Tag: check bounced

  • ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಲಿಂಗುಸ್ವಾಮಿಗೆ ಆರು ತಿಂಗಳು ಜೈಲು ಶಿಕ್ಷೆ

    ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಲಿಂಗುಸ್ವಾಮಿಗೆ ಆರು ತಿಂಗಳು ಜೈಲು ಶಿಕ್ಷೆ

    ಭೀಮ, ಸಂಕೋಳಿ, ರನ್ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ತಮಿಳಿನ ಖ್ಯಾತ ನಿರ್ದೇಶಕ ಲಿಂಗುಸ್ವಾಮಿ ಅವರಿಗೆ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ಕೇವಲ ಲಿಂಗುಸ್ವಾಮಿಗೆ ಮಾತ್ರವಲ್ಲ, ಅವರ ಸಹೋದರ, ಖ್ಯಾತ ನಿರ್ಮಾಪಕರೂ ಆಗಿರುವ ಸುಭಾಷ್ ಚಂದ್ರ ಬೋಸ್ ಅವರಿಗೂ ಅದೇ ಶಿಕ್ಷೆಯನ್ನು ಪ್ರಕಟಿಸಿದೆ.

    ಎನ್ನಿ ಏಳು ನಾಲ್ ಸಿನಿಮಾ ಮಾಡಲು ಲಿಂಗುಸ್ವಾಮಿ ಮತ್ತು ಸಹೋದರ ಪಿವಿಪಿ ಎಂಬ ಕಂಪೆನಿಯಿಂದ ಸಾಲವಾಗಿ 1.03 ಕೋಟಿ ಪಡೆದಿದ್ದರಂತೆ. ಸಾಲವನ್ನು ತೀರಿಸುವುದಕ್ಕಾಗಿ 35 ಲಕ್ಷ ರೂಪಾಯಿ ಚೆಕ್ ಕೂಡ ನೀಡಿದ್ದರಂತೆ. ಆದರೆ, ಲಿಂಗುಸ್ವಾಮಿ ಖಾತೆಯಲ್ಲಿ ಹಣವಿಲ್ಲದ ಕಾರಣಕ್ಕಾಗಿ ಚೆಕ್ ಬೌನ್ಸ್ ಆಗಿದೆ. ನಂತರವೂ ಹಣ ಕೊಡಲು ಸತಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಪಿವಿಪಿ ಸಂಸ್ಥೆ ಚೆಕ್ ಬೌನ್ಸ್ ಕೇಸು ದಾಖಲಿಸಲಾಗಿತ್ತು. ಅದೀಗ ನಿಜವೆಂದು ಸಾಬೀತಾಗಿದೆ. ಇದನ್ನೂ ಓದಿ:ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನ ಹುಡುಕಿಕೊಂಡು ಬಂತು ಮತ್ತೊಂದು ಬಾಲಿವುಡ್ ಸಿನಿಮಾ

    ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಲಿಂಗುಸ್ವಾಮಿ ಮತ್ತು ಅವರ ಸಹೋದರ ಸುಭಾಷ್ ಚಂದ್ರ ಬೋಸ್, ಇಬ್ಬರೂ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಕೊಟ್ಟಿರುವ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ಹಲವು ವರ್ಷಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಇವರು, ಇದೇ ಮೊದಲ ಬಾರಿಗೆ ಇಂಥದ್ದೊಂದು ಸಂಕಷ್ಟಕ್ಕೆ ಎದುರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]