Tag: chemical tanker

  • ದೆಹಲಿಗೆ ರೊಬೋಟಿಕ್ ಅಗ್ನಿಶಾಮಕ ವಾಹನ ಎಂಟ್ರಿ – ಏನೆಲ್ಲಾ ಇದೆ ವಿಶೇಷ?

    ದೆಹಲಿಗೆ ರೊಬೋಟಿಕ್ ಅಗ್ನಿಶಾಮಕ ವಾಹನ ಎಂಟ್ರಿ – ಏನೆಲ್ಲಾ ಇದೆ ವಿಶೇಷ?

    ನವದೆಹಲಿ: ದೇಶದಲ್ಲೇ ಮೊದಲ ಬಾರಿಗೆ ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ 2 ರೊಬೋಟ್ ಅಗ್ನಿಶಾಮಕ ವಾಹನವನ್ನು ಖರೀದಿಸಿದೆ.

    ರಾಜ್ಯದಲ್ಲಿ ಆಗುವಂತಹ ಅಗ್ನಿ ಅವಘಡಗಳ ನಿಯಂತ್ರಣಕ್ಕೆ ಈ ರೊಬೋಟ್ ಅಗ್ನಿಶಾಮಕ ವಾಹನಗಳು ಮಹತ್ವದ ಪಾತ್ರ ವಹಿಸಲಿವೆ. ಕಿರಿದಾದ ರಸ್ತೆ, ಗೋದಾಮು, ಬೇಸ್ಮೆಂಟ್, ಮಹಡಿ, ಅರಣ್ಯ, ಆಯಿಲ್ ಟ್ಯಾಂರ‍್ಸ್ ಎಂಥದ್ದೇ ಸ್ಥಳದಲ್ಲೂ ಕಾರ್ಯ ನಿರ್ವಹಿಸುವ ಪರಿಣಿತಿ ಹೊಂದಿವೆ. ಇದನ್ನೂ ಓದಿ: ಜಮ್ಮು ಸುರಂಗ ಕುಸಿತ – 10 ಮೃತದೇಹಗಳು ಪತ್ತೆ

    Arvind Kejriwal

    300 ಮೀಟರ್ ದೂರದಿಂದಲೇ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಈ ವಾಹನಗಳು ಸುಲಭವಾಗಿ ಮಹಡಿಯನ್ನು ಹತ್ತುತ್ತವೆ. ಸೆನ್ಸಾರ್ ಮತ್ತು ಕ್ಯಾಮೆರಾ ಹಾಕಿದ್ದು ತಾಪಮಾನಕ್ಕೆ ಅನುಗುಣವಾಗಿ ನೀರು ಬಿಡುಗಡೆ ಮಾಡಲಿದೆ. ದೆಹಲಿಯ ಪಿವಿಸಿ ಮಾರ್ಕೆಟ್‌ನಲ್ಲಿ ನಡೆದ ಅಗ್ನಿ ಅವಘಡದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ ಜನರ ರಕ್ಷಣೆಗಾಗಿ ಈ ಉಪಕ್ರಮವನ್ನು ತೆಗೆದುಕೊಂಡಿದೆ. ಇದನ್ನೂ ಓದಿ: ಟ್ರ್ಯಾಕ್ಟರ್ ಏರಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಸಂಸದ ಸಂಗಣ್ಣ ಕರಡಿ

    fire
    ಸಾಂದರ್ಭಿಕ ಚಿತ್ರ

    ಈ ಕುರಿತು ಮಾತನಾಡಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಈ ಉಪಕ್ರಮವು ಅಮೂಲ್ಯ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ. ನಮ್ಮ ಅಗ್ನಿಶಾಮಕ ದಳದವರು 100 ಮೀಟರ್‌ಗಳಷ್ಟು ಸುರಕ್ಷಿತ ದೂರದಿಂದ ಹೋರಾಡಿ ಬೆಂಕಿಯನ್ನು ನಂದಿಸಬಹುದು. ಈ ಮಿಷನ್‌ಗಳು 300 ಮೀಟರ್ ದೂರದಿಂದಲೇ ಕಾರ್ಯ ನಿರ್ವಹಿಸುವುದರಿಂದ ಅಗ್ನಿಶಾಮಕ ದಳಕ್ಕೆ ಮತ್ತಷ್ಟು ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.

