Tag: cheating case

  • ವಂಚನೆ ಪ್ರಕರಣ: ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ಅಭ್ಯರ್ಥಿ ದುಬೈನಲ್ಲಿ ಅರೆಸ್ಟ್

    ವಂಚನೆ ಪ್ರಕರಣ: ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ಅಭ್ಯರ್ಥಿ ದುಬೈನಲ್ಲಿ ಅರೆಸ್ಟ್

    ತಿರುವನಂತಪುರಂ: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ದುಬೈ ಪೊಲೀಸರು ಬಂಧಿಸಿದ್ದಾರೆ.

    ವಂಚನೆ ಪ್ರಕರಣದ ಸಂಬಂಧ ತುಷಾರ್ ವೆಲ್ಲಪಲ್ಲಿ ಅವರನ್ನು ದುಬೈ ಬಳಿಯ ಅಜ್ಮಾನ್‍ನಲ್ಲಿ ಗುರುವಾರ ಬಂಧಿಸಲಾಗಿದೆ ಎಂದು ವರದಿಯಾಗಿದೆ. ತುಷಾರ್ ವೆಲ್ಲಪಲ್ಲಿ ಅವರು ಭಾರತೀಯ ಧರ್ಮಸೇನಾ (ಬಿಡಿಜೆಎಸ್) ಪಕ್ಷದ ಮುಖ್ಯಸ್ಥರಾಗಿದ್ದಾರೆ. ತುಷಾರ್ ಅವರ ಬಂಧನದ ಸಂಬಂಧ ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ್ ಅವರಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಪತ್ರ ಬರೆದಿದ್ದಾರೆ.

    ಬಿಡಿಜೆಎಸ್ ಪಕ್ಷದ ಉಪಾಧ್ಯಕ್ಷ ತುಷಾರ್ ವೆಲ್ಲಪಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬಂಧನದಲ್ಲಿರುವ ಅವರ ಯೋಗಕ್ಷೇಮ ಮತ್ತು ಆರೋಗ್ಯದ ಬಗ್ಗೆ ನಾನು ಕಳವಲಳಿ ವ್ಯಕ್ತಪಡಿಸುತ್ತೇನೆ. ಈ ವಿಷಯದಲ್ಲಿ ವಿದೇಶಾಂಗ ಸಚಿವರು ವೈಯಕ್ತಿಕ ಗಮನ ಹರಿಸಬೇಕು. ಕಾನೂನಿನ ಮಿತಿಯಲ್ಲಿ ಎಲ್ಲ ರೀತಿಯ ಸಹಾಯಗಳನ್ನು ತುಷಾರ್ ಅವರಿಗೆ ಲಭ್ಯವಾಗುವಂತೆ ಸಹಕರಿಸಿ ಎಂದು ಸಿಎಂ ಪಿಣರಾಯಿ ವಿಜಯನ್ ಅವರು, ಪತ್ರದ ಮೂಲಕ ಜೈಶಂಕರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

    ತುಷಾರ್ ವೆಲ್ಲಪಲ್ಲಿ ಅವರು ದುಬೈನಲ್ಲಿ ಕಳೆದ 10 ವರ್ಷಗಳಿಂದ ಕಂಪೆನಿ ನಡೆಸುತ್ತಿದ್ದಾರೆ. ಆದರೆ ಈಗ ಆ ಕಂಪನಿ ನಷ್ಟವನ್ನು ಎದುರಿಸುತ್ತಿದೆ. ಹೀಗಾಗಿ ಉಪ ಗುತ್ತಿಗೆದಾರರು ನಷ್ಟಕ್ಕೆ ಪರಿಹಾರ ನೀಡುವಂತೆ ಕೇಳಿದ್ದಾರೆ. ಹೀಗಾಗಿ ತುಷಾರ್ ಅವರು ದುಬೈನಲ್ಲಿದ್ದಾಗ ಇತ್ತೀಚೆಗೆ ಪರಿಹಾರವಾಗಿ ನೀಡಿದ್ದ ಸುಮಾರು 15.66 ಕೋಟಿ ರೂ. (8 ಮಿಲಿಯನ್ ದಿರ್ಹಾಮ್ಸ್) ಚೆಕ್ ಬೌನ್ಸ್ ಆಗಿದೆ. ಇದರಿಂದಾಗಿ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರು 7,06,367 (ಶೇ.64.67) ಮತ ಗಳಿಸಿ ಭರ್ಜರಿ ಗೆಲುವು ಸಾಧಿಸಿದ್ದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ತುಷಾರ್ ವೆಲ್ಲಪಲ್ಲಿ ಅವರು 78,816 ಮತ ಪಡೆದಿದ್ದರು.

