Tag: Chemistry of Kariyappa

  • `ಕರಿಯಪ್ಪ’ ಸೆಲೆಬ್ರಿಟಿ ಶೋ

    `ಕರಿಯಪ್ಪ’ ಸೆಲೆಬ್ರಿಟಿ ಶೋ

    ಬೆಂಗಳೂರು: ತಬಲನಾಣಿ, `ಕಿರಿಕ್ ಪಾರ್ಟಿ’ ಚಂದನ್ ಆಚಾರ್, ಅಪೂರ್ವ, ಸಂಜನಾ ಹಾಗೂ ಡಾ.ಡಿ.ಎಸ್.ಮಂಜುನಾಥ್ ಹಾಗೂ ಸುಚೇಂದ್ರ ಪ್ರಸಾದ್ ಪ್ರಮುಖ ಭೂಮಿಕೆಯಲ್ಲಿರುವ `ಕೆಮಿಸ್ಟ್ರಿ ಆಫ್ ಕರಿಯಪ್ಪ’ ಯಶಸ್ವಿಯಾಗಿ 25 ದಿನ ಪೂರೈಸಿ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಸೆಲೆಬ್ರಿಟಿ ಶೋ ಏರ್ಪಡಿಸಿತ್ತು. `ಗುಳ್ಟು’ ನವೀನ್, ಪ್ರಥಮ್, ನವೀನ್ ಸಜ್ಜು, ಶಶಿಕುಮಾರ್, ಭುವನ್ ಪೊನ್ನಣ್ಣ ಸೇರಿದಂತೆ ಬಿಗ್‍ಬಾಸ್‍ನ ಅನೇಕ ಸ್ಪರ್ಧಿಗಳು ಸಿನಿಮಾ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

    `ಚಿತ್ರದಲ್ಲಿ ಕಾಮಿಡಿಯೇ ಪ್ಲಸ್ ಪಾಯಿಂಟ್. ತಬಲ ನಾಣಿ ಟೈಮಿಂಗ್ಸ್ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಹಕಾರಿಯಾಗಿದೆ. ಡೈರೆಕ್ಟರ್ ಕುಮಾರ್ ಎಫರ್ಟ್ ಎದ್ದು ಕಾಣುತ್ತದೆ. ತುಂಬಾ ನೀಟಾದ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ’ ಎಂದು `ಗುಳ್ಟು’ ನವೀನ್ ಅಭಿಪ್ರಾಯಪಟ್ಟರೆ, `ಸಿನಿಮಾ ಆರಾಮಾಗಿ ನೋಡಿಸಿಕೊಂಡು ಹೋಗುತ್ತದೆ. ಮುಗಿಯೋದೇ ಗೊತ್ತಾಗಲ್ಲ. ಕಾಮಿಡಿ ಹಾಗೂ ಮೆಸೇಜ್ ತುಂಬಾ ಚೆನ್ನಾಗಿದೆ’ ಎಂದು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಶಶಿಕುಮಾರ್. ಇದೇ ರೀತಿ ಸಿನಿಮಾ ನೊಡಿದವರೆಲ್ಲರೂ ಮೆಚ್ಚುಗೆಯ ಮಾತನಾಡಿ ಚಿತ್ರತಂಡದ ಶ್ರಮಕ್ಕೆ ಬೆನ್ನು ತಟ್ಟಿದ್ದಾರೆ.

    ಕನ್ನಡ ಸಂಘದಿಂದ ಚಿತ್ರತಂಡಕ್ಕೆ ಸನ್ಮಾನ:

    25 ದಿನ ಪೂರೈಸಿದ ಹಿನ್ನೆಲೆಯಲ್ಲಿ `ಗೆಲುವು ಕನ್ನಡ ಗೆಳೆಯರ ಸಮಿತಿ’ಯ ಕೃಷ್ಣಣ್ಣ ಎಂಬುವವರ ನೇತೃತ್ವದಲ್ಲಿ ಇಡೀ ಥಿಯೇಟರ್‍ನ್ನು ಬುಕ್ ಮಾಡಿ ಸುಮಾರು 150ಕ್ಕೂ ಹೆಚ್ಚು ಕುಟುಂಬದವರು ಸಿನಿಮಾ ನೋಡಿ ಚಿತ್ರತಂಡವನ್ನು ಪ್ರಶಂಸಿಸಿದ್ದಾರೆ. ಚಿಕ್ಕವರಿಂದ ದೊಡ್ಡವರವರೆಗೂ `ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ನೋಡಿ ಚಿತ್ರತಂಡವನ್ನು ಆತ್ಮೀಯವಾಗಿ ಸನ್ಮಾನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರತಂಡದಿಂದ ವೀರಯೋಧ ಗುರು ಕುಟುಂಬಕ್ಕೆ ಧನಸಹಾಯ

    ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರತಂಡದಿಂದ ವೀರಯೋಧ ಗುರು ಕುಟುಂಬಕ್ಕೆ ಧನಸಹಾಯ

    ಮಂಡ್ಯ: ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ವೀರಯೋಧ ಎಚ್ ಗುರು ಅವರ ಕುಟುಂಬದವರನ್ನು ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರತಂಡ ಭೇಟಿ ಮಾಡಿ ಸಾಂತ್ವನ ಹೇಳಿದೆ. ಇದೇ ವೇಳೆ ಭಾನುವಾರದ ಚಿತ್ರಮಂದಿರದ ಕಲೆಕ್ಷನ್ ಮೊತ್ತದ ಹಣವನ್ನು ಗುರು ಅವರ ಕುಟುಂಬಕ್ಕೆ ಚೆಕ್ ಮೂಲಕ ನೀಡಿದೆ.

    ಚಿತ್ರದ ಪ್ರಮುಖ ನಟರಾದ ತಬಲಾ ನಾಣಿ, ಅಪೂರ್ವಶ್ರೀ, ಸಂಜನಾ ಆನಂದ್, ನಿರ್ದೇಶಕ ಕುಮಾರ್, ನಿರ್ಮಾಪಕರಾದ ಡಾ.ಡಿ.ಎಸ್.ಮಂಜುನಾಥ್ ಹಾಗೂ ಕಾರ್ಯಕಾರಿ ನಿರ್ಮಾಪಕ ಶ್ರೀನಿವಾಸ್ ಅವರು ಗುರು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

    ಈ ವೇಳೆ ಮಾತನಾಡಿದ ಹಿರಿಯ ನಟ ತಬಲ ನಾಣಿ ಅವರು, ದೇಶ ಕಾಯುವವರು ದೇವರು ಎಂಬ ಭಾವನೆ ನಮ್ಮದು. ಗುರು ಅವರ ಅಂತಿಮ ದರ್ಶನ ಪಡೆಯಲು ಕೂಡ ಅಂದು ಆಗಮಿಸಿದ್ದೇವು. ಆದರೆ ಆ ವೇಳೆ ಕುಟುಂಬಸ್ಥರನ್ನು ಮಾತನಾಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಇಂದು ಇಡೀ ತಂಡ ಭೇಟಿ ನೀಡಿ ಸಾಂತ್ವನ ಹೇಳಿದ್ದೇವೆ. ಅದಕ್ಕಿಂತ ನಮ್ಮಿಂದ ಹೆಚ್ಚೇನು ಮಾಡಲು ಸಾಧ್ಯ, ನಮ್ಮ ತಂಡದಿಂದ ಕಿರು ಸಹಾಯವನ್ನು ಕುಟುಂಬಸ್ಥರಿಗೆ ನೀಡಿದ್ದೇವೆ ಎಂದರು.

    ಬಳಿಕ ಮಾತನಾಡಿದ ನಟಿ ಅಪೂರ್ವ ಶ್ರೀ ಅವರು, ಸಾವು ಎಲ್ಲರಿಗೂ ಬರುತ್ತದೆ. ಆದರೆ ಇಡೀ ದೇಶವೇ ನೆನೆಯುವಂತಹ ರೀತಿಯಲ್ಲಿ ಗುರು ಅವರ ಸಾವಿನ ಘಟನೆ ನಡೆದಿದೆ. ಪ್ರತಿಕ್ಷಣಾ ನಮ್ಮನ್ನು ಕಾಯುವ ಯೋಧರಿಗೆ ಬೇಕಾದ ಎಲ್ಲಾ ಸೌಲಭ್ಯಗಳು ಸಿಗಬೇಕು. ಇನ್ನು ಮುಂದಾದರು ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಹೇಳಿ ಭಾವುಕರಾದರು.

    ನಿರ್ಮಾಪಕ ಮಂಜುನಾಥ್ ಅವರು ಮಾತನಾಡಿ, ನಮ್ಮ ಸಿನಿಮಾ ಬಿಡುಗಡೆಯ ದಿನವೇ ದುರಂತ ನಡೆದಿತ್ತು. ನಮಗೆ ತೀರ ನೋವು ತಂದಿತ್ತು. ನಾನು ಸೈನ್ಯಕ್ಕೆ ಸೇರಲು ಹೋಗಿ ಫೇಲ್ ಆಗಿ ವಾಪಸ್ ಬಂದೆ. ಸಿನಿಮಾದಲ್ಲಿ ಸೈನಿಕರ ಬಗ್ಗೆ ಹೇಳಲು ಯತ್ನಿಸಿದ್ದೆ. ನನ್ನ ಹಿಂದಿನ ಸಿನಿಮಾ ಸಂಯುಕ್ತ 2 ಸಿನಿಮಾ ಕೂಡ ಯೋಧರ ಹಿನ್ನೆಲೆಯಲ್ಲಿ ಆಯ್ಕೆ ಮಾಡಿಕೊಂಡಿದ್ದೆ. ಅಂದು ಕೂಡ ಸಿನಿಮಾದಲ್ಲಿ ಬಂದ ಸ್ವಲ್ಪ ಹಣವನ್ನು ಯೋಧರಿಗೆ ನೀಡಿದ್ದೆ. ಅದೇ ರೀತಿ ಇಂದು ಕೂಡ ಮಾಡಿದ್ದೇನೆ. ಯೋಧರ ಬೆಂಬಲಕ್ಕೆ ನಿಲ್ಲುವ ನಮ್ಮ ಕಾರ್ಯ ಮುಂದುವರಿಯುತ್ತದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಕ್ಕು ನಿರಾಳವಾಗಲು ನೋಡಲೇ ಬೇಕಾದ ಚಿತ್ರ ಕೆಮಿಸ್ಟ್ರಿ ಆಫ್ ಕರಿಯಪ್ಪ!

    ನಕ್ಕು ನಿರಾಳವಾಗಲು ನೋಡಲೇ ಬೇಕಾದ ಚಿತ್ರ ಕೆಮಿಸ್ಟ್ರಿ ಆಫ್ ಕರಿಯಪ್ಪ!

    ಬೆಂಗಳೂರು: ಸಮಸ್ಯೆಗಳು ಏನೇ ಇದ್ದರೂ ನಗುಮುಖದಿಂದಲೇ ಎದುರುಗೊಂಡರೆ ಎಲ್ಲವೂ ಸುಖಮಯವಾಗಿರುತ್ತದೆ ಅಂತೊಂದು ಮಾತಿದೆ. ಅದರ ಸಾರವನ್ನೇ ಆತ್ಮವಾಗಿಸಿಕೊಂಡು ಭರಪೂರ ನಗುವಿನ ಒಡ್ಡೋಲಗದಲ್ಲಿಯೇ ಗಂಭೀರ ವಿಚಾರವನ್ನ ಹೇಳೋ ವಿಭಿನ್ನ ಬಗೆಯ ಚಿತ್ರ ಕೆಮಿಸ್ಟ್ರಿ ಆಫ್ ಕರಿಯಪ್ಪ. ಇಲ್ಲಿ ಎಲ್ಲರ ಬದುಕಿಗೂ ಹತ್ತಿರಾದ ಗಂಭೀರ ವಿಚಾರಗಳಿವೆ. ಭಾವನಾತ್ಮಕ ಸನ್ನಿವೇಶಗಳೂ ಇವೆ. ಪ್ರೀತಿ, ಪ್ರೇಮ ಸೇರಿದಂತೆ ಎಲ್ಲವೂ ಇವೆ. ಆದರೆ ಯಾವುದೂ ಗೋಜಲಾಗದಂತೆ ನೋಡುಗರನ್ನೆಲ್ಲ ಜಂಜಾಟ ಮರೆತು ನಗುವಂತೆ ಮಾಡೋ ಸಿನಿಮಾ ಕೆಮಿಸ್ಟ್ರಿ ಆಫ್ ಕರಿಯಪ್ಪ.

