Tag: cheating case

  • 3.15 ಕೋಟಿ ವಂಚನೆ ಆರೋಪ ಪ್ರಕರಣ – ನಟ ಧ್ರುವ ಸರ್ಜಾಗೆ ತಾತ್ಕಾಲಿಕ ರಿಲೀಫ್‌

    3.15 ಕೋಟಿ ವಂಚನೆ ಆರೋಪ ಪ್ರಕರಣ – ನಟ ಧ್ರುವ ಸರ್ಜಾಗೆ ತಾತ್ಕಾಲಿಕ ರಿಲೀಫ್‌

    ವಂಚನೆ ಆರೋಪ ಪ್ರಕರಣದಲ್ಲಿ ನಟ ಧ್ರುವ ಸರ್ಜಾಗೆ (Dhruva Sarja) ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ. ನಟನ ವಿರುದ್ಧ ನ್ಯಾಯಾಲಯದ ಅನುಮತಿಯಿಲ್ಲದೆ ಆರೋಪಪಟ್ಟಿ ಸಲ್ಲಿಸದಂತೆ ಬಾಂಬೆ ಹೈಕೋರ್ಟ್, ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಿದೆ.

    ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಂಕಡ್ ಅವರಿದ್ದ ವಿಭಾಗೀಯ ಪೀಠವು, ನ್ಯಾಯಾಲಯದ ಅನುಮತಿಯಿಲ್ಲದೆ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸದಂತೆ ನಿರ್ದೇಶಿಸಿದೆ. ಇದನ್ನೂ ಓದಿ: 3.15 ಕೋಟಿ ವಂಚನೆ ಆರೋಪ; ನಟ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್

    ನಟನ ವಿರುದ್ಧ ಮುಂಬೈನಲ್ಲಿ ಬಹುಕೋಟಿ ವಂಚನೆ ಪ್ರಕರಣವನ್ನು ಜಗ್ಗುದಾದ ಸಿನಿಮಾದ ನಿರ್ದೇಶಕ ರಾಘವೇಂದ್ರ ಹೆಗಡೆ ದಾಖಲಿಸಿದ್ದರು. ಈ ಸಂಬಂಧ ಮುಂಬೈ ಪೊಲೀಸರು ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು. ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

    ಧ್ರುವ ಸರ್ಜಾಗೆ ನಟಿಸುವುದಕ್ಕಾಗಿ ಮುಂಗಡ ಹಣ ನೀಡಿದ್ದೆ. 3.15 ಕೋಟಿ ರೂಪಾಯಿ ನೀಡಲಾಗಿತ್ತು. ಆದರೆ, ಸಿನಿಮಾದಲ್ಲಿ ನಟಿಸುವುದಕ್ಕೆ ಸರ್ಜಾ ನಿರಾಕರಿಸಿದ್ದರು. ಮುಂಗಡ ತಗೆದುಕೊಂಡಿರುವ ಹಣವನ್ನು ವಾಪಸ್ಸು ನೀಡುತ್ತಿಲ್ಲ ಎಂದು ಹೆಗಡೆ ದೂರಿನಲ್ಲಿ ಆರೋಪಿಸಿದ್ದರು. ಇದನ್ನೂ ಓದಿ: ಕೆಜಿಎಫ್ ಖ್ಯಾತಿಯ ಹರೀಶ್ ರಾಯ್ ಸಹಾಯಕ್ಕೆ ನಿಂತ ಧ್ರುವ ಸರ್ಜಾ

    ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಸರ್ಜಾ ಅರ್ಜಿ ಸಲ್ಲಿಸಿದ್ದರು. ನಾನು ಯಾವುದೇ ಚಿತ್ರದಲ್ಲಿ ಕೆಲಸ ಮಾಡುವ ಒಪ್ಪಂದದಿಂದ ಎಂದಿಗೂ ಹಿಂದೆ ಸರಿದಿಲ್ಲ. ಹೆಗಡೆ ಅವರು ಕೆಲಸ ಮಾಡಲು ಯಾವುದೇ ಕಾರ್ಯಸಾಧ್ಯವಾದ ಸ್ಕ್ರಿಪ್ಟ್‌ಗಳನ್ನು ನೀಡಲು ವಿಫಲರಾಗಿದ್ದಾರೆ ಎಂದು ಸರ್ಜಾ ತಿಳಿಸಿದ್ದರು.

  • Exclusive | ಲಕ್ಷ ಲಕ್ಷ ಹಣ ವಂಚನೆ ಆರೋಪ – ನನ್ನ ಹೆಸರು ಹಾಳು ಮಾಡುವ ಉದ್ದೇಶ ಬಿಟ್ಟು ಬೇರೆನಿಲ್ಲ: ಗೋಲ್ಡ್‌ ಸುರೇಶ್‌

    Exclusive | ಲಕ್ಷ ಲಕ್ಷ ಹಣ ವಂಚನೆ ಆರೋಪ – ನನ್ನ ಹೆಸರು ಹಾಳು ಮಾಡುವ ಉದ್ದೇಶ ಬಿಟ್ಟು ಬೇರೆನಿಲ್ಲ: ಗೋಲ್ಡ್‌ ಸುರೇಶ್‌

    ಕನ್ನಡದ ಬಿಗ್‌ಬಾಸ್‌ ಸೀಸನ್ 11ರ (Bigg Boss 11) ಸ್ಪರ್ಧಿ ಗೋಲ್ಡ್ ಸುರೇಶ್ (Gold Suresh) ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ ಕೇಳಿಬಂದಿದೆ. ಕೇಬಲ್‌ ಚಾನೆಲ್‌ ಸೆಟ್‌ಅಪ್‌ ಮಾಡಿಕೊಡುವುದಾಗಿ ಹೇಳಿ ವಂಚನೆ ಮಾಡಿದ್ದಾರೆಂದು ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ.

    ಯಾರಿಗೂ ಹಣ ಕೊಡಬೇಕಿಲ್ಲ:
    ವಂಚನೆ ಆರೋಪ ಕುರಿತು ಗೋಲ್ಡ್ ಸುರೇಶ್‌ ಮೊದಲ ಬಾರಿಗೆ ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ್ದಾರೆ. ಇದು ಊಹಾಪೋಹದ ಆರೋಪ. ಅಧಿಕೃತವಾಗಿ ನನ್ನ ಮೇಲೆ‌ ಎಲ್ಲೂ ಎಫ್‌ಐಆರ್ (FIR) ಆಗಿಲ್ಲ. 2018ರಲ್ಲಿ ನನ್ನ ಸ್ನೇಹಿತನ ಮೂಲಕ ಆ ವ್ಯಕ್ತಿ ಪರಿಚಯ ಆಗಿದ್ರು. ಅವರ ಕೆಲಸ ಮಾಡಿಕೊಟ್ಟಿದ್ದೀನಿ. ನಾನು ಯಾರಿಗೂ ಯಾವುದೇ ಹಣ ಕೊಡಬೇಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ

     ದಾಖಲೆ ಇದ್ರೆ ದೂರು ಕೊಡಲಿ:
    ನಾನೊಬ್ಬ ಸಿವಿಲ್ ಕಂಟ್ರ್ಯಾಕ್ಟರ್‌, ಬ್ಯುಸಿನೆಸ್ ಮೆನ್, ಬೇರೆ ಬೇರೆ ವ್ಯವಹಾರ ಮಾಡ್ತಿನಿ. ಅವರ ಹತ್ರ ದಾಖಲೆ ಇದ್ದಿದ್ರೆ, ಈ ಆರೋಪ ಮೊದಲೇ ಮಾಡಬೇಕಿತ್ತು. ಬಿಗ್ ಬಾಸ್‌ನಿಂದ ಹೊರಗೆ ಬಂದಮೇಲೆ ಈಗ್ಯಾಕೆ ಮಾಡ್ತಿದ್ದಾರೆ? ಇದು ನಡೆದಿರೋದು 2018 ರಲ್ಲಿ ಇಷ್ಟು ದಿನ ಏನ್ ಮಾಡ್ತಿದ್ರು? ಅವರ ಹತ್ರ ದಾಖಲೆ ಇದ್ರೆ ಹೋಗಿ ದೂರು ಕೊಡಲಿ, ಕೇಸ್ ಹಾಕಲಿ, ಇದು ದುಡ್ಡಿಗಾಗಿ ಮಾಡಿರೋ ಕೆಲಸ ಅಷ್ಟೇ. ನಾನ್ ಕದ್ದು ಮುಚ್ಚಿ ಓಡಾಡ್ತಿಲ್ಲ, ಎಲ್ಲರಿಗೂ ಪರಿಚಿತ ಎಂದು ಹೇಳಿದ್ದಾರೆ. ಇದನ್ನೂ ಓದಿ: 6 ಲಕ್ಷ ಹಣ ನೀಡುವಂತೆ ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್‌ಗೆ ಬೆದರಿಕೆ – ಎನ್‌ಸಿಆರ್ ದಾಖಲು

    ನಾನು ಸಮಾಜ ಸೇವಕ
    ನಿನ್ನೆ ಬೆಳಗ್ಗೆ ಕಾಲ್ ಮಾಡಿ ದುಡ್ಡು ಕೊಟ್ಟಿಲ್ಲ ಅಂದರೆ ಮಾಧ್ಯಮಕ್ಕೆ ಹೋಗ್ತಿನಿ ಅಂತಾರೆ. ಇದರಿಂದಲೇ ಗೊತ್ತಾಗುತ್ತೆ ಇಂತಹ ಬೆದರಿಕೆಗೆಲ್ಲಾ ನಾನು ಜಗ್ಗಲ್ಲ, ತಲೆನೂ ಕೆಡಿಸಿಕೊಳ್ಳಲ್ಲ. ನಾನು ಸಮಾಜ ಸೇವಕ, ಹಾಗಾಗಿ ತುಂಬಾ ಕೇಳಿಕೊಂಡ್ರು ಅಂತಾ 50 ಸಾವಿರ ಸಹಾಯ ಮಾಡಿದ್ದೀನಿ ಅಷ್ಟೇ. ನಾನ್ ಏನು ಅಂತಾ ನಂಗೆ ಮಾತ್ರ ಗೊತ್ತು, ಕಾಮೆಂಟ್ ಮಾಡೋರಿಗೆಲ್ಲಾ ಉತ್ತರ ಕೊಡಲ್ಲ. ಇದರಲ್ಲಿ ನನ್ನ ಹೆಸರು ಹಾಳು ಮಾಡುವ ಉದ್ದೇಶ ಬಿಟ್ಟು ಬೇರೆನಿಲ್ಲ. ನಾನು ಈಗಾಗಲೇ ದೂರು ಕೊಟ್ಟಿದ್ದೀನಿ, ಕ್ರಮ ಆಗುತ್ತೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಕಲಹ ಶಂಕೆ – ಮೂವರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ

  • ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ

    ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ

    ರಾಯಚೂರು: ಕನ್ನಡದ ಬಿಗ್‌ಬಾಸ್‌ ಸೀಸನ್ 11ರ (Bigg Boss 11) ಸ್ಪರ್ಧಿ ಗೋಲ್ಡ್ ಸುರೇಶ್ (Gold Suresh) ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ ಕೇಳಿಬಂದಿದೆ. ಕೇಬಲ್‌ ಚಾನೆಲ್‌ ಸೆಟ್‌ಅಪ್‌ ಮಾಡಿಕೊಡುವುದಾಗಿ ಹೇಳಿ ವಂಚನೆ ಮಾಡಿದ್ದಾರೆಂದು ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ.

    14 ಲಕ್ಷ ರೂ. ಅಗ್ರೀಮೆಂಟ್, ಹಣ ವಾಪಸ್ ಮಾಡದ ಆರೋಪ
    ಮಾನ್ವಿ ಪಟ್ಟಣದ ಮೈನುದ್ದಿನ್, ಸುರೇಶ್ ಅವರು ಕೇಬಲ್ ಚಾನೆಲ್​ನ ಸೆಟಅಪ್ (Cable Chanel Setup )ಮಾಡಿಕೊಡುವುದಾಗಿ ಹೇಳಿದ್ದರು. ಬರೋಬ್ಬರಿ 14 ಲಕ್ಷಕ್ಕೆ ಒಪ್ಪಂದ ಆಗಿತ್ತು. ಅಲ್ಲದೆ ಸುರೇಶ್ 4 ಲಕ್ಷ ರೂಪಾಯಿ ಮುಂಗಡ ಪಡೆದಿದ್ದರು. ಆ ಬಳಿಕ ಹಂತ ಹಂತವಾಗಿ 7 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. 2017ರಲ್ಲಿ ಇಬ್ಬರ ಮಧ್ಯೆ ಒಪ್ಪಂದ ನಡೆದಿತ್ತು. ಆದರೆ, ಆ ಬಳಿಕ ಅರೆಬರೆ ಕೆಲಸ ಮಾಡಿ ಸುರೇಶ್ ಅರ್ಧಕ್ಕೆ ಬಿಟ್ಟರು. ಇದಾದ ಬಳಿಕ 2017ರಲ್ಲೇ 1 ಲಕ್ಷ ರೂ. ಹಣ ವಾಪಸ್‌ ಪಡೆಯಲಾಗಿತ್ತು. ಆ ನಂತರ ಸುರೇಶ್ ನನ್ನ ಮತ್ತು ಸ್ನೇಹಿತನ ಸಂಪರ್ಕಕ್ಕೇ ಸಿಕ್ಕಿರಲಿಲ್ಲ ಎಂದು ಮೈನುದ್ದೀನ್ ಆರೋಪಿಸಿದ್ದಾರೆ. ಇದನ್ನೂ ಓದಿ: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಜುಲೈ ಮೊದಲ ವಾರಕ್ಕೆ ವಿಚಾರಣೆ ಮುಂದೂಡಿಕೆ

    ಬಿಗ್‌ಬಾಸ್‌ ಬಳಿಕ ಸುರೇಶ್‌ನನ್ನ ಮೈನುದ್ದಿನ್ ಪತ್ತೆ ಹಚ್ಚಿದ್ದ, ಅದಾದಮೇಲೆ ಮೈನುದ್ದೀನ್‌ ಸ್ನೇಹಿತ ಬಸವರಾಜ್‌ಗೆ ಸುರೇಶ್‌ 50 ಸಾವಿರ ರೂ. ಹಣ ಹಾಕಿದ್ದ. ಆಗಾಗ್ಗೆ ಅಲ್ಪಸ್ವಲ್ಪ ಹಣ ಕೊಟ್ಟಿದ್ದಾರೆ, ಉಳಿದ 4 ಲಕ್ಷ ಹಣ ಕೊಡಿ ಅಂತ ಕೇಳ್ತಿದ್ದೀವಿ. ಕೆಲ ದಿನಗಳ ಹಿಂದೆಯೂ ಮುಂಬೈಗೆ ಬನ್ನಿ ಕೊಡ್ತಿನಿ ಅಂತ ಗೋಲ್ಡ್ ಸುರೇಶ್ ಮುಂಬೈ ಲೊಕೇಶನ್ ಹಾಕಿದ್ದರು ಎಂದು ದೂರಿದ್ದಾರೆ. ಇದನ್ನೂ ಓದಿ: ಬೈಕ್‌ಗೆ ಕ್ಯಾಂಟರ್ ಡಿಕ್ಕಿ – ಕೆಲಸಕ್ಕೆ ತೆರಳುತ್ತಿದ್ದ ಸ್ನೇಹಿತರು ಬೈಕ್ ಅಪಘಾತದಲ್ಲಿ ದುರ್ಮರಣ

