ತಮಿಳು ಚಿತ್ರೋದ್ಯಮದಲ್ಲಿ ಡ್ರಗ್ಸ್ ಹವಾ ಜೋರಾಗಿದೆ. ಪೆಡ್ಲರ್ ಪ್ರಸಾದ್ ಬಂಧನವಾದ ನಂತರ, ಆತ ಯಾರಿಗೆಲ್ಲ ಡ್ರಗ್ಸ್ ಸರಬರಾಜು ಮಾಡುತ್ತಿದ್ದೆ ಅಂತ ಬಾಯ್ಬಿಟ್ಟಿದ್ದ. ಪ್ರಸಾದ್ ಹೇಳಿಕೆಯನ್ನು ಗಂಭೀರವಾಗಿ ತಗೆದುಕೊಂಡಿದ್ದ ಚೆನ್ನೈ ಪೊಲೀಸರು, ನಟ ಶ್ರೀಕಾಂತ್ ಮನೆಯ ಮೇಲೆ ದಾಳಿ ಮಾಡಿದ್ದರು. ಶ್ರೀಕಾಂತ್ ರನ್ನು ವಿಚಾರಣೆ ಒಳಪಡಿಸಿದಾಗ ನಲವತ್ತಕ್ಕೂ ಹೆಚ್ಚು ಬಾರಿ ಡ್ರಗ್ಸ್ ಸೇವಿಸಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು.
ವಿಚಾರಣೆಯ ನಂತರ ಪೊಲೀಸರು ಶ್ರೀಕಾಂತ್ ರನ್ನು ಬಂಧಿಸಿದ್ದರು. ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಶ್ರೀಕಾಂತ್ ಕೂಡ ಹಲವು ನಟರ ಹೆಸರುಗಳನ್ನು ಬಾಯ್ಬಿಟ್ಟಿದ್ದ ಎಂದು ಹೇಳಲಾಗುತ್ತಿದೆ. ಶ್ರೀಕಾಂತ್ ಬಂಧನದ ನಂತರ ನಟ ಕೃಷ್ಣರನ್ನು ಪೊಲೀಸರು ಬಂಧಿಸಿದ್ದಾರೆ. ಕೃಷ್ಣ ಕೂಡ ಡ್ರಗ್ಸ್ ಖರೀದಿಸಿದ್ದರು ಎಂದು ಹೇಳಲಾಗುತ್ತಿದೆ.
ತಮಿಳು ಚಿತ್ರೋದ್ಯಮದಲ್ಲಿ ಡ್ರಗ್ಸ್ ಪ್ರಕರಣ ತೀವ್ರ ಸಂಚಲನವನ್ನೇ ಉಂಟು ಮಾಡಿದೆ. ಇನ್ನೂ ಕೆಲವು ನಟರು ಮತ್ತು ನಟಿಯರು ಹಾಗೂ ತಂತ್ರಜ್ಞರು ಈ ಡ್ರಗ್ಸ್ ಜಾಲದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಚೆನ್ನೈ ಪೊಲೀಸರು ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
– ಪತ್ನಿಗೆ ಅಕ್ರಮ ಸಂಬಂಧವಿದೆ – ಪತಿಯಿಂದ ಆರೋಪ – ಪತಿಗೆ ಸೆಕ್ಸ್ ವೀಡಿಯೋ ಮಾಡುವ ಚಟವಿದೆ ಎಂದ ಪತ್ನಿ
ಚೆನ್ನೈ: ಪತ್ನಿಗೆ 9 ಕೋಟಿ ಜೀವನಾಂಶ, ತಿಂಗಳಿಗೆ 4 ಲಕ್ಷ ರೂ.ಗಳನ್ನು ನಾನು ನೀಡಬೇಕೆಂದು ಟೆಕ್ಕಿಯೊಬ್ಬರು (Techie) ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು ಸಂಚಲನ ಮೂಡಿಸಿದೆ.
ಪತ್ನಿ ಹಾಗೂ ಚೆನ್ನೈ ಪೊಲೀಸರು (Chennai) ನನಗೆ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ ಆಕೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಟೆಕ್ಕಿ ಶಂಕರ್ ಆರೋಪಿಸಿದ್ದಾರೆ. ಈ ವಿಡಿಯೋ 8.6 ಮಿಲಿಯನ್ ವೀಕ್ಷಣೆ ಪಡೆದಿದೆ. ಇದನ್ನೂ ಓದಿ: ಸಂಸದರ ಸಂಬಳ 24% ಏರಿಕೆ – ಈಗ ಎಷ್ಟಿದೆ? ಎಷ್ಟು ಏರಿಕೆಯಾಗಿದೆ?
ಟೆಕ್ಕಿ ಶಂಕರ್ ತಿರುಚ್ಚಿಯ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಿಂದ ಪದವಿ ಪಡೆದು, ಸಿಂಗಾಪುರ (Singapore) ಮೂಲದ ಕ್ರಿಪ್ಟೋ ಸೋಷಿಯಲ್ ನೆಟ್‌ವರ್ಕ್‌ನ ಸಂಸ್ಥಾಪಕರಾಗಿದ್ದಾರೆ. ಶಂಕರ್ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದುಕೊಂಡ ಬಳಿಕ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು.
ಈ ಬೆನ್ನಲ್ಲೇ ಪತ್ನಿ ನನ್ನ ಮೇಲೆ ಕೌಟುಂಬಿಕ ಹಿಂಸಾಚಾರದ ಆರೋಪ ಹೊರಿಸಿ ಅಮೆರಿಕದಲ್ಲಿ ದೂರು ದಾಖಲಿಸಿದ್ದಾಳೆ. ಭಾರತಕ್ಕಿಂತ ಅಮೆರಿಕದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೂಲಕ ಆಕೆ ಲಾಭ ಪಡೆಯಲು ಪ್ರಯತ್ನಿಸಿದ್ದಾಳೆ ಎಂದು ಪತಿ ಶಂಕರ್ ದೂರಿದ್ದಾರೆ. ಇದನ್ನೂ ಓದಿ: ರೀಲ್ಸ್ ತಂದ ಆಪತ್ತು- ರಜತ್, ವಿನಯ್ ಅರೆಸ್ಟ್
ತನ್ನ ಪತ್ನಿ 9 ವರ್ಷದ ಮಗನನ್ನು ಅಮೆರಿಕಕ್ಕೆ (America) ಅಪಹರಿಸಿದ್ದಾರೆ ಎಂದು ಶಂಕರ್ ಆರೋಪಿಸಿ, ಅಂತರಾಷ್ಟ್ರೀಯ ಮಕ್ಕಳ ಅಪಹರಣ ಪ್ರಕರಣ ದಾಖಲಿಸಿದ್ದರು. ಅಮೆರಿಕದ ನ್ಯಾಯಾಲಯವು ನನ್ನ ಪರವಾಗಿ ತೀರ್ಪು ನೀಡಿತ್ತು. ಬಳಿಕ ಒಪ್ಪಂದಕ್ಕೆ ಸಹಿ ಹಾಕಿದ್ದೆವು. ಒಪ್ಪಂದದ ಪ್ರಕಾರ, ಪತ್ನಿಗೆ ತಿಂಗಳಿಗೆ 9 ಕೋಟಿ ರೂ. ಹಾಗೂ 4.3 ಲಕ್ಷ ರೂ.ಗಳನ್ನು ನೀಡಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಪತ್ನಿ ರಾಧಿಕಾ ಪಂಡಿತ್ ಜೊತೆ ಮುಂಬೈನಲ್ಲಿ ಯಶ್
ಒಪ್ಪಂದಕ್ಕೆ ಇಬ್ಬರು ಸಹಿ ಹಾಕಿದ್ದರೂ ಪತ್ನಿ ಪುತ್ರನ ಪಾಸ್‌ಪೋರ್ಟ್ ಹಂಚಿಕೆಯ ಲಾಕರ್‌ನಲ್ಲಿ ಇಡುವುದಕ್ಕೆ ಸಂಬಂಧಿಸಿದಂತೆ ಪಾಲಿಸಲು ನಿರಾಕರಿಸಿದ್ದಾರೆ. ಇದು ಈಗ ಮತ್ತಷ್ಟು ಕಾನೂನು ಸಮಸ್ಯೆಗಳಿಗೆ ಕಾರಣವಾಯಿತು ಎಂದು ಶಂಕರ್ ಆರೋಪಿಸಿದ್ದಾರೆ.
ಪತ್ನಿಯ ದೂರಿನ ಆಧಾರದ ಮೇಲೆ ಈಗ ಚೆನ್ನೈ ಪೊಲೀಸರು ನನ್ನನ್ನು ಟ್ರ್ಯಾಕ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಬೆಂಗಳೂರಿನಲ್ಲಿರುವ ತನ್ನ ಸ್ನೇಹಿತ ಗೋಕುಲ್ ಮನೆ ಮೇಲೆ ಚೆನ್ನೈ ಪೊಲೀಸರು ವಾರಂಟ್ ಇಲ್ಲದೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ ಎಂದು ದೂರಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಪೋಷಕರ ವಿರೋಧದ ನಡ್ವೆ ಹಿಂದೂ ಯುವಕ – ಮುಸ್ಲಿಂ ಯುವತಿ ಪ್ರೇಮ ವಿವಾಹ
ಪತ್ನಿ ದಿವ್ಯಾ ಹೇಳೋದು ಏನು?
ತೆರಿಗೆ ತಪ್ಪಿಸಲು ಶಂಕರ್ ತಮ್ಮ ಆಸ್ತಿಗಳನ್ನು ತನ್ನ ತಂದೆಯ ಹೆಸರಿಗೆ ವರ್ಗಾಯಿಸಿದ್ದಾರೆ. ಶಂಕರ್ ಅವರ ತಂದೆ ಈ ಆಸ್ತಿಗಳನ್ನು ಥೈಲ್ಯಾಂಡ್‌ನಲ್ಲಿರುವ ತಮ್ಮ ಶಂಕರ್ ಸಹೋದರನಿಗೆ ವರ್ಗಾಯಿಸಿದ್ದಾರೆ.
ಅಮೆರಿಕದಲ್ಲಿ ತೆರಿಗೆ ಅಪರಾಧಗಳನ್ನು ವರದಿ ಮಾಡದಂತೆ ದಾಖಲೆಗಳಿಗೆ ಸಹಿ ಹಾಕುವಂತೆ ನನಗೆ ಬೆದರಿಕೆ ಹಾಕಿದ್ದರು. ಈ ತೆರಿಗೆ ಅಪರಾಧದ ಬಗ್ಗೆ ನಾನು ದೂರು ನೀಡಬಾರದು ಎಂದು ಹೇಳಿ ಅವರು ಬೆದರಿಕೆ ಹಾಕಿ ನನ್ನ ಸಹಿಯನ್ನು ತೆಗೆದುಕೊಂಡರು. ನಂತರ ನಾವು ಭಾರತಕ್ಕೆ ಬಂದೆವು. ಶಾಂತಿಯುತವಾಗಿ ಬದುಕಲು ಯೋಚಿಸಿದೆ ಆದರೆ ಅವರು ಅದಕ್ಕೂ ಅವಕಾಶ ನೀಡುತ್ತಿಲ್ಲ. ಇದನ್ನೂ ಓದಿ: ಕೇರಳ | ಆತ್ಮಹತ್ಯೆಗೆ ಯತ್ನಿಸಿ ಕೋಮಾದಲ್ಲಿದ್ದ ವಿದ್ಯಾರ್ಥಿನಿ 3 ತಿಂಗಳ ಬಳಿಕ ಸಾವು – ಹಾಸ್ಟೆಲ್ ವಾರ್ಡನ್ ವಶ
ಪತಿ ಶಂಕರ್‌ಗೆ ಸೆಕ್ಸ್ ವಿಡಿಯೋ ಮಾಡುವ ಚಟವಿತ್ತು. ಅವರು ರಹಸ್ಯವಾಗಿ ಮಹಿಳೆಯರ ವಿಡಿಯೋ ರೆಕಾರ್ಡ್ ಮಾಡಿದ್ದರು. ಅಲ್ಲದೇ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಅವರನ್ನು ಸಿಂಗಾಪುರ ಪೊಲೀಸರು ಬಂಧಿಸಿದರು. ನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಇದನ್ನೂ ಓದಿ: ಡಿಕೆಶಿ ವಿರುದ್ಧ ಹೈಕಮಾಂಡ್ ಕ್ರಮ ತೆಗೆದುಕೊಳ್ಳುತ್ತಾ: ಛಲವಾದಿ ನಾರಾಯಣಸ್ವಾಮಿ
ಗೋಕುಲ್ ಕೃಷ್ಣನ್ ತನ್ನ ಮಗನನ್ನು ಬಲವಂತವಾಗಿ ತನ್ನಿಂದ ಕಿತ್ತುಕೊಂಡರು. ನನ್ನ ಮಗನಿಗೆ ಏನಾಯಿತು ಎಂದು ನನಗೆ ತಿಳಿದಿರಲಿಲ್ಲ. ಅದಕ್ಕಾಗಿಯೇ ನಾನು ಪೊಲೀಸರಿಗೆ ದೂರು ನೀಡಿದ್ದೇನೆ ಎಂದಿದ್ದಾರೆ.
ಚೆನ್ನೈ: ಕಾಯಿಸಿದ ಕಬ್ಬಿಣ ಹಾಗೂ ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ ನೀಡಿ ಮನೆಕೆಲಸ ಮಾಡುತ್ತಿದ್ದ 15 ವರ್ಷದ ಅಪ್ರಾಪ್ತೆ ಕೊಂದು ಗಂಡ-ಹೆಂಡ0ತಿ (Chennai Couple) ಇಬ್ಬರೂ ಎಸ್ಕೇಪ್ ಆಗಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ (Chennai) ನಡೆದಿದೆ.
ತನಿಖಾಧಿಕಾರಿಗಳ ಪ್ರಕಾರ, ಅಪ್ರಾಪ್ತೆಯು ಸಾಯುವ ಮೊದಲು ಆಕೆಗೆ ಬಿಸಿ ಕಬ್ಬಿಣ ಮತ್ತು ಸಿಗರೇಟ್‌ನಿಂದ ಸುಡಲಾಗಿದೆ. ಆಕೆಯ ದೇಹದಲ್ಲಿದ್ದ ಸುಟ್ಟ ಗಾಯಗಳು ಚಿತ್ರಹಿಂಸೆಗೆ ಸಾಕ್ಷಿಯಾಗಿವೆ ಎಂದು ಹೇಳಿದ್ದಾರೆ.
ಸದ್ಯ ಬಾಲಕಿಯ ಮೃತದೇಹವನ್ನು ಕಿಲ್ಪಾಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಮರಣೋತ್ತ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ನೋ: ಅಯೋಧ್ಯೆಯ ಹಿಂದೂ ಧರ್ಮದರ್ಶಿಯೊಬ್ಬರು (Ayodhya Hindu Seer) ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ (Udhayanidhi Stalin) ಸ್ಟಾಲಿನ್ ತಲೆ ಕಡಿದು ತರುವಂತೆ 10 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ. ಪ್ರಚೋದನಕಾರಿ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ.
ಅಯೋಧ್ಯೆಯ ಧರ್ಮದರ್ಶಿ ಪರಮಹಂಸ ಆಚಾರ್ಯ, ಒಂದು ಕೈಯಲ್ಲಿ ಉದಯನಿಧಿಯ ಪೋಸ್ಟರ್, ಮತ್ತೊಂದು ಕೈಯಲ್ಲಿ ಕತ್ತಿ ಹಿಡಿದುಕೊಂಡು ಉದಯನಿಧಿ ಅವರ ಶಿರಚ್ಛೇದನವನ್ನು ಸಾಂಕೇತಿಕವಾಗಿ ಪ್ರದರ್ಶಿಸುವ ವೀಡಿಯೊವನ್ನ ಬಿಡುಗಡೆ ಮಾಡಿದ್ದಾರೆ. ಪೋಸ್ಟರ್‌ಗೆ ಬೆಂಕಿ ಹಚ್ಚುವ ದೃಶ್ಯವನ್ನೂ ವೀಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಡಿಎಂಕೆ ಸಚಿವರ ತಲೆ ಕಡಿದು ತಂದವರಿಗೆ 10 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಉದಯನಿಧಿ ಸ್ಟಾಲಿನ್, ಸ್ವಾಮೀಜಿಯೊಬ್ಬರು ನನ್ನ ತಲೆಗೆ 10 ಕೋಟಿ ರೂ. ಬೆಲೆ ಕಟ್ಟಿದ್ದಾರೆ. ಅವರು ನಿಜವಾದ ಸಂತನೋ ಅಥವಾ ನಕಲಿ ಸಂತನೋ? ನನ್ನ ತಲೆಯನ್ನ ಏಕೆ ಅಷ್ಟು ಇಷ್ಟಪಡುತ್ತೀರಿ? ನಿಮಗೆ ಇಷ್ಟು ಹಣ ಎಲ್ಲಿಂದ ಬರುತ್ತದೆ? ನನ್ನ ತಲೆ ಕೂದಲು ಬಾಚುವುದಕ್ಕೆ ಏಕೆ 10 ಕೋಟಿ ರೂ. ಘೋಷಣೆ ಮಾಡಿದ್ದೀರಿ? 10 ರೂಪಾತಿ ಬಾಚಣಿಗೆ ಕೊಟ್ಟರೆ ನಾನೇ ಬಾಚಿಕೊಳ್ಳುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: G20 ಸಭೆ ದೆಹಲಿಯಲ್ಲಿ ಹೈ ಅಲರ್ಟ್ – ಆನ್‌ಲೈನ್ ಫುಡ್, ಅಮೆಜಾನ್, ಪ್ಲಿಪ್‌ಕಾರ್ಟ್ ಹೋಂ ಡೆಲಿವರಿ ಬಂದ್
ಏನಿದು ವಿವಾದ?
ಲೇಖಕರ ಸಮಾವೇಶವೊಂದರಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವು (Sanatana Dharma) ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕೇ ಹೊರತು, ವಿರೋಧಿಸಬಾರದು. ಈ ಪರಿಕಲ್ಪನೆಯು ಅಂತರ್ಗತವಾಗಿ ಹಿಂದುಳಿದಿದೆ. ಇದು ಜಾತಿ ಮತ್ತು ಆಧಾರದ ಮೇಲೆ ಜನರನ್ನು ವಿಭಜಿಸುತ್ತದೆ. ಮೂಲಭೂತವಾಗಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತದೆ ಎಂದು ಹೇಳಿದ್ದರು. ಈ ಹೇಳಿಕೆ ನಂತರ ವಿವಾದ ಭುಗಿಲೆದ್ದಿದೆ. ಇದನ್ನೂ ಓದಿ: ಚೆನ್ನೈ ಪೊಲೀಸರಿಗೆ ಲೀಗಲ್ ನೋಟಿಸ್ – ಉದಯ್‌ನಿಧಿ ವಿರುದ್ಧ ಎಫ್‌ಐಆರ್ ದಾಖಲಿಸಲು 7 ದಿನ ಕಾಲಾವಕಾಶ
ಈ ನಡುವೆ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತಾಗಿ ದ್ವೇಷಪೂರಿತ ಭಾಷಣ ಮಾಡಿದ್ದಕ್ಕಾಗಿ ಕಾನೂನು ಹಕ್ಕುಗಳ ವೀಕ್ಷಣಾಲಯ ಸ್ವಯಂ ಪ್ರೇರಿತ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಸೋಮವಾರ ಚೆನ್ನೈನ ಪೊಲೀಸ್ ಕಮಿಷನರ್‌ಗೆ ಲೀಗಲ್ ನೋಟಿಸ್ ಕಳುಹಿಸಿದೆ.
ಚೆನ್ನೈ: ತಮಿಳುನಾಡು ಯುವಜನ ಮತ್ತು ಕ್ರೀಡಾ ವ್ಯವಹಾರಗಳ ಸಚಿವ ಹಾಗೂ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯ್‌ನಿಧಿ ಸ್ಟಾಲಿನ್ (Udhayanidhi Stalin) ಸನಾತನ ಧರ್ಮದ ಕುರಿತಾಗಿ ದ್ವೇಷಪೂರಿತ ಭಾಷಣ ಮಾಡಿದ್ದಕ್ಕಾಗಿ ಕಾನೂನು ಹಕ್ಕುಗಳ ವೀಕ್ಷಣಾಲಯ (Legal Rights Observatory) ಸ್ವಯಂ ಪ್ರೇರಿತ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಸೋಮವಾರ ಚೆನ್ನೈನ ಪೊಲೀಸ್ (Chennai Police) ಕಮಿಷನರ್‌ಗೆ ಲೀಗಲ್ ನೋಟಿಸ್ ಕಳುಹಿಸಿದೆ.
ಕೆಲವು ವಿಷಯಗಳನ್ನು ವಿರೋಧಿಸಲಾಗುವುದಿಲ್ಲ, ಅವುಗಳನ್ನು ರದ್ದುಗೊಳಿಸಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕೊರೊನಾವನ್ನು ವಿರೋಧಿಸಲು ಸಾಧ್ಯವಿಲ್ಲ, ನಾವು ಅವುಗಳನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ ನಾವು ಸನಾತನ ಧರ್ಮವನ್ನು ವಿರೋಧಿಸುವ ಬದಲು ನಿರ್ಮೂಲನೆ ಮಾಡಬೇಕಾಗಿದೆ ಎಂದು ಉದಯ್ ಸ್ಟಾಲಿನ್ ಶನಿವಾರ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.
ಉದಯ್‌ನಿಧಿ ಸ್ಟಾಲಿನ್ ಅವರ ಈ ಹೇಳಿಕೆ ದ್ವೇಷ ಭಾಷಣದ ಒಂದು ಭಾಗವಾಗಿದೆ. ಅವರ ಹೇಳಿಕೆ ಧರ್ಮದ ನೆಲೆಯಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಅವರು ಕಾರ್ಯಕ್ರಮದಲ್ಲಿ ಇಂತಹ ದ್ವೇಷದ ಭಾಷಣವನ್ನು ಮಾಡಿದ್ದು ಮಾತ್ರವಲ್ಲದೆ ಎಕ್ಸ್‌ನಲ್ಲಿಯೂ (Twitter) ಬರೆಯುವ ಮೂಲಕ ಪುನರುಚ್ಚರಿಸಿದ್ದಾರೆ ಎಂದು ಎಲ್‌ಆರ್‌ಒ ಚೆನ್ನೈ ಪೊಲೀಸರಿಗೆ ಲೀಗಲ್ ನೋಟಿಸ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಉದಯ್ ಸ್ಟಾಲಿನ್‌ದು ಹಿಟ್ಲರ್ ಮನಸ್ಥಿತಿ: ಬೊಮ್ಮಾಯಿ ವಾಗ್ದಾಳಿ
ಉದಯ್‌ನಿಧಿ ಸ್ಟಾಲಿನ್ ತನ್ನ ದ್ವೇಷ ಭಾಷಣದ ಮೂಲಕ ಭಾರತೀಯ ದಂಡಸಂಹಿತೆಯ ಸೆಕ್ಷನ್ 153 ಎ ಮತ್ತು ಬಿ, 295 ಎ, 298 ಮತ್ತು 505 ರ ಅಡಿಯಲ್ಲಿ ಅಪರಾಧಗಳನ್ನು ಎಸಗಿದ್ದಾರೆ. ಇದು ಅತ್ಯಂತ ಗಂಭೀರ ಸ್ವಭಾವದ್ದಾಗಿದೆ ಎಂದು ಹೇಳಿದೆ.
ದ್ವೇಷ ಭಾಷಣದ ಪ್ರಕರಣದಲ್ಲಿ ಆರೋಪಿಯ ಸ್ಥಿತಿಯನ್ನು ಲೆಕ್ಕಿಸದೇ ಪೊಲೀಸರು ಸ್ವಯಂ ದೂರು ದಾಖಲಿಸಿಕೊಳ್ಳಬಹುದು. ಹಾಗೂ ಯಾವುದೇ ದೂರಿಗೆ ಕಾಯುವ ಅಗತ್ಯವಿಲ್ಲ. ಸುಪ್ರೀಂ ಕೋರ್ಟ್‌ನ ಈ ನಿರ್ದೇಶನದಂತೆ ದ್ವೇಷಪೂರಿತ ಭಾಷಣ ಮಾಡಿದ ಆರೋಪಿ ಉದಯ್‌ನಿಧಿ ಸ್ಟಾಲಿನ್ ವಿರುದ್ಧ ತ್ವರಿತವಾಗಿ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಚೆನ್ನೈ ಪೊಲೀಸ್ ಆಯುಕ್ತರಿಗೆ ಲೀಗಲ್ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಮಾತ್ರವಲ್ಲದೇ ಒಂದು ವಾರದೊಳಗಾಗಿ ಉದಯ್ ಸ್ಟಾಲಿನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: ನಿಮಗೆ ತಾಕತ್, ಧಮ್ ಇದ್ರೆ ಇಸ್ಲಾಂ ಧರ್ಮದ ಬಗ್ಗೆ ಮಾತಾಡಿ: ಆಂದೋಲ ಶ್ರೀ
5 ರಾಜ್ಯಗಳಿಂದ ಬರೊಬ್ಬರಿ 28 ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಅಮೂಲ್, ತಮಿಳುನಾಡಿನಲ್ಲಿ ಇತ್ತೀಚೆಗೆ ಲಾಕ್ ಆಗಿದ್ದ. ಜೈಲು ವಾಸ ಅನುಭವಿಸಿ ರಿಲೀಸ್ ಆದ ಮರುದಿನವೇ ಬೆಂಗಳೂರಿಗೆ ಬಂದಿದ್ದಾನೆ. ಇಲ್ಲಿ ಮೂರು ದಿನಗಳಿದ್ದು, ಮತ್ತೆ ಸರಳಗಳ್ಳತನ ಮಾಡೋಕೆ ಶುರು ಮಾಡಿದ್ದ. ಇದನ್ನೂ ಓದಿ: ಚಿಲಿಯಲ್ಲಿ ನಿಗೂಢ ಸಿಂಕ್‍ಹೋಲ್ ಪತ್ತೆ – ಹೇಗೆ ಬಂತು ಅಂತ ಯಾರಿಗೂ ಗೊತ್ತಿಲ್ಲ!
ಮಹಾರಾಷ್ಟ್ರ, ಮುಂಬೈ, ಹೈದರಾಬಾದ್, ತಮಿಳುನಾಡಿನಲ್ಲಿ ಸರಗಳ್ಳತನ ಮಾಡುತ್ತಿದ್ದ ಆಸಾಮಿ ಜುಲೈ 21ರಂದು ತಮಿಳುನಾಡಿನ ಚೆನ್ನೈ ಜೈಲಿಂದ ರಿಲೀಸ್ ಆಗಿದ್ದ. ಇದಾದ ಮಾರನೇ ದಿನವೇ ಬೆಂಗಳೂರಿಗೆ ಎಂಟ್ರಿಕೊಟ್ಟ ಅಮೂಲ್ ಶಿಂಧೆ ಮೈಕೊಲೇಔಟ್ ಹಾಗೂ ಜೆ.ಪಿ.ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ. ಪ್ರಕರಣಗಳ ದಾಖಲಾದ ಕೂಡಲೇ ಅಲರ್ಟ್ ಆದ ಪೊಲೀಸರು, ಮೈಕೋಲೇಔಟ್ ಎಸಿಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Live Tv
[brid partner=56869869 player=32851 video=960834 autoplay=true]
ಚೆನ್ನೈ: ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಹಾಕುವ ಸಲುವಾಗಿ ತಮಿಳುನಾಡು ಪೊಲೀಸರು ಚೆನ್ನೈ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿಷೇಧಿಸಿದ್ದಾರೆ. ಡಿಸೆಂಬರ್ 31ರ ಮಧ್ಯರಾತ್ರಿ 12 ಗಂಟೆಯಿಂದ ಜನವರಿ 1ರ ಬೆಳಗ್ಗೆ 5 ಗಂಟೆಯವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ.
ಬೀಚ್ ಬಳಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದ್ದು, ಡಿಸೆಂಬರ್ 31 ರಂದು ರಾತ್ರಿ 9 ಗಂಟೆಯಿಂದ ಬೀಚ್ ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ಸಹ ನಿಷೇಧಿಸಲಾಗಿದೆ. ಹೊಸ ವರ್ಷದಂದು ನಗರದಲ್ಲಿ 10,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ನಿಯಮ ಉಲ್ಲಂಘನೆ ಕುರಿತಂತೆ ಪರಿಶೀಲನೆ ನಡೆಸಲಿದ್ದಾರೆ.