  • ಸೋನಾಕ್ಷಿಯಿಂದ ವಂಚನೆ – ನಟಿಯ ಮನೆಗೆ ಭೇಟಿಕೊಟ್ಟ ಯುಪಿ ಪೊಲೀಸರು

    ಸೋನಾಕ್ಷಿಯಿಂದ ವಂಚನೆ – ನಟಿಯ ಮನೆಗೆ ಭೇಟಿಕೊಟ್ಟ ಯುಪಿ ಪೊಲೀಸರು

    ಲಕ್ನೋ: ವಂಚನೆ ಆರೋಪ ಎದುರಿಸುತ್ತಿರುವ ಬಾಲಿವುಡ್‍ನ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಮನೆಗೆ ಉತ್ತರ ಪ್ರದೇಶ ಪೊಲೀಸರ ತಂಡ ಭೇಟಿ ನೀಡಿದೆ.

    ಹಣ ಕೊಟ್ಟಿದ್ದರೂ ನಟಿ ಸೋನಾಕ್ಷಿ ಸಿನ್ಹಾ ದೆಹಲಿಯಲ್ಲಿ ಕಾರ್ಯಕ್ರಮ ನೀಡದೆ ವಂಚಿಸಿದ್ದಾರೆ ಎಂದು ಆಯೋಜಕರು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಹಾಗೂ ಶುಕ್ರವಾರ ಉತ್ತರ ಪ್ರದೇಶ ಪೊಲೀಸರು ಸೋನಾಕ್ಷಿ ಸಿನ್ಹಾ ಅವರ ಮನೆ ಬಾಗಿಲನ್ನು ತಟ್ಟಿದ್ದಾರೆ.

    ಏನಿದು ಪ್ರಕರಣ?:
    ದೆಹಲಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಸೋನಾಕ್ಷಿ ಸಿನ್ಹಾ 24 ಲಕ್ಷ ರೂ. ಹಣವನ್ನು ಮುಂಗಡವಾಗಿ ಪಡೆದಿದ್ದರು. ಆದರೆ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಇದರಿಂದ ಕೋಪಗೊಂಡು ಕಾರ್ಯಕ್ರಮ ಆಯೋಜಿಸಿದ್ದ ವ್ಯಕ್ತಿ ಸೋನಾಕ್ಷಿ ವಿರುದ್ಧ ದೂರು ನೀಡಿದ್ದರು. ಈ ಕುರಿತು ಉತ್ತರ ಪ್ರದೇಶದ ಮೊರಾದಾಬಾದ್ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

    ನಟಿ ಆರೋಪಿ ಆಗಿರುವ ಕಾರಣ ಹೇಳಿಕೆ ಪಡೆಯಲು ಉತ್ತರ ಪ್ರದೇಶದ ಪೊಲೀಸರು ಮುಂಬೈನ ಜುಹು ಪೊಲೀಸ್ ಠಾಣೆಯ ಅಧಿಕಾರಿಗಳ ನೆರವಿನೊಂದಿಗೆ ಗುರುವಾರ ಸೋನಾಕ್ಷಿ ಮನೆಗೆ ಭೇಟಿ ನೀಡಿದ್ದರು. ಆದರೆ ಪೊಲೀಸರು ಮನೆಗೆ ಬಂದಾಗ ಸೋನಾಕ್ಷಿ ಸಿನ್ಹಾ ಇರಲಿಲ್ಲ. ಹೀಗಾಗಿ ಕೆಲ ನಿಮಿಷಗಳು ಕಾದು ಮರಳಿದ್ದ ಪೊಲೀಸರು ಶುಕ್ರವಾರ ಮತ್ತೆ ಆಗಮಿಸಿದ್ದರು.

    ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ನಟಿ ಸೋನಾಕ್ಷಿ ಸಿನ್ಹಾ, ಇಂತಹ ಆರೋಪಗಳ ಮೂಲಕ ಮಾಧ್ಯಮಗಳಲ್ಲಿ ನನ್ನ ಹೆಸರಿಗೆ ಮಸಿ ಬಳಿಯಬಹುದೆಂದು ಕಾರ್ಯಕ್ರಮದ ಆಯೋಜಕರು ಯೋಚಿಸಿದ್ದಾರೆ. ಈ ಸಂಬಂಧ ತನಿಖೆಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ಈ ಸುದ್ದಿಯನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ಬೇಡಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.

    ಸೋನಾಕ್ಷಿ ಸಿನ್ಹಾರ ವಕ್ತಾರ ಆರೋಪವನ್ನು ತಳ್ಳಿ ಹಾಕಿದ್ದು, ಇದೆಲ್ಲವೂ ಸೋನಾಕ್ಷಿ ಸಿನ್ಹಾ ಅವರ ಹೆಸರಿಗೆ ಮಸಿ ಬಳಿಯಲು ಮಾಡಲಾಗಿದೆ ಎಂದು ಹೇಳಿದ್ದಾರೆ.

    https://twitter.com/sonakshisinha/status/1149584715927584770

  • ವಂಚನೆ ಆರೋಪ ನಟಿ ಸಿಂಧು ಮೆನನ್ ವಿರುದ್ಧ ಎಫ್‍ಐಆರ್- ಸಹೋದರ ಅರೆಸ್ಟ್

    ವಂಚನೆ ಆರೋಪ ನಟಿ ಸಿಂಧು ಮೆನನ್ ವಿರುದ್ಧ ಎಫ್‍ಐಆರ್- ಸಹೋದರ ಅರೆಸ್ಟ್

    ಬೆಂಗಳೂರು: ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ಚಿತ್ರನಟಿ ಸಿಂಧು ಮೆನನ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಆಫ್ ಬರೋಡಗೆ 36 ಲಕ್ಷ ರೂ. ವಂಚನೆಗೈದ ಆರೋಪದ ಮೇಲೆ ಸಿಂಧು ಮೆನನ್ ಸೇರಿದಂತೆ ನಾಲ್ವರ ವಿರುದ್ಧ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ಎಫ್‍ಐಆರ್ ದಾಖಲಾಗಿದೆ.

