Tag: Chetan Kumar

  • ಅಶ್ವಥ್‌ ನಾರಾಯಣ್‌ ವಿರುದ್ಧ FIR – ಇದು ಸೇಡಿನ ರಾಜಕಾರಣದಂತೆ ತೋರುತ್ತಿದೆ ಎಂದ ನಟ ಚೇತನ್‌

    ಅಶ್ವಥ್‌ ನಾರಾಯಣ್‌ ವಿರುದ್ಧ FIR – ಇದು ಸೇಡಿನ ರಾಜಕಾರಣದಂತೆ ತೋರುತ್ತಿದೆ ಎಂದ ನಟ ಚೇತನ್‌

    ಬೆಂಗಳೂರು: ಮೈಸೂರು ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ಮಾಜಿ ಸಚಿವ ಅಶ್ವಥ್‌ ನಾರಾಯಣ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ವಿಚಾರಕ್ಕೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್‌ (Chetan Kumar) ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿರುವ ಅವರು, ಫೆಬ್ರುವರಿಯಲ್ಲಿ ಬಿಜೆಪಿ ಶಾಸಕ ಅಶ್ವತ್ಥನಾರಾಯಣ್‌ (Ashwath Narayan) ಅವರು, ‘ಟಿಪ್ಪು ಸುಲ್ತಾನ್‌ʼನಂತೆ ಸಿದ್ದರಾಮಯ್ಯನವರನ್ನು (Siddaramaiah) ಮುಗಿಸಿ’ ಎಂದು ಬೆಂಕಿ ಹಚ್ಚುವ, ಸ್ವೀಕಾರಾರ್ಹವಲ್ಲದ ಹೇಳಿಕೆ ನೀಡಿದ್ದರು. ನಂತರ ಅವರು ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸಿದರು. ಇದೀಗ ಶಾಸಕರ ಹೇಳಿಕೆಗೆ ಕಾಂಗ್ರೆಸ್ ಎಫ್‌ಐಆರ್ ದಾಖಲಿಸಿದೆ. ಇದು ಕ್ಷುಲ್ಲಕ ಮತ್ತು ಸೇಡಿನ ರಾಜಕಾರಣದಂತೆ ತೋರುತ್ತಿದೆ. ಕಾಂಗ್ರೆಸ್ ಭಾರೀ ಜನಾದೇಶವನ್ನ ಗೆದ್ದಿದೆ—ಈಗ ಅದು ತನ್ನ ಸ್ವಂತ ಅಹಂಕಾರಗಳನ್ನ ಪೂರೈಸುವ ಬದಲು ಕರ್ನಾಟಕದ ಜನರ ಸೇವೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

    ಮೈಸೂರು ಜಿಲ್ಲಾ ಕಾಂಗ್ರೆಸ್‌ ಸಮಿತಿ ಮೇ 24 ರಂದು ಮೈಸೂರಿನ ದೇವರಾಜ ಪೊಲೀಸ್‌ ಠಾಣೆಯಲ್ಲಿ ಬಿಜೆಪಿ ಶಾಸಕ ಅಶ್ವಥ್‌ ನಾರಾಯಣ ಅವರ ವಿರುದ್ಧ ದೂರು ನೀಡಿ, ಎಫ್‌ಐಆರ್‌ ದಾಖಲಾಗಿದೆ. ಇದನ್ನೂ ಓದಿ: `ಸಿದ್ದರಾಮಯ್ಯರನ್ನ ಹತ್ಯೆ ಮಾಡಿ’ ಹೇಳಿಕೆ ಆರೋಪ – ಅಶ್ವಥ್ ನಾರಾಯಣ್ ವಿರುದ್ಧ FIR

    ಅಶ್ವಥ್ ನಾರಾಯಣ್ ಹೇಳಿದ್ದೇನು?
    ಫೆಬ್ರವರಿ 15ರಂದು ಮಂಡ್ಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಅಶ್ವಥ್ ನಾರಾಯಣ್ ಮಂಡ್ಯ ಜನರಿಗೆ ರಾಜಕೀಯ ಬದಲಾವಣೆ ಮಾಡುವ ಶಕ್ತಿ ಇದೆ. ಮಂಡ್ಯದವರು ಮನಸ್ಸು ಮಾಡಿದ್ರೆ ಏನು ಬೇಕಾದರೂ ಸಾಧಿಸುತ್ತಾರೆ. ರಾಜಕೀಯ ದಿಕ್ಸೂಚಿ ಮಂಡ್ಯದಿಂದ ಕಾಣಬೇಕು. ಹೀಗೆ ಮಾಡಲಿಲ್ಲ ಅಂದ್ರೆ ಟಿಪ್ಪು ಸುಲ್ತಾನ್ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬರುತ್ತಾರೆ. ನಿಮಗೆ ಟಿಪ್ಪು ಬೇಕಾ ಸಾವರ್ಕರ್ ಬೇಕಾ? ಟಿಪ್ಪು ಬೇಡಾ ಅಂದ್ರೆ ಸಿದ್ದರಾಮಯ್ಯ ಅವರನ್ನು ಟಿಪ್ಪು ಕಳುಹಿಸಿದ ಹಾಗೆ ಕಳಿಸಬೇಕು. ಹುರಿಗೌಡ, ನಂಜೇಗೌಡ ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನ ಹೊಡೆದು ಹಾಕಬೇಕು ಎಂದು ಹೇಳಿದ್ದರು. ಇದನ್ನೂ ಓದಿ: ಮುಂದಿನ 5 ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ – ಸಚಿವ ಎಂ.ಬಿ ಪಾಟೀಲ್‌

  • ವಿಚಾರವಾದಿ ಎನಿಸಿಕೊಳ್ಳುವ ಸಿದ್ದು ಅವ್ರು ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರಾ? – ನಟ ಚೇತನ್ ಲೇವಡಿ

    ವಿಚಾರವಾದಿ ಎನಿಸಿಕೊಳ್ಳುವ ಸಿದ್ದು ಅವ್ರು ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರಾ? – ನಟ ಚೇತನ್ ಲೇವಡಿ

    ಬೆಂಗಳೂರು: ನಟ ಹಾಗೂ ಸಾಮಾಜಿಕ ಹೋರಾಟಗಾರರೂ ಆಗಿರುವ ಚೇತನ್ ಅಹಿಂಸಾ (Chetan Kumar) ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಇದರಿಂದ ಜಾಲತಾಣದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಇದೀಗ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಅವರು ಪ್ರಮಾಣವಚನ ಸ್ವೀಕರಿದ ವಿಚಾರವನ್ನೂ ಟೀಕಿಸಿದ್ದಾರೆ.

    ಶನಿವಾರ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ 8 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಈ ವೇಳೆ ಸಿದ್ದರಾಮಯ್ಯ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇದನ್ನು ಪ್ರಶ್ನಿಸಿ ನಟ ಚೇತನ್ ಫೇಸ್‌ಬುಕ್ ಪುಟದಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದೇವರ ಹೆಸರಿನಲ್ಲಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ

    ‘ವಿಚಾರವಾದಿ’ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಅವರು ಕರ್ನಾಟಕದ ಸಿಎಂ ಆಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರಾ? ಯಾವ/ಯಾರು ದೇವರು? ದೇವರು ಎಲ್ಲಿದ್ದಾನೆ/ಳೆ/ರೆ? ಇದು ನಿರ್ದಿಷ್ಟವಾದ ಸೈದ್ಧಾಂತಿಕ ಆರಂಭವಲ್ಲ ಎಂದಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ – ಮುಂದಿನ ಕ್ಯಾಬಿನೆಟ್‌ನಲ್ಲಿ ಆದೇಶ

    ಸತೀಶ್ ಜಾರಕಿಹೊಳಿ ಅವರನ್ನೂ ಟೀಕಿಸಿದ್ದು, ಶಾಸಕ ಸತೀಶ ಜಾರಕಿಹೊಳಿ ಅವರು ‘ಬುದ್ಧ-ಬಸವ-ಅಂಬೇಡ್ಕರ್’ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್ ಪಕ್ಷವು ತನ್ನ ಸ್ವ-ಲಾಭದಾಯಕ ರಾಜಕೀಯ ಅಧಿಕಾರಕ್ಕಾಗಿ ನಮ್ಮ ಸಮಾನತೆಯ ಐಕಾನ್‌ಗಳನ್ನು ಯಾವಾಗಲೂ ಹೈಜಾಕ್ ಮಾಡಿದೆ. ಎಸ್ಟಿ ನಾಯಕ ಸಮುದಾಯದ ಸತೀಶ್ ಜಾರಕಿಹೊಳಿ ಶೋಷಿತ ಎಸ್ಟಿಗಳಿಗೆ ಒಳಮೀಸಲಾತಿಯನ್ನು ಬೆಂಬಲಿಸುತ್ತಾರೆಯೇ? ಅಥವಾ ಬುದ್ಧ-ಬಸವ-ಅಂಬೇಡ್ಕರ್ ಕೇವಲ ಗಿಮಿಕ್ ಮಾತ್ರವೇ? ಎಂದು ಪ್ರಶ್ನಿಸಿದ್ದಾರೆ.

  • ಕಿರುಚಿತ್ರ ತಯಾರಕರಿಗೆ ವೇದಿಕೆ ಕಲ್ಪಿಸಿದ ಖ್ಯಾತ ಸಿನಿಮಾಟೋಗ್ರಾಫರ್ ಸತ್ಯ ಹೆಗಡೆ

    ಕಿರುಚಿತ್ರ ತಯಾರಕರಿಗೆ ವೇದಿಕೆ ಕಲ್ಪಿಸಿದ ಖ್ಯಾತ ಸಿನಿಮಾಟೋಗ್ರಾಫರ್ ಸತ್ಯ ಹೆಗಡೆ

    ಚಂದನವನದಲ್ಲಿ ಯುವ ಪ್ರತಿಭೆಗಳ ಅದೃಷ್ಟ ಪರೀಕ್ಷೆಗೆ ‘ಸತ್ಯ ಹೆಗಡೆ (Satya Hegde) ಸ್ಟುಡಿಯೋಸ್’ ವರದಾನವಾಗುತ್ತಿದೆ. ಹೌದು ಛಾಯಾಗ್ರಾಹಕನಾಗಿ ಹೆಸರು ಮಾಡಿರುವ ಸತ್ಯ ಹೆಗಡೆ ‘ಸತ್ಯ ಹೆಗಡೆ ಸ್ಟುಡಿಯೋ’ ಹುಟ್ಟುಹಾಕಿ ಹೊಸ ಪ್ರತಿಭೆಗಳಿಗೆ ಬೆನ್ನೆಲುಬಾಗಿ ನಿಂತಿದ್ದು, ಈ ಸಂಸ್ಥೆಯ ಮುಖೇನ ಶಾರ್ಟ್ ಫಿಲ್ಮಗಳನ್ನು ನಿರ್ಮಾಣ ಮಾಡುವ ಜೊತೆಗೆ ಸತ್ಯ ಹೆಗಡೆ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್ ನಲ್ಲಿ ಅವುಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ ಯುವಕರು ತಮ್ಮ ನಿರ್ದೇಶಕನಾಗುವ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದು, ಈಗಾಗಲೇ ಈ ಯೂಟ್ಯೂಬ್ ಚಾನಲ್ ಮೂಲಕ 11 ಕಿರು ಚಿತ್ರಗಳು ಬಿಡುಗಡೆ ಆಗಿವೆ.‌

    ಇದೀಗ ಮೂರು ಫಿಲ್ಮ್ ಗಳು ಈ ಚಾನಲ್ ನಲ್ಲಿ ಬಿಡುಗಡೆಗೆ ಸಿದ್ದವಾಗಿದ್ದು, ಆ ಪೈಕಿ ಕಳೆದ ಶನಿವಾರ ‘ಗ್ರಾಚಾರ’ ಎಂಬ ಕಿರುಚಿತ್ರ ರಿಲೀಸ್ ಆಗಿದ್ದು ಮುಂದಿನ ದಿನಗಳಲ್ಲಿ ‘ಕಥೆಗಾರನ ಕತೆ’ ಹಾಗೂ ‘ಅಹಂ ಪರಂ’ ಶಾರ್ಟ್ ಫಿಲಂ ಗಳು ಈ ಸತ್ಯ ಹೆಗಡೆ ಸ್ಟುಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿವೆ. ಹಾಗಾಗಿ ಇತ್ತೀಚಿಗಷ್ಟೇ ಸತ್ಯ ಹೆಗಡೆ ಹಾಗೂ ಅವರ ತಂಡ ಆ ಮೂರು ಕಿರು ಚಿತ್ರಗಳ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಇದನ್ನೂ ಓದಿ: ಭಾರತದ ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರಕ್ಕೆ ಆಸ್ಕರ್ ಪ್ರಶಸ್ತಿ

    ಒಂಬತ್ತು ನಿಮಿಷಗಳ ‘ಕತೆಗಾರನ ಕಥೆ’ ಕಿರು ಚಿತ್ರವನ್ನು ಯುವ ಬರಹಗಾರ ಹಾಗೂ ನಿರ್ದೇಶಕ ಕೌಶಿಕ ಕೂಡುರಸ್ತೆ ನಿರ್ದೇಶನ ಮಾಡಿದ್ದಾರೆ. ಹಾಸನ ಮೂಲದವರಾದ ಕೌಶಿಕ ‘ಹೃದಯದ ಮಾತು’ ಸೇರಿದಂತೆ ೮ ಕಾದಂಬರಿಗಳನ್ನು ಬರೆದಿದ್ದು ಕೆಲವೊಂದು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಕೂಡ ಮಾಡಿದ್ದಾರೆ. ಇಂಜಿನಿಯರಿಂಗ್ ಓದಿಕೊಂಡಿರುವ ಕೌಶಿಕಗೆ ಇದು ಮೊದಲ ಪ್ರಯತ್ನ. ಈಗಷ್ಟೇ ಬಿಡುಗಡೆ ಆಗಿರುವ ‘ಗ್ರಾಚಾರ’ ಕಿರು ಚಿತ್ರವನ್ನು ಅಜಯ್ ಪಂಡಿತ್ ನಿರ್ದೇಶನ ಮಾಡಿದ್ದು, ಇವರು ಮೂಲತಃ ಸಾಗರನವರು. ಇವರು ಕೂಡ ಸಾಫ್ಟವೇರ್ ಇಂಜಿನಿಯರಿಂಗ್ ಓದಿಕೊಂಡಿದ್ದಾರೆ. ಇನ್ನು ವಿಭಿನ್ನ ಪ್ರಯತ್ನದಂತೆ ‘ಅಹಂ ಪರಂ’ ಕಿರುಚಿತ್ರ ಸಿದ್ಧವಾಗಿದ್ದು ಇದನ್ನು ವಿನಯ್ ಚಂದ್ರಹಾಸ ನಿರ್ದೇಶನ ಮಾಡಿದ್ದಾರೆ.

    ಈ ಕಿರುಚಿತ್ರಗಳ ವೀಕ್ಷಣೆಗೆ ಅಥಿತಿಗಳಾಗಿ ಆಗಮಿಸಿದ್ದರು ನಿದರ್ಶಕರಾದ ಗಿರಿರಾಜ್, ಚೇತನ ಕುಮಾರ್, ನಟ ‘ಗುಲ್ಟು’ ನವೀನ ಮುಂತಾದವರು. ಆ ಪೈಕಿ ನಿರ್ದೇಶಕ ಗಿರಿರಾಜ್ ಮಾತನಾಡಿ, ‘ಇಂದಿನ ಯುವಕರಿಗೆ ಶಾರ್ಟ್ ಫಿಲಂಗಳು ಒಂದು ಒಳ್ಳೆ ಅವಕಾಶ ಆಗುತ್ತಿವೆ. ಯುವಕರ ಪ್ರಯತ್ನಗಳಿಗೆ ಸತ್ಯ ಹೆಗಡೆ ಸ್ಟುಡಿಯೋಸ್ ಸಾಕಷ್ಟು ಸಹಾಯ ಮಾಡುತ್ತಿದೆ. ನಮ್ಮಗಳ ಕಾಲದಲ್ಲಿ ಇಂತಹ ಅವಕಾಶ ಇರಲಿಲ್ಲ. ಈಗಿನ ಯುವಕರಿಗೆ ಒಳ್ಳೆಯ ಅವಕಾಶವನ್ನು ಸತ್ಯ ಹೆಗಡೆ ಮಾಡಿಕೊಡುತ್ತಿದ್ದಾರೆ. ಮೂರು ಚಿತ್ರಗಳು ಚೆನ್ನಾಗಿ ಬಂದಿದ್ದು, ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಯುವ ಪ್ರತಿಭೆಗಳಿಗೆ ಒಳ್ಳೆಯದಾಗಲಿ’ ಎಂದು ಶುಭ ಹಾರೈಸಿದರು.

    ನಟ ನವೀನ್ ಮಾತನಾಡಿ, ‘ನಾನು ಕೂಡ ಶಾರ್ಟ್ ಫಿಲಂಗಳಲ್ಲಿ ಅಭಿನಯಿಸುತ್ತಾ ಬಂದವನು. ನಾವು ಶಾರ್ಟ್ ಫಿಲಂ ತಯಾರಿಸುವಾಗ ಸತ್ಯ ಹೆಗಡೆಯಂತವರು ನಮಗೆ ಯಾರು ಸಾಥ್ ನೀಡಿರಲಿಲ್ಲ. ಈಗಿನವರೆಗೆ ಒಳ್ಳೆಯ ಅವಕಾಶ ಸಿಗುತ್ತದೆ ಕಿರುಚಿತ್ರಗಳನ್ನು ಬಿಡುಗಡೆ ಮಾಡಲು. ಇಂತಹ ಅವಕಾಶವನ್ನು ಇನ್ನಷ್ಟು ಯುವ ಜನರಿಗೆ ಸಿಕ್ಕು ಒಳ್ಳೆಯ ಚಿತ್ರಗಳನ್ನು ತರಬೇಕು. ಈ ಶಾರ್ಟ್ ಫಿಲಂ ವೇದಿಕೆ ಯುವ ಪ್ರತಿಭೆಗಳಿಗೆ ತುಂಬಾ ಅನುಕೂಲವಾಗುತ್ತದೆ’ ಎಂದರು.

  • ನಟ ಇಶಾನ್ ಹಿಂದೆ ಬಿದ್ದ ಕನ್ನಡದ ಸ್ಟಾರ್ ನಿರ್ದೇಶಕರು

    ನಟ ಇಶಾನ್ ಹಿಂದೆ ಬಿದ್ದ ಕನ್ನಡದ ಸ್ಟಾರ್ ನಿರ್ದೇಶಕರು

    ಪವನ್ ಒಡೆಯರ್ ಮತ್ತು ಇಶಾನ್ ಕಾಂಬಿನೇಶನ್ ನಲ್ಲಿ ಬರ್ತಿರುವ ‘ರೆಮೋ’ ಸಿನಿಮಾ ಸೌಂಡ್ ಸ್ಯಾಂಡಲ್ ವುಡ್ ಅಂಗಳದಲ್ಲಿ ಜೋರಾಗಿದೆ. ಸೆಟ್ಟೇರಿದ ದಿನದಿಂದ ಸಖತ್ ಸುದ್ದಿಯಲ್ಲಿರುವ ಈ ಅದ್ದೂರಿ ಚಿತ್ರ ನವೆಂಬರ್ 25ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಆದ್ರೆ ಸಿನಿಮಾ ಬಿಡುಗಡೆಗೂ ಮುನ್ನವೇ ನಾಯಕ ನಟ ಇಶಾನ್ ಗೆ ಸ್ಟಾರ್ ನಿರ್ದೇಶಕರಿಂದ ಆಫರ್ ಮೇಲೆ ಆಫರ್ ಬರ್ತಿದ್ದು, ‘ರೆಮೋ’ ನಂತರ ಇಂಡಸ್ಟ್ರಿಯಲ್ಲಿ ಫುಲ್ ಬ್ಯುಸಿಯಾಗಲಿದ್ದಾರೆ ಹ್ಯಾಂಡ್ಸಮ್ ಹಂಕ್.

    ಹೌದು, ‘ರೆಮೋ’ ಹಾಡು, ಟೀಸರ್, ಟ್ರೇಲರ್ ಎಲ್ಲವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಆದ್ರೆ ಅದಕ್ಕೂ ಮಿಗಿಲಾಗಿ ನಾಯಕ ನಟ ಇಶಾನ್ ನಟನೆ, ಲುಕ್, ಪರ್ಸನಾಲಿಟಿ, ಸ್ಕ್ರೀನ್ ಅಪಿಯರೆನ್ಸ್ ಎಲ್ಲವೂ ಪ್ರೇಕ್ಷಕರ ಜೊತೆಗೆ ಚಂದನವನದ ಸ್ಟಾರ್ ನಿರ್ದೇಶಕರನ್ನೂ ಇಂಪ್ರೆಸ್ ಮಾಡಿದೆ. ಇದ್ರಿಂದಾಗಿ ಇಶಾನ್ ಜೊತೆ ಸಿನಿಮಾ ಮಾಡಲು ಚಂದನವನದ ಖ್ಯಾತ ನಿರ್ದೇಶಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇದನ್ನೂ ಓದಿ:ಕೇಕ್‌ ಕತ್ತರಿಸಿ ಸಕ್ಸಸ್ ಆಚರಿಸಿದ ‌ʻಗಂಧದ ಗುಡಿʼ ಟೀಮ್

    ಜೇಮ್ಸ್ ಖ್ಯಾತಿಯ ಚೇತನ್ ಕುಮಾರ್ ಇಶಾನ್ ಜೊತೆ ಈಗಾಗಲೇ ಹೊಸ ಸಿನಿಮಾ ಘೋಷಿಸಿದ್ದಾರೆ. ಲೇಟೆಸ್ಟ್ ಸಮಾಚಾರ ಅಂದ್ರೆ ಭಜರಂಗಿ ಖ್ಯಾತಿಯ ಎ ಹರ್ಷ, ರ್ಯಾಂಬೋ ಖ್ಯಾತಿಯ ಅನಿಲ್ ಹಾಗೂ ಯುವ ರಾಜ್ ಕುಮಾರ್ ಮೊದಲ‌ ಸಿನಿಮಾ ಘೋಷಿಸಿದ್ದ ಪುನೀತ್ ರುದ್ರನಾಗ್ ಇಶಾನ್ ಜೊತೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಈ ಬಗ್ಗೆ ನಾಯಕ ಇಶಾನ್ ಜೊತೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದು, ಇಶಾನ್ ಕಾಲ್ ಶೀಟ್ ಗಾಗಿ ಕಾಯುತ್ತಿದ್ದಾರೆ ಎನ್ನಲಾಗ್ತಿದೆ. ಸದ್ಯ ರೆಮೋ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಇಶಾನ್ ಸಿನಿಮಾ ಬಿಡುಗಡೆಯ ನಂತರ ಹೊಸ ಸಿನಿಮಾಗಳ ಬಗ್ಗೆ ಅಪ್ಡೇಟ್ ನೀಡಲಿದ್ದಾರೆ.

