Tag: Chemotherapy

  • ಕೇವಲ 100 ರೂ. ಕ್ಯಾನ್ಸರ್‌ಗೆ ಚಿಕಿತ್ಸೆ – ಟಾಟಾ ಸಂಸ್ಥೆಯಿಂದ ಮಾತ್ರೆ ಅಭಿವೃದ್ಧಿ

    ಕೇವಲ 100 ರೂ. ಕ್ಯಾನ್ಸರ್‌ಗೆ ಚಿಕಿತ್ಸೆ – ಟಾಟಾ ಸಂಸ್ಥೆಯಿಂದ ಮಾತ್ರೆ ಅಭಿವೃದ್ಧಿ

    – ಎರಡನೇ ಬಾರಿ ಕ್ಯಾನ್ಸರ್‌ ಬರುವುದನ್ನು ತಡೆಯುತ್ತೆ ಮಾತ್ರೆ
    – 10 ವರ್ಷಗಳ ಕಾಲ ದೀರ್ಘ ಸಂಶೋಧನೆ
    – FSSAI ಅನುಮೋದನೆಗಾಗಿ ಕಾಯುತ್ತಿದ್ದಾರೆ ಸಂಶೋಧಕರು

    ಮುಂಬೈ: ಎರಡನೇ ಬಾರಿಗೆ ಕ್ಯಾನ್ಸರ್ (Cancer) ಬರುವುದನ್ನು ತಡೆಯುವ ಮಾತ್ರೆಯನ್ನು (Tablet) ನಾವು ಅಭಿವೃದ್ಧಿ ಪಡಿಸಿರುವುದಾಗಿ ಭಾರತದ ಪ್ರಸಿದ್ಧ ಕ್ಯಾನ್ಸರ್‌ ಸಂಶೋಧನಾ ಸಂಸ್ಥೆ ಟಾಟಾ ಸ್ಮಾರಕ ಕೇಂದ್ರ (TMC) ಹೇಳಿಕೊಂಡಿದೆ.

    ಸಂಶೋಧಕರು 10 ವರ್ಷಗಳ ಕಾಲ ಸಂಶೋಧನೆ ನಡೆಸಿದ ಬಳಿಕ ಮಾತ್ರೆ ಅಭಿವೃದ್ಧಿ ಪಡಿಸಿದ್ದು ವಿಕಿರಣ (Radiation) ಮತ್ತು ಕೀಮೋಥೆರಪಿಯಂತಹ (Chemotherapy) ಚಿಕಿತ್ಸೆಗಳ ಅಡ್ಡಪರಿಣಾಮಗಳನ್ನು 50% ರಷ್ಟು ಮಾತ್ರೆ ಕಡಿಮೆ ಮಾಡುತ್ತದೆ. ಕ್ಯಾನ್ಸರ್‌ ಚಿಕಿತ್ಸೆಗೆ ಲಕ್ಷದಿಂದ ಕೋಟಿ ರೂ. ವೆಚ್ಚವಾಗುತ್ತಿದ್ದು, ಈ ಮಾತ್ರೆಯ ಬೆಲೆ ಕೇವಲ 100 ರೂ. ಇರಲಿದೆ ಎಂದು ಟಾಟಾ ಸಂಸ್ಥೆ ಹೇಳಿದೆ.

    ಸಂಶೋಧನಾ ಗುಂಪಿನ ಭಾಗವಾಗಿದ್ದ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಹಿರಿಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ.ರಾಜೇಂದ್ರ ಬದ್ವೆ ಪ್ರತಿಕ್ರಿಯಿಸಿ, ಸಂಶೋಧನೆಗಾಗಿ ಆರಂಭದಲ್ಲಿ ಇಲಿಗಳಲ್ಲಿ (Rat) ಮಾನವನ ಕ್ಯಾನ್ಸರ್ ಕೋಶಗಳನ್ನು ಸೇರಿಸಲಾಯಿತು. ಆ ಕೋಶಗಳು ಇಲಿಗಳಲ್ಲಿ ಗೆಡ್ಡೆಯನ್ನು ರೂಪಿಸಿತು. ನಂತರ ಇಲಿಗಳಿಗೆ ವಿಕಿರಣ ಚಿಕಿತ್ಸೆ, ಕೀಮೋಥೆರಪಿ ಮತ್ತು ಶಸ್ತ್ರಚಿಕಿತ್ಸೆಯ ಮೂಲಕ ಚಿಕಿತ್ಸೆ ನೀಡಲಾಯಿತು. ಈ ಕ್ಯಾನ್ಸರ್ ಕೋಶಗಳು ಸತ್ತಾಗ ಅವು ಕ್ರೊಮಾಟಿನ್ ಕಣಗಳೆಂದು ಕರೆಯಲ್ಪಡುವ ಸಣ್ಣ ತುಂಡುಗಳಾಗಿ ಒಡೆಯುತ್ತವೆ. ಈ ಸಣ್ಣ ತುಂಡುಗಳು ರಕ್ತದೊಂದಿಗೆ ಸೇರಿ ಆರೋಗ್ಯ ಹೊಂದಿದ ಜೀವಕೋಶಗಳನ್ನು ಪ್ರವೇಶಿಸಿದಾಗ ಕ್ಯಾನ್ಸರ್‌ ಬರುತ್ತದೆ ಎಂದು ತಿಳಿಸಿದರು.

