Tag: Cherry Cookies

  • ಕ್ರಿಸ್ಮಸ್‌ಗೆ ಮಾಡಿ ಸುಲಭದ ಚೆರಿ ಕುಕೀಸ್

    ಕ್ರಿಸ್ಮಸ್‌ಗೆ ಮಾಡಿ ಸುಲಭದ ಚೆರಿ ಕುಕೀಸ್

    ಕ್ರಿಸ್ಮಸ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ಹಬ್ಬಕ್ಕೆ ವಿಧ ವಿಧದ ತಿಂಡಿಗಳನ್ನು ತಯಾರಿಸಿ ಹಂಚುವುದು ಸಂಪ್ರದಾಯ. ಈ ಸ್ಪೆಷಲ್ ದಿನಕ್ಕಾಗಿ ನಾವಿಂದು ಡಿಫರೆಂಟ್ ರೆಸಿಪಿಯೊಂದನ್ನು ಹೇಳಿಕೊಡುತ್ತೇವೆ. ಚೆರಿ ಕುಕೀಸ್ ಅನ್ನು ಕ್ರಿಸ್ಮಸ್ ಮಾತ್ರವಲ್ಲದೇ ಇತರ ಸ್ಪೆಷಲ್ ದಿನಗಳಲ್ಲೂ ಮಾಡಿ ಸವಿಯಬಹುದು. ಸಿಂಪಲ್ ಆಗಿರೋ ಈ ರೆಸಿಪಿಯನ್ನು ನೀವೂ ಮಾಡಿ, ಕ್ರಿಸ್ಮಸ್ ಆಚರಿಸಿ.

    ಬೇಕಾಗುವ ಪದಾರ್ಥಗಳು:
    ಚೆರಿ ರಸ – 2 ಟೀಸ್ಪೂನ್
    ಉಪ್ಪು – ಅರ್ಧ ಟೀಸ್ಪೂನ್
    ಬೆಣ್ಣೆ – 1 ಕಪ್
    ಚೆರಿ – ಅರ್ಧ ಕಪ್
    ಬಾದಾಮಿ ಸಾರ – ಅರ್ಧ ಟೀಸ್ಪೂನ್
    ಸಕ್ಕರೆ ಪುಡಿ – 1 ಕಪ್
    ಮೈದಾ ಹಿಟ್ಟು – ಎರಡೂವರೆ ಕಪ್
    ಚಾಕ್ಲೇಟ್ ಚಿಪ್ಸ್ – ಮುಕ್ಕಾಲು ಕಪ್
    ಕೆಂಪು ಆಹಾರ ಬಣ್ಣ – ಐಚ್ಛಿಕ ಇದನ್ನೂ ಓದಿ: ಕ್ರಿಸ್ಮಸ್ ಹಬ್ಬಕ್ಕೆ ಮನೆಯಲ್ಲೇ ತಯಾರಿಸಿ ರೆಡ್ ವೆಲ್ವೆಟ್ ಕೇಕ್

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಬೌಲ್‌ನಲ್ಲಿ ಬೆಣ್ಣೆ, ಸಕ್ಕರೆ ಪುಡಿ, ಉಪ್ಪು, ಚೆರಿ ರಸ, ಬಾದಾಮಿ ಸಾರ ಮತ್ತು ಆಹಾರ ಬಣ್ಣವನ್ನು ಹಾಕಿ ಮಿಶ್ರಣ ಮಾಡಿ.
    * ಬಳಿಕ ಕತ್ತರಿಸಿದ ಚೆರಿ ಹಾಗೂ ಚಾಕ್ಲೇಟ್ ಚಿಪ್ಸ್ ಹಾಕಿ ಮಿಶ್ರಣ ಮಾಡಿ.
    * ಈಗ ಬೇಕಿಂಗ್ ಟ್ರೇಗೆ ಬಟರ್ ಪೇಪರ್ ಜೋಡಿಸಿ, ಟೀಸ್ಪೂನ್‌ಗಳಷ್ಟು ಮಿಶ್ರಣವನ್ನು ಸ್ವಲ್ಪ ಸ್ವಲ್ಪ ಅಂತರಗಳಲ್ಲಿ ಬಿಡಿ.
    * ಟ್ರೇಯನ್ನು ಓವನ್‌ನಲ್ಲಿ ಇಟ್ಟು 350 ಪ್ಯಾರಾಹಿಟ್‌ನಲ್ಲಿ ಸುಮಾರು 9-10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
    * ಬಳಿಕ ಓವನ್‌ನಿಂದ ತೆಗೆದು ಕುಕೀಸ್ ತಣ್ಣಗಾಗಲು ಬಿಡಿ.
    * ಇದೀಗ ಕ್ರಿಸ್ಮಸ್ ಸ್ಪೆಷಲ್ ಚೆರಿ ಕುಕೀಸ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ.
    * ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ ಇಡಬಹುದು. ಇದನ್ನೂ ಓದಿ: ಸಿಂಪಲ್ಲಾಗಿ ಮಾಡಿ ಬಾದಾಮಿ ಟಾಫಿ ಬಾರ್ಸ್