Tag: Chetan Ahimsa

  • ಕಾನೂನು ವಿವಿಗೆ ಅಹಿಂಸಾ ಚೇತನ್ ಅತಿಥಿ : ಗೋ ಬ್ಯಾಕ್ ಎಚ್ಚರಿಕೆ ಕೊಟ್ಟ ಎಬಿವಿಪಿ

    ಕಾನೂನು ವಿವಿಗೆ ಅಹಿಂಸಾ ಚೇತನ್ ಅತಿಥಿ : ಗೋ ಬ್ಯಾಕ್ ಎಚ್ಚರಿಕೆ ಕೊಟ್ಟ ಎಬಿವಿಪಿ

    ಹುಬ್ಬಳ್ಳಿಯ (Hubli) ಕಾನೂನು ವಿಶ್ವವಿದ್ಯಾಲಯವು ಜೂನ್ 17 ರಂದು ಯುವಜನೋತ್ಸವವನ್ನು ಆಯೋಜನೆ ಮಾಡಿದೆ. ಈ ಕಾರ್ಯಕ್ರಮಕ್ಕೆ ನಟ, ಹೋರಾಟಗಾರ ಅಹಿಂಸಾ ಚೇತನ್ (Chetan Ahimsa) ಅವರನ್ನು ಅತಿಥಿಯನ್ನಾಗಿ ಆಹ್ವಾನಿಸಿದೆ. ಕರ್ನಾಟಕ ರಾಜ್ಯ ಕಾನೂನು (Law) ವಿಶ್ವವಿದ್ಯಾಲಯದ ಕುಲಪತಿ ಸಿ. ಬಸವರಾಜ ಅವರು ಇದರ ಅಧ್ಯಕ್ಷತೆಯನ್ನು ವಹಿಸಿದ್ದರೆ, ಚೇತನ್ ಮುಖ್ಯ ಅತಿಥಿ. ಇದನ್ನು ಪ್ರಶ್ನಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ABVP) ‘ಗೋ ಬ್ಯಾಕ್ ಚೇತನ್’ ಚಳವಳಿ (Protest) ಆರಂಭಿಸುವುದಾಗಿ ಎಚ್ಚರಿಸಿದ್ದಾರೆ.

    ಕಾನೂನು ಗೌರವ ಕೊಡದೇ ಇರುವಂತಹ ವ್ಯಕ್ತಿಯನ್ನು ಕಾನೂನು ವಿಶ್ವ ವಿದ್ಯಾಲಯಕ್ಕೆ (University) ಅತಿಥಿಯಾಗಿ ಕರೆಸುವುದು ಸೂಕ್ತವಲ್ಲ. ಕೂಡಲೇ ಅವರನ್ನು ಅತಿಥಿ ಯಾದಿಯಿಂದ ಕೈಬಿಡಬೇಕು. ಬಿಡದೇ ಇದ್ದರೆ ಹೋರಾಟ ಮಾಡುತ್ತೇವೆ ಎಂದು ಕುಲಪತಿಗೆ ಎಬಿವಿಪಿ ಮನವಿ ಸಲ್ಲಿಸಿದೆ. ಒಂದು ವೇಳೆ ಚೇತನ್ ಬಂದರೆ ‘ಗೋ ಬ್ಯಾಕ್’ ಚಳವಳಿಯನ್ನು ಮಾಡುತ್ತೇವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ:ಕನಕದಾಸನಾಗಿ ಕಂಗೊಳಿಸಲಿದ್ದಾರೆ ರಿಯಲ್‌ ಸ್ಟಾರ್‌ ಉಪೇಂದ್ರ

    ಈ ಕುರಿತಂತೆ ನಟ ಚೇತನ್ ತಮ್ಮ ಪ್ರತಿಕ್ರಿಯೆಯನ್ನು ಫೇಸ್ ಬುಕ್ ನಲ್ಲಿ ಬರೆದದ್ದು, ಸಮಾನತವಾದಿಗಳಾದ ನಮ್ಮನ್ನು ವಿಚಾರಗಳ ಯುದ್ಧ ಭೂಮಿಯಲ್ಲಿ  ಸಂಘ ಪರಿವಾರದವರಿಗೆ ಸೋಲಿಸಲು ಎಂದಿಗೂ ಸಾಧ್ಯವಿಲ್ಲದ ಕಾರಣ, ಅವರು ನಮ್ಮ ಧ್ವನಿಯನ್ನು ಮೌನಗೊಳಿಸಲು ಪ್ರಯತ್ನಿಸುತ್ತಾರೆ’ ಎಂದು ಬರೆದುಕೊಂಡಿದ್ದಾರೆ.

    ಎಬಿವಿಪಿ ಮನವಿಯನ್ನು ವಿಶ್ವವಿದ್ಯಾಲಯ ಸ್ವೀಕರಿಸಿದ್ದು, ಚೇತನ್ ಅವರನ್ನು ಕಾರ್ಯಕ್ರಮದಿಂದ ಕೈ ಬಿಡುತ್ತಾರಾ ಅಥವಾ ಚೇತನ್ ಅವರಿಗೆ ಮಣೆ ಹಾಕುತ್ತಾರಾ ಎಂದು ಕಾದ ನೋಡಬೇಕು. ಆದರೆ, ಈವರೆಗೂ ಈ ಕುರಿತಂತೆ ಕುಲಪತಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • ಗಡಿಪಾರು ಭೀತಿಯಿಂದ ಮತ್ತೆ ನಟ ಚೇತನ್ ಗೆ ರಿಲೀಫ್

    ಗಡಿಪಾರು ಭೀತಿಯಿಂದ ಮತ್ತೆ ನಟ ಚೇತನ್ ಗೆ ರಿಲೀಫ್

    ಸಿಐ ಮಾನ್ಯತೆ ರದ್ದು ಹಿನ್ನೆಲೆಯಲ್ಲಿ ಗಡಿಪಾರು ಭೀತಿಯಲ್ಲಿದ್ದ ನಟ ಚೇತನ್‍ಗೆ (Chetan) ಹೈಕೋರ್ಟ್‍ನಿಂದ (High Court) ಈ ಹಿಂದೆ ಷರತ್ತುಬದ್ಧ ರಿಲೀಫ್ (Relief) ದೊರೆತಿತ್ತು. ಸಾಗರೋತ್ತರ ಭಾರತೀಯ ಪ್ರಜೆ ಕಾರ್ಡ್ ರದ್ದುಗೊಳಿಸಿದ್ದ ಆದೇಶದ ತಡೆಯಾಜ್ಞೆಯನ್ನು ಹೈಕೋರ್ಟ್ ಮತ್ತೆ ಶುಕ್ರವಾರ ವಿಸ್ತರಿಸಿದೆ. ಹಾಗಾಗಿ ಗಡಿಪಾರು ಭೀತಿಯಲ್ಲಿದ್ದ ಚೇತನ್ ಗೆ ಹೈಕೋರ್ಟ್ ನಿಂದ ಮತ್ತೆ ರಿಲೀಫ್ ಸಿಕ್ಕಂತಾಗಿದೆ.

    ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ಚೇತನ್ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬಂದಿತ್ತು. ವಾದ ಆಲಿಸಿದ ನ್ಯಾಯಪೀಠ ಕೇಂದ್ರ ಸರಕಾರ ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ವಿಸ್ತರಿಸಿದ್ದಲ್ಲದೇ, ಚೇತನ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರಕಾರಕ್ಕೆ ಸೂಚಿಸಿದೆ.  ಇದನ್ನೂ ಓದಿ:‘ಘೋಸ್ಟ್’ ಚಿತ್ರದ ಸೆಟ್ ಗೆ ಭೇಟಿ ನೀಡಿದ ಸಚಿವ ಮಧು ಬಂಗಾರಪ್ಪ

    ಚೇತನ್‍ಗೆ 2018ರಲ್ಲಿ ಓವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್ ನೀಡಲಾಗಿತ್ತು. ಆದರೆ ಚೇತನ್ ಮೇಲೆ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನ ಹಾಗೂ ಭಾರತ ವಿರೋಧಿ ಚಟುವಟಿಕೆ ಆರೋಪಗಳಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ (Central Government) ನೋಟಿಸ್ ನೀಡಿ ಉತ್ತರ ಪಡೆದಿತ್ತು. ಚೇತನ್ ನೀಡಿದ್ದ ಉತ್ತರ ಸಮಾಧಾನಕರವಾಗಿಲ್ಲದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಒಸಿಐ ಕಾರ್ಡ್ ರದ್ದುಪಡಿಸಿತ್ತು.

     

    ಆದರೆ ಚೇತನ್ ಪರ ವಕೀಲರು, ಚೇತನ್ ವಾದ ಆಲಿಸದೇ ಕ್ರಮ ಕೈಗೊಂಡಿರುವುದು ಸರಿಯಲ್ಲವೆಂದು ವಾದಿಸಿದ್ದರು. ಈ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಚೇತನ್ ನ್ಯಾಯಾಂಗದ ವಿರುದ್ಧವೂ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ತಡೆ ನೀಡದಂತೆ ಕೇಂದ್ರ, ರಾಜ್ಯ ಸರ್ಕಾರದ ವಕೀಲರಾದ ಎಜಿ ಅರುಣ್ ಶ್ಯಾಮ್, ಎಎಸ್ ಜಿ ಶಾಂತಿಭೂಷಣ್ ವಾದಿಸಿದ್ದರು.

  • ಶಾಸಕಿ ನಯನಾ ಖಾಸಗಿ ಫೋಟೋಗಳ ವಿಚಾರ : ನಟ ಚೇತನ್ ಬೇಸರ

    ಶಾಸಕಿ ನಯನಾ ಖಾಸಗಿ ಫೋಟೋಗಳ ವಿಚಾರ : ನಟ ಚೇತನ್ ಬೇಸರ

    ಚಿಕ್ಕಮಗಳೂರು ಮೀಸಲು ಕ್ಷೇತ್ರದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ (Nayana Motamma) ಅವರ ಖಾಸಗಿ ಫೋಟೋಗಳನ್ನು (Private Photo) ವಿರೋಧಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದರು. ಸ್ವತಃ ನಯನಾ ಅವರೇ ತಮ್ಮ ಎದುರಾಳಿಗಳಿಗೆ ತಿರುಗೇಟು ನೀಡುವ ಮೂಲಕ ಆ ಫೋಟೋಗಳನ್ನು ತಮ್ಮದೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಪ್ರತ್ಯುತ್ತರ ನೀಡಿದ್ದರು. ಈ ವಿಚಾರವಾಗಿ ನಟ ಚೇತನ್ ಅಹಿಂಸಾ (Chetan Ahimsa) ಪ್ರತಿಕ್ರಿಯಿಸಿದ್ದಾರೆ. ನಯನಾ ಬೆಂಬಲಕ್ಕೆ ಚೇತನ್ ನಿಂತಿದ್ದಾರೆ.

    ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಚೇತನ್, ‘ಹೊಸದಾಗಿ ಚುನಾಯಿತ ಶಾಸಕಿ ನಯನಾ ಮೋಟಮ್ಮ ಅವರ ಖಾಸಗಿ ಚಿತ್ರಗಳನ್ನು ಪ್ರಕಟಿಸುವ ಮೂಲಕ ರಾಜಕೀಯ ಪ್ರತಿಸ್ಪರ್ಧಿಗಳು ಅವರ ಮರ್ಯಾದೆ ಹತ್ಯೆಗೆ ಯತ್ನಿಸಿದ್ದಾರೆ. ಭಾರತದಲ್ಲಿನ ಎಲ್ಲಾ ಮಹಿಳೆಯರು ವಿವಿಧ ಹಂತಗಳಲ್ಲಿ ಪುರುಷ ಪ್ರಧಾನ ವ್ಯವಸ್ಥೆಗೆ ಬಲಿಪಶುಗಳಾಗಿದ್ದಾರೆ/ ಬಲಿಪಶುಗಳಾಗುತ್ತಿದ್ದಾರೆ. ಅಧಿಕಾರದ ಉನ್ನತ ಸ್ಥಾನಗಳಿಗೆ ಏರುವ ಮಹಿಳೆಯರು ಅದನ್ನು ಸಾರ್ವಜನಿಕ ರೀತಿಯಲ್ಲಿ ಎದುರಿಸುತ್ತಾರೆ. ದೃಢವಾಗಿ ನಿಂತಿರುವ ಶಾಸಕರಿಗೆ ಅಭಿನಂದನೆಗಳು. ಪೊಲೀಸರು ತಪ್ಪು ಮಾಡಿದವರ ವಿರುದ್ಧ ಕ್ರಮ ತಗೆದುಕೊಳ್ಳಬೇಕು’ ಎಂದು ಬರೆದಿದ್ದಾರೆ. ಇದನ್ನೂ ಓದಿ:ನಂದಮೂರಿ ಬಾಲಯ್ಯ ಸಿನಿಮಾದಲ್ಲಿ ಹ್ಯಾಟ್ರಿಕ್‌ ಹೀರೋ ಶಿವಣ್ಣ

    ಸ್ವತಃ ನಯನಾ ಅವರ ತಮ್ಮ ಫೋಟೋಗಳನ್ನು ಹೊಂದಿರುವ ವಿಡಿಯೋ ಶೇರ್ ಮಾಡಿ, ‘ಸೋಲಿನ ಹತಾಶೆ ನಿಮ್ಮನ್ನು ಇನ್ನಷ್ಟು ಕಾಡದಿರಲಿ. ಹೌದು, ರಾಜಕೀಯವಾಗಿ ನಾನು, ನನ್ನತನ, ನನ್ನ ವೈಯಕ್ತಿಕ ಜೀವನ ಇವೆಲ್ಲದರ ವ್ಯತ್ಯಾಸ ತಿಳಿಯದ ಅವಿವೇಕಿಗಳಿಗೆ ಉತ್ತರವಿದು’ ಎಂದು ವಿಡಿಯೋ ಜೊತೆ ಶರಾ ಬರೆದಿದ್ದಾರೆ.

    ಮಾಜಿ ಮಂತ್ರಿ ಮೋಟಮ್ಮ ಅವರ ಪುತ್ರಿಯಾಗಿ ನಯನಾ, ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಮೀಸಲು ಕ್ಷೇತ್ರದಿಂದ ಗೆದ್ದಿದ್ದಾರೆ. ಅನೇಕರ ವಿರೋಧಗಳ ನಡುವೆಯೂ ನಯನಾ ಗೆಲುವಿನ ಪತಾಕೆ ಹಾರಿಸಿದ್ದಾರೆ. ಇದನ್ನು ಸಹಿಸದವರು ಅವರು ಖಾಸಗಿ ಫೋಟೋಗಳನ್ನು ಹರಿಬಿಟ್ಟು ಚರ್ಚೆಗೆ ಕಾರಣವಾಗಿದ್ದಾರೆ.

  • ಜೈಲಿನಲ್ಲಿದ್ದಾಗ ಪರಿಚಯವಾದ ಗೆಳೆಯ ಇನ್ನಿಲ್ಲ : ಕಂಬನಿ ಮಿಡಿದ ನಟ ಚೇತನ್

    ಜೈಲಿನಲ್ಲಿದ್ದಾಗ ಪರಿಚಯವಾದ ಗೆಳೆಯ ಇನ್ನಿಲ್ಲ : ಕಂಬನಿ ಮಿಡಿದ ನಟ ಚೇತನ್

    ಸೋಷಿಯಲ್ ಮೀಡಿಯಾದಲ್ಲಿ ಹಿಂದುತ್ವದ ಬಗ್ಗೆ ಪೋಸ್ಟ್ ಮಾಡಿ ಜೈಲು ಪಾಲಾಗಿದ್ದ ಚೇತನ್ (Chetan Ahimsa), ಇಂದು ಜೈಲಿನ (Jail)  ದಿನಗಳನ್ನು ನೆನಪು ಹಾಕಿದ್ದಾರೆ. ಜೊತೆಗೆ ಜೈಲಿನಲ್ಲಿ ಪರಿಚಯವಾಗಿದ್ದ ಗೆಳೆಯನನ್ನು ಪರಿಚಯಿಸಿ, ಆ ಗೆಳೆಯನ (friend) ದುಃಖದ ವಾರ್ತೆಯನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಚೇತನ್ ತಮ್ಮ ಮಾನವೀಯ ಮತ್ತೊಂದು ಗುಣವನ್ನು ಜಗತ್ತಿಗೆ ತೋರ್ಪಡಿಸಿದ್ದಾರೆ.

    ನಟ ಚೇತನ್ ಜೈಲಿನಲ್ಲಿದ್ದಾಗ ಪರಿಚಯವಾದವರು ಶಾಂತಪ್ಪ (Shantappa) ಎನ್ನುವವರು. ಶಾಂತಪ್ಪ ಹಾಡುಗಾರ ಕೂಡ. ಅದರಲ್ಲೂ ಒಳಿತು ಮಾಡು ಮನುಸ ಗೀತೆಯನ್ನು ಸೊಗಸಾಗಿ ಹಾಡುತ್ತಿದ್ದರಂತೆ. ಚೇತನ್  ಆ ಹಾಡುಗಳನ್ನು ಕೇಳುತ್ತಾ ದಿನಗಳನ್ನು ಕಳೆಯುತ್ತಿದ್ದರಂತೆ. ಇಂದು ಶಾಂತಪ್ಪ ಇಲ್ಲವಾಗಿದ್ದಾರೆ (Death)ಎನ್ನುವ ದುಃಖವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ವಿಶ್ ಮಾಡಲಿಲ್ಲ ರಶ್ಮಿಕಾ

    Actor chetan (1)

    ಶಾಂತಪ್ಪನ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಚೇತನ್, ‘ಇಂದು ದುಃಖದ ದಿನ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ವಾರದಲ್ಲಿ ನನ್ನ ಆತ್ಮೀಯ ಗೆಳೆಯನಾಗಿದ್ದ ಶಾಂತಪ್ಪ (35) ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ವರ್ಷದಿಂದ ಅವರ ಕುಟುಂಬದ ಸದಸ್ಯ ಆನಂದ ಮತ್ತು ನಾನು ವೈದ್ಯಕೀಯವಾಗಿ ಮತ್ತು ದಿನನಿತ್ಯದ ಜೀವನಾಂಶಕ್ಕಾಗಿ ಅವರಿಗೆ ಬೆಂಬಲ ನೀಡುತ್ತಿದ್ದೇವು. ಶಾಂತಪ್ಪ ನನ್ನ ಹೃದಯದಲ್ಲಿ ಉಳಿಯುತ್ತಾರೆ’ ಎಂದು ಬರೆದುಕೊಂಡಿದ್ದಾರೆ.

  • ವೀಸಾ ರದ್ದು: ಬೆಂಬಲಕ್ಕೆ ನಿಂತ ಕಿಶೋರ್ ಗೆ ಥ್ಯಾಂಕ್ಸ್ ಹೇಳಿದ ಚೇತನ್

    ವೀಸಾ ರದ್ದು: ಬೆಂಬಲಕ್ಕೆ ನಿಂತ ಕಿಶೋರ್ ಗೆ ಥ್ಯಾಂಕ್ಸ್ ಹೇಳಿದ ಚೇತನ್

    ಟ ಚೇತನ್ (Chetan Ahimsa)  ವೀಸಾ ರದ್ದು (Visa Cancellation) ಮಾಡಿರುವ ನಡೆಯನ್ನು ನಟ ಕಿಶೋರ್ (Kishore) ವಿಭಿನ್ನವಾಗಿ ಪ್ರಶ್ನಿಸಿದ್ದರು. ಇದು ಅತಿರೇಕದ ನಡೆ ಎಂದು ಅದನ್ನು ಬಣ್ಣಿಸಿದ್ದರು. ವೀಸಾ ರದ್ದು ಕುರಿತಂತೆ ಚೇತನ್ ಅವರಿಗೆ ಈವರೆಗೂ ಯಾರು ಬೆಂಬಲ ಸೂಚಿಸಿರಲಿಲ್ಲ. ಮೊದಲ ಬಾರಿಗೆ ಕಿಶೋರ್ ಈ ನಡೆಯನ್ನು ಪ್ರಶ್ನಿಸಿದ್ದರು. ಹೀಗಾಗಿ ಚೇತನ್ ಧನ್ಯವಾದಗಳನ್ನು ತಿಳಿಸಿದ್ದಾರೆ. ತಮ್ಮ ಬೆಂಬಲಕ್ಕೆ ನಿಂತಿದ್ದನ್ನು ಸ್ಮರಿಸಿದ್ದಾರೆ.

    ಇನ್ಸ್ಟಾದಲ್ಲಿ ಈ ಕುರಿತು ಸುದೀರ್ಘವಾಗಿ ಬರೆದಿರುವ ಕಿಶೋರ್, ‘ಹಿಂದುತ್ವ (Hindutva) ಅನ್ನುವ ಪದ ವರ್ತಮಾನದ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದೂ ಧರ್ಮ ಅಲ್ಲ. ನಿಜವಾದ ಹಿಂದೂ ಧರ್ಮ, ಸಕಲರನ್ನೂ ಒಳಗೊಂಡ ವಸುಧೆಯೇ ಒಂದು ಕುಟುಂಬವೆಂದು ನೋಡುವ ವಿಶಾಲ ಮನೋಸ್ಥಿತಿ’ ಎಂದಿದ್ದಾರೆ. ಇದನ್ನೂ ಓದಿ: ಸಲಿಂಗ ವಿವಾಹ ವಿಚಾರದಲ್ಲಿ ಸುಪ್ರೀಂ ಮಧ್ಯಪ್ರವೇಶ ಮಾಡಬಾರದು – ಕೇಂದ್ರದ ಪರ ವಾದ

    ಮುಂದುವರೆದು, ‘ಹಿಂದುತ್ವ ಎನ್ನುವ ಪದ ಬಳಕೆಯಾಗುತ್ತಿರುವುದು ಒಂದು ಪಕ್ಷದ, ಒಂದು ಸಂಘದ, ಅಧಿಕಾರಕ್ಕಾಗಿ ಒಡೆದಾಳುವ, ಪರದ್ವೇಷದ, ಮೂಲಭೂತವಾದಿ ವೈದಿಕ ಸಂಪ್ರದಾಯದ ಸಂಕುಚಿತ ಪರಿಕಲ್ಪನೆಯಾಗಿಯಷ್ಟೆ.ಹಾಗಾಗಿ ಈ ಜೀವ ವಿರೋಧಿ ರಾಜಕೀಯದ ಟೀಕೆಯಿಂದ ಹಿಂದೂಗಳಿಗೆಲ್ಲರಿಗೂ ಅಪಮಾನವಾಯಿತೆನ್ನುವುದು ಎಷ್ಟು ಉಚಿತ’ ಎಂದು ಪ್ರಶ್ನೆ ಮಾಡಿದ್ದಾರೆ.

    ‘ಹಾಗೆ ಅವಮಾನ ಪಡಲೇಬೇಕೆಂದರೆ ವೈದಿಕ ಪರಂಪರೆ ಇಂದಿಗೂ ಪ್ರತಿಪಾದಿಸುತ್ತಿರುವ ನಮ್ಮಲ್ಲೇ ಇರುವ ಜಾತಿ ಪದ್ಧತಿ, ಅಸ್ಪೃಶ್ಯತೆ, ಲಿಂಗ ಬೇಧ ಇವುಗಳಿಂದಲ್ಲವೇ? ಆ ನಿಟ್ಟಿನಲ್ಲಿ ನಮ್ಮನ್ನು ನಾವು ತಿದ್ದಿಕೊಂಡು ಹಿಂದೂ ಧರ್ಮವನ್ನು ಎಲ್ಲರಿಗೂ ಮಾದರಿಯಾಗಿಸಬೇಕಲ್ಲವೇ? ನಮ್ಮ ತಪ್ಪುಗಳನ್ನು ಎತ್ತಿ ತೋರಿಸುವ ನಮ್ಮದೇ ಜನರನ್ನು ನಿಂದಿಸುವ, ಆರೋಪಿಸುವ, ಜೈಲಿಗೆ ಹಾಕುವ ಅಥವಾ ಗಡೀಪಾರು ಮಾಡುವ ಅತಿರೇಕಕ್ಕೆ ಹೋಗುವ ಬದಲು’ ಎಂದು ಬರೆದಿದ್ದಾರೆ ಕಿಶೋರ್.