    ಈ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು, ವೈದ್ಯರು ಇಲಿಗಳಿಗೆ ರೆಸ್ವೆರಾಟ್ರೊಲ್ ಮತ್ತು ತಾಮ್ರದ (R+Cu) ಪ್ರೊ-ಆಕ್ಸಿಡೆಂಟ್ ಮಾತ್ರೆಗಳನ್ನು ನೀಡಲಾಯಿತು. R+Cu ಆಮ್ಲಜನಕ ಮುಕ್ತ ಕಣಗಳನ್ನು ಉತ್ಪಾದಿಸುತ್ತದೆ, ಇದು ಕ್ರೊಮಾಟಿನ್ ಕಣಗಳನ್ನು ನಾಶಪಡಿಸುತ್ತದೆ ಎಂದು ವಿವರಿಸಿದರು.  ಇದನ್ನೂ ಓದಿ: ಗೆದ್ದ ಬೆನ್ನಲ್ಲೇ ನಾಸೀರ್ ಹುಸೇನ್ ಬೆಂಬಲಿಗರಿಂದ ಪಾಕಿಸ್ತಾನ್ ಜಿಂದಾಬಾದ್‌ ಘೋಷಣೆ

    R+Cu ಅನ್ನು ಸೇವಿಸಿದಾಗ ಹೊಟ್ಟೆಯಲ್ಲಿ ಆಮ್ಲಜನಕ ಮುಕ್ತ ಕಣಗಳನ್ನು ಉತ್ಪಾದಿಸುತ್ತದೆ. ಈ ಆಮ್ಲಜನಕ ಮುಕ್ತ ಕಣಗಳನ್ನು ಚಲಾವಣೆಯಲ್ಲಿರುವ ಕ್ರೊಮಾಟಿನ್ ಕಣಗಳನ್ನು ನಾಶಮಾಡುತ್ತವೆ ಮತ್ತು ‘ಮೆಟಾಸ್ಟೇಸ್’ಗಳನ್ನು ತಡೆಯುತ್ತವೆ. ಇದು ದೇಹದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಕ್ಯಾನ್ಸರ್ ಕೋಶಗಳ ಚಲನೆ ತಡೆಯುತ್ತದೆ ಎಂದು ಹೇಳಿದರು.

    ಈ ಟ್ಯಾಬ್ಲೆಟ್ ಕ್ಯಾನ್ಸರ್ ಚಿಕಿತ್ಸೆಯ ಚಿಕಿತ್ಸೆಯ ಅಡ್ಡಪರಿಣಾಮಗಳನ್ನು ಸುಮಾರು 50 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಮತ್ತು ಎರಡನೇ ಬಾರಿಗೆ ಇದು ಕ್ಯಾನ್ಸರ್ ತಡೆಗಟ್ಟುವಲ್ಲಿ ಸುಮಾರು 30% ಪರಿಣಾಮಕಾರಿಯಾಗಿದೆ. ಇದು ಮೇದೋಜೀರಕ ಗ್ರಂಥಿ, ಶ್ವಾಸಕೋಶ ಮತ್ತು ಬಾಯಿಯ ಕ್ಯಾನ್ಸರ್‌ನ ಮೇಲೂ ಪರಿಣಾಮಕಾರಿಯಾಗಬಲ್ಲದು ಎಂದು ತಿಳಿಸಿದರು.

    ಟಾಟಾ ವೈದ್ಯರು ಸುಮಾರು ಒಂದು ದಶಕದಿಂದ ಈ ಮಾತ್ರೆಯ ಮೇಲೆ ಸಂಶೋಧನೆ ಮಾಡುತ್ತಿದ್ದು ಈಗ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅನುಮೋದನೆಗೆ ಕಾಯತ್ತಿದ್ದಾರೆ. ಈಗಾಲೇ ಟಿಐಎಫ್‌ಆರ್ ವಿಜ್ಞಾನಿಗಳು ಈ ಮಾತ್ರೆಯನ್ನು ಅನುಮೋದಿಸಲು ಎಫ್‌ಎಸ್‌ಎಸ್‌ಎಐಗೆ ಅರ್ಜಿ ಸಲ್ಲಿಸಿದ್ದಾರೆ. ಅನುಮೋದನೆ ಪಡೆದ ನಂತರ ಜೂನ್-ಜುಲೈನಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.  ಇದನ್ನೂ ಓದಿ: ಗಗನಯಾನ ಕೈಗೊಳ್ಳುವ 4 ಗಗನಯಾತ್ರಿಗಳ ಹೆಸರು ಬಹಿರಂಗಪಡಿಸಿದ ಮೋದಿ

    ಈ ಮಾತ್ರೆ ಸೇವನೆಯ ಬಳಿಕ ಇಲಿಗಳು ಮತ್ತು ಮನುಷ್ಯರ ಮೇಲೆ ಆಗುವ ಅಡ್ಡ ಪರಿಣಾಮವನ್ನು ಪರೀಕ್ಷಿಸಲಾಗಿದೆ. ಮಾನವನ ಮೇಲಿನ ಪ್ರಯೋಗಗಳನ್ನು ಪೂರ್ಣಗೊಳಿಸಲು ಸುಮಾರು ಐದು ವರ್ಷ ಬೇಕಾಯಿತು. ಸಂಶೋಧನೆಯ ಸಮಯದಲ್ಲಿ ಸವಾಲುಗಳು ಇದ್ದವು. ಈ ಸಂಶೋಧನೆ ಮಾಡುವಾಗ ಸಮಯ ಮತ್ತು ಹಣ ವ್ಯರ್ಥ ಎಂದು ಹಲವರು ಹೇಳಿದ್ದರು. ಆದರೆ ಇಂದು ನಾವೆಲ್ಲ ಸಂತೋಷವಾಗಿದ್ದು ದೊಡ್ಡ ಯಶಸ್ಸು ಸಿಕ್ಕಿದೆ ಎಂದು ವೈದ್ಯರು ಬಣ್ಣಿಸಿದರು.

    ಕ್ಯಾನ್ಸರ್‌ ಎರಡನೇ ಬಾರಿ ಹೇಗೆ ಬರುತ್ತೆ?
    ಕೆಲವೊಮ್ಮೆ ಕ್ಯಾನ್ಸರ್ ಚಿಕಿತ್ಸೆಯ ನಂತರ ಕ್ಯಾನ್ಸರ್ ಮತ್ತೆ ಬರುತ್ತದೆ. ಇದನ್ನು ಕ್ಯಾನ್ಸರ್ ಮರುಕಳಿಸುವಿಕೆ ಎಂದು ಕರೆಯಲಾಗುತ್ತದೆ. ಮೂಲ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಿದ ವಾರ, ತಿಂಗಳುಗಳು ಅಥವಾ ವರ್ಷಗಳ ನಂತರವೂ ಇದು ಬರಹುದು.

    ಕೆಲವು ರೀತಿಯ ಕೀಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆಯು ಎರಡನೇ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಮಗು, ಹದಿಹರೆಯ ಅಥವಾ ಯುವ ವಯಸ್ಕರಲ್ಲಿ ಕ್ಯಾನ್ಸರ್‌ ಚಿಕಿತ್ಸೆ ಪಡೆದಿದ್ದರೆ ಅಪಾಯವು ಹೆಚ್ಚು. ರೋಗಿಗೆ ಚಿಕಿತ್ಸೆ ಮುಗಿದ ನಂತರ ಕ್ಯಾನ್ಸರ್ ಮತ್ತೆ ಬರುತ್ತದೆಯೇ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

     

  • ಕ್ಯಾನ್ಸರ್ ರೋಗಿಗಳಿಗೆ ಸಿಹಿ ಸುದ್ದಿ – ಜಿಲ್ಲೆಗೊಂದು ಡೇ ಕೇರ್ ಕಿಮೋಥೆರಪಿ ಕೇಂದ್ರ

    ಕ್ಯಾನ್ಸರ್ ರೋಗಿಗಳಿಗೆ ಸಿಹಿ ಸುದ್ದಿ – ಜಿಲ್ಲೆಗೊಂದು ಡೇ ಕೇರ್ ಕಿಮೋಥೆರಪಿ ಕೇಂದ್ರ

    ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕ್ಯಾನ್ಸರ್ (Cancer) ರೋಗಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರತಿ ಜಿಲ್ಲೆಯಲ್ಲೂ ಡೇ-ಕೇರ್ ಕಿಮೋಥೆರಪಿ (Day Care Chemotherapy) ಕೇಂದ್ರ ಸ್ಥಾಪಿಸುವುದಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಬಜೆಟ್‌ನಲ್ಲಿ ಘೋಷಿಸಿದ್ದಾರೆ.

    ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಿಮೋಥೆರಪಿ ಕೇಂದ್ರಗಳು ಇಲ್ಲ. ಇದರಿಂದ ಕ್ಯಾನ್ಸರ್ ಪೀಡಿತರಿಗೆ ಕಿಮೋಥೆರಪಿ ಮಾಡುವುದು ಕಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 20 ಕೋಟಿ ರೂ. ವೆಚ್ಚದಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಒಂದು ಡೇ-ಕೇರ್ ಕಿಮೋಥೆರಪಿ ಕೇಂದ್ರ ಸ್ಥಾಪಿಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: 7 ವರ್ಷದಲ್ಲಿ ರಾಜ್ಯಕ್ಕೆ 59,274 ಕೋಟಿ ಜಿಎಸ್‌ಟಿ ನಷ್ಟ: ಬಜೆಟ್‌ನಲ್ಲಿ ಕೇಂದ್ರಕ್ಕೆ ತಿವಿದ ಸಿದ್ದರಾಮಯ್ಯ

    ಮಹಿಳೆಯರಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸರ್ಕಾರ ಸಜ್ಜಾಗುತ್ತಿದೆ. ಇದಕ್ಕಾಗಿ 20 ಜಿಲ್ಲಾ ಆಸ್ಪತ್ರೆಗಳಲ್ಲಿ ಡಿಜಿಟಲ್ ಮಾಮೋಗ್ರಫಿ (Digital Mammography) ಯಂತ್ರಗಳನ್ನು ಖರೀದಿಸಲು ನಿರ್ಧರಿಸಿದೆ. ಇದನ್ನೂ ಓದಿ: Karnataka Budget: ರಾಜ್ಯದ ಗ್ರಾಮೀಣ ರಸ್ತೆಗಳಿನ್ನು ಪ್ರಗತಿ ಪಥ, ಕಲ್ಯಾಣ ಪಥ.!

    ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕೆ.ಸಿ.ಜನರಲ್ ಆಸ್ಪತ್ರೆ, ಉಡುಪಿ, ಕೋಲಾರ ಮತ್ತು ದಾವಣಗೆರೆ ಜಿಲ್ಲಾ ಆಸ್ಪತ್ರೆಗಳಿಗೆ ಕಾಲ್ಪೊಸ್ಕೊಪಿ (Colposcopy) ಉಪಕರಣಗಳ ಖರೀದಿಗೆ ರಾಜ್ಯ ಸರ್ಕಾರ ಒಟ್ಟು 21 ಕೋಟಿ ರೂ.ಗಳ ಅನುದಾನ ಒದಗಿಸುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರು ಏರ್‌ಪೋರ್ಟ್‌ ರನ್‌ವೇ ವಿಸ್ತರಣೆಗೆ ಅನುದಾನ ಘೋಷಣೆ – ತವರು ಜಿಲ್ಲೆಗೆ ಸಿಎಂ ಕೊಡುಗೆ ಏನು?

  • ಕ್ಯಾನ್ಸರ್‌ ಭಯ ಬೇಡ – ಕಿಮೋಥೆರಪಿ ಎಂದರೇನು? ಅದು ಹೇಗೆ ಕೆಲಸ ಮಾಡುತ್ತೆ?

    ಕ್ಯಾನ್ಸರ್‌ ಭಯ ಬೇಡ – ಕಿಮೋಥೆರಪಿ ಎಂದರೇನು? ಅದು ಹೇಗೆ ಕೆಲಸ ಮಾಡುತ್ತೆ?

    ಕ್ಯಾನ್ಸರ್‌ (Cancer) ಎಂಬ ಮಹಾಮಾರಿ ರೋಗ ಸದ್ಯ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕಾಡುತ್ತಿದೆ. ಕೆಲವು ಮಕ್ಕಳಿಗೆ ಹುಟ್ಟಿದ ಕೆಲವು ದಿನಗಳು, ತಿಂಗಳಲ್ಲಿ ಕ್ಯಾನ್ಸರ್‌ ರೋಗ ಅಂಟಿಕೊಂಡರೆ ಇನ್ನುಳಿದವರಿಗೆ ಯಾವಾಗ ಬರುತ್ತದೆ? ಹೇಗೆ ಬರುತ್ತದೆ ಎಂಬುದನ್ನು ಹೇಳಲು ಅಸಾಧ್ಯ. ಕ್ಯಾನ್ಸರ್‌ ರೋಗದಲ್ಲಿ ಅನೇಕ ರೀತಿಯ ವಿಧಗಳಿದ್ದು, ನಾಲ್ಕು ಹಂತಗಳಲ್ಲಿರುತ್ತದೆ. ಈ ರೋಗ ಮೊದಲನೆಯ ಹಂತ ಮತ್ತು ಎರಡನೆಯ ಹಂತದಲ್ಲಿದ್ದರೆ ಅದನ್ನು ಆಪರೇಷನ್‌ ಅಥವಾ ಔಷಧಿಗಳ ಮೂಲಕ ಸರಿಪಡಿಸಬಹುದು ಎಂದು ಡಾಕ್ಟರ್‌ ಹೇಳುತ್ತಾರೆ. ಕ್ಯಾನ್ಸರ್‌ ರೋಗಿಗಳಿಗೆ ಕಿಮೋಥೆರಪಿ (Chemotherapy) ಎಂಬ ಚಿಕಿತ್ಸೆಯನ್ನು ನೀಡುತ್ತಾರೆ ಎಂಬುದನ್ನು ನೀವೆಲ್ಲರೂ ತಿಳಿದಿರಬಹುದು. ಆದರೆ ಇದು ಮಾನವ ದೇಹದಲ್ಲಿ ಹೇಗೆ ಕೆಲಸ ಮಾಡುತ್ತದೆ ಎನ್ನುವುದರ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ.

    ಕಿಮೋಥೆರಪಿ ಎಂದರೆ ಮಾನವ ದೇಹದಲ್ಲಿ ಉಂಟಾಗುವ ಕ್ಯಾನ್ಸರ್‌ ಜೀವಕೋಶವನ್ನು ನಾಶಪಡಿಸಲು ಬಳಸುವ ಒಂದು ಔಷಧಿಯಾಗಿದೆ. ಈ ಚಿಕಿತ್ಸೆಯನ್ನು ನೀಡುವುದರಿಂದ ದೇಹದಲ್ಲಿ ಕ್ಯಾನ್ಸರ್‌ ಕೋಶ ಬೆಳೆಯದಂತೆ ಹಾಗೂ ಕೋಶ ಬೆಳೆದು ವಿಭಜನೆಯಾಗದಂತೆ ಕಿಮೋಥೆರಪಿ ತಡೆಗಟ್ಟುತ್ತದೆ. ಇದು ರಕ್ತದ ಮುಖಾಂತರ ಮಾನವ ದೇಹಕ್ಕೆ ಹೊಕ್ಕು, ದೇಹದ ಎಲ್ಲಾ ಭಾಗವನ್ನು ಆವರಿಸಿಕೊಳ್ಳುತ್ತದೆ. ಕಿಮೋಥೆರಪಿಯಲ್ಲಿ ಅನೇಕ ರೀತಿಯ ವಿಧಗಳಿವೆ. ಈ ಚಿಕಿತ್ಸೆಗೆ ಬಳಸುವ ಔಷಧಿಗಳು ಪವರ್‌ಫುಲ್‌ ಆಗಿದ್ದು ಕ್ಯಾನ್ಸರ್‌ ಕೋಶಗಳ ವಿರುದ್ಧ ಹೋರಾಡುತ್ತದೆ. ಕ್ಯಾನ್ಸರ್‌ ಜೀವಕೋಶಗಳು ಅತಿವೇಗವಾಗಿ ಮಾನವ ದೇಹದಲ್ಲಿ ಹರಡಿಕೊಳ್ಳುತ್ತದೆ. ಆದ್ದರಿಂದ ಕಿಮೋಥೆರಪಿ ಇದನ್ನು ತಡೆಗಟ್ಟುವಲ್ಲಿ ಅತ್ಯಂತ ಸಹಕಾರಿಯಾಗಿದೆ.

    ಕಿಮೋಥೆರಪಿ ಚಿಕಿತ್ಸೆ ರಕ್ತದ ಮೂಲಕ ಇಡೀ ದೇಹವನ್ನು ಆವರಸಿಕೊಳ್ಳುವ ಸಂದರ್ಭ ಸಾಮಾನ್ಯ ಜೀವಕೋಶಗಳಿಗೆ ಹಾನಿಯುಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದಾಗಿ ಕ್ಯಾನ್ಸರ್‌ ರೋಗಿ ಹಲವು ಅಡ್ಡ ಪರಿಣಾಮವನ್ನು ಎದರಿಸುತ್ತಾರೆ. ಅಂದರೆ ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗುವ ರೋಗಿಯ ತಲೆ ಕೂದಲು ಸಂಪೂರ್ಣವಾಗಿ ಉದುರುತ್ತದೆ. ಅಲ್ಲದೇ ವಾಕರಿಕೆ, ತಲೆಸುತ್ತು, ಸುಸ್ತು ಮುಂತಾದ ಅಡ್ಡಪರಿಣಾಮಗಳನ್ನು ಎದುರಿಸುತ್ತಾರೆ. ಈ ಥೆರಪಿಯನ್ನು ಕೆಲವು ಡಾಕ್ಟರ್‌ಗಳು ಆಪರೇಷನ್‌ ಬಳಿಕ ಮಾಡುತ್ತಾರೆ. ಇನ್ನೂ ಕೆಲವರು ಆಪರೇಷನ್‌ಗೂ ಮುನ್ನ ಚಿಕಿತ್ಸೆ ನೀಡಿ ಕ್ಯಾನ್ಸರ್‌ ಕೋಶಗಳು ಹರಡದಂತೆ ತಡೆಗಟ್ಟಿ ನಂತರ ಆಪರೇಷನ್‌ಗೆ ಮುಂದಾಗುತ್ತಾರೆ.

    ಕಿಮೋಥೆರಪಿ ಚಿಕಿತ್ಸೆಯನ್ನು ಎರಡು ರೀತಿಯಲ್ಲಿ ನೀಡಬಹುದಾಗಿದೆ. ಮೊದಲನೆಯದು ಇಂಜೆಕ್ಷನ್‌ ರೂಪದಲ್ಲಿ ಇದನ್ನು ನೀಡಬಹುದು. ಪ್ರಸ್ತುತ ಇದು ಮಾತ್ರೆಗಳ ರೂಪದಲ್ಲಿ ಕೂಡಾ ಲಭ್ಯವಿದೆ. ಕ್ಯಾನ್ಸರ್‌ ರೋಗಕ್ಕೆ ಮಾತ್ರವಲ್ಲದೇ ಬೇರೆ ರೋಗಗಳಿಗೂ ಈ ಕಿಮೋಥೆರಪಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಕಿಮೋಥೆರಪಿ ಎಂಬುದು ಸುಮಾರು 40-50 ವರ್ಷಗಳ ಹಿಂದೆ ಆವಿಷ್ಕಾರವಾಗಿರುವಂತಹ ಚಿಕಿತ್ಸೆಯಾಗಿದೆ.

    ಕಿಮೋಥೆರಪಿ ಎಂಬುದು ಕೇವಲ ಒಂದು ಡ್ರಗ್ಸ್‌ ಅನ್ನು ಒಳಗೊಂಡಿಲ್ಲ. ಇದು ಸುಮಾರು ಎರಡರಿಂದ ಮೂರು ಹೈ ಡೋಸೇಜ್ ಡ್ರಗ್ಸ್‌ ಅನ್ನು ಒಳಗೊಂಡಿದ್ದು, ಮಾನವ ದೇಹದಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದನ್ನು ನಾಲ್ಕನೇ ಹಂತದಲ್ಲಿರುವ ಕ್ಯಾನ್ಸರ್‌ ರೋಗಿಗಳಿಗೆ ಅಗತ್ಯವಾಗಿ ಕೊಡಲಾಗುತ್ತದೆ. ಕಿಮೋಥೆರಪಿ ಚಿಕಿತ್ಸೆ ಸುಮಾರು 90% ಕ್ಯಾನ್ಸರ್‌ ರೋಗವನ್ನು ಗುಣಪಡಿಸುತ್ತದೆ. ಕಿಡ್ನಿ ಕ್ಯಾನ್ಸರ್‌ ಮತ್ತು ಚರ್ಮ ಕ್ಯಾನ್ಸರ್‌ಗಳಂತಹ ರೋಗಗಳಿಗೆ ಇದು ಹೆಚ್ಚು ಪರಿಣಾಮಕಾರಿಯಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.‌

    ಸ್ತನ ಕ್ಯಾನ್ಸರ್‌, ಧ್ವನಿಪೆಟ್ಟಿಗೆ ಕ್ಯಾನ್ಸರ್‌ನಂತಹ ಕೆಲವು ಕ್ಯಾನ್ಸರ್‌ ರೋಗಗಳಿಗೆ ಕಿಮೋಥೆರಪಿ ಚಿಕಿತ್ಸೆ ನೀಡಿದರೆ ಆಪರೇಷನ್‌ ಮಾಡುವ ಅಗತ್ಯವಿಲ್ಲ. ಇದರಲ್ಲಿಯೇ ಕ್ಯಾನ್ಸರ್‌ ರೋಗ ವಾಸಿಯಾಗುತ್ತದೆ. ಕಿಮೋಥೆರಪಿಯೊಂದಿಗೆ ರೇಡಿಯೇಷನ್‌ ಚಿಕಿತ್ಸೆಯನ್ನು ಕೊಡುವುದರಿಂದ ಕೆಲವು ಕ್ಯಾನ್ಸರ್‌ ರೋಗಿಗಳಿಗೆ ಆಪರೇಷನ್‌ ಮಾಡುವುದನ್ನು ತಪ್ಪಿಸಬಹುದಾಗಿದೆ.

    ಕಿಮೋಥೆರಪಿ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಇನ್ಫೆಕ್ಷನ್‌ ಆಗದ ರೀತಿಯಲ್ಲಿ ಎಚ್ಚರವಹಿಸುವುದು ತುಂಬಾ ಅಗತ್ಯವಾಗಿರುತ್ತದೆ. ಈ ರೀತಿಯಾದಲ್ಲಿ ರೋಗಿ ತುಂಬಾ ಸೀರಿಯಸ್‌ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಸಮಯದಲ್ಲಿ ತುಂಬಾ ಜಾಗೃತರಾಗಿರಬೇಕು. ಕಿಮೋಥೆರಪಿ ಚಿಕಿತ್ಸೆಯಿಂದ ಬಿಳಿ ರಕ್ತಕಣ, ಕೆಂಪು ರಕ್ತಕಣ ಅಥವಾ ಪ್ಲೇಟ್‌ಲೆಟ್‌ ಕೌಂಟ್‌ ಕೂಡಾ ಕಡಿಮೆಯಾಗುವ ಸಂಭವವಿದೆ. ಕಿಮೋಥೆರಪಿ ಚಿಕಿತ್ಸೆ ಎಂಬುದು ದಿನಾ ನೀಡುವ ಚಿಕಿತ್ಸೆಯಲ್ಲ. ಇದನ್ನು ಎರಡರಿಂದ ಮೂರು ವಾರಗಳಿಗೊಮ್ಮೆ ನೀಡಲಾಗುತ್ತದೆ. ಮಾತ್ರೆಗಳು ಕೂಡಾ ಎರಡು ವಾರಗಳಿಗೊಮ್ಮೆ ನೀಡಲಾಗುತ್ತದೆ.

    ಸುಮಾರು 30ರಿಂದ 40%ನಷ್ಟು ಕ್ಯಾನ್ಸರ್‌ ರೋಗಗಳು ಕೇವಲ ಕಿಮೋಥೆರಪಿ ಚಿಕಿತ್ಸೆಯಿಂದ ಗುಣವಾದರೆ 60ರಿಂದ 70%ನಷ್ಟು ಕ್ಯಾನ್ಸರ್‌ ರೋಗಗಳು ಆಪರೇಷನ್‌, ಕಿಮೋಥೆರಪಿ ಮತ್ತು ರೇಡೀಯೇಷನ್‌ ಚಿಕಿತ್ಸೆಯನ್ನು ನೀಡುವ ಮೂಲಕ ಗುಣಪಡಿಸಬಹುದು. ಕಿಮೋಥೆರಪಿ ಎಂದಾಗ ಜನರು ಭಯಬೀಳುವುದು ಜಾಸ್ತಿ. ಕಿಮೋಥೆರಪಿ ಚಿಕಿತ್ಸೆಗೆ ಯಾರೂ ಭಯಪಡಬೇಕಾದ ಅಗತ್ಯವಿಲ್ಲ. ಇದು ಕ್ಯಾನ್ಸರ್‌ ರೋಗವನ್ನು ಗುಣಪಡಿಸುತ್ತದೆ ಮತ್ತು ಕಿಮೋಥೆರಪಿ ಚಿಕಿತ್ಸೆಯಿಂದ ಉಂಟಾಗುವ ಸೈಡ್‌ ಎಫೆಕ್ಟ್ಸ್‌ಗೂ ಚಿಕಿತ್ಸೆಗಳು ಆಸ್ಪತ್ರೆಗಳಲ್ಲಿ ಲಭ್ಯವಿದೆ. ಆದ್ದರಿಂದ ಭಯಪಡದೇ ಚಿಕಿತ್ಸೆಯನ್ನು ಪಡೆದುಕೊಂಡು ಕಾಯಿಲೆಗಳನ್ನು ಬಗೆಹರಿಸಿಕೊಳ್ಳುವುದು ಉತ್ತಮ. ಇದನ್ನೂ ಓದಿ: ಅಮೆರಿಕದ ಟಾಪ್ ಸೀಕ್ರೆಟ್ ಪ್ಲೇಸ್ – ಅಂಥಾದ್ದೇನಿದೆ ಏರಿಯಾ 51ರಲ್ಲಿ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ಯಾನ್ಸರ್ ಚಿಕಿತ್ಸೆಯಲ್ಲಿರುವಾಗಲೇ ಇಂಟರ್ವ್ಯೂ ಅಟೆಂಡ್ ಮಾಡಿದ ಹಠವಾದಿ

    ಕ್ಯಾನ್ಸರ್ ಚಿಕಿತ್ಸೆಯಲ್ಲಿರುವಾಗಲೇ ಇಂಟರ್ವ್ಯೂ ಅಟೆಂಡ್ ಮಾಡಿದ ಹಠವಾದಿ

    ನವದೆಹಲಿ: ಕ್ಯಾನ್ಸರ್ ಬಂದ್ರೆ ಜೀವನವೇ ಮುಗಿಯಿತು ಎಂದು ತಿಳಿದುಕೊಳ್ಳುವ ಕಾಲದಲ್ಲಿ ಇಲ್ಲೊಬ್ಬ ವ್ಯಕ್ತಿ ಛಲ ಬಿಡದೆ ಇಂಟರ್ವ್ಯೂ ಅಟೆಂಡ್ ಮಾಡಿರುವ ಸುದ್ದಿ ಎಲ್ಲಕಡೆ ವೈರಲ್ ಆಗಿದೆ.

    ಕ್ಯಾನ್ಸರ್ ರೋಗಿಯೊಬ್ಬರು ತಮ್ಮ ಕೀಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ರೂ ಉದ್ಯೋಗಕ್ಕಾಗಿ ಇಂಟರ್ವ್ಯೂ ಅಟೆಂಡ್ ಮಾಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸುದ್ದಿ ವೈರಲ್ ಆಗುತ್ತಿದೆ. ಜಾರ್ಖಂಡ್ ಮೂಲದ ಐಟಿ ವೃತ್ತಿಪರ ಅರ್ಶ್ ನಂದನ್ ಪ್ರಸಾದ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಕೀಮೋಥೆರಪಿಯಲ್ಲಿದ್ದಾರೆ. ಈ ವೇಳೆ ಅವರಿಗೆ ಇಂಟರ್ವ್ಯೂಗೆ ಕಾಲ್ ಬಂದಿದೆ. ಈ ಹಿನ್ನೆಲೆ ಪ್ರಸಾದ್ ಅವರು ನಾನು ನನ್ನನ್ನು ಪ್ರೂವ್ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದಾರೆ. ಅದಕ್ಕೆ ಆಸ್ಪತ್ರೆ ಬೆಡ್‍ನಿಂದಲೇ ತಮ್ಮ ಲ್ಯಾಪ್‍ಟಾಪ್ ಮೂಲಕ ಇಂಟರ್ವ್ಯೂ ಅಟೆಂಡ್ ಮಾಡಿದ್ದಾರೆ. ಇದನ್ನೂ ಓದಿ: ಸೂರ್ಯ-ಚಂದ್ರ ಇರುವವರೆಗೂ ಹಿಂದೂ ಧರ್ಮ, ಮಾತೃ ಭಾಷೆ ಶಾಶ್ವತವಾಗಿರುತ್ತೆ: ಕಾರಜೋಳ

    ಓಪನ್‍ಟುವರ್ಕ್ ಎಂಬ ಬ್ಯಾಡ್ಜ್ ಹೊಂದಿರುವ ಪ್ರಸಾದ್, ತಮ್ಮ ಆರೋಗ್ಯ ಸಮಸ್ಯೆಯಿಂದಾಗಿ ಉದ್ಯೋಗ ಪಡೆದುಕೊಳ್ಳಲು ಎಷ್ಟೂ ಕಷ್ಟವಾಗುತ್ತಿತ್ತು ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ವೇಳೆ ಅವರು, ನೀವು ಸಂದರ್ಶನಗಳಲ್ಲಿ ಅತ್ಯುತ್ತಮವಾದದ್ದನ್ನು ನೀಡಿದ್ರೂ, ನಿಮ್ಮ ಇಂಟರ್ವ್ಯೂ ಪಾಸ್ ಆಗುವುದಿಲ್ಲ. ಆಗ ಈ ಕಂಪನಿಗಳು ಎಷ್ಟು ಮುಂದುವರೆದಿದೆ ಎಂಬುದನ್ನು ತೋರಿಸುತ್ತದೆ. ಆದರೆ ನಾನು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದೇನೆ ಎಂದು ನೇಮಕಾತಿದಾರರಿಗೆ ತಿಳಿಯುತ್ತಿದ್ದಂತೆ, ಅವರಲ್ಲಿ ಆಗುವ ಬದಲಾವಣೆಯನ್ನು ನಾನು ನೋಡುತ್ತೇನೆ. ಆದರೆ ನನಗೆ ನಿಮ್ಮ ಸಹಾನುಭೂತಿ ಬೇಕಾಗಿಲ್ಲ. ನನ್ನನ್ನು ನಾನು ಸಾಬೀತುಪಡಿಸಲು ನಾನು ಇಲ್ಲಿದ್ದೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಸ್ಫೂರ್ತಿ ನೀಡುವ ಪೋಸ್ಟ್
    ಈ ಪೋಸ್ಟ್ ನೋಡಿದ ನೆಟ್ಟಿಗರು, ನೀವು ಅನೇಕರಿಗೆ ಸ್ಫೂರ್ತಿ ನೀಡಿದ್ದೀರಿ. ನೀವು ಹೆಚ್ಚು ಶಕ್ತಿ ಮತ್ತು ಬದ್ಧತೆಯನ್ನು ತೋರಿಸುತ್ತಿದ್ದೀರಿ. ಇದರಿಂದ ಇತರರನ್ನು ಬಲಶಾಲಿಯಾಗುವಂತೆ ಮಾಡುತ್ತದೆ ಎಂದು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬ, ನಿಮಗೆ ಅರ್ಹವಾದ ಪೋಸ್ಟ್ ನಿಮಗೆ ಸಿಗಲಿ ಎಂಬುದು ನನ್ನ ಪ್ರಾರ್ಥನೆ. ನಿಮ್ಮ ಮೌಲ್ಯಗಳು, ಕೌಶಲ್ಯಗಳು ಮತ್ತು ವೈಯಕ್ತಿಕ ಗುರಿಗಳೊಂದಿಗೆ ಸಂಪೂರ್ಣವಾಗಿ ಹೊಂದಾಣಿಕೆಯಾಗುವ ಸ್ಥಾನವನ್ನು ನೀವು ಕಂಡುಕೊಳ್ಳುತ್ತೀರಿ. ನೀವು ತಲೆ ಎತ್ತಿ ನಡೆಯಿರಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ಮದುವೆಯಾಗಿ ಒಂದೇ ವರ್ಷಕ್ಕೆ ಯುವತಿ ಅನುಮಾನಾಸ್ಪದ ಸಾವು 

    ಏನಾಯಿತು?
    ಅರ್ಶ್ ತನ್ನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಬಳಿಕ ಮಹಾರಾಷ್ಟ್ರ ಮೂಲದ ಟೆಕ್ ಕಂಪನಿ ಅಪ್ಲೈಡ್ ಕ್ಲೌಡ್ ಕಂಪ್ಯೂಟಿಂಗ್‍ನ ಸ್ಥಾಪಕ ಮತ್ತು ಸಿಇಒ ನೀಲೇಶ್ ಸತ್ಪುಟೆ ಅವರು ಉದ್ಯೋಗ ಆಫರ್ ಕೊಟ್ಟಿದ್ದಾರೆ. ಈ ವೇಳೆ ಸತ್ಪುಟೆ ಅವರು, ಪ್ರಸಾದ್ ನಿಮ್ಮ ಚಿಕಿತ್ಸೆ ಮುಗಿದ ಬಳಿಕ ಕೆಲಸಕ್ಕೆ ಬಂದು ಸೇರಿಕೊಳ್ಳಬಹುದು. ನೀನು ಒಬ್ಬ ಯೋಧ. ಪ್ರಸ್ತುತ ನೀವು ನಿಮ್ಮ ಚಿಕಿತ್ಸೆ ಕಡೆ ಗಮನಕೊಡಿ. ಬೇರೆ ಇಂಟರ್ವ್ಯೂ ಅಟೆಂಡ್ ಮಾಡುವುದನ್ನು ನಿಲ್ಲಿಸಿ ಎಂದು ಬರೆದು ತಿಳಿಸಿದ್ದಾರೆ.

  • ಗೋ ಮೂತ್ರದಿಂದ ಕ್ಯಾನ್ಸರ್ ಗುಣಪಡಿಸಬಹುದು!

    ಗೋ ಮೂತ್ರದಿಂದ ಕ್ಯಾನ್ಸರ್ ಗುಣಪಡಿಸಬಹುದು!

    ಗಾಂಧಿನಗರ: ಗೋವಿನ ಮೂತ್ರದಿಂದ ಕ್ಯಾನ್ಸರ್ ಗುಣಪಡಿಸಬಹುದು ಎಂದು ಗುಜರಾತಿನ ಸಂಶೋಧಕರು ಹೇಳಿದ್ದಾರೆ.

    ಜುನಾಘಡ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ವಿಜ್ಞಾನಿಗಳು ಒಂದು ವರ್ಷದಿಂದ ಪ್ರಯೋಗ ನಡೆಸಿ ಈಗ ಯಶಸ್ವಿಯಾಗಿದ್ದಾರೆ. ಸಂಶೋಧನೆಯ ಮೊದಲ ಪ್ರಯತ್ನದಲ್ಲಿಯೇ ಗೋವಿನ ಮೂತ್ರವನ್ನು ಬಳಸಿ ಕ್ಯಾನ್ಸರ್ ಜೀವಕೋಶಗಳನ್ನು ಕೊಲ್ಲಬಹುದು ಎಂಬ ಪ್ರಯತ್ನದಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ.

    ಗೋ ಮೂತ್ರದಿಂದ ಬಾಯಿ, ಗರ್ಭಕೋಶ, ಶ್ವಾಸಕೋಶ, ಮೂತ್ರಪಿಂಡ, ಚರ್ಮ, ಸ್ತನ ಕ್ಯಾನ್ಸರ್ ಗಳನ್ನು ಕೂಡ ಗುಣಪಡಿಸಬಹುದೆಂದು ತಿಳಿಸಿದ್ದಾರೆ.

    ಸಹಾಯಕ ಪ್ರಾಧ್ಯಾಪಕರಾದ ಶಾರದಾ ಭಟ್, ರುಕಮ್ ಸಿನ್ಹ ತೋಮರ್, ಹಾಗೂ ಸಂಶೋಧನಾ ವಿದ್ಯಾರ್ಥಿ ಕವಿತಾ ಜೋಶಿ ಯವರನ್ನು ಒಳಗೊಡ ಈ ಸಂಶೋಧನಾ ತಂಡ, ಒಂದು ವರ್ಷದ ಪ್ರಯೋಗದ ಫಲವಾಗಿ ಕ್ಯಾನ್ಸರ್ ನ್ನು ಗೋ ಮೂತ್ರದಿಂದ ಗುಣಪಡಿಸಬಹುದು ಎಂದು ಸಾಬೀತುಪಡಿಸಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾರದಾ ಭಟ್ ಬಾಟಲಿಯಲ್ಲಿ ಸಂಗ್ರಹಿಸಲಾದ ಕ್ಯಾನ್ಸರ್ ಕೋಶಗಳ ಮೇಲೆ ನಾವು ನೇರ ಪ್ರಯೋಗ ಮಾಡಿದ್ದೇವೆ. ನಿರ್ಧಿಷ್ಟ ಸಂಖ್ಯೆಯ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಬೇಕಾದ ಗೋ ಮೂತ್ರದ ಪ್ರಮಾಣವನ್ನು ಎಷ್ಟಿರಬೇಕೆಂಬುದನ್ನು ಅಪಾಯಕಾರಿಯಾದ ಸಂಶೋಧನೆಯ ಮೂಲಕ ಕಂಡುಕೊಂಡಿದ್ದೇವೆ ಎಂದು ಹೇಳಿದರು. ಇದನ್ನು ಓದಿ: ಆನ್‍ಲೈನ್ ನಲ್ಲಿ ನಿಮಗೆ ಬೇಕಾದ ತಳಿಯ ಹಸುಗಳನ್ನು ಖರೀದಿಸಿ!- ಏನಿದರ ವಿಶೇಷತೆ?

    ಮುಂದಿನ ಹಂತದಲ್ಲಿ ಇದನ್ನು ಇಲಿಗಳ ಮೇಲೆ ಪ್ರಯೋಗ ಮಾಡಲಾಗುತ್ತದೆ. ಅದು ಯಶಸ್ಸು ಕಂಡನಂತರ ವಿವಿಧ ರೀತಿಯ ಕ್ಯಾನ್ಸರ್ ವಿಧಗಳಿಗೆ ಮಾತ್ರೆಗಳನ್ನು ತಯಾರಿಸಲಾಗುವುದು ಎಂದರು.

    ಈ ಕುರಿತು ಮಾತನಾಡಿದ ತೋಮರ್, ಕ್ಯಾನ್ಸರ್ ಚಿಕಿತ್ಸೆಗೆ ನೀಡುವ ಕೆಮೊಥೆರಪಿಯಿಂದ ಶರೀರದಲ್ಲಿನ ಕ್ಯಾನ್ಸರ್ ಜೀವಕೋಶಗಳೊಂದಿಗೆ ಇನ್ನುಳಿದ ಜೀವಕೋಶಗಳನ್ನೂ ಸಹ ಅದು ಕೊಲ್ಲುತ್ತದೆ. ಆದರೆ ಗೋ ಮೂತ್ರ ಕೇವಲ ಕ್ಯಾನ್ಸರ್ ಪೀಡಿತ ಕೋಶಗಳನ್ನು ಮಾತ್ರ ಕೊಲ್ಲುತ್ತದೆ ಎಂದು ಹೇಳಿದರು.