Tag: Chennai-Bengaluru Highway

  • ಕೋಲಾರ| ಇನ್ನೋವಾ ಕಾರ್‌ಗೆ ಬೈಕ್ ಡಿಕ್ಕಿ ಪ್ರಕರಣ – ಗಂಭೀರ ಗಾಯಗೊಂಡಿದ್ದ ಗರ್ಭಿಣಿ ಸಾವು

    ಕೋಲಾರ| ಇನ್ನೋವಾ ಕಾರ್‌ಗೆ ಬೈಕ್ ಡಿಕ್ಕಿ ಪ್ರಕರಣ – ಗಂಭೀರ ಗಾಯಗೊಂಡಿದ್ದ ಗರ್ಭಿಣಿ ಸಾವು

    – ಸಾವಿನ ಸಂಖ್ಯೆ 6ಕ್ಕೆ ಏರಿಕೆ

    ಕೋಲಾರ: ಇನ್ನೋವಾ ಕಾರ್‌ಗೆ ಬೈಕ್ ಡಿಕ್ಕಿಯಾಗಿ 5 ಜನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಗರ್ಭಿಣಿ ಮಂಗಳವಾರ ಮೃತಪಟ್ಟಿದ್ದಾರೆ.

    ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ತುಂಬು ಗರ್ಭಿಣಿ ಸುಷ್ಮಿತಾರನ್ನು (32)  ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಸುಷ್ಮಿತಾ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ವಗ್ರಾಮ ಕೆಜಿಎಫ್ (KGF) ತಾಲೂಕಿನ ಕಮ್ಮಸಂದ್ರದಲ್ಲಿ (Kammasandra) ಸುಷ್ಮಿತಾ ಅಂತ್ಯ ಸಂಸ್ಕಾರ ನೆರವೇರಿದೆ.

    ಕೋಲಾರದ ನೂತನ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್‌ವೇನಲ್ಲಿ (Bengaluru-Chennai Expressway) ಸೋಮವಾರ ಮಧ್ಯರಾತ್ರಿ ಘಟನೆ ನಡೆದಿದೆ. ಘಟನೆಯಲ್ಲಿ ಸುಷ್ಮಿತಾ ಹೊಟ್ಟೆಯಲ್ಲಿದ್ದ 8 ತಿಂಗಳ ಮಗು ಸೇರಿ ಮಹೇಶ (45), ಉದ್ವಿತ (2), ರತ್ನಮ್ಮ (60) ಹಾಗೂ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸುಷ್ಮಿತಾ ಹೊರತುಪಡಿಸಿ ಇನ್ನೂ ಮೂರು ಜನ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಮೃತಪಟ್ಟವರು ಕೆಜಿಎಫ್ ತಾಲ್ಲೂಕು ಕಮ್ಮಸಂದ್ರ ಗ್ರಾಮದವರಾಗಿದ್ದು, ಬೆಂಗಳೂರಿನಿಂದ ವಾಪಸ್ ಗ್ರಾಮಕ್ಕೆ ತೆರಳುವ ವೇಳೆ ಘಟನೆ ನಡೆದಿದೆ. ಘಟನೆ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕುರಿತು ಪ್ರಕರಣ ದಾಖಲಾಗಿದೆ.

  • ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ವ್ಯಾನ್‌ಗೆ ಲಾರಿ ಡಿಕ್ಕಿ: 7 ಮಹಿಳೆಯರ ದುರ್ಮರಣ

    ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ವ್ಯಾನ್‌ಗೆ ಲಾರಿ ಡಿಕ್ಕಿ: 7 ಮಹಿಳೆಯರ ದುರ್ಮರಣ

    ಚೆನ್ನೈ: ವ್ಯಾನ್ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ (Accident) ಏಳು ಜನ ಮಹಿಳೆಯರು (Women) ಮೃತಪಟ್ಟ ಘಟನೆ ತಮಿಳುನಾಡಿನ (Tamil Nadu) ನಟ್ರಂಪಳ್ಳಿ ಬಳಿಯ ಚೆನ್ನೈ-ಬೆಂಗಳೂರು (Chennai-Bengaluru Highway) ಹೆದ್ದಾರಿಯಲ್ಲಿ ನಡೆದಿದೆ.

    ಮುಂಜಾನೆ 3 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ವ್ಯಾನ್ ಮತ್ತು ಲಾರಿ ಚಾಲಕರು ಸೇರಿದಂತೆ 10 ಜನ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಐವರು ಮಹಿಳೆಯರು ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತರನ್ನು ಮೀನಾ (50), ಡಿ.ದೇವಯಾನಿ (32), ಸೈಟ್ಟು (55), ದೇವಿಕಾ (50), ಸಾವಿತ್ರಿ (42), ಕಲಾವತಿ (50) ಮತ್ತು ಆರ್ ಗೀತಾ (34) ಎಂದು ಗುರುತಿಸಲಾಗಿದೆ. ಇವರೆಲ್ಲರೂ ವೆಲ್ಲೂರಿನ ಪೆರ್ನಂಬುಟ್‌ಗೆ ಸೇರಿದವರಾಗಿದ್ದಾರೆ. ಇನ್ನೂ ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಿಳೆಯರು ಪ್ರವಾಸಕ್ಕೆ ತೆರಳಿದ್ದರು. ವಾಪಸ್ ಮನೆಗೆ ಮರಳುತ್ತಿದ್ದಾಗ ಹೆದ್ದಾರಿಯಲ್ಲಿ ವ್ಯಾನ್‌ನ ಮುಂಭಾಗದ ಚಕ್ರ ಪಂಕ್ಚರ್ ಆಗಿದೆ. ಈ ವೇಳೆ ಮಹಿಳೆಯರು ರಸ್ತೆ ಬದಿಯ ಸಿಮೆಂಟ್ ಕಟ್ಟೆಯ ಮೇಲೆ ಕುಳಿತಿದ್ದರು. ಇದೇ ಮಾರ್ಗವಾಗಿ ಬಂದ ಲಾರಿಯೊಂದು ವ್ಯಾನ್‌ಗೆ ಡಿಕ್ಕಿಯಾಗಿದೆ ಪರಿಣಾಮ ವ್ಯಾನ್ ಮಹಿಳೆಯರ ಮೇಲೆ ಉರುಳಿದ್ದು ಈ ದುರ್ಘಟನೆ ಸಂಭವಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]