    ಪೋಸ್ಟರ್‍ಗಳ ಮೂಲಕವೇ ಇದು ಭಿನ್ನ ಜಾಡಿನ ಚಿತ್ರ ಅನ್ನೋ ಸುಳಿವು ಸಿಕ್ಕಿತ್ತು. ಟ್ರೈಲರ್ ಹೊರ ಬಂದಾಗ ಈ ಸಿನಿಮಾ ಪೋಲಿತನ ಹೊದ್ದ ಸಂಭಾಷಣೆಗಳಿಂದಲೇ ಶೃಂಗರಿಸಲ್ಪಟ್ಟಿದೆಯಾ ಎಂಬ ಗುಮಾನಿಯೂ ಕಾಡಿತ್ತು. ಆದರೆ ಈ ಸಿನಿಮಾ ನೋಡಿದ ಪ್ರತಿಯೊಬ್ಬರ ಮುಖದಲ್ಲಿಯೂ ವಿಶಿಷ್ಟವಾದ ಚಿತ್ರವೊಂದನ್ನು ನೋಡಿದ ತೃಪ್ತಿಯ ಮಂದಹಾಸ ಸ್ಪಷ್ಟವಾಗಿಯೇ ಮೂಡಿಕೊಳ್ಳುತ್ತದೆ. ಇದುವೇ ಡಿಎಸ್ ಮಂಜುನಾಥ್ ನಿರ್ಮಾಣ ಮಾಡಿರೋ ಕುಮಾರ್ ನಿರ್ದೇಶನದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಗೆಲುವಿನ ಮೊದಲ ಹೆಜ್ಜೆ!

    ಈ ಸಿನಿಮಾ ಕಥೆ ತೀರಾ ಸಂಕೀರ್ಣವಾದದ್ದೇನೂ ಅಲ್ಲ. ಆದರೆ ಅದನ್ನು ಹೇಳಿರೋ ರೀತಿ, ದೃಶ್ಯ ಕಟ್ಟಿರೋ ಜಾಣ್ಮೆಯೇ ಎಲ್ಲರಿಗೂ ಆಪ್ತವಾಗಿಸುತ್ತದೆ. ಮಧ್ಯಮ ವರ್ಗದ ಅಪ್ಪ ಅಮ್ಮ ಮತ್ತು ಅವರಿಗೊಬ್ಬ ಮಗ ಉತ್ತರ ಕುಮಾರ. ಎದೆಮಟ್ಟ ಬೆಳೆದ ಮಗನಿಗೆ ಊರು ತುಂಬಾ ನೂರಾರು ಹುಡುಗೀರನ್ನ ನೋಡಿದರೂ ಸಂಬಂಧ ಕುದುರಿಕೊಳ್ಳೋದಿಲ್ಲ. ಇದರಿಂದಾಗಿ ಈ ಪುಟ್ಟ ಕುಟುಂಬದ ಯಜಮಾನ ಕರಿಯಪ್ಪನಿಗೆ ಮಹಾ ತಲೆನೋವು ಶುರುವಾಗಿ ಬಿಡುತ್ತದೆ. ಒಂದು ಕಡೆ ಮಗನ ವಯಸ್ಸು ಮದುವೆಯ ಗಡಿ ದಾಟುತ್ತಿದೆ. ಇನ್ನೊಂದು ಕಡೆ ಯಾವ ಸಂಬಂಧವೂ ಕುದುರುತ್ತಿಲ್ಲ ಅನ್ನೋ ಸಂಕಟದಲ್ಲಿ ಕರಿಯಪ್ಪ ಇರುವಾಗಲೇ ಪುತ್ರ ಉತ್ತರ ಕುಮಾರ ಚೆಂದದ ಹುಡುಗಿಯೊಬ್ಬಳಿಗೆ ಕಾಳು ಹಾಕಲಾರಂಭಿಸಿರುತ್ತಾನೆ.

    ಹೀಗೆ ಪ್ರೀತಿಸಿ ಮದುವೆಯಾಗೋ ಉತ್ತರ ಕುಮಾರನಿಗೆ ಮೊದಲ ರಾತ್ರಿಯ ದಿನವೇ ಮರ್ಮಾಘಾತ ಮಾಡೋ ಅಂಶ ಯಾವುದು, ಒಂದು ಏಜಿನಲ್ಲಿ ಹೆಣ್ಣುಮಕ್ಕಳು ಆತುರದಿಂದ ವರ್ತಿಸೋದರಿಂದಾಗಿ ಏನೇನೆಲ್ಲ ಸಂಭವಿಸುತ್ತದೆ ಅನ್ನೋ ಕುತೂಹಲ ತಣಿಸಿಕೊಳ್ಳಲು ನೇರವಾಗಿ ಚಿತ್ರ ಮಂದಿರಕ್ಕೆ ತೆರಳಿ. ಅಲ್ಲಿ ಕರಿಯಪ್ಪನ ಕೆಮಿಸ್ಟ್ರಿ ನಿಮ್ಮನ್ನು ಭರಪೂರವಾಗಿ ನಗಿಸುತ್ತಲೇ ಭಾವುಕರನ್ನಾಗಿಸುತ್ತದೆ. ಮತ್ತೆ ನಗುವಿನ ಕಡಲಿಗೆ ತಳ್ಳಿ ಖುಷಿಗೊಳಿಸುತ್ತದೆ. ಈ ಸಿನಿಮಾದ ಅಸಲೀ ಯಶಸ್ಸಿನ ಗುಟ್ಟಿರೋದೇ ಅಲ್ಲಿ.

    ನಿರ್ದೇಶಕ ಕುಮಾರ್ ಪ್ರತೀ ಹಂತದಲ್ಲಿಯೂ ಸೂಕ್ಷ್ಮವಾಗಿಯೇ ಕಾರ್ಯ ನಿರ್ವಹಿಸಿದ್ದಾರೆ. ಅದರಿಂದಲೇ ಅವರು ಗೆದ್ದಿದ್ದಾರೆ. ನಾಯಕ ಚಂದನ್ ಮತ್ತು ನಾಯಕಿ ಸಂಜನಾ ಆನಂದ್ ಕೂಡಾ ಚೆಂದಗೆ ನಟಿಸಿದ್ದಾರೆ. ಕರಿಯಪ್ಪನ ಪಾತ್ರಕ್ಕೆ ಜೀವ ತುಂಬಿರೋ ತಬಲಾ ನಾಣಿ ಇಲ್ಲಿ ಬೇರೆಯದ್ದೇ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲ ಪಾತ್ರವರ್ಗವೂ ಆಪ್ತವಾಗಿದೆ. ಬದುಕಿನ ಕಥೆಯನ್ನು ಹಾಸ್ಯದ ಮೂಲಕವೇ ಹೇಳೋ ಕೆಮಿಸ್ಟ್ರಿ ಆಫ್ ಕರಿಯಪ್ಪ ಎಲ್ಲರಿಗೂ ಇಷ್ಟವಾಗೋ ಚಿತ್ರ ಅನ್ನೋದರಲ್ಲಿ ಸಂದೇಹವಿಲ್ಲ.

    ರೇಟಿಂಗ್- 4/5 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕರಿಯಪ್ಪನ ಕೆಮಿಸ್ಟ್ರಿಗಿದೆಯಾ ಮಂಡ್ಯದ ಲಿಂಕು?

    ಕರಿಯಪ್ಪನ ಕೆಮಿಸ್ಟ್ರಿಗಿದೆಯಾ ಮಂಡ್ಯದ ಲಿಂಕು?

    ಬೆಂಗಳೂರು: ಡಾ.ಡಿ.ಎಸ್ ಮಂಜುನಾಥ್ ನಿರ್ಮಾಣದ ಕೆಮಿಸ್ಟ್ರಿ ಆಫ್ ಕರಿಯಪ್ಪ ಈ ತಿಂಗಳೇ ಥೇಟರಿಗೆ ಬರೋದು ಪಕ್ಕಾ ಆಗಿದೆ. ಮಧ್ಯಮ ವರ್ಗದ ಸಂಸಾರವೊಂದರ ಸುತ್ತಾ ಸಾಗೋ ಚೆಂದದ ಕಥೆ ಹೊಂದಿರೋ ಈ ಸಿನಿಮಾ ಟ್ರೈಲರ್ ತಾಜಾತನದ ಘಮಲನ್ನ ಎಲ್ಲೆಡೆ ಹರಡಿದೆ. ಕನ್ನಡದಲ್ಲಿ ಕಥೆಗಳಿಲ್ಲ ಅನ್ನುತ್ತಲೇ ಪರಭಾಷಾ ಚಿತ್ರಗಳನ್ನು ಚಪ್ಪರಿಸೋ ಮಂದಿಯೂ ಅಚ್ಚರಿಗೊಳ್ಳುವಂಥಾ ಈ ನೆಲದ ಕಥೆಯೊಂದನ್ನು ಕೆಮಿಸ್ಟ್ರಿ ಆಫ್ ಕರಿಯಪ್ಪ ಹೊಂದಿರೋದಂತೂ ಸತ್ಯ.

    ಈ ಕಥೆಯ ಮೂಲವಿರೋದು ನೈಜವಾಗಿ ನಡೆದಿದ್ದ ಘಟನೆಯೊಂದರಲ್ಲಿ ಎಂಬ ವಿಚಾರವನ್ನ ಚಿತ್ರತಂಡವೇ ಹೇಳಿಕೊಂಡಿದೆ. ಈ ಪ್ರಕಾರವಾಗಿ ಹೇಳೋದಾದರೆ ಇದು ವರ್ಷಾಂತರಗಳ ಹಿಂದೆ ಮಂಡ್ಯ ಜಿಲ್ಲೆಯ ಹಳ್ಳಿಯೊಂಣದರಲ್ಲಿ ನಡೆದಿದ್ದ ಘಟನೆಯೊಂದನ್ನು ಆಧರಿಸಿದೆ. ಅದಕ್ಕೆ ನಿರ್ದೇಶಕ ಕುಮಾರ್ ಎಲ್ಲರೂ ಬೆರಗಾಗುವಂತೆ ಸಿನಿಮಾ ಸ್ಪರ್ಶ ನೀಡಿದ್ದಾರೆ.

    ಒಟ್ಟಾರೆಯಾಗಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸೋ ಒಳಗಣ್ಣಿದ್ದರೆ ಮುತ್ತಿನಂಥಾ ಕಥೆಗಳು ಸಿಗುತ್ತವೆ ಅನ್ನೋದಕ್ಕೆ ಈ ಚಿತ್ರವೇ ಸಾಕ್ಷಿ. ಅಪ್ಪ, ಮಗ ಮತ್ತು ಸೊಸೆಯ ಸುತ್ತೋ ಈ ಕಥೆ ಬದುಕಿನ ವಿರಾಟ್ ರೂಪವನ್ನೇ ವತೆರೆದಿಡುತ್ತದೆಯಂತೆ. ಆದರೆ ಗಾಂಭೀರ್ಯದ ಲವಲೇಶವೂ ಇಲ್ಲದೇ ಎಲ್ಲವನ್ನೂ ನೈಜ ಹಾಸ್ಯದ ಮೂಲಕವೇ ನಿರೂಪಣೆ ಮಾಡಿರೋದು ಈ ಸಿನಿಮಾದ ಪ್ಲಸ್ ಪಾಯಿಂಟ್.

    https://www.youtube.com/watch?v=suZuntf8RTE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕರಿಯಪ್ಪನದ್ದು ಬೆಸ್ಟ್ ಟ್ರೈಲರ್ ಅಂದ್ರು ಬಾಲಿವುಡ್ ವಿಮರ್ಶಕ!

    ಕರಿಯಪ್ಪನದ್ದು ಬೆಸ್ಟ್ ಟ್ರೈಲರ್ ಅಂದ್ರು ಬಾಲಿವುಡ್ ವಿಮರ್ಶಕ!

    ಬೆಂಗಳೂರು: ಕುಮಾರ್ ನಿರ್ದೇಶನದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ ಇದೇ ತಿಂಗಳು ಬಿಡುಗಡೆಗೆ ಸಜ್ಜಾಗಿದೆ. ಈ ಹೊತ್ತಿನಲ್ಲಿಯೇ ಕರಿಯಪ್ಪನ ಹವಾ ಕನ್ನಡದ ಗಡಿ ದಾಟಿ ಬೇರೆ ಭಾಷೆಗಳಲ್ಲಿಯೂ ಜೋರಾಗಿದೆ. ಭಿನ್ನ ಹಾದಿಯ, ಹೊಸಾ ಅಲೆಯ ಕನ್ನಡ ಚಿತ್ರವೊಂದು ಈ ಪರಿಯಾಗಿ ಜನಪ್ರಿಯಗೊಂಡಿರೋದರ ಬಗ್ಗೆ ಎಲ್ಲರೂ ಅಚ್ಚರಿಗೊಂಡಿದ್ದಾರೆ!

    ಅಷ್ಟಕ್ಕೂ ಈ ಸಿನಿಮಾ ಟ್ರೈಲರ್ ಇಂಥಾದ್ದೊಂದು ಸಂಚಲನ ಸೃಷ್ಟಿಸಬಹುದೆಂಬ ಅಂದಾಜು ಯಾರಿಗೂ ಇರಲಿಲ್ಲ. ಆದರೆ ಬಿಡುಗಡೆಯಾಗಿ ಕ್ಷಣಗಳುರುಳುತ್ತಲೇ ಇದು ವ್ಯಾಪಕ ಮೆಚ್ಚುಗೆ ಪಡೆದುಕೊಂಡಿತ್ತು. ಲಕ್ಷ ಲಕ್ಷ ವೀವ್ಸನ್ನೂ ಪಡೆದುಕೊಂಡಿತ್ತು. ಹೀಗೆ ಕನ್ನಡದಲ್ಲಿ ಹೊಸತನ, ಕಚಗುಳಿಯಿಡೋ ಕಾಮಿಡಿಯೊಂದಿಗೆ ಕ್ರೇಜ್ ಕ್ರಿಯೇಟ್ ಮಾಡಿ ಬಾಲಿವುಡ್ ವರೆಗೂ ತಲುಪಿಕೊಂಡಿತ್ತು.

    ಈ ಟ್ರೈಲರನ್ನು ಬಾಲಿವುಡ್‍ನ ಖ್ಯಾತ ವಿಮರ್ಶಕ ಅನೂಪ್ ಕುಮಾರ್ ಸಿನ್ಹಾ ಮೆಚ್ಚಿಕೊಂಡಿದ್ದಾರೆ. ಮಾಮೂಲಿ ಧಾಟಿಯಾಚೆಗೆ ಭಿನ್ನ ಪ್ರಯೋಗವನ್ನ ಧ್ವನಿಸುತ್ತಿರೋ ಕೆಮಿಸ್ಟ್ರಿ ಆಫ್ ಕರಿಯಪ್ಪ ಟ್ರೈಲರ್ ತಾನು ಇತ್ತೀಚೆಗೆ ನೋಡಿರೋ ಬೆಸ್ಟ್ ಟ್ರೈಲರ್ ಅಂತ ಸಿನ್ಹಾ ಶಹಬ್ಬಾಸ್‍ಗಿರಿ ಕೊಟ್ಟಿದ್ದಾರೆ. ಯಾವ ಮುಲಾಜೂ ಇಲ್ಲದ ನಿಷ್ಠುರ ವಿಮರ್ಶೆಗೆ ಹೆಸರಾದ ಸಿನ್ಹಾ ಅವರೇ ಹೊಗಳಿರೋದರಿಂದ ಬಾಲಿವುಡ್ ಲೆವೆಲ್ಲಿನಲ್ಲಿಯೂ ಕರಿಯಪ್ಪ ಸದ್ದು ಮಾಡಿದ್ದಾನೆ. ನಾನಾ ಭಾಷೆಗಳಲ್ಲಿಯೂ ಇಂಥಾದ್ದೇ ಮೆಚ್ಚುಗೆ ಕೇಳಿ ಬರುತ್ತಿದೆ. ಈ ಕಾರಣದಿಂದಲೇ ಇದೀಗ ಕರಿಯಪ್ಪನ ಟ್ರೈಲರಿಗೆ ಮಿಲಿಯನ್ನುಗಟ್ಟಲೆ ವೀವ್ಸ್ ಸಿಕ್ಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv