Tag: Checking

  • ಕೊರೊನಾ ಗಡಿಭಾಗದಿಂದ ಹರಡದಂತೆ ಕಟ್ಟೆಚ್ಚರಕ್ಕೆ ಸರ್ಕಾರ ಆದೇಶ – ಇನ್ನೂ ಆರಂಭಗೊಳ್ಳದ ತಪಾಸಣೆ

    ಕೊರೊನಾ ಗಡಿಭಾಗದಿಂದ ಹರಡದಂತೆ ಕಟ್ಟೆಚ್ಚರಕ್ಕೆ ಸರ್ಕಾರ ಆದೇಶ – ಇನ್ನೂ ಆರಂಭಗೊಳ್ಳದ ತಪಾಸಣೆ

    ಮಂಗಳೂರು: ಕೊರೊನಾ ಶಂಕಿತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತಷ್ಟು ಕಟ್ಟೆಚ್ಚರ ವಹಿಸಲು ನಿರ್ಧರಿಸಿದೆ. ಈಗಾಗಲೇ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಗಡಿಭಾಗದಲ್ಲಿ ಕಟ್ಟೆಚ್ಚರಕ್ಕೆ ಸರ್ಕಾರ ಆದೇಶಿಸಿದೆ.

    ಕೇರಳದಲ್ಲಿ ಈಗಾಗಲೇ 24 ಕೊರೊನಾ ಪೀಡಿತರಿದ್ದು ನಮ್ಮ ರಾಜ್ಯಕ್ಕೂ ಸೋಂಕು ಹರಡದಂತೆ ಕೇರಳದ ಗಡಿಭಾಗದಲ್ಲಿ ತಪಾಸಣೆಗೆ ಕರ್ನಾಟಕ ಸರ್ಕಾರ ಮುಂದಾಗಿದೆ. ಆದರೆ ಕೇರಳದ ಗಡಿಭಾಗ ತಲಪಾಡಿಯಲ್ಲಿ ಈವರೆಗೂ ಯಾವುದೇ ರೀತಿಯ ತಪಾಸಣೆಗಳು ಆರಂಭಗೊಂಡಿಲ್ಲ.

    ಕೇರಳದ ಗಡಿಭಾಗ ಮಂಗಳೂರಿನ ತಲಪಾಡಿಯಲ್ಲಿ ಆರ್ ಟಿಓ, ಅರಣ್ಯ, ಅಬಕಾರಿ ಇಲಾಖೆಯ ಚೆಕ್ ಪೋಸ್ಟ್ ಗಳಿದ್ದು, ಅಲ್ಲಿ ವಾಹನಗಳ ತಪಾಸಣೆ ಎಂದಿನಂತೆ ನಡೆಯುತ್ತಿದೆ. ಆದರೆ ಕಾರು, ಜೀಪು, ಬಸ್ ಸೇರಿದಂತೆ ಇತರೆ ವಾಹನಗಳಲ್ಲಿ ಸಂಚರಿಸುವ ಜನರನ್ನು ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ತಪಾಸಣೆ ಮಾಡುವ ಕೇಂದ್ರಗಳನ್ನು ಇನ್ನೂ ಆರಂಭಿಸಿಲ್ಲ.

    ಜೊತೆಗೆ ಕೇರಳದಿಂದ ರೈಲು ಮೂಲಕವೂ ಪ್ರತಿದಿನ ಸಾವಿರಾರು ಮಂದಿ ಮಂಗಳೂರಿಗೆ ಬರುತ್ತಾರೆ. ಅವರನ್ನೂ ತಪಾಸಣೆ ಮಾಡುತ್ತಿಲ್ಲ. ಹೀಗಾಗಿ ಸರಿಯಾದ ತಪಾಸಣೆಗಳು ನಡೆದರೆ ಮಂಗಳೂರು ಸೇರಿದಂತೆ ರಾಜ್ಯಕ್ಕೆ ಬರುವ ಕೊರೊನಾ ಪೀಡಿತರನ್ನು ತಡೆಗಟ್ಟಬಹುದಾಗಿದೆ.

  • ನೆಲಮಂಗಲ ಪೊಲೀಸರ ಕಾರ್ಯಾಚರಣೆ – ಅನಧಿಕೃತ ವಾಹನ ನೋಂದಣಿ ಫಲಕ ತೆರವು

    ನೆಲಮಂಗಲ ಪೊಲೀಸರ ಕಾರ್ಯಾಚರಣೆ – ಅನಧಿಕೃತ ವಾಹನ ನೋಂದಣಿ ಫಲಕ ತೆರವು

    ಬೆಂಗಳೂರು: ವಾಹನಗಳ ಚಿತ್ರ, ವಿಚಿತ್ರ ನಂಬರ್ ಪ್ಲೇಟ್ ಹಾಗೂ ನಂಬರ್ ಪ್ಲೇಟ್‍ಗಳ ಮೇಲಿನ ಹೆಸರು, ಹುದ್ದೆಗಳಿದ್ದ ಪ್ಲೇಟ್‍ಗಳನ್ನು ನೆಲಮಂಗಲ ಪೊಲೀಸರು ಕಾರ್ಯಾಚರಣೆ ಮಾಡಿ ತೆರವುಗೊಳಿಸಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಶಿವಣ್ಣ ಹಾಗೂ ಟೌನ್ ಠಾಣೆ ಪಿಎಸ್‍ಐ ಮಂಜುನಾಥ ನೇತೃತ್ವದಲ್ಲಿ ವಾಹನಗಳ ಪರಿಶೀಲನೆ ಮಾಡಲಾಯಿತು. ಈ ವೇಳೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಪಂಚಾಯತ್ ಅಧ್ಯಕ್ಷರ ಕಾರು ಸೇರಿದಂತೆ ಹಲವು ಸಂಘ- ಸಂಸ್ಥೆ, ಅಧ್ಯಕ್ಷ, ರಾಜ್ಯಾಧ್ಯಕ್ಷ, ದೇವರ ಹೆಸರುಗಳಿದ್ದ ನಾಮಾಕಿಂತ ನಂಬರ್ ಪ್ಲೇಟ್‍ಗಳನ್ನು ತೆರವು ಮಾಡಿ ಸ್ಥಳದಲ್ಲಿಯೇ ಫೈನ್ ಹಾಕಿ ಮತ್ತೊಮ್ಮೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದರು.

    ಹೈಕೋರ್ಟ್ ಕಳೆದ ತಿಂಗಳು ವಿಚಿತ್ರ ನಂಬರ್ ಪ್ಲೇಟ್‍ಗಳ ತೆರವಿಗೆ ಆದೇಶ ಮಾಡಿತ್ತು. ಇಂದು ಕಾರ್ಯಚರಣೆ ನಡೆಸಿದ ಪೊಲೀಸರು ಮುಲಾಜಿಲ್ಲದೆ ಎಲ್ಲಾ ವಾಹನಗಳನ್ನು ಪರಿಶೀಲಿಸಿ ಸಾರ್ವಜನಿಕರು ಹಾಗೂ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವ ಮೂಲಕ ಅರಿವು ಮೂಡಿಸಿದರು. ಎಲ್ಲರಿಗೂ ಕಾನೂನು ಒಂದೇ ಎಲ್ಲರೂ ಕಾನೂನಿನ ನಿಯಮಗಳನ್ನು ಪಾಲಿಸಬೇಕು. ತಮ್ಮ ವಾಹನದ ನಂಬರ್ ಪ್ಲೇಟ್ ತೆರವು ಮಾಡದಿದ್ದಲ್ಲಿ ಕೂಡಲೇ ತಾವೇ ತೆರವು ಮಾಡುವ ಮೂಲಕ ಕಾನೂನು ಪಾಲಿಸಿ ಎಂದು ಪೊಲೀಸರು ಜಾಗೃತಿ ಮೂಡಿಸುವ ಮೂಲಕ ದಂಡ ವಿಧಿಸಿ ಎಚ್ಚರಿಕೆಯನ್ನ ನೀಡಿದ್ದಾರೆ.

  • ಬೇರಂಬಾಡಿ ಬಳಿ ಸ್ಯಾಟಲೈಟ್ ಬಳಕೆ ಪತ್ತೆ – ಚೆಕ್ ಪೋಸ್ಟ್‌ಗಳಲ್ಲಿ ತೀವ್ರ ಕಟ್ಟೆಚ್ಚರ

    ಬೇರಂಬಾಡಿ ಬಳಿ ಸ್ಯಾಟಲೈಟ್ ಬಳಕೆ ಪತ್ತೆ – ಚೆಕ್ ಪೋಸ್ಟ್‌ಗಳಲ್ಲಿ ತೀವ್ರ ಕಟ್ಟೆಚ್ಚರ

    ಚಾಮರಾಜನಗರ: ಕೇರಳದಲ್ಲಿ ನಾಲ್ವರು ನಕ್ಸಲರ ಹತ್ಯೆ ಹಿನ್ನೆಲೆಯಲ್ಲಿ ಚಾಮರಾಜನಗರದ ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

    ಗಡಿಭಾಗದ ಬಂಡೀಪುರ ಅರಣ್ಯಕ್ಕೆ ನಕ್ಸಲರು ನುಸುಳುವ ಸಾಧ್ಯತೆಗಳಿರುವುದರಿಂದ ಕರ್ನಾಟಕ ಕೇರಳ ಗಡಿಭಾಗದ ಮೂಲೆಹೊಳೆ ಹಾಗೂ ಕರ್ನಾಟಕ ತಮಿಳುನಾಡು ಗಡಿಭಾಗದ ಕೆಕ್ಕನಹಳ್ಳ ಬಳಿ ನಕ್ಸಲ್ ನಿಗ್ರಹದಳ ಹಾಗೂ ಜಿಲ್ಲಾ ಪೊಲೀಸರಿಂದ ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಪೊಲೀಸರಿಂದ ಗುಂಡಿನ ದಾಳಿ – ಮೂವರು ಮಾವೋವಾದಿಗಳು ಹತ್ಯೆ

    ನಕ್ಸಲ್ ನಿಗ್ರಹದಳದ ಜೊತೆಗೆ ಜಿಲ್ಲಾ ಪೊಲೀಸ್‍ನ 10 ಮಂದಿ ಕಮಾಂಡೋಗಳನ್ನು ಕಾರ್ಯಾಚರಣೆಗೆ ನಿಯೋಜನೆ ಮಾಡಲಾಗಿದ್ದು, ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಮಧ್ಯೆ ಗುಂಡ್ಲುಪೇಟೆ ತಾಲೂಕು ಗಡಿಭಾಗದ ಬೇರಂಬಾಡ ಬಳಿ ಸ್ಯಾಟಲೈಟ್ ಫೋನ್ ಬಳಕೆ ಆಗಿರುವುದು ಕಂಡು ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎಸ್‍ಪಿ ಆನಂದಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಮಾವೋವಾದಿಗಳ ಹತ್ಯೆ – ಚಿಕ್ಕಮಗಳೂರಿನ ಇಬ್ಬರು ಸಾವು

    ಸ್ಯಾಟಲೈಟ್ ಫೋನ್ ಅನ್ನು ನಕ್ಸಲರು ಬಳಸಿದ್ದಾರೋ ಅಥವಾ ಬೇರೆ ಯಾರಾದರು ಬಳಸಿದ್ದಾರೋ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಇದೂವರೆಗೆ ನಕ್ಸಲರ ಚಟುವಟಿಕೆ ಕಂಡು ಬಂದಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಕ್ಸಲರ ಜೊತೆಗೆ ಗಿರಿಜನರು ಕೈ ಜೋಡಿಸದಂತೆ ಮನವಿ ಮಾಡಲಾಗಿದೆ. ಗಿರಿಜನ ಯುವಕರಿಗೆ ಉದ್ಯೋಗಾವಾಕಾಶ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ಆನಂದಕುಮಾರ್ ಹೇಳಿದ್ದಾರೆ.

  • ರಾಜ್ಯಾದ್ಯಂತ ಕಟ್ಟೆಚ್ಚರ – ತಲೆ ಕೆಡಿಸಿಕೊಳ್ಳದ ರಾಮನಗರ ಪೊಲೀಸರು

    ರಾಜ್ಯಾದ್ಯಂತ ಕಟ್ಟೆಚ್ಚರ – ತಲೆ ಕೆಡಿಸಿಕೊಳ್ಳದ ರಾಮನಗರ ಪೊಲೀಸರು

    ರಾಮನಗರ: ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು ಬಿಗಿ ಬಂದೋಬಸ್ತ್ ಜೊತೆಗೆ ತಪಾಸಣೆಯನ್ನು ನಡೆಸಲಾಗುತ್ತಿದೆ. ಆದರೆ ಸಿಎಂ ತವರು ಕ್ಷೇತ್ರದಲ್ಲಿ ಮಾತ್ರ ಪೊಲೀಸರು ಇನ್ನೂ ಚುನಾವಣೆಯ ಗುಂಗಿನಿಂದ ಹೊರಬಂದಿಲ್ಲ.

    ಸರಣಿ ಬಾಂಬ್ ಸ್ಫೋಟ ನಡೆದು ಮೂರು ದಿನಗಳೇ ಕಳೆದರೂ ಇನ್ನೂ ಕೂಡ ಆಯಾಕಟ್ಟಿನ ಜಾಗಗಳಲ್ಲಿ ತಪಾಸಣೆಯಿರಲಿ, ಪೇದೆಗಳಿಂದ ಬೀಟ್ ಕೂಡ ಮಾಡಿಸಲು ಸಾಧ್ಯವಾಗಿಲ್ಲ.

    ಈ ಹಿಂದೆ ಭೌದ್ದ ಧರ್ಮಗುರು ದಲೈಲಾಮರ ಹತ್ಯೆಗೆ ಸಂಚು ರೂಪಿಸಿದ್ದ ಮೋಸ್ಟ್ ವಾಂಟೆಡ್ ಉಗ್ರ ಮುನಿರಲ್ ಶೇಖ್ ಹಾಗೂ ಆತನ ಸಹಚರರು ರಾಮನಗರದಲ್ಲಿ ಸೆರೆ ಸಿಕ್ಕಿದ್ದರು. ಅಲ್ಲದೇ ಬೆಂಗಳೂರು ನಗರ ಹಾಗೂ ಚನ್ನಪಟ್ಟಣದಲ್ಲಿ ಕೇರಳ ಮೂಲದ 10 ಮಂದಿ ಆರೋಪಿಗಳು ಬಾಂಬ್ ಸ್ಫೋಟಿಸುವ ಸಂಚು ರೂಪಿಸಿದ್ದರು. ಇಷ್ಟೆಲ್ಲ ನಡೆದರೂ ಕೂಡ ಪೊಲೀಸರು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.

    ರಾಮನಗರದಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಹಾಗೂ ಗುಪ್ತಚರ ದಳದ ಅಧಿಕಾರಿಗಳ ತಂಡ ಆಗಾಗ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿರುವ ವಿಚಾರ ಗೊತ್ತಿದ್ದರೂ ಪೊಲೀಸರು ಮಾತ್ರ ಎಚ್ಚೆತ್ತುಕೊಳ್ಳದಿರುವುದು ಸಾರ್ವಜನಿಕರ ಆತಂಕ ಹಾಗೂ ಆಕ್ರೋಶಕ್ಕೂ ಕಾರಣವಾಗಿದೆ.

  • 2019ರ ಆಗಮನಕ್ಕೆ ಎಂ.ಜಿ, ಬ್ರಿಗೇಡ್ ರೋಡ್ ಸುತ್ತಮುತ್ತ ಫುಲ್ ಅಲರ್ಟ್

    2019ರ ಆಗಮನಕ್ಕೆ ಎಂ.ಜಿ, ಬ್ರಿಗೇಡ್ ರೋಡ್ ಸುತ್ತಮುತ್ತ ಫುಲ್ ಅಲರ್ಟ್

    -ಪ್ರತಿ 3 ಗಂಟೆಗಳಿಗೊಮ್ಮೆ ಡಾಗ್ & ಬಾಂಬ್ ಸ್ಕ್ವಾಡ್ ತಪಾಸಣೆ

    ಬೆಂಗಳೂರು: ಹೊಸ ವರ್ಷ ಆಗಮನದ ಆಚರಣೆಯ ಹಿನ್ನೆಲೆಯಲ್ಲಿ ಎಂ.ಜಿ ರೋಡ್ ಹಾಗೂ ಬ್ರಿಗೇಡ್ ರೋಡ್ ಸುತ್ತಮುತ್ತ ಫುಲ್ ಅಲರ್ಟ್ ಆಗಿದೆ.

    ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕುಂಬ್ಳೆ ಸರ್ಕಲ್, ಕಬ್ಬನ್ ಪಾರ್ಕ್, ಯುಬಿ ಸಿಟಿ, ಲ್ಯಾವೆಲ್ಲೆ ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಶ್ವಾನದಳ ಹಾಗೂ ಬಾಂಬ್ ಪತ್ತೆದಳ ತಪಾಸಣೆ ನಡೆಸಲಾಗುತ್ತದೆ.

    ಸ್ಕ್ವಾಡ್ ಎರಡು ತಂಡಗಳಾಗಿ ಪ್ರತಿಯೊಂದು ಜಾಗವನ್ನು ತಪಾಸಣೆ ಮಾಡುತ್ತಿದ್ದಾರೆ. ಮೆಟ್ರೋ ನಿಲ್ದಾಣ, ಫುಟ್ ಪಾತ್, ಪಾರ್ಕಿಂಗ್ ಸ್ಥಳಗಳಲ್ಲಿ ಫುಲ್ ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೇ ಅನುಮಾನಾಸ್ಪದ ವಸ್ತು ಮತ್ತು ವ್ಯಕ್ತಿಗಳು ಕಂಡರೆ ಕೂಡಲೇ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಇಂದು ಮತ್ತು ನಾಳೆ ಎರಡೂ ದಿನ ಬಾಂಬ್ ಸ್ಕ್ವಾಡ್ ಮತ್ತು ಡಾಗ್ ಸ್ಕ್ವಾಡ್ ನಿಂದ ತಪಾಸಣೆ ನಡೆಯುತ್ತದೆ. ಸದ್ಯ ಸ್ಕ್ವಾಡ್ ಪ್ರತಿ ಮೂರು ಗಂಟೆಗಳಿಗೊಮ್ಮೆ ತಪಾಸಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೈಕ್ ಸವಾರರ ಮೇಲೆ ಸಂಚಾರಿ ಪೊಲೀಸರು ದರ್ಪ

    ಬೈಕ್ ಸವಾರರ ಮೇಲೆ ಸಂಚಾರಿ ಪೊಲೀಸರು ದರ್ಪ

    ಹಾವೇರಿ: ಬೈಕ್ ಸವಾರರ ಮೇಲೆ ಹಾವೇರಿ ಸಂಚಾರಿ ಠಾಣೆಯ ಪೊಲೀಸರು ದರ್ಪ ತೋರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

    ಹಾವೇರಿ ನಗರದ ಜಿ.ಎಚ್.ಕಾಲೇಜ್ ಬಳಿ ಈ ಘಟನೆ ನಡೆದಿದೆ. ಸಂಚಾರಿ ಠಾಣೆಯ ಇಬ್ಬರು ಪೊಲೀಸರಾದ ಎಂ.ಎಸ್ ಹತ್ತಿ ಮತ್ತು ಸಿ.ಎಂ ಕರ್ಜಗಿ ಎಂಬವರು ಈ ಹಲ್ಲೆ ಮಾಡಿದ್ದಾರೆ.

    ಪೊಲೀಸರ ಹೊಡೆತಕ್ಕೆ ಬೈಕ್ ಸವಾರರು ಕಕ್ಕಾಬಿಕ್ಕಿಯಾಗಿದ್ದರು. ದಾಖಲಾತಿ ಹಾಗೂ ಹೆಲ್ಮೆಟ್ ಕೇಳಿದಾಗ ಪೊಲೀಸ್ ಹಾಗೂ ಬೈಕ್ ಸವಾರರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ಪರಸ್ಪರ ಅವಾಚ್ಯ ಪದಗಳಿಂದ ನಿಂದನೆ ಮಾಡಿಕೊಂಡಿದ್ದಾರೆ. ಆಗ ಕಾನೂನು ಕೈಗೆತ್ತಿಕೊಂಡ ಪೊಲೀಸ್ ಸಿಬ್ಬಂದಿ ಸವಾರರ ಎದುರು ದರ್ಪ ಪ್ರದರ್ಶಿಸಿದ್ದಾರೆ.

    ಕೇಸ್ ದಾಖಲಿಸುವ ಬದಲು ರೌಡಿಗಳಂತೆ ಹಲ್ಲೆ ಮಾಡಿ ದರ್ಪ ಪ್ರದರ್ಶಿಸಿದ್ದು, ಜಿಲ್ಲೆಯ ಜನರು ಖಂಡಿಸಿದ್ದಾರೆ. ಹಲ್ಲೆ ನಂತರ ಪೊಲೀಸರಿಂದ ಬಿಡಿಸಿಕೊಂಡು ಬೈಕ್ ಸವಾರರು ಹೋಗಿದ್ದಾರೆ. ಪೊಲೀಸರು ಹಲ್ಲೆ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

    ಹಾವೇರಿ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೊಲೀಸರ ಮೇಲಿನ ಹಲ್ಲೆ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬಯಲು

    ಪೊಲೀಸರ ಮೇಲಿನ ಹಲ್ಲೆ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬಯಲು

    ದಾವಣಗೆರೆ: ಪೊಲೀಸರ ಮೇಲೆ ಹಲ್ಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ.

    ದಾವಣಗೆರೆಯ ಆರ್ ಟಿಒ ಸರ್ಕಲ್ ಬಳಿ ಉತ್ತರ ಸಂಚಾರಿ ಠಾಣೆಯ ಎಎಸ್‍ಐ ರಾಮಚಂದ್ರಪ್ಪ ಹಾಗೂ ಮುಖ್ಯ ಪೇದೆ ತಿಪ್ಪೇಶ್ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಅದೇ ರಸ್ತೆಯಲ್ಲಿ ಬೈಕಿನಲ್ಲಿ ಬಂದ ಸೀಮೆಎಣ್ಣೆ ಹೇಮಣ್ಣ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಪೊಲೀಸರಿಗೆ ಬುಧವಾರ ಕೊಟ್ಟ ಹೊಡೆತ ಇನ್ನೂ ಸಾಕಾಗಿಲ್ಲ ಅಂತ ಅನ್ನಿಸುತ್ತೆ ಅದಕ್ಕೆ ಮತ್ತೆ ಗಾಡಿ ಹಿಡಿಯುತ್ತಿದ್ದಾರೆ ಎಂದು ಅಣಕಿಸಿದ್ದಾನೆ. ಇದರಿಂದ ಪೊಲೀಸ್ ಸಿಬ್ಬಂದಿ ಮಾತನಾಡದೇ ಸುಮ್ಮನೇ ಫೈನ್ ಕಟ್ಟಿ ಹೋಗಿ ಎಂದು ಹೇಳಿದ್ದೇ ತಡ ಹೆಲ್ಮೇಟ್ ನಿಂದ ಪೊಲೀಸರಿಬ್ಬರಿಗೂ ಹಲ್ಲೆ ನಡೆಸಿದ್ದಾನೆ.

    ಪೊಲೀಸರು ಕೂಡಲೇ ಹಲ್ಲೆ ನಡೆಸಿದ ಹೇಮಣ್ಣನನ್ನು ಬಸವನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಹಲ್ಲೆಗೊಳಗಾದ ಪೊಲೀಸರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಸದ್ಯ ಬಸವನಗರ ಪೊಲೀಸ್ ಠಾಣೆಗೆ ಎಸ್‍ಪಿ ಆರ್. ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿ ನಗರ ಡಿವೈಎಸ್ಪಿಗೆ ತನಿಖೆಗೆ ಆದೇಶ ನೀಡಿದರು.

    ಇತ್ತೀಚೆಗೆ ಜಿಲ್ಲೆಯ ಹದಡಿ ರೋಡ್ ಬಳಿ ಕುಡುಕನೊಬ್ಬ ನಡುರಸ್ತೆಯಲ್ಲೇ ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದನು. ಕಂಠಪೂರ್ತಿ ಕುಡಿದಿದ್ದ ರುದ್ರೇಶ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದನು. ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪೊಲೀಸರು ಹದಡಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ರುದ್ರೇಶ್ ಬೈಕನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ಇದಕ್ಕೆ ಸಿಟ್ಟಾದ ರುದ್ರೇಶ್ ಎಎಸ್‍ಐ ಅಂಜಿನಪ್ಪ, ಪೇದೆ ಸಿದ್ದೇಶ್, ಹಾಗೂ ಮುಖ್ಯ ಪೇದೆ ನಾರಾಯಣರಾಜ್ ಅರಸು ಮೇಲೆ ಹಲ್ಲೆ ಮಾಡಿದ್ದನು. ಅಲ್ಲದೇ ರಸ್ತೆ ಬದಿ ವ್ಯಾಪಾರ ನಡೆಸಿದ್ದ ತರಕಾರಿ ಹಾಗೂ ಗೊಂಬೆಗಳನ್ನು ಎತ್ತಿ ಪೊಲೀಸ್ ಪೇದೆಗಳ ಮೇಲೆ ದಾಳಿ ನಡೆಸಿದ್ದನು. ಮುಖ್ಯ ಪೇದೆ ಅರಸು ಅವರ ಹಣೆಗೆ ಬಲವಾದ ಪೆಟ್ಟು ಬಿದ್ದಿದ್ದು ಈಗ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಸಿದ್ದಾರೆ.

    ಹಲ್ಲೆ ನಡೆಸಿದ ರುದ್ರೇಶ್ ವಕೀಲ ವೃತ್ತಿ ನಡೆಸುತ್ತಿರುವುದಾಗಿ ಮಾಹಿತಿ ಲಭ್ಯವಾಗಿದ್ದು, ಕೆಟಿಜೆ ನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=MyojsAvB18c

  • ವಾಹನ ತಪಾಸಣೆ ವೇಳೆ ಬೈಕ್ ನಿಂದ ಉರುಳಿಬಿದ್ದ ಸವಾರ!

    ವಾಹನ ತಪಾಸಣೆ ವೇಳೆ ಬೈಕ್ ನಿಂದ ಉರುಳಿಬಿದ್ದ ಸವಾರ!

    ಮೈಸೂರು: ವಾಹನ ತಪಾಸಣೆ ವೇಳೆ ಬೈಕ್ ಸವಾರ ದಿಢೀರನೆ ರಸ್ತೆ ಮೇಲೆ ಉರುಳಿ ಬಿದ್ದ ಘಟನೆ ಮೈಸೂರು-ಶ್ರೀರಂಗಪಟ್ಟಣ ರಸ್ತೆಯಲ್ಲಿ ನಡೆದಿದೆ.

    ಸುರೇಶ್(45) ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ. ಗಾಯಾಳು ಸುರೇಶ್ ಕುಂಬಾರಕೊಪ್ಪಲು ನಿವಾಸಿಯಾಗಿದ್ದು, ಸದ್ಯ ಕೆ.ಆರ್. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಪೊಲೀಸರೇ ಬೈಕಿಗೆ ಅಡ್ಡವಾಗಿ ಬ್ಯಾರಿಕೇಡ್ ಎಳೆದ ಆರೋಪ ಕೇಳಿ ಬರುತ್ತಿದ್ದು, ಸುರೇಶ್ ಗಾಬರಿಯಿಂದ ಆಯತಪ್ಪಿ ಬಿದ್ದಿದ್ದಾರೆ. ಈ ವೇಳೆ ಕೆಳಗೆ ಬಿದ್ದ ಬೈಕ್ ಸವಾರನಿಗೆ ಆಲ್ಟೋ ಕಾರ್ ಡಿಕ್ಕಿ ಹೊಡೆದಿದೆ.

    ಈ ಘಟನೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಅಲ್ಲದೇ ಸ್ಥಳೀಯರಿಂದ ಪೊಲೀಸರ ಜೊತೆ ಮಾತಿನ ಚಕಮಕಿ ಕೂಡ ನಡೆದಿದೆ. ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

    ಸದ್ಯ ಈ ಬಗ್ಗೆ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.