Tag: Chess Champion

  • ವಿಶ್ವ ಚೆಸ್ ಚಾಂಪಿಯನ್ ಗುಕೇಶ್‌ಗೆ ತಮಿಳುನಾಡು ಸರ್ಕಾರದಿಂದ ಸನ್ಮಾನ – 5 ಕೋಟಿ ರೂ. ಬಹುಮಾನ!

    ವಿಶ್ವ ಚೆಸ್ ಚಾಂಪಿಯನ್ ಗುಕೇಶ್‌ಗೆ ತಮಿಳುನಾಡು ಸರ್ಕಾರದಿಂದ ಸನ್ಮಾನ – 5 ಕೋಟಿ ರೂ. ಬಹುಮಾನ!

    ಚೆನ್ನೈ: ವಿಶ್ವ ಚೆಸ್ ಚಾಂಪಿಯನ್ (World Chess Champion) ಡಿ.ಗುಕೇಶ್‌ಗೆ ಇಂದು (ಡಿ.17) ತಮಿಳುನಾಡು ಸರ್ಕಾರ ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದು, 5 ಕೋಟಿ ರೂ. ಬಹುಮಾನ ವಿತರಣೆ ಮಾಡಲಿದೆ.

    ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ (MK Stalin) ಅವರು ಇಂದು 5 ಕೋಟಿ ರೂ. ಬಹುಮಾನ ಚೆಕ್ ಹಸ್ತಾಂತರಿಸಲಿದ್ದಾರೆ. ಅಭಿನಂದನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹಾಗೂ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ (Viswanathan Anand) ಸಹ ಭಾಗವಹಿಸಲಿದ್ದಾರೆ.ಇದನ್ನೂ ಓದಿ: ದರ್ಶನ್ ಜೊತೆ ಪವಿತ್ರಾ ಚೆನ್ನಾಗಿರುತ್ತೇನೆ ಅಂದರೆ ಇರಲಿ: ಮಾಜಿ ಪತಿ ಸಂಜಯ್ ಸಿಂಗ್

    ಈ ಕುರಿತು ಸಿಎಂ ಎಂ.ಕೆ. ಸ್ಟಾಲಿನ್ ಡಿ.ಗುಕೇಶ್ ಐತಿಹಾಸಿಕ ಸಾಧನೆ ಗುರುತಿಸಿ 5 ಕೋಟಿ ನಗದು ಬಹುಮಾನವನ್ನು ನೀಡುವುದಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.

    ಸೋಮವಾರ (ಡಿ.16) ತವರಿಗೆ ಬಂದಿಳಿದದ ಗುಕೇಶ್ ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಅವರ ಅಭಿಮಾನಿಗಳು ಸೇರಿದಂತೆ ಇನ್ನಿತರರು ಅದ್ದೂರಿಯಾಗಿ ಸ್ವಾಗತಿಸಿದರು.

    18ರ ಹರೆಯದ ಹುಡುಗ ಗುಕೇಶ್ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ಐತಿಹಾಸಿಕ ಸಾಧನೆ ಮಾಡಿದರು. ಕಳೆದ ವಾರ ನಡೆದ ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ ವಿಶ್ವ್ ಚಾಂಪಿಯನ್‌ಶಿಪ್‌ನ ಕೊನೆಯ 14ನೇ ನಿರ್ಣಾಯಕ ಪಂದ್ಯದಲ್ಲಿ 6.5-6.5 ಸಮಬಲಗೊಂಡು, ಬಳಿಕ 7.5-6.5 ಅಂಕಗಳೊಂದಿಗೆ ಗುಕೇಶ್ ಗೆಲುವು ಸಾಧಿಸುವ ಮೂಲಕ ಅಮೋಘ ಪ್ರದರ್ಶನ ನೀಡಿದ್ದರು. ವಿಶ್ವನಾಥನ್ ಆನಂದ್ ನಂತರ ಚೆಸ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಎರಡನೇ ಭಾರತೀಯನಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಗುಕೇಶ್ ಅವರು ಮುಂದಿನ ವರ್ಷ ನಾರ್ವೆ ಚೆಸ್ ಟೂರ್ನಮೆಂಟ್‌ನಲ್ಲಿ ವಿಶ್ವದ ಅತಿ ಹೆಚ್ಚು ಶ್ರೇಯಾಂಕದ ಆಟಗಾರ ಮ್ಯಾಗ್ನಸ್ ಕಾರ್ಲ್ಸೆನ್ ಅವರನ್ನು ಎದುರಿಸಲಿದ್ದಾರೆ.ಇದನ್ನೂ ಓದಿ: ಔತಣಕೂಟ ಮಾಡಿ ಬೆನ್ನಿಗೆ ಚಾಕು ಹಾಕೋದಲ್ಲ, ಇದ್ರಲ್ಲಿ ಬಿಎಸ್‌ವೈ ಕುತಂತ್ರ ಇದ್ದೇ ಇರುತ್ತೆ – ಯತ್ನಾಳ್ ಕಿಡಿ

  • ತವರಿಗೆ ಮರಳಿದ ವಿಶ್ವ ಚೆಸ್ ಚಾಂಪಿಯನ್ – ಗುಕೇಶ್‌ಗೆ ಚೆನ್ನೈನಲ್ಲಿ ಭರ್ಜರಿ ಸ್ವಾಗತ

    ತವರಿಗೆ ಮರಳಿದ ವಿಶ್ವ ಚೆಸ್ ಚಾಂಪಿಯನ್ – ಗುಕೇಶ್‌ಗೆ ಚೆನ್ನೈನಲ್ಲಿ ಭರ್ಜರಿ ಸ್ವಾಗತ

    ಚೆನ್ನೈ: ಕಿರಿಯ ವಯಸ್ಸಿನಲ್ಲೇ ವಿಶ್ವ ಚೆಸ್ ಚಾಂಪಿಯನ್ (World Chess Champion) ಹೆಗ್ಗಳಿಕೆಗೆ ಪಾತ್ರರಾದ ಡಿ.ಗುಕೇಶ್ (D.Gukesh) ಭಾರತಕ್ಕೆ ಮರಳಿದ್ದು, ಚೆನ್ನೈ ವಿಮಾನ ನಿಲ್ದಾಣದಲ್ಲಿ (Chennai Airport) ಭರ್ಜರಿ ಸ್ವಾಗತ ಸಿಕ್ಕಿತು.

    ಇತ್ತೀಚಿಗಷ್ಟೇ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ವಿಶ್ವದ ಕಿರಿಯ ಚೆಸ್ ಚಾಂಪಿಯನ್ ಎಂಬ ಇತಿಹಾಸ ನಿರ್ಮಿಸಿದರು.ಇದನ್ನೂ ಓದಿ: ವಿವಾದದ ನಡುವೆಯೂ ಗಲ್ಲಾಪೆಟ್ಟಿಗೆಯಲ್ಲಿ 1409 ಕೋಟಿ ಬಾಚಿದ ‘ಪುಷ್ಪ 2’

    ಇಂದು (ಡಿ.16) ಚೆನ್ನೈ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು, ಸ್ನೇಹಿತರು ಸೇರಿದಂತೆ ಅಧಿಕಾರಿಗಳು ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು.

    ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಾಧನೆಯ ಬಳಿಕ ಮರಳಿ ಭಾರತಕ್ಕೆ ಬಂದಿರುವುದು ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ. ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಬೆಂಬಲವೇ ನನಗೆ ಹೆಚ್ಚಿನ ಶಕ್ತಿ ನೀಡಿತ್ತು ಎಂದು ಸಂತೋಷ ವ್ಯಕ್ತಪಡಿಸಿದರು.

    ವಿಶ್ವನಾಥನ್ ಆನಂದ್ ನಂತರ ಚೆಸ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಎರಡನೇ ಭಾರತೀಯನಾಗಿ ಹೊರಹೊಮ್ಮಿದ್ದಾರೆ. 18ರ ಹರೆಯದ ಹುಡುಗ ಗುಕೇಶ್ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ಐತಿಹಾಸಿಕ ಸಾಧನೆ ಮಾಡಿದರು. ಕಳೆದ ವಾರ ನಡೆದ ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ ವಿಶ್ವ್ ಚಾಂಪಿಯನ್‌ಶಿಪ್‌ನ ಕೊನೆಯ 14ನೇ ನಿರ್ಣಾಯಕ ಪಂದ್ಯದಲ್ಲಿ 6.5-6.5 ಸಮಬಲಗೊಂಡು, ಬಳಿಕ 7.5-6.5 ಅಂಕಗಳೊಂದಿಗೆ ಗುಕೇಶ್ ಗೆಲುವು ಸಾಧಿಸುವ ಮೂಲಕ ಅಮೋಘ ಪ್ರದರ್ಶನ ನೀಡಿದ್ದರು.ಇದನ್ನೂ ಓದಿ: ಭಾರತ-ಆಸೀಸ್ ಮೂರನೇ ಟೆಸ್ಟ್‌ಗೆ ಮಳೆ ಕಾಟ – ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 51 ರನ್‌ಗೆ 4 ವಿಕೆಟ್

  • ವಿಶ್ವದ ನಂ.1 ಮ್ಯಾಗ್ನಸ್‌ ಕಾರ್ಲ್‌ಸನ್‌ಗೆ ಸೋಲುಣಿಸಿದ ಗ್ರ್ಯಾಂಡ್‌ಮಾಸ್ಟರ್‌ ಪ್ರಜ್ಞಾನಂದ!

    ವಿಶ್ವದ ನಂ.1 ಮ್ಯಾಗ್ನಸ್‌ ಕಾರ್ಲ್‌ಸನ್‌ಗೆ ಸೋಲುಣಿಸಿದ ಗ್ರ್ಯಾಂಡ್‌ಮಾಸ್ಟರ್‌ ಪ್ರಜ್ಞಾನಂದ!

    ಓಸ್ಲೋ: ಭಾರತದ ಚೆಸ್ಟ್‌ ಗ್ರ್ಯಾಂಡ್‌ ಮಾಸ್ಟರ್‌ ಖ್ಯಾತಿಯ ಆರ್‌. ಪ್ರಜ್ಞಾನಂದ (Praggnanandhaa), ವಿಶ್ವದ ನಂ.1 ಚೆಸ್‌ ಮಾಸ್ಟರ್‌ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ಗೆ (Magnus Carlsen) ಸೋಲುಣಿಸಿದ್ದಾರೆ.

    ಬುಧವಾರ ತಡರಾತ್ರಿ ನಡೆದ ನಾರ್ವೆ ಚೆಸ್ ಟೂರ್ನಿಯ (Norway Chess Tournament) 3ನೇ ಸುತ್ತಿನಲ್ಲಿ ಪ್ರಜ್ಞಾನಂದ ಈ ಸಾಧನೆ ಮಾಡಿದ್ದಾರೆ. ಇದು 6 ಬಾರಿ ವಿಶ್ವ ಚೆಸ್‌ ಚಾಂಪಿಯನ್‌ ಕಾರ್ಲ್‌ಸನ್‌ ವಿರುದ್ಧ ಪ್ರಜ್ಞಾನಂದಗೆ ಒಲಿದ ಮೊದಲ ಗೆಲುವು ಸಹ ಆಗಿದೆ. ಮೂರು ಸುತ್ತಿನ ಬಳಿಕ ಅಂಕಪಟ್ಟಿಯಲ್ಲಿ ಪ್ರಜ್ಞಾನಂದ ಅವರು 5.5 ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನ ಪಡೆದರೆ, ಕಾರ್ಲ್‌ಸನ್‌ 3 ಪಾಯಿಂಟ್‌ಗಳೊಂದಿಗೆ 5ನೇ ಸ್ಥಾನ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಜಿಮ್ನಾಸ್ಟಿಕ್‍ನಲ್ಲಿ ಭಾರತಕ್ಕೆ ಮೊದಲ ಚಿನ್ನ – ದೀಪಾ ಕರ್ಮಾಕರ್ ಏಷ್ಯನ್ ಚಾಂಪಿಯನ್

