Tag: cheef minister

  • ಪಂಜಾಬ್‌ನಲ್ಲಿ 2 ಗುಂಪುಗಳ ನಡುವೆ ಘರ್ಷಣೆ – ನಡುರಸ್ತೆಯಲ್ಲೇ ಕತ್ತಿ ಪ್ರದರ್ಶನ

    ಪಂಜಾಬ್‌ನಲ್ಲಿ 2 ಗುಂಪುಗಳ ನಡುವೆ ಘರ್ಷಣೆ – ನಡುರಸ್ತೆಯಲ್ಲೇ ಕತ್ತಿ ಪ್ರದರ್ಶನ

    ಪಂಜಾಬ್: ಇಲ್ಲಿನ ಪಟಿಯಾಲದಲ್ಲಿ ಶಿವಸೇನೆ ಕಾರ್ಯಕರ್ತರು ಮತ್ತು ಖಲಿಸ್ತಾನಿ ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದು, ಈ ಗಲಾಟೆಯಲ್ಲಿ ಎರಡೂ ಗುಂಪಿನ ಕಾರ್ಯಕರ್ತರು ಬಹಿರಂಗವಾಗಿ ಕತ್ತಿ ಹಿಡಿದು ಪ್ರದರ್ಶಿಸಿದ್ದಾರೆ. ಅಲ್ಲದೆ, ಕಲ್ಲು ತೂರಾಟವನ್ನೂ ನಡೆಸಿದ್ದಾರೆ.

    PUNJAB PATIALA (2)

    ಪಂಜಾಬ್‌ನ ಶಿವಸೇನೆ – ಖಲಿಸ್ತಾನ್ ವಿರೋಧಿ ಮೆರವಣಿಗೆಯನ್ನ ಹಮ್ಮಿಕೊಂಡಿತ್ತು ಈ ವೇಳೆ ಶಿವಸೇನೆಯ ಕಾರ್ಯಕರ್ತರು ಖಲಿಸ್ತಾನ್ ಮುರ್ದಾಬಾದ್ ಎನ್ನುವ ಘೋಷಣೆಗಳನ್ನು ಕೂಗಿದ್ದಾರೆ. ಇದೇ ವೇಳೆ ಖಲಿಸ್ತಾನ್ ಪರವಾದ ಸಿಖ್ ಸಂಘಟನೆಯೊಂದು ಮುಖಾಮುಖಿಯಾಗಿದ್ದು ಘರ್ಷಣೆ ಶುರುವಾಗಿದೆ. ಇದನ್ನೂ ಓದಿ: ವಿದ್ಯುತ್‌ ಸಮಸ್ಯೆ – ಕಲ್ಲಿದ್ದಲು ಸಾಗಾಟಕ್ಕೆ 650ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳ ಸಂಚಾರ ರದ್ದು

    ಪಟಿಯಾಲಾದ ಕಾಳಿ ದೇವಿ ಮಂದಿರದ ಬಳಿ ಇಂದು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಘಟನೆ ತೀವ್ರ ಸ್ವರೂಪ ಪಡೆಯುವುದಕ್ಕೂ ಮುನ್ನವೇ ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪೋಲಿಸರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿಯನ್ನ ತಿಳಿಗೊಳಿಸಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.

    ಮೆರವಣಿಗೆಗೆ ಅನುಮತಿ ಇಲ್ಲದ ಕಾರಣ ನಾವು ಶಿವಸೇನೆಯ ಮುಖ್ಯಸ್ಥ ಹರೀಶ್ ಸಿಂಗ್ಲಾ ಅವರೊಂದಿಗೆ ಮಾತನಾಡುತ್ತಿದ್ದೇವೆ. ಖಲಿಸ್ತಾನ್ ವಿರುದ್ಧ ಪಾದಯಾತ್ರೆ ಕೈಗೊಳ್ಳುವುದಾಗಿ ಶಿವಸೇನೆ ಒಂದು ದಿನ ಮುಂಚಿತವಾಗಿ ಘೋಷಿಸಿತ್ತು, ಆದರೆ, ಅನುಮತಿ ಪಡೆದಿರಲಿಲ್ಲ. ಹಾಗಾಗಿ ಪೊಲೀಸರು ಸಿದ್ಧರಾಗಿದ್ದ ಕಾರಣ ಭಾರಿ ಹಿಂಸಾಚಾರ ತಡೆಯಲಾಗಿದೆ. ಸದ್ಯ ಗಲಾಟೆ ನಡೆದ ಪ್ರದೇಶದಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮೀಸಲಾತಿ ಅಭ್ಯರ್ಥಿಗಳು ಅಧಿಕ ಅಂಕ ಗಳಿಸಿದ್ರೆ ಸಾಮಾನ್ಯ ವರ್ಗದಡಿ ಪರಿಗಣನೆ: ಸುಪ್ರೀಂ

    ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಪಂಜಾಬ್ ಮುಖ್ಯಮಂತ್ರಿ, ಪಟಿಯಾಲದಲ್ಲಿ ನಡೆದ ಘರ್ಷಣೆ ಅತ್ಯಂತ ದುರದೃಷ್ಟಕರ. ನಾನು ಡಿಜಿಪಿಯೊಂದಿಗೆ ಮಾತನಾಡಿದ್ದೇನೆ. ಪಂಜಾಬ್‌ನಲ್ಲಿ ಶಾಂತಿ ನೆಲೆಸಿದೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ರಾಜ್ಯದಲ್ಲಿ ಗೊಂದಲ ಸೃಷ್ಟಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಪಂಜಾಬ್‌ನ ಶಾಂತಿ ಮತ್ತು ಸೌಹಾರ್ದತೆ ನಮಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.