Tag: chest pain

  • ಚೆನ್ನಾಗಿತ್ತು ಅಂತಾ 2 ವಡೆ ತಿಂದಿದ್ರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಾಗಿ ಎದೆನೋವು ಕಾಣಿಸಿಕೊಂಡಿತು: ಜಮೀರ್

    ಚೆನ್ನಾಗಿತ್ತು ಅಂತಾ 2 ವಡೆ ತಿಂದಿದ್ರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಾಗಿ ಎದೆನೋವು ಕಾಣಿಸಿಕೊಂಡಿತು: ಜಮೀರ್

    ಚಿತ್ರದುರ್ಗ: ತಮ್ಮ ಆರೋಗ್ಯದ ಬಗ್ಗೆ ಸ್ವತಃ ಸಚಿವ ಜಮೀರ್ ಅಹ್ಮದ್ (Zameer Ahmed Khan) ಅವರೇ ಪ್ರತಿಕ್ರಿಯಿಸಿದ್ದಾರೆ.

    ಆಸ್ಪತ್ರೆಯಿಂದ ಹೊರಬಂದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ತುಮಕೂರಿನಲ್ಲಿ ಮಾಜಿ ಶಾಸಕ ರಫೀಕ್ ಅಹ್ಮದ್ ಅವರ ಮನೆಯಲ್ಲಿ ಬೆಳಗ್ಗಿನ ತಿಂಡಿ ವ್ಯವಶ್ತೆ ಮಾಡಿದ್ದರು. ಈ ವೇಳೆ ವಡೆ ಚೆನ್ನಾಗಿತ್ತು ಅಂತಾ 2 ವಡೆ ಜಾಸ್ತಿ ತಿಂದುಬಿಟ್ಟೆ. ಪರಿಣಾಮ ಗ್ಯಾಸ್ಟ್ರಿಕ್ ಸಮಸ್ಯೆಯಾಗಿ ಎದೆನೋವು ಕಾಣಿಸಿಕೊಂಡಿತು ಎಂದು ಹೇಳಿದರು.

    ಕೂಡಲೇ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡೆ. ಬ್ಲಡ್ ಟೆಸ್ಟ್ ಸಹಿತ ಎಲ್ಲಾ ತರದ ಟೆಸ್ಟ್ ಅನ್ನೂ ವೈದ್ಯರು ಮಾಡಿದರು. ದೇವರ ದಯೆಯಿಂದ ಎಲ್ಲಾ ನಾರ್ಮಲ್ ಇದೆ. ಯಾವುದೇ ಸಮಸ್ಯೆ ಇಲ್ಲ. ಗ್ಯಾಸ್ಟ್ರಿಕ್ ಆಗಿತ್ತು. ಹೀಗಾಗಿ ಸ್ವಲ್ಪ ಎದೆನೋವು ಆಯಿತು ಎಂದು ಜಮೀರ್ ತಿಳಿಸಿದರು. ಇದನ್ನೂ ಓದಿ: LDF, UDF ರಾಜ್ಯದ ಪರಿಸ್ಥಿತಿ ಹದಗೆಡಿಸುತ್ತಿವೆ- ಕೇರಳದಲ್ಲಿ ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ

    ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಪರ ಪ್ರಚಾರಕ್ಕೆ ಸಚಿವರು ಆಗಮಿಸಿದ್ದರು. ಈ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ತಪಾಸಣೆ ನಡೆಸಲಾಯಿತು. ಸದ್ಯ ಸಚಿವರ ಆರೋಗ್ಯ ಸುಧಾರಿಸಿದೆ.

  • ತೀವ್ರ ಎದೆನೋವು: ಆಸ್ಪತ್ರೆಗೆ ದಾಖಲಾದ ಖ್ಯಾತ ನಟ ಮಿಥುನ್ ಚಕ್ರವರ್ತಿ

    ತೀವ್ರ ಎದೆನೋವು: ಆಸ್ಪತ್ರೆಗೆ ದಾಖಲಾದ ಖ್ಯಾತ ನಟ ಮಿಥುನ್ ಚಕ್ರವರ್ತಿ

    ಬಾಲಿವುಡ್ ನ ಖ್ಯಾತ ನಟ ಹಾಗೂ ಬಿಜೆಪಿ ಮುಖಂಡ ಮಿಥುನ್ ಚಕ್ರವರ್ತಿ (Mithun Chakravarty) ಅವರಿಗೆ ತೀವ್ರ ಎದೆ ನೋವು (Chest Pain) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋಲ್ಕತ್ತದ ಖಾಸಗಿ (Hospital) ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

    ಮಿಥುನ್ ಚಕ್ರವರ್ತಿ ಅವರ ಕುಟುಂಬದವರಾಗಲಿ ಅಥವಾ ಅಧಿಕೃತವಾಗಿ ಈ ಮಾಹಿತಿ ಇರದೇ ಇದ್ದರೂ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಕಾರಣದಿಂದಾಗಿ ನೆಚ್ಚಿನ ನಟನ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಆತಂಕ ಶುರುವಾಗಿದೆ.

     

    ಇಂದು ಬೆಳಗ್ಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ತಡ ಮಾಡದೇ ಆಸ್ಪತ್ರೆಗೆ ದಾಖಲಿಸಿದ್ದಾರಂತೆ. ಈಗಾಗಲೇ ಚಿಕಿತ್ಸೆ ಕೂಡ ನೀಡಲಾಗಿದೆ ಎಂದು ವರದಿಗಳು ಆಗುತ್ತಿವೆ. ಅವರ ಆರೋಗ್ಯದ ಬಗ್ಗೆ ಕುಟುಂಬಸ್ಥರೇ ತಿಳಿಸಬೇಕಿದೆ.

  • ಕರ್ತವ್ಯನಿರತ ಬಸ್ ಕಂಡಕ್ಟರ್‌ಗೆ ಎದೆನೋವು- ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಸಿಗದೆ ನರಳಾಟ

    ಕರ್ತವ್ಯನಿರತ ಬಸ್ ಕಂಡಕ್ಟರ್‌ಗೆ ಎದೆನೋವು- ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಸಿಗದೆ ನರಳಾಟ

    ಬೀದರ್: ಕರ್ತವ್ಯ ನಿರತ ಬಸ್ ಕಂಡಕ್ಟರ್ (Bus Conductor) ಗೆ ದಿಢೀರನೆ ಎದೆನೋವು (Chest Pain) ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಸಿಗದೆ ಕಂಡಕ್ಟರ್ ಆಸ್ಪತ್ರೆಯಲ್ಲಿ ನರಳಾಡಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ಆಸ್ಪತ್ರೆಯಲ್ಲಿ ನಡೆದಿದೆ.

    ಬಸವಕಲ್ಯಾಣದಿಂದ ವಿಕೆ ಸಲಗರ್ ಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಗೋಪಾಲ್ ರೆಡ್ಡಿ ಎಂಬ ಬಸ್ ಕಂಡಕ್ಟರ್ ದಿಢೀರನೆ ಎದೆ ನೋವು ಕಾಣಿಸಿಕೊಂಡ ಬಳಿಕ ಸ್ಥಳೀಯ ಆಸ್ಪತ್ರೆ ದಾಖಲು ಮಾಡಲಾಗಿದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದೆ ಬಸ್ ಕಂಡಕ್ಟರ್ ಕೆಲವತ್ತು ಚಿಕಿತ್ಸೆ ಸಿಗದೆ ಆಸ್ಪತ್ರೆಯಲ್ಲಿ ನರಳಾಡಿದ್ದಾರೆ.

    ಬಳಿಕ ಬಸವಕಲ್ಯಾಣ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದೆ ಚಿಕಿತ್ಸೆ ಸಿಗದಿದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸ್ವಾಭಿಮಾನಿ ಅನ್ನೋ ಪದ ಬಳಸಬೇಡಿ: ಸುಮಲತಾ ವಿರುದ್ಧ ರವೀಂದ್ರ ವಾಗ್ದಾಳಿ

  • ಹಂಸಲೇಖ ಅನಾರೋಗ್ಯದ ಬಗ್ಗೆ ಮಗಳು ತೇಜಸ್ವಿನಿ ಹಂಸಲೇಖ ಸ್ಪಷ್ಟನೆ

    ಹಂಸಲೇಖ ಅನಾರೋಗ್ಯದ ಬಗ್ಗೆ ಮಗಳು ತೇಜಸ್ವಿನಿ ಹಂಸಲೇಖ ಸ್ಪಷ್ಟನೆ

    ನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಅವರು ಎದೆನೋವಿನ (Chest Pain) ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ಕುರಿತು ಅನೇಕರು ಆತಂಕ ವ್ಯಕ್ತ ಪಡಿಸಿದ್ದರು. ಅಲ್ಲದೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹಂಸಲೇಖ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದರು. ಹಂಸಲೇಖ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದರು. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು.

    ಹಂಸಲೇಖ ಅವರು ಬೆಂಗಳೂರಿನ ಆಸ್ಪತ್ರೆಗೆ (Hospital) ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದ್ದರಿಂದ ಹಂಸಲೇಖ ಅವರ ಆರೋಗ್ಯದ ಕುರಿತು ತಿಳಿದುಕೊಳ್ಳಲು ಅಭಿಮಾನಿಗಳು ಕೂಡ ಆಸ್ಪತ್ರೆಯತ್ತ ಹೆಜ್ಜೆ ಹಾಕಿದ್ದರು. ಈ ಕುರಿತು ಹಂಸಲೇಖ ಅವರ ಪುತ್ರಿ ತೇಜಸ್ವಿನಿ ಪ್ರತಿಕ್ರಿಯೆ ನೀಡಿದ್ದಾರೆ. ತಂದೆಯವರ ಆರೋಗ್ಯದ ಬಗ್ಗೆ ಅಪ್ ಡೇಟ್ ನೀಡಿದ್ದಾರೆ. ಇದನ್ನೂ ಓದಿ:ಪನೋರಮಾ ಸ್ಟುಡಿಯೋ ತೆಕ್ಕೆಗೆ ಝೈದ್ ಖಾನ್ ನಟನೆಯ ‘ಬನಾರಸ್’ ಸಿನಿಮಾ

    ಇಂದು ಮುಂಜಾನೆಯಿಂದ ನಮ್ಮ ತಂದೆ, ಡಾ. ಹಂಸಲೇಖಾರವರ ಆರೋಗ್ಯದ ಬಗ್ಗೆ ಹಾಗೂ ಅವರು ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ಒಂದು ವದಂತಿ ವಾರ್ತಾ ಮಾದ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿದೆ. ಈ ವದಂತಿಯು ಸುಳ್ಳಾಗಿದ್ದು, ಇದರಿಂದ ಅಭಿಮಾನಿಗಳು ಆತಂಕ ಪಡಬಾರದು ಹಾಗೂ ಈ ವದಂತಿಯನ್ನು ಇನ್ನು ಹರಡದಂತೆ ನೋಡಿಕೊಳ್ಳಬೇಕು ಎಂದು ನಮ್ರತೆಯಿಂದ ಕೇಳಿಕೊಳ್ಳುತೇವೆ ಎಂದು ತೇಜಸ್ವಿನಿ ಹಂಸಲೇಖ (Tejaswini Hamsalekha) ಪ್ರತಿಕ್ರಿಯೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಎದೆ ನೋವಿನಿಂದಾಗಿ ಆಸ್ಪತ್ರೆಗೆ ದಾಖಲಾದ ಹಂಸಲೇಖ: ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ

    ಎದೆ ನೋವಿನಿಂದಾಗಿ ಆಸ್ಪತ್ರೆಗೆ ದಾಖಲಾದ ಹಂಸಲೇಖ: ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ

    ನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಅವರಿಗೆ ಎದೆ ನೋವು (chestpain) ಕಾಣಿಸಿಕೊಂಡಿದ್ದು, ಅವರನ್ನು ಬೆಂಗಳೂರಿನ ರಾಜಾಜಿ ನಗರ ಫಸ್ಟ್ ಬ್ಲಾಕ್ ನಲ್ಲಿರುವ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಂಸಲೇಖ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಆತಂಕ ಪಡುವ ಅವಶ್ಯಕತೆ ಇಲ್ಲ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

    ಹಂಸಲೇಖ ಆಸ್ಪತ್ರೆಗೆ ದಾಖಲಾದ ವಿಷಯ ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದು, ನೆಚ್ಚಿನ ಸಂಗೀತ ನಿರ್ದೇಶಕನ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಮಾಹಿತಿಯ ಪ್ರಕಾರ ಹಂಸಲೇಖ ಅವರು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಹಾಗಾಗಿ ಚಿಕಿತ್ಸೆಯ ನಂತರ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರಂತೆ. ಇದನ್ನೂ ಓದಿ:ಪನೋರಮಾ ಸ್ಟುಡಿಯೋ ತೆಕ್ಕೆಗೆ ಝೈದ್ ಖಾನ್ ನಟನೆಯ ‘ಬನಾರಸ್’ ಸಿನಿಮಾ

    ಬಹುಶಃ ಸಂಜೆ ಹೊತ್ತಿಗೆ ವೈದ್ಯರ ಸಲಹೆ ಮೇರೆಗೆ ಹಂಸಲೇಖ ಅವರು ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ ಎನ್ನುವ ಮಾಹಿತಿ ಇದೆ. ನಿರಂತರ ಕೆಲಸ ಮತ್ತು ವಿಶ್ರಾಂತಿ ಇಲ್ಲದೇ ಕಾರಣದಿಂದಾಗಿ ಎದೆ ನೋವು ಕಾಣಿಸಿಕೊಂಡಿದೆ ಎಂದು ಗೊತ್ತಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮುರುಘಾ ಶ್ರೀಗಳಿಗೆ ಎದೆ ನೋವು – ಆಸ್ಪತ್ರೆಗೆ ದಾಖಲು

    ಮುರುಘಾ ಶ್ರೀಗಳಿಗೆ ಎದೆ ನೋವು – ಆಸ್ಪತ್ರೆಗೆ ದಾಖಲು

    ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಪೋಕ್ಸೋ ಪ್ರಕರಣದಡಿ ಬಧನಕ್ಕೊಳಗಾಗಿರುವ ಮುರುಘಾ ಶ್ರೀಗಳಿಗೆ ಎದೆ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಮುರುಘಾ ಶ್ರೀಗಳಿಗೆ ಬಿಪಿ ಹಾಗೂ ಸ್ಯಾಚುರೇಷನ್ ವ್ಯತ್ಯಾಸವಾಗಿರುವುದಾಗಿ ವರದಿಯಾಗಿದ್ದು, ವೈದ್ಯರು ಮೇಲಿಂದ ಮೇಲೆ ಇಸಿಜಿ ಹಾಗೂ ಎಕೋ ಪರೀಕ್ಷೆ ನಡೆಸುತ್ತಿದ್ದಾರೆ. ಅವರಿಗೆ ಎದೆ ನೋವು ಕಂಡುಬಂದಿರುವ ಹಿನ್ನೆಲೆ ಜಿಲ್ಲಾಆಸ್ಪತ್ರೆಯತ್ತ ಜನರ ದಂಡು ಹರಿದಿದೆ. ತಂಡೋಪತಂಡವಾಗಿ ಹರಿದು ಬರುತ್ತಿರುವ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಆಸ್ಪತ್ರೆಯೆಡೆಗೆ ಭಕ್ತಾದಿಗಳ ದಂಡು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಮುರುಘಾ ಶರಣರ ಬಂಧನ- ಬಿಕೋ ಎನ್ನುತ್ತಿದೆ ಮಠದ ಆವರಣ

    ವೈದ್ಯರು ಈ ಮೊದಲೇ ಮುರುಘಾ ಶ್ರೀಗಳಿಗೆ ಎದೆನೋವು ಬಂದರೆ ತಕ್ಷಣ ಆಸ್ಪತ್ರೆಗೆ ದಾಖಲಿಸಲು ಸೂಚನೆ ನೀಡಿದ್ದರು. ಇಂದು ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಪೊಲೀಸರು ಮುರುಘಾ ಶ್ರೀ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಪೋಕ್ಸೊ ಪ್ರಕರಣ – ಮುರುಘಾ ಶ್ರೀಗೆ 14 ದಿನ ನ್ಯಾಯಾಂಗ ಬಂಧನ

    ಶ್ರೀಗಳಿಗೆ ಎಮ್‌ಆರ್‌ಐ ಸ್ಕ್ಯಾನ್ ಪರೀಕ್ಷೆ ಪೂರ್ಣಗೊಂಡಿದ್ದು, ಇದೀಗ ವೈದ್ಯರ ತಂಡ  ಅವರನ್ನು ವ್ಹೀಲ್ ಚೇರ್ ನಲ್ಲಿ ಸಿಟಿ ಸ್ಕ್ಯಾನ್ ಗೆ ಕರೆದೊಯದದಿರುವುದಾಗಿ ವರದಿಯಾಗಿದೆ. ಮುರುಘಾ ಶ್ರೀ ಗಳಿಗೆ ಉಸಿರಾಟದ ತೊಂದರೆಯೂ ಕಂಡುಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆಗಳಿವೆ.

    Live Tv
    [brid partner=56869869 player=32851 video=960834 autoplay=true]

  • ಆರತಕ್ಷತೆ ವೇಳೆ ಎದೆನೋವು – ಮದುವೆ ದಿನವೇ ಮೃತಪಟ್ಟ ವರ

    ಆರತಕ್ಷತೆ ವೇಳೆ ಎದೆನೋವು – ಮದುವೆ ದಿನವೇ ಮೃತಪಟ್ಟ ವರ

    ಬಳ್ಳಾರಿ: ನವದಂಪತಿಗಳು ತಮ್ಮ ಮುಂದಿನ ಭವಿಷ್ಯದ ಬಗ್ಗೆ ತಮ್ಮದೇ ಆದ ಕನಸ್ಸು ಕಟ್ಟಿಕೊಂಡಿದ್ದರು. ಆದರೆ ಇವರ ಕನಸು ಏಕೋ ಜವರಾಯನಿಗೆ ಇಷ್ಟವಾಗಲಿಲ್ಲ ಅನಿಸುತ್ತದೆ. ಮದುವೆ ಆರತಕ್ಷತೆ ವೇಳೆ ದಿಢೀರನೇ ಎದೆನೋವು ಕಾಣಿಸಿಕೊಂಡು ವರ ಸಾವನ್ನಪ್ಪಿದ್ದಾನೆ. ಮದುವೆ ದಿನವೇ ವರ ಮರಣ ಹೊಂದಿದ್ದು ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.

    ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಲಿನ ಪಾಪಿನಾಯಕನ ಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ಹೊನ್ನೂರ ಸ್ವಾಮಿ ಎಂದು ಗುರುತಿಸಲಾಗಿದೆ. ಬುಧವಾರ ಗ್ರಾಮದ ಸುಡುಗಾಡಪ್ಪನ ದೇವಸ್ಥಾನದಲ್ಲಿ ಹೊನ್ನೂರಸ್ವಾಮಿ ವಿವಾಹವಾಗಿದ್ದರು. ನಂತರ ನಡೆದ ಆರತಕ್ಷತೆ ವೇಳೆ ಹೊನ್ನೂರ ಸ್ವಾಮಿ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಈ ವೇಳೆ ಎದೆ ನೋವು ತಾಳಲಾರದೇ ವೇದಿಕೆ ತುಂಬೆಲ್ಲಾ ಹೊನ್ನೂರಸ್ವಾಮಿ ಒದ್ದಾಡುತ್ತಿರುತ್ತಾರೆ. ಇದನ್ನು ಕಂಡು ಸಂಬಂಧಿಕರು ಹಾಗೂ ಸ್ನೇಹಿತರು ಹೀಗ್ಯಾಕೆ ಆಡುತ್ತಿದ್ದೀಯಾ ಸುಮ್ನೆ ಒಂದು ಕಡೆ ಇರಲು ಆಗುವುದಿಲ್ವಾ ಎಂದು ಬೈದಿದ್ದಾರೆ. ಆಗ ಹೊನ್ನೂರಸ್ವಾಮಿ ತನ್ನ ತಮ್ಮನ ಬಳಿ, ನನಗ್ಯಾಕೋ ಪುನೀತ್ ರಾಜಕುಮಾರ್ ಅವರಿಗೆ ಆದ ಹಾಗೇ ಆಗುತ್ತಿದೆ ಎಂದಿದ್ದಾನೆ. ಇದನ್ನೂ ಓದಿ: ಸಿದ್ದರಾಮಯ್ಯ ನನ್ನನ್ನು ಕಾಂಗ್ರೆಸ್‍ಗೆ ಕರೆದಿಲ್ಲ, ಬಿಜೆಪಿಗೆ ಹೋಗಬೇಡ ಅಂದಿದ್ದಾರೆ: ಜಿಟಿಡಿ

    ಕೂಡಲೇ ಅಲ್ಲಿದ್ದವರು ಕುಡಿಯುವುದಕ್ಕೆಂದು ಸೋಡಾ ತಂದು ಕೊಟ್ಟಿದ್ದಾರೆ. ಕುಡಿದ ಸೋಡಾ ಕೂಡ ವಾಂತಿಯಾಗಿದೆ. ಅಲ್ಲಿದ್ದವರು ಸಮೀಪದಲ್ಲಿಯೇ ಇರುವ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಅದಾಗಲೇ ಹೊನ್ನೂರ ಸ್ವಾಮಿಗೆ ಲೋ ಬಿಪಿಯಾಗಿದ್ದು, ಎಚ್ಚರ ತಪ್ಪಿದ್ದಾರೆ. ಅವರನ್ನು ಪರೀಕ್ಷೆ ಮಾಡಿದ ವೈದ್ಯರು ಹೊಸಪೇಟೆಯಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ದಾರೆ. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ಹೊನ್ನೂರ ಸ್ವಾಮಿ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ಇದನ್ನೂ ಓದಿ: ಇಡಿ ವಿರುದ್ಧ ಆಕ್ರೋಶ – ಎರಡು ಕಾರುಗಳಿಗೆ ಬೆಂಕಿ ಹಚ್ಚಿದ ಕೈ ಕಾರ್ಯಕರ್ತರು

    Live Tv
    [brid partner=56869869 player=32851 video=960834 autoplay=true]

  • ಸೌರವ್‌ ಗಂಗೂಲಿಗೆ ಎದೆನೋವು- ಮತ್ತೆ ಆಸ್ಪತ್ರೆಗೆ ದಾಖಲು

    ಸೌರವ್‌ ಗಂಗೂಲಿಗೆ ಎದೆನೋವು- ಮತ್ತೆ ಆಸ್ಪತ್ರೆಗೆ ದಾಖಲು

    ಕೋಲ್ಕತ್ತಾ: ಟೀಂ ಇಂಡಿಯಾದ ಮಾಜಿ ನಾಯಕ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಇಂದು ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗಂಗೂಲಿ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಜನವರಿ ಮೊದಲ ವಾರದಲ್ಲಿ ಜಿಮ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಗಂಗೂಲಿಗೆ ಹೃದಯ ನೋವು ಕಾಣಿಸಿಕೊಂಡು ಲಘು ಹೃದಯಾಘಾತವಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಖ್ಯಾತ ಹೃದಯ ಸರ್ಜನ್​ ಡಾ. ದೇವಿ ಶೆಟ್ಟಿ ಅವರು ಆಸ್ಪತ್ರೆಯಲ್ಲಿದ್ದ ಗಂಗೂಲಿ ಅವರರನ್ನು ಭೇಟಿ ಮಾಡಿ ಸಲಹೆಗಳನ್ನು ನೀಡಿದ್ದರು. ಬಳಿಕ ಗಂಗೂಲಿ ಡಿಸ್ಚಾರ್ಜ್‌ ಆಗಿದ್ದರು.

  • ಮಹಿಳೆಗೆ ಎದೆನೋವು – ಬಸ್ಸನ್ನೇ ಆಸ್ಪತ್ರೆಗೆ ಕೊಂಡೊಯ್ದ ಚಾಲಕ

    ಮಹಿಳೆಗೆ ಎದೆನೋವು – ಬಸ್ಸನ್ನೇ ಆಸ್ಪತ್ರೆಗೆ ಕೊಂಡೊಯ್ದ ಚಾಲಕ

    ಮಂಗಳೂರು: ಬಸ್ಸಿನಲ್ಲಿ ಸಂಚರಿಸುತ್ತಿದ್ದ ಮಹಿಳೆಗೆ ಎದೆನೋವು ಕಾಣಿಸಿಕೊಂಡಾಗ ಮಾನವೀಯತೆ ಮೆರೆದ ಬಸ್ ಚಾಲಕ ಮತ್ತು ನಿರ್ವಾಹಕ ಬಸ್ಸನ್ನು ನೇರವಾಗಿ ಆಸ್ಪತ್ರೆಗೆ ಸಾಗಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಮಂಗಳೂರಿನ ಹೊರವಲಯ ತಲಪಾಡಿಯ ಕಿನ್ಯಾದಿಂದ ಮಂಗಳೂರಿಗೆ ಬರುತ್ತಿದ್ದ ಮಹೇಶ್ ಬಸ್‍ನಲ್ಲಿ ಮಹಿಳೆಯೊಬ್ಬರಿಗೆ ತೀವ್ರವಾಗಿ ಎದೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಬಸ್ಸನ್ನು ಚಾಲಕ ನೇರವಾಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ.

    ಎದೆ ನೋವು ಕಾಣಿಸಿಕೊಂಡ ನಂತರ ತಡಮಾಡಿದರೆ ಅಪಾಯ ಸಂಭವಿಸಬಹುದು ಎಂಬ ದೃಷ್ಟಿಯಿಂದ ತಕ್ಷಣ ಜಾಗೃತರಾದ ಬಸ್ ಚಾಲಕ ಪ್ರಮೋದ್ ಹಾಗೂ ನಿರ್ವಾಹಕ ಅಶ್ವಿತ್ ಬಸ್ಸನ್ನು ಸಮಯಕ್ಕೆ ಬಸ್ ನಿಲ್ದಾಣ ತಲುಪಿಸುವ ಒತ್ತಡ ಇದ್ದರೂ ಕೂಡ ಮಾನವೀಯತೆ ಮೆರೆದಿದ್ದಾರೆ. ನೇರವಾಗಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಬಸ್ ಚಾಲಕ ಹಾಗೂ ನಿರ್ವಾಹಕರ ಈ ಕಾರ್ಯಕ್ಕೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗಿದೆ.

  • ರಾತ್ರಿ ನಾಪತ್ತೆಯಾಗಿ ಬೆಳಗ್ಗೆ ಆಸ್ಪತ್ರೆ ಸೇರಿದ ಶ್ರೀಮಂತ ಪಾಟೀಲ್

    ರಾತ್ರಿ ನಾಪತ್ತೆಯಾಗಿ ಬೆಳಗ್ಗೆ ಆಸ್ಪತ್ರೆ ಸೇರಿದ ಶ್ರೀಮಂತ ಪಾಟೀಲ್

    ಬೆಂಗಳೂರು: ರಾತ್ರೋ ರಾತ್ರಿ ಕಾಂಗ್ರೆಸ್ ಶಾಸಕರು ತಂಗಿದ್ದ ದೇವನಹಳ್ಳಿ ಪ್ರಕೃತಿ ರೆಸಾರ್ಟಿನಿಂದ ನಾಪತ್ತೆಯಾಗಿದ್ದ ಕಾಗವಾಡದ ಶಾಸಕ ಶ್ರೀಮಂತ ಪಾಟೀಲ್ ಅನಾರೋಗ್ಯದ ಸಮಸ್ಯೆಯಿಂದ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ರಾತ್ರೋ ರಾತ್ರಿ ಬೆಂಗಳೂರು ಬಿಟ್ಟು ಮುಂಬೈ ಸೇರಿದ್ದ ಶ್ರೀಮಂತ ಪಾಟೀಲ್ ಹೃದಯ ಬಡಿತ, ಬ್ಲಡ್ ಪ್ರೆಶರ್ ಹೆಚ್ಚಾದ ಹಿನ್ನೆಲೆಯಲ್ಲಿ ಇಂದು ಮುಂಬೈನಲ್ಲಿರುವ ಸೆಂಟ್ ಜಾರ್ಜ್ ಆಸ್ಪತ್ರೆಗೆ ದಾಖಲಾಗಿದ್ದು, ಎದೆ ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು ವಿಶ್ವಾಸಮತದ ಹಿನ್ನೆಲೆಯಲ್ಲಿ ಹೈಡ್ರಾಮಾ ನಡೆದಿದ್ದು, ಇಷ್ಟು ದಿನ ಸೈಲೆಂಟಾಗಿದ್ದ ರಮೇಶ್ ಜಾರಕಿಹೊಳಿ ಆಪ್ತ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಕಳೆದ ರಾತ್ರಿ ದಿಢೀರ್ ಕಾಂಗ್ರೆಸ್ ಶಾಸಕರು ತಂಗಿರುವ ದೇವನಹಳ್ಳಿಯ ಪ್ರಕೃತಿ ರೆಸಾರ್ಟಿನಿಂದ ನಾಪತ್ತೆಯಾಗಿದ್ದರು.

    ಸ್ಪೀಕರ್‍ ಗೆ ಪತ್ರ
    ಕಾಗವಾಡ ವಿಧಾನಸಭಾ ಸದಸ್ಯನಾದ ಶ್ರೀಮಂತ ಪಾಟೀಲ್ ಆದ ನಾನು ಅನಾರೋಗ್ಯದ ಕಾರಣದಿಂದ ವಿಧಾನ ಸಭೆ ಕಲಾಪಕ್ಕೆ ಬರುಲು ಆಗುತ್ತಿಲ್ಲ. ಹೃದಯ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ನಾನು ವೈದ್ಯರ ಅಣತಿಯಂತೆ ಸೆಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಅದ್ದರಿಂದ ಕರ್ನಾಟಕದ 15ನೇ ವಿಧಾನಸಭೆಯ 4ನೇ ಅಧಿವೇಶನಕ್ಕೆ ಗೈರು ಹಾಜರಾಗುತ್ತೇನೆಂದು ಈ ಮೂಲಕ ತಿಳಿಸುತ್ತೇನೆ ಎಂದು ಪತ್ರ ಬರೆದಿದ್ದಾರೆ.