    ರೆಮೋ ಬಿಡುಗಡೆಯ ಮುನ್ನವೇ ಇಷ್ಟೊಂದು ನಿರ್ದೇಶಕರನ್ನು ಇಂಪ್ರೆಸ್ ಮಾಡಿದ್ದಾರೆ ಅಂದ್ರೆ ಭವಿಷ್ಯದಲ್ಲಿ ಸ್ಯಾಂಡಲ್ ವುಡ್ ಅಂಗಳಕ್ಕೆ ಇಶಾನ್ ಒಬ್ಬ ಭರವಸೆಯ ನಾಯಕ ನಟನಾಗಿ ನಿಲ್ಲೋದ್ರಲ್ಲಿ ಡೌಟೇ ಇಲ್ಲ.

    Live Tv
    [brid partner=56869869 player=32851 video=960834 autoplay=true]

  • ಧನ್ವೀರ್ ನಟನೆಯ ‘ವಾಮನ’ ಸಿನಿಮಾದ ಫಸ್ಟ್ ಲುಕ್ ಆಗಸ್ಟ್ 15ರಂದು ರಿಲೀಸ್

    ಧನ್ವೀರ್ ನಟನೆಯ ‘ವಾಮನ’ ಸಿನಿಮಾದ ಫಸ್ಟ್ ಲುಕ್ ಆಗಸ್ಟ್ 15ರಂದು ರಿಲೀಸ್

    ವ್ ಸ್ಟೋರಿ ಜೊತೆಗೆ ಔಟ್ ಅಂಡ್ ಔಟ್ ಆಕ್ಷನ್ ಕಮರ್ಷಿಯಲ್ ಸಿನಿಮಾವಾಗಿರುವ ವಾಮನ ಟೀಸರ್ ಇದೇ 15ಕ್ಕೆ ರಿಲೀಸ್ ಆಗ್ತಿದೆ. ನಿರ್ಮಾಪಕ ಚೇತನ್ ಕುಮಾರ್ ಹುಟ್ಟುಹಬ್ಬ ಹಾಗೂ ಸ್ವಾತಂತ್ರ್ಯದ ವಿಶೇಷ ಉಡುಗೊರೆಯಾಗಿ ವಾಮನ ಟೀಸರ್ ಚಿತ್ರರಸಿಕರ ಮಡಿಲು ಸೇರಲಿದೆ. ಕನ್ನಡ, ತೆಲುಗು ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿರುವ ಶಂಕರ್ ರಾಮನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಧ್ವನೀರ್ ಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ಬಣ್ಣ ಹಚ್ಚಿದ್ದಾರೆ. ಈಗಾಗಲೇ 70 ದಿನದ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಶೀರ್ಘದಲ್ಲಿಯೇ ಬಾಕಿ ಉಳಿದ ಚಿತ್ರೀಕರಣ ಮುಗಿಸಲಿದೆ.

    ಬಜಾರ್, ಬೈ ಟು ಲವ್ ಸಿನಿಮಾ ಖ್ಯಾತಿಯ ಧನ್ವೀರ್ ಗೌಡ ನಟಿಸ್ತಿರುವ ಬಹು ನಿರೀಕ್ಷಿತ ಸಿನಿಮಾ ವಾಮನ ನಾನಾ ವಿಚಾರಗಳಿಂದ ಚಿತ್ರಪ್ರೇಮಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ನಿರ್ದೇಶಕ ಶಂಕರ್ ರಾಮನ್, ಇಡೀ ತಂಡದ ಶ್ರದ್ಧೆ ಹಾಗೂ ಪರಿಶ್ರಮದಿಂದ ರೂಪಗೊಳ್ಳುತ್ತಿರುವ  ಈ ಸಿನಿಮಾವನ್ನು ಅತೀವ ಆಸಕ್ತಿ ಹಾಗೂ ಕಲಾ ಪ್ರೇಮದಿಂದ ಚೇತನ್ ಕುಮಾರ್ ‌ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ನಾಪತ್ತೆಯಾದ ಲೋಕೇಶ್

    ಹತ್ತಾರು ವರ್ಷಗಳಿಂದ ಬಚ್ಚಿಟ್ಟುಕೊಂಡಿದ್ದ ಸಿನಿಮಾ ಕನಸನ್ನು ವಾಮನ ಮೂಲಕ ನನಸು ಮಾಡಿಕೊಳ್ಳುತ್ತಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಖ್ಯಾತಿ ಗಳಿಸಿರುವ ಚೇತನ್ ಕುಮಾರ್ ಸಿನಿಮಾ ಮೇಲಿನ ವ್ಯಾಮೋಹ ಹೆಚ್ಚಿಸಿಕೊಂಡೇ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಮೂಲತಃ ದೇವನಹಳ್ಳಿಯವರಾದ ಇವರು, ಆರಂಭದಿಂದಲೂ ಸಿನಿಮಾ ಪ್ರೇಮಿ. ಚಿತ್ರದ ನಾಯಕ ಧನ್ವೀರ್ ಆತ್ಮೀಯ ಗೆಳೆಯ. ಈ ಎರಡು ನಂಟು ಇವರನ್ನು ಸಿನಿಮಾ ಮಾಡುವ ಉತ್ಸುಕತೆ ಹೆಚ್ಚಿಸಿದೆ. ಹೀಗಾಗಿ ನಿರ್ದೇಶಕರು ಹೇಳಿದ ಕಥೆಗೆ ಫಿದಾ ಅದ್ಧೂರಿಯಾಗಿ ವಾಮನ ಸಿನಿಮಾ ನಿರ್ಮಾಣ ಮಾಡಿದ್ದಾರೆ. ತಮ್ಮದೇ ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ ಟೈನ್ಮೆಂಟ್ ನಡಿ ಬ್ಯಾನರ್ ನಡಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ವಾಮನ ತಮ್ಮ ಡ್ರೀಮ್ ಪ್ರಾಜೆಕ್ಟ್ ಎನ್ನುವ ನಿರ್ಮಾಪಕ ಚೇತನ್ ಕುಮಾರ್, ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾ ನಿರ್ಮಾಣ ಮಾಡುವ ಕನಸು ಕಟ್ಟಿಕೊಂಡಿದ್ದಾರೆ. ಅದರ ಮುಂದುವರೆದ ಭಾಗವಾಗಿ ಈಗಾಗಲೇ ನಾಲ್ಕೈದು ಕಥೆ ಕೇಳಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ಜೇಮ್ಸ್ ಟೀಮ್ ಮೊದಲೇ ಈ ಕೆಲಸ ಮಾಡಬೇಕಿತ್ತು : ನಟ ಶಿವರಾಜ್ ಕುಮಾರ್

    ಜೇಮ್ಸ್ ಟೀಮ್ ಮೊದಲೇ ಈ ಕೆಲಸ ಮಾಡಬೇಕಿತ್ತು : ನಟ ಶಿವರಾಜ್ ಕುಮಾರ್

    ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ಸಿನಿಮಾ ಮತ್ತೊಂದು ಸುತ್ತಿನ ರಿ-ರಿಲೀಸ್ ಗೆ ರೆಡಿ ಆಗಿದೆ. ಈ ಬಾರಿ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಜನರ ಮುಂದೆ ಬರುತ್ತಿದೆ. ಆ ತಂತ್ರಜ್ಞಾನದ ಮೂಲಕ ಸ್ವತಃ ಅಪ್ಪು ಧ್ವನಿಯಲ್ಲಿಯೇ ಜೇಮ್ಸ್ ಸಿನಿಮಾ ನೋಡಬಹುದಾಗಿದೆ ಎಂದಿದ್ದಾರೆ ನಿರ್ದೇಶಕ ಚೇತನ್ ಕುಮಾರ್. ಇದನ್ನೂ ಓದಿ : ಜೋಗಿ ಪ್ರೇಮ್ ಹೊಸ ಸಿನಿಮಾ ಘೋಷಣೆ : ಧ್ರುವ ಸರ್ಜಾ ಹೀರೋ, ಏ.24 ಮುಹೂರ್ತ

    ಹೌದು, ಜೇಮ್ಸ್ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಧ್ವನಿ ಇರಲಿಲ್ಲ. ಅವರ ಬದಲಾಗಿದೆ, ಅಪ್ಪು ಸಹೋದರ ಶಿವರಾಜ್ ಕುಮಾರ್ ಆ ಪಾತ್ರಕ್ಕೆ ಡಬ್ ಮಾಡಿದ್ದರು. ಇದೀಗ ವಿಶೇಷ ತಂತ್ರಜ್ಞಾನ ಬಳಸಿಕೊಂಡು, ಶೂಟಿಂಗ್ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಹೇಳಿದ ಸಂಭಾಷಣೆಯನ್ನೇ ಉಳಿಸಿಕೊಂಡು  ಅದನ್ನು ರಿ ಗೇಯ್ನ ಮಾಡಿ ಜನರ ಮುಂದೆ ಮತ್ತೆ ಪುನೀತ್ ರಾಜ್ ಕುಮಾರ್ ಅವರನ್ನು ತಂದು ನಿಲ್ಲಿಸುತ್ತಿದ್ದಾರೆ ಚಿತ್ರತಂಡ. ಇದನ್ನೂ ಓದಿ : ಭಾವಿ ಪತಿಯ ತಂದೆ ನಿಧನ: ನಟಿ ಕಾವ್ಯ ಶಾ ಮದುವೆ ಮುಂದೂಡಿಕೆ

    ಈ ವಿಷಯದ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್, ‘ಇಂಥದ್ದೊಂದು ತಂತ್ರಜ್ಞಾನ ಇದೆ ಅಂತ ನನಗೆ ಗೊತ್ತೇ ಇರಲಿಲ್ಲ. ವಿಷಯ ಕೇಳಿ ತುಂಬಾ ಸಂತೋಷವಾಯಿತು. ಅಪ್ಪು ಅವರ ವಾಯ್ಸ್ ನಲ್ಲೇ ಸಿನಿಮಾ ನೋಡುವುದು ಇನ್ನೂ ಖುಷಿ ಕೊಡುವ ವಿಚಾರ. ಸಿನಿಮಾ ರಿಲೀಸ್ ಗೂ ಮುನ್ನ ಈ ತಂತ್ರಜ್ಞಾನ ಬಳಸಿಕೊಂಡಿದ್ದರೆ ಇನ್ನೂ ಚೆನ್ನಾಗಿ ಇರುತ್ತಿತ್ತು’ ಎಂದಿದ್ದಾರೆ. ಇದನ್ನೂ ಓದಿ : ನಾನೇಕೆ ಡ್ರಗ್ಸ್ ತಗೆದುಕೊಳ್ಳುತ್ತಿದ್ದೆ? ಅಸಲಿ ಕಾರಣ ಬಿಚ್ಚಿಟ್ಟ ಸಂಜಯ್ ದತ್

    ಪುನೀತ್  ರಾಜ್ ಕುಮಾರ್ ಕನಸಿನ ಶಕ್ತಿಧಾಮದಲ್ಲಿ ಮಕ್ಕಳ ಬೇಸಿಗೆ ಶಿಬಿರ ನಡೆಯುತ್ತಿದೆ. ನಿನ್ನೆಯಿಂದ ಬೇಸಿಗೆ ಶಿಬಿರ ಆರಂಭವಾಗಿದೆ. ಈ ಶಿಬಿರಕ್ಕೆ ಚಾಲನೆ ಕೊಡಲು ಶಿವರಾಜ್ ಕುಮಾರ್ ಪತ್ನಿ ಸಮೇತ ಬಂದಿದ್ದರು. ಕೆಲ ಹೊತ್ತು ಮಕ್ಕಳೊಂದಿಗೆ ಮಕ್ಕಳಾಗಿ ಶಿವಣ್ಣ ಸಮಯ ಕಳೆದರು.

  • ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ – ಜೇಮ್ಸ್ ಸಿನಿಮಾ ರೀ ರಿಲೀಸ್

    ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ – ಜೇಮ್ಸ್ ಸಿನಿಮಾ ರೀ ರಿಲೀಸ್

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೇ ಚಿತ್ರ `ಜೇಮ್ಸ್’ ನಿರ್ಮಾಣ ಪೂರ್ಣಗೊಳ್ಳುವ ಮೊದಲೇ ಅಪ್ಪು ಹೃದಯಾಘಾತದಿಂದ ಅಗಲಿದ್ದು, ಅಭಿಮಾನಿಗಳಿಗೆ ಭಾರೀ ನೋವುಂಟು ಮಾಡಿತ್ತು.

    ಅಪ್ಪು ಅಗಲಿಕೆಗೂ ಮುನ್ನ ಜೇಮ್ಸ್ ಸಿನಿಮಾದ ಕೆಲವು ಡಬ್ಬಿಂಗ್ ಪಾರ್ಟ್ಗಳು ಬಾಕಿ ಉಳಿದಿದ್ದು, ಅವರ ಅಣ್ಣ ಶಿವರಾಜ್‌ಕುಮಾರ್ ಧ್ವನಿಯಲ್ಲಿ ಅದನ್ನು ಕಂಪ್ಲೀಟ್ ಮಾಡಿ ರಿಲೀಸ್ ಮಾಡಲಾಗಿತ್ತು. ಅಭಿಮಾನಿಗಳು ಅಪ್ಪು ಚಿತ್ರದಲ್ಲಿ ಶಿವಣ್ಣನ ಧ್ವನಿಯನ್ನು ಮೆಚ್ಚಿದ್ದರೂ ಎಲ್ಲೋ ಒಂದೆಡೆ ಪುನೀತ್ ಧ್ವನಿ ಇದ್ರೇನೆ ಚೆನ್ನಾಗಿರುತ್ತಿತ್ತು ಎಂಬ ನಿರಾಶೆ ಇತ್ತು. ಆದರೆ ಇದೀಗ ಜೇಮ್ಸ್ ತಂಡ ಅಪ್ಪು ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ನೀಡಿದೆ. ಇದನ್ನೂ ಓದಿ: ಬಾಲಿವುಡ್‌ 3ನೇ ದಿನದ ಕಲೆಕ್ಷನ್‌ನಲ್ಲೂ ಹವಾ ಕ್ರಿಯೇಟ್‌ ಮಾಡಿದ ʻಕೆಜಿಎಫ್‌ 2ʼ

    ಹೌದು, ಜೇಮ್ಸ್ ತಂಡ ಸಿನಿಮಾವನ್ನು ಸಂಪೂರ್ಣವಾಗಿ ಅಪ್ಪು ಧ್ವನಿಯಲ್ಲೇ ಡಬ್ಬಿಂಗ್ ಮಾಡಿ ರೀ-ರಿಲೀಸ್‌ಗೆ ಪ್ಲಾನ್ ನಡೆಸಿದ್ದಾರೆ. ಅಪ್ಪು ಇಲ್ಲದೇ ಇದೆಲ್ಲ ಹೇಗೆ ಸಾಧ್ಯ ಎಂಬ ಗೊಂದಲ ಅಭಿಮಾನಿಗಳಲ್ಲಿ ಇದ್ದರೂ ಇದು ನಿಜ.

    ಹೊಸದೊಂದು ಆವಿಷ್ಕಾರದ ಮೂಲಕ ಅಪ್ಪು ಧ್ವನಿಯ ಮಾದರಿಯಿಂದ ಇಡೀ ಸಿನಿಮಾದ ಡಬ್ಬಿಂಗ್ ಅನ್ನು ಮಾಡಲಾಗುತ್ತಿದೆ. ಈ ಹಿಂದೆ ಶಿವಣ್ಣ ನೀಡಿದ್ದ ಧ್ವನಿಯನ್ನು ತೆಗೆದು ಆ ಜಾಗದಲ್ಲಿ ಹೊಸ ಟೆಕ್ನಾಲಜಿ ಮುಖಾಂತರ ಮಾಡಲಾಗುತ್ತಿರುವ ಅಪ್ಪು ಧ್ವನಿಯನ್ನು ಕೂರಿಸಲಾಗುತ್ತಿದೆ ಎಂದು ಜೇಮ್ಸ್ ಸಿನಿಮಾ ನಿರ್ದೇಶಕ ಚೇತನ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: `ಚಂದ್ರಲೇಖ ರಿಟರ್ನ್ಸ್’ ಅಂತಿದ್ದಾರೆ ನಿರ್ದೇಶಕ ಓಂಪ್ರಕಾಶ್ ರಾವ್

    ಇಂತಹ ಟೆಕ್ನಾಲಜಿ ಮೂಲಕ ಧ್ವನಿಯನ್ನು ರಿ ಕ್ರಿಯೇಟ್ ಮಾಡಿ ಡಬ್ಬಿಂಗ್ ಅನ್ನು ಕೂರಿಸಲಾಗುತ್ತಿರುವುದು ಇದೇ ಮೊದಲು. ಈ ಹೊಸ ಸೌಂಡ್ ಟ್ರ್ಯಾಕ್ ಕೂರಿಸಿದ ಜೇಮ್ಸ್ ಸಿನಿಮಾವನ್ನು ಇದೇ ತಿಂಗಳ 22ನೇ ತಾರೀಖಿನಂದು ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ವೀಕ್ಷಿಸಬಹುದು ಎಂದು ಚೇತನ್ ಹೇಳಿದ್ದಾರೆ.

  • ಜೇಮ್ಸ್ ಸಿನಿಮಾ ನೋಡೋಕೆ 10 ಅಲ್ಲ, 100 ಕಾರಣ

    ಜೇಮ್ಸ್ ಸಿನಿಮಾ ನೋಡೋಕೆ 10 ಅಲ್ಲ, 100 ಕಾರಣ

    ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ಸಿನಿಮಾ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮಧ್ಯೆ ರಾತ್ರಿಯಿಂದಲೇ ತೆರೆಯ ಮೇಲೆ ಅಪ್ಪು ರಾರಾಜಿಸುತ್ತಾ ಇದ್ದಾರೆ. ಇಂದು ಅವರ ಹುಟ್ಟುಹಬ್ಬವೂ ಆಗಿರುವುದರಿಂದ ಒಂದು ರೀತಿಯಲ್ಲಿ ಜಾತ್ರೆಯ ವಾತಾವರಣವೇ ಥಿಯೇಟರ್ ಮುಂದಿದೆ. ಆದರೆ, ಅಪ್ಪು ಇಲ್ಲ ಎನ್ನುವ ಕೊರಗು ಸದಾ ಇದ್ದೇ ಇರುತ್ತದೆ.

    ಜೇಮ್ಸ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ. ಖಂಡಿತಾ ಈ ಸೆಂಟಿಮೆಂಟ್ ಸಿನಿಮಾಗೆ ಬಂದ ಮೇಲೆ ವರ್ಕ್ ಆಗಲ್ಲ. ಸೆಂಟಿಮೆಂಟ್ ಆಚೆಯೂ ಸಿನಿಮಾ ಗೆದ್ದು ನಿಲ್ಲುತ್ತದೆ. ಕಾರಣ ‘ಪವರ್ ಸ್ಟಾರ್’. ಸಾಮಾನ್ಯವಾಗಿ ಕಥೆಯೇ ಇಲ್ಲದೇ ಸ್ಟಾರ್ ನಟರು ಚಿತ್ರ ಮಾಡುತ್ತಾರೆ ಎನ್ನುವ ಆರೋಪವಿದೆ. ಆದರೆ, ಜೇಮ್ಸ್ ಸಿನಿಮಾದಲ್ಲಿ ಭರ್ಜರಿ ಕಥೆಯಿದೆ. ಅದು ಕೇವಲ ನಮ್ಮ ನೆಲದ ಕಥೆ ಮಾತ್ರವಲ್ಲ, ವಿದೇಶಿ ನೆಲದಲ್ಲೂ ಬೇರೂರಿರುವಂತಹ ಕಥಾವಸ್ತುವನ್ನು ಅದು ಹೊಂದಿದೆ. ಇದನ್ನೂ ಓದಿ : ಮದಗಜ ಚಿತ್ರ ಖ್ಯಾತಿಯ ನಿರ್ದೇಶಕ ಮಹೇಶ್ ಕಂಡಂತೆ ‘ಜೇಮ್ಸ್’ ಸಿನಿಮಾ: ಸೆಲೆಬ್ರಿಟಿ ಫಸ್ಟ್ ರಿವ್ಯೂ

    ಅಪ್ಪು ಎಂಟ್ರಿನೇ ಮೈ ಜುಮ್ಮೆನಿಸುತ್ತದೆ. ಅದರಲ್ಲೂ ಕಾರ್ ಚೇಸಿಂಗ್ ದೃಶ್ಯ ನೋಡುಗರ ಎದೆ ನಡುಗಿಸುತ್ತದೆ. ಹೇಳಿ ಕೇಳಿ ಪುನೀತ್ ರಾಜ್ ಕುಮಾರ್ ಆಕ್ಷನ್ ಕಿಂಗ್. ಅವರಿಗೆ ಹೇಳಿ ಮಾಡಿಸಿದಂತೆಯೆ ಸಾಹಸ ದೃಶ್ಯಗಳ ಸಂಯೋಜನೆ. ರವಿವರ್ಮಾ ಅದ್ಭುತವಾಗಿ ಸ್ಟಂಟ್ ಕೊರಿಯೋಗ್ರಫಿ ಮಾಡಿದ್ದಾರೆ. ಅಪ್ಪು ಕಾಲುಗಳು ಬೆಳೆದದ್ದೇ ಡಾನ್ಸ್ ಮಾಡಲು. ಪುನೀತ್ ರಾಜ್ ಕುಮಾರ್ ಸಿನಿಮಾಗಳೆಂದರೆ, ಅಲ್ಲಿ ಹಾಡಿಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಯಾಕೆಂದರೆ, ಹಾಡಿಗೂ ಮತ್ತು ಇವರು ಹಾಕುವ ಸ್ಟೆಪ್ ಗೂ ಒಂದು ರೀತಿಯಲ್ಲಿ ಜುಗಲ್ಬಂದಿಯೇ ಏರ್ಪಾಟಾಗುತ್ತದೆ. ಈ ಸಿನಿಮಾದಲ್ಲಿ ಹಾಡುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗದೇ ಇದ್ದರೂ, ಇರೋ ಹಾಡಿಗೆ ಅದ್ಭುತವಾಗಿ ಹೆಜ್ಜೆ ಹಾಕಿದ್ದಾರೆ ಪುನೀತ್ ರಾಜ್ ಕುಮಾರ್. ಚರಣ್ ರಾಜ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಹಾಡುಗಳು ಕೂಡ ಕಾಡುತ್ತವೆ. ಹಿನ್ನೆಲೆ ಸಂಗೀತ ಸಂಯೋಜನೆ ಚಿತ್ರಕ್ಕೆ ಹೇಳಿ ಮಾಡಿಸಿದಂತಿದೆ.

    ಪುನೀತ್ ರಾಜ್ ಕುಮಾರ್ ಈ ಸಿನಿಮಾದಲ್ಲಿ ಎರಡು ಶೇಡ್ ಇರುವಂತಹ ಪಾತ್ರ ಮಾಡಿದ್ದಾರೆ. ಒಂದು ಸೈನಿಕನಾಗಿ ಮತ್ತೊಂದು ಸೆಕ್ಯುರಿಟಿ ಏಜೆನ್ಸಿ ನಡೆಸುವ ಮುಖ್ಯಸ್ಥನಾಗಿ. ಮೇಜರ್ ಪಾತ್ರಕ್ಕೆ ಪುನೀತ್ ಅವರು ಜೀವ ತುಂಬಿದ್ದಾರೆ. ಫ್ಲ್ಯಾಶ್ ಬ್ಯಾಕ್ ಗೆ ಹೊರಳುವ ಕಥೆಯಲ್ಲಿ ಇನ್ನೂ ಸಖತ್ ಆಗಿ ಕಾಣುತ್ತಾರೆ. ಇದನ್ನೂ ಓದಿ : ವಿಭಿನ್ನ, ವಿಶಿಷ್ಟ, ಭಾವನಾತ್ಮಕ ಡಿಪಿಗಳಲ್ಲಿ ಪುನೀತ್ ರಾಜ್ ಕುಮಾರ್

    ಮೇಲ್ನೊಟಕ್ಕೆ ಇದೊಂದು ಸೇಡಿನ ಕಥೆ ಅಂತ ಅನಿಸಿದರೂ, ಇಲ್ಲೊಂದು ದೇಶಪ್ರೇಮದ ಟಿಸಿಲಿದೆ. ಗೆಳೆತನದ ಮಹತ್ವ ಸಾರುವ ಸಾಲಿದೆ. ಜಗತ್ತನ್ನೇ ಆತಂಕಕ್ಕೆ ದೂಡಿದ ಡ್ರಗ್ಸ್ ಮಾಫಿಯಾ ಕೂಡ ಕಥೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಅದಕ್ಕೊಂದು ತಾರ್ಕಿಕ ಅಂತ್ಯ ಕೊಡುವ ದೃಶ್ಯವೇ ಹೊಸದೆನಿಸುತ್ತದೆ.

    ಮೂವರು ಸಹೋದರರು ಒಂದೇ ಸಿನಿಮಾದಲ್ಲಿ ನಟಿಸಬೇಕು ಎನ್ನುವುದು ಪಾರ್ವತಮ್ಮ ರಾಜ್ ಕುಮಾರ್ ಆಸೆ ಆಗಿತ್ತು. ಆ ಆಸೆಯು ಈ ಸಿನಿಮಾದಲ್ಲಿ ಈಡೇರಿದೆ. ಬಾಲ್ಯದ ಸನ್ನಿವೇಶಕ್ಕೆ ಕಥೆ ತಿರುಗಿದಾಗ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಕಾಣಿಸುತ್ತಾರೆ. ಇದನ್ನೂ ಓದಿ : ‘ಜೇಮ್ಸ್’ ಸಿನಿಮಾ ಫಸ್ಟ್ ಹಾಫ್ ಹೇಗಿದೆ? – ಕಣ್ಣಿಗೆ ಹಬ್ಬ, ಮನಸ್ಸಿಗೆ ಬೇಸರ

    ಪುನೀತ್ ಅವರ ಜತೆ ನಟಿಸಿದ ತಾರಾಬಳಗ ಕೂಡ ದೊಡ್ಡದಿದೆ. ಶರತ್ ಕುಮಾರ್, ಪ್ರಿಯಾ ಆನಂದ್, ಸಾಧು ಕೋಕಿಲಾ, ಶ್ರೀಕಾಂತ್, ಆದಿತ್ಯ ಮೆನನ್ ಹೀಗೆ ಅನುಭವಿ ಕಲಾವಿದರ ಬಳಗವೇ ಸಿನಿಮಾದಲ್ಲಿದೆ. ಹೀಗೆ ಸಿನಿಮಾ ನೋಡಲು ನೂರಾರು ಕಾರಣಗಳನ್ನು ಕೊಡಬಹುದು.

  • ಆಸ್ಟ್ರೇಲಿಯಾದಲ್ಲಿ ಸೆನ್ಸಾರ್ ಆದ ಕನ್ನಡದ ಮೊದಲ ಸಿನಿಮಾ ‘ಜೇಮ್ಸ್’

    ಆಸ್ಟ್ರೇಲಿಯಾದಲ್ಲಿ ಸೆನ್ಸಾರ್ ಆದ ಕನ್ನಡದ ಮೊದಲ ಸಿನಿಮಾ ‘ಜೇಮ್ಸ್’

    ನ್ನೆರಡು ದಿನಗಳು ಕಳೆದರೆ, ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ರಿಲೀಸ್ ಆಗುತ್ತಿದೆ. ಕರ್ನಾಟಕದಲ್ಲೇ 300 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಜಗತ್ತಿನ ವಿವಿಧ ದೇಶಗಳಲ್ಲೂ ಸಿನಿಮಾ ಪ್ರದರ್ಶನಕ್ಕೆ ಏರ್ಪಾಟು ಮಾಡಲಾಗಿದೆ. ಆಸ್ಟ್ರೇಲಿಯಾವೊಂದರಲ್ಲಿ 150ಕ್ಕೂ ಹೆಚ್ಚಿನ ಶೋಗಳು ನಡೆಯುತ್ತಿರುವುದು ಮತ್ತೊಂದು ವಿಶೇಷ.

    ಆಸ್ಟ್ರೇಲಿಯಾದಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿರುವುದರಿಂದ ಅಲ್ಲಿಯೂ ಸಿನಿಮಾವನ್ನು ಸೆನ್ಸಾರ್ ಮಾಡಲಾಗಿದೆ. ಹಾಗಾಗಿ ಆ ದೇಶದಲ್ಲಿ ಸೆನ್ಸಾರ್ ಆದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಜೇಮ್ಸ್ ಪಾತ್ರವಾಗಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ಯು.ಎಸ್ ನಲ್ಲೂ ಜೇಮ್ಸ್ ಸಿನಿಮಾವನ್ನು ಬರಮಾಡಿಕೊಳ್ಳಲು 25ಕ್ಕೂ ಹೆಚ್ಚು ಸೇಟ್ಸ್  ರೆಡಿಯಾಗಿವೆಯಂತೆ. ವಾರಂತ್ಯಕ್ಕೆ ಈ ಶೋಗಳ ಸಂಖ್ಯೆಯೂ ಹೆಚ್ಚಾಗಲಿ ಎಂದಿದ್ದಾರೆ ಚಿತ್ರದ ನಿರ್ದೇಶಕ ಚೇತನ್ ಕುಮಾರ್. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದಕ್ಕೆ ಭಾರೀ ರೆಸ್ಪಾನ್ಸ್ ಸಿಗುತ್ತಿದೆಯಂತೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಅಂಥದ್ದೇನಿದೆ ಸಿನಿಮಾದಲ್ಲಿ? ದಳ್ಳುರಿಯಲ್ಲಿ ದಹನದ ಕಥನ!

     

    ಈಗಾಗಲೇ ಜೇಮ್ಸ್  ಸಿನಿಮಾಗಾಗಿ ರಾಜ್ಯದಲ್ಲಿ ಅನೇಕ ತಯಾರಿ ಮಾಡಿಕೊಳ್ಳಲಾಗಿದೆ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ವಾರದಿಂದಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಬಹುತೇಕ ಚಿತ್ರಮಂದಿರಗಳಲ್ಲಿ ಪುನೀತ್ ಅವರ ಕಟೌಟ್ ಹಾಕಲಾಗಿದೆ.

  • ಜೇಮ್ಸ್ ಚಿತ್ರದ ಬೆಳಗ್ಗಿನ 6 ಗಂಟೆಯ  200 ಶೋಗಳ ಟಿಕೆಟ್ ಸೋಲ್ಡ್ ಔಟ್: ಏನೆಲ್ಲ ದಾಖಲೆ?

    ಜೇಮ್ಸ್ ಚಿತ್ರದ ಬೆಳಗ್ಗಿನ 6 ಗಂಟೆಯ 200 ಶೋಗಳ ಟಿಕೆಟ್ ಸೋಲ್ಡ್ ಔಟ್: ಏನೆಲ್ಲ ದಾಖಲೆ?

    ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ‘ಜೇಮ್ಸ್’ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ದೇಶಾದ್ಯಂತ ನಾಲ್ಕು ಸಾವಿರ ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಕರ್ನಾಟಕದಲ್ಲಂತೂ ಭರ್ಜರಿ ಪ್ರಚಾರ ಸಿಗುತ್ತಿದೆ. ಆದರೆ, ಬೇರೆ ಭಾಷೆಗಳಲ್ಲಿ ಚಿತ್ರತಂಡ ಅಷ್ಟೇನೂ ಪ್ರಚಾರ ಮಾಡದ ಕಾರಣ, ಕ್ರೇಜ್ ಕ್ರಿಯೇಟ್ ಆದಂತೆ ಕಾಣುತ್ತಿಲ್ಲ. ಇದನ್ನೂ ಓದಿ : ರಾಮ್ ಗೋಪಾಲ ವರ್ಮಾ ಡೇಂಜರೆಸ್ ಹುಡುಗಿ ಅಂತ ಹೇಳಿದ್ದು ಯಾರಿಗೆ?

    ನಾಲ್ಕು ದಿನಗಳ ಮೊದಲೇ ಟಿಕೆಟ್ ಬುಕ್ಕಿಂಗ್ ಶುರು ಮಾಡಿದೆ ಚಿತ್ರತಂಡ. ಹಲವು ಕಡೆ ಬೆಳಗ್ಗೆ ನಾಲ್ಕರಿಂದಲೇ ಪ್ರದರ್ಶನಕ್ಕೆ ಏರ್ಪಾಟು ಮಾಡಲಾಗಿದೆ. ಸದ್ಯ ಬುಕ್ ಮೈ ಶೋ ಆಪ್ ನಲ್ಲಿ ಬೆಳಗ್ಗೆ 6 ಗಂಟೆಯಿಂದ ಪ್ರದರ್ಶನಕ್ಕೆ ಟಿಕೆಟ್ ಬುಕ್ ಮಾಡಬಹುದು. ಇದನ್ನೂ ಓದಿ : ರಣಬೀರ್ ಮತ್ತು ಆಲಿಯಾ ಮದ್ವೆ ಡೇಟ್ ಮತ್ತೆ ಬದಲು: ಪ್ರಣಯ ಹಕ್ಕಿಗಳ ಪ್ರಲಾಪ

    ಬಾಕ್ಸ್ ಆಫೀಸರ್ ರಿಪೋರ್ಟ್ ಪ್ರಕಾರ ಮಾ.17 ರಂದು ಬೆಳಗ್ಗೆ 6 ಗಂಟೆಗೆ 200 ಶೋಗಳು ಜೆಮ್ಸ್ ಗಾಗಿ ಮೀಸಲಿಟ್ಟಿವೆ. ಅಷ್ಟೂ ಶೋಗಳ ಟಿಕೇಟ್ ಸೋಲ್ಡೌಟ್ ಆಗಿರುವುದು ವಿಶೇಷ. ಫಸ್ಟ್ ಡೇ ಫಸ್ಟ್ ಶೋ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತದ್ದು, ಬೆಳಗಿನ ಪ್ರದರ್ಶನಕ್ಕೆ ಭಾರೀ ಬೇಡಿಕೆ ಬಂದಿದೆ. ಹಾಗಾಗಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಬಹುತೇಕ ಸ್ಕ್ರೀನ್ ಗಳನ್ನು ಜೇಮ್ಸ್ ಪ್ರದರ್ಶನಕ್ಕಾಗಿಯೇ ಮೀಸಲಿಡಲಾಗಿದೆಯಂತೆ. ಇದನ್ನೂ ಓದಿ : ನಟ ಚೇತನ್ ಗಡಿಪಾರು? : ಹೋರಾಟಗಳೇ ನಟನಿಗೆ ಮುಳುವಾಗುತ್ತಾ..?

    ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ ಇದಾಗಿದ್ದರಿಂದ, ಅವರಿಗೆ ಗೌರವ ಸಲ್ಲಿಸುವುದಕ್ಕಾಗಿಯೇ ಆ ವಾರ ಯಾವ ಭಾರೀ ಬಜೆಟ್ ಚಿತ್ರಗಳು ಬಿಡುಗಡೆ ಆಗುತ್ತಿಲ್ಲ. ಹಾಗಾಗಿ ರಾಜ್ಯ ಶೇ.80ರಷ್ಟು ಚಿತ್ರಮಂದಿರಗಳಲ್ಲಿ ಜೇಮ್ಸ್ ತೆರೆ ಕಾಣುತ್ತಿದೆ. ಕೋವಿಡ್ ಕಾರಣದಿಂದಾಗಿ ಮುಚ್ಚಲಾಗಿದ್ದ ಚಿತ್ರಮಂದಿರಗಳನ್ನೂ ಜೇಮ್ಸ್ ಚಿತ್ರಕ್ಕಾಗಿ ಮತ್ತೆ ತೆರೆದಿರುವುದು ವಿಶೇಷ. ಇದನ್ನೂ ಓದಿ: ಕಂಗನಾಳನ್ನು ಹೀರೋಯಿನ್ ಮಾಡಿದ್ದು ಆ ಜ್ಯೋತಿಷಿ: ಅಸಲಿ ಸತ್ಯ ಬಾಯ್ಬಿಟ್ಟ ನಟ ಪ್ರಭಾಸ್

    ಸಿನಿಮಾ ಬಿಡುಗಡೆಗೂ ನಾಲ್ಕು ದಿನಗಳ ಮುನ್ನ ಸಿಕ್ಕಿರುವ ರೆಸ್ಪಾನ್ಸ್ ನೋಡಿದರೆ, ಒಂದು ವಾರದೊಳಗೆ ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರುವುದರಲ್ಲಿ ಅಚ್ಚರಿ ಪಡಬೇಕಿಲ್ಲ. ಅಷ್ಟರ ಮಟ್ಟಿಗೆ ಅಭಿಮಾನಿಗಳು ಜೇಮ್ಸ್ ಸಿನಿಮಾವನ್ನು ಅಪ್ಪಿಕೊಂಡಿದ್ದಾಗಿದೆ.