    ಸೋತು ಗೆದ್ದ ಪ್ರಜ್ಞಾನಂದ:
    ಕಳೆದ ವರ್ಷ ಅಝರ್​ಬೈಜಾನ್​ನ ಬಾಕುವಿನಲ್ಲಿ ನಡೆದಿದ್ದ ಚೆಸ್ ವಿಶ್ವಕಪ್​ನ (Chess World Cup 2023) ಫೈನಲ್ ಟೈ ಬ್ರೇಕರ್ ಸುತ್ತಿನಲ್ಲಿ ಪ್ರಜ್ಞಾನಂದ ವಿರುದ್ಧವೇ ಗೆಲುವು ಸಾಧಿಸಿ ಮ್ಯಾಗ್ನಸ್ ಕಾರ್ಲ್‌ಸೆನ್ ಗೆಲುವು ಸಾಧಿಸಿ 6ನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿದ್ದರು. ಭಾರತೀಯ ಚೆಸ್‌ ಪಟು ಪ್ರಜ್ಞಾನಂದಗೆ ಅಂದು ಸೋಲಾಗಿ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದರು. ಇದೀಗ 6 ಬಾರಿ ಚಾಂಪಿಯನ್‌ ಕಾರ್ಲ್‌ಸನ್‌ ಅವರಿಗೆ ಪ್ರಜ್ಞಾನಂದ ಸೋಲುಣಿಸಿರುವುದು ವಿಶೇಷ. ಇದನ್ನೂ ಓದಿ: Malaysia Masters: ಫೈನಲ್‌ನಲ್ಲಿ ಸಿಂಧುಗೆ ಸೋಲು – ಪ್ರಶಸ್ತಿ ಗೆಲ್ಲುವ ಕನಸು ಭಗ್ನ

    ಇನ್ನೂ ಮಹಿಳಾ ವಿಭಾಗದಲ್ಲಿ ಭಾರತದ ಯುವ ಆಟಗಾರ್ತಿ, ಪ್ರಜ್ಞಾನಂದ ಅವರ ಸಹೋದರಿ, ಗ್ರ್ಯಾಂಡ್‌ಮಾಸ್ಟರ್‌ ಆರ್‌.ವೈಶಾಲಿ ಕೂಡ ಮುನ್ನಡೆ ಸಾಧಿಸಿದ್ದಾರೆ. ಸ್ವದೇಶದ ಅನುಭವಿ ಆಟಗಾರ್ತಿ ಕೋನೇರು ಹಂಪಿ ಅವರನ್ನು ಸೋಲಿಸಿ ನಾರ್ವೆ ಚೆಸ್‌ ಟೂರ್ನಿಯ ನಂತರ ಮಹಿಳಾ ವಿಭಾಗದಲ್ಲಿ ಮಂಗಳವಾರ ಅಗ್ರಸ್ಥಾನಕ್ಕೇರಿದ್ದಾರೆ. ಆ ಬಳಿಕ ನಡೆದ ಪಂದ್ಯದಲ್ಲಿ ಮುಜಿಚುಕ್ ಅವರೊಂದಿಗೆ ಡ್ರಾ ಸಾಧಿಸುವಲ್ಲಿ ಯಶಸ್ವಿಯಾದ್ದಾರೆ. ಇದನ್ನೂ ಓದಿ: Olympic 2024: ಕ್ರೀಡೆಗಳ ಮಹಾಸಂಗಮಕ್ಕೆ ಕೆಲವೇ ದಿನ ಬಾಕಿ – ಕೈಬೀಸಿ ಕರೆಯುತ್ತಿದೆ ಪ್ಯಾರಿಸ್‌!

    ಚಾಂಪಿಯನ್‌ ಸೋಲಿಸಿದ್ದು ಖುಷಿ ಕೊಟ್ಟಿದೆ:
    ಗೆಲುವಿನ ಕುರಿತು ಮಾತನಾಡಿರುವ ಪ್ರಜ್ಞಾನಂದ, ಅತ್ಯಂತ ಪ್ರಬಲ ಆಟಗಾರನನ್ನು ಸೋಲಿಸಿದರೆ, ಅದು ಯಾವಾಗಲೂ ವಿಶೇಷವಾಗಿರುತ್ತದೆ. ಏಕೆಂದರೆ ಅವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಚೆಸ್​ನಲ್ಲಿ ವಿಶ್ವ ಚಾಂಪಿಯನ್ ವಿರುದ್ಧ ಮೊದಲ ಬಾರಿಗೆ ಗೆದ್ದಿರುವುದು ಖುಷಿ ಕೊಟ್ಟಿದೆ. ಇದೇ ಪ್ರದರ್ಶನವನ್ನು ಮುಂದುವರಿಸುವ ನಂಬಿಕೆ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ – ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದ ಭಾರತದ ದೀಪ್ತಿ!

     

  • ಅಂತಾರಾಷ್ಟ್ರೀಯ ಮಟ್ಟದ ಚೆಸ್ ಚಾಂಪಿಯನ್‌ಶಿಪ್ – ಚಿನ್ನದ ಪದಕ ಗೆದ್ದ ಬಾಲಕಿಗೆ ಭವ್ಯ ಸ್ವಾಗತ

    ಅಂತಾರಾಷ್ಟ್ರೀಯ ಮಟ್ಟದ ಚೆಸ್ ಚಾಂಪಿಯನ್‌ಶಿಪ್ – ಚಿನ್ನದ ಪದಕ ಗೆದ್ದ ಬಾಲಕಿಗೆ ಭವ್ಯ ಸ್ವಾಗತ

    ಚಿಕ್ಕಬಳ್ಳಾಪುರ: ಜಾರ್ಜಿಯಾದಲ್ಲಿ (Georgia) ನಡೆದ ಅಂತಾರಾಷ್ಟ್ರೀಯ ಮಟ್ಟದ ಚೆಸ್ ಚಾಂಪಿಯನ್‌ಶಿಪ್‍ನಲ್ಲಿ (International Chess Championship) ಚಿನ್ನದ ಪದಕ (Gold medal) ಗೆದ್ದು ಬೆಂಗಳೂರಿಗೆ ಬಂದ ಬಾಲಕಿಗೆ ಭವ್ಯ ಸ್ವಾಗತ ಕೋರಲಾಗಿದೆ.

    ಹಾಸನ (Hassan) ಜಿಲ್ಲೆಯ ಶ್ರವಣಬೆಳಗೊಳ (Shravanbela Gola) ತಾಲೂಕಿನ ಜಿನ್ನೆನಹಳ್ಳಿಯ ಚಾರ್ವಿ (Charvy) ಸಾಧನೆ ಮಾಡಿದ ಬಾಲಕಿ. ಸೆಪ್ಟೆಂಬರ್ 27 ರಂದು ನಡೆದ ಪಂದ್ಯದಲ್ಲಿ ಚಿನ್ನ ಗೆದ್ದು ಚಾಂಪಿಯನ್ ಆದ ಚಾರ್ವಿ ಇಂದು ತಾಯ್ನಾಡಿಗೆ ಆಗಮಿಸಿದಳು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಬಾಲಕಿಗೆ ಪೋಷಕರು ಮತ್ತು ಕರ್ನಾಟಕ ಸ್ಟೇಟ್ ಚೆಸ್ ಅಸೋಸಿಯೇಷನ್(Karnataka State Chess Association)ನಿಂದ ಅದ್ದೂರಿ ಸ್ವಾಗತ ಕೋರಲಾಗಿದೆ. ಇದನ್ನೂ ಓದಿ: ಇಂದು ಸ್ಯಾನಿಟರಿ ಪ್ಯಾಡ್, ನಾಳೆ ಕಾಂಡೋಮ್ ಕೇಳ್ತೀರಿ- ಮಹಿಳಾ IAS ಅಧಿಕಾರಿ ವೀಡಿಯೋ ವೈರಲ್

    ಡೊಳ್ಳು ಕುಣಿತದೊಂದಿಗೆ ಸಡಗರ ಸಂಭ್ರಮದಿಂದ ಬಾಲಕಿಯನ್ನು ಬರಮಾಡಿಕೊಳ್ಳಲಾಗಿದ್ದು, ತೆರೆದ ವಾಹನದಲ್ಲಿ ಬೆಂಗಳೂರಿನವರೆಗೂ ಮೆರವಣಿಗೆ ನಡೆಸಲಾಗಿದೆ. ಅಂದಹಾಗೆ 8 ವರ್ಷದ ವಿಭಾಗದಲ್ಲಿ ವಿವಿಧ ದೇಶಗಳಿಂದ ಭಾಗವಹಿಸಿದ್ದ 83 ಜನ ಬಾಲಕಿಯರ ಪೈಕಿ ನಮ್ಮ ರಾಜ್ಯದ ಈ ಬಾಲಕಿ ಚಿನ್ನದ ಪದಕ ಗೆದ್ದು ಕರುನಾಡ ಕೀರ್ತಿ ಪತಾಕೆ ಹಾರಿಸಿದ್ದಾಳೆ. ಇದನ್ನೂ ಓದಿ: ಎಲ್ಲಾ ಮಹಿಳೆಯರು ಸುರಕ್ಷಿತ ವೈದ್ಯಕೀಯ ಗರ್ಭಪಾತಕ್ಕೆ ಅರ್ಹರು: ಸುಪ್ರೀಂಕೋರ್ಟ್

    Live Tv
    [brid partner=56869869 player=32851 video=960834 autoplay=true]