    ಕಾನೂನು ಹೋರಾಟ ಮಾಡ್ತೀನಿ: ಗೋಲ್ಡ್‌ ಸುರೇಶ್‌
    ಇನ್ನೂ ಮೈನುದ್ದೀನ್‌ ಆರೋಪ ತಳ್ಳಿಹಾಕಿರುವ ಗೋಲ್ಡ್‌ ಸುರೇಶ್‌, 2017ರಲ್ಲೇ ಕೇಬಲ್ ಚಾನಲ್ ಮಾಡಿಕೊಟ್ಟಿದ್ದೀನಿ, ಈಗ ಯಾಕೆ ಆರೋಪ ಮಾಡ್ತಿದಾರೆ ಗೊತ್ತಿಲ್ಲ? ಅವರು ಕೇಬಲ್ ಚಾನೆಲ್‌ರನ್ನ ಮಾಡುತ್ತಿದ್ದಾರೆ. ಅವರು ನಮ್ಮ ಜೊತೆ ವ್ಯವಹಾರ ಸರಿಯಾಗಿ ಮಾಡದ ಹಿನ್ನೆಲೆ ಅವರಿಗೆ ಬಾಕಿ ಹಣ ಮರಳಿಸಿದ್ದೇನೆ. 2017ರ ಬಳಿಕ ನಾನು ಮೈನುದ್ದಿನ್‌ನ ಭೇಟಿಯಾಗಿಲ್ಲ. ಬಿಗ್‌ಬಾಸ್ ಮುಗಿದು ಎಷ್ಟು ದಿನ ಆಯ್ತು? ಈಗ ನನ್ನ ಮೇಲೆ ಆರೋಪ ಮಾಡ್ತಿದ್ದಾನೆ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದ ಹಲವೆಡೆ ಮುಂದುವರಿದ ಮಳೆ – ಕರಾವಳಿಗೆ ಆರೆಂಜ್, ಉತ್ತರ ಒಳನಾಡಿನ 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ನಾವು 1 ವರ್ಷದ ಅಗ್ರಿಮೆಂಟ್ ಮಾಡಿಕೊಂಡಿದ್ವಿ ಅದು ಮುಗಿದೇ ಹೋಗಿದೆ. ರಾಯಚೂರಿನ ಬಸವರಾಜ್ ಎನ್ನುವವರ ಮೂಲಕ ಪರಿಚಯ ಆಗಿದ್ದ. ಬೇರೆಯವರು ನಡೆಸುತ್ತಿದ್ದ ಚಾನಲ್ ಇವರಿಗೆ ಕೊಡಿಸಿದ್ದೆವು. ಆ ಚಾನಲ್ ಸಹ ಬೇರೆಯವರ ಹೆಸರಿನಲ್ಲಿದೆ. ಅವರು ಸಹ ಈಗ ಮುಂದೆ ಬರ್ತಾರೆ. ನಮ್ಮದು 6 ವರೆ ಲಕ್ಷದ ವ್ಯವಹಾರ, ಹಣಕ್ಕೆ ತಕ್ಕಂತೆ ಸ್ಟೂಡಿಯೋ ಎಲ್ಲಾ ಸೆಟ್ ಮಾಡಿಕೊಟ್ಟಿದ್ದೇನೆ. ಸುಮ್ಮನೆ ಆರೋಪ ಮಾಡುತ್ತಿರುವುದರಿಂದ ನಾನು ಕಾನೂನು ಮೊರೆ ಹೋಗ್ತಿನಿ, ಹೋರಾಟ ಮಾಡ್ತಿನಿ ಎಂದು ಸುರೇಶ್‌ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಮೊಬೈಲ್‌ನಲ್ಲಿ 13,500 ಅಶ್ಲೀಲ ಚಿತ್ರ – ಫೇಕ್ ಅಕೌಂಟ್‌ನಿಂದ ಮಹಿಳೆಯರ ಮಾನಹಾನಿ ಮಾಡ್ತಿದ್ದ ಕಾಮುಕ ಅರೆಸ್ಟ್

  • ಗೋಲ್ಡ್‌ ವಂಚಕಿ ಐಶೂಗೆ ಡಿಕೆಸು ಮಾತ್ರವಲ್ಲ ಜೆಡಿಎಸ್‌ ನಾಯಕರೂ ಪರಿಚಯ?

    ಗೋಲ್ಡ್‌ ವಂಚಕಿ ಐಶೂಗೆ ಡಿಕೆಸು ಮಾತ್ರವಲ್ಲ ಜೆಡಿಎಸ್‌ ನಾಯಕರೂ ಪರಿಚಯ?

    ಮಂಡ್ಯ: ಮಾಜಿ ಸಂಸದ ಡಿ.ಕೆ.ಸುರೇಶ್ ತಂಗಿ ಎಂದು ಹೇಳಿಕೊಂಡು 9 ಕೋಟಿ ರೂ. ಮೌಲ್ಯದ ಚಿನ್ನ ಪಡೆದು ವಂಚಿಸಿದ ಆರೋಪ ಎದುರಿಸುತ್ತಿರುವ ಐಶ್ವರ್ಯಗೌಡ, ತನಗೆ ಮಾಜಿ ಸಿಎಂ ಕುಮಾರಸ್ವಾಮಿಯ  (H.D Kumaraswamy) ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿಯೂ (Nikhil Kumaraswamy) ಬಹಳಷ್ಟು ಪರಿಚಿತರು ಎಂದು ಹೇಳಿಕೊಂಡಿರುವುದು ಬೆಳಿಕಿಗೆ ಬಂದಿದೆ.

    ಪೂರ್ಣಿಮಾ ಎಂಬವರಿಂದ 100 ಗ್ರಾಂ ಚಿನ್ನದ ಜೊತೆ 15 ಲಕ್ಷ ರೂ. ಹಣ ಪಡೆದು ವಂಚಿಸಿದ ಆರೋಪ ಐಶ್ವರ್ಯ ಮೇಲಿದೆ. ಇಂದು ನಾಳೆ ವಾಪಸ್ಸು ಕೊಡ್ತೀನಿ ಎಂದು ಸತಾಯಿಸಿದ್ದಾಳೆ.‌ ಅಲ್ಲದೇ ಹಣ ಪಡೆಯುವ ಮುನ್ನ ನಾನು‌ ಡಿ.ಕೆ.ಸುರೇಶ್ ತಂಗಿ ಎಂದು ಐಶ್ವರ್ಯ ಪರಿಚಯ ಮಾಡಿಕೊಂಡ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೇ ತನಗೆ ಹೆಚ್‌ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿಯೂ ಬಹಳಷ್ಟು ಪರಿಚಿತರು ಎಂದು ಬಿಲ್ಡಪ್ ಕೂಡ ಕೊಟ್ಟಿದ್ದಾಳೆ. ಈ ಕುರಿತು ಐಶ್ವರ್ಯಗೌಡ ವಿರುದ್ಧ ಮಂಡ್ಯ ಪೂರ್ವ ಠಾಣೆಯಲ್ಲಿ ರವಿಕುಮಾರ್ ಹಾಗೂ ಪೂರ್ಣಿಮಾ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖವಾಗಿದೆ.

    ಅನಿತಾ ಕುಮಾರಸ್ವಾಮಿ, ನಿಖಿಲ್ ಇಬ್ಬರೂ ಬಹಳಷ್ಟು ಪರಿಚಿತರು. ನಿಮಗೆ ಅವರ ಕಡೆಯಿಂದ ಸಹಾಯ ಬೇಕಿದ್ರೆ ನನಗೆ ಹೇಳಿ. ನಾನು ನಿಮಗೆ ಸಹಾಯ ಮಾಡ್ತೇನೆ ಎಂದು ಐಶ್ವರ್ಯಗೌಡ ಹೇಳಿದ್ದಳಂತೆ. ಆ ರೀತಿ ಹೇಳಿಯೆ ನಮ್ಮನ್ನ ನಂಬಿಸಿ ನಮ್ಮ ಬಳಿ ಹಂತ ಹಂತವಾಗಿ 40 ಲಕ್ಷ ರೂ. ಹಾಗೂ ಪೂರ್ಣಿಮಾ ಬಳಿಯೂ ಹಣ, ಚಿನ್ನ ಪಡೆದಿದ್ದಳು. ಈಗ ಹಣ ವಾಪಸ್ಸು ನೀಡದೇ ಮೋಸ ಮಾಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ‌.

    ಐಶ್ವರ್ಯ ಕಾಂಗ್ರೆಸ್ ನಾಯಕರ ಹೆಸರನ್ನಷ್ಟೇ ಅಲ್ಲ ಜೆಡಿಎಸ್ ಹೆಸರನ್ನೂ ದುರುಪಯೋಗ ಪಡಿಸಿಕೊಂಡಿದ್ದಾಳೆ ಎಂಬುದು ಈಗ ತಿಳಿದು ಬರುತ್ತಿದೆ.

  • ಸಿಎಂ ವಿರುದ್ಧ ದೂರು ದಾಖಲಿಸಿದ್ದ ಸ್ನೇಹಮಯಿ ಕೃಷ್ಣ ವಿರುದ್ಧ ವಂಚನೆ ಕೇಸ್‌ – RTI ಕಾರ್ಯಕರ್ತ ಸ್ಪಷ್ಟನೆ

    ಸಿಎಂ ವಿರುದ್ಧ ದೂರು ದಾಖಲಿಸಿದ್ದ ಸ್ನೇಹಮಯಿ ಕೃಷ್ಣ ವಿರುದ್ಧ ವಂಚನೆ ಕೇಸ್‌ – RTI ಕಾರ್ಯಕರ್ತ ಸ್ಪಷ್ಟನೆ

    – ಆತ ಸ್ನೇಹಮಯಿ ಕೃಷ್ಣ ಅಲ್ಲ, ಮೋಸಮಯಿ ಕೃಷ್ಣ ಎಂದು ದೂರುದಾರ ಕಿಡಿ

    ಚಾಮರಾಜನಗರ: ಮುಡಾ ಪ್ರಕರಣದಲ್ಲಿ (MUDA Case) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದೂರು ದಾಖಲಿಸಿದ್ದ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣ ಸಂಬಂಧ ಸ್ಪಷ್ಟನೆ ನೀಡಿದಾರೆ. ತಮ್ಮ ವಿರುದ್ಧದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರದಲ್ಲಿ ಸ್ನೇಹಮಯಿ ಕೃಷ್ಣ ಮಾತನಾಡಿ, ಕರುಣಾಕರ ಎಂಬುವರು ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.

    ಕರುಣಾಕರ ಅವರ ಬಳಿ 50 ಸಾವಿರ ರೂ. ಸಾಲ ಪಡೆದಿರುವುದು ನಿಜ. 3 ಲಕ್ಷ ಸಾಲ‌ ಕೊಡಿಸೋದಾಗಿ ಪ್ರಾಮಿಸರಿ ನೋಟ್ (Promissory Note) ಬರೆಸಿಕೊಂಡಿದ್ದರು. ಪ್ರತಿ ತಿಂಗಳು 50 ಸಾವಿರಕ್ಕೆ ಬಡ್ಡಿ ಕೊಡುತ್ತಾ ಬಂದಿದ್ದೇನೆ. ಈಗ ನ್ಯಾಯಾಧೀಶರು 50 ಸಾವಿರಕ್ಕೆ ಎಷ್ಟು ಸೇರಿಸಿ ಕೊಡ್ತಿರಾ ಅಂತ ಕೇಳಿದರು. 25 ಸಾವಿರ ಸೇರಿಸಿ 75 ಸಾವಿರ ಕೊಡಲು ಒಪ್ಪಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: MUDA Scam| ಸಿಬಿಐ ತನಿಖೆ ಕೋರಿ ಹೈಕೋರ್ಟ್‌ಗೆ ಅರ್ಜಿ

    ಅಲ್ಲದೇ ಕರುಣಾಕರ 3 ಲಕ್ಷ ರೂ. ಎಲ್ಲಿ ಕೊಟ್ಟರು ಎಂದು ಪ್ರಶ್ನಿಸಿದ್ದೇನೆ. ಶೀಘ್ರದಲ್ಲೇ ನಿಜಾಂಶ ಗೊತ್ತಾಗಲಿದೆ. ನನ್ನ ವಿರುದ್ಧ ಮೊದಲಿನಿಂದಲೂ ಸಂಚು ನಡೆಯುತ್ತಿದೆ. ನನ್ನ ನೈತಿಕ ಶಕ್ತಿ ಕುಗ್ಗಿಸುವ ಯತ್ನ ನಡೆಯುತ್ತಿದೆ. ನನ್ನ ವಿರುದ್ಧ 22 ಪ್ರಕರಣ ದಾಖಲಾಗಿವೆ. 9 ಪ್ರಕರಣ ಬೋಗಸ್ ಅಂತ ಆಗಿದೆ. 8 ಪ್ರಕರಣಗಳಲ್ಲಿ ನಾನು ನಿರಪರಾಧಿ ಅಂತ ಸಾಬೀತಾಗಿದೆ. 3 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ ಎಂದು ಚಾಮರಾಜನಗರದಲ್ಲಿ ಆರ್‌ಟಿ‌ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಮಕ್ಕಳಲ್ಲಿ ವಿಜ್ಞಾನ ಲೋಕದ ಬಗ್ಗೆ ಆಸಕ್ತಿ ಮೂಡಿಸಲು `ಲಿಲ್ ಬಿಗ್ ಫ್ಯಾಂಟಸಿ’ ಸೈನ್ಸ್‌ ಬಸ್‌ ಅನಾವರಣ

    ಕೋರ್ಟ್‌ಗೆ ಹಾಜರಾಗಿದ್ದ ಸ್ನೇಹಮಯಿ ಕೃಷ್ಣ:
    ಹಣ ಕೊಡದೇ ವಂಚನೆ ಮಾಡಿರುವ ಆರೋಪ ಹೊತ್ತಿರುವ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರಿಂದು ಚಾಮರಾಜನಗರದ ಎಸಿಜೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಶುಕ್ರವಾರ ಮಧ್ಯಾಹ್ನ 3.30 ಗಂಟೆಗೆ ವಿಚಾರಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಇದನ್ನೂ ಓದಿ: ಭಾರತ-ಬಾಂಗ್ಲಾ 2ನೇ ಟೆಸ್ಟ್ ಪಂದ್ಯಕ್ಕೆ ಮಳೆ ಕಾಟ – ಮೊದಲ ದಿನದಂತ್ಯಕ್ಕೆ ಬಾಂಗ್ಲಾದೇಶ 107ಕ್ಕೆ 3 ವಿಕೆಟ್‌

    ಕಂತಿನ ರೂಪದಲ್ಲಿ ಒಟ್ಟು 3 ಲಕ್ಷ ಹಣ ಪಡೆದು ಬಳಿಕ ಸಾಲ ವಾಪಾಸ್ ಮಾಡದೇ ವಂಚಿಸಿದ್ದಾರೆಂದು ಕರುಣಾಕರ್ ಎಂಬವರು ದೂರು ಕೊಟ್ಟಿದ್ದರು. ಪ್ರಾಮಿಸಿರಿ ನೋಟ್‌ಗಳನ್ನು ಕೊಟ್ಟು 2018, 2019 ಹಾಗೂ 2020 ರಲ್ಲಿ ಒಟ್ಟು 3 ಲಕ್ಷ ಹಣ ಪಡೆದು ಬಳಿಕ ಈಗ ಹಣ ವಾಪಾಸ್ ಮಾಡದೇ ವಂಚಿಸಿದ್ದಾರೆ ಎಂದು ದೂರುದಾರ ಕರುಣಾಕರ್ ಕಿಡಿಕಾರಿದ್ದರು. ಆತ ಸ್ನೇಹಮಯಿ ಕೃಷ್ಣ ಅಲ್ಲ ಮೋಸಮಯಿ ಕೃಷ್ಣ, ಹಣ ಪಡೆದು ವಂಚಿಸುವುದೇ ಆತನ ಕೆಲಸ, ನಾನಾ ಸಬೂಬು ಹೇಳಿ, ಅನಾರೋಗ್ಯದ ನೆಪವೊಡ್ಡಿ ಹಣ ಪಡೆದು ಈಗ ಹಣ ವಾಪಾಸ್ ಮಾಡದೇ ವಂಚಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಪ್ರಯಾಣಿಕರಿದ್ದ ವಿಮಾನ ಟೇಕಾಫ್ ಆಗ್ತಿದ್ದಂತೆಯೇ ಸೆಕ್ಸ್ ಶುರು ಹಚ್ಕೊಂಡ ಜೋಡಿಗೆ ಕೋರ್ಟ್ ಶಿಕ್ಷೆ

  • 4.3 ಕೋಟಿ ರೂ. ವಂಚನೆ – ಹಾರ್ದಿಕ್‌ ಪಾಂಡ್ಯ ಮಲಸಹೋದರ ಅರೆಸ್ಟ್‌!

    4.3 ಕೋಟಿ ರೂ. ವಂಚನೆ – ಹಾರ್ದಿಕ್‌ ಪಾಂಡ್ಯ ಮಲಸಹೋದರ ಅರೆಸ್ಟ್‌!

    ಮುಂಬೈ: ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಕೃನಾಲ್‌ ಪಾಂಡ್ಯ ಅವರ ಮಲಸಹೋದರ ವೈಭವ್‌ ಪಾಂಡ್ಯ ಅವರನ್ನ ಮುಂಬೈ ಪೊಲೀಸರು (Mumbai Police) ಬಂಧಿಸಿರುವ ಘಟನೆ ನಡೆದಿದೆ. 4.3 ಕೋಟಿ ರೂ. ವಂಚಿಸಿರುವುದಾಗಿ (Cheating Case) ಹಾರ್ದಿಕ್‌ ಪಾಂಡ್ಯ ನೀಡಿದ ದೂರಿನ ಮೇರೆಗೆ ಅವರನ್ನ ಬಂಧಿಸಲಾಗಿದೆ.

    ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ ಹಾಗೂ ವೈಭವ್‌ ಪಾಂಡ್ಯ (Vaibhav Pandya) ಮೂವರು ಸೇರಿ ನಡೆಸುತ್ತಿದ್ದ ಪಾಲುದಾರಿಕೆ ಸಂಸ್ಥೆಯಿಂದ ಪಾಂಡ್ಯ ಬ್ರದರ್ಸ್‌ಗೆ ವೈಭವ್‌ ನಷ್ಟವುಂಟು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮಿಂಚಿ ಮಾಯವಾದ ಮಯಾಂಕ್‌ – ಗಾಯದ ಸಮಸ್ಯೆ ಕುರಿತು ಬಿಗ್‌ ಅಪ್ಡೇಟ್‌ ಕೊಟ್ಟ ಕೃನಾಲ್‌ ಪಾಂಡ್ಯ!

    ಹಾರ್ದಿಕ್‌, ಕೃನಾಲ್‌ (Krunal Pandya) ಮತ್ತು ವೈಭವ್‌ 2021ರಲ್ಲಿ ವ್ಯವಹಾರವೊಂದನ್ನ ಆರಂಭಿಸಿದ್ದರು. ಪಾಲುದಾರಿಕೆ ಸಂಸ್ಥೆ ಒಪ್ಪಂದದ ಪ್ರಕಾರ, ಬಂದ ಲಾಭದಿಂದ ಪಾಂಡ್ಯ ಬ್ರದರ್ಸ್‌ಗೆ ತಲಾ 40%, ವೈಭವ್‌ಗೆ 20% ಹಂಚಿಕೊಳ್ಳಬೇಕಿತ್ತು. ಆದ್ರೆ ವೈಭವ್‌ ಪ್ರತ್ಯೇಕ ಕಂಪನಿಯೊಂದನ್ನ ಸ್ಥಾಪಿಸಿ, ಪಾಂಡ್ಯ ಬ್ರದರ್ಸ್‌ ಸ್ಥಾಪಿಸಿದ್ದ ಸಂಸ್ಥೆ ಹಣವನ್ನ ಅದಕ್ಕೆ ಬಳಸಿಕೊಳ್ಳುತ್ತಿದ್ದರು. ಈ ಕುರಿತು ಹಾರ್ದಿಕ್‌ ಪಾಂಡ್ಯ ಅವರು ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗಕ್ಕೆ (EOW) ದೂರು ನೀಡಿದ ಬಳಿಕ, ಪ್ರಕರಣ ದಾಖಲಿಸಿಕೊಂಡು ವೈಭವ್‌ ಪಾಂಡ್ಯ ಅವರನ್ನ ಬಂಧಿಸಲಾಗಿದೆ.

    ಸದ್ಯ 2024 ಐಪಿಎಲ್‌ ಋತುವಿನ ಆರಂಭದಿಂದಲೂ ಸುದ್ದಿಯಲ್ಲಿದ್ದಾರೆ. 2022ರಲ್ಲಿ ಪದಾದರ್ಪಣೆ ಮಾಡಿದ ಗುಜರಾತ್‌ ಟೈಟಾನ್ಸ್‌ ತಂಡವನ್ನ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಪಾಂಡ್ಯ 2024ರ ಆವೃತ್ತಿಯಲ್ಲಿ ಮತ್ತೆ ತವರು ಮುಂಬೈ ತಂಡಕ್ಕೆ ನಾಯಕನಾಗಿ ಮರಳಿದರು. ಆದ್ರೆ ರೋಹಿತ್‌ ಶರ್ಮಾ ಅವರನ್ನು ಮುಂಬೈ ತಂಡದ ನಾಯಕತ್ವದಿಂದ ಕೆಳಗಿಳಿಸಿದ ನಂತರ ಅವರ ಅಭಿಮಾನಿಗಳು ನಿರಾಸೆಯಾಗಿದ್ದಾರೆ. ಮೈದಾನದಲ್ಲೇ ಹಾರ್ದಿಕ್‌ ಪಾಂಡ್ಯ ಅವರ ಕಾಲೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಇದನ್ನೂ ಓದಿ: ಫಿಫ್ಟಿ ಬಳಿಕ ಕೊಹ್ಲಿ ಸ್ಟ್ರೈಕ್‌ರೇಟ್‌ ಹೆಚ್ಚಾಗ್ಬೇಕಿತ್ತು – ಮ್ಯಾಕ್ಸಿ ತರ ಆದ್ರೆ ಏನ್‌ ಮಾಡೋಕಾಗುತ್ತೆ: ಸೆಹ್ವಾಗ್‌

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಂಡ್ಯ, ತಂಡದಲ್ಲಿ ನಮ್ಮ ಯೋಜನೆಗಳು ಸರಿಯಾಗಿವೆ, ಉದ್ದೇಶವೂ ಸರಿಯಾಗಿದೆ. ಎಲ್ಲವೂ ಕ್ಲಿಕ್ ಆಗುವ ದಿನಗಳು ಹತ್ತಿರ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸತತ ಹ್ಯಾಟ್ರಿಕ್‌ ಸೋಲಿನಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗೆಲುವಿನ ಖಾತೆ ತೆರೆಯಿತು. ಏಪ್ರಿಲ್‌ 11ರಂದು ಆರ್‌ಸಿಬಿ ವಿರುದ್ಧ ತವರು ಕ್ರೀಡಾಂಗಣ ವಾಂಖೆಡೆಯಲ್ಲಿ ಸೆಣಸಲಿದೆ.

  • 18.70 ಲಕ್ಷ ವಂಚನೆ- ಕ್ರಿಕೆಟಿಗ ಶ್ರೀಶಾಂತ್ ವಿರುದ್ಧ ದೂರು ದಾಖಲು

    18.70 ಲಕ್ಷ ವಂಚನೆ- ಕ್ರಿಕೆಟಿಗ ಶ್ರೀಶಾಂತ್ ವಿರುದ್ಧ ದೂರು ದಾಖಲು

    ತಿರುವನಂತಪುರಂ: ಕ್ರಿಕೆಟಿಗ (Cricket) ಶ್ರೀಶಾಂತ್ ವಿರುದ್ಧ 18.70 ಲಕ್ಷ ರೂ. ಪಡೆದು ವಂಚಿಸಿರುವ ಆರೋಪ (Cheating Case) ಕೇಳಿ ಬಂದಿದೆ. ಕೇರಳದ (Kerala) ವ್ಯಕ್ತಿಯೊಬ್ಬರಿಂದ ಶ್ರೀಶಾಂತ್  (S. Sreesanth) ಸೇರಿ ಇಬ್ಬರು ವ್ಯಕ್ತಿಗಳು ಹಣ ಪಡೆದು ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ.

    ವಂಚನೆ ಪ್ರಕರಣದ ಆರೋಪಿಗಳಾದ ಶ್ರೀಶಾಂತ್, ರಾಜೀವ್ ಕುಮಾರ್ ಮತ್ತು ವೆಂಕಟೇಶ್ ಕಿಣಿ ಎಂಬವರು ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ಕ್ರೀಡಾ ಅಕಾಡೆಮಿಯನ್ನು ನಿರ್ಮಿಸುವುದಾಗಿ ಹೇಳಿ 2019 ರಿಂದ ವಿವಿಧ ದಿನಾಂಕಗಳಲ್ಲಿ ಹಣ ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸುಮಾರು 18.70 ಲಕ್ಷ ರೂ. ಹಣ ಪಡೆದಿದ್ದಾರೆ ಎಂದು ಚೂಂಡಾ ಮೂಲದ ದೂರುದಾರರ ಸರೀಶ್ ಗೋಪಾಲನ್ ಆರೋಪಿಸಿದ್ದಾರೆ. ಅಕಾಡೆಮಿಯಲ್ಲಿ ಪಾಲುದಾರರಾಗಲು ಅವಕಾಶ ನೀಡಿದ ನಂತರ ಹಣವನ್ನು ಹೂಡಿಕೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಮೊದಲ ಬಾರಿಗೆ ದೇಶದಲ್ಲಿ ‘ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌’ ಆಯೋಜನೆ: ಅನುರಾಗ್‌ ಠಾಕೂರ್‌

    ಶ್ರೀಶಾಂತ್ ಮತ್ತು ಇತರ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಶ್ರೀಶಾಂತ್ ಅವರನ್ನು ಮೂರನೇ ಆರೋಪಿ ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಪಾಕ್‌ ಆಟಗಾರರಿಗೆ ನನ್ನ ಯಶಸ್ಸನ್ನು ಅರಗಿಸಿಕೊಳ್ಳಲಾಗುತ್ತಿಲ್ಲ – ಶಮಿ ತಿರುಗೇಟು

  • ಚೈತ್ರಾ ಹೇಳಿದಂತೆ ಕೇಳಿದ್ದೀನಿ – ಸಿಸಿಬಿ ಮುಂದೆ ತಪ್ಪೊಪ್ಪಿಕೊಂಡ ಹಾಲಶ್ರೀ

    ಚೈತ್ರಾ ಹೇಳಿದಂತೆ ಕೇಳಿದ್ದೀನಿ – ಸಿಸಿಬಿ ಮುಂದೆ ತಪ್ಪೊಪ್ಪಿಕೊಂಡ ಹಾಲಶ್ರೀ

    ಬೆಂಗಳೂರು: ಚೈತ್ರಾ (Chaitra Kundapura) ಅಂಡ್‌ ಗ್ಯಾಂಗ್‌ನ ವಂಚನೆ ಪ್ರಕರಣ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ಸ್ವಾಮೀಜಿ ಬಂಧನದ ಬಳಿಕ ಎಲ್ಲಾ ಕಾನೂನು ಪ್ರಕ್ರಿಯೆಗಳು ಮುಗಿದಿದ್ದು, ಅಭಿನವ ಹಾಲಶ್ರೀ ಸಿಸಿಬಿ ತನಿಖಾಧಿಕಾರಿ (CCB Investigation Officer) ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

    ಉದ್ಯಮಿ ಗೋವಿಂದ ಬಾಬು ಪೂಜಾರಿಯಿಂದ (Govind Babu Poojari) ಹಣ ಪಡೆದಿದ್ದು ನಿಜ. ಎಂಎಎಲ್‌ಎ ಟಿಕೆಟ್ ವಿಚಾರವಾಗಿ (BJP MLA Ticket Scam) ಹಣ ಪಡೆದಿದ್ದೆ, ಆದರೆ ಟಿಕೆಟ್ ಸಿಗಲಿಲ್ಲವಾದ್ದರಿಂದ ಹಣ ವಾಪಸ್ ಕೊಡೋದಾಗಿ ಹೇಳಿದ್ದೆ. ಈಗಾಗಲೆ 50 ಲಕ್ಷ ಹಣ ವಾಪಸ್‌ ಕೊಟ್ಟಿದ್ದೇನೆ. ಉಳಿದ ಹಣ ಮಠದಲ್ಲಿದೆ ಅಂತ ಸ್ವಾಮೀಜಿ ಅಧಿಕಾರಿಗಳ ಮುಂದೆ ಸತ್ಯ ಬಾಯ್ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಅಲ್ಲದೇ ಈ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ, ಚೈತ್ರಾ ಹೇಳಿದಂತೆ ಕೇಳಿದ್ದೀನಿ. ತಪ್ಪಿಗೆ ನಾನೇ ಹೊಣೆಯಾಗಿದ್ದು, ಬೇರೆ ಯಾರೂ ಈ ಕೇಸ್ ನಲ್ಲಿ ಇಲ್ಲ ಅಂತಾ ಅಭಿನವ ಹಾಲಶ್ರೀ ಸಿಸಿಬಿ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಇದನ್ನೂ  ಓದಿ: ಕಾವೇರಿ ವಿಚಾರದಲ್ಲಿ ಸುಪ್ರೀಂ ತೀರ್ಪು ಕರ್ನಾಟಕಕ್ಕೆ ಗಾಯದ ಮೇಲೆ ಬರ ಎಳೆದಂತಾಗಿದೆ: ಸಿ.ಟಿ.ರವಿ

    ಈ ನಡುವೆ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಪಡೆಯಲು ಹೋಗಿ 5 ಕೋಟಿ ರೂ. ಕಳೆದುಕೊಂಡಿರುವುದಾಗಿ ದೂರು ನೀಡಿರುವ ಗೋವಿಂದ ಬಾಬು ಪೂಜಾರಿ ವಿರುದ್ಧವೇ ಈಗ ಜಾರಿ ನಿರ್ದೇಶನಾಲಯದಲ್ಲಿ (ಇಡಿ) ದೂರು ದಾಖಲಾಗಿದೆ. 5 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಟಿಕೆಟ್‌ಗೆ ನೀಡಿದ್ದು ಹವಾಲಾ ಹಣ. ಅವರು ನಗದು ರೂಪದಲ್ಲಿ ನೀಡಿರುವುದು ಅಪರಾಧವಾಗಿದ್ದು ಅವರ ವಿರುದ್ಧ ತನಿಖೆ ನಡೆಸಬೇಕೆಂದು ಕೋರಿ ವಕೀಲ ನಟರಾಜ ಶರ್ಮಾ (Nataraj Sharma) ದೂರು ನೀಡಿದ್ದಾರೆ. ಇದನ್ನೂ  ಓದಿ: ಎರಡು ಸಲ ನೀರು ಬಿಟ್ಟು ಈಗ ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ: ಬೊಮ್ಮಾಯಿ ಆಕ್ರೋಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಿಳೆಯಿಂದ ವಂಚನೆ – ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ದೇಶಕ ನಾಗಶೇಖರ್