  • ಚೇತನ್ ವೀಸಾ ರದ್ದು: ಸರ್ಕಾರದ ಅತಿರೇಕದ ನಡೆ ಎಂದ ನಟ ಕಿಶೋರ್

    ಚೇತನ್ ವೀಸಾ ರದ್ದು: ಸರ್ಕಾರದ ಅತಿರೇಕದ ನಡೆ ಎಂದ ನಟ ಕಿಶೋರ್

    ಸಾಮಾಜಿಕ ಹೋರಾಟಗಾರ, ನಟ ಚೇತನ್ (Chetan Ahimsa) ಅವರ ವೀಸಾ ರದ್ದು (visa cancellation) ಮಾಡಿರುವ ಸರಕಾರದ ನಡೆಯನ್ನು ವಿಭಿನ್ನವಾಗಿ ಪ್ರಶ್ನಿಸಿದ್ದಾರೆ ನಟ ಕಿಶೋರ್‌. ಇದುಸರಕಾರದ ಅತಿರೇಕದ ನಡೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಿಶೋರ್‌ (Kishor)  ಬರೆದುಕೊಂಡಿದ್ದಾರೆ. ಅಲ್ಲದೇ, ಹಿಂದುತ್ವವವನ್ನು ಗುತ್ತಿಗೆ ಪಡೆದವರ ವಿರುದ್ಧವೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇನ್ಸ್ಟಾದಲ್ಲಿ ಈ ಕುರಿತು ಸುದೀರ್ಘವಾಗಿ ಬರೆದಿರುವ ಕಿಶೋರ್, ‘ಹಿಂದುತ್ವ (Hindutva) ಅನ್ನುವ ಪದ ವರ್ತಮಾನದ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದೂ ಧರ್ಮ ಅಲ್ಲ. ನಿಜವಾದ ಹಿಂದೂ ಧರ್ಮ, ಸಕಲರನ್ನೂ ಒಳಗೊಂಡ ವಸುಧೆಯೇ ಒಂದು ಕುಟುಂಬವೆಂದು ನೋಡುವ ವಿಶಾಲ ಮನೋಸ್ಥಿತಿ’ ಎಂದಿದ್ದಾರೆ. ಇದನ್ನೂ ಓದಿ:ನಟಿ ಸಮಂತಾ ಭಗವದ್ಗೀತೆ ಪಾಠ ಮಾಡಿದ್ದು ಯಾರಿಗೆ?

    ಮುಂದುವರೆದು, “ಹಿಂದುತ್ವ ಎನ್ನುವ ಪದ ಬಳಕೆಯಾಗುತ್ತಿರುವುದು ಒಂದು ಪಕ್ಷದ, ಒಂದು ಸಂಘದ, ಅಧಿಕಾರಕ್ಕಾಗಿ ಒಡೆದಾಳುವ, ಪರದ್ವೇಷದ, ಮೂಲಭೂತವಾದಿ ವೈದಿಕ ಸಂಪ್ರದಾಯದ ಸಂಕುಚಿತ ಪರಿಕಲ್ಪನೆಯಾಗಿದೆಯಷ್ಟೇ. ಹಾಗಾಗಿ ಈ ಜೀವ ವಿರೋಧಿ ರಾಜಕೀಯದ ಟೀಕೆಯಿಂದ ಹಿಂದೂಗಳಿಗೆಲ್ಲರಿಗೂ ಅಪಮಾನವಾಯಿತೆನ್ನುವುದು ಎಷ್ಟು ಉಚಿತ” ಎಂದು ಪ್ರಶ್ನೆ ಮಾಡಿದ್ದಾರೆ.

    “ಹಾಗೆ ಅವಮಾನ ಪಡಲೇಬೇಕೆಂದರೆ ವೈದಿಕ ಪರಂಪರೆ ಇಂದಿಗೂ ಪ್ರತಿಪಾದಿಸುತ್ತಿರುವ ನಮ್ಮಲ್ಲೇ ಇರುವ ಜಾತಿ ಪದ್ಧತಿ, ಅಸ್ಪೃಶ್ಯತೆ, ಲಿಂಗ ಬೇಧ ಇವುಗಳಿಂದಲ್ಲವೇ? ಆ ನಿಟ್ಟಿನಲ್ಲಿ ನಮ್ಮನ್ನು ನಾವು ತಿದ್ದಿಕೊಂಡು ಹಿಂದೂ ಧರ್ಮವನ್ನು ಎಲ್ಲರಿಗೂ ಮಾದರಿಯಾಗಿಸಬೇಕಲ್ಲವೇ? ನಮ್ಮ ತಪ್ಪುಗಳನ್ನು ಎತ್ತಿ ತೋರಿಸುವ ನಮ್ಮದೇ ಜನರನ್ನು ನಿಂದಿಸುವ, ಆರೋಪಿಸುವ, ಜೈಲಿಗೆ ಹಾಕುವ ಅಥವಾ ಗಡೀಪಾರು ಮಾಡುವ ಅತಿರೇಕಕ್ಕೆ ಹೋಗುವ ಬದಲು” ಎಂದು ಬರೆದಿದ್ದಾರೆ ಕಿಶೋರ್.

  • ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಿ : ನಟ ಚೇತನ್

    ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಿ : ನಟ ಚೇತನ್

    ಲವು ವರ್ಷಗಳಿಂದ ಗಾಂಜಾ (Ganja) ಕುರಿತಾಗಿ ಹತ್ತಾರು ಹೇಳಿಕೆಗಳು ಬರುತ್ತಿವೆ. ಈ ಹಿಂದೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟ ರಾಕೇಶ್ ಅಡಿಗ (Rakesh Adiga) ಕೂಡ ಗಾಂಜಾವನ್ನು ಕಾನೂನುಬದ್ಧಗೊಳಿಸಿ ಎಂದು ಹೇಳಿಕೆ ನೀಡಿದ್ದರು. ಅದು ಭಾರೀ ಕೋಲಾಹಲವನ್ನೇ ಎಬ್ಬಿಸಿತ್ತು. ಡ್ರಗ್ಸ್ ವಿಚಾರವಾಗಿ ಸ್ಯಾಂಡಲ್ ವುಡ್ ಸುದ್ದಿಯಲ್ಲಿದ್ದಾಗ ಗಾಂಜಾ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಮತ್ತೆ ಚೇತನ್ (Chetan Ahimsa) ಆ ಕುರಿತು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

    ಹಿಮಾಚಲ (Himachal) ಮುಖ್ಯಮಂತ್ರಿ ಸುಖವಿಂದರ್  ಸುಖು ಗಾಂಜಾ ವಿಚಾರವಾಗಿ ಮಾತನಾಡಿದ್ದನ್ನು ಅನುಮೋದಿಸಿರುವ ಚೇತನ್, ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸುವತ್ತ ಗಮನಹರಿಸಬೇಕು ಎಂದಿದ್ದಾರೆ. ಸುಖವಿಂದರ್ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಲು ಯೋಜಿಸಿರುವುದನ್ನು ಚೇತನ್ ಬೆಂಬಲಿಸಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್‌ಗೆ ಜೋಡಿಯಾದ ಆಲಿಯಾ ಭಟ್

    ಈ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಚೇತನ್, ‘ಗಾಂಜಾ ಕೃಷಿಯು ರಾಜ್ಯದ ಆದಾಯವನ್ನು ಹೇಗೆ ಹೆಚ್ಚಿಸುತ್ತದೆ ಮತ್ತು ರೋಗಿಗಳಿಗೆ ಔಷಧೀಯ ಪ್ರಯೋಜನಗಳನ್ನು ಹೇಗೆ ಒದಗಿಸುತ್ತದೆ ಎಂಬುದನ್ನು 5 ಸದಸ್ಯ ಸಮಿತಿಯೊಂದು ಅಧ್ಯಯನ ಮಾಡುತ್ತದೆ. ಉತ್ತರಾಖಂಡ, ಗುಜರಾತ್, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಕರ್ನಾಟಕವೂ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸುವತ್ತ ಗಮನಹರಿಸಬೇಕು’ ಎಂದಿದ್ದಾರೆ.

    ಹಿಮಾಚಲದ ಮುಖ್ಯಮಂತ್ರಿಯ ನಡೆಯು ಒಳ್ಳೆಯದು ಎಂದು ಚೇತನ್ ಪ್ರಶಂಸೆ ಮಾಡಿದ್ದಾರೆ. ಕರ್ನಾಟಕವೂ ಇದರತ್ತ ಗಮನ ಹರಿಸಬೇಕು ಎಂದಿದ್ದಾರೆ. ಇದು ರಾಜ್ಯದ ಆದಾಯವನ್ನು ಹೇಗೆ ಹೆಚ್ಚಿಸುತ್ತದೆ ಎನ್ನುವ ಕುರಿತು ಅಧ್ಯಯನವಾಗಲಿ ಎಂದು ಅವರು ಬರೆದುಕೊಂಡಿದ್ದಾರೆ.

  • ನಮಗೆ ರಾಮಮಂದಿರದ ಅಗತ್ಯವಿಲ್ಲ, ಮೂಲ ಸೌಕರ್ಯ ನೀಡಿ – ನಟ ಚೇತನ್

    ನಮಗೆ ರಾಮಮಂದಿರದ ಅಗತ್ಯವಿಲ್ಲ, ಮೂಲ ಸೌಕರ್ಯ ನೀಡಿ – ನಟ ಚೇತನ್

    ರಾಮನಗರ: ನಮಗೆ ರಾಮಮಂದಿರದ (Ram Mandir) ಅಗತ್ಯವಿಲ್ಲ. ದೇವಸ್ಥಾನಗಳು ನಮ್ಮ ಬದುಕನ್ನ ಕಟ್ಟಿಕೊಡುವುದಿಲ್ಲ. ಅದರ ಬದಲು ಜನರಿಗೆ ಮೂಲ ಸೌಕರ್ಯ ಒದಗಿಸಿ ಎಂದು ನಟ, ಚಿಂತಕ ಚೇತನ್ (Chetan Ahimsa) ಒತ್ತಾಯಿಸಿದ್ದಾರೆ.

    ರಾಮನಗರ (Ramanagara) ತಾಲೂಕಿನ ಕೂನಮುದ್ದಹಳ್ಳಿಯ ದಲಿತ (Dalits) ಕಾಲೋನಿಯಲ್ಲಿಂದು ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ನಟ ಚೇತನ್ ನೇತೃತ್ವದಲ್ಲಿ ಪ್ರತಿಭಟನೆ (Protest) ನಡೆಸಲಾಯಿತು. ಇದನ್ನೂ ಓದಿ: ಹೂಡಿಕೆದಾರರ ಹಿತಾಸಕ್ತಿಯೇ ನನಗೆ ಮುಖ್ಯ – 20,000 ಕೋಟಿ ಮೌಲ್ಯದ FPO ಹಿಂಪಡೆದ ಬಳಿಕ ಅದಾನಿ ಮೊದಲ ಪ್ರತಿಕ್ರಿಯೆ

    ಈ ವೇಳೆ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಚುನಾವಣೆಗಾಗಿ ಗಿಮಿಕ್ ಮಾಡ್ತಿದ್ದಾರೆ. ನಮಗೆ ರಾಮಮಂದಿರದ ಅವಶ್ಯಕತೆಯಿಲ್ಲ. ಇದನ್ನ ದಕ್ಷಿಣ ಅಯೋಧ್ಯೆ ಮಾಡಲು ಸರ್ಕಾರ (Government) ಕೂಡ ಅನುಮತಿ ನೀಡಬಾರದು. ಇದೆಲ್ಲವನ್ನು ಬಿಟ್ಟು ಮೊದಲು ಜನರಿಗೆ ಮೂಲ ಸೌಕರ್ಯ ಕಲ್ಪಿಸಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

    ಕೇಂದ್ರ ಬಜೆಟ್ (Union Budget 2023) ವಿಚಾರವಾಗಿ ಮಾತನಾಡಿ, ಇದು ಶ್ರೀಮಂತರ ಪರವಾದ ಬಜೆಟ್. ಈ ಬಜೆಟ್‌ನಿಂದ ಜನಸಾಮಾನ್ಯರಿಗೆ ಯಾವುದೆ ಅನುಕೂಲವಾಗಿಲ್ಲ. ತೆರಿಗೆ ವಿನಾಯಿತಿಯಿಂದ ಬಡವರಿಗೆ ಉಪಯೋಗವಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: 50 ಸಾವಿರ ವರ್ಷಕ್ಕೊಮ್ಮೆ ಗೋಚರಿಸುವ ವಿಸ್ಮಯ – ಬೆಂಗಳೂರಲ್ಲಿ ಗೋಚರಿಸಲಿಲ್ಲ ಹಸಿರು ಧೂಮಕೇತು

    ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ವಿಚಾರ ಕುರಿತು ಪ್ರತಿಕ್ರಿಯಿಸಿ, ನಾನು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಸಮಾನತೆ ಪರವಾದ ಹೋರಾಟವಷ್ಟೇ ನಮ್ಮ ಕೆಲಸ. ಬುದ್ಧ, ಬಸವ, ಅಂಬೇಡ್ಕರ್ ತತ್ವಕ್ಕೆ ನಮ್ಮ ಬೆಂಬಲ ಎಂದು ನುಡಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೀಸಲಾತಿ, ಬಡತನ ನಿರ್ಮೂಲನೆಗೆ ಸಿದ್ದರಾಮಯ್ಯ ಕೊಡುಗೆ ಏನೂ ಇಲ್ಲ – ಚೇತನ್

    ಮೀಸಲಾತಿ, ಬಡತನ ನಿರ್ಮೂಲನೆಗೆ ಸಿದ್ದರಾಮಯ್ಯ ಕೊಡುಗೆ ಏನೂ ಇಲ್ಲ – ಚೇತನ್

    ಕೊಪ್ಪಳ: ಮೀಸಲಾತಿಗೆ (Reservation) ಸಿದ್ದರಾಮಯ್ಯ ಕೊಡುಗೆ ಏನೂ ಇಲ್ಲ. ಸಿದ್ದರಾಮಯ್ಯ (Siddaramaiah) ಬಡತನ ನಿರ್ಮೂಲನೆ ಮಾಡಲು ಏನೂ ಮಾಡಿಲ್ಲ ಎಂದು ಹೋರಾಟಗಾರ, ನಟ ಚೇತನ್ ಅಹಿಂಸಾ (Chetan Ahimsa) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕೊಪ್ಪಳದ (Koppal) ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮೀಸಲಾತಿಗೆ ಸಿದ್ದರಾಮಯ್ಯ ಕೊಡುಗೆ ಏನೂ ಇಲ್ಲ. ಸಿದ್ದರಾಮಯ್ಯ ಬಡತನ ನಿರ್ಮೂಲನೆ ಮಾಡಲು ಏನೂ ಮಾಡಿಲ್ಲ. ಸಿದ್ದರಾಮಯ್ಯ ಆರ್ಥಿಕ ಮರು ಹಂಚಿಕೆ ಮಾಡುವ ಉದ್ದೇಶ ಇಲ್ಲ. ಆದ್ರೆ ಅವರು ಹಿಂದುತ್ವ ವಿರೋಧ ಮಾಡುವುದು ಮಾತ್ರ ಒಪ್ಪಿತ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಎಂಟ್ರಿಯಿಂದ ವಿಜಯ್- ಸಂಗೀತಾ ದಾಂಪತ್ಯದಲ್ಲಿ ಕಲಹ?

    ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಸಮಾನ ತಪ್ಪು ಮಾಡಿದ್ದಾರೆ. ಎರಡೂ ಪಕ್ಷಗಳು ಮೀಸಲಾತಿ ಸಮಾನವಾಗಿ ಹಂಚಿಕೆ ಮಾಡಿಲ್ಲ. ಸಿದ್ದರಾಮಯ್ಯ ಅವರ ಉದ್ದೇಶವೇನಿದ್ದರೂ ಬಿಜೆಪಿ (BJP) ಸೋಲಿಸೋದು ಮಾತ್ರ. ಕಾಂಗ್ರೆಸ್‌ನ (Congress) ಉದ್ದೇಶ ಅಧಿಕಾರ ಹಿಡಿಯುವುದು ಮಾತ್ರ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ನೋರಾ ಫತೇಹಿ ಜೊತೆಗಿನ ಡೇಟಿಂಗ್ ವದಂತಿ ಬೆನ್ನಲ್ಲೇ ಪಾಕಿಸ್ತಾನ ನಟಿಯ ಜೊತೆ ಆರ್ಯನ್ ಖಾನ್ ಪಾರ್ಟಿ

    ಬೆಳಗಾವಿ ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೊ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, `ಸಾವರ್ಕರ್ ಕಾಂಟ್ರವರ್ಸಿ ವ್ಯಕ್ತಿ. ಅವರ ಫೋಟೊ ಹಾಕಬಾರದು’ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ. ಸಾವರ್ಕರ್ ಕಾಂಟ್ರವರ್ಸಿ ವ್ಯಕ್ತಿ. ಆದ್ರೆ ನಮ್ಮ ಕಣ್ಣಲ್ಲಿ ಜಾತಿ ವ್ಯವಸ್ಥೆ ಮುಂದುವರೆಸಿದ ಗಾಂಧಿ ಕೂಡ ಕಾಂಟ್ರವರ್ಸಿ. ನಮ್ಮ ಪ್ರಕಾರ ಗಾಂಧಿ, ಸಾವರ್ಕರ್ ಜೊತೆಗೆ ಪೆರಿಯಾರ್ ಫೋಟೊ ಕೂಡ ಹಾಕಿ. ಇಲ್ಲವಾದ್ರೆ ಗಾಂಧಿ ಸೇರಿರುವ ಎಲ್ಲರ ಫೋಟೊ ತೆಗೆದು ಹಾಕಿ. ಆ ನಿಟ್ಟಿನಲ್ಲಿ ನೋಡುವುದಾದ್ರೆ ನನಗೆ ಆಯಾ ಕಾಲಕ್ಕೆ ಆ ಚೌಕಟ್ಟಿಕ್ಕೆ ತಕ್ಕಂತೆ ಬಸವಣ್ಣ, ಅಂಬೇಡ್ಕರ್, ಪರಿಯಾರ್ ಎಲ್ಲರೂ ನನಗೆ ಸ್ಫೂರ್ತಿ ಎಂದು ತಿಳಿಸಿದ್ದಾರೆ.

