Tag: Chennaveera Kanavi

  • ಗೋವಾ ರಸ್ತೆಯ ಸೃಷ್ಟಿ ಫಾರ್ಮ್‍ನಲ್ಲಿ ಚೆನ್ನವೀರ ಕಣವಿ ಅಂತ್ಯಕ್ರಿಯೆ

    ಗೋವಾ ರಸ್ತೆಯ ಸೃಷ್ಟಿ ಫಾರ್ಮ್‍ನಲ್ಲಿ ಚೆನ್ನವೀರ ಕಣವಿ ಅಂತ್ಯಕ್ರಿಯೆ

    ಧಾರವಾಡ: ಹಿರಿಯ ಕವಿ ನಾಡೋಜ ಡಾ. ಚೆನ್ನವೀರ ಕಣವಿ ವಿಧಿವಶ ಹಿನ್ನೆಲೆಯಲ್ಲಿ ಸಂಜೆ ತೋಟದ ಮನೆಯಲ್ಲಿ ಅಂತ್ಯಕ್ರಿಯೆ ಮಾಡುವುದಾಗಿ ಚೆನ್ನವೀರ ಕಣವಿ ಪುತ್ರ ಪ್ರಿಯದರ್ಶಿ ತಿಳಿಸಿದ್ದಾರೆ.

    ಕಳೆದ ಜನವರಿ 15 ರಂದು ಅನಾರೋಗ್ಯದ ಕಾರಣ ಚೆನ್ನವೀರ ಕಣವಿ ಧಾರವಾಡ ಎಸ್‍ಡಿಎಂ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನಂತರ ಅವರಿಗೆ ಕೊರೊನಾ ಪಾಸಿಟಿವ್ ಕೂಡಾ ಬಂದಿತ್ತು. ಈ ಹಿನ್ನೆಲೆ ಅವರಿಗೆ ಐಸಿಯುದಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ತದನಂತರ ಕೊರೊನಾ ನೆಗೆಟಿವ್ ಬಂದ ಮೇಲೂ ಉಸಿರಾಟದ ತೊಂದರೆ ಹಾಗೂ ಕಿಡ್ನಿ ಸಮಸ್ಯೆಯಿಂದ ಕಣವಿ ಆಸ್ಪತ್ರೆಯಲ್ಲೇ ದಾಖಲಾಗಿದ್ದರು. ಆದರೆ ಇಂದು ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಚೆಂಬೆಳಕಿನ ಕವಿಯನ್ನು ಸಿನಿಮಾ ರಂಗ ಅಪ್ಪಿಕೊಳ್ಳಲಿಲ್ಲ

    ಕುಟುಂಬದವರು ಎಲ್ಲರೂ ಚೆನ್ನವೀರ ಕಣವಿ ಅವರ ಅಂತ್ಯಕ್ರಿಯೆ ಸೃಷ್ಟಿ ತೋಟದಲ್ಲಿರುವ ಕಣವಿ ಅವರ ಪತ್ನಿ ಶಾಂತಾದೇವಿ ಕಣವಿ ಅವರ ಸಮಾಧಿ ಪಕ್ಕದಲ್ಲೇ ಮಾಡುವುದಾಗಿ ನಿರ್ಧಾರ ಮಾಡಿದ್ದಾರೆ. ಇನ್ನು ಆಸ್ಪತ್ರೆಯಿಂದ ಧಾರವಾಡ ಕಲ್ಯಾಣನಗರದ ಮನೆಗೆ ಪಾರ್ಥಿವ ಪೂಜೆ ಮಾಡಿದ ನಂತರ, ಕಣವಿ ಅವರ ಪಾರ್ಥಿವ ಶರೀರವನ್ನು ಕೆಸಿಡಿ ಮೈದಾನಕ್ಕೆ ತಂದು ಅಂತಿಮ ದರ್ಶನಕ್ಕೆ ಇಡಲಾಗಿದೆ. ಇದನ್ನೂ ಓದಿ: ಸುನೀತಗಳ ಸಾಮ್ರಾಟ್ ಚನ್ನವೀರ ಕಣವಿ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು

  • ಸುನೀತಗಳ ಸಾಮ್ರಾಟ್ ಚನ್ನವೀರ ಕಣವಿ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು

    ಸುನೀತಗಳ ಸಾಮ್ರಾಟ್ ಚನ್ನವೀರ ಕಣವಿ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು

    ಬೆಂಗಳೂರು: ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ್ ಎಂದು ಪ್ರಸಿದ್ಧರಾದ, ಚೆಂಬೆಳಕಿನ ಕವಿ ನಾಡೋಜ ಚನ್ನವೀರ ಕಣವಿ ಅವರ ನಿಧನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

    ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿದ ಟಿ.ಎಸ್.ನಾಗಾಭರಣ ಅವರು, ಕನ್ನಡದ ಖ್ಯಾತ ವಿದ್ವಾಂಸ ಮತ್ತು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದ ಚನ್ನವೀರ ಕಣವಿ ಅವರು ಧಾರವಾಡದ ಮಾಧ್ಯಮಿಕ ಹಾಗೂ ಕಾಲೇಜು ಶಿಕ್ಷಣ ಪೂರೈಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದು ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾಲಯದ ಪ್ರಸಾರಂಗ ವಿಭಾಗದ ಕಾರ್ಯದರ್ಶಿಯಾಗಿದ್ದರು. ಕನ್ನಡ ಸಾಹಿತ್ಯ ಲೋಕದಲ್ಲಿ ಸ್ನೇಹ, ಪ್ರೀತಿ, ಸೌಜನ್ಯ, ಮಾನವೀಯ ಅಂತಃಕರಣದ ಕವಿಯಾಗಿ ಪ್ರಸಿದ್ಧರಾದ ನಾಡಿನ ಹಿರಿಯ ಸಾಹಿತಿ ನವೋದಯ ಮತ್ತು ನವ್ಯದ ಕೊಂಡಿಯಂತೆ ಚನ್ನವೀರ ಕಣವಿ ಅವರು ಸಾಹಿತ್ಯ ಲೋಕಕ್ಕೆ ಅನನ್ಯ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ಚೆಂಬೆಳಕಿನ ಕವಿಯನ್ನು ಸಿನಿಮಾ ರಂಗ ಅಪ್ಪಿಕೊಳ್ಳಲಿಲ್ಲ

    ಬೇಂದ್ರೆ, ಕುವೆಂಪು, ಪು.ತಿ.ನ ಮೊದಲಾದವರು ಹೊಸದಾಗಿ ಕಾವ್ಯ ರಚನೆಗೆ ತೊಡಗುವವರನ್ನು ಗಾಢವಾಗಿ ಪ್ರಭಾವಿಸುತ್ತಿದ್ದ ಕಾಲದಲ್ಲಿ ಚನ್ನವೀರ ಕಣವಿಯವರು ಬರವಣಿಗೆಯಲ್ಲಿ ತೊಡಗಿದ್ದರು. ನವೋದಯ ನಡುಹಗಲ ಕಾಲದಲ್ಲಿ ಕವಿಯಾಗಿ ಕಣವಿ ಪ್ರಕಟವಾಗಿದ್ದರು. ನವ್ಯ ಕಾವ್ಯದಿಂದಾಗಿ ರೂಪುಗೊಂಡ ಮುಕ್ತ ಛಂದಸ್ಸು, ವಾಸ್ತವ, ಸಾಮಾಜಿಕ ಎಚ್ಚರ, ವ್ಯಂಗ್ಯ ವಿಡಂಬನೆಗಳ ಬಗ್ಗೆ ಕಣವಿ ಅವರು ಬರೆದಿದ್ದರೂ ಅವರ ವ್ಯಕ್ತಿತ್ವದ ಮೂಲದ್ಯವ್ಯಗಳಾದ ನಿಸರ್ಗಪ್ರಿಯತೆ, ಅನುಭಾವಿಕ ದೃಷ್ಠಿ, ಮಾನವೀಯತೆ, ಮೌಲ್ಯಪ್ರಜ್ಞೆ ಇತ್ಯಾದಿಗಳನ್ನು ಅವರು ತಮ್ಮ ಬರವಣಿಗೆಯಲ್ಲಿ ಬಿಟ್ಟು ಕೊಟ್ಟಿರಲಿಲ್ಲ. ಇದನ್ನೂ ಓದಿ: ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ವಿಧಿವಶ

    ಗೀತ ಮಾಧುರಿಯಲ್ಲಿ ಚನ್ನವೀರ ಕಣವಿ ಕವಿ ಮತ್ತು ಕವನ ದೃಶ್ಯಿಕರಿಸಿದ್ದು ನನಗೆ ಸದಾ ಸ್ಪೂರ್ತಿಧಾಯಿ. ನನಗೆ ನಿರಂತರ ಪ್ರೇರಣೆಯಾಗಿರುವ ಕವಿ ಕಣವಿ ಅವರಿಗೆ ನಮ್ಮ ನುಡಿ ನಮನಗಳು ಎಂದು ಟಿ.ಎಸ್.ನಾಗಾಭರಣ ತಿಳಿಸಿದ್ದಾರೆ.

    ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಗೌರವ, 65ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಗೌರವ, ಆಳ್ವಾಸ್-ನುಡಿಸಿರಿ ಸಮ್ಮೇಳನಾಧ್ಯಕ್ಷರ ಗೌರವಗಳಿಗೆ ಭಾಜನರಾಗಿದ್ದ ಚನ್ನವೀರ ಕಣವಿ ಅವರ ನಿಧನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಟಿ.ಎಸ್.ನಾಗಾಭರಣ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

     

    ಹೆಚ್.ಡಿ.ಕುಮಾರಸ್ವಾಮಿ ಕಂಬನಿ:
    ನಾಡೋಜ ಚನ್ನವೀರ ಕಣವಿ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕಂಬನಿ ಮಿಡಿದಿದ್ದಾರೆ. ಆಧುನಿಕ ಕನ್ನಡ ಕಾವ್ಯದ ಮೇರು ಪ್ರತಿಭೆಗಳಲ್ಲಿ ಒಬ್ಬರು, ಹೊಂಬೆಳಕಿನ ಕವಿ, ಸುನೀತಗಳ ಸಾಮ್ರಾಟರೆಂದೇ ಕನ್ನಡಿಗರ ಮನಸ್ಸುಗಳಲ್ಲಿ ತುಂಬಿಹೋಗಿರುವ ನಾಡೋಜ ಚನ್ನವೀರ ಕಣವಿ ಅವರ ನಿಧನದ ಸುದ್ದಿ ಕೇಳಿ ಆಘಾತ ಉಂಟಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಣವಿ ಅವರು ಚೇತರಿಸಿಕೊಂಡು ಕ್ಷೇಮವಾಗಿ ಮನೆಗೆ ಮರಳುತ್ತಾರೆಂಬ ನಮ್ಮೆಲ್ಲರ ನಿರೀಕ್ಷೆಯನ್ನು ಹುಸಿ ಮಾಡಿ ಅಗಲಿದ್ದಾರೆ. ಅವರಿಲ್ಲದಿರುವಿಕೆ ಕನ್ನಡ ಸಾರಸ್ವತ ಲೋಕದಲ್ಲಿ ದೊಡ್ಡ ಶೂನ್ಯವನ್ನೇ ಸೃಷ್ಟಿ ಮಾಡಿದೆ ಎನ್ನುವುದು ನನ್ನ ಅಭಿಪ್ರಾಯ.

    “ಹೂವು ಹೊರಳುವುವು ಸೂರ್ಯನ ಕಡೆಗೆ
    ನಮ್ಮ ದಾರಿ ಬರಿ ಚಂದ್ರನವರೆಗೆ
    ಇರುಳಿನ ಒಡಲಿಗೆ ದೂರದ ಕಡಲಿಗೆ
    ಮುಳುಗಿದಂತೆ ದಿನ ಬೆಳಗಿದಂತೆ
    ಹೊರ ಬರುವನು ಕೂಸಿನ ಹಾಗೆ”

    ಇಂಥ ಅನನ್ಯ ಕಾವ್ಯ ರಚಿಸಿದ ಅವರು ಅಜರಾಮರ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಕುಟುಂಬದವರು, ನಾಡಿನ ಜನರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥನೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

  • ಚೆಂಬೆಳಕಿನ ಕವಿಯನ್ನು ಸಿನಿಮಾ ರಂಗ ಅಪ್ಪಿಕೊಳ್ಳಲಿಲ್ಲ

    ಚೆಂಬೆಳಕಿನ ಕವಿಯನ್ನು ಸಿನಿಮಾ ರಂಗ ಅಪ್ಪಿಕೊಳ್ಳಲಿಲ್ಲ

    ಭಾವಗೀತೆ ಪ್ರಪಂಚವು ಚೆನ್ನವೀರ ಕಣವಿ ಅವರನ್ನು ಅಪ್ಪಿಕೊಂಡಂತೆ, ಸಿನಿಮಾ ರಂಗ ಅವರನ್ನು ತಬ್ಬಿಕೊಳ್ಳಲಿಲ್ಲ. ಕಣವಿ ಅವರ ಸಾಕಷ್ಟು ಗೀತೆಗಳು ಭಾವಗೀತೆಯ ಪ್ರಪಂಚದಲ್ಲಿ ಸದ್ದು ಮಾಡಿದರೂ, ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರು ಮಾತ್ರ, ಅವರ ಗೀತೆಗಳನ್ನು ಯಾವುದೇ ಸಿನಿಮಾಗೂ ಬಳಸಿಕೊಳ್ಳಲಿಲ್ಲ. ಅದಕ್ಕೆ ಕಾರಣವನ್ನೂ ಕಣವಿ ಅವರು ಹುಡುಕಲಿಲ್ಲ. ತಮ್ಮ ಪಾಡಿಗೆ ತಾವು ಬರೆಯುತ್ತಲೇ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದರು.

    ಈ ಕುರಿತು ಹಿರಿಯ ಸಾಹಿತಿ ಕೆ.ರಾಜಕುಮಾರ್ ಹೇಳುವುದು ಹೀಗೆ, “ಕಣವಿ ಅವರು ನಮ್ಮ ನಡುವಿನ ಭಾವಜೀವಿ. ಅವರು ಬದುಕನ್ನು ನೋಡಿದ ರೀತಿಯೇ ಸೊಗಸಾಗಿತ್ತು. ಹಾಗಾಗಿ ಸಿನಿಮಾ ಸಾಹಿತ್ಯಕ್ಕೆ ಹೇಳಿ ಮಾಡಿಸಿದ್ದ ಬರಹಗಾರ ಅವರಾಗಿದ್ದರು. ಭಾವಗೀತೆಯ ಲೋಕದಲ್ಲಿ ಕಣವಿ ಅವರದ್ದು ದೊಡ್ಡ ಹೆಸರಿದ್ದರೂ, ಅವರು ಸಿನಿಮಾಗಾಗಿ ನೇರವಾಗಿ ಬರೆಯಲಿಲ್ಲ. ಅವರ ಗೀತೆಗಳನ್ನೂ ಸಿನಿಮಾ ರಂಗ ತಗೆದುಕೊಳ್ಳಲಿಲ್ಲ. ನಿಜಕ್ಕೂ ಇದೊಂದು ನೋವಿನ ಸಂಗತಿ. ಅವರ ಅನೇಕ ಗೀತೆಗಳು ಈವರೆಗೂ ಬಂದಿರುವ ಅನೇಕ ಸಿನಿಮಾಗಳಿಗೆ ಹೊಂದಿಕೆ ಆಗುತ್ತಿದ್ದವು. ಆದರೆ, ಯಾಕೆ ಅವುಗಳನ್ನು ಬಳಸಿಕೊಳ್ಳಲಿಲ್ಲ ಎಂದು ಈಗಲೂ ಹುಡುಕುತ್ತಿದ್ದೇನೆ’ ಎನ್ನುತ್ತಾರೆ. ಇದನ್ನೂ ಓದಿ: ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ವಿಧಿವಶ

    ‘ಏಳೆನ್ನ ಮನದನ್ನೆ’, ‘ಹೂವು ಹೊರಳುವವು’, ‘ಬಾ ಮಲ್ಲಿಗೆ ಬಾ ಮೆಲ್ಲಗೆ’, ‘ಬರುವುದೆಲ್ಲ ಬರಲಿ’, ‘ಒಂದು ಮುಂಜಾವಿನಲಿ’, ‘ಮಳೆ ಸುರಿದು’, ‘ಬಿಸಿಲೇರಿತು’ ಹೀಗೆ ನೂರಾರು ಭಾವಗೀತೆಗಳನ್ನು ಕಣವಿ ಅವರು ಬರೆದಿದ್ದಾರೆ. ಕನ್ನಡದ ಮತ್ತೊಂದು ನಾಡಗೀತೆ ಎಂದೇ ಸುಪ್ರಸಿದ್ಧಿಯಾದ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಗೀತೆಗಳು ಮನೆ ಮನದಲ್ಲಿ ನಿತ್ಯಮಂತ್ರ. ಜಿ.ವಿ. ಅತ್ರಿ ಅವರ ಕಂಠದಲ್ಲಿ ‘ಮಲ್ಲಿಗೆ ದಂಡೆ ಮತ್ತು ಏಳೆನ್ನ ಮನದನ್ನೆ’, ರತ್ನಮಾಲಾ ಪ್ರಕಾಶ್ ಹಾಡಿರುವ ‘ಸೂರ್ಯನ ಕಡೆಗೆ’, ಸಿ.ಅಶ್ವತ್ಥ್ ಸಂಯೋಜನೆಯಲ್ಲಿ ಮೂಡಿ ಬಂದ, ಬಿ.ಆರ್.ಛಾಯಾ ಹಾಡಿದ ‘ಒಂದು ಮುಂಜಾವಿನಲಿ’ ಹೀಗೆ ಸಾಕಷ್ಟು ಗೀತೆಗಳು ಜನರ ಹೃದಯದಲ್ಲಿವೆ.

  • ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ವಿಧಿವಶ

    ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ವಿಧಿವಶ

    ಧಾರವಾಡ: ಕನ್ನಡದ ಜನಪ್ರಿಯ ಹಿರಿಯ ಕವಿ ನಾಡೋಜ ಡಾ. ಚನ್ನವೀರ ಕಣವಿ(93) ನಿಧನರಾಗಿದ್ದಾರೆ.

    ಕೋವಿಡ್‌ ಸೋಂಕಿಗೆ ತುತ್ತಾಗಿದ್ದ ಕಣವಿ ಅವರನ್ನು ಜ.14 ರಂದು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

     

    ಜೂನ್ 28,1928ರಂದು ಧಾರವಾಡ ಜಿಲ್ಲೆಯ ಹೊಂಬಳದಲ್ಲಿ ಜನಿಸಿದ್ದ ಚನ್ನವೀರ ಕಣವಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಎಂಎ ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ಪ್ರಸರಣ ಮತ್ತು ಪ್ರಕಟಣಾ ವಿಭಾಗದ ಕಾರ್ಯದರ್ಶಿಯಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

    ಡಾ. ಚನ್ನವೀರ ಕಣವಿ ಮೊದಲ ಕವಲ ಸಂಕಲನ ಕಾವ್ಯಾಕ್ಷಿ 1949ರಲ್ಲಿ ಬಿಡುಗಡೆಯಾಗಿತ್ತು. ಭಾವಜೀವಿ, ಆಕಾಶಬುಟ್ಟಿ, ಮಣ್ಣಿನ ಮೆರವಣಿಗೆ, ನೆಲಮುಗಿಲು, ಜೀವಧ್ವನಿ ಮುಂತಾದ ಕವನ ಸಂಕಲನಗಳನ್ನು ಅವರು ರಚಿಸಿದ್ದಾರೆ.

  • ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ಶೀಘ್ರವೇ ಗುಣಮುಖರಾಗಲಿ: ಬೊಮ್ಮಾಯಿ

    ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ಶೀಘ್ರವೇ ಗುಣಮುಖರಾಗಲಿ: ಬೊಮ್ಮಾಯಿ

    ಧಾರವಾಡ: ಕನ್ನಡದ ಜನಪ್ರಿಯ ಹಿರಿಯ ಕವಿ ನಾಡೋಜ ಡಾ. ಚನ್ನವೀರ ಕಣವಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಚೆನ್ನವೀರ ಕಣವಿ ಅವರು ಬೇಗ ಗುಣಮುಖರಾಗಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟ್ವೀಟ್ ಮಾಡುವ ಮೂಲಕ ಹಾರೈಸಿದ್ದಾರೆ.

    ಸದ್ಯ ಈ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ  ಅವರು, ನಾಡಿನ ಹಿರಿಯ ಸಾಹಿತಿ, ಕವಿ, ನಾಡೋಜ ಡಾ. ಚನ್ನವೀರ ಕಣವಿ ಅವರು ಉಸಿರಾಟದ ತೊಂದರೆಯಿಂದ ಧಾರವಾಡದ ಎಸ್‍ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಅವರ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದೆ. ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಡಾ. ಚನ್ನವೀರ ಕಣವಿ ಅವರು ಶೀಘ್ರವಾಗಿ ಗುಣಮುಖರಾಗಲೆಂದು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ಮಿಸೆಸ್ ವರ್ಲ್ಡ್ 2022 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ನವ್ದೀಪ್ ಕೌರ್

    ಮತ್ತೊಂದೆಡೆ ಜಗದೀಶ್ ಶೆಟ್ಟರ್ ಅವರು, ಹಿರಿಯ ಕವಿಗಳಾದ ನಾಡೋಜ ಡಾ. ಚನ್ನವೀರ ಕಣವಿ ಅವರಿಗೆ ಉಸಿರಾಟದ ಸಮಸ್ಯೆ ಹಾಗೂ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆ ಧಾರವಾಡದ ಎಸ್.ಡಿ.ಎಮ್. ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದು ಸಮಾಧಾನಕರ. ಅವರು ಶೀಘ್ರದಲ್ಲೇ ಸಂಪೂರ್ಣ ಗುಣಮುಖರಾಗಲಿ ಎಂದು ಪ್ರಾರ್ಥಿಸುವೆ ಎಂದು ಟ್ವೀಟ್ ಮಾಡಿದ್ದಾರೆ.

    ಕವಿ ನಾಡೋಜ ಡಾ. ಚನ್ನವೀರ ಕಣವಿ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಜನವರಿ 14ರಂದು ಧಾರವಾಡದ ಎಸ್‍ಡಿಎಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಚನ್ನವೀರ ಕಣವಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಆರೋಗ್ಯ ಸ್ಥಿರವಾಗಿದೆ. ಹೆಚ್ಚಿನ ನಿಗಾವಹಿಸಲು ಐಸಿಯುಗೆ ವರ್ಗಾಯಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮಗು ಪಡೆಯುವುದು ನಮ್ಮ ಜೀವನದ ಅತಿ ದೊಡ್ಡ ಕನಸು: ಪ್ರಿಯಾಂಕಾ ಚೋಪ್ರಾ

  • ನಾಡೋಜ ಚನ್ನವೀರ ಕಣವಿಗೆ ಕೊರೊನಾ ಪಾಸಿಟಿವ್

    ನಾಡೋಜ ಚನ್ನವೀರ ಕಣವಿಗೆ ಕೊರೊನಾ ಪಾಸಿಟಿವ್

    ಧಾರವಾಡ: ಹಿರಿಯ ಕವಿ ನಾಡೋಜ ಚನ್ನವೀರ‌ ಕಣವಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಚೆಂಬೆಳಕಿನ ಕವಿ ಎಂದೇ ಖ್ಯಾತಿ‌ ಪಡೆದಿರುವ 93 ವರ್ಷದ ಕಣವಿ, ಅನಾರೋಗ್ಯದ ಕಾರಣ ಖಾಸಗಿ ಆಸ್ಪತ್ರೆಗೆ ತಪಾಸಣೆಗೆ ಹೋಗಿದ್ದರು. ಈ ವೇಳೆ ಕೊರೊನಾ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ. ಇದನ್ನೂ ಓದಿ: ರಾಜ್ಯದಲ್ಲಿ ಲಾಕ್‌ಡೌನ್‌ ಇಲ್ಲವೇ ಇಲ್ಲ: ಸಚಿವ ಸುಧಾಕರ್‌ ಸ್ಪಷ್ಟನೆ

    ಸದ್ಯ ಚನ್ನವೀರ ಕಣವಿ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಪ್ರತಿ ದಿನ 100 ಇದ್ದ ಕೊರೊನಾ ಕೇಸ್ ಈಗ 400ರ ಗಡಿಗೆ ಬಂದು ತಲುಪಿದೆ. ಇದನ್ನೂ ಓದಿ: ಬೂಸ್ಟರ್‌ ಡೋಸ್ ಪಡೆದ ರಾಜ್ಯಪಾಲ – ಲಸಿಕೆ ಪಡೆಯಲು ಜನತೆಗೆ ಕರೆ

    ಗುರುವಾರ ಧಾರವಾಡದಲ್ಲಿ 399 ಮಂದಿಗೆ ಸೋಂಕು ಬಂದಿತ್ತು. ಸದ್ಯ 1,097 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿದೆ.

  • ಜ್ಞಾನಪೀಠ ಯಾರಿಗೆ ಸಿಕ್ಕರೂ ಸಂತೋಷ: ಹಿರಿಯ ಕವಿ ಚನ್ನವೀರ ಕಣವಿ

    ಜ್ಞಾನಪೀಠ ಯಾರಿಗೆ ಸಿಕ್ಕರೂ ಸಂತೋಷ: ಹಿರಿಯ ಕವಿ ಚನ್ನವೀರ ಕಣವಿ

    ಧಾರವಾಡ: ಜ್ಞಾನಪೀಠ ಪ್ರಶಸ್ತಿ ನನಗೆ ಸಿಕ್ಕರು, ಬೇರೆಯವರಿಗೆ ಸಿಕ್ಕರೂ ಸಂತೋಷ ಎಂದು ಹಿರಿಯ ಕವಿ ಚನ್ನವೀರ ಕಣವಿ ಹೇಳಿದ್ದಾರೆ.

    ಜ್ಞಾನಪೀಠ ಪ್ರಶಸ್ತಿಗೆ ಹೆಸರು ಶಿಫಾರಸ್ಸು ಮಾಡಿರುವ ವಿಚಾರವಾಗಿ ಧಾರವಾಡದಲ್ಲಿ ಹಿರಿಯ ಕವಿ ಚನ್ನವೀರ ಕಣವಿ ಮಾತನಾಡಿದ್ದು, ನನ್ನ ಹೆಸರು ಶಿಫಾರಸ್ಸು ಮಾಡಿದ್ದಕ್ಕೆ ನನಗೆ ಪ್ರಶಸ್ತಿ ಸಿಗುತ್ತೆ ಅಂತಾ ಅಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಳಗಡೆ ಇರೋ ವಸ್ತುಗಳನ್ನು ನೋಡಿ ರೆಸಿಪಿ ವಿವರ ನೀಡಲಿದೆ ಅಮೆಜಾನ್‌ ಸ್ಮಾರ್ಟ್‌ ಫ್ರಿಡ್ಜ್‌

    ಹೆಸರು ಶಿಫಾರಸ್ಸು ಮಾಡಿರುತ್ತಾರೆ. ಯಾರಿಗಾದರೂ ಒಬ್ಬರಿಗೆ ಪ್ರಶಸ್ತಿ ಕೊಡುತ್ತಾರೆ. ಶಿಫಾರಸ್ಸು ಮಾಡಿದ್ದಕ್ಕೆ ಪ್ರಶಸ್ತಿ ಬರುತ್ತದೆ ಅಂತಾ ಅಲ್ಲಾ. ಇನ್ನು ಪ್ರಶಸ್ತಿ ನನಗೆ ಬಂದರೂ ಸಂತೋಷ ಹೇಳಬಹುದು, ವೀರಪ್ಪ ಮೊಯ್ಲಿ ಹಾಗೂ ಎಸ್ ಎಲ್ ಭೈರಪ್ಪ ಯಾರಿಗೆ ಸಿಕ್ಕರೂ ಸಂತೋಷ. ನನಗೆ ಸಿಗಬೇಕು ಅಂತಾ ಏನಿಲ್ಲ. ಜನರು ಪ್ರಶಸ್ತಿ ನನಗೆ ಸಿಗಬೇಕು ಎನ್ನುವ ಮಾತಿನಲ್ಲಿ ಹುರುಳಿಲ್ಲ ಎಂದಿದ್ದಾರೆ. ಇದನ್ನೂ ಓದಿ:RSS ಜಾತಿ, ಧರ್ಮ ಮೀರಿದ ಮಾತೃಹೃದಯಿ ಸಂಘಟನೆ: ಜಗ್ಗೇಶ್