    ಮಹಿಳೆಯಿಂದ ವಂಚನೆ – ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ದೇಶಕ ನಾಗಶೇಖರ್

    ಬೆಂಗಳೂರು: ಮನೆ ಮಾರಾಟ ಪ್ರಕರಣದಲ್ಲಿ ಮಹಿಳೆ 50 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆಂದು ಸ್ಯಾಂಡಲ್‍ವುಡ್ ನಟ, ನಿರ್ದೇಶಕ ನಾಗಶೇಖರ್ ಅವರು  ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಆರ್.ಆರ್.ನಗರದ ಜಯಣ್ಣ ಲೇಔಟ್‍ನಲ್ಲಿ ಮನೆ ಖರೀದಿಸಲು ನಾಗಶೇಖರ್ ಅವರು ಮುಂದಾಗಿದ್ದರು. ನಂತರ ಮನೆ ಖರೀದಿಗೆ ಮಾತುಕತೆ ನಡೆಸಿ ಮೀನಾ ಅವರಿಗೆ 2 ಕೋಟಿ 70 ಲಕ್ಷ ರೂಪಾಯಿಯನ್ನು ನೀಡಿದ್ದರು. ಇದನ್ನೂ ಓದಿ: ಚಲನಚಿತ್ರ ವಾಣಿಜ್ಯ ಮಂಡಳಿ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ: ಶಿವಣ್ಣ

    nagashekar

    ಕಳೆದ 2020ರ ಆಗಸ್ಟ್‌ನಲ್ಲಿ ಮನೆ ಖರೀದಿ ಸಂಬಂಧ ಮೀನಾರ ಜೊತೆ ಸೇಲ್ ಅಗ್ರಿಮೆಂಟ್ ಮಾಡಿಕೊಂಡಿದ್ದ ನಾಗಶೇಖರ್ ಹಂತ ಹಂತವಾಗಿ ಮೀನಾ ಖಾತೆಗೆ 50 ಲಕ್ಷ ವರ್ಗಾಯಿಸಿದ್ದರು. ಆದರೆ ಸೇಲ್ ಅಗ್ರಿಮೆಂಟ್ ನಂತರ ಮೀನಾ ಅವರು ಮತ್ತೊಬ್ಬರಿಗೆ ಮನೆ ಮಾರಾಟ ಮಾಡಿದ್ದಾರೆ. ಹೀಗಾಗಿ ಅಡ್ವಾನ್ಸ್ ಆಗಿ ಸೇಲ್ ಅಗ್ರಿಮೆಂಟ್ ವೇಳೆ ಪಡೆದಿದ್ದ 50 ಲಕ್ಷ ಹಣ ಹಿಂದಿರುಗಿಸುವಂತೆ ಮೀನಾ ಬಳಿ ಕೇಳಿದ್ದಾರೆ. ಇದನ್ನೂ ಓದಿ: ರಾಧೆ ಶ್ಯಾಮ್ ಸಿನಿಮಾದ ಕ್ಲೈಮ್ಯಾಕ್ ಹೈಲೈಟ್ ಆಗಿರುತ್ತೆ: ಪ್ರಭಾಸ್

    nagashekar

    ಹಣ ಹಿಂದಿರುಗಿಸದೇ ಮೀನಾ ಸತಾಯಿಸಿದ ಕಾರಣ ಇದೀಗ ನಾಗಶೇಖರ್ ಅವರು ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಮೀನಾ ಹಾಗೂ ರಾಜ್ ಕುಮಾರ್ ಮೇಲೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ಎಫ್.ಐ.ಆರ್ ದಾಖಲಿಸಿದ್ದಾರೆ. ಇನ್ನು ಪ್ರಕರಣ ದಾಖಲಾಗುತ್ತಿದ್ದಂತೆಯೇ ಮೀನಾ ಪರಾರಿಯಾಗಿದ್ದು, ಇತ್ತ ದುಡ್ಡು ಇಲ್ಲದೇ ಮನೆಯೂ ಸಿಗದೇ ನಾಗಶೇಖರ್ ಕಂಗಾಲಾಗಿದ್ದಾರೆ.

  • ಮಾಜಿ ಡಿಸಿಎಂ ಪರಮೇಶ್ವರ್‌ ಅಣ್ಣನ ಮಗಳ ಹೆಸರು ಹೇಳಿ ವಂಚನೆ – ಕಿಲಾಡಿ ಮಹಿಳೆ ಅರೆಸ್ಟ್‌

    ಮಾಜಿ ಡಿಸಿಎಂ ಪರಮೇಶ್ವರ್‌ ಅಣ್ಣನ ಮಗಳ ಹೆಸರು ಹೇಳಿ ವಂಚನೆ – ಕಿಲಾಡಿ ಮಹಿಳೆ ಅರೆಸ್ಟ್‌

    – 4 ಲಕ್ಷ ಬಾಡಿಗೆ ಉಳಿಸಿಕೊಂಡಿದ್ದ ಮಹಿಳೆ
    – ದುಡ್ಡು ಕೇಳಿದ್ದಕ್ಕೆ ಮದುವೆಯ ನಾಟಕ
    – ಪ್ರೀತಿ ನಿರಾಕರಿಸಿದ್ದಕ್ಕೆ ರೇಪ್‌ ಕೇಸ್‌ ಬೆದರಿಕೆ

    ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್‌ ಅವರ ಅಣ್ಣನ ಮಗಳ ಹೆಸರನ್ನು ಹೇಳಿಕೊಂಡು ಅಮಾಯಕರನ್ನು ವಂಚಿಸುತ್ತಿದ್ದ ಕಿಲಾಡಿ ಮಹಿಳೆಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

    ಜ್ಞಾನ ಗಂಗಾ ಲೇಔಟ್‌ ನಿವಾಸಿ ಪಲ್ಲವಿ (32) ಬಂಧಿತ ಆರೋಪಿತೆ. ನಾನೊಬ್ಬಳು ಸಮಾಜಸೇವಕಿ, ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಬ್ಯಾಂಕಿನಿಂದ ಸಾಲ ಕೊಡಿಸುತ್ತೇನೆ ಎಂದು ಹೇಳಿ ವಂಚಿಸುತ್ತಿದ್ದಳು. 10ಕ್ಕೂ ಹೆಚ್ಚು ಜನರಿಗೆ ಈಕೆ ವಂಚಿಸಿದ್ದು ಈಗ ಈಕೆಯನ್ನು ಜ್ಞಾನ ಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಜನಾರ್ದನ್‌ ಎಂಬವರು ಬಾಡಿಗೆ ಕಾರಿನ ವ್ಯವಹಾರ ಮಾಡುತ್ತಿದ್ದು ಅವರ ಬಳಿ ಪಲ್ಲವಿ, ಮಾಜಿ ಡಿಸಿಎಂ ಪರಮೇಶ್ವರ್‌ ಅವರ ಅಣ್ಣನ ಮಗಳಾದ ನಾನು ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಬ್ಯಾಂಕ್ ನಿಂದ ಸಾಲ ಕೊಡಿಸುವ ಲಸವನ್ನು ಮಾಡುತ್ತಿದ್ದೇನೆ ಎಂದು ಹೇಳಿ ಪರಿಚಯ ಮಾಡಿಕೊಂಡಿದ್ದಳು. ಇದಾದ ಬಳಿಕ ಕೋವಿಡ್‌ 19 ಲಾಕ್‌ಡೌನ್‌ ಸಮಯದಲ್ಲಿ 2 ದಿನದ ಮಟ್ಟಿಗೆ ಕಾರು ಬಾಡಿಗೆಗೆ ಬೇಕು ಎಂದು ರಾಜಶೇಖರ್‌ ಬಳಿ ಕೇಳಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಕಾರು ಚಾಲಕ ಯೋಗೇಶ್‌ ಪಲ್ಲವಿಯನ್ನು ಸಂಪರ್ಕಿಸಿದ್ದರು.

