Tag: chepauk stadium

  • ಇಂದು ಚೆನ್ನೈನಲ್ಲಿ ರೈಡರ್ಸ್ vs ರೈಸರ್ಸ್ ಫೈನಲ್ ಹಣಾಹಣಿ – ಈ ಸಲ ಕಪ್ ಯಾರಿಗೆ?

    ಇಂದು ಚೆನ್ನೈನಲ್ಲಿ ರೈಡರ್ಸ್ vs ರೈಸರ್ಸ್ ಫೈನಲ್ ಹಣಾಹಣಿ – ಈ ಸಲ ಕಪ್ ಯಾರಿಗೆ?

    ಚೆನ್ನೈ: ಐಪಿಎಲ್ 2024ರ ಫೈನಲ್ ಪಂದ್ಯಕ್ಕೆ ಚೆನ್ನೈನ (Chennai) ಚೆಪಾಕ್ ಮೈದಾನ (Chepauk Stadium) ಸಜ್ಜಾಗಿದ್ದು, ಈ ಬಾರಿ ಕಿರೀಟ ಯಾರ ಮುಡಿಗೇರಲಿದೆ ಎಂಬ ಕುತೂಹಲಕ್ಕೆ ಇಂದು ತೆರೆಬೀಳಲಿದೆ. 17ನೇ ಆವೃತ್ತಿಯ ಪ್ರಶಸ್ತಿ ತಮ್ಮದಾಗಿಸಿಕೊಳ್ಳಲು ಇಂದು ಕೋಲ್ಕತ್ತಾ ನೈಟ್ ರೈಡರ್ಸ್‌ (KKR) ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ಮಧ್ಯೆ ರೋಚಕ ಕಾದಾಟ ನಡೆಯಲಿದೆ.

    ಐಪಿಎಲ್ 2024ರ (IPL 2024) ಲೀಗ್ ಹಂತದ ಅಗ್ರ ಎರಡು ತಂಡಗಳಾಗಿರುವ ಕೆಕೆಆರ್ ಮತ್ತು ಎಸ್‌ಆರ್‌ಹೆಚ್, ಮತ್ತೊಮ್ಮೆ ರನ್ ಮಳೆ ಹರಿಸಲು ಸಜ್ಜಾಗಿವೆ. ಆದರೆ, ಚೆನ್ನೈನ ನಿಧಾನ ಗತಿಯ ಪಿಚ್ ಉಭಯ ತಂಡಗಳ ಸ್ಫೋಟಕ ಆಟಕ್ಕೆ ಹೇಗೆ ವರ್ತಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ಇದನ್ನೂ ಓದಿ: USAಗೆ ಹಾರಿದ ಟೀಂ ಇಂಡಿಯಾ ಮೊದಲ ಬ್ಯಾಚ್‌ – ವಿಶ್ವಕಪ್‌ ಗೆದ್ದುಬರುವಂತೆ ಕೋಟ್ಯಂತರ ಅಭಿಮಾನಿಗಳ ಹಾರೈಕೆ!

    ಅಹಮದಾಬಾದ್‌ನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಎಸ್‌ಆರ್‌ಹೆಚ್ ತಂಡದ ವಿರುದ್ಧ ಗೆದ್ದ ಕೆಕೆಆರ್, ನೇರವಾಗಿ ಫೈನಲ್ ಪ್ರವೇಶಿಸಿತು. ಇದೇ ವೇಳೆ ಕೆಕೆಆರ್ ವಿರುದ್ಧ ಸೋತ ಸನ್‌ರೈಸರ್ಸ್, ಆ ಬಳಿಕ ಎರಡನೇ ಕ್ವಾಲಿಫೈಯರ್ ಕದನದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 36 ರನ್‌ಗಳಿಂದ ಗೆದ್ದು ಮತ್ತೆ ಕೆಕೆಆರ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಶುಕ್ರವಾರವಷ್ಟೇ ಚೆಪಾಕ್ ಮೈದಾನದಲ್ಲಿ ರಾಜಸ್ಥಾನವನ್ನು ಸೋಲಿಸಿದ ಹೈದರಾಬಾದ್‌ಗೆ ಈ ಪಿಚ್ ಹೇಗೆ ವರ್ತಿಸುತ್ತದೆ ಎಂಬುದರ ಅರಿವಾಗಿದೆ. ಎರಡೂ ತಂಡಗಳ ಬ್ಯಾಟಿಂಗ್, ಬೌಲಿಂಗ್ ವಿಭಾಗ ಬಲಿಷ್ಟವಾಗಿದೆ. ಇದನ್ನೂ ಓದಿ: Malaysia Masters: ಜಿದ್ದಾ ಜಿದ್ದಿ ಕಣದಲ್ಲಿ ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟ ಸಿಂಧು!

    ಫೈನಲ್ ಪಂದ್ಯಕ್ಕೂ ಮುನ್ನ ಅದ್ಧೂರಿ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು, ನಟ-ನಟಿಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದನ್ನೂ ಓದಿ: IPL 2024: ಫೈನಲ್‌ ಪಂದ್ಯಕ್ಕೆ ʻರೆಮಲ್‌ʼ ಚಂಡಮಾರುತದ ಆತಂಕ – ಮಳೆ ಅಡ್ಡಿಯಾದ್ರೆ ವಿಜೇತರನ್ನ ನಿರ್ಧರಿಸೋದು ಹೇಗೆ?

    ಕೆಕೆಆರ್ ತಂಡ 14 ಪಂದ್ಯಗಳಲ್ಲಿ 9 ಪಂದ್ಯವನ್ನು ಗೆದ್ದು, 3 ಪಂದ್ಯದಲ್ಲಿ ಸೋಲನ್ನು ಅನುಭವಿಸಿದೆ. ಇನ್ನೂ 2 ಪಂದ್ಯ ಮಳೆಗೆ ಬಲಿಯಾಗಿದೆ. ಒಟ್ಟು 20 ಅಂಕಗಳನ್ನು ಗಳಿಸಿ ಕೆಕೆಆರ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಎಸ್‌ಆರ್‌ಹೆಚ್ ತಂಡ 14 ಪಂದ್ಯಗಳಲ್ಲಿ 8 ಪಂದ್ಯ ಗೆದ್ದು, 5 ಪಂದ್ಯದಲ್ಲಿ ಸೋಲುಂಡಿದೆ. ಒಟ್ಟು 17 ಅಂಕಗಳನ್ನು ಗಳಿಸಿರುವ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದೆ. ಇದನ್ನೂ ಓದಿ: Divorce Rumours: ಪತ್ನಿ ನತಾಶಾಗೆ ವಿಚ್ಛೇದನ ನೀಡಿದ್ರೆ 70% ಕರಗಲಿದೆ ಪಾಂಡ್ಯ ಸಂಪತ್ತು!

  • ಇವತ್ತಿನ ಐಪಿಎಲ್ ಪಂದ್ಯಕ್ಕೆ ಅಡ್ಡಿಯಾಗದಂತೆ 4 ಸಾವಿರ ಪೊಲೀಸರ ನಿಯೋಜನೆ

    ಇವತ್ತಿನ ಐಪಿಎಲ್ ಪಂದ್ಯಕ್ಕೆ ಅಡ್ಡಿಯಾಗದಂತೆ 4 ಸಾವಿರ ಪೊಲೀಸರ ನಿಯೋಜನೆ

    ಚೆನ್ನೈ: ಇವತ್ತು ಸಂಜೆ ಚೆಪಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಕ್ಕೆ ಸುಮಾರು 4000 ಪೊಲೀಸರನ್ನು ನಿಯೋಜಿಸಲಾಗಿದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆಗಾಗಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಅಡ್ಡಿಯಾಗದಂತೆ ಈ ವ್ಯವಸ್ಥೆಯನ್ನು ಮಾಡಲಾಗಿದೆ.

    ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗುವರೆಗು ಚೆನ್ನೈನಲ್ಲಿ ನಡೆಯಲಿರುವ 7 ಪಂದ್ಯಗಳನ್ನು ನಡೆಸದಂತೆ ಅಥವಾ ಮುಂದೂಡುವಂತೆ ರಾಜಕೀಯ ಪಕ್ಷಗಳು ಹಾಗೂ ಸಣ್ಣ ಪುಟ್ಟ ಸಂಘಟನೆಗಳು ಒತ್ತಾಯ ಮಾಡುತ್ತಿವೆ. ಪಂದ್ಯ ವೀಕ್ಷಣೆಯನ್ನು ಬಹಿಷ್ಕರಿಸುವಂತೆ ಪ್ರೇಕ್ಷಕರಿಗೆ ಕರೆ ಕೊಟ್ಟಿದ್ದಾರೆ.

    ಖಾಲಿ ಕ್ರೀಡಾಂಗಣ ಕೇಂದ್ರಕ್ಕೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತು ಸಂದೇಶವನ್ನು ಕಳಿಸುತ್ತದೆ. ಕೆಲವು ಸಂಘಟನೆಗಳು ಪಂದ್ಯ ನಡೆಯುವ ವೇಳೆ ಕಪ್ಪು ಬಾವುಟ ಪ್ರದರ್ಶನಕ್ಕೆ ಸಜ್ಜಾಗಿವೆ.

    ಅಹಿತಕರ ಘಟನೆ ನಡೆಯದಂತೆ ತಡೆಯಲು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಪ್ರೇಕ್ಷಕರಿಗೆ ಬ್ಯಾನರ್, ಮೊಬೈಲ್ ಪೋನ್, ಕ್ಯಾಮೆರಾಗಳನ್ನು ಕ್ರೀಡಾಂಗಣದೊಳಗೆ ನಿಷೇಧಿಸಲಾಗಿದೆ. ಅವಾಚ್ಯ ಶಬ್ದಗಳನ್ನು ಬಳಸುವಂತಿಲ್ಲ ಎಂದು ಎಚ್ಚರಿಕೆ ಕೊಡಲಾಗಿದೆ. ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಕಾವೇರಿ ಪ್ರತಿಭಟನೆ ನಡೆಯುತ್ತಿರುವಾಗಲೇ ಐಪಿಎಲ್ ಪಂದ್ಯ ಆಯೋಜನೆ ಮಾಡಿರುವುದು ಮುಜುಗರದ ಸಂಗತಿಯಾಗಿದೆ. ಪಂದ್ಯಗಳನ್ನು ಆಯೋಜನೆ ಮಾಡದಂತೆ ಸೂಪರ್ ಸ್ಟಾರ್ ರಜನಿಕಾಂತ್ ಮನವಿ ಮಾಡಿದ್ದರು. ಕಾವೇರಿ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಪ್ಪು ಪಟ್ಟಿ ಧರಿಸುವುದರ ಮೂಲಕ ಪ್ರತಿಭಟನೆಗೆ ಬೆಂಬಲ ತೋರಿಸುವಂತೆ ತಿಳಿಸಿದ್ದರು. ಪ್ರೇಕ್ಷಕರು ಕೂಡ ಕಪ್ಪು ಬಟ್ಟೆ ಧರಿಸಿ ನೋಡುವುದರ ಮೂಲಕ ಪ್ರತಿಭಟನೆಗೆ ಬೆಂಬಲ ನೀಡವಂತೆ ತಿಳಿಸಿದ್ದರು.

    ರಾಜಕಾರಣ ಕ್ರೀಡೆ ಎರಡೂ ಬೇರೆ. ರೈತರ ಬಗ್ಗೆ ನಮಗೆ ಕನಿಕರ ಇದೆ. ಪಂದ್ಯಗಳನ್ನು ರದ್ದುಮಾಡುವುದು ಕಾವೇರಿ ಸಮಸ್ಯೆಗೆ ಉತ್ತರ ಅಲ್ಲ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.

    ಇಂದು ಚೆನ್ನೈ ಸೂಪರ್ ಕಿಂಗ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ ಸಂಜೆ 8 ಗಂಟೆಗೆ ಚೆಪಕ್ ಕ್ರೀಡಾಂಗಣದಲ್ಲಿ ನಡೆಯಲಿದೆ.