Tag: cheluvina chittara

  • `ಚೆಲುವಿನ ಚಿತ್ತಾರ’ ನನ್ನ ಜೀವನದಲ್ಲಿ ಕೇವಲ ಸಿನಿಮಾ ಆಗಿ ಉಳಿದಿಲ್ಲ: ಅಮೂಲ್ಯ ಭಾವುಕ

    `ಚೆಲುವಿನ ಚಿತ್ತಾರ’ ನನ್ನ ಜೀವನದಲ್ಲಿ ಕೇವಲ ಸಿನಿಮಾ ಆಗಿ ಉಳಿದಿಲ್ಲ: ಅಮೂಲ್ಯ ಭಾವುಕ

    ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ, ಸಿನಿಮಾರಂಗದಿಂದ ಬ್ರೇಕ್ ತೆಗೆದುಕೊಂಡು ಇದೀಗ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅಮೂಲ್ಯ ವೃತ್ತಿ ಜೀವನಕ್ಕೆ ಬ್ರೇಕ್ ಕೊಟ್ಟ ಐಸು ನಾ ನೆನಪು ಮಾಡಿದ್ದಾರೆ. ಸ್ಟಾರ್ ನಾಯಕಿ ಪಟ್ಟ ತಂದು ಚೆಲುವಿನ ಚಿತ್ತಾರ ಚಿತ್ರದ ಬಗ್ಗೆ ಭಾವುಕರಾಗಿದ್ದಾರೆ.

    ಬಾಲನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಮೋಡಿ ಮಾಡಿದ್ದ ಅಮೂಲ್ಯ, ಬಳಿಕ `ಚೆಲುವಿನ ಚಿತ್ತಾರ’ದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ನಾಯಕಿಯಾಗುವ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟರು. ಸ್ಟಾರ್ ನಾಯಕಿ ಪಟ್ಟ ತಂದು ಕೊಟ್ಟಿರೋ `ಚೆಲುವಿನ ಚಿತ್ತಾರ’ ಚಿತ್ರ ತೆರೆಕಂಡು ಇದೀಗ 15 ವರ್ಷಗಳಾಗಿದೆ. ಈ ವೇಳೆ ತನ್ನ ಸಿನಿಮಾ ಜರ್ನಿಯ ಐಸು ಪಾತ್ರವನ್ನು ನೆನೆದು ನಟಿ ಅಮೂಲ್ಯ ಟ್ವೀಟ್ ಮಾಡಿದ್ದಾರೆ.

    `ಚೆಲುವಿನ ಚಿತ್ತಾರ’ ಎಂಬ ಮೊದಲ ಸಿನಿಮಾ, ನನ್ನ ಜೀವನದಲ್ಲಿ ಕೇವಲ ಸಿನಿಮಾ ಆಗಿ ಉಳಿದಿಲ್ಲ. ಅದು ಅಪಾರ ನೆನಪುಗಳ ಆಗರವಾಗಿದೆ, ಅದು ನನ್ನ ಬಣ್ಣ ಹಚ್ಚುವ ಕನಸಿಗೆ ಹೊಸ ದಿಶೆ ನೀಡಿದ ಕೂಸಾಗಿದೆ. `ಚೆಲುವಿನ ಚಿತ್ತಾರ’ ಚಿತ್ರದ ಮೂಲಕ ನನ್ನನ್ನು ನಾಯಕಿ ನಟಿಯಾಗಿ ಪರಿಚಯಿಸಿ, ಕನ್ನಡ ಜನತೆಯ ಮನಸ್ಸಲ್ಲಿ ಐಸೂ ಎನ್ನುವ ಹೆಸರಿನೊಂದಿಗೆ ಎಂದು ಅಮೂಲ್ಯ ಟ್ವೀಟ್ ಮಾಡುವ ಮೂಲಕ ಚಿತ್ರದ ಸವಿನೆನಪನ್ನು ಮೆಲಕು ಹಾಕಿದ್ದಾರೆ. ಈ ವೇಳೆ ನಿರ್ದೇಶಕ ಎಸ್.ನಾರಾಯಣ್, ನಟ ಗಣೇಶ್ ಮತ್ತು ಹರಿಸಿದ ಎಲ್ಲಾ ಅಭಿಮಾನಿಗಳಿಗೆ ಅಮೂಲ್ಯ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ:ಶಿವರಾಜ್ ಕುಮಾರ್ ಹೊಸ ಚಿತ್ರಕ್ಕೆ ಪತ್ನಿ ಗೀತಾ ಶಿವರಾಜ್ ಕುಮಾರ್ ಕ್ಲ್ಯಾಪ್

    ನಟಿ ಅಮೂಲ್ಯ ಜಗದೀಶ್ ಚಂದ್ರ ಅವರನ್ನು ಮದುವೆಯಾಗಿ, ಇದೀಗ ಮಕ್ಕಳ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿನ ಐಸು ನಯಾ ಫೋಟೋಶೂಟ್ ನೋಡಿ ಫ್ಯಾನ್ಸ್ ಮತ್ತೆ ಸಿನಿಮಾರಂಗಕ್ಕೆ ಕಮ್‌ಬ್ಯಾಕ್ ಆಗಿ ಅಂತಾ ನಟಿಗೆ ಕೇಳ್ತಿದ್ದಾರೆ.

    Live Tv

  • ಅವಳಿ ಮಕ್ಕಳೊಂದಿಗೆ ಅಣ್ಣಮ್ಮ ದೇವಸ್ಥಾನಕ್ಕೆ ನಟಿ ಅಮೂಲ್ಯ ಭೇಟಿ

    ಅವಳಿ ಮಕ್ಕಳೊಂದಿಗೆ ಅಣ್ಣಮ್ಮ ದೇವಸ್ಥಾನಕ್ಕೆ ನಟಿ ಅಮೂಲ್ಯ ಭೇಟಿ

    ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ ತಮ್ಮ ಅವಳಿ ಮಕ್ಕಳಿಗೆ ಮೂರು ತಿಂಗಳು ಸಮೀಪಿಸುತ್ತಿದೆ ಎಂದು ಬೆಂಗಳೂರಿನ ಅಣ್ಣಮ್ಮ ದೇಗುಲಕ್ಕೆ ಭೇಟಿ ನೀಡಿ, ದೇವಿದೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    `ಚೆಲುವಿನ ಚಿತ್ತಾರ’ ಚಿತ್ರದ ಮೂಲಕ ನಾಯಕಿಯಾಗಿ ಜನಮನಗೆದ್ದ ನಟಿ ಅಮೂಲ್ಯ, ಸಾಕಷ್ಟು ಚಿತ್ರಗಳ ಮೂಲಕ ಸ್ಟಾರ್‌ಗಳ ಜತೆ ನಟಿಸಿ ಸೈ ಎನಿಸಿಕೊಂಡವರು. ಬೇಡಿಕೆ ಇರುವಾಗಲೇ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡು ಮದುವೆ ಸಂಸಾರ ಅಂತಾ ಬ್ಯುಸಿಯಾಗಿ ಬಿಟ್ಟರು. ಇದೀಗ ಪತಿ ಜಗದೀಶ್ ಚಂದ್ರ ಮತ್ತು ಅವಳಿ ಗಂಡು ಮಕ್ಕಳೊಂದಿಗೆ ಅಣ್ಣಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

    ಇಂದು ನಮ್ಮ ಮಕ್ಕಳಿಗೆ ಮೂರು ತಿಂಗಳು ಸಮೀಪಿಸುತ್ತಿರುವ ಶುಭ ಸಂದರ್ಭದಲ್ಲಿ, ಗಾಂಧಿನಗರದ ಮೆಜೆಸ್ಟಿಕ್‌ನಲ್ಲಿರುವ ನಗರ ದೇವತೆ, ಬೆಂಗಳೂರು ತಾಯಿ ಶ್ರೀ ಅಣ್ಣಮ್ಮ ದೇವಿಯ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ, ಪೂಜೆ ಸಲ್ಲಿಸಿ ದೇವಿಯ ಆರ್ಶೀವಾದ ಪಡೆಯಲಾಯಿತು ಎಂದು ನಟಿ ಅಮೂಲ್ಯ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  • ಗೋಲ್ಡನ್ ಕ್ವೀನ್ ತಾಯ್ತನದ ಜರ್ನಿಗೆ ಎರಡು ತಿಂಗಳು: ಅಮೂಲ್ಯ ಭಾವನಾತ್ಮಕ ಮಾತು

    ಗೋಲ್ಡನ್ ಕ್ವೀನ್ ತಾಯ್ತನದ ಜರ್ನಿಗೆ ಎರಡು ತಿಂಗಳು: ಅಮೂಲ್ಯ ಭಾವನಾತ್ಮಕ ಮಾತು

    ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ ಅವಳಿ ಗಂಡು ಮಕ್ಕಳಿಗೆ ತಾಯಿಯಾಗಿ ತಾಯ್ತನದ ಖುಷಿಯನ್ನು ಅನುಭವಿಸುತ್ತಿದ್ದಾರೆ. ಎರಡು ತಿಂಗಳ ತಾಯ್ತನದ ಖುಷಿಯಲ್ಲಿ ಈ ಹಿಂದಿನ ತಮ್ಮ ಬೇಬಿ ಬಂಪ್ ಫೋಟೋಶೂಟ್‌ನ ಈಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    `ಚೆಲುವಿನ ಚಿತ್ತಾರ’ ಚಿತ್ರದ ಮೂಲಕ ಚಂದನವನಕ್ಕೆ ಪರಿಚಿತರಾದ ನಟಿ ಅಮೂಲ್ಯ, ಸಾಕಷ್ಟು ಸಿನಿಮಾಗಳ ಮೂಲಕ ಛಾಪು ಮೂಡಿಸಿದ್ರು. ಬಳಿಕ ಜಗದೀಶ್ ಆರ್ ಚಂದ್ರ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಚಿತ್ರರಂಗದಿಂದ ಅಂತರ ಕಾಯ್ದುಕೊಂಡ್ರು. ಈಗ ಸಂಸಾರ, ತಮ್ಮ ಅವಳಿ ಮಕ್ಕಳ ಜತೆ ಖುಷಿಯಿಂದ ಕಾಲಕಳೆಯುತ್ತದ್ದಾರೆ. ಇದೀಗ ಅಮೂಲ್ಯ ತಮ್ಮ ಬೇಬಿ ಬಂಪ್ ಫೋಟೋಶೂಟ್ ಜತೆಗೆ ತಮ್ಮ ಮಕ್ಕಳ ಕುರಿತು ಎಮೋಷನಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಮಾರ್ಚ್ ಒಂದಕ್ಕೆ ಮಹಾಶಿವರಾತ್ರಿಯಂದು ಅವಳಿ ಮಕ್ಕಳಿಗೆ ಅಮೂಲ್ಯ ತಾಯಿಯಾಗಿದ್ದರು. ಇದೀಗ ಪೋಸ್ಟ್‌ನಲ್ಲಿ ತಾಯ್ತನದ ಎರಡು ತಿಂಗಳು ಇಂದಿಗೆ, ಇದು ಖಂಡಿತವಾಗಿ ನನ್ನ ಜೀವನದ ಮುಖ್ಯ ಪ್ರಯಾಣವಾಗಿದೆ. ನಾನು ಅವಳಿ ಮಕ್ಕಳಿಗೆ ತಾಯಿಯಾಗಲಿದ್ದೇನೆ ಎಂದು ಕೇಳಿದಾಗ, ನನ್ನ ಹೃದಯ ಬಡಿತ ತಪ್ಪಿಸಿತು. ನನ್ನ ಗರ್ಭಾವಸ್ಥೆಯ ಎಲ್ಲಾ ಸವಾಲುಗಳನ್ನು ಮರೆತುಬಿಡುವಂತೆ ಮಾಡಿತ್ತು. ಜತೆಗೆ ನಾನು ಈಗಾಗಲೇ ನನ್ನ ಬಂಪ್‌ನ್ನು ಕಳೆದುಕೊಂಡಿದ್ದೇನೆ. ತಾಯಿಯು ಜಗತ್ತಿಗೆ ಕೆಚ್ಚೆದೆಯ ಮುಖವನ್ನು ತೋರಿಸುತ್ತಾಳೆ. ಆಕೆಯ ಕಷ್ಟದ ಹಾದಿ ಅವಳಿಗೆ ಮಾತ್ರ ಗೊತ್ತು. ಇದನ್ನೂ ಓದಿ: ʻಆಕಾಶ್ʼ ಚಿತ್ರಕ್ಕೆ 17 ವರ್ಷ : ಈ ಸಿನಿಮಾದ ಹಿಂದಿದೆ ಇಂಟ್ರಸ್ಟಿಂಗ್ ಸ್ಟೋರಿ

     

    View this post on Instagram

     

    A post shared by Amulya (@nimmaamulya)

    ಕೊನೆಯಲ್ಲಿ ನನ್ನ ಪುಟ್ಟ ಮಕ್ಕಳ ಪಾದಗಳನ್ನು ನೋಡಿ..ಖಂಡಿತಾ ಮಕ್ಕಳಿಗೆ ನನ್ನ ಕೈಲಾದಷ್ಟು ಸೇವೆ ಮಾಡಿದ್ದೇನೆ ಮುಂದೆ ಹೀಗೆ ಮುಂದೆವರೆಸಿಕೊಂಡು ಹೋಗುತ್ತೇನೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಇನ್ನು ಈ ಹಿಂದಯೇ ಮಾಡಲಾಗಿದ್ದ ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಅಮೂಲ್ಯ ಗ್ರೀನ್ ಕಲರ್ ಸೀರೆನಲ್ಲಿ ರಾಣಿಯಂತೆ ಕಾಣಿಸಿಕೊಂಡಿದ್ದಾರೆ. ಸದ್ಯ ಅಮೂಲ್ಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.