್ ಶಸ್ತ್ರ ಚಿಕಿತ್ಸೆಗೆ ಅನೇಕ ನಟಿಯರು ಒಳಗಾಗುತ್ತಿದ್ದಾರೆ. ಅದರಲ್ಲೂ ನಟ ನಟಿಯರನ್ನು ಸೆಳೆಯಲು ಅಂಥದ್ದೊಂದು ತಂಡವೇ ಕಿರುತೆರೆಯಲ್ಲಿ ಇದೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಇಂತಹ ತಂಡದ ಮಾತಿಗೆ ಚೇತನಾ ರಾಜ್ ಬಲಿಯಾಗಿರಬಹುದಾ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದೆ. ಆದರೆ, ಚೇತನಾ ರಾಜ್ ಅವರ ಪಾಲಕರು ನೇರವಾಗಿಯೇ ವೈದ್ಯರ ನಿರ್ಲಕ್ಷ್ಯದ ಕುರಿತು ಮಾತನಾಡಿದ್ದಾರೆ. ತಮ್ಮ ಮಗಳ ಸಾವಿಗೆ ಆಸ್ಪತ್ರೆಯೇ ಕಾರಣವೆಂದು ದೂರು ಕೂಡ ದಾಖಲು ಮಾಡಿದ್ದಾರೆ.

  • ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

    ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

    ಬೆಂಗಳೂರು: ಫ್ಯಾಟ್‌ ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರಿನ ಅಂಶ ಶೇಖರಣೆಯಾಗಿ ಕಿರುತೆರೆ ಯುವ ನಟಿ ಚೇತನಾ ರಾಜ್‌ ಮೃತಪಟ್ಟಿದ್ದಾರೆ.

    ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಟಿ ದುರಂತ ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿ ನಟಿ ಕುಟುಂಬ ವಾಸವಿದೆ. ವೈದ್ಯರ ನಿರ್ಲಕ್ಷ್ಯದಿಂದಾಗಿಯೇ ನಮ್ಮ ಪುತ್ರಿ ಸಾವಿಗೀಡಾಗಿದ್ದಾಳೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರಿನ ಅಂಶ ಶೇಖರಣೆಯಾಗಿ ಸಾವು ಸಂಭವಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಮಂಡ್ಯ ಹುಡುಗರ ಪ್ರೀತಿಗೆ ಸನ್ನಿ ಲಿಯೋನ್ ಫಿದಾ

    ಫ್ಯಾಟ್ ಚಿಕಿತ್ಸೆಗೆಂದು ನಿನ್ನೆ ಬೆಳಗ್ಗೆ ಖಾಸಗಿ ಆಸ್ಪತ್ರೆಗೆ ಆಡ್ಮಿಟ್ ಆಗಿದ್ದರು. ಸಂಜೆ ನಾಲ್ಕು ಗಂಟೆ ಹೊತ್ತಿಗೆ ಸಿರಿಯಸ್‌ ಆಗಿ ಶಂಕರಮಠದ ಕಾಡೇ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಕಲರ್ಸ್ ಕನ್ನಡದಲ್ಲಿ ಬರುವ ಗೀತಾ, ದೊರೆಸಾನಿ, ಒಲವಿನ ನಿಲ್ದಾಣ ದಾರಾವಾಹಿಗಳಲ್ಲಿ ಚೇತನಾ ರಾಜ್‌ ನಟಿಸುತ್ತಿದ್ದರು. ಇನ್ನೂ ಬಿಡುಗಡೆಯಾಗದ ಹವಾಯಾಮಿ ಸಿನಿಮಾದಲ್ಲೂ ನಟಿಸಿದ್ದಾರೆ. ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅವರಿಗೆ ಕಲರ್ಸ್ ಕನ್ನಡದ ʻಒಲವಿನ ನಿಲ್ದಾಣʼ ಅನ್ನೋ ಹೊಸ ಧಾರವಾಹಿಯಲ್ಲಿ ಮುಖ್ಯ ಪಾತ್ರ ಸಿಕ್ಕಿತ್ತು. ಇದನ್ನೂ ಓದಿ: ಕಿಚ್ಚನ `ವಿಕ್ರಾಂತ್ ರೋಣ’ ಚಿತ್ರದ ಜವಾಬ್ದಾರಿ ಹೊತ್ತ ಸಲ್ಮಾನ್ ಖಾನ್

    ಪೋಷಕರಿಗೆ ಮಾಹಿತಿ ನೀಡದೇ ಚೇತನಾ ರಾಜ್ ಫ್ಯಾಟ್‌ ಸರ್ಜರಿ ಮಾಡಿಸಿಕೊಂಡಿದ್ದರು. ಸೋಮವಾರ ಬೆಳಗ್ಗೆ 9:30 ಕ್ಕೆ ಆಸ್ಪತ್ರೆಗೆ ದಾಖಲಾಗಿ ಸರ್ಜರಿ ಮಾಡಿಸಿಕೊಂಡಿದ್ದಾರೆ. ನಂತರ ವಿಚಾರ ಗೊತ್ತಾಗಿ ಪೋಷಕರು ಆಸ್ಪತ್ರೆಗೆ ಹೋಗಿದ್ದರು. ಸರ್ಜರಿ ನಂತರ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ನಟಿ ಪರಿಸ್ಥಿತಿ ಗಂಭೀರವಾಗಿದೆ. ನಾಲ್ಕು ಗಂಟೆಗೆ ಹೆಚ್ಚಿನ ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ. ಅಷ್ಟರಲ್ಲಾಗಲೇ ನಟಿ ಮೃತಪಟ್ಟಿದ್ದಾರೆ.

    ವೈದ್ಯರ ನಿರ್ಲಕ್ಷ್ಯದಿಂದ ಚೇತನಾ ರಾಜ್‌ ಮೃತಪಟ್ಟಿದ್ದಾಳೆ. ಯಾವುದೇ ಪೋಷಕರ ಅನುಮತಿ ಇಲ್ಲದೇ ಹೇಗೆ ಸರ್ಜರಿ ಮಾಡಿದರು. ಆಸ್ಪತ್ರೆಯವರೇ ಚೇತನಾ ರಾಜ್ ಸಾವಿಗೆ ಕಾರಣ. ಚೇತನಾ ರಾಜ್ ದೊಡ್ಡಪ್ಪ ರಾಜಣ್ಣ ಆರೋಪಿಸಿದ್ದಾರೆ.