Tag: Chemical Leakage

  • ರಸಗೊಬ್ಬರ ತಯಾರಿಕೆ ಹೆಸರಲ್ಲಿ ಸಲ್ಫ್ಯೂರಿಕ್ ಆ್ಯಸಿಡ್ ಉತ್ಪಾದನೆ – ಲಕ್ಷಾಂತರ ರೂ. ಬೆಳೆ ಹಾನಿ

    ರಸಗೊಬ್ಬರ ತಯಾರಿಕೆ ಹೆಸರಲ್ಲಿ ಸಲ್ಫ್ಯೂರಿಕ್ ಆ್ಯಸಿಡ್ ಉತ್ಪಾದನೆ – ಲಕ್ಷಾಂತರ ರೂ. ಬೆಳೆ ಹಾನಿ

    ಮಂಡ್ಯ: ರಸಗೊಬ್ಬರ ತಯಾರಿಕೆಯ ಹೆಸರಿನಲ್ಲಿ ಸಲ್ಫ್ಯೂರಿಕ್ ಆಸಿಡ್ ಉತ್ಪಾದಿಸಿ, ವಿಷಾನಿಲ ಸೋರಿಕೆಯಾಗಿ ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿಯಾಗಿರುವ ಘಟನೆ ಮಂಡ್ಯದ ಕಾರೇಕಟ್ಟೆ ಗ್ರಾಮದಲ್ಲಿ ನಡೆದಿದೆ.

    ಕೀರ್ತಿ ಕೆಮಿಕಲ್ ಫ್ಯಾಕ್ಟರಿ ಹೆಸರಿನ ರಸಗೊಬ್ಬರ ತಯಾರಿಕಾ ಘಟಕ ಗ್ರಾಮದ ಹೊರವಲಯದಲ್ಲಿ ಕೆಲ ದಿನಗಳಿಂದ ಅನುಮತಿ ಪಡೆಯದೇ ಸಲ್ಫ್ಯೂರಿಕ್ ಆ್ಯಸಿಡ್ ತಯಾರಿಸುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹಾಗೆಯೇ ಸ್ಥಳೀಯ ರೈತರು ಕಾರ್ಖಾನೆಗೆ ಮುತ್ತಿಗೆ ಹಾಕಿ ಬಾಗಿಲು ಮುಚ್ಚಿಸಿದ್ದಾರೆ. ಇದನ್ನೂ ಓದಿ: ಪಾದಯಾತ್ರೆ ಕೇಸ್‍ಗೆ ಕೌಂಟರ್ ಕೊಡಲು ಕೈ ಪಾಳಯ ಸಿದ್ಧ

    ಕಾರ್ಖಾನೆಯ ವಿಷಾನಿಲ ಸೋರಿಕೆಯಿಂದಾಗಿ 15 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ತೆಂಗು, ರಾಗಿ, ಹುರುಳಿ ಬೆಳೆಗಳು ನಾಶವಾಗಿದೆ. ಸುತ್ತಮುತ್ತಲ ಗ್ರಾಮದ ಕೆಲವರಿಗೆ ಉಸಿರಾಟದ ಸಮಸ್ಯೆಯೂ ಕಂಡುಬಂದಿದೆ ಎಂದು ನಷ್ಟಕ್ಕೊಳಗಾದ ಗ್ರಾಮಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಮದ್ಯಪಾನಕ್ಕೆ ಕರೆದೊಯ್ದು ಸ್ನೇಹಿತರಿಂದಲೇ ಯುವಕನ ಕತ್ತು ಕೊಯ್ದು ಕೊಲೆ

    ಕಾರ್ಖಾನೆಯನ್ನು ಅನುಮತಿ ಪಡೆದೇ ಆರಂಭಿಸಿದ್ದೇವೆ ಎಂದು ಕೀರ್ತಿ ಕಾರ್ಖಾನೆಯ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡುತ್ತೇವೆ ಎಂದು ತಿಳಿಸಿದೆ. ಆದರೂ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚುವಂತೆ ಸ್ಥಳೀಯ ರೈತರು ಆಗ್ರಹಿಸುತ್ತಿದ್ದಾರೆ.

  • ವಿಷಕಾರಿ ರಾಸಾಯನಿಕ ಸೋರಿಕೆ ಸಿಬ್ಬಂದಿ ಸಾವು – ಮೂವರು ಅಸ್ವಸ್ಥ

    ವಿಷಕಾರಿ ರಾಸಾಯನಿಕ ಸೋರಿಕೆ ಸಿಬ್ಬಂದಿ ಸಾವು – ಮೂವರು ಅಸ್ವಸ್ಥ

    ರಾಯಚೂರು: ನಗರದ ಹೊರವಲಯದ ವಡ್ಲೂರ್ ಕ್ರಾಸ್ ಬಳಿಯ ಫಾರ್ಮಾ ಕಂಪನಿಯೊಂದರಲ್ಲಿ ವಿಷಕಾರಿ ರಾಸಾಯನಿಕ ಸೋರಿಕೆಯಿಂದ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದಾನೆ. ರಾಯಚೂರು ಲ್ಯಾಬರೋಟಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ದುರ್ಘಟನೆ ನಡೆದಿದೆ. ಲಕ್ಷ್ಮಣ್ (28) ಕಂಪನಿಯ ಕೆಮಿಸ್ಟ್ ಸಾವನ್ನಪ್ಪಿದ್ದಾರೆ.

    ಘಟನೆಯಲ್ಲಿ ಒಟ್ಟು ನಾಲ್ಕು ಜನ ಅಸ್ವಸ್ಥರಾಗಿ ಒರ್ವ ಸಾವನ್ನಪ್ಪಿದ್ದಾರೆ. ಇನ್ನೊರ್ವನ ಸ್ಥಿತಿ ಗಂಭೀರವಾಗಿದೆ. ಇನ್ನೂ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತ ದೇಹವನ್ನ ರಿಮ್ಸ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಐದು ತಿಂಗಳ ಹಿಂದೆ ಲಕ್ಷ್ಮಣ್ ಮದುವೆಯಾಗಿದ್ದರು.

    ಸಿಪಿಪಿ (ಕ್ಲೋರಿನೇಟೆಡ್ ಪಾಲಿಪ್ರೋಪೈಲೇನ್) ರಾಸಾಯನಿಕ ಮಾನವನ ಶ್ವಾಸಕೋಶಕ್ಕೆ ದುಷ್ಪರಿಣಾಮ ಬೀರುತ್ತದೆ. ಕೆಮಿಕಲ್ ಲಕ್ಷ್ಮಣ್ ದೇಹ ಸೇರಿದ್ದರಿಂದ ಉಸಿರಾಟ ತೊಂದರೆಯಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನುಳಿದ ಮೂವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕೂಡಲೇ ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.