    ಕೊಪ್ಪಳ ಜಿಲ್ಲೆಯಲ್ಲಿ ಅಲೆಮಾರಿಗಳಿಗೆ ಮನೆ ಸಿಕ್ಕಿಲ್ಲ. ದೇವದಾಸಿ ಪದ್ಧತಿ ಜೀವಂತವಾಗಿದ್ದು, ದೇವದಾಸಿ ತಾಯಂದಿರಿಗೆ ನ್ಯಾಯ ಸಿಕ್ಕಿಲ್ಲ. ಅಲೆಮಾರಿ ಸಮುದಾಯಗಳು ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲ. ಅವರು ಗುಡಿಸಲು ಹಾಕಿಕೊಂಡಿರೋ ಜಾಗದಲ್ಲಿ ಬೀದಿ ದೀಪ ಕೂಡ ಇಲ್ಲ. ಡಿಜಿಟಲ್ ಇಂಡಿಯಾ, ಬುಲೆಟ್ ರೈಲು ಬಗ್ಗೆ ಮಾತನಾಡುವ ಸರ್ಕಾರ ಇವರ ಕಡೆಯೂ ನೋಡಬೇಕಿದೆ ಎಂದು ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೀಪಿಕಾ ಕೇಸರಿ ಬಿಕಿನಿ ವಿವಾದ : ಅಖಾಡಕ್ಕಿಳಿದ ನಟ ಚೇತನ್

    ದೀಪಿಕಾ ಕೇಸರಿ ಬಿಕಿನಿ ವಿವಾದ : ಅಖಾಡಕ್ಕಿಳಿದ ನಟ ಚೇತನ್

    ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾದ ಹಾಡೊಂದರಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದಾರೆ ಎನ್ನುವ ಕಾರಣಕ್ಕಾಗಿ ನಾಲ್ಕೈದು ದಿನಗಳಿಂದ ಸಾಕಷ್ಟು ಚರ್ಚೆ ಆಗುತ್ತಿದೆ. ನಟಿ ಕೇಸರಿ ಬಿಕಿನಿ ಹಾಕಿದ್ದಾರೆ ಎನ್ನುವ ಕಾರಣಕ್ಕಾಗಿ ಹಿಂದೂ ಕಾರ್ಯಕರ್ತರು ದೀಪಿಕಾ ಮೇಲೆ ಮುಗಿಬಿದ್ದಿದ್ದಾರೆ. ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಬಹಳಷ್ಟು ಈ ನಡೆಗೆ ವಿರೋಧ ವ್ಯಕ್ತ ಪಡಿಸುತ್ತಿದ್ದರೆ, ಕೆಲವರು ಸಿನಿಮಾ ಪರವಾಗಿ ಮಾತನಾಡುತ್ತಿದ್ದಾರೆ.

    ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟ ಚೇತನ್, ‘ಪಠಾಣ್ ಚಿತ್ರದ ಹಾಡು ಈಗ ಅದರ ಕೇಸರಿ ಬಿಕಿನಿ ಮತ್ತು ಹಸಿರು ಶರ್ಟ್ ಕಾರಣದಿಂದ ರಾಜಕೀಯಗೊಳ್ಳುತ್ತಿದೆ. ಬಟ್ಟೆಯ ಬಣ್ಣದ ಕಾರಣಕ್ಕೆ ವ್ಯಕ್ತಿಸುತ್ತಿರುವ ವಿರೋಧವು ಬಹಳ ಕ್ಷುಲ್ಲಕವಾಗಿದೆ. ಬುದ್ಧ ಮತ್ತು ಬಸವನವರ ಬಣ್ಣವಾದ ಕೇಸರಿಯನ್ನು  ಹಿಂದುತ್ವವು ತನ್ನದಾಗಿಸಿಕೊಳ್ಳುತ್ತಿದೆ. ಪ್ರಕೃತಿ ಮತ್ತು ರೈತರ ಸಂಕೇತವಾದ ಹಸಿರು ಬಣ್ಣವು ಇಸ್ಲಾಮೀಕರಣಗೊಳ್ಳುತ್ತಿದೆ. ಮಾಡಬೇಕೆಂದೇ ಮಾಡುತ್ತಿರುವ ವಿವಾದವಿದು’ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರೆಗ್ನೆನ್ಸಿ ಬಗ್ಗೆ ಸೀಕ್ರೆಟ್ ಮಾಡಿದ್ಯಾಕೆ ಎಂದು ಅಸಲಿ ವಿಚಾರ ಬಿಚ್ಚಿಟ್ಟ `ಕಬ್ಜ’ ಸುಂದರಿ

    ಪಠಾಣ್ ಸಿನಿಮಾದ ಬೇಷರಂ ಹಾಡಿನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದಾರೆ ಎನ್ನುವ ವಿವಾದ ತಾರಕಕ್ಕೇರಿದೆ. ಇದು ಬೇಕು ಅಂತಾನೇ ಮಾಡಿದ ಹುನ್ನಾರ ಎಂದು ಹಿಂದೂಪರ ಸಂಘಟನೆಗಳು ಆರೋಪಿಸುತ್ತಿವೆ. ಕೆಲ ಪ್ರಗತಿಪರ ಹೋರಾಟಗಾರರ ಜೊತೆ ದೀಪಿಕಾ ಪಡುಕೋಣೆ ಗುರುತಿಸಿಕೊಂಡಿದ್ದಾರೆ ಎಂದು ಜೆ.ಎನ್.ಯೂ ಹೋರಾಟದಲ್ಲಿ ದೀಪಿಕಾ ಭಾಗಿಯಾಗದ್ದ ಫೋಟೋವನ್ನು ಟ್ರೋಲ್ ಮಾಡಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಶಾಂತ್ ಸಂಬರಗಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

    ಬಿಗ್ ಬಾಸ್ ಮನೆಯಿಂದ ಈ ವಾರ ಹೊರ ಬಂದಿರುವ ಪ್ರಶಾಂತ್ ಸಂಬರಗಿ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಹಾಕಿರುವ ಕೇಸರಿ ಬಿಕಿನಿ ಬಗ್ಗೆ ತಕರಾರು ಎತ್ತಿದ್ದಾರೆ. ಬಾಲಿವುಡ್ ಚಿತ್ರೋದ್ಯಮ ಹಿಂದೂಗಳ ಭಾವನೆಗೆ ಹೀಗೆ ನೋವು ಮಾಡುತ್ತಿರುವುದು ಹೊಸದೇನೂ ಅಲ್ಲ, ಬಾಲಿವುಡ್ ನಟರ ಮದುವೆಗಳನ್ನು ನೋಡಿದರೆ ಲವ್ ಜಿಹಾದ್ ಬಗ್ಗೆ ಅನುಮಾನ ಮೂಡುತ್ತದೆ ಎಂದು ಅವರು ಮಾತನಾಡಿದ್ದಾರೆ. ದೀಪಿಕಾ ಅವರಿಗೆ ಬೇಕು ಅಂತಾನೇ ಕೇಸರಿ ಬಿಕಿನಿ ಹಾಕಿಸಲಾಗಿದೆ ಎಂದು ಅವರು ಆರೋಪ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]