Tag: Cheluvarayaswamy

  • 5 ವರ್ಷದ ನಂತರ ಮಾಜಿ ಸಚಿವ ಚೆಲುವರಾಯಸ್ವಾಮಿ ಪುತ್ರ ಸಚಿನ್ ಕಮ್ ಬ್ಯಾಕ್

    5 ವರ್ಷದ ನಂತರ ಮಾಜಿ ಸಚಿವ ಚೆಲುವರಾಯಸ್ವಾಮಿ ಪುತ್ರ ಸಚಿನ್ ಕಮ್ ಬ್ಯಾಕ್

    ಮಾಜಿ ಸಚಿವ ಚೆಲುವರಾಯಸ್ವಾಮಿ ಸುಪುತ್ರ ಸಚಿನ್, ಕಳೆದ ಐದು ವರ್ಷದ ಹಿಂದೆ ಹ್ಯಾಪಿ ಬರ್ತ್​​ಡೇ  ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾದಲ್ಲಿಯೇ ಭರವಸೆ ಮೂಡಿಸಿದ್ದ ಸಚಿನ್ ಒಂದಷ್ಟು ವರ್ಷಗಳ ಕಾಲ ಸಿನಿಮಾ ಲೋಕದಿಂದ ದೂರ ಸರಿದಿದ್ದರು. ಇದೀಗ ಬೆಂಗಳೂರು ಬಾಯ್ಸ್ ಸಿನಿಮಾ ಮೂಲಕ ಸಚಿನ್ ಮತ್ತೆ ಅದ್ಧೂರಿಯಾಗಿ ಕಂಬ್ಯಾಕ್ ಆಗಿದ್ದಾರೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ಹೊಸ ಉತ್ಸಾಹ, ಹುಮ್ಮಸ್ಸಿನೊಂದಿಗೆ ಸಚಿನ್, ಫೀಲ್ಡ್​​​ಗೆ​​​​​​​​​​​​ ಇಳಿದಿದ್ದು, ಈ ಬಾರಿ ಭರ್ಜರಿ ತಯಾರಿ ಮಾಡಿಕೊಂಡು ಎಂಟ್ರಿ‌ ಕೊಟ್ಟಿದ್ದಾರೆ. ಮಾಸ್ ಎಲಿಮೆಂಟ್ಸ್​​​​​​ ಕಥೆ ಆಧರಿಸಿರುವ ‘ಬೆಂಗಳೂರು ಬಾಯ್ಸ್​​​​​​’ ಸಿನಿಮಾಗಾಗಿ, ಆ್ಯಕ್ಟಿಂಗ್, ಡ್ಯಾನ್ಸಿಂಗ್ ಜೊತೆ ಫಿಟ್ನೆಸ್ ಕಡೆಗೂ ಹೆಚ್ಚಿನ ಗಮನ ಹರಿಸಿದ್ದಾರೆ. ಇದನ್ನೂ ಓದಿ : ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

    ಮಲ್ಟಿಸ್ಟಾರ್ ಚಿತ್ರವಾಗಿರುವ ಬೆಂಗಳೂರು ಬಾಯ್ಸ್ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಗುಟ್ಟುಬಿಟ್ಟು ಕೊಡದ ಸಚಿನ್, ಇದೊಂದು ರೊಮ್ಯಾಂಟಿಕ್‌ ಕಾಮಿಡಿ ಮನರಂಜನೆಯ ಚಿತ್ರವಾಗಿದ್ದು, ಕಾಲೇಜು, ಎಮೋಷನ್‌, ಪ್ರೇಮ ಕತೆ ಹೀಗೆ ಎಲ್ಲ ಅಂಶಗಳೂ ಸಿನಿಮಾದಲ್ಲಿವೆ ಎನ್ನುತ್ತಾರೆ. ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಟೀಸರ್ ಸಿನಿಮಾ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ. ಇದನ್ನೂ ಓದಿ : ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜತೆ ಇರೋ ಹುಡುಗ ಯಾರು?

    ವಿಕ್ರಮ್ ಕೆ ವೈ ಸಿನಿಮಾದ ಸಿನಿಮಾಗೆ ಬಂಡವಾಳ ಹೂಡಿದ್ದು, ಪ್ರಶಾಂತ್ ರಾವ್ ಪುರಂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ‘ಅಂಬಿ ನಿಂಗೆ ವಯಸ್ಸಾಯ್ತೋ’ ಖ್ಯಾತಿಯ ಗುರುದತ್ ಗಾಣಿಗ  ಕ್ರಿಯೇಟಿವ್ ಡೈರೆಕ್ಟರ್ ಆಗಿ ಬೆಂಗಳೂರು ಬಾಯ್ಸ್ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಈ ಸಿನಿಮಾದ ಜೊತೆಯಲ್ಲಿ ಸಚಿನ್ ಭತ್ತಳಿಕೆಗೆ ಮತ್ತೊಂದು ಸಿನಿಮಾ ಸೇರ್ಪಡೆಗೊಂಡಿದ್ದು, ಸದ್ಯದಲ್ಲಿಯೇ ಆ ಹೊಸ ಪ್ರಾಜೆಕ್ಟ್ ಬಗ್ಗೆ ಅವರೇ‌ ಮಾಹಿತಿ ನೀಡಲಿದ್ದಾರೆ.

  • ಹಿಜಬ್ ವಿವಾದದಿಂದ ಅನಾಹುತವಾದ್ರೆ, ಸಿಎಂ ಆಂಡ್ ಟೀಂ ಹೊಣೆ ಹೊರಬೇಕಾಗುತ್ತೆ: ಚಲುವರಾಯಸ್ವಾಮಿ

    ಹಿಜಬ್ ವಿವಾದದಿಂದ ಅನಾಹುತವಾದ್ರೆ, ಸಿಎಂ ಆಂಡ್ ಟೀಂ ಹೊಣೆ ಹೊರಬೇಕಾಗುತ್ತೆ: ಚಲುವರಾಯಸ್ವಾಮಿ

    ಚಾಮರಾಜನಗರ: ರಾಜ್ಯದಲ್ಲಿ ಹಿಜಬ್ ವಿವಾದದಿಂದ ಅನಾಹುತಗಳಾದರೆ ಸಿಎಂ ಬೊಮ್ಮಾಯಿ ಅಂಡ್ ಟೀಂ ಹೊಣೆ ಹೊರಬೇಕಾಗುತ್ತದೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

    ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ತಪ್ಪು ನಡೆಯಿಂದ ಹಿಜಬ್ ವಿವಾದ ಭುಗಿಲೆದ್ದಿದೆ. ಸೂಕ್ತ ಸಮಯದಲ್ಲಿ ಸರಿಯಾದ ತೀರ್ಮಾನ ಕೈಗೊಂಡಿದ್ದರೆ ಪರಿಸ್ಥಿತಿ ಇಷ್ಟೊಂದು ವಿಕೋಪಕ್ಕೆ ಹೋಗುತ್ತಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಕುರಿತಾಗಿ ಕುರಾನ್‍ನಲ್ಲಿ ಯಾವುದೇ ಉಲ್ಲೇಖ ಕಾಣುವುದಿಲ್ಲ : ಮೊಹಮ್ಮದ್ ಖಾನ್

    ಹಿಜಾಬ್ ವಿವಾದದಲ್ಲಿ ಕಾಂಗ್ರೆಸ್ ಪಾತ್ರ ಇದೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು ಬಿಜೆಪಿ, ಆರ್‌ಎಸ್‌ಎಸ್‌, ಎಬಿವಿಪಿ ಮತ್ತಿತರ ಸಂಘ ಪರಿವಾರದ ಸಂಘಟನೆಯ ಪ್ರಚೋದನೆಯೇ ಇದಕ್ಕೆ ಕಾರಣವಾಗಿದ್ದು, ಆಡಳಿತ ಪಕ್ಷ ಇದರ ಹೊಣೆಹೊರಬೇಕು. ರಾಜ್ಯ ಬಿಜೆಪಿ ಸರ್ಕಾರ ತನ್ನ ವೈಫಲ್ಯ ಮುಚ್ಚಿ ಹಾಕಲು, ಜನರ ಗಮನ ಬೇರೆಡೆ ಸೆಳೆಯಲು ಈ ವಿವಾದ ಸೃಷ್ಟಿಸಿದೆ ಎಂದಿದ್ದಾರೆ. ಇದನ್ನೂ ಓದಿ:  ರಾಜ್ಯಗಳಲ್ಲಿ ಹಿಜಬ್‌ ವಿವಾದ – ಹೈಕೋರ್ಟ್‌ಗಳ ತೀರ್ಪುಗಳೇನು? ಇಲ್ಲಿದೆ ಮಾಹಿತಿ

    ಮಂಡ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಗೆ ಕಾಂಗ್ರೆಸ್ ನಾಯಕರ ಸನ್ಮಾನ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‍ಗೂ ಅದಕ್ಕೂ ಸಂಬಂಧವಿಲ್ಲ. ಪಕ್ಷದ ಶಾಸಕಾಂಗ ನಾಯಕರಾಗಲಿ, ಕೆಪಿಸಿಸಿ ಅಧ್ಯಕ್ಷರಾಗಲಿ ಸನ್ಮಾನ ಮಾಡಿಲ್ಲ, ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡ ಕೆಲವರು ವೈಯಕ್ತಿಕ ಸನ್ಮಾನ ಮಾಡಿದ್ದಾರೆ. ಸನ್ಮಾನ ಮಾಡುವವರನ್ನು ನಾವು ತಡೆಯಲಾಗುವುದಿಲ್ಲ ಎಂದು ಹೇಳಿದ್ದಾರೆ.

  • ಕಾಂಗ್ರೆಸ್ ಉಸಿರು ನಿಲ್ಲಿಸುತ್ತೇನೆ ಎಂದಿದ್ದ ಬಿಎಸ್‍ವೈಗೆ ಉತ್ತರ ಸಿಕ್ಕಿದೆ: ಚಲುವರಾಯಸ್ವಾಮಿ

    ಕಾಂಗ್ರೆಸ್ ಉಸಿರು ನಿಲ್ಲಿಸುತ್ತೇನೆ ಎಂದಿದ್ದ ಬಿಎಸ್‍ವೈಗೆ ಉತ್ತರ ಸಿಕ್ಕಿದೆ: ಚಲುವರಾಯಸ್ವಾಮಿ

    ಮಂಡ್ಯ: ಕಾಂಗ್ರೆಸ್ ಉಸಿರು ನಿಲ್ಲಿಸುತ್ತೇನೆ ಎಂದಿದ್ದ ಬಿಎಸ್‍ವೈಗೆ ಈ ಚುನಾವಣೆ ಉತ್ತರ ನೀಡಿದೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷ ಮಂಡ್ಯ ಕಾಂಗ್ರೆಸ್‍ಗೆ ಕರಾಳವಾಗಿತ್ತು. ಪಂಚಾಯಿತಿಯಲ್ಲೂ ಸಹ ಜೆಡಿಎಸ್‍ಗಿಂತಲೂ ನಾವು ಕಡಿಮೆ ಇದ್ದೆವು. ಎಂಎಲ್‍ಸಿ ಚುನಾವಣೆಯಲ್ಲಿ ಪಕ್ಷಾತೀತವಾಗಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ದಿನೇಶ್ ಗೂಳಿಗೌಡರ ಗೆಲುವು ನಮ್ಮ ಒಗ್ಗಟ್ಟಿನ ಫಲಿತಾಂಶ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಪತ್ನಿಯ ಸಾವಿನ ಸುದ್ದಿ ತಿಳಿದು ನೇಣಿಗೆ ಶರಣಾದ ಪತಿ

    ನಮಗೆ ಯಾವುದೇ ಅಧಿಕಾರ ಇಲ್ಲದ ಸಮಯದಲ್ಲಿ ಮತದಾರರು ನಮ್ಮ ಕೈಹಿಡಿದಿದ್ದಾರೆ. ಇದು ಮಂಡ್ಯ ಜಿಲ್ಲೆಯ ಸ್ವಾಭಿಮಾನದ ಗೆಲುವಾಗಿದೆ. ಈ ಗೆಲುವು ಪ್ರಥಮ ಹೆಜ್ಜೆ, ಇದನ್ನು ಜವಬ್ದಾರಿಯನ್ನಾಗಿ ತೆಗೆದುಕೊಂಡಿದ್ದೇವೆ. ಬಿಜೆಪಿ, ಜೆಡಿಎಸ್ ರೈತ ಸಂಘದ ಸದಸ್ಯರು ನಮ್ಮನ್ನ ಬೆಂಬಲಿಸಿದ್ದಾರೆ ಅವರಿಗೆಲ್ಲ ಕೃತಜ್ಞತೆ ಎಂದು ನುಡಿದರು. ಇದನ್ನೂ ಓದಿ: ಅಭ್ಯರ್ಥಿ ರವಿ ಮದ್ದು ಗುಂಡೇಟು ತಿಂದವ್ರೆ: ಡಿಕೆಶಿ

    ಎಲ್ಲರೂ ಒಟ್ಟಾಗಿ ಜೆಡಿಎಸ್ ಸೋಲಿಸಿದ್ದು ತಪ್ಪಾ? ರಾಜ್ಯದಲ್ಲಿ ಬಿಜೆಪಿಗೆ ಸಹಕರಿಸುತ್ತೇವೆ ಎಂದು ಜೆಡಿಎಸ್ ನಾಯಕರು ಹೇಳಿದ್ದರು. ನಾವು ಎಲ್ಲೂ ಯಾರನ್ನು ಬೆಂಬಲ ಕೇಳಿರಲಿಲ್ಲ. ಬಿಜೆಪಿಯಲ್ಲೂ ಕೆಲವರು ನಮ್ಮ ಅಣ್ಣ ತಮ್ಮಂದಿರು ನಮಗೆ ಸಹಕರಿಸಿದ್ದಾರೆ ಅವರಿಗೆ ಧನ್ಯವಾದ ಎಂದರು.

  • ಚಲುವರಾಯಸ್ವಾಮಿ ಒಬ್ಬ ರಾಜಕೀಯ ವ್ಯಭಿಚಾರಿ: ಸುರೇಶ್ ಗೌಡ

    ಚಲುವರಾಯಸ್ವಾಮಿ ಒಬ್ಬ ರಾಜಕೀಯ ವ್ಯಭಿಚಾರಿ: ಸುರೇಶ್ ಗೌಡ

    ಮಂಡ್ಯ: ಮಾಜಿ ಸಚಿವ ಎನ್ ಚಲುವರಾಯಸ್ವಾಮಿ ರಾಜಕೀಯ ವ್ಯಭಿಚಾರಿ ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ಕಿಡಿಕಾರಿದ್ದಾರೆ.

    ಇಂದು ಮಂಡ್ಯ ಜಿಲ್ಲೆ, ನಾಗಮಂಗಲ ಪಟ್ಟಣದಲ್ಲಿ ದೇವೇಗೌಡರ ಕುಟುಂಬದ ಬಗ್ಗೆ ಮಾಜಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಆತ ರಾಜ್ಯ ಮಟ್ಟದ ನಾಯಕರ ಜೊತೆ ಗುರುತಿಸಿಕೊಳ್ಳುವುದಕ್ಕೆ ಪ್ರಚಾರಕ್ಕಾಗಿ ಹಾಗೆಲ್ಲಾ ಮಾತನಾಡುತ್ತಾನೆ ಎಂದು ವಾಗ್ದಾಳಿ ಮಾಡಿದರು.

    ಕ್ಷೇತ್ರದ ಜನರು ನೀಡಿರುವ ತೀರ್ಪಿಗೆ ಬೆಲೆ ಕೊಟ್ಟು ಸುಮ್ಮನಿರುವುದು ಒಳಿತು. ಮೈತ್ರಿ ಸರ್ಕಾರ ಬಿದ್ದಾಗಲೇ ನಾವು ಮಧ್ಯಂತರ ಚುನಾವಣೆಗೆ ರೆಡಿಯಾಗಿದ್ದೇವೆ. ನಮಗೆ ಯಾರೂ ಅನಿವಾರ್ಯವಲ್ಲ. ಆದರೆ ನಾವು ಎಲ್ಲರಿಗೂ ಅನಿವಾರ್ಯವಾಗಿದ್ದೇವೆ. ಕಾಂಗ್ರೆಸ್ ಕೆಲ ನಾಯಕರಿಂದ ಕುಮಾರಸ್ವಾಮಿ ಅವರು ಬೇಸರಗೊಂಡು ಈ ರೀತಿ ಹೇಳಿಕೆಗಳನ್ನು ನೀಡಿದ್ದಾರೆ ಅವರ ಬಗ್ಗೆ ಯಾರು ವ್ಯಂಗ್ಯವಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

  • ಜೊತೆಗೆ ಕೆಲಸ ಮಾಡಿದ್ರೆ ಸದ್ಗುಣದ ಕಾರ್ಯ, ಬಿಟ್ಟು ಮಾಡಿದ್ರೆ ರಾಜಕೀಯ ಸ್ಟಂಟ್: ಸುರೇಶ್ ಗೌಡ ಕಿಡಿ

    ಜೊತೆಗೆ ಕೆಲಸ ಮಾಡಿದ್ರೆ ಸದ್ಗುಣದ ಕಾರ್ಯ, ಬಿಟ್ಟು ಮಾಡಿದ್ರೆ ರಾಜಕೀಯ ಸ್ಟಂಟ್: ಸುರೇಶ್ ಗೌಡ ಕಿಡಿ

    ಮಂಡ್ಯ: ಇವರ ಜೊತೆ ಕೆಲಸ ಮಾಡುವಾಗ ಅದು ಸದ್ಗುಣದ ಕೆಲಸವಾಗಿತ್ತು. ಇವರನ್ನ ಬಿಟ್ಟು ಮಾಡಿದರೆ ಅದು ರಾಜಕೀಯ ಸ್ಟಂಟ್? ಎಂದು ಪ್ರಶ್ನಿಸಿ ಸಿಎಂ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯ ರಾಜಕೀಯ ಸ್ಟಂಟ್ ಎಂಬ ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಜೆಡಿಎಸ್ ಶಾಸಕ ಸುರೇಶ್ ಗೌಡ ತಿರುಗೇಟು ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವನ ಬಳಿ ಪಾಠ ಕಲಿಯುವ ಅಗತ್ಯ ನಮಗಿಲ್ಲ ಎಂದು ಏಕವಚನದಲ್ಲಿಯೇ ಚಲುವರಾಯಸ್ವಾಮಿ ವಿರುದ್ಧ ಹರಿಹಾಯ್ದರು. ಚಲುವರಾಯಸ್ವಾಮಿ ಬಿಜೆಪಿ ಸೇರೋದು ಗ್ಯಾರಂಟಿ. ಆಗಲೇ ಒಂದು ಹೊಸಲು ದಾಟಿರುವವರು ಇನ್ನೊಂದು ಹೊಸಲು ದಾಟಲ್ವ? ಇವುಗಳಿಗೆ ಮಾನಮರ್ಯಾದೆ ಇಲ್ಲ, ಬಿಜೆಪಿಗೆ ಹೋಗೆ ಹೊಗ್ತಾರೆ. ಕಾಂಗ್ರೆಸ್ ಪಕ್ಷ ನೆಮ್ಮದಿಯಿಂದ ಇತ್ತು. ಅದನ್ನು ಇವರು ಹಾಳು ಮಾಡಿ ಕುಲಗೆಡಿಸುತ್ತಿದ್ದಾರೆ ಎಂದು ಚಲುವರಾಯಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.

    ಬಳಿಕ ಬಡವರಿಗೆ ಸಹಾಯವಾಗುವ ಯೋಜನೆಯನ್ನು ಸಿಎಂ ಜಾರಿಗೆ ತರಲಿ ಎಂಬ ಚಲುವರಾಯಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅತೀ ಬುದ್ದಿವಂತರು ಸಲಹೆ ನೀಡಿದ್ದಾರೆ ಪರಿಶೀಲಿಸಿ ಎಂದು ಕುಮಾರಸ್ವಾಮಿ ಅವರಿಗೆ ಹೇಳೋಣ. ಅರ್ಜೆಂಟಾಗಿ ಇವರಿಗೆ ಚುನಾವಣೆ ಬೇಕಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗ ಇವರೆಲ್ಲರೂ ಬಿಜೆಪಿಗೆ ಹೋಗುತ್ತಾರೆ. ಹಾಗಾಗಿ ಏನೆಲ್ಲಾ ಸಹಕಾರ ಬೇಕು ಅದನ್ನ ಇವರೆಲ್ಲಾ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಅಲ್ಲದೆ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ ಎಂದು ತಿಳಿದುಕೊಂಡಿದ್ದಾರೆ. ಜನ ಕೊಟ್ಟ ಅಧಿಕಾರವನ್ನು ಮಾರಿಕೊಂಡವರು ಇವರು, ನಮಗೆ ನೀತಿ ಪಾಠ ಹೇಳಲು ಬರಬೇಕಾ? ಎಂದು ಪ್ರಶ್ನಿಸಿ ಚಲುವರಾಯಸ್ವಾಮಿ ವಿರುದ್ಧ ಸುರೇಶ್ ಗೌಡ ಕೆಂಡಕಾರಿದರು.

  • ಬಂಡಾಯ ಶಮನ ಸಭೆಯಲ್ಲೇ `ಕೈ’ ಬೇಗುದಿ!

    ಬಂಡಾಯ ಶಮನ ಸಭೆಯಲ್ಲೇ `ಕೈ’ ಬೇಗುದಿ!

    ಬೆಂಗಳೂರು: ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಬೆಂಬಲ ನೀಡುವ ವಿಚಾರವಾಗಿ ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿಯವರು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಗರಂ ಆಗಿದ್ದಾರೆ.

    ಸುಮಲತಾಗೆ ತಾವು ಬೆಂಬಲ ನೀಡಿಲ್ಲ. ಇದನ್ನ ಪ್ರೂವ್ ಮಾಡಿ ತೋರಿಸಲು ನಾನೇನು ಆಂಜನೇಯ ತರಹ ಎದೆ ಬಗೆದು ತೋರಿಸಲಿಕ್ಕಾಗುವುದಿಲ್ಲ ಎಂದು ಚೆಲುವರಾಯಸ್ವಾಮಿ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದ ಮಂಡ್ಯ ನಾಯಕರ ಸಭೆ ಬಳಿಕ ಮಾತನಾಡಿದ ಅವರು, ಪಕ್ಷದ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯ ಸಭೆ ಕರೆದಿದ್ರು. ಚುನಾವಣಾ ವಿಚಾರವಾಗಿ ಚರ್ಚೆ ಮಾಡಿದ್ರು. ಏನೆಲ್ಲಾ ಚರ್ಚೆ ಮಾಡಬೇಕೋ ಅದನ್ನ ಚರ್ಚೆ ಮಾಡಿದ್ದಾರೆ. ಕಾಂಗ್ರೆಸ್ ಬಂಡಾಯ ಶಮನ ವಿಚಾರವಾಗಿ ಎಲ್ಲವನ್ನೂ ಮಾತನಾಡಿದ್ದಾರೆ ಎಂದು ತಿಳಿಸಿದ್ರು.

    ಅಲ್ಲದೆ ಸಿಎಂ ತಮ್ಮನ್ನ ನಿಖಿಲ್ ಪರ ಪ್ರಚಾರಕ್ಕೆ ಕರೆಯಬೇಡಿ ಎಂದಿದ್ದಾರೆ. ಹೀಗಾಗಿ ಅವರೇ ಹಾಗೆ ಹೇಳಿದ ಮೇಲೆ ಅವರ ಸ್ಟೇಟ್ ಮೆಂಟ್ ಗೆ ಪ್ರತಿಕ್ರಿಯಿಸುವುದಕ್ಕೆ ನಾನು ಅವರಷ್ಟು ದೊಡ್ಡವನಲ್ಲ ಅಂತ ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.

    ಹೈಕಮಾಂಡ್ ಸೂಚನೆಯಂತೆ ಮಂಡ್ಯ ಕಾಂಗ್ರೆಸ್ ಅಸಮಾಧಾನ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಪಕ್ಷದ ಜಿಲ್ಲಾ ಮುಖಂಡರ ಸಭೆ ನಡೆಸಿದ್ರು. ತಡರಾತ್ರಿ ಮಂಡ್ಯ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಿದ್ದು, ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜಮೀರ್ ಅಹಮದ್, ಬಂಡಿಸಿದ್ದೇಗೌಡ ಮತ್ತು ಅರವಿಂದ ಸಾಗರ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

    ಸಭೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಖಚಿತವಾದ ಮೇಲೆ ಮಂಡ್ಯ ಜಿಲ್ಲೆಯ ಕೆಲವು ಕಾಂಗ್ರೆಸ್ ಮುಖಂಡರು ನಿಖಿಲ್‍ಗೆ ಬೆಂಬಲ ನೀಡಲ್ಲ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆ ಬೆಂಬಲ ನೀಡ್ತೆವೆ ಎಂಬ ಮಾತುಗಳು ಕೇಳಿ ಬರ್ತಿತ್ತು. ಈ ವಿಚಾರವನ್ನೂ ಕೂಡ ಚರ್ಚಿಸಲಾಯಿತು.

  • ಸಿದ್ದು ಆಪ್ತನಿಂದ್ಲೇ ನಿಖಿಲ್‍ಗೆ ಒಳಗೊಳಗೆ ಗುನ್ನಾ – ಆಮಿಷದ ಆಡಿಯೋ ವೈರಲ್

    ಸಿದ್ದು ಆಪ್ತನಿಂದ್ಲೇ ನಿಖಿಲ್‍ಗೆ ಒಳಗೊಳಗೆ ಗುನ್ನಾ – ಆಮಿಷದ ಆಡಿಯೋ ವೈರಲ್

    ಬೆಂಗಳೂರು: ಮಂಡ್ಯದಲ್ಲಿ ಲೋಕಸಭಾ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈಗ ಮಂಡ್ಯದ ರಾಜಕೀಯದ ಸ್ಫೋಟಕ ಸುದ್ದಿ ಒಂದು ಆಡಿಯೋದಿಂದ ದೋಸ್ತಿಗಳಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ.

    ಮೈತ್ರಿ ಸರ್ಕಾರದ ಜೆಡಿಎಸ್ ಅಭ್ಯರ್ಥಿ ನಿಖಿಲ್‍ಗೆ ಒಳಗೊಳಗೆ ಗುನ್ನಾ ಹೊಡೆಯಲು ತಯಾರಿ ನಡೆಯುತ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತನಿಂದಲೇ ನಿಖಿಲ್ ಸೋಲಿಗೆ ಮಸಲತ್ತು ನಡೆಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಬೆನ್ನಿಗೆ ನಿಲ್ಲುವಂತೆ ಸಿದ್ದರಾಮಯ್ಯ ಆಪ್ತ ಚೆಲುವರಾಯಸ್ವಾಮಿ ಕೆಲವರಿಗೆ ಆಮಿಷದ ಕಸರತ್ತು ನಡೆಸುತ್ತಿದ್ದಾರೆ. ಅವರಿಬ್ಬರ ಫೋನ್ ಸಂಭಾಷಣೆ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸಂಭಾಷಣೆಯಲ್ಲಿ ಏನಿದೆ?
    ಗನ್ ಮ್ಯಾನ್ : ಸರ್ ಶಿವಪ್ರಕಾಶ್ ಬಾಬು ಅವರ ಮಾತನಾಡ್ತಿರೋದು
    ಶಿವಪ್ರಕಾಶ್ ಬಾಬು : ಹಾ, ಹೌದು ಹೇಳಿ
    ಗನ್ ಮ್ಯಾನ್ : ಚೆಲುವರಾಯ ಸ್ವಾಮಿ ಸಾಹೇಬ್ರು ಮಾತನಾಡುತ್ತಾರೆ
    ಶಿವಪ್ರಕಾಶ್ ಬಾಬು : ಹಾ ಕೊಡಿ
    ಚೆಲುವರಾಯಸ್ವಾಮಿ : ಈ ಸಾರಿ ಎಲ್ಲ ನೀವೇ ನಿಂತುಕೊಂಡು ಮಾಡಬೇಕು

    ಶಿವಪ್ರಕಾಶ್ ಬಾಬು : ಮಂಡ್ಯದಲ್ಲಿ ಯಾರಣ್ಣ ಲೀಡರ್? ಯಾರ್ ಬರುತ್ತಾರೆ ಅಣ್ಣಾ?
    ಚೆಲುವರಾಯಸ್ವಾಮಿ : ಮಂಡ್ಯದಲ್ಲಿ ನೀವೇ ಲಿಡರ್, ಮಂಡ್ಯದಲ್ಲಿ ಮರ್ಯಾದೆ ಉಳಿಸಿಕೊಳ್ಳಬೇಕು ಅಷ್ಟೇ, ಮುಂದೆ ಏನಾದರೂ ಸ್ವಾಭಿಮಾನಿಯಾಗಿ ನಿಂತುಕೊಳ್ಳಬೇಕು ಎಂದರೆ ನೀವೇ ಲೀಡರ್ ಆಗಬೇಕು. ಇವತ್ತು ಕುಮಾರಸ್ವಾಮಿ ವಿರುದ್ಧ ಅಲಯನ್ಸ್ ಮಾಡಿಕೊಂಡು ಯಾರ್ ಬಂದಿದ್ದಾರೆ ಹೇಳಿ, ನೀವೇ ಅರ್ಥ ಮಾಡಕೋಬೇಕು ಲೀಡರ್ ಗಳು
    ಶಿವಪ್ರಕಾಶ್ ಬಾಬು : ಅಲ್ಲಾ ಅಣ್ಣ ಮಾಡುತ್ತೀವಿ, ಇಷ್ಟು ದಿನ ನೀವು ನೋಡಿದಹಾಗೆನೇ ಅಣ್ಣ ಇವತ್ತು
    ಚೆಲುವರಾಯಸ್ವಾಮಿ : ನೀನ್ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡ. ಇದು ನನ್ ಗನ್ ಮ್ಯಾನ್‍ದೇನೆ ನಂಬರ್, ಏನೇ ಆದರೂ ಸಿಕ್ಕು ಈ ನಂಬರ್ ಗೆ ಕಾಲ್ ಮಾಡು

    ಶಿವಪ್ರಕಾಶ್ ಬಾಬು : ಅಣ್ಣ ನಾವು ನೀವ್ ಹೇಳಿದ ಹಾಗೇನೆ ಬರುತ್ತೀವಿ. ಆದರೆ ಮಂಡ್ಯದಲ್ಲಿ ಯಾರು ಲೀಡರ್ ಇಲ್ವಲ್ಲ. ಅಣ್ಣ, ನಾವು ನಿಮ್ಮನ್ನ ನಂಬಿಕೊಂಡು ಇರುತ್ತೀವಿ, ಆದರೆ ಯಾವ ರೀತಿ ರೆಸ್ಪಾನ್ಸ್ ಮಾಡೋದು ಅಣ್ಣ
    ಚೆಲುವರಾಯಸ್ವಾಮಿ : ಮಂಡ್ಯದಲ್ಲಿ ಯಾವ ಲೀಡರ್ ಬೇಳೆಕಾಳ್ ಮಾಡಲ್ಲ. ನಾನ್ ಇದ್ದೀನಿ ಬಾರಯ್ಯ ತಲೆ ಕೆಡಿಸಿಕೊಳ್ಳಬೇಡ. ನನಗೆ ಗೊತ್ತಿದೆ ಮಾಡುತ್ತೀನಿ
    ಶಿವಪ್ರಕಾಶ್ ಬಾಬು : ಈಗ ಮೊನ್ನೆ ಹೋಗಿ ಕುಮಾರಣ್ಣನ ಮಾತನಾಡಿಸಿಕೊಂಡು ಬಂದಿದ್ದೇವೆ ಅಣ್ಣ, ನಾಡಿದ್ದು ಮನೆಗೆ ಬರುತ್ತೀನಿ ಅಂದಿದ್ದಾರೆ ಅಣ್ಣ

    ಚೆಲುವರಾಯಸ್ವಾಮಿ : ನೋಡುಗುರು ನಿನ್ ಇಷ್ಟ, ನನ್ ಮಾತಿಗೆ ಬೆಲೆ ಕೊಡುವುದಾದರೆ ಕೊಡು ಇಲ್ವಾ ನಿನ್ ಇಷ್ಟ. ಅರ್ಥಮಾಡಕೊಳ್ಳಿ ಬೇಳೆಕಾಳು ಯಾವ ಕುಮಾರಣ್ಣನು ಬರಲ್ಲಾ ನಿನ್ ಸತ್ತರೆ ನಾನ್ ಬರಬೇಕು ನಾನ್ ಸತ್ತರೆ ನೀನ್ ಬರಬೇಕು.
    ಶಿವಪ್ರಕಾಶ್ ಬಾಬು : ಸರಿ ಅಣ್ಣ ನಿವ್ ಇವತ್ತು ಹೇಳುತ್ತೀರಾ ಅಣ್ಣ, ಆದರೆ ಮಂಡ್ಯದಲ್ಲಿ ಯಾರು ಲೀಡರ್ ಇಲ್ವಾಲ್ಲ ಅಣ್ಣ ನಾನ್ ಯಾರನ್ನ ಲೀಡರ್ ಮಾಡಲಿ ಅಣ್ಣ
    ಚೆಲುವರಾಯಸ್ವಾಮಿ : ಅಲ್ಲಾ ನಿನಗೆ ನನಗಿಂತ ಯಾವ ಲೀಡರ್ ಬೇಕಾಯ್ಯ?
    ಶಿವಪ್ರಕಾಶ್ ಬಾಬು : ಹೂಂ ಅಣ್ಣ ಮಾತಾಡುದ್ರಿ ಅವತ್ತು, ನಿನ್ನೆ ಮೊನ್ನೆ ಒಂದು ವಾರದಲ್ಲಿ ಸತೀಶ್ ಕೊಟ್ಟಾಗ ಮಾತಾಡುದ್ರಿ, ಮಾಡಬೇಕಪ್ಪ ನೀನ್ ಈ ಸಾರಿ ಸುಮಲತಾ ಅವರಿಗೆ ಅಂತ ಅದದ್ಮೇಲೆ ಇವತ್ತಿನ ವರೆಗೆ ಒಂದ್ ರೆಸ್ಪಾನ್ಸ್ ಇಲ್ಲಾ ಏನು ಇಲ್ಲಾ ನಾನು ಯಾರನ್ನ ಅಂತಾ ಮಾಡಲಿ

    ಚೆಲುವರಾಯಸ್ವಾಮಿ : ಅಲ್ಲಾ ಅಲ್ಲಿ ಅಪ್ಪಾಜಿಗೆ, ಪುಟ್ಟಸ್ವಾಮಿಗೆ, ರಾಮಣ್ಣಗೆ ಹೇಳುತ್ತೀನಿ, ನಿಂತುಕೊಂಡು ಮಾಡು ತಲೆ ಕೆಡಿಸಿಕೊಳ್ಳ ಬೇಡ, ಬೇರೆ ಯಾವುದೇ ಕಾರಣಕ್ಕೂ ಹೋಗಬೇಡ
    ಶಿವಪ್ರಕಾಶ್ ಬಾಬು : ಅಲ್ಲ ಅಣ್ಣ ನಾಡಿದ್ದು ಕುಮಾರಣ್ಣ ಬರುತ್ತೀನಿ ಅಂತಾ ಹೇಳಿದ್ದಾರಣ್ಣ ನಾನೇನ್ ಮಾಡಲಿ ಹೇಳಿ ಅಣ್ಣ
    ಚೆಲುವರಾಯಸ್ವಾಮಿ : ನೀನ್ 2 ದಿನ ಮನೆಯಲ್ಲಿ ಇರಬೇಡ ಎಲ್ಲದರೂ ಹೊರಗಡೆ ಹೋಗಿ ಬಾ
    ಶಿವಪ್ರಕಾಶ್ ಬಾಬು : ಅಲ್ಲ ಅಣ್ಣ ನಾನ್ ಮಾತು ಕೊಟ್ಟಿದ್ದಿನಿ, ನೀವ್ ಬೇಕಾದರೆ ನೆಕ್ಸ್ಟ್ ಬನ್ನಿ ಅಣ್ಣ ನಾನ್ ಮಂಡ್ಯದಲ್ಲಿ ನಿಂತು ನಿಮಗೊಸ್ಕರ ಮಾಡುತ್ತೀನಿ ಅಣ್ಣ, ಈಗ ಅಪ್ಪಾಜಿ ಅಣ್ಣನೂ ಹೇಳಿದ್ರು ನನಗೆ 1 ಕೋಟಿ ಕೊಡುತ್ತೀನಿ ಎಂದು. ಆದರೆ ನಾನೇ ದುಡ್ಡು ಬೇಡ ಅಂದೆ ಅಣ್ಣ
    ಚೆಲುವರಾಯಸ್ವಾಮಿ : ಏ ಬಾಬು ಆಯ್ತು ಹೋಗಪ್ಪ ಸುಮ್ಮನೆ ನನ್ ಹತ್ರ ವಾದ ಮಾಡಬೇಡ ಒಳ್ಳೆದಾಗಲಿ ಮಾಡೋಗೂ

  • ಸುಮಲತಾ ಗೆಲುವಿಗೆ ಶ್ರಮಿಸ್ತಿದ್ದಾರಾ ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ..?

    ಸುಮಲತಾ ಗೆಲುವಿಗೆ ಶ್ರಮಿಸ್ತಿದ್ದಾರಾ ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ..?

    ಮಂಡ್ಯ: ನಾಗಮಂಗಲದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ಅವರು ಮಂಡ್ಯ ಲೋಕಸಭಾ ಚುನಾವಣೆ ಸುಮಲತಾ ಗೆಲುವಿಗೆ ಶ್ರಮಿಸುತ್ತಿದ್ದಾರಾ ಅನ್ನೋ ಅನುಮಾನವೊಂದು ಇದೀಗ ರಾಜಕೀಯ ವಲಯದಲ್ಲಿ ಎದ್ದಿದೆ.

    ಚೆಲುವರಾಯ ಸ್ವಾಮಿ ಅವರಿಗೆ ಸುಮಲತಾ ವಂದನೆ ಸಲ್ಲಿಸುತ್ತಿರುವಂತೆ ಪೋಸ್ಟ್ ಹಾಕಿ ವೈರಲ್ ಮಾಡಲಾಗುತ್ತಿದೆ. “ನನ್ನ ಬೆನ್ನ ಹಿಂದೆ ನಿಂತು ನನ್ನ ಗೆಲುವಿಗೆ ಶ್ರಮಿಸುತ್ತಿರುವ ಚೆಲುವರಾಯಸ್ವಾಮಿಯವರಿಗೆ ನನ್ನ ವಂದನೆಗಳು” ಎಂದು ಸುಮಲತಾ ಬರೆದಿದ್ದಾರೆ ಎನ್ನಲಾದ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದ್ರೆ ಇದನ್ನು ಸುಮಲತಾ ಅವರೇ ಬರೆದಿದ್ದಾರಾ ಅಥವಾ ಬೇರೆಯವರು ಬರೆದಿದ್ದಾರಾ ಎಂಬ ಪ್ರಶ್ನೆಗಳು ಎದ್ದಿವೆ.

    ಸುಮಲತಾ, ನಿಖಿಲ್ ಪ್ರಚಾರ:
    ಮಂಡ್ಯ ಕುರುಕ್ಷೇತ್ರದಲ್ಲಿ ನಾನಾ ನೀನಾ ಅಂತ ಜಿದ್ದಿಗೆ ಬಿದ್ದಿರುವ ಸುಮಲತಾ ಹಾಗೂ ನಿಖಿಲ್‍ರ ಅಬ್ಬರದ ಪ್ರಚಾರ ಇಂದು ಮುಂದುವರಿಯಲಿದೆ. ಸುಮಲತಾ ಅಂಬರೀಶ್ ಮೈಸೂರು ಜಿಲ್ಲೆ ಕೆಆರ್ ನಗರ ಭಾಗದಲ್ಲಿ ಇಂದು ಪ್ರಚಾರ ನಡೆಸಲಿದ್ದಾರೆ. ಇವರಿಗೆ ಪುತ್ರ ಅಭಿಷೇಕ್ ಸಾಥ್ ನೀಡಲಿದ್ದಾರೆ.ಹೀಗಾಗಿ ಬಿಎಸ್‍ವೈ ಭೇಟಿಯನ್ನು ಸುಮಲತಾ ಮುಂದೂಡಿದ್ದಾರೆ.

    ನಿಖಿಲ್ ಕುಮಾರಸ್ವಾಮಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯಲ್ಲಿ ಸಂಚರಿಸಿ ಮತಬೇಟೆಯಾಡಲಿದ್ದಾರೆ. ಇವರಿಗೆ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಶಾಸಕ ಸುರೇಶ್ ಗೌಡ ಹಾಗೂ ಸಂಸದ ಶಿವರಾಮೇಗೌಡ ಸೇರಿದಂತೆ ಹಲವರು ಸಾಥ್ ನೀಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ಷೇತ್ರದಲ್ಲಿ ನನ್ನ ನಾಯಕತ್ವವನ್ನ ತಿರಸ್ಕರಿಸಿರೋದನ್ನ ನಾನು ಒಪ್ಪಿಕೊಳ್ತೀನಿ: ಚಲುವರಾಯಸ್ವಾಮಿ

    ಕ್ಷೇತ್ರದಲ್ಲಿ ನನ್ನ ನಾಯಕತ್ವವನ್ನ ತಿರಸ್ಕರಿಸಿರೋದನ್ನ ನಾನು ಒಪ್ಪಿಕೊಳ್ತೀನಿ: ಚಲುವರಾಯಸ್ವಾಮಿ

    ಮಂಡ್ಯ: ಕ್ಷೇತ್ರದಲ್ಲಿ ಜನ ನನ್ನ ನಾಯಕತ್ವವನ್ನ ತಿರಸ್ಕರಿಸಿರೋದನ್ನ ನಾನು ಒಪ್ಪಿಕೊಳ್ಳುತ್ತೇನೆ. ಮತದಾರರ ತೀರ್ಪಿಗೆ ನಾನು ತಲೆ ಬಾಗುತ್ತೇನೆ ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ಹೇಳಿದ್ದಾರೆ.

    ಬೇರೆ ಕ್ಷೇತ್ರದವರ ಸೋಲಿಗೆ ಕಾರಣ ನನಗೆ ಗೊತ್ತಿಲ್ಲ. ಜಾತಿ ಆಧಾರದ ಮೇಲೆ ಈ ಬಾರಿ ರಾಜ್ಯದಲ್ಲಿ ಚುನಾವಣೆ ನಡೆದಿದೆ. ಜಿಲ್ಲೆಯ ಅಭಿವೃದ್ಧಿ ಮಾಡಲಿ ಅಂತ ಜಿಲ್ಲೆಯ ಏಳು ಕ್ಷೇತ್ರದಲ್ಲಿ ಜೆಡಿಎಸ್ ಗೆ ಮತ ಹಾಕಿದ್ದಾರೆ. ಆ ಭರವಸೆಯನ್ನ ಅವರು ಉಳಿಸಿಕೊಳ್ಳಲಿ ಎಂದು ಸವಾಲು ಹಾಕಿದರು.

    ಕಾಂಗ್ರೆಸ್ ಜೆಡಿಎಸ್ ಮೈತ್ರಿ ಕುರಿತು ಮಾತನಾಡಿದ ಅವರು, ರಾಷ್ಟ್ರದ ಹಾಗೂ ಮುಂಬರುವ ಚುನಾವಣೆ ದೃಷ್ಟಿಯಿಂದ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ. 120 ಸೀಟು ಬರಲ್ಲ ಅಂತ ಕುಮಾರಸ್ವಾಮಿ ಅವರಿಗೆ ಗೊತ್ತಿತ್ತು. ಗೊತ್ತಿಲ್ಲದಿರುವಷ್ಟು ಅವರು ಮುಗ್ದರಲ್ಲ. ಕಾಂಗ್ರೆಸ್ ಮಂತ್ರಿಗಳ ಬಗ್ಗೆ ಜೆಡಿಎಸ್ ಎಲ್ಲಿಯೂ ಹಸ್ತಕ್ಷೇಪ ಮಾಡಿಲ್ಲ. ಜಮೀರ್ ಮಂತ್ರಿ ಸ್ಥಾನದ ಬಗ್ಗೆ ಜೆಡಿಎಸ್ ಹಸ್ತಕ್ಷೇಪವಿರುವುದಿಲ್ಲ. ನಾವು ಹೇಳಿದ್ದೆ ನಡೆಯಬೇಕು ಅಂತ ಮೈತ್ರಿ ಬಗ್ಗೆ ಕುಮಾರಸ್ವಾಮಿ ಆಗಲಿ ದೇವೇಗೌಡರಾಗಲಿ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

  • ದೇವೇಗೌಡ, ಕುಮಾರಸ್ವಾಮಿ ಕಣ್ಣೀರಿಗೆ ತಲೆಕೆಡಿಸಿಕೊಳ್ಳಬೇಡಿ: ಚಲುವರಾಯಸ್ವಾಮಿ

    ದೇವೇಗೌಡ, ಕುಮಾರಸ್ವಾಮಿ ಕಣ್ಣೀರಿಗೆ ತಲೆಕೆಡಿಸಿಕೊಳ್ಳಬೇಡಿ: ಚಲುವರಾಯಸ್ವಾಮಿ

    ಮಂಡ್ಯ: ಎಲ್ಲರೂ ನಮ್ಮ ವಿರುದ್ಧ ಇದ್ದಾಗಲೇ ಚುನಾವಣೆ ಎದುರಿಸಿದ್ದೇವೆ. ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಕಣ್ಣೀರಿಗೆ ತಲೆಕೆಡಿಸಿಕೊಳ್ಳಬೇಡಿ. ಅವರಿಗೆ ಕೊಡುವ ಗೌರವವನ್ನು ಕೊಟ್ಟಿದ್ದೇವೆ ಎಂದು ಶಾಸಕ ಎನ್ ಚಲುವರಾಯಸ್ವಾಮಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

    ಹೆಚ್‍ಡಿಕೆ ಮತ್ತು ಹೆಚ್‍ಡಿಡಿ ಅವರಿಗೆ ಕೊಡಬೇಕಾದ ಸ್ಥಾನವನ್ನ ಈ ಸಮಾಜ ಕೊಟ್ಟಿದೆ. ಆದರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದ ಆದಿ ಚುಂಚನಗಿರಿ ಮಠಕ್ಕೆ ಅವರು ಗೌರವ ಕೊಟ್ಟಿಲ್ಲ. ರಾಜಕಾರಣದ ಆರವತ್ತು ವರ್ಷಗಳಲ್ಲಿ ಒಬ್ಬ ಒಕ್ಕಲಿಗ ವ್ಯಕ್ತಿಯನ್ನು ಒಂದು ಒಳ್ಳೆಯ ಸ್ಥಾನಕ್ಕೆ ತಂದಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಬೇಕಿದೆ. ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆದ ಚುಂಚನಗಿರಿ ಮಠಕ್ಕೆ ಅವರು ಗೌರವ ಕೊಟ್ಟಿಲ್ಲ ಅಂತಾ ವಾಗ್ದಾಳಿ ನಡೆಸಿದ್ರು.

    ಒಂದು ಉತ್ತಮ ಸ್ಥಾನವನ್ನು ಒಬ್ಬ ರೈತ, ಉದ್ಯೋಗಸ್ಥ, ಅಧಿಕಾರಿ, ರಾಜಕಾರಣಿ ಯಾರದ್ದಾದರೂ ಒಂದು ಹೆಸರು ಹೇಳಲು ಹೇಳಲಿ. ಇಂದು ನಮ್ಮ ನಮ್ಮ ಬದುಕನ್ನು ನಾವೇ ನೋಡಿಕೊಳ್ಳಬೇಕಿದೆ. ಹಾಗಾಗಿ ನಮ್ಮ ತಾಲೂಕಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಮೂಲಕ ನಮ್ಮೆಲ್ಲರ ಅಭಿವೃದ್ಧಿ ಮಾಡಿಕೊಳ್ಳಬೇಕಿದೆ. ಚುನಾವಣೆ ಮುಗಿಯುವವರೆಗೂ ಮೂವತ್ತು ದಿವಸ ಎಲ್ಲ ಕೆಲಸ ಬಿಟ್ಟು ಚುನಾವಣೆ ಕಡೆ ಕೇಂದ್ರೀಕರಿಸಿ ಅಂತಾ ಕಾರ್ಯಕರ್ತರಿಗೆ ಕರೆ ಕೊಟ್ಟರು.