    ಸಿಂಧು ಮೆನನ್ ಸಹೋದರ ಮನೋಜ್ ಕೆ ವರ್ಮಾ ಹಾಗೂ ನಾಗಶ್ರೀ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ  ಮನೋಜ್ ಕೆ ವರ್ಮಾ ಮೊದಲ ಆರೋಪಿ ಆಗಿದ್ದರೆ ನಾಗಶ್ರೀ ಶಿವಣ್ಣ ಎ2 ಆಗಿದ್ದಾರೆ. ಸಿಂಧು ಮೆನನ್ ಎ3 ಆಗಿದ್ದು, ಸುಧಾ ರಾಜಶೇಖರ್ ಎ4 ಆಗಿದ್ದಾರೆ.

    ಏನಿದು ಪ್ರಕರಣ?
    ಬ್ಯಾಂಕ್ ಆಫ್ ಬರೋಡಾದಲ್ಲಿ ಕಾರ್ ಖರೀದಿಗಾಗಿ ಆರೋಪಿ ಮನೋಜ್ ಶರ್ಮಾ 36 ಲಕ್ಷ ರೂ. ಸಾಲ ಪಡೆದಿದ್ದ. ಸಾಲ ಪಡೆಯಲು ಜ್ಯುಬಿಲೆಂಟ್ ಮೋಟಾರ್ಸ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ದಾಖಲೆ ಸೃಷ್ಟಿಸಿದ್ದರು. ಪರಿಶೀಲನೆ ವೇಳೆ ನಕಲಿ ದಾಖಲೆ ನೀಡಿದ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬ್ಯಾಂಕ್ ಮ್ಯಾನೇಜರ್ ರಮೇಶ್ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮನೋಜ್ ಶರ್ಮಾ ಸಾಲ ಪಡೆದ ಬಳಿಕ ಹಣವನ್ನು ಸಿಂಧು ಮೆನನ್ ಅವರ ಖಾತೆಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ನಟಿ ಮೇಲೂ ಎಫ್‍ಐಆರ್ ದಾಖಲಾಗಿದೆ.

  • ಚಂದ್ರಶೇಖರ್ ಸ್ವಾಮೀಜಿ ವಿರುದ್ಧ ಚೀಟಿಂಗ್ ಕೇಸ್

    ಚಂದ್ರಶೇಖರ್ ಸ್ವಾಮೀಜಿ ವಿರುದ್ಧ ಚೀಟಿಂಗ್ ಕೇಸ್

    ಬೆಂಗಳೂರು: ಆರ್.ಟಿ.ನಗರದಲ್ಲಿರುವ ಪ್ರಸಿದ್ಧ ಜ್ಯೋತಿಷಿ  ಚಂದ್ರಶೇಖರ್ ಭಟ್ ವಿರುದ್ಧ ಚೀಟಿಂಗ್ ಕೇಸ್ ದಾಖಲಾಗಿದೆ.

    ಆಶ್ರಫ್ ಅಲಿ ಎಂಬುವರು ಈ ಸಂಬಂಧ ದೂರು ನೀಡಿದ್ದಾರೆ. ಸ್ವಾಮೀಜಿ ಅಲ್ಲದೇ ಚಂದ್ರಶೇಖರ್ ಭಟ್ ಅವರ ಪತ್ನಿ ರಜಿನಿ ಸಿ ಭಟ್ ಹಾಗು ಗಿರೀಶ್ ಕಾಮತ್ ಅವರ ವಿರುದ್ಧವೂ ವಂಚನೆ ಕೇಸ್ ದಾಖಲಾಗಿದೆ.

    ಅರಮನೆ ಮೈದಾನದ ಸುತ್ತಾಮುತ್ತ ಹೋರ್ಡಿಂಗ್ಸ್ ಕೊಡಿಸುವ ವಿಚಾರವಾಗಿ 2 ಕೋಟಿ ರೂಪಾಯಿ ದುಡ್ಡು ಪಡೆದುಕೊಂಡು ಈಗ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೂವರು ಆರೋಪಿಗಳು ಇದಕ್ಕೆ ಸಂಬಂಧಪಟ್ಟಂತೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ, ನನಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

    ವಂಚನೆ ಪ್ರಕರಣವನ್ನು ತನಿಖೆ ನಡೆಸಲು ಆರ್.ಟಿ.ನಗರ ಪೊಲೀಸರಿಗೆ ಕೋರ್ಟ್ ಆದೇಶ ನೀಡಿದೆ.