    ಎರಡು ದಿನ ಬೆಂಗಳೂರು, ತುಮಕೂರಿಗೆ ಕಾರಿನಲ್ಲಿ ಸುತ್ತಾಡಿದ ಬಳಿಕ ಬಾಡಿಗೆ ನೀಡಿ ನಂತರ ತಾನು ಕರೆದಾಗ ಬಾಡಿಗೆಗೆ ಬರಬೇಕು ಎಂದು ಪಲ್ಲವಿ ಸೂಚಿಸಿದ್ದಳು. ಇದಾದ ಬಳಿಕ ಹಲವು ಬಾರಿ ಬಾಡಿಗೆ ಪಡೆದಿದ್ದು ಒಟ್ಟು 40 ಸಾವಿರ ಕಿ.ಮೀ ಸುತ್ತಾಡಿಸಿ 4 ಲಕ್ಷ ರೂ. ಬಾಡಿಗೆ ಉಳಿಸಿಕೊಂಡಿದ್ದಳು.

    ಯೋಗೇಶ್‌ ಬಾಡಿಗೆ ದುಡನ್ನು ಕೇಳಿದಾಗ ಏನೇನೋ ಸಬೂಬು ಹೇಳಲು ಆರಂಭಿಸಿದಳು. ಬಾಡಿಗೆ ನೀಡಲೇಬೇಕು ಎಂದು ಹೇಳಿದಾಗ ಯೋಗೇಶ್‌ ಬಳಿ ಪ್ರೀತಿಯ ನಾಟಕವಾಡಲು ಆರಂಭಿಸಿದಳು. ನೀನು ಅಂದರೆ ನನಗೆ ಇಷ್ಟ. ನನ್ನನ್ನು ಮದುವೆಯಾಗು ಎಂದು ಹೇಳಲು ಆರಂಭಿಸಿದಳು. ಇದಕ್ಕೆ ಯೋಗೇಶ್‌ ನಿರಾಕರಿಸಿದಾಗ ಪಲ್ಲವಿ, ನನ್ನನ್ನು ಮದುವೆಯಾಗದೇ ಇದ್ದರೆ ನಿನ್ನ ವಿರುದ್ಧ ಅತ್ಯಾಚಾರದ ಕೇಸ್‌ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಳು.

    ಪಲ್ಲವಿಯ ಈ ನಡೆಯ ಬಗ್ಗೆ ಯೋಗೇಶ್‌ ಮಾಲಿಕ ಜನಾರ್ದನ್‌ಗೆ ತಿಳಿಸಿದ್ದರು. ಈಕೆಯ ವರ್ತನೆಯಿಂದ ಅನುಮಾನಗೊಂಡ ಜನಾರ್ದನ್‌ ಮತ್ತು ಯೋಗೇಶ್‌ ಸದಾಶಿವ ನಗರದಲ್ಲಿರುವ ಪರಮೇಶ್ವರ್‌ ಅವರ ನಿವಾಸಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಪರಮೇಶ್ವರ್‌ ಪತ್ನಿ ಈಕೆ ಯಾರು ಎನ್ನುವುದೇ ತಿಳಿದಿಲ್ಲ ಎಂದು ಹೇಳಿದ್ದಾರೆ. ಇದಾದ ಬಳಿಕ ತುಮಕೂರಿನಲ್ಲಿದ್ದ ಪರಮೇಶ್ವರ್‌ ಅವರ ಬಳಿ ಈಕೆಯನ್ನು ಕರೆದುಕೊಂಡು ಹೋಗಲಾಗಿತ್ತು. ಪರಮೇಶ್ವರ್‌ ಈಕೆ ನನ್ನ ಅಣ್ಣನ ಮಗಳಲ್ಲ. ಕೂಡಲೇ ದೂರು ನೀಡಿ ಎಂದು ಸೂಚಿಸಿದ್ದರು.

    ಕಿಡ್ನಾಪ್‌ ದೂರು:
    ಈಕೆಯನ್ನು ಕರೆ ತರುತ್ತಿದ್ದಾಗ ಕೆಂಗೇರಿ ಸಮೀಪ ನನಗೆ ಮೂತ್ರ ವಿಸರ್ಜನೆ ಬರುತ್ತಿದೆ ಎಂದು ಹೇಳಿ ಕಾರನ್ನು ನಿಲ್ಲಿಸಿದ್ದಾಳೆ. ಈ ವೇಳೆ ಪೊಲೀಸ್‌ ಕಂಟ್ರೋಲ್‌ ರೂಂಗೆ ಕರೆ ಮಾಡಿ ಯೋಗೇಶ್‌ ಮತ್ತು ಇತರರು ನನ್ನನ್ನು ಕಿಡ್ನಾಪ್‌ ಮಾಡಿದ್ದಾರೆ ಎಂದು ಹೇಳಿದ್ದಾಳೆ. ಕರೆಯ ಹಿನ್ನೆಲೆಯಲ್ಲಿ ಅಲರ್ಟ್‌ ಆದ ಕೆಂಗೇರಿ ಪೊಲೀಸರು ಯೋಗೇಶ್‌ಗೆ ಕರೆ ಮಾಡಿ, ಪಲ್ಲವಿ ಎಂಬಾಕೆಯನ್ನು ಕಿಡ್ನಾಪ್‌ ಮಾಡಿದ್ದೀರಿ ಎಂಬ ದೂರು ಕಂಟ್ರೋಲ್‌ ರೂಂಗೆ ಬಂದಿದೆ. ಕೂಡಲೇ ಆಕೆಯನ್ನು ಪೊಲೀಸ್‌ ಠಾಣೆಗೆ ಕರೆ ತನ್ನಿ ಎಂದು ಸೂಚಿಸಿದ್ದಾರೆ. ಪೊಲೀಸರ ಸೂಚನೆಯ ಹಿನ್ನೆಲೆಯಲ್ಲಿ ಆಕೆಯನ್ನು ಕೆಂಗೇರಿ ಠಾಣೆಗೆ ಕರೆದುಕೊಂಡು ಹೋಗಲಾಗಿತ್ತು.

    ಪೊಲಸ್‌ ಅಧಿಕಾರಿಗಳ ವಿಚಾರಣೆ ಸಮಯದಲ್ಲಿ ಪರಮೇಶ್ವರ್‌ ಅವರ ಅಣ್ಣನ ಮಗಳು ಎಂದು ಹೇಳಿ ಹಲವು ಜನರಿಗೆ ಮೋಸ ಮಾಡಿದ್ದನ್ನು ಪಲ್ಲವಿ ತಪ್ಪೊಪ್ಪಿಕೊಂಡಿದ್ದಾಳೆ. ವಿಚಾರಣೆ ನಡೆಸಿದ ಕೆಂಗೇರಿ ಪೊಲೀಸರು ಜ್ಞಾನ ಭಾರತಿ ಪೊಲೀಸ್‌ ಠಾಣೆಯಲ್ಲಿ ಈಕೆಯ ವಿರುದ್ಧ ದೂರು ನೀಡುವಂತೆ ಸೂಚಿಸಿದ್ದಾರೆ. ಮಹಿಳಾ ಪೊಲೀಸರ ಬೆಂಗಾವಲಿನಲ್ಲಿ ಈಕೆಯನ್ನು ಕರೆತಂದ ಬಳಿಕ ಜ್ಞಾನ ಭಾರತಿ ಠಾಣೆಯಲ್ಲಿ ದೂರು ನೀಡಿದ್ದು, ಈಗ ಬಂಧಿಸಲಾಗಿದೆ.