Tag: cheluvarayaswami

  • ನಾವು ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸಲ್ಲ: ಚೆಲುವರಾಯಸ್ವಾಮಿ

    ನಾವು ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸಲ್ಲ: ಚೆಲುವರಾಯಸ್ವಾಮಿ

    ರಾಮನಗರ: ನಾವು ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆ ನಿಲ್ಲಿಸಲ್ಲ ಎಂದು ಚೆಲುವರಾಯಸ್ವಾಮಿ ಹೇಳಿದರು.

    ಕೆಂಗಲ್ ಆಂಜನೇಯಸ್ವಾಮಿ ದೇವಾಲಯದ ಬಳಿಯ ಕಲ್ಯಾಣ ಮಂಟಪದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಮಾಡುವ ಬದ್ಧತೆಯನ್ನು ರಾಜ್ಯ ಸರ್ಕಾರ ಕೊಡುತ್ತಿಲ್ಲ. ಕೋರ್ಟ್ ಸೂಚನೆ ಮಾಡಿರುವುದು ಅವರು ಇಲ್ಲಿಯವರೆಗೆ ಮಾಡಿರುವ ವರದಿಯನ್ನು ಕೇಳಿದೆ. ಆದರೆ ಇವರು ರಸ್ತೆಯಲ್ಲಿ ಬರುವ ವಾಹನಗಳನ್ನು ತಡೆಯುತ್ತಿದ್ದಾರೆ. ನಾವು ಕೋರ್ಟ್‍ಗೆ ಈ ಬಗ್ಗೆ ಅಭಿಪ್ರಾಯ ತಿಳಿಸುತ್ತೇವೆ ಅಂತಾ ಹೇಳಿದ್ದೇವೆ. ಆದರು ಇವರು ಪ್ರಜಾಪ್ರಭುತ್ವ ಸರ್ಕಾರದಲ್ಲಿ ಎಲ್ಲರನ್ನು ತಡೆಯುತ್ತಿದ್ದಾರೆ ಎಂದರು. ಇದನ್ನೂ ಓದಿ: ನಿಮ್ದು ದುರ್ಯೋಧನನ ರೀತಿ ಕೆಟ್ಟ ಹಠ: ಸಿದ್ದು, ಡಿಕೆಶಿಗೆ ಅಶೋಕ್ ಗುದ್ದು

    ನಾವು ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಎರಡೂವರೆ ವರ್ಷದಲ್ಲಿ ಅರ್ಧದಷ್ಟು ನಿರ್ಮಾಣ ಮಾಡಬಹುದಿತ್ತು. ನಾವು ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸಲ್ಲ. ನಮ್ಮ ನಾಯಕರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾವು ಬದ್ಧರಾಗಿದ್ದೇವೆ. ನಾವು 5 ಜನವಾದರೂ ಪಾದಯಾತ್ರೆ ಮಾಡಿ ಮುಗಿಸುತ್ತೇವೆ ಎಂದು ನುಡಿದರು. ಇದನ್ನೂ ಓದಿ: ಸರ್ಕಾರ ಯಾವುದೇ ಆದೇಶ ನೀಡಲಿ ಪಾದಯಾತ್ರೆ ನಿಲ್ಲಲ್ಲ: ಡಿ.ಕೆ ಸುರೇಶ್

    ಗಣಿಗ ರವಿಕುಮಾರ್, ಇಕ್ಬಾಲ್ ಹುಸೇನ್, ರಮೇಶ್ ಬಂಡಿಸಿದ್ದೇಗೌಡ, ನರೇಂದ್ರ ಸ್ವಾಮಿ, ಸೇರಿದಂತೆ ಇನ್ನೂ ಹಲವಾರು ರೈತ ಮುಖಂಡರು ಈ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

  • ಕುಮಾರಸ್ವಾಮಿಗೆ ನಂಬಿಕೆದ್ರೋಹ ಮಾಡಿದ್ದು ನಾವಲ್ಲ, ಬಿಎಸ್‍ವೈಗೆ ಹೆಚ್‍ಡಿಕೆಯಿಂದ ದ್ರೋಹ: ಚೆಲುವರಾಯಸ್ವಾಮಿ

    ಕುಮಾರಸ್ವಾಮಿಗೆ ನಂಬಿಕೆದ್ರೋಹ ಮಾಡಿದ್ದು ನಾವಲ್ಲ, ಬಿಎಸ್‍ವೈಗೆ ಹೆಚ್‍ಡಿಕೆಯಿಂದ ದ್ರೋಹ: ಚೆಲುವರಾಯಸ್ವಾಮಿ

    – ಮುಂದಿನ ಚುನಾವಣೆಗೆ ನಾಗಮಂಗಲದಿಂದಲೇ ಸ್ಪರ್ಧೆ

    ಬೆಂಗಳೂರು: ಕುಮಾರಸ್ವಾಮಿ ಅವರಿಗೆ ದ್ರೋಹ ಮಾಡಿದ್ದು ನಾವಲ್ಲ. ಯಡಿಯೂರಪ್ಪಗೆ ಕುಮಾರಸ್ವಾಮಿ ದ್ರೋಹ ಮಾಡಿದ್ದು ಎಂದು ಜೆಡಿಎಸ್ ರೆಬಲ್ ಶಾಸಕ ಚಲುವರಾಯಸ್ವಾಮಿ ಹೇಳಿದ್ದಾರೆ.

    ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಚಲುವರಾಯಸ್ವಾಮಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕುಮಾರಸ್ವಾಮಿಯವರಿಗೆ ನಂಬಿಕೆ ದ್ರೋಹ ಮಾಡಿದ್ದು ನಾವಲ್ಲ. ರಾಮಕೃಷ್ಣ ಹೆಗಡೆ ಬೊಮ್ಮಯ್ಯ ಜೆಡಿಎಸ್ ಪಕ್ಷದಲ್ಲಿ ಏನಾಯ್ತು. ಯಡಿಯೂರಪ್ಪರಿಗೆ ನಂಬಿಕೆ ದ್ರೋಹ ಮಾಡಿದ್ದು ಕುಮಾರಸ್ವಾಮಿ. ಬಿಜೆಪಿ ಬೆಂಬಲ ಇಲ್ಲದೆ ಕುಮಾರಸ್ವಾಮಿ ಸಿಎಂ ಆಗ್ತಿದ್ರಾ? ದೇವೇಗೌಡರು ಸಿಎಂ ಆಗೋಕೆ ಬೆಂಬಲ ನೀಡಿದ್ದು ಯಾರು? ಬಿಎಸ್‍ವೈ ಗೆ 20 ತಿಂಗಳು ಅಧಿಕಾರ ಕೊಡದೆ ದ್ರೋಹ ಮಾಡಿದ್ದು ಯಾರು? ನಂಬಿಕೆ ದ್ರೋಹ ಮಾಡಿದ್ದು ಯಾರು ಮೊದಲು ಅರ್ಥ ಮಾಡಿಕೊಳ್ಳಲಿ ಅಂದ್ರು.

    ಮುಂದಿನ ಚುನಾವಣೆಯಲ್ಲಿ ನಾಗಮಂಗಲದಿಂದಲೇ ಸ್ಪರ್ಧೆ ಮಾಡುತ್ತೇನೆ. ಜೆಡಿಎಸ್ ಪಕ್ಷದಿಂದ ನಿಲ್ಲೋದಿಲ್ಲ. ಯಾವ ಪಕ್ಷ ಅಂತ ಮುಂದೆ ಗೊತ್ತಾಗುತ್ತೆ. ಯಾವ ಪಕ್ಷ ಅಂತ ಆದಷ್ಟು ಬೇಗ ನಿರ್ಧಾರ ಮಾಡ್ತೀನಿ. ಬಿಜೆಪಿ ಜೊತೆ ಮಾತುಕತೆ ಆಗಿಲ್ಲ. ಎಸ್.ಎಂ.ಕೃಷ್ಣ ಜೊತೆ ನಾನು ಮಾತಾಡಿಲ್ಲ. ಬಿಜೆಪಿಯ ಯಾವ ನಾಯಕರ ಜೊತೆ ಚರ್ಚಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಡಿಕೆ ಶಿವಕುಮಾರ್, ಪರಮೇಶ್ವರ್ ಮಾತಿಗೂ ನಮಗೂ ಸಂಬಂಧವಿಲ್ಲ. ಅವರೊಂದಿಗೆ ನಾವು ಚರ್ಚೆ ಮಾಡಿಲ್ಲ. ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಿ ನಾವು ತೀರ್ಮಾನ ಮಾಡ್ತೀವಿ. ಆದಷ್ಟು ಬೇಗ ರಾಜಕೀಯ ನಿರ್ಧಾರ ಪ್ರಕಟ ಮಾಡ್ತೀವಿ ಅಂದ್ರು.