ಚೆನ್ನೈ: ಐಪಿಎಲ್‍ನ ಯಶಸ್ವಿ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದ ಸುರೇಶ್ ರೈನಾ ಸಿಎಸ್‍ಕೆ ಪರ ಹಲವು ದಾಖಲೆಯ ಒಡೆಯ. ಆದರೆ 15ನೇ ಆವೃತ್ತಿ ಐಪಿಎಲ್‍ಗೂ ಮುನ್ನ ಸಿಎಸ್‍ಕೆ ಅವರನ್ನು ಹರಾಜಿಗೆ ಬಿಟ್ಟುಕೊಟ್ಟಿದೆ. ಹಾಗಾಗಿ ಈ ರನ್ ಮೆಷಿನ್ ಮೇಲೆ ಹಲವು ಫ್ರಾಂಚೈಸಿಗಳು ಕಣ್ಣಿಟ್ಟಿದೆ.

ಸಿಎಸ್‍ಕೆ ತಂಡ ಐಪಿಎಲ್ ಇತಿಹಾಸದಲ್ಲಿ ನಾಲ್ಕು ಬಾರಿ ಚಾಂಪಿಯನ್ ಆಗಿದೆ. ಈ ನಾಲ್ಕು ಬಾರಿ ಚಾಂಪಿಯನ್ ಆದಾಗಲೂ ರೈನಾ ಸಿಎಸ್‍ಕೆ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್ ಆಗಿ ತಂಡಕ್ಕೆ ಬಲ ತುಂಬಿದ್ದರು. ಅದಲ್ಲದೆ ಚೆನ್ನೈ ಪರ 171 ಪಂದ್ಯಗಳಿಂದ 1 ಶತಕ ಮತ್ತು 33 ಅರ್ಧಶತಕ ಸಹಿತ 4,687 ರನ್ ಗಳಿಸಿದ್ದಾರೆ. ಇದು ಸಿಎಸ್‍ಕೆ ತಂಡದಲ್ಲಿದ್ದ ಆಟಗಾರನ ವ್ಯಯಕ್ತಿಕ ಹೆಚ್ಚು ರನ್, ಅದೇ ರೀತಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಆಟಗಾರ ಕೂಡ ರೈನಾ. ಇಷ್ಟು ಮಾತ್ರವಲ್ಲದೆ ರೈನಾ ಬ್ಯಾಟಿಂಗ್ ಜೊತೆಗೆ ಅದ್ಭುತ ಫೀಲ್ಡಿಂಗ್ ಕೂಡ ಮಾಡಿದ್ದಾರೆ. ಸಿಎಸ್‍ಕೆ ಪರ ಪರ ಅತಿ ಹೆಚ್ಚು ಕ್ಯಾಚ್ ಪಡೆದ ದಾಖಲೆ ಕೂಡ ರೈನಾ ಹೆಸರಲ್ಲೇ ಇದೆ. ಇದನ್ನೂ ಓದಿ: ಬೌಲ್ಡಾದರೂ DRS ಮೊರೆ ಹೋಗಿ ಲೆಜೆಂಡ್ ಎನಿಸಿಕೊಂಡ ಅಶ್ವಿನ್

ಸಿಎಸ್‍ಕೆ ತಂಡಕ್ಕಾಗಿ ಇಷ್ಟೆಲ್ಲ ಸಾಧನೆ ಮಾಡಿದರೂ ಕೂಡ ರೈನಾರನ್ನು ಚೆನ್ನೈ ತಂಡ ಈ ಬಾರಿ ಮೆಗಾ ಹರಾಜಿಗೆ ಬಿಟ್ಟುಕೊಟ್ಟಿದೆ. ಇದೀಗ ರೈನಾರನ್ನು ಖರೀದಿಸಲು ಯಾವ ತಂಡ ಮುಂದೆಬರಲಿದೆ, ಹರಾಜಿನಲ್ಲಿ ಯಾವ ತಂಡ ರೈನಾ ಮೇಲೆ ಹಣ ಸುರಿಯಲಿದೆ ಎಂಬುದನ್ನು ನೋಡಲು ಜನವರಿ ವರೆಗೆ ಕಾಯಬೇಕಾಗಿದೆ. ಇದನ್ನೂ ಓದಿ: NCA ಮುಖ್ಯಸ್ಥರಾಗಿ ಲಕ್ಷ್ಮಣ್ ಡಿ.13ಕ್ಕೆ ಪದಗ್ರಹಣ







