Tag: Cherry

  • Boycott Turkey – ಸೇಬು, ಚೆರ‍್ರಿ, ಮಾರ್ಬಲ್‌ಗಳ ಆಮದು ಬ್ಯಾನ್‌ಗೆ ನಿರ್ಧಾರ

    Boycott Turkey – ಸೇಬು, ಚೆರ‍್ರಿ, ಮಾರ್ಬಲ್‌ಗಳ ಆಮದು ಬ್ಯಾನ್‌ಗೆ ನಿರ್ಧಾರ

    – ಭಾರತದಿಂದ ಟರ್ಕಿ ಪ್ರವಾಸಕ್ಕೆ ಬಹಿಷ್ಕಾರ
    – ಚಿತ್ರೀಕರಣ ಕೂಡ ಬ್ಯಾನ್

    ನವದೆಹಲಿ: ಪಾಕಿಸ್ತಾನದ (Pakistan) ಬೆನ್ನಿಗೆ ನಿಂತ ಟರ್ಕಿಗೆ (Turkey) ಭಾರತೀಯರು ದೇಶಾದ್ಯಾಂತ ಸರಿಯಾದ ಬುದ್ಧಿ ಕಲಿಸುತ್ತಿದ್ದಾರೆ. ಟರ್ಕಿ ದೇಶದ ವಿರುದ್ಧ ಭಾರತದಿಂದ ಬಾಯ್ಕಾಟ್ (Boycott Turkey) ಅಭಿಯಾನ ಜೋರಾಗಿದೆ. ಸೇಬು, ಚೆರ‍್ರಿ, ಆಲಿವ್ ಆಯಿಲ್, ಮಾರ್ಬಲ್ಸ್, ಎಲೆಕ್ಟ್ರಾನಿಕ್ ವಸ್ತುಗಳು, ಫ್ಯಾಷನ್ ಉತ್ಪನ್ನಗಳು ಬ್ಯಾನ್ ಮಾಡಲು ನಿರ್ಧರಿಸಲಾಗಿದೆ.

    ಪಾಪಿ ಪಾಕ್ ಬೆನ್ನಿಗೆ ನಿಂತ ಟರ್ಕಿ ವಿರುದ್ಧ ಮಂಗಳವಾರ ಪುಣೆಯ ಹೋಲ್‌ಸೆಲ್, ರೀಟೇಲ್ ವ್ಯಾಪಾರಸ್ಥರು ಸೇಬು ಹಣ್ಣು ಆಮದು ಮಾಡಿಕೊಳ್ಳುವುದನ್ನು ಬಹಿಷ್ಕರಿಸಿದ್ದರು. ಇದೀಗ ಉದಯಪುರದ ಮಾರ್ಬಲ್ ಅಸೋಸಿಯೇಷನ್ ಕೂಡ ಟರ್ಕಿ ಮಾರ್ಬಲ್‌ಗಳ ಆಮದು ಬ್ಯಾನ್ ಮಾಡಲು ನಿರ್ಧರಿಸಿದೆ. ಭಾರತದಲ್ಲಿ ಮೂರು ತಿಂಗಳಿಗೆ ಸುಮಾರು 1,200 ರಿಂದ 1,500 ಕೋಟಿ ರೂಪಾಯಿ ಮೌಲ್ಯದ ಟರ್ಕಿ ಸೇಬನ್ನು ಖರೀದಿ ಮಾಡಲಾಗುತ್ತಿತ್ತು. ಇದೀಗ ಬ್ಯಾನ್‌ನಿಂದ ಟರ್ಕಿಗೆ ಶಾಕ್ ಎದುರಾಗಿದೆ. ಇದನ್ನೂ ಓದಿ: ನರೇಗಾ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟಾಟಾ ಏಸ್ ಪಲ್ಟಿ – 31 ಜನರಿಗೆ ಗಾಯ

    ಇತ್ತ ಟರ್ಕಿಯ ಮಾರ್ಬಲ್‌ಗಳನ್ನು ಬ್ಯಾನ್ ಮಾಡಿರುವ ಭಾರತದ ವ್ಯಾಪಾರಿಗಳು ಟರ್ಕಿಯ ಹಲವು ಉತ್ಪನ್ನ ಮತ್ತು ಪ್ರವಾಸವನ್ನು ಬಹಿಷ್ಕರಿಸಿದ್ದಾರೆ. ಪಾಕಿಸ್ತಾನವನ್ನು ಬೆಂಬಲಿಸಿದ್ದಕ್ಕೆ ಟರ್ಕಿ ಆರ್ಥಿಕ ಹೊಡೆತದ ಭೀತಿ ಎದುರಿಸುವಂತಾಗಿದೆ. ಟರ್ಕಿಗೆ 2024ರಲ್ಲಿ 3.3 ಲಕ್ಷ ಭಾರತೀಯ ಪ್ರವಾಸಿಗರು ಭೇಟಿ ಕೊಟ್ಟಿದ್ದರು. ಸಾವಿರಾರು ಭಾರತೀಯರು ಈಗಾಗಲೇ ತಮ್ಮ ಟರ್ಕಿ ಪ್ರವಾಸವನ್ನು ರದ್ದು ಮಾಡುತ್ತಿದ್ದಾರೆ. ಟರ್ಕಿ, ಅಜರ್‌ಬೈಜಾನ್ ದೇಶಕ್ಕೆ ಹೋಗುವ ಭಾರತೀಯರ ಸಂಖ್ಯೆಯಲ್ಲಿ ಕುಸಿತವಾಗಿದೆ. ಈಸಿ ಮೈ ಟ್ರಿಪ್ (EaseMyTrip) ಕೂಡ ಪಾಕ್ ಬೆಂಬಲಿಸಿದ ಟರ್ಕಿ, ಅಜರ್‌ಬೈಜಾನ್ ವಿರುದ್ಧ ಬಾಯ್ಕಾಟ್ ಅಭಿಯಾನಕ್ಕೆ ಕೈ ಜೋಡಿಸಿದೆ. ಪ್ರವಾಸಿಗರ ಈ ಬಾಯ್ಕಾಟ್‌ನಿಂದ ಟರ್ಕಿ, ಅಜರ್‌ಬೈಜಾನ್ ಸುಮಾರು 3 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗುತ್ತಿದೆ. ಇದನ್ನೂ ಓದಿ: ಪ್ಲೀಸ್‌ ನೀರು ಹರಿಸಿ – ಸಿಂಧೂ ಜಲ ಒಪ್ಪಂದವನ್ನು ಪರಿಶೀಲಿಸುವಂತೆ ಪಾಕ್‌ ಪತ್ರ

    ಇದಷ್ಟೇ ಅಲ್ಲದೇ ಭಾರತೀಯ ಚಿತ್ರೋದ್ಯಮ ಕೂಡ ಟರ್ಕಿಗೆ ಶಾಕ್ ಕೊಟ್ಟಿದೆ. ಇನ್ನುಮುಂದೆ ಯಾವುದೇ ಸಿನಿಮಾ ಚಿತ್ರೀಕರಣಕ್ಕೆ ಟರ್ಕಿಗೆ ತೆರಳದಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ.‌  ಇದನ್ನೂ ಓದಿ:  ಭಾರತದಲ್ಲಿ ಕಾಂಗ್ರೆಸ್ ಉಗ್ರರನ್ನು ಸಾಕುತ್ತಿದೆ: ರವಿಕುಮಾರ್ ಕಿಡಿ

  • ಮೊಬೈಲ್ ಆಯ್ತು ಮುಂದೆ ಭಾರತಕ್ಕೆ ಎಂಟ್ರಿಯಾಗಲಿದೆ ಚೀನಾದ ಕಾರ್!

    ಮೊಬೈಲ್ ಆಯ್ತು ಮುಂದೆ ಭಾರತಕ್ಕೆ ಎಂಟ್ರಿಯಾಗಲಿದೆ ಚೀನಾದ ಕಾರ್!

    ನವದೆಹಲಿ: ಚೀನಾದ ಕಾರು ತಯಾರಿಕಾ ಸಂಸ್ಥೆ ಚೆರ್ರಿಯು ಭಾರತದಲ್ಲಿ ತನ್ನ ಉದ್ಯಮವನ್ನು ಆರಂಭಿಸುವ ಕುರಿತು ಯೋಜನೆಯನ್ನು ರೂಪಿಸಿರುವುದಾಗಿ ವರದಿಯಾಗಿದೆ.

    ಹೌದು. ಚೆರ್ರಿ ಅಟೋಮೊಬೈಲ್ ತಯಾರಿಕಾ ಸಂಸ್ಥೆಯು ಭಾರತದಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡಲು ಯೋಜನೆ ರೂಪಿಸಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಜರ್ಮನಿಯನ್ನು ಹಿಂದಿಕ್ಕಿ ಭಾರತ ವಿಶ್ವದಲ್ಲೇ ನಾಲ್ಕನೇ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಭಾರತದಲ್ಲಿ ತನ್ನ ಕಾರುಗಳನ್ನು ಬಿಡುಗಡೆಗೊಳಿಸಲು ಚೆರ್ರಿ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

    ಈಗಾಗಲೇ ಹುಂಡೈನ ಕಿಯಾ ಹಾಗೂ ಎಸ್‍ಎಐಸಿಯ ಎಂಜಿ ಕಾರುಗಳು 2019 ರ ವೇಳೆಗೆ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಹೀಗಾಗಿ ಚೆರ್ರಿ ಕಂಪೆನಿಯು ಸಹ ಭಾರತದಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಚೆರ್ರಿ ಕಂಪೆನೆಯನ್ನು ಎರಡು ದಶಕಗಳ ಹಿಂದೆ ಚೀನಾ ಸರ್ಕಾರದ ಸಹಭಾಗಿತ್ವದಲ್ಲಿ ಸ್ಥಾಪಿಸಿತ್ತು. ಈಗಾಗಲೇ ಸರ್ಕಾರಿ ಸ್ವಾಮ್ಯದ ಎರಡು ನಿಗಮಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ. ಚೆರ್ರಿ ಕಂಪೆನಿಯು ಕಾರು ಮಾತ್ರವಲ್ಲದೇ, ಮಿನಿವ್ಯಾನ್, ಎಸ್‍ಯುವಿ ಹಾಗೂ ವಾಣಿಜ್ಯ ಬಳಕೆಯ ವಾಹನಗಳ ತಯಾರಿಕೆಯನ್ನು ಮಾಡುತ್ತಿದೆ.

    ಈಗಾಗಲೇ ಜಾಗತಿಕ ಮಟ್ಟದಲ್ಲಿ ಹೆಸರು ಪಡೆದಿರುವ ಚೆರ್ರಿ ಕಂಪೆನಿಯು, ರಫ್ತಿನಲ್ಲಿಯು ಸಹ ಬಹು ದೊಡ್ಡ ಪಾಲನ್ನು ಹೊಂದಿದೆ. ಸದ್ಯ ಕೆನಾನ್ ಹೋಲ್ಡಿಂಗ್ಸ್ ಹಾಗೂ ಖೋರೊಸ್ನೊಂದಿಗೆ 50:50ಯ ಸಹಭಾಗಿತ್ವದ ಅಡಿಯಲ್ಲಿ ಕಾರುಗಳನ್ನು ತಯಾರಿಸುತ್ತಿದೆ. ಚೆರ್ರಿ ಕಂಪೆನಿಯು ಜಗತ್ತಿನಾದ್ಯಂತ ಸಹಭಾಗಿತ್ವದಲ್ಲಿ ಜಂಟಿ ಉದ್ಯಮಗಳನ್ನು ನಡೆಸುತ್ತಿದ್ದು, ಭಾರತದಲ್ಲಿಯೂ ಸಹ 2012 ರಲ್ಲಿ ಟಾಟಾ ಸ್ವಾಮ್ಯದ ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ನೊಂದಿಗೆ ಉದ್ಯಮವನ್ನು ಆರಂಭಿಸಿದೆ. ಈ ಮೂಲಕ ಲ್ಯಾಂಡ್ ರೋವರ್ ಹಾಗೂ ಜಗ್ವಾರ್ ಮಾದರಿಯ ಕಾರುಗಳನ್ನು ಚೀನಾದಲ್ಲಿ ತಯಾರಿಸುತ್ತಿದೆ. ಅಲ್ಲದೇ ಹಲವಾರು ರಾಷ್ಟ್ರಗಳಲ್ಲಿ ತನ್ನ ಘಟಕಗಳನ್ನು ಹೊಂದಿದೆ.

    ಮುಂಬರುವ ಚೆರ್ರಿ ಕಾರುಗಳು ಭಾರತದ ಮಾರುತಿ ಸುಜುಕಿ ಸಿಯಾಜ್ ಹಾಗೂ ಹುಂಡೈ ಕ್ರೇಟಾ ವಾಹನಗಳಿಗೆ ಪ್ರತಿಸ್ಪರ್ಧಿಯಾಗುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv