Tag: chellengingstar

  • ದಾಸನಿಗೆ 80 ಕೆಜಿಯ ಪೊಗರ್‍ದಸ್ತಾದ ಟಗರು ಗಿಫ್ಟ್ ಮಾಡಿದ ಅಭಿಮಾನಿ

    ದಾಸನಿಗೆ 80 ಕೆಜಿಯ ಪೊಗರ್‍ದಸ್ತಾದ ಟಗರು ಗಿಫ್ಟ್ ಮಾಡಿದ ಅಭಿಮಾನಿ

    ಗದಗ: ಚಾಲೆಂಜಿಂಗ್ ಸ್ಟಾರ್ ದರ್ಶನ್‍ನ ಪ್ರಾಣಿ ಪ್ರೀತಿ ಎಲ್ಲರಿಗೂ ಗೊತ್ತು. ಫಾರ್ಮ್ ಹೌಸ್‍ನಲ್ಲೇ ವಿವಿಧ ಪ್ರಾಣಿಗಳಿವೆ. ಇದರ ಜೊತೆ ಝೂಗಳಲ್ಲೂ ಪ್ರಾಣಿಗಳನ್ನ ದತ್ತು ತೆಗೆದುಕೊಂಡಿದ್ದಾರೆ. ಹೀಗಿರೋವಾಗ ತನ್ನ ಕಟ್ಟಾ ಅಭಿಮಾನಿಯೊಬ್ಬ ಈಗ ದರ್ಶನ್‍ಗೆ ಪ್ರೀತಿಯಿಂದ ಸಾಕಿದ ಟಗರನ್ನು ಗಿಫ್ಟ್ ಆಗಿ ನೀಡಲು ಮುಂದಾಗಿದ್ದಾನೆ.

    ಹೌದು. ಗದಗ ತಾಲೂಕಿನ ಕಣವಿ ಗ್ರಾಮದ ಶಂಭು ಗಡಗಿ ಇದೀಗ ತಾನು ಮಗುವಿನಂತೆ ಪ್ರೀತಿಯಿಂದ ಸಾಕಿ ಬೆಳೆಸಿದ ಟಗರುವನ್ನು ಬೀಳ್ಕೊಡೋಕೆ ರೆಡಿ ಮಾಡ್ತಿದ್ದಾನೆ. ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಟಗರು ಸಾಕೋ ಈತನಿಗೆ ದರ್ಶನ್ ಅಂದ್ರೆ ಪಂಚಪ್ರಾಣ. ತನ್ನ ಹೀರೋಗೆ ಏನಾದ್ರೂ ಮರೆಯಲಾಗದ್ದು ಗಿಫ್ಟ್ ಮಾಡ್ಬೇಕು ಅನ್ನೋ ಹಂಬಲ.

    ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ರಾಬರ್ಟ್ ಫಿಲಂ ಪ್ರೀ ಲಾಂಚ್ ವೇಲೆ ದಚ್ಚುವನ್ನು ನೋಡೋಕೆ ಅಂತಾನೇ ಶಂಭು ಹುಬ್ಬಳ್ಳಿಗೆ ತನ್ನ ಬೀರ ಅನ್ನೋ ಹೆಸರಿನ ಈ ಟಗರುವನ್ನು ಕೂಡಾ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಅಭಿಮಾನಿ ಶಂಭುರವರ ಕೂಗಿಗೆ ಕಾರಿನಿಂದ ಇಳಿದು ಬಂದ ದರ್ಶನ್ ಫುಲ್ ಖುಷ್ ಆಗಿದ್ದಾರೆ. `ಟಗರನ್ನು ಚೆನ್ನಾಗೇ ಬೆಳಿಸಿದ್ದೀಯಾ’ ಅಂತಾನೂ ಬೆನ್ನು ತಟ್ಟಿ, ನಾನಾಗಿಯೇ ಗಾಡಿ ಕಳಿಸ್ತೀನಿ. ಮೈಸೂರಿನ ನನ್ನ ಫಾರಂಗೆ ಟಗರು ತಗೊಂಡು ಬಾ ಅಂತಾ ಮೊಬೈಲ್ ನಂಬರ್ ಕೊಟ್ಟು ಹೋಗಿದ್ದಾರೆ.

    80 ಕೆಜಿ ತೂಗೋ ಈ ಪೊಗರ್‍ದಸ್ತಾದ ಟಗರಿಗೆ 50 ಸಾವಿರಕ್ಕೂ ಅಧಿಕ ಮೊತ್ತದ ಬೇಡಿಕೆ ಬಂದಿತ್ತಂತೆ. ಇಷ್ಟು ಡಿಮ್ಯಾಂಡ್ ಬಂದಿದ್ರೂ ಶಂಭು ಮಾತ್ರ ದಚ್ಚುಗೆ ಇದನ್ನು ಗಿಫ್ಟ್ ಆಗಿ ನೀಡಿ ತನ್ನ ಆಸೆ ಪೂರೈಸಿಕೊಂಡಿದ್ದಾನೆ. ಒಟ್ಟಿನಲ್ಲಿ ತುಂಬಾ ಮುದ್ದಿನಿಂದ ಸಾಕಿದ ಟಗರುವನ್ನೇ ಗಿಫ್ಟ್ ಮಾಡಿ ದಚ್ಚು ಅಭಿಮಾನಿ ಅಭಿಮಾನವನ್ನು ಮೆರೆದಿದ್ದಾನೆ. ಕೆಲವೇ ದಿನಗಳಲ್ಲಿ ಈ ಟಗರು ದರ್ಶನ್ ಫಾರ್ಮ್ ಹೌಸ್ ಸೇರಿಕೊಳ್ಳಲಿದೆ.

  • ಸದ್ದಿಲ್ಲದೆ ಸಹಾಯ ಹಸ್ತ ಚಾಚಿದ ದರ್ಶನ್..!

    ಸದ್ದಿಲ್ಲದೆ ಸಹಾಯ ಹಸ್ತ ಚಾಚಿದ ದರ್ಶನ್..!

    ಮೈಸೂರು: ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ನೆಗಟಿವ್ ವಿಚಾರಕ್ಕೆ ಅಲ್ಲ. ಬದಲಾಗಿ ತುಂಬಾ ಪಾಸಿಟಿವ್ ವಿಚಾರದಲ್ಲಿ ಸುದ್ದಿ ಆಗ್ತಿದ್ದಾರೆ.

    ಪ್ರಾಣದ ಹಂಗು ತೊರೆದು ವನ್ಯಜೀವಿ ಕಳ್ಳಬೇಟೆ ತಡೆಗಟ್ಟುವ ಕೆಲಸ ಮಾಡುವ ಗುತ್ತಿಗೆ ನೌಕರರ ನೆರವಿಗೆ ಸ್ವಯಂ ಪ್ರೇರಿತರಾಗಿ ಸಹಾಯಕ್ಕೆ ಮುಂದಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ವನ್ಯಜೀವಿ ಕಳ್ಳಬೇಟೆ ಶಿಬಿರದಲ್ಲಿ ಕೆಲಸ ಮಾಡುವ ಗುತ್ತಿಗೆ ನೌಕರರ ನೆರವಿಗೆ ದರ್ಶನ್ ಧಾವಿಸಿದ್ದಾರೆ. ಈ ಮೂಲಕ ಇನ್ನೊಂದು ಮಾನವೀಯ ಕೆಲಸವನ್ನು ದರ್ಶನ್ ಸದ್ದಿಲ್ಲದೆ ಮಾಡಿದ್ದಾರೆ.

    ಇತ್ತೀಚೆಗೆ ಶಿಬಿರಕ್ಕೆ ಹೋಗಿದ್ದ ದರ್ಶನ್ ಗುತ್ತಿಗೆ ನೌಕರರ ಕಷ್ಟ ಆಲಿಸಿದ್ದರು. ತಕ್ಷಣ ಈ ನೌಕರರ ಕ್ಷೇಮಾಭಿವೃದ್ಧಿಗೆ 12 ಲಕ್ಷ ರೂಪಾಯಿ ನೀಡಿದ್ದಾರೆ. ಅರಣ್ಯ ಇಲಾಖೆಯೂ ಈ ಹಣವನ್ನು ಬ್ಯಾಂಕ್ ನಲ್ಲಿ ಡಿಪಾಸಿಟ್ ಮಾಡಿ ಅದರ ಬಡ್ಡಿ ಹಣವನ್ನು ಈ ನೌಕರರ ಕಷ್ಟಕ್ಕೆ ನೀಡಲು ಮುಂದಾಗಿದೆ.

    ಇದಕ್ಕೂ ಮೊದಲು ದಾಸ ಒಂದು ರೂಪಾಯಿ ಹಣ ಪಡೆಯದೆ ದರ್ಶನ್ ಅರಣ್ಯ ಇಲಾಖೆ ರಾಯಭಾರಿ ಆಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅರಣ್ಯ ಇಲಾಖೆ ರಾಯಭಾರಿಯಾಗಿ ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸೋ ಕೆಲಸದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದು ವನ್ಯಜೀವಿ ಪ್ರೇಮಿಗಳಿಗೆ ಹೆಚ್ಚು ಸಂತಸ ತಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv