Tag: check bounce

  • ಚೆಕ್ ಬೌನ್ಸ್ ಕೇಸ್‌ – ಸಚಿವ ಮಧು ಬಂಗಾರಪ್ಪಗೆ 6.96 ಕೋಟಿ ದಂಡ

    ಚೆಕ್ ಬೌನ್ಸ್ ಕೇಸ್‌ – ಸಚಿವ ಮಧು ಬಂಗಾರಪ್ಪಗೆ 6.96 ಕೋಟಿ ದಂಡ

    ಬೆಂಗಳೂರು: ಚೆಕ್ ಬೌನ್ಸ್ (Check Bounce) ಪ್ರಕರಣದಲ್ಲಿ ಸಚಿವ ಮಧು ಬಂಗಾರಪ್ಪಗೆ (Madhu Bangarappa) ಜನಪ್ರತಿನಿಧಿಗಳ‌ ವಿಶೇಷ ನ್ಯಾಯಾಲಯ 6.96 ಕೋಟಿ ರೂ. ದಂಡ (Fine) ವಿಧಿಸಿ ಆದೇಶ ಪ್ರಕಟಿಸಿದೆ.

    2011 ರಲ್ಲಿ ಆಕಾಶ್ ಆಡಿಯೋ ಪರವಾಗಿ ರಾಜೇಶ್ ಎಕ್ಸ್‌ಪೋರ್ಟ್‌ (Rajesh Exports) ಕಂಪನಿಯಿಂದ ಮಧುಬಂಗಾರಪ್ಪ 6.60 ಕೋಟಿ ರೂ. ಸಾಲವನ್ನು ಪಡೆದುಕೊಂಡಿದ್ದರು. ಸಾಲ ಪಡೆಯುವ ಸಂದರ್ಭದಲ್ಲಿ ಮಧು ಬಂಗಾರಪ್ಪ ಚೆಕ್ ನೀಡಿ ಹಣವನ್ನು ಹಿಂದಿರುಗಿಸಿರಲಿಲ್ಲ.  ಇದನ್ನೂ ಓದಿ: Ram Mandir Inauguration: ಈ ಐವರಿಗೆ ಮಾತ್ರ ರಾಮಮಂದಿರದ ಗರ್ಭಗುಡಿ ಪ್ರವೇಶಕ್ಕೆ ಅವಕಾಶ

     

    ಮಧು ಬಂಗಾರಪ್ಪ ಅವರು 6.60 ಕೋಟಿ ರೂ. ಮೊತ್ತದಲ್ಲಿ ಕೇವಲ 50 ಲಕ್ಷ ರೂ.ವನ್ನು ಮಾತ್ರ ಮರುಪಾವತಿಸಿ ಉಳಿದ ಮೊತ್ತವನ್ನು ಕೊಟ್ಟಿರಲಿಲ್ಲ. ಈ ನಡುವೆ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿತ್ತು.

    ಸುದೀರ್ಘ ವಿಚಾರಣೆ ಬಳಿಕ ಆದೇಶ ನೀಡಿದ ನ್ಯಾಯಾಲಯ ಮಧು ಬಂಗಾರಪ್ಪ ಅವರಿಗೆ 6,96,70,000 ರೂ. ಹಣವನ್ನು ದಂಡವಾಗಿ ಪಾವತಿಸಬೇಕು. ದಂಡ ಪಾವತಿಸದಿದ್ದರೆ 6 ತಿಂಗಳು ಸೆರೆವಾಸ‌ ಅನುಭವಿಸಲು ಆದೇಶ ನೀಡಿದೆ.

    ಈ ದಂಡದ ಹಣದಲ್ಲಿ 6,96,60,000 ರೂ.ದೂರುದಾರರಿಗೆ ಪರಿಹಾರವಾಗಿ ನೀಡಬೇಕು, ಉಳಿದ 10,000 ರೂ. ಸರ್ಕಾರಕ್ಕೆ ದಂಡವಾಗಿ ನೀಡಲು ಆದೇಶವನ್ನು ನೀಡಿದೆ.

     

  • ಚೆಕ್ ಬೌನ್ಸ್ ಕೇಸ್‌ನಲ್ಲಿ ನಟ ನೀನಾಸಂ ಅಶ್ವಥ್ ಬಂಧನ

    ಚೆಕ್ ಬೌನ್ಸ್ ಕೇಸ್‌ನಲ್ಲಿ ನಟ ನೀನಾಸಂ ಅಶ್ವಥ್ ಬಂಧನ

    ಹಾಸನ: ಚೆಕ್ ಬೌನ್ಸ್ (Check Bounce) ಕೇಸ್‌ನಲ್ಲಿ ಚಲನಚಿತ್ರ ನಟ ನೀನಾಸಂ ಅಶ್ವಥ್ (Ashwath Ninasam) ಅವರನ್ನು ಹಾಸನ (Hassan) ಪೊಲೀಸರು ಬಂಧಿಸಿದ್ದರು. ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರ ಬಳಿ ತಪ್ಪೊಪ್ಪಿಕೊಂಡು 25% ರಷ್ಟು ಹಣ ಪಾವತಿಸಿದ ಬಳಿಕ ನಟನನ್ನು ಬಿಡುಗಡೆ ಮಾಡಲಾಗಿದೆ.

    ಹಾಸನ ಮೂಲದ ರೋಹಿತ್ ಎಂಬವರಿಂದ ನಟ ಅಶ್ವಥ್ ಹಸುಗಳನ್ನ ಖರೀದಿ ಮಾಡಿ 1.5 ಲಕ್ಷದ ಚೆಕ್ ನೀಡಿದ್ದರು. ರೋಹಿತ್ ಬ್ಯಾಂಕ್‌ಗೆ ಚೆಕ್ ಹಾಕಿದಾಗ ಬೌನ್ಸ್ ಆಗಿತ್ತು. ಈ ಸಂಬಂಧ ರೋಹಿತ್ ಹಾಸನದ ಜೆಎಂಎಫ್‌ಸಿ‌ ಕೋರ್ಟ್‌ನಲ್ಲಿ‌ ಕೇಸ್ ಹಾಕಿದ್ದು, ಕೋರ್ಟ್ ನಾಲ್ಕು ಬಾರಿ ಅರೆಸ್ಟ್ ವಾರೆಂಟ್ ಹೊರಡಿಸಿತ್ತು.‌ ಇದನ್ನೂ ಓದಿ: ‘ಘೋಸ್ಟ್’ ಚಿತ್ರದ ಬಿಗ್ ಡ್ಯಾಡಿ ಪೋಸ್ಟರ್ ಔಟ್- ಕಿಕ್ ಕೊಡ್ತಿದೆ ಶಿವಣ್ಣ ಲುಕ್

    ನಾಲ್ಕೂ ಬಾರಿಯೂ ನಟ ಅಶ್ವಥ್ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಐದನೇ ಬಾರಿಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಹಾಸನ ಬಡಾವಣೆ ಠಾಣೆ ಪೊಲೀಸರು ಶನಿವಾರ ರಾತ್ರಿ ಅಶ್ವಥ್‌ ಅವರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.

    ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡ ಅಶ್ವಥ್ ಈಗಲೇ 25% ರಷ್ಟು ಹಣ ಪಾವತಿಸುತ್ತೇನೆ ಎಂದು ಉಳಿದ ಹಣ ನೀಡಲು ನ್ಯಾಯಾಧೀಶರಿಂದ ಸಮಯ ಪಡೆದಿದ್ದಾರೆ. 25% ರಷ್ಟು ಹಣ ಪಾವತಿ ಮಾಡಿದ ಹಿನ್ನೆಲೆಯಲ್ಲಿ ಜಾಮೀನಿನ ಮೇಲೆ ನಟನನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಇದನ್ನೂ ಓದಿ: ಹಿರಿಯ ನಟಿ ಲೀಲಾವತಿ ಮನೆಗೆ ಉಮಾಶ್ರೀ- ಪದ್ಮಾವಾಸಂತಿ ಭೇಟಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೆಕ್‌ ಬೌನ್ಸ್‌ ಕೇಸ್‌ – ಮಾಜಿ ಸಚಿವ ಜಾಲಪ್ಪ ಪುತ್ರಗೆ ಜೈಲು ಶಿಕ್ಷೆ

    ಚೆಕ್‌ ಬೌನ್ಸ್‌ ಕೇಸ್‌ – ಮಾಜಿ ಸಚಿವ ಜಾಲಪ್ಪ ಪುತ್ರಗೆ ಜೈಲು ಶಿಕ್ಷೆ

    ಬೆಂಗಳೂರು: ಚೆಕ್‌ ಬೌನ್ಸ್‌ (Check Bounce) ಪ್ರಕರಣದಲ್ಲಿ ಮಾಜಿ ಸಚಿವ ಆರ್ ಎಲ್ ಜಾಲಪ್ಪ (RL Jalappa) ಅವರ ಪುತ್ರ ನರಸಿಂಹಮೂರ್ತಿಗೆ ಕೋರ್ಟ್‌ ಜೈಲು ಶಿಕ್ಷೆ ವಿಧಿಸಿದೆ.

    ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (Special Courts for MPs/MLAs) ನರಸಿಂಹಮೂರ್ತಿ (Narasimha Murthy) 6 ತಿಂಗಳು ಜೈಲು ಶಿಕ್ಷೆ, 20 ಲಕ್ಷ ರೂ. ದಂಡ ವಿಧಿಸಿ ಆದೇಶ ಪ್ರಕಟಿಸಿದೆ. ಇದನ್ನೂ ಓದಿ: ಇಂದು ಕೇರಳಕ್ಕೆ ತೆರಳಲಿದ್ದಾನೆ ಬೆಂಗಳೂರು ಬಾಂಬ್‌ ಸ್ಫೋಟದ ಆರೋಪಿ ಮದನಿ

     

    ಪ್ರಕಾಶ್ ಕುಮಾರ್ ಎಂಬುವವರ ಪುತ್ರಿಗೆ ಸೀಟ್ ಕೊಡಿಸಲು ನರಸಿಂಹಮೂರ್ತಿ 45 ಲಕ್ಷ ರೂ. ಹಣವನ್ನು ಪಡೆದಿದ್ದರು. ಮೆಡಿಕಲ್‌ ಸೀಟ್‌ ಸಿಗದ ಕಾರಣ 45 ಲಕ್ಷ ರೂ.ಗೆ ಚೆಕ್‌ ನೀಡಿದ್ದರು. ಆದರೆ ಈ ಚೆಕ್‌ ಬೌನ್ಸ್‌ ಆಗಿತ್ತು. ಮೆಡಿಕಲ್ ಸೀಟ್ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ್ದಕ್ಕೆ ಚೆಕ್‌ ಬೌನ್ಸ್‌ ಪ್ರಕರಣ ದಾಖಲಾಗಿತ್ತು.

    ಶಿಕ್ಷೆ ಪ್ರಮಾಣವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆಗೆ ಕೋರ್ಟ್‌ 2 ತಿಂಗಳು ಕಾಲಾವಕಾಶ ನೀಡಿದೆ.

  • ‘ಮಠ’ ಚಿತ್ರ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಬಂಧನ

    ‘ಮಠ’ ಚಿತ್ರ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಬಂಧನ

    ಠ, ಎದ್ದೇಳು ಮಂಜುನಾಥ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿರುವ ಪ್ರತಿಭಾವಂತ ನಿರ್ದೇಶಕ ಗುರುಪ್ರಸಾದ್ (Guruprasad) ಅವರನ್ನು ಗಿರಿನಗರ (Girinagar) ಪೊಲೀಸರು ಬಂಧಿಸಿದ್ದಾರೆ. ಚೆಕ್ ಬೌನ್ಸ್ (Check Bounce) ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಂಧನವಾಗಿದ್ದು (Arrest), ನಂತರ ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

    ತಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಎನ್ನುವವರಿಂದ ಗುರು ಪ್ರಸಾದ್ 30 ಲಕ್ಷ ರೂಪಾಯಿಯನ್ನು ಸಾಲವಾಗಿ ಪಡೆದುಕೊಂಡಿದ್ದರು. ಸಿನಿಮಾ ಮಾಡುವುದಾಗಿ ಸಾಲ ಪಡೆದಿದ್ದ ಗುರುಪ್ರಸಾದ್, ನಂತರ ಹಣ ಕೊಡದೇ ವಂಚಿಸಿದ್ದರು. ಹಣ ಕೇಳುವುದಕ್ಕೆ ಹೋದವರ ಮೇಲೆಯೇ ಸುಳ್ಳು ಕೇಸ್ ಅನ್ನು ಕೂಡ ದಾಖಲಿಸಿದ್ದರು. ಹಾಗಾಗಿ ಶ್ರೀನಿವಾಸ್ ಅವರು ಗುರುಪ್ರಸಾದ್ ಮೇಲೆ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದರು. ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿಗಳ ಸಮಾಗಮ: ವೈಷ್ಣವಿ ಜೊತೆ ದಿವ್ಯಾ- ಅರವಿಂದ್ ಕೆ.ಪಿ ಜೋಡಿ

    ಶ್ರೀನಿವಾಸ್ ದೂರು ನೀಡಿದ ಹಿನ್ನೆಲೆಯಲ್ಲಿ ಕೋರ್ಟ್ ನಿಂದ ಎನ್.ಬಿ ಡಬ್ಲ್ಯು ಜಾರಿ ಆಗಿತ್ತು. ಎನ್.ಐ ಆಕ್ಟ್ ಅಡಿ ಗುರುಪ್ರಸಾದ್ ವಿರುದ್ದ ಚೆಕ್ ಬೌನ್ಸ್ ಕೇಸ್ ನಲ್ಲಿ ವಾರೆಂಟ್ ಜಾರಿ ಆಗಿತ್ತು. ಹಾಗಾಗಿ ಗಿರಿನಗರ ಪೊಲೀಸರು ಗುರುಪ್ರಸಾದ್ ಅವರನ್ನು ಬಂಧಿಸಿ,  ಮೆಡಿಕಲ್ ಟೆಸ್ಟ್ ನಂತರ ಕೋರ್ಟ್ ಮುಂದೆ ಹಾಜರು ಪಡಿಸಲು ಕರೆದುಕೊಂಡು ಹೋಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಎಂ.ಎಸ್ ಧೋನಿ ಸೇರಿ 8 ಮಂದಿ ವಿರುದ್ಧ FIR

    ಎಂ.ಎಸ್ ಧೋನಿ ಸೇರಿ 8 ಮಂದಿ ವಿರುದ್ಧ FIR

    ಮುಂಬೈ: ನ್ಯೂ ಗ್ಲೋಬಲ್ ಇಂಡಿಯಾ ಲಿಮಿಟೆಡ್‌ನ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ 8 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

    `ನ್ಯೂ ಗ್ಲೋಬಲ್ ಪ್ರೊಡ್ಯೂಸ್ ಇಂಡಿಯಾ ಲಿಮಿಟೆಡ್’ ನಿಂದ ಪಡೆದ 30 ಲಕ್ಷ ರೂಪಾಯಿ ಮೌಲ್ಯದ ಚೆಕ್ ಬೌನ್ಸ್ ಆಗಿದೆ ಎಂದು ಆರೋಪಿಸಿರುವ ಎಸ್‌ಕೆ ಎಂಟರ್‌ಪ್ರೈಸಸ್ ಹೆಸರಿನ ಕಂಪನಿಯು ಬೇಗುಸರಾಯ್‌ನ ಸಿಜೆಎಂ ನ್ಯಾಯಾಲಯದಲ್ಲಿ ಎಫ್‌ಐಆರ್ ದಾಖಲಿಸಿದೆ. ಅಂದಹಾಗೆ ಎಂಎಸ್ ಧೋನಿ ಈ ಉತ್ಪನ್ನವನ್ನು ಪ್ರಚಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ ನೀಡಿಲ್ಲ: ಜಯ್ ಶಾ ಸ್ಪಷ್ಟನೆ

    ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಪ್ರಕರಣವನ್ನು ಜುಡಿಷಿಯಲ್ ಮ್ಯಾಜಿಸ್ಟ್ರೇಟ್‌ ಅಜಯ್ ಕುಮಾರ್ ಮಿಶ್ರಾ ಅವರಿಗೆ ಕಳುಹಿಸಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ಮುಂದಿನ ವಿಚಾರಣೆ ಜೂನ್ 28 ರಂದು ನಡೆಯಲಿದೆ. ಇದನ್ನೂ ಓದಿ: ಹಾಕಿ ಏಷ್ಯಾ ಕಪ್ 2022: ಭಾರತಕ್ಕೆ ಕಂಚಿನ ಪದಕ

    ಏನಿದು ಘಟನೆ?: ನ್ಯೂ ಗ್ಲೋಬಲ್ ಪ್ರೊಡ್ಯೂಸ್ ಇಂಡಿಯಾ ಲಿಮಿಟೆಡ್‌ನಿಂದ 30 ಲಕ್ಷ ರೂ. ಮೌಲ್ಯದ ರಸಗೊಬ್ಬರದ ಆದೇಶವನ್ನು ಎಸ್‌ಕೆ ಎಂಟರ್‌ಪ್ರೈಸ್ ಸ್ವೀಕರಿಸಿತ್ತು. ಅದರಂತೆ ಎಸ್‌ಕೆ ಎಂಟರ್‌ಪ್ರೈಸಸ್ ರಸಗೊಬ್ಬರನ್ನು ನೀಡಿತ್ತು. ಆದರೆ ಡೀಲರ್ ಈ ಹಿಂದಿನ ಒಪ್ಪಂದಕ್ಕೆ ಬದ್ಧವಾಗಿದರ ಕಾರಣ ಸಾಕಷ್ಟು ಉತ್ಪನ್ನಗಳು ಮಾರಾಟವಾಗದೆ ಹಾಗೆಯೇ ಉಳಿದಿದ್ದವು. ನಂತರ ಕಂಪನಿ ಅವುಗಳನ್ನು ಹಿಂದಕ್ಕೆ ಪಡೆದು, ಏಜೆನ್ಸಿ ಮೂಲಕ 30 ಲಕ್ಷ ರೂ. ಚೆಕ್ ಅನ್ನು ನೀಡಿತ್ತು. ಆದರೆ ಚೆಕ್ ಅನ್ನು ಬ್ಯಾಂಕ್‌ಗೆ ಹಾಕಿದ ಬಳಿಕ ಬೌನ್ಸ್ ಆಗಿರುವುದು ಬೆಳಕಿಗೆ ಬಂದಿದೆ.

    IPL 2022 RR VS LSG

    ಈ ಸಂಬಂಧ ಗ್ಲೋಬಲ್ ಇಂಡಿಯಾ ಕಂಪನಿಗೆ ನೋಟಿಸ್ ನೀಡಲಾದರೂ ಯಾವುದೇ ಪ್ರತಿಕ್ರಿಯೆ ಸ್ವೀಕರಿಸದ ಹಿನ್ನೆಲೆಯಲ್ಲಿ ಎಸ್‌ಕೆ ಎಂಟರ್‌ಪ್ರೈಸಸ್‌ನ ಮಾಲೀಕ ನೀರಜ್ ಕುಮಾರ್ ನಿರಾಲಾ ಅವರು ಸಂಬಂಧಿಸಿದ ಉತ್ಪನ್ನವನ್ನು ಪ್ರಚಾರ ಮಾಡಿದ ಎಂ.ಎಸ್.ಧೋನಿ ಮತ್ತು ಇತರ 7 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

  • ಚೆಕ್ ಬೌನ್ಸ್ ಪ್ರಕರಣ- ದೋಷಿಗೆ ಜೈಲು ಶಿಕ್ಷೆ

    ಚೆಕ್ ಬೌನ್ಸ್ ಪ್ರಕರಣ- ದೋಷಿಗೆ ಜೈಲು ಶಿಕ್ಷೆ

    ಶಿವಮೊಗ್ಗ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿಗೆ 1.51 ಲಕ್ಷ ರೂ. ದಂಡ ಮತ್ತು 9 ತಿಂಗಳು ಜೈಲು ಶಿಕ್ಷೆ ವಿಧಿಸಿ ಹೊಸನಗರ ಜೆಎಂಎಫ್‍ಸಿ ನ್ಯಾಯಾಲಯ ತೀರ್ಪು ನೀಡಿದೆ.

    ಪಟ್ಟಣ ವ್ಯಾಪ್ತಿಯ ಪಿ.ಆರ್.ಸಂಜೀವ್ ಅವರಿಂದ ಬಾಳಚಿಕ್ಕ ಗ್ರಾಮದ ವೀರೇಶ್ 1 ಲಕ್ಷ ರೂ. ಗಳನ್ನು ಕೈಗಡವಾಗಿ ಪಡೆದಿದ್ದ. ಅಲ್ಲದೆ ಹಣ ತಿಳುವಳಿಗಾಗಿ ಬ್ಯಾಂಕ್ ಚೆಕ್ ನೀಡಿದ್ದ. ಅದರೆ ಚೆಕ್ ಹಾಕಿದ ಸಂದರ್ಭದಲ್ಲಿ ವೀರೇಶ್ ಖಾತೆಯಲ್ಲಿ ಸಾಕಷ್ಟು ಹಣವಿರಲಿಲ್ಲ. ಹೀಗಾಗಿ ಚೆಕ್ ಬೌನ್ಸ್ ಆಗಿತ್ತು. ವೀರೇಶ್ ವಿರುದ್ಧ ಸಂಜೀವ್ ನ್ಯಾಯಾಲಯದ ಮೊರೆ ಹೋಗಿದ್ದರು.

    ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯ, ವೀರೇಶ್‍ಗೆ 9 ತಿಂಗಳು ಸಾದಾ ಸಜೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ. ದೋಷಿ ವಿರೇಶ್, ಪಿ.ಆರ್. ಸಂಜೀವ್ ಅವರಿಗೆ 1.46 ಲಕ್ಷ ರೂ. ಹಾಗೂ ಸರ್ಕಾರಕ್ಕೆ 5 ಸಾವಿರ ರೂ. ಹಣ ನೀಡುವಂತೆ ಸೂಚಿಸಿ ತೀರ್ಪು ಪ್ರಕಟಿಸಿದೆ. ಅಲ್ಲದೆ ಹಣ ಕಟ್ಟಲು ವಿಫಲವಾದಲ್ಲಿ ಪುನಃ 3 ತಿಂಗಳು ಹೆಚ್ಚುವರಿ ಶಿಕ್ಷೆಯ ಆದೇಶವನ್ನು ನೀಡಿದ್ದಾರೆ.

  • ಬಿಗ್‍ಬಾಸ್ ಸೆಟ್‍ನಲ್ಲೇ ಸ್ಪರ್ಧಿ ಅರೆಸ್ಟ್

    ಬಿಗ್‍ಬಾಸ್ ಸೆಟ್‍ನಲ್ಲೇ ಸ್ಪರ್ಧಿ ಅರೆಸ್ಟ್

    ಮುಂಬೈ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಸೆಟ್‍ನಿಂದಲೇ ನೇರವಾಗಿ ಸ್ಪರ್ಧಿಯನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆಯೊಂದು ಮರಾಠಿ ಬಿಗ್ ಬಾಸ್ ಎರಡನೇ ಅವೃತ್ತಿಯಲ್ಲಿ ನಡೆದಿದೆ.

    ಬಿಗ್‍ಬಾಸ್ ಸ್ಪರ್ಧಿಯಾದ ಅಭಿಜಿತ್ ಬಿಚುಕಲೆ ಅವರ ವಿರುದ್ಧ ಸತಾರಾ ಪೊಲೀಸ್ ಠಾಣೆಯಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು ಈ ಪ್ರಕರಣದ ಮೇಲೆ ಅವರನ್ನು ಬಂಧಿಸಲಾಗಿದೆ. ರಾಜಕೀಯ ಕಾರ್ಯಕರ್ತನಾಗಿರುವ ಅಭಿಜೆತ್ ಬಿಚುಕಲೆ ಅವರನ್ನು ರಾಜಕೀಯ ಕೋಟಾದ ಮೇಲೆ ಬಿಗ್‍ಬಾಸ್‍ಗೆ ಆಯ್ಕೆ ಮಾಡಲಾಗಿತ್ತು.

    2015ದಿಂದ ಈ ಚೆಕ್ ಬೌನ್ಸ್ ಪ್ರಕರಣ ಕೋರ್ಟಿನಲ್ಲಿ ಇತ್ತು. ಈ ವಿಚಾರವಾಗಿ ಕೋರ್ಟ್ ಅಭಿಜಿತ್ ಅವರಿಗೇ ಎಷ್ಟು ಸಲ ಸಮನ್ಸ್ ಕಳುಹಿಸಿದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಅದ್ದರಿಂದ ಕೋರ್ಟ್ ಅವರ ಮೇಲೆ ವಾರೆಂಟ್ ಜಾರಿ ಮಾಡಿತ್ತು. ಈ ಕಾರಣದಿಂದ ಅವರು ಬಿಗ್ ಬಾಸ್ ಸ್ಪರ್ಧಿಯಾಗಿದ್ದರೂ ಅವರನ್ನು ಅಲ್ಲಿಂದಲೇ ನೇರವಾಗಿ ಬಂಧಿಸಿ ಕರೆದುಕೊಂಡು ಬರಲಾಗಿದೆ.

    ಕೋರ್ಟ್ ವಾರೆಂಟ್ ನೀಡಿದ ಬಳಿಕ ಸತಾರಾ ಠಾಣಾ ಪೊಲೀಸರು ಮತ್ತು ಗೋರೆಗಾಂವ್ ಪೂರ್ವದ ಆರೆ ಕಾಲೋನಿ ಪೊಲೀಸ್ ಠಾಣೆ ಸಿಬ್ಬಂದಿಗಳು ಸೇರಿ ಫಿಲ್ಮ್ ಸಿಟಿ ಮೈದಾನದಲ್ಲಿ ನಡೆಯುತ್ತಿರುವ ಬಿಗ್‍ಬಾಸ್ ಸೀಸನ್ 2 ರ ಸೆಟ್‍ಗೆ ನೇರವಾಗಿ ಹೋಗಿ ಅಲ್ಲಿಂದಲೇ ಅಭಿಜಿತ್ ಅವರನ್ನು ಬಂಧಿಸಿ ಕರೆದುಕೊಂದು ಕೊಂಡು ಬಂದಿದ್ದಾರೆ. ಈ ಸಮಯದಲ್ಲಿ ಶೋನ ಸಿಬ್ಬಂದಿ ಯಾರೂ ವಿರೋಧ ಪಡಿಸಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ವಿವಾದತ್ಮಾಕ ವ್ಯಕ್ತಿಯಾಗಿರುವ ಅಭಿಜಿತ್ ಪುರಸಭೆ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಯಾವುದೇ ಯಶಸ್ಸು ಕಂಡಿರಲಿಲ್ಲ. ಅಭಿಜಿತ್ ಅವರನ್ನು ಬಂಧಿಸಿ ಸತಾರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದು, ಇಂದು ಕೋರ್ಟ್‍ಗೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • 7.25 ಕೋಟಿ ರೂ. ಹಣ ಪಾವತಿಸಿ: ಸಚಿವ ಲಾಡ್‍ಗೆ ಕೋರ್ಟ್ ಆದೇಶ

    7.25 ಕೋಟಿ ರೂ. ಹಣ ಪಾವತಿಸಿ: ಸಚಿವ ಲಾಡ್‍ಗೆ ಕೋರ್ಟ್ ಆದೇಶ

    ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್‍ ಕೂಡಲೇ ರಾಕ್‍ಲೈನ್ ವೆಂಕಟೇಶ್‍ ಅವರಿಗೆ ಹಣವನ್ನು ಪಾವತಿಸುವಂತೆ ಕೋರ್ಟ್ ಆದೇಶಿಸಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ 42ನೇ ಎಸಿಎಂಎಂ ನ್ಯಾಯಾಲಯ 6 ತಿಂಗಳ ಕಾರಾಗೃಹ ವಾಸದ ಶಿಕ್ಷೆ ವಿಧಿಸಿ ಕೂಡಲೇ 7.25 ಕೋಟಿ ರೂ.  ಪಾವತಿಸಬೇಕು ಇಲ್ಲದೇ ಹೋದರೆ 6 ತಿಂಗಳ ಶಿಕ್ಷೆ ಅನುಭವಿಸುವಂತೆ ಕೋರ್ಟ್ ಆದೇಶ ಮಾಡಿತು. ಕೋರ್ಟ್ ಗೆ ಹಾಜರಾಗಿದ್ದ ಸಂತೋಷ್ ಲಾಡ್ ಜಾಮೀನು ಪಡೆದು ಇನ್ನೊಂದು ತಿಂಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸುತ್ತೇನೆ ಎಂದು ನ್ಯಾಯಾಧೀಶರ ಮುಂದೆ ಹೇಳಿದರು.

    ಏನಿದು ಪ್ರಕರಣ?
    ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್‍ರಿಂದ ಸಂತೋಷ್ ಲಾಡ್ 2014ರಲ್ಲಿ 7 ಕೋಟಿ ರೂ. ಡಿಡಿ ಪಡೆದುಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಹಲವು ಚೆಕ್‍ಗಳನ್ನು ನೀಡಿದ್ದರು. ಲಾಡ್ ಅವರು ನೀಡಿದ್ದ ಚೆಕ್‍ಗಳನ್ನು ನಿಗದಿತ ಅವಧಿಯಲ್ಲಿ ಬ್ಯಾಂಕ್ ಖಾತೆಗೆ ಹಾಕಿಕೊಂಡರೂ ಎಲ್ಲಾ ಚೆಕ್‍ಗಳು ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಸಂತೋಷ್ ಲಾಡ್ ವಿರುದ್ಧ ನ್ಯಾಯಾಲಯದಲ್ಲಿ ರಾಕ್‍ಲೈನ್ ವೆಂಕಟೇಶ್ ಅವರು 2015ರಲ್ಲಿ ಖಾಸಗಿ ದೂರು ದಾಖಲಿಸಿದ್ದರು.

     

  • ಚೆಕ್‍ ಬೌನ್ಸ್ ಕೇಸ್: ಸಚಿವ ಸಂತೋಷ್ ಲಾಡ್‍ಗೆ ಜಾಮೀನು ರಹಿತ ವಾರೆಂಟ್ ಜಾರಿ

    ಚೆಕ್‍ ಬೌನ್ಸ್ ಕೇಸ್: ಸಚಿವ ಸಂತೋಷ್ ಲಾಡ್‍ಗೆ ಜಾಮೀನು ರಹಿತ ವಾರೆಂಟ್ ಜಾರಿ

    ಬೆಂಗಳೂರು: ಕಾರ್ಮಿಕ ಸಚಿವ ಸಂತೋಷ್ ಲಾಡ್‍ಗೆ ಕಂಟಕ ಎದುರಾಗಿದೆ. ಚೆಕ್‍ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಕಮ್ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸುತ್ತಿರುವ 42 ಎಸಿಎಂಎಂ ನ್ಯಾಯಾಲಯ ಗುರುವಾರ ಸಂತೋಷ್ ಲಾಡ್‍ಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.

    ಮುಂದಿನ ವಿಚಾರಣೆ ಇದೇ ತಿಂಗಳು 22 ರಂದು ನಡೆಯಲಿದ್ದು ಆ ಸಂದರ್ಭದಲ್ಲಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಲಯ ಸೂಚನೆ ನೀಡಿದೆ.

    2015 ರಲ್ಲಿ ದಾಖಲಿಸಿದ್ದ ಚೆಕ್ ಬೌನ್ಸ್ ಪ್ರಕರಣದಲ್ಲಿ ಸಚಿವ ಸಂತೋಷ್ ಲಾಡ್ ವಿರುದ್ಧ ಉಪ್ಪಾರಪೇಟೆ ಪೋಲೀಸ್‍ಸ್ಟೇಷನ್‍ನಲ್ಲಿ ಎಫ್‍ಐಆರ್ ದಾಖಲಾಗಿತ್ತು.