  • ಸೂರತ್‍ನಲ್ಲಿ ಟ್ಯಾಂಕರ್‌ನಿಂದ ವಿಷಕಾರಿ ಅನಿಲ ಸೋರಿಕೆ – 5 ಮಂದಿ ಸಾವು, 20 ಮಂದಿ ಅಸ್ವಸ್ಥ

    ಸೂರತ್‍ನಲ್ಲಿ ಟ್ಯಾಂಕರ್‌ನಿಂದ ವಿಷಕಾರಿ ಅನಿಲ ಸೋರಿಕೆ – 5 ಮಂದಿ ಸಾವು, 20 ಮಂದಿ ಅಸ್ವಸ್ಥ

    ಗಾಂಧೀನಗರ: ಗುಜರಾತ್‍ನ ಸೂರತ್ ಜಿಲ್ಲೆಯ ಕಾರ್ಖಾನೆಯೊಂದರ ಬಳಿ ನಿಲ್ಲಿಸಿದ್ದ ರಾಸಾಯನಿಕ ಟ್ಯಾಂಕರ್‍ನಿಂದ ವಿಷಕಾರಿ ಅನಿಲ ಸೋರಿಕೆಯಾಗಿದ್ದು, ಕಾರ್ಖಾನೆಯ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 20 ಮಂದಿ ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆ ವೇಳೆ ಸಚಿನ್ ಜಿಐಡಿಸಿನ ರಸ್ತೆ ಕೈಗಾರಿಕಾ ಪ್ರದೇಶದಲ್ಲಿರುವ ಡೈಯಿಂಗ್ ಫ್ಯಾಕ್ಟರಿಯೊಳಗೆ ಕಾರ್ಮಿಕರಿದ್ದರು ಎಂದು ಸೂರತ್ ಮುನ್ಸಿಪಲ್ ಕಾರ್ಪೊರೇಶನ್‍ನ ಉಸ್ತುವಾರಿ ಮುಖ್ಯ ಅಗ್ನಿಶಾಮಕ ಅಧಿಕಾರಿ ಬಸಂತ್ ಪರೀಕ್ ತಿಳಿಸಿದ್ದಾರೆ. ಇದನ್ನೂ ಓದಿ: ಜಾರ್ಖಂಡ್‍ ಭೀಕರ ರಸ್ತೆ ಅಪಘಾತ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ

    ಮುಂಜಾನೆ 4.25 ರ ಸುಮಾರಿಗೆ ಈ ಘಟನೆ ಕುರಿತಂತೆ ಅಗ್ನಿಶಾಮಕ ದಳಕ್ಕೆ ಕರೆ ಬಂದಿದ್ದು, ಕಾರ್ಖಾನೆಯ ರಸ್ತೆ ಬದಿ ನಿಲ್ಲಿಸಿದ್ದ ರಾಸಾಯನಿಕ ಟ್ಯಾಂಕರ್‌ನಿಂದ ವಿಷಕಾರಿ ಅನಿಲ ಸೋರಿಕೆಯಾಗಿದೆ. ಈ ವೇಳೆ ಟ್ಯಾಂಕರ್‌ನಿಂದ 10 ಮೀಟರ್ ದೂರದಲ್ಲಿ ಮಲಗಿದ್ದ ಹಲವಾರು ಕಾರ್ಮಿಕರಿಗೆ ಉಸಿರುಕಟ್ಟಿದ ಪರಿಣಾಮ 25 ರಿಂದ 26 ಕಾರ್ಮಿಕರು ಪ್ರಜ್ಞಾಹೀನರಾಗಿದ್ದಾರೆ. ಸದ್ಯ ಎಲ್ಲರನ್ನು ನ್ಯೂ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದರಲ್ಲಿಯೂ 8 ಮಂದಿಯ ಸ್ಥಿತಿ ಗಂಭೀರವಾಗಿದೆ ಮತ್ತು ಐವರು ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ತರಕಾರಿ, ಹಣ್ಣುಗಳನ್ನು ಲಂಚವಾಗಿ ಪಡೆಯುತ್ತಿದ್ದ ಅಧಿಕಾರಿಗಳು!

  • ಯಲ್ಲಾಪುರದಲ್ಲಿ ಕೆಮಿಕಲ್ ಟ್ಯಾಂಕರ್ ಸ್ಫೋಟ – ತಪ್ಪಿದ ಭಾರೀ ಅನಾಹುತ

    ಯಲ್ಲಾಪುರದಲ್ಲಿ ಕೆಮಿಕಲ್ ಟ್ಯಾಂಕರ್ ಸ್ಫೋಟ – ತಪ್ಪಿದ ಭಾರೀ ಅನಾಹುತ

    ಕಾರವಾರ: ಕೆಮಿಕಲ್ ತುಂಬಿದ ಟ್ಯಾಂಕರ್ ಪಲ್ಟಿಯಾಗಿ ಹೊತ್ತಿ ಉರಿದ ಘಟನೆ ಯಲ್ಲಾಪುರ ತಾಲೂಕಿನ ಆರೆಬೈಲ್ ಕ್ರಾಸ್‍ನ ಇಡಗುಂದಿ ಬಳಿ ನಡೆದಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಅಂಕೋಲ ರಾಷ್ಟ್ರೀಯ ಹೆದ್ದಾರಿ 66ರ ಸಂಚಾರವನ್ನು ಕೆಲಕಾಲ ಬಂದ್ ಮಾಡಲಾಗಿತ್ತು, ಇದೀಗ ಸಂಚಾರ ಮುಕ್ತವಾಗಿದೆ.

    ಬೆಳಗ್ಗೆ ಸುಮಾರು 5.30ರಿಂದ 5.45ರ ನಡುವೆ ಅಂಕೋಲ ಭಾಗದ ಕಡೆ ತೆರಳುತಿದ್ದ ಟ್ಯಾಂಕರ್ ಚಾಲಕನ ನಿರ್ಲಕ್ಷದಿಂದ ಘಾಟಿಯಲ್ಲಿ ಪಲ್ಟಿಯಾಗಿ ಸ್ಫೋಟಗೊಂಡಿದೆ. ಈ ವೇಳೆ ಚಾಲಕನಿಗೆ ಅಲ್ಪ ಗಾಯವಾಗಿದ್ದು ತಕ್ಷಣದಲ್ಲಿ ಆತನನ್ನು ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಕಲಬುರಗಿಯಲ್ಲಿ ಮತ್ತೆ ಕಂಪಿಸಿದ ಭೂಮಿ – ಸಿದ್ದರಾಮಯ್ಯಗೂ ಭೂಕಂಪನದ ಅನುಭವ

    ಸ್ಫೋಟದಿಂದ 500ಮೀಟರ್‍ಗೂ ಹೆಚ್ಚು ದೂರು ಬೆಂಕಿ ಅಲ್ಲಲ್ಲಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. 300-400 ಮೀಟರ್ ದೂರಗಳಷ್ಟು ಏನಾಗಿದೆ ಅನ್ನೋ ಮಾಹಿತಿ ದೊರೆಯದೆ ಅಧಿಕಾರಿಗಳು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ಕಮಲಾನಗರದಲ್ಲಿ ಕಟ್ಟಡ ಕುಸಿಯೋ ಭೀತಿ!

    ಯಲ್ಲಾಪುರದ ಇಡಗುಂದಿ ಬಳಿ ಪಲ್ಟಿಯಾಗಿ ಬಿದ್ದಿರುವ ಕೆಮಿಕಲ್ ಟ್ಯಾಂಕರ್‍ನಿಂದ ಹೊರಕ್ಕೆ ಬಿದ್ದು ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ.