Tag: cherishma

  • ಮಗಳಿಗೆ ಕೃಷ್ಣನ ಉಡುಪು ತೊಡಿಸಿದ ಅಜಯ್ ದಂಪತಿ: ವಿಡಿಯೋ

    ಮಗಳಿಗೆ ಕೃಷ್ಣನ ಉಡುಪು ತೊಡಿಸಿದ ಅಜಯ್ ದಂಪತಿ: ವಿಡಿಯೋ

    ಬೆಂಗಳೂರು: ಸ್ಯಾಂಡಲ್‍ವುಡ್ ಕೃಷ್ಣ ಎಂದೇ ಖ್ಯಾತರಾಗಿರುವ ಅಜಯ್ ರಾವ್ ಅವರು ತಮ್ಮ ಮಗಳು ಚರಿಷ್ಮಾಳಿಗೆ ಕೃಷ್ಣನ ಉಡುಪು ಹಾಕಿದ್ದಾರೆ.

    ಕೃಷ್ಣ ಜನ್ಮಾಷ್ಟಮಿ ಹಬ್ಬದ ಪ್ರಯುಕ್ತ ನಟ ಅಜಯ್ ರಾವ್ ಹಾಗೂ ಅವರ ಪತ್ನಿ ಸ್ವಪ್ನ ಅವರು ತಮ್ಮ ಮಗಳಿಗೆ ಕೃಷ್ಣನ ಉಡುಪು ತೋಡಿಸಿ ಫೋಟೋ ಕ್ಲಿಕ್ಕಿಸಿದ್ದಾರೆ. ಬಳಿಕ ಆ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮನಿಗಳಿಗೆ “ಕೃಷ್ಣ ಜನ್ಮಾಷ್ಟಮಿ ಶುಭಾಶಯ” ತಿಳಿಸಿದ್ದಾರೆ.

    ಅಜಯ್ ಹಾಗೂ ಸ್ವಪ್ನ ಅವರು ತಮ್ಮ ಚರಿಷ್ಮಾ ಕೃಷ್ಣನ ಉಡುಪಿನಲ್ಲಿ ಬೆಣ್ಣೆ ತಿನ್ನುತ್ತಿರುವ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಬಳಿಕ ತಮ್ಮ ಮಗಳ ಜೊತೆ ಅಜಯ್ ಅವರು ಕೂಡ ಕೃಷ್ಣನಂತೆ ಪೇಟ ಧರಿಸಿ ಕೊಳಲು ಹಿಡಿದುಕೊಂಡಿದ್ದಾರೆ. ಅಜಯ್ ಹಾಗೂ ಸ್ವಪ್ನ ತಮ್ಮ ಕೃಷ್ಣನ ಕ್ಲಿಕ್ಕಿಸಿಕೊಂಡಿರುವ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

     

    View this post on Instagram

     

    ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಷಯಗಳು????

    A post shared by Krishna Ajai Rao (@krishna_ajai_rao) on

    ಇತ್ತೀಚೆಗೆ ಅಜಯ್ ಅವರ ಪತ್ನಿ ಸ್ವಪ್ನ ರಾವ್ ಅವರು ವರಮಹಾಲಕ್ಷ್ಮಿ ಹಬ್ಬದಂದು ತಮ್ಮ ಮಗಳಿಗೆ ಸಾಂಪ್ರದಾಯಿಕ ಉಡುಪು ಹಾಕಿದ್ದರು. ಅಲ್ಲದೆ ಬ್ಯಾಕ್‍ಗ್ರೌಂಡ್‍ನಲ್ಲಿ ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡು ಹಾಕಿ ಚರಿಷ್ಮಾ ನಡೆದುಕೊಂಡು ಬರುತ್ತಿರುವ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ತಿಳಿಸಿದ್ದರು.

    ಆಗಸ್ಟ್ 5ರಂದು ಸ್ವಪ್ನ ರಾವ್ ಅವರು ತಮ್ಮ ಮಗಳು ಚರಿಷ್ಮಾಗೆ ಬಸವಣ್ಣನಂತೆ ಉಡುಪು ಹಾಕಿ ಫೋಟೋ ಕ್ಲಿಕ್ಕಿಸಿದ್ದರು. ಈ ಫೋಟೋವನ್ನು ಕೂಡ ಅವರು ಇನ್‍ಸ್ಟಾಗ್ರಾಂನಲ್ಲಿ ಹಾಕಿ, “ನಮ್ಮನೆ ಪುಟ್ಟ ಬಸವಣ್ಣ” ಎಂದು ಬರೆದುಕೊಂಡಿದ್ದರು. ಸ್ವಪ್ನ ಅವರ ಈ ಪೋಸ್ಟ್ ಗೆ ಅಭಿಮಾನಿಗಳು ಫಿದಾ ಆಗಿ ಕ್ಯೂಟ್ ಪಿಕ್ ಎಂದು ಕಮೆಂಟ್ ಮಾಡಿದ್ದರು.

     

    View this post on Instagram

     

    All I see magic in you✨????❤

    A post shared by Sapna Rao